ಫೋಟೋ ಕೃಪೆ-ಟ್ವಿಟ್ಟರ್
ಬೆಂಗಳೂರು:ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯ ಪಾತ್ರಧಾರಿಗೆ ಹೆಚ್ಚಿನ ಅವಕಾಶ ನೀಡಿರುವ ಬಗ್ಗೆ ಮಾಹಿತಿ ಇಲ್ಲ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಉದಯೋನ್ಮುಖ ನಟ ನಿಖಿಲ್ ಹೇಳಿದ್ದಾರೆ.
ಕುರುಕ್ಷೇತ್ರ ಪೌರಾಣಿಕ ಚಿತ್ರದಲ್ಲಿ ನನ್ನ ಪಾತ್ರದ ಅಭಿನಯ ಮಾಡಿದ್ದೇನೆ ಅಷ್ಟೇ ಹೊರತು ಮತ್ತೇನು ನನಗೆ ಗೊತ್ತಿಲ್ಲ.
ವಿವಾದದ ಬಗ್ಗೆಯೂ ನನಗೇನು ಗೊತ್ತಿಲ್ಲ, ಶೂಟಿಂಗ್ ಗೆ ಕರೆದಿದ್ದರು ಹೋಗಿದ್ದೆ, ನನ್ನ ಪಾತ್ರದ ನಟನೆ ಮಾಡಿದ್ದೇನೆ, ಡಬ್ಬಿಂಗ್ ಮಾಡಲು ಕರದಾಗ ಹೋಗುತ್ತೇನೆ ಅಷ್ಟೇ.
ಎಷ್ಟು ಸಮಯದ ಶೂಟಿಂಗ್ , ಎಷ್ಟು ಸಮಯದ ಪಾತ್ರ ಅದೆಲ್ಲಾ ಗೊತ್ತಿಲ್ಲ ಎಂದ್ರು.
ದೊಡ್ಡ ದೊಡ್ಡ ನಟರ ಜೊತೆ ಕೆಲಸಮಾಡಿದ್ದೇ ನನ್ನ ಪುಣ್ಯ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ದರ್ಶನ್ ಜೊತೆ ಉತ್ತಮ ಬಾಧಮ್ಯ ಇದೆ, ಅವರು ಹಿರಿಯ ನಟರು ಐವತ್ತು ಸಿನಿಮಾ ಮಾಡಿದ್ದಾರೆ ಇದೆಲ್ಲಾ ಹೇಗೆ ಸೃಷ್ಟಿ ಆಯಿತೋ ಗೊತ್ತಿಲ್ಲ. ಬೇಕಿದ್ದರೆ ಹೋಗಿ ದರ್ಶನ್ ಅವರನ್ನು ಹಗ್ ಮಾಡಿ ಬರುತ್ತೇನೆ ಎಂದ್ರು ನಿಖಿಲ್.
ಸಿನಿಮಾ ನಿರ್ಮಾಪಕ ಮುನಿರತ್ನ ಕೂಡ ವಿವಾದವನ್ನು ತಳ್ಳಿಹಾಕಿದ್ದು ಇದಲ್ಲಾ ಗಾಂಧಿನಗರದ ಗಾಸಿಪ್ ಅಂದ್ರು.
ಕುರುಕ್ಷೇತ್ರ ಸಿನಿಮಾ ಮಹಾಭಾರತದ ಕಥೆ, ಅಭಿಮನ್ಯುಗೆ ಎಷ್ಟು ಅವಕಾಶ ಕೊಡಬೇಕೋ ಕೊಡಲಾಗಿದೆ.ನಿಖಿಲ್ ಮೇಲೆ, ಕುಮಾರಸ್ವಾಮಿ ಮೇಲೆ ಅಭಿಮಾನ ಇದೆ ಅಂತಾ ಎರಡು ಸೀನ್ ಹೆಚ್ಚು ಮಾಡಲು ಸಾಧ್ಯವಿಲ್ಲ, ಅದು ಮಹಾಭಾರತದ ಕಥೆ ಅಷ್ಟೇ.ಯಾವ ಪಾತ್ರಕ್ಕೆ ಎಷ್ಟು ಮಹತ್ವ ಕೊಡಬೇಕೋ ಕೊಟ್ಟಿದ್ದೇವೆ,ಎಲ್ಲವೂ ಮೊದಲಿದ್ದಂತೆ ಇದೆ,ಯಾವುದೇ ಬದಲಾವಣೆ ಮಾಡಿಲ್ಲ ಅಂದ್ರು.









