ಮಂಡ್ಯ: ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗಳು ಕೆಆರ್‌ಎಸ್ ಜಲಾಶಯವನ್ನು ವೀಕ್ಷಿಸಿದ್ರು. ಶ್ರೀಗಳಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಚಿವರಾದ ಸಿ.ಎಸ್.ಪಟ್ಟರಾಜು,ಜಿ.ಟಿ ದೇವೇಗೌಡ,ಸಾ.ರಾ.ಮಹೇಶ್ ಮತ್ತು ಶಾಸಕ ರವೀಂದ್ರ ಶ್ರೀಕಂಠಯ್ಯ ಸಾತ್ ನೀಡಿದ್ರು.
ಕೆಆರ್‌ಎಸ್ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡುತ್ತಿರುವ ಸ್ಥಳದಲ್ಲಿ ಕುಳಿತು ನದಿಗೆ ನೀರು ಹರಿದುಹೋಗುತ್ತಿರುವ ದೃಶ್ಯವನ್ನು ವೀಕ್ಷಿಸಿದ್ರು. 62 ಸಾವಿರ ಕ್ಯೂಸೆಕ್ ನೀರು ರಭಸದಿಂದ ಕೆಎರ್‌ಎಸ್ ಡ್ಯಾಂನ ಗೇಟುಗಳಿಂದ ದುಮ್ಮಿಕ್ಕುತ್ತಿದ್ದು,ಸ್ವಲ್ಪವೂ ಆತಂಕವಿಲ್ಲವೇ ನೀರು ದುಮ್ಮಿಕ್ಕುವ ಅತಿ ಸಮೀಪದಲ್ಲಿ ಕುಳಿತು ಶಾಂತವಾಗಿ ಕೆಲಕಾಲ ಕಳೆದ್ರು.
ನಂತರ ಜಲಾಶಯದ ಹೊರಭಾಗದಲ್ಲಿ ಶ್ರೀಗಳು ವಿಹರಿಸಿದ್ರು.ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯ ವಿಹಂಗಮ ನೋಟವನ್ನು ಕಣ್ದುಂಬಿಕೊಂಡು ನಾಡಿನ ರೈತ ಸಮೂಹಕ್ಕೆ ಒಳಿತಾಗುವಂತೆ ಹರಸಿದ್ರು.








