ಬೆಂಗಳೂರು: ಹಣಕ್ಕಾಗಿ ಸಂಬಂಧಿಯೇ ವೃದ್ದೆಯನ್ನು ಕೊಲೆ ಮಾಡಿರುವ ಘಟನೆ ಬಾಗಲೂರು ಬಳಿಯ ನಂದಿಪಾಳ್ಯದಲ್ಲಿ ನಡೆದಿದೆ.
ಮುನಿಯಮ್ಮ (77) ಅವರನ್ನು ಕೊಲೆಗೈದು ಚಿನ್ನಾಭರಣ ಮತ್ತು ಹಣವನ್ನು ದೋಚಲಾಗಿದೆ. ನಿನ್ನೆ ರಾತ್ರಿ ಮುನಿಯಮ್ಮ ಒಂಟಿಯಾಗಿರುವುದನ್ನು ಗಮನಿಸಿ ಆಕೆಯ ತಂಗಿ ಮಗ ಗಣೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ.
ಮುನಿಯಮ್ಮ ಮಕ್ಕಳು ಊರಿಗೆ ಹೋಗಿದ್ದರು. ನಿನ್ನೆ ಮುನಿಯಮ್ಮ ಬ್ಯಾಂಕಿನಿಂದ ೧೫ ಸಾವಿರ ಡ್ರಾ ಮಾಡಿದ್ದ ಬಗ್ಗೆ ಗಣೇಶ ಮಾಹಿತಿ ಪಡೆದಿದ್ದ ಎಂದು ತಿಳಿದುಬಂದಿದೆ.
ನಿನ್ನೆ ಡ್ರಾ ಮಾಡಿದ್ದ 15 ಸಾವಿರ ರೂಪಾಯಿ ನಗದು, ಮಾಂಗಲ್ಯ ಸರ ಒಲೆ ದೋಚಲಾಗಿದೆ. ಸ್ಥಳಕ್ಕೆ ಬಾಗಲೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.









