ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮದ ಮಾಹಿತಿ ಮನೆಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೆಂದ್ರ ಸರ್ಕಾರ, 2ನೇ ಅವಧಿಯ 1 ವರ್ಷ ಪೂರೈಸಿದ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳು ಹಾಗೂ ಪ್ರಧಾನಿಯವರ ಹಸ್ತಕ್ಷರವಿರುವ ಪತ್ರವನ್ನು ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪುಜಾರಿ ಮನೆಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಕೋಡಿ ಕನ್ಯಾನ ಹಾಗೂ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆಗೆ ಭೇಟಿ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕರಪತ್ರಗಳನ್ನು ವಿತರಿಸಿದರು.ಈ ವೇಳೆ ಮಾತನಾಡುತ್ತಾ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯು ಹೆಮ್ಮೆ ಪಡುವಂತಹ ಕೆಲಸವನ್ನು ಮೋದಿಯವರ ಸರ್ಕಾರ ಮಾಡುತ್ತಿದೆ. ಅತೀ ಕಡಿಮೆ ಸಮಯದಲ್ಲಿ ರಾಮ ಜನ್ಮ ಭೂಮಿ ವಿವಾದ, ಆರ್ಟಿಕಲ್ 370 ರದ್ದು ಗೊಳಿಸಿ ಕಾಶ್ಮೀರದ ಜನರಿಗೆ ಬದುಕಲು ಭಾರತೀಯ ನೆಲದಲ್ಲಿ ಅಧಿಕಾರ ನೀಡಿದ್ದು, ವಿಪಕ್ಷಗಳ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು, ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ತ್ರಿವಳಿ ತಲಾಖ್ ನಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ, ಸೇರಿದಂತೆ ಮೋದಿ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಬಿಚ್ಚಿಡುತ್ತಿವೆ ಎಂದರು.

ಜಗತ್ತನ್ನೇ ಕಾಡಿದ ಕೊರೊನಾ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಿಯಂತ್ರಣಕ್ಕೆ ತರುವ ರೀತಿ ಹಾಗೂ ಕೊರೊನಾ ವಿರುದ್ಧ ಹೊರಾಡುವ ಕಾರ್ಯಕ್ರಮಗಳು, ಭಾರತದ ಬಗ್ಗೆ ವಿಶ್ವವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು, ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬಾನಂಗಳದಲ್ಲಿ ಭಾಸ್ಕರನ ಕಣ್ಣಾ ಮುಚ್ಚಾಲೆ: ಖಗೋಳ ಕೌತುಖದ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡ ಸಿಲಿಕಾನ್ ಸಿಟಿ ಜನ

ಬೆಂಗಳೂರು: ನಗರದಲ್ಲಿಂದು ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದೆ. ಸುಮಾರು ಮೂರುವರೆ ತಾಸು ಸೂರ್ಯಗ್ರಹಣ ಗೋಚರವಾಗಿದ್ದು, ಮೋಡಗಳ ಮಧ್ಯೆ ಆಗಾಗ ಸೂರ್ಯ ಗೋಚರವಾಗಿದ್ದಾನೆ.

ಇಂದು ಜಗತ್ತಿನ್ನೆಲ್ಲೆಡೆ ಸೂರ್ಯಗ್ರಹಣ ಸಂಭವಿಸಿದೆ. ಬೆಂಗಳೂರಿನಲ್ಲೂ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದ್ದು, ಶೇಕಡಾ 37ರಷ್ಟು ಗ್ರಹಣ ಗೋಚರವಾಗಿದೆ. ಬೆಳಗ್ಗೆ 10.13ಕ್ಕೆ ಆರಂಭವಾದ ಸೂರ್ಯ ಗ್ರಹಣ, 11.46ಕ್ಕೆ ತೀವ್ರ ಮಟ್ಟದಲ್ಲಿತ್ತು. 1.31ಕ್ಕೆ ಗ್ರಹಣ ಮೋಕ್ಷವಾಗಿದೆ. ಅಲ್ಲದೆ ಇಂದು ಸೂರ್ಯಗ್ರಹಣ ಹೆಚ್ಚು ಮೋಡಗಳುದೆ ಇದ್ದುದ್ದರಿಂದ ಉತ್ತಮವಾಗೇ ಗ್ರಹಾಣ ಗೋಚರವಾಗಿದೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗಾಗಿ ಸಿಲೋಸ್ಟ್ಯಾಟ್ ಡ್ರೈವ್ ಗಳನ್ನ ಅಳವಡಿಸಲಾಸಲಾಗಿತ್ತು.

ಖಗೋಳ ಕೌತುಕವನ್ನ ಕಣ್ತುಂಬಿಕೊಳ್ಳಬೇಕು ಅಂತಾ ಅದೆಷ್ಟು ಜನ ಕಾಯ್ತಿರ್ತಾರೆ. ಸೂರ್ಯ ಗ್ರಹಣ ಚಂದ್ರ ಗ್ರಹಣಗಳು ಸಂಭವಿಸಿದಾಗ ನೆಹರು ತಾರಾಲಯಕ್ಕೆ ಸಾವಿರಾರು ಜನರು ಬಂದು ಗ್ರಹಣ ವೀಕ್ಷಿಸುತ್ತಿದ್ದಾರೆ. ಆದ್ರೆ, ಈ ಬಾರಿ ಗ್ರಹಣ ವೀಕ್ಷಣೆಗೆ ಕೊರೋನಾ ಗ್ರಹಣ ಹಿಡಿಸಿದೆ. ಕೊರೋನಾ ಭೀತಿ ಹಿನ್ನೆಲೆ ಇಂದು ಸೂರ್ಯ ಗ್ರಹಣ ವೀಕ್ಷಣೆಗೆ ನೆಹರು ತಾರಾಲಯ ಸಾರ್ವಜನಿಕರಿಗರ ಪ್ರವೇಶ ನೀಡಿಲ್ಲ. ಆದ್ರೆ, ತಾರಾಲಯದ ವೆಬ್ ಸೈಟ್ ನಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಬೈಕ್ ವ್ಹೀಲಿಂಗ್ ಮಾಡಲು ಹೋಗಿ ಅಪಘಾತ: ಮೂವರ ಸಾವು

ಬೆಂಗಳೂರು: ಸೂರ್ಯ ಗ್ರಹಣದ ದಿನದಂದೇ ವ್ಹೀಲಿಂಗ್ ಮಾಡಲು ಹೋಗಿದ್ದ ಮೂವರು ಅಪಘಾತದಿಂದ ಧಾರುಣವಾಗಿ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ಜರುಗಿದೆ.

ಯಲಹಂಕದ ಜಿಕೆವಿಕೆ ಬಳಿ ಭೀಕರ ಅಪಘಾತ ಸಂಭವಿಸಿದ್ದು ಮೂವರು ಸಾವಿಗೀಡಾಗಿದ್ದಾರೆ. ಬೆಳಿಗ್ಗೆ 6.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ವ್ಹೀಲಿಂಗ್ ಮಾಡುತ್ತಿದ್ದ ಯುವಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಾಗವಾರ ಗೋವಿಂದಪುರದ ಮಹ್ಮದ್ ಹದಿ, ಅಹಮದ್ ಖಾನ್ ಹಾಗೂ ಸೈಯದ್ ರಿಯಾಜ್ ಮೃತ ಯುವಕರು ಎನ್ನಲಾಗಿದೆ.

ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯಪಾಲ ವಜುಭಾಯ್ ವಾಲಾ,ದೇವೇಗೌಡರಿಂದ ಯೋಗಾಸನ ಪ್ರದರ್ಶನ

ಬೆಂಗಳೂರು: ಭಾರತೀಯ ಸಂಸ್ಕೃತಿ ಪರಂಪರೆಯ ಯೋಗ ದಿನಾಚರಣೆಯನ್ನು ಉದ್ಯಾನನಗರಿ ಬೆಂಗಳೂರಿನಲ್ಲಿ ಆಚರಿಸಲಾಯಿತು. ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ, ಮಾಜಿ ಪ್ರಧಾನಿ‌ ಎಚ್.ಡಿ ದೇವೇಗೌಡ,ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಯೋಗಾಸನದ ಮಾಡಿ ಗಮನ ಸೆಳೆದರು.

ಪದ್ಮನಾಭ ನಗರ ನಿವಾಸದಲ್ಲಿ ಯೋಗ ಶಿಕ್ಷಕರ ಸಹಕಾರದೊಂದಿಗೆ ಇಳಿ ವಯಸ್ಸಿನಲ್ಲಿಯೂ ಅತ್ಯುತ್ಸಾಹದಿಂದ ದೇವೇಗೌಡರು ಯೋಗಾಸನ ಮಾಡಿದರು.ವಿವಿಧ ಆಸನಗಳನ್ನು ಮಾಡಿ ಗಮನ ಸೆಳೆದರು.ನಂತರ ನಾಡಿನ ಜನತೆಗೆ ವಿಶ್ವ ಯೋಗ ದಿನದ ಶುಭಾಶಯಗಳನ್ನು ಕೋರತ್ತಾ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಯೋಗ ಒಂದು ಸಮಗ್ರ ವಿಧಾನ ಎಂದು ಯೋಗಾಭ್ಯಾಸದಲ್ಲಿ ತೊಡಗುವಂತೆ ಜನತೆಗೆ ಕರೆ ನೀಡಿದರು.

ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲ್ ಕೂಡ ಯೋಗಾಸನ ಮಾಡಿದರು.ರಾಜ ಭವನದಲ್ಲಿ ಯೋಗಾಸನ ಮಾಡಿ ಯೋಗ ದಿನದ ಶುಭ ಕೋರಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯೋಗಾಸನ ಮಾಡಿದರು.ಯೋಗ ಒಂದು ದಿನದ ಪ್ರದರ್ಶನ ಆಗಬಾರದು. ನಿರಂತರ ಅಭ್ಯಾಸ ಮಾಡಲು ಪ್ರಯತ್ನಿಸ ಬೇಕು. ಯೋಗಾಭ್ಯಾಸ ವೈಯಕ್ತಿಕವಾಗಿ ನನ್ನ ಆರೋಗ್ಯಕ್ಕೆ ನೆರವಾಗಿದೆ. ನೀವೂ ನಿಮಗಾಗಿ ಯೋಗಾಭ್ಯಾಸ ಮಾಡಿ ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯೋಗ ಮಾಡಿದೇ ಯೋಗ ದಿನದ ಶುಭಾಷಯ ಕೋರಿದರು. ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ವಿಶ್ವಕ್ಕೆ ಭಾರತದ ಕೊಡುಗೆಯಾಗಿರುವ “ಯೋಗ” ನಮ್ಮ ಹಿರಿಯರು ನಮಗೆ ನೀಡಿದ ಹೆಮ್ಮೆಯ ಬಳುವಳಿ. ಇದನ್ನು ಉಳಿಸಿಕೊಳ್ಳುವ ಹಾಗು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ, ಆರೋಗ್ಯಪೂರ್ಣ ಜೀವನವನ್ನು ಸಂಭ್ರಮಿಸೋಣ, ಸಾರ್ಥಕ ಬದುಕನ್ನು ಬಾಳೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು, ರಾಜ್ಯ ಸಂಘಟನಾ ಪ್ರಧಾನಕಾರ್ಯದರ್ಶಿ ಅರುಣ್ ಕುಮಾರ್ ರವರು, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ ಪ್ರಧಾನಕಾರ್ಯದರ್ಶಿ ಎನ್. ರವಿಕುಮಾರ್ ರವರು ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿಯವರು ಮತ್ತು ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲುರವರು ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸಿ ಯೋಗಾಸನ ಮಾಡಿದರು.

ಸ್ವಗ್ರಾಮ‌ ಯಲವಾಳ ತೋಟದಲ್ಲಿ ಯೋಗ ಮಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್

ಶಿವಮೊಗ್ಗ,ಜೂನ್.21:ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಮತ್ತು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸ್ವಗ್ರಾಮ ಯಲವಾಳ ಗ್ರಾಮದ ಕೃಷಿ ಸಚಿವರ ತೋಟದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ಮಾಡುವ ಮೂಲಕ ಅಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲರು ಯೋಗ ಎನ್ನುವುದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡಬಲ್ಲದು.ಋಷಿಮುನಿಗಳು ಈ ಹಿಂದೆ ಆಚರಿಸಿ ಅನುಸರಿಸುತ್ತಿದ್ದ ಯೋಗವನ್ನು ಇಂದಿಗೂ ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಯೋಗ ದಿನಾಚರಣೆಯಂದು ಮಾತ್ರ ಯೋಗ ಮಾಡದೇ ಪ್ರತಿನಿತ್ಯ ವ್ಯಾಯಾಮ ಯೋಗ ಮಾಡುವುದು ಒಳ್ಳೆಯದು. ಯೋಗ ಎಲ್ಲರ ದೈನಂದಿನ ಭಾಗವಾಗಬೇಕು ಎಂದು ಕರೆ ನೀಡಿದರು.
ಯೋಗಕ್ಕೆ ತನ್ನದೇ ಆದ ಇತಿಹಾಸದ ಜೊತೆಗೂ ವೈಜ್ಞಾನಿಕವಾಗಿಯೂ ಯೋಗ ಸಾಬೀತಾಗಿದೆ.ಯೋಗವನ್ನು ಗುರುಗಳಿಂದ ಯೋಗಶಾಲೆಯಲ್ಲಿ ಕಲಿಯಬಹುದು‌‌.ಅಲ್ಲದೇ ಕೈಬೆರಳಲ್ಲಿರುವ ಮೊಬೈಲ್‌ನಲ್ಲಿ ಯೋಗ ಕಲಿಸುವ ಅದೆಷ್ಟೋ ಯೋಗದ ವಿಡಿಯೋ ಚಾನೆಲ್‌ಗಳು ಆ್ಯಪ್‌ಗಳು ಸಹ ಲಭ್ಯ.ನಮ್ಮನಮ್ಮ ದೇಹಕ್ಕೆ ಅನುಕೂಲಕರವಾಗುವಂತೆ ಆದಷ್ಟು ಮಾರ್ಗದರ್ಶನ ಪಡೆದೇ ಯೋಗವನ್ನು ಅನುಸರಿಸುವುದು ಉತ್ತಮ ಎಂದು ಬಿ‌.ಸಿ.ಪಾಟೀಲರು ಹೇಳಿದರು.

ಪೂರ್ವ ವಲಯ ಹಾಗೂ ಚಿತ್ರದುರ್ಗ ಜಿಲ್ಲೆ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಚಿತ್ರದುರ್ಗ: ಪೂರ್ವ ವಲಯ ಹಾಗೂ ಚಿತ್ರದುರ್ಗ ಜಿಲ್ಲೆ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು‌ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಡೆಸಿ ಅನೇಕ ವಿಷಯಗಳ ಕುರಿತು ಚರ್ಚಿಸಿದರು.

ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿಗೆ ಸೂಕ್ತ ಕ್ರಮವಹಿಸುವಂತೆ ಮತ್ತು ಜನರಲ್ಲಿ ಕೋವಿಡ್-19 ರ ಕುರಿತು ಜನಜಾಗೃತಿ ಮೂಡಿಸುವುದು. ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ 548 ದಿನಗಳ ಉಪವಾಸ ಸತ್ಯಾಗ್ರಹ ನಿಯಂತ್ರಿಸುವಲ್ಲಿ ಅಗತ್ಯ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸೂಕ್ತ ಸಲಹೆ ಹಾಗೂ ನಿರ್ಧಾರ ಕೈಗೊಳ್ಳುವುದು. ಗಣಿಗಾರಿಕೆ ಹಾಗೂ ಮರಳು ನೀತಿಯ ಕುರಿತು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿ ಜಿಲ್ಲೆಗಳಲ್ಲಿ ಅಪರಾಧಗಳನ್ನು ತಡೆಗಟ್ಟುವ ಕ್ರಮಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಹಾಗೂ ಬಾಲ್ಯ ವಿವಾಹ ಹಾಗೂ ಬಾಲಾಪರಾಧ ಮತ್ತು ಇತರೆ ಅಪರಾಧಗಳು ಆಗದ ರೀತಿ ಸೂಕ್ತ ಜಾಗೃತಿ ಮೂಡಿಸುವುದು. ಮತ್ತು ಮುಂದಿನ ಮಹಾಗಣಪತಿ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಪೊಲಿಸರ ಬಗ್ಗೆ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು. ಕೋವಿಡ್ 19 ಅವಧಿಯಲ್ಲಿ ಸೂಕ್ತ ಹಾಗೂ ದಕ್ಷತೆಯಿಂದ ನಿರ್ವಹಣೆ ಅಭಿನಂದಿಸಲಾಯಿತು ಮತ್ತು ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಲಾಯಿತು.

ಲಾಕ್ ಡೌನ್ ತೆರವು ನಂತರ ಇಲಾಖೆ ಜವಾಬ್ದಾರಿ ಕುರಿತು ಚರ್ಚಿಸಲಾಯಿತು. ಇನ್ನು ಅನೇಕ ವಿಷಯಗಳನ್ನು ಚರ್ಚಿಸಿ ಸೂಕ್ತ ಕ್ರಮ ವಹಿಸಲು ಗೃಹ ಸಚಿವರು ಸೂಚಿಸಿದರು.