Video-ಸಮ್ಮಿಶ್ರ ಸರ್ಕಾರ ಪಥನ ಮುಗಿದ ಅಧ್ಯಾಯ:ಡಿಕೆಶಿ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೆಡವಿದ್ದು ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ಸರಕಾರ ಕೆಡವಿದ್ದು ಯಾರು ಎಂಬುದರ ಬಗ್ಗೆ ಯಾರು ಮಾತನಾಡಿದ್ದಾರೋ ಅವರನ್ನೇ ಹೋಗಿ ಕೇಳಿ. ಸಮ್ಮಿಶ್ರ ಸರ್ಕಾರ ಪತನ ಮುಗಿದ ಅಧ್ಯಾಯ. ಆ ಬಗ್ಗೆ ಚರ್ಚೆ ಮಾಡಲು ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಸೇವೆ, ಪಕ್ಷವನ್ನು ಅಧಿಕಾರಕ್ಕೆ ತರುವುದು, ಜನ ನಮಗೆ ಆಶೀರ್ವಾದ ಮಾಡಬೇಕು ಎಂಬುದರ ಮೇಲಷ್ಟೇ ನಾವು ಆಸಕ್ತಿ ವಹಿಸಿದ್ದೇವೆ ಎಂದ್ರು.

ಡಿಸೈನ್ ಬಾಕ್ಸ್ ಅವರು ಸಹಾಯ ಮಾಡುತ್ತಿದ್ದರು:

ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಏಜೆನ್ಸಿ ಡಿಸೈನ್ ಬಾಕ್ಸ್ ಮೇಲೆ ಐಟಿ ದಾಳಿ ನಡೆದಿದೆಯಲ್ಲಾ ಎಂಬ ಮಾಧ್ಯಮದವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಯಾರು ಹೇಳಿದ್ದು ಅವರು ನನ್ನ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದಾರೆ ಎಂದು ಮರುಪ್ರಶ್ನಿಸಿದರು.

ಅವರು ನನಗೆ ಸಹಾಯ ಮಾಡುತ್ತಿದ್ದರು. ಅಲ್ಲಿರುವವರು ವೃತ್ತಿಪರರು. ಅವರು ಐಟಿ ಅಧಿಕಾರಿಗಳಿಗೆ ಯಾವ ಉತ್ತರ ಕೊಡಬೇಕೋ ಕೊಡುತ್ತಾರೆ. ಅವರು ನಿನ್ನೆ ನನ್ನ ಜತೆ ಮಾತನಾಡಲು ಪ್ರಯತ್ನಿಸಿದರು. ಆದರೆ ನನಗೆ ಸಮಯ ಇರದ ಕಾರಣ ಅದು ಸಾಧ್ಯವಾಗಲಿಲ್ಲ. ಐಟಿ ದಾಳಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಆಮೇಲೆ ಮಾತನಾಡುತ್ತೇನೆ ಎಂದ್ರು.

Video-ಮುಜರಾಯಿ ಇಲಾಖೆಯ ಅರ್ಚಕರು ಹಾಗೂ ದೇವಾಲಯ ನೌಕರರಿಗೆ ದಸರಾ ಬಂಪರ್ ಕೊಡುಗೆ,6ನೇ ವೇತನ ಆಯೋಗ, ಆರೋಗ್ಯ ವಿಮೆ ಜಾರಿ

ಬೆಂಗಳೂರು:ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ಸಚಿವರು ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ.ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ ಹಜ್ ಮತ್ತು ವಕ್ಪ್ ‌ ಸಚಿವರಾದ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯಲ್ಲಿ ಜಾರಿಗೆ ತಂದ ಹೊಸ ಯೋಜನೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಜರಾಯಿಇಲಾಖೆಯವ್ಯಾಪ್ತಿಗೆಒಳಪಡುವದೇವಸ್ಥಾನಗಳಲ್ಲಿ ಪೂಜೆಸಲ್ಲಿಸುವ ಅರ್ಚಕರು ಹಾಗೂ ದೇವಾಲಯ ನೌಕರರು ಆರೋಗ್ಯಸಮಸ್ಯೆಗೆ ಒಳಗಾದರೆ ಅವರಿಗೆ ರಕ್ಷಣೆ ಒದಗಿಸಲು ನಾನು ಇಲಾಖೆಯ ಜವಾಬ್ದಾಾರಿ ತೆಗೆದುಕೊಂಡ ಮೇಲೆ ಅವರದ ರಕ್ಷಣೆಗೆ ವಿನೂತನ ವಿಮೆ ಯೋಜನೆ ಜಾರಿಗೊಳಿಸಿದ್ದು, ಅರ್ಚಕರು ಹಾಗೂ ಇಲಾಖೆ ನೌಕರರಿಗೆ ವಿಮೆ ಜಾರಿಗೆ ತರಲು ತೀರ್ಮಾನಿಸಿದ್ದೇನೆ. ಇದರಿಂದ ಮುಜರಾಯಿ ಇಲಾಖೆಯ ಸುಮಾರು 37,000 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಸಂಸ್ಥೆಗಳಲ್ಲಿ ಈಗಾಗಲೇ 5ನೇವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಅರ್ಚಕರಿಗೆ 6ನೇವೇತನ ಆಯೋಗದ ವೇತನ ದೊರಕಿಸಿಕೊಡುವಂತೆ ಅರ್ಚಕರಿಂದ ಬಹಳ ದಿನಗಳಿಂದ ಬೇಡಿಕೆ ಇತ್ತು. ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತ್ವರಿತಗತಿಯಲ್ಲಿ ಅರ್ಚರಿಕರಿಗೆ 6ನೇ ವೇತನ ಆಯೋಗದ ವೇತನ ನೀಡಲು ತೀರ್ಮಾನಿಸಿದ್ದೇನೆ. ಕೆಲವು ಷರತ್ತುಗಳನ್ನು ವಿಧಿಸಿ, ದೇವಾಲಯದ ವಾರ್ಷಿಕ ಆದಾಯದಲ್ಲಿ ನೌಕರರ ವೇತನ ಶೇ35%ರಷ್ಟುಮೀರದಂತೆನೌಕರರನ್ನು6ನೇವೇತನಆಯೋಗದವ್ಯಾಪ್ತಿಗೆಒಳಪಡುವಂತೆಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಇದರಿಂದ ಮುಜರಾಯಿ ಇಲಾಖೆಯ ಸುಮಾರು 1034 ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಇದಕ್ಕೆ 20 ಕೋಟಿ ರೂ. ವೆಚ್ಚವಾಗಲಿದ್ದು, ಆಯಾ ದೇವಸ್ಥಾನಗಳ ನಿಧಿಯಿಂದ ಒದಗಿಸಲಾಗುವುದು. ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಸಚಿವರು ಹೇಳಿದರು.

ಸಿ ದರ್ಜೆಯ ದೇವಸ್ಥಾನಗಳ ಅರ್ಚಕರಿಗೆ 6 ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ವೇತನ ನೀಡುಲಾಗುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿ ದರ್ಜೆಯ ಬಹುತೇಕ ದೇವಸ್ಥಾನಗಳಲ್ಲಿ ಕಾಯಂ ಅರ್ಚಕರು ಇರುವುದಿಲ್ಲ. ಈ ಬಗ್ಗೆ ಎಲ್ಲ ದೇವಸ್ಥಾಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಲ್ಲ ದೇವಸ್ಥಾನಗಳಿಗೆ ತಸ್ತಿಕ ಹಣ 19.ಕೋಟಿ ರೂ. ಬಾಕಿ ಇದ್ದು ಶೀಘ್ರವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಇನ್ನು ಮುಜರಾಯಿಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲ ದೇವಸ್ಥಾನಗಳಆಸ್ತಿ ಮಾರ್ಗನಕ್ಷೆ, ಅಲ್ಲಿನಸೇವೆಗಳಸಂಪೂರ್ಣಮಾಹಿತಿಯನ್ನು ಆನ್‌ಲೈನ್‌ಮೂಲಕತಿಳಿದುಕೊಳ್ಳುವಂತೆಐಟಿಎಂಎಸ್ (ಇಂಟಿಗ್ರೆಟೆಡ್ ಡೆವೆಲಪ್ ಮೆಂಟ್ ಮ್ಯಾನೇಜ್ ಮೆಂಟ್ ಸಿಸ್ಟಮ್) ಜಾರಿಗೆ ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದೊಂದು ವಿನೂತನ ಯೋಜನೆಯಾಗಿದ್ದು, ರಾಜ್ಯದಲ್ಲಿ ಇದನ್ನು ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ. ಇದರಿಂದ ರಾಜ್ಯದ ದೇವಾಲಯಗಳ ಮಾಹಿತಿ ಒಂದೆಡೆ ದೊರೆಯುವುದರಿಂದ ದೇಶ-ವಿದೇಶಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ. ದೇವಾಲಯಗಳ ಆದಾಯ ವೃದ್ಧಿಿಗೂ ಇದು ಪೂರಕವಾಗಲಿದೆ ಎಂದು ವಿವರಿಸಿದರು.

ವಿಜಯದಶಮಿ ದಿನ ರಾಜ್ಯದ ಎಲ್ಲ ಜನತೆಯ ಆರೋಗ್ಯಕ್ಕಾಗಿ ವಿಶೇಷ ಪೂಜೆ:
ವಿಶ್ವದಲ್ಲಿ ಕೊರೊನಾ ಎರಡು ಅಲೆಗಳಿಂದ ಸಾಕಷ್ಟು ಜನರ ಜೀವ ಹಾನಿಯಾಗಿದೆ. ಈಗ ಮೂರನೆ ಅಲೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಾಯ ಪಟ್ಟಿದ್ದಾರೆ.
ನಾವು ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವರ್ಗದ ದೇವಸ್ಥಾನಗಳಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಅಕ್ಟೋಬರ್ 15 ರಂದು ಎಲ್ಲ ಜನರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಪ್ರಾರ್ಥಿಸಲು ವಿಶೇಷ ಪೂಜೆ ಸಲ್ಲಿಸಲು ಎಲ್ಲ ದೇವಸ್ಥಾನಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.
ಹಿಂದು ಧರ್ಮ ಶಾಸ್ತ್ರ ಪುರಾಣದಲ್ಲಿ ವಿಜಯದಶಮಿಯನ್ನು ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಇದು ದುಷ್ಟ ಶಕ್ತಿಯನ್ನು ಸಂಹರಿಸಿ ವಿಜಯವನ್ನು ಆಚರಿಸುವ ದಿನ. ಆದ್ದರಿಂದ ಈ ದಿನ ಶ್ರೀ ಭಗವತಿ ಮತ್ತು ಭಗವಂತನನ್ನು ವಿಶೇಷವಾಗಿ ಪ್ರಾರ್ಥಿಸಿ ಪೂಜಿಸಿದರೆ. ವಿಶೇಷ ಫಲ ಹೊಂದ ಬಹುದೆಂದು ಶಾಸ್ತ್ರ ವಿಧಿತವಾಗಿದೆ. ಅಲ್ಲದೇ ಭಕ್ತರ ನಂಬಿಕೆಯೂ ಆಗಿರುವುದರಿಂದ ಪ್ರಾಕೃತಿಕವಾಗಿ ಯಾರಿಗೂ ದಷ್ಪರಿಣಾಮ ಆಗದಂತೆ ವಿಜಯ ದಶಮಿಯ ದಿನ ಅಕ್ಟೋಬರ 15 ರಂದು ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಕೊರೊನಾ ಸಂಕಟ ದೂರ ಮಾಡಿ ಜನತೆಯ ಆರೋಗ್ಯ ಕಾಯುವಂತೆ ವಿಶೇಷ ಪೂಜೆ ನೆರವೇರಿಸಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದೇ ವೇಳೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಪ್ರವೇಶಕ್ಕೆ ಡ್ರೆಸ್ ಕೋಡ್ ಮಾಡುವ ಬಗ್ಗೆ ನನ್ನ ಮುಂದೆ ಯಾವುದೆ ಪ್ರಸ್ತಾಪ ಬಂದಿಲ್ಲ. ಧಾರ್ಮಿಕ ಪರಿಷತ್ ನಲ್ಲಿ ಚರ್ಚೆಯಾಗಿದ್ದರೆ ಮಾಹಿತಿ ಪಡೆದು ಪರಿಶೀಲನೆ ಮಾಡಲಾಗುವುದು.
ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಮುಜಾವರ ಅವರನ್ನು ನೇಮಕ ಮಾಡಿದ್ದನ್ನು ರದ್ದು ಪಡಿಸಿರುವ ಹೈಕೋರ್ಟ್ ಆದೇಶದ ಬಗ್ಗೆ ಸಂಪುಟ ಉಪ ಸಮಿತಿಯಲ್ಲಿ ಚರ್ಚೆಯಾಗಿದೆ ಎಂದು ಸಚಿವರಿಗೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಹಾಗೂ ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ, ಮುಜರಾಯಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.

 

ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ:ಡಿಕೆಶಿ

ಬೆಂಗಳೂರು: ಕಲ್ಲಿದ್ದಲು ಕೊರತೆ, ವಿದ್ಯುತ್ ಕಡಿತ ವಿಚಾರವಾಗಿ ನಾನು ಕೂಡ ವಿಶ್ಲೇಷಣೆ ಮಾಡುತ್ತಿದ್ದೇನೆ. ನಮ್ಮ ಕಾಲದಲ್ಲಿ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಾಗಿ, ಅದನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೆವು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸದ್ಯ ನನಗೆ ಬಂದಿರುವ ಮಾಹಿತಿ ಪ್ರಕಾರ ಒಂದೊಂದು ದಿನದ ಕಲ್ಲಿದ್ದಲು ಮಾತ್ರ ಇದೆ. ಇದು ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯ. ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದ್ರು.

ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ ಎಂದು ಬಿಂಬಿಸಿದರೆ ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಾರೆ. ಈ ಸರ್ಕಾರ ಸತ್ತವರಿಗೇ ಪರಿಹಾರ ನೀಡಿಲ್ಲ. ಇನ್ನು ಮಳೆ ಸಂತ್ರಸ್ತರಿಗೆ ಕೊಡುತ್ತಾರೆಯೇ? ಈ ಸರಕಾರಕ್ಕೆ ಬಡವರಿಗೆ ನೆರವಾಗುವ ಅನುಭವವಾಗಲಿ, ಮನಸ್ಥಿತಿಯಾಗಲಿ ಇಲ್ಲ. ರೈತರ ಬಗ್ಗೆ ಕಾಳಜಿಯಂತೂ ಮೊದಲೇ ಇಲ್ಲ ಎಂದ್ರು.

ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣ:

ಸಿದ್ದರಾಮಯ್ಯ ಅವರು ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಹೋಗುವ ವಿಚಾರವಾಗಿ ನಮ್ಮ ಬಳಿ ಯಾವುದೇ ಚರ್ಚೆ ಆಗಿಲ್ಲ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅದು ಕೇವಲ ಊಹಾಪೋಹ ಮಾತ್ರ. ಈ ವಿಚಾರವಾಗಿ ಪಕ್ಷ ಉಂಟು, ನಮ್ಮ ಶಾಸಕಾಂಗ ಪಕ್ಷದ ನಾಯಕರು ಉಂಟು. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದ್ರು.

ರಾಹುಲ್ ಗಾಂಧಿ ಅವರೇ ಜವಾಬ್ದಾರಿ ವಹಿಸಿಕೊಳ್ಳಬೇಕು:

ಇಡೀ ದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಅವರೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈಗ ರಾಹುಲ್ ಗಾಂಧಿ ಅವರೇ ಕೆಲಸ ಮಾಡುತ್ತಿದ್ದು, ಅವರ ಮುಂದಾಳತ್ವ ಬೇಕು ಎಂಬುದು ಇಡೀ ಕಾಂಗ್ರೆಸ್ ಕಾರ್ಯಕರ್ತರ ಅಪೇಕ್ಷೆ. ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವಿಚಾರವಾಗಿ ಕೆಲವೊಂದು ಪ್ರಕ್ರಿಯೆಗಳಿವೆ. ಆ ಮೂಲಕ ಆಯ್ಕೆ ನಡೆಯುತ್ತದೆ ಎಂದ್ರು.

ಉಪಚುನಾವಣೆ:

ಉಪಚುನಾವಣೆಯಲ್ಲಿ ಬಿಜೆಪಿ ಅವರು ತಮ್ಮ ಬಂಡಾಯ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹಿಂದೆ ಸರಿಸಿರುವುದು ಅವರ ತಂತ್ರಗಾರಿಕೆ. ಅವರ ರಾಜಕೀಯ ತಂತ್ರಗಾರಿಕೆ ಅವರು ಮಾಡಿಕೊಳ್ಳಲಿ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಲಿ. ಯಾರ ಮನಸ್ಸಾದರೂ ಓಲೈಸಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಅವರ ಪಕ್ಷ ರಾಜಕಾರಣದ ಗೊಡವೆ ನಮಗೆ ಬೇಡ ಎಂದ್ರು.

ನಾಸ್ಕಾಂ ಜತೆ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ

ಬೆಂಗಳೂರು: ಉದ್ಯಮರಂಗವು ನಿರೀಕ್ಷಿಸುವಂತಹ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಹತ್ವಾಕಾಂಕ್ಷೆಯಿಂದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಇಂದು ನಾಸ್ಕಾಂ (ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವೀಸ್ ಕಂಪನೀಸ್) ಜೊತೆ ಒಡಂಬಡಿಕೆಗೆ ಸಹಿ ಹಾಕಿತು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಇದಕ್ಕೆ ಅಂಕಿತ ಹಾಕಲಾಯಿತು.

ಬಳಿಕ ಮಾತನಾಡಿದ ಸಚಿವರು, ಒಡಂಬಡಿಕೆಯು ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಕಾಲೇಜು/ ವಿಶ್ವವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಇದರಿಂದ ಪ್ರತೀವರ್ಷ 5 ಲಕ್ಷ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಲಾಭವಾಗಲಿದೆ ಎಂದು ಹೇಳಿದರು.

ಈ ಉಪಕ್ರಮದಿಂದಾಗಿ ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆಯಲ್ಲಿರುವ ಕೌಶಲ್ಯಾಭಿವೃದ್ಧಿ ಕೋರ್ಸುಗಳು ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಆನ್-ಲೈನ್ ಮೂಲಕ ಸುಲಭವಾಗಿ ಲಭ್ಯವಾಗಲಿವೆ. ಈ ಒಡಂಬಡಿಕೆಯಲ್ಲಿ ಗುಣಮಟ್ಟದಿಂದ ಕೂಡಿರುವ ಕೋರ್ಸುಗಳು, ಬೋಧಕ ಸಿಬ್ಬಂದಿಗೆ ತರಬೇತಿ ಮತ್ತು ಮೂಲಸೌಲಭ್ಯ ಸಂಪನ್ಮೂಲಗಳ ಅಭಿವೃದ್ಧಿಗೆ ಆದ್ಯ ಗಮನ ಕೊಡಲಾಗಿದೆ ಎಂದರು.

ಮೂರು ವರ್ಷಕ್ಕೆ ಮೂರು ಕೋರ್ಸ್

ಈ ಒಡಂಬಡಿಕೆಯ ಫಲವಾಗಿ, ಕಂಪ್ಯೂಟರ್ ವಿಜ್ಞಾನವನ್ನು ಹೊರತುಪಡಿಸಿ ಬೇರೆ ವಿಭಾಗಗಳಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಪದವಿಯ ಮೊದಲನೇ ವರ್ಷದಲ್ಲಿ ಡಿಜಿಟಲ್ ಫ್ಲೂಯೆನ್ಸಿ, ಎರಡನೇ ವರ್ಷದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಮೂರನೇ ವರ್ಷದಲ್ಲಿ ಸೈಬರ್ ಸೆಕ್ಯುರಿಟಿ ಕೋರ್ಸುಗಳು ಲಭ್ಯವಾಗಲಿದ್ದು, ಇವುಗಳ ಕಲಿಕೆ ಕಡ್ಡಾಯವಾಗಿದೆ. ಈ ಕೋರ್ಸುಗಳನ್ನು ಮೈಕ್ರೋಸಾಫ್ಟ್ ಮತ್ತು ಸಿಸ್ಕೋ ಕಂಪನಿಗಳು ರೂಪಿಸಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸಲಾಗುವುದು. ಇದನ್ನು ಕಲಿಯಲು ಯಾವುದೇ ಶುಲ್ಕದ ಹೊರೆ ಇರುವುದಿಲ್ಲ ಎಂದು ಸಚಿವರು ವಿವರಿಸಿದರು.

ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳ ಮೂಲಕವೂ ಈ ಆನ್-ಲೈನ್ ಕೋರ್ಸುಗಳನ್ನು ಸುಲಭವಾಗಿ ಕಲಿಯಬಹುದು. ನಾಸ್ಕಾಂನ ಈ ಕೋರ್ಸುಗಳು ಎನ್ಎಸ್ ಕ್ಯೂಎಫ್ (ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ ಫ್ರೇಂವರ್ಕ್) ರೂಪಿಸಿರುವ ಗುಣಮಟ್ಟ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಅಶ್ವತ್ಥ ನಾರಾಯಣ ನುಡಿದರು.

“ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ಉದ್ಯೋಗಕ್ಷೇತ್ರವು ಬೇಡುವಂತಹ ಕೌಶಲ್ಯಗಳನ್ನು ಬೆಳೆಸಲು ಒತ್ತು ಕೊಟ್ಟಿದೆ. ಇದರಂತೆ, ಭಾರತವನ್ನು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ಪ್ರತಿಭೆಗಳ ತೊಟ್ಟಿಲನ್ನಾಗಿ ಮಾಡುವುದು ಕೇಂದ್ರ ಸರಕಾರದ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಡೀ ದೇಶದಲ್ಲಿ ನಾಸ್ಕಾಂ ಜೊತೆ ಸೇರಿಕೊಂಡು ಇಂತಹ ಒಡಂಬಡಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ರಾಜ್ಯದಲ್ಲೂ ಡಿಜಿಟಲ್ ಯುಗಕ್ಕೆ ಸಮರ್ಥವಾಗಿ ಪರಿವರ್ತನೆ ಹೊಂದಲಾಗುವುದು. ಇದಕ್ಕಾಗಿ ರಾಜ್ಯ ಸರಕಾರವು ಯಾವುದೇ ವೆಚ್ಚವನ್ನು ಮಾಡಬೇಕಾಗಿಲ್ಲ,’’ ಎಂದು ಅವರು ವಿವರಿಸಿದರು.

ದೇಶದ ಐ.ಟಿ. ಸೇವಾ ವಲಯವು ಈಗ ವರ್ಷಕ್ಕೆ 150 ಶತಕೋಟಿ ಡಾಲರ್ ವಹಿವಾಟು ನಡೆಸುತ್ತಿದೆ. ಇದು 2025ರ ಹೊತ್ತಿಗೆ 350 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆಯಲಿದೆ. ಈಗ ರಾಷ್ಟ್ರದಲ್ಲಿರುವ ಡಿಜಿಟಲ್ ಪ್ರತಿಭಾವಂತರಿಗಿಂತ ಎಂಟು ಪಟ್ಟು ಹೆಚ್ಚಿನ ಬೇಡಿಕೆ ಇದ್ದು, 2024ರ ಹೊತ್ತಿಗೆ ಇದು 20 ಪಟ್ಟು ಹೆಚ್ಚಾಗಲಿದೆ. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ, ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

“ದೇಶದಲ್ಲಿ ಈಗ ಸಾಕಷ್ಟು ಉದ್ಯೋಗಗಳು ಲಭ್ಯವಾಗುತ್ತಿವೆ. ಆದರೆ, ಅದಕ್ಕೆ ಅರ್ಹರಾದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಇಂದು ತಂತ್ರಜ್ಞಾನದ ನೆರವಿಲ್ಲದೆ ಯಾವ ವೃತ್ತಿಯನ್ನೂ ಸಮರ್ಥವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಇದನ್ನು ಮನಗಂಡು, ನಾವು ಸಕಾರಾತ್ಮಕವಾಗಿ ಇಂತಹ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಎನ್ಇಪಿ ಜಾರಿಯಲ್ಲಿ ಕರ್ನಾಟಕವು ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ,’’ ಎಂದು ಅವರು ಹೇಳಿದರು.

ನಾಸ್ಕಾಂ ಪರವಾಗಿ ನವನೀತ್ ಸಮೈಯಾರ್ ಮತ್ತು ದಿನೇಶ್ ಕುಮಾರ್ ಪಾಣಿಗ್ರಾಹಿ ಇದ್ದು, ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ, ಆಡಳಿತಾಧಿಕಾರಿ ಡಾ.ಟಿ.ಎನ್.ತಾಂಡವೇಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದರು.

ಪ್ರೇಮಲೋಕ ಸಿನಿಮಾ ಚಿತ್ರೀಕರಣದ ವೇಳೆ ಹಂಸಲೇಖರಿಗೆ ಬೈದು ಬುದ್ದಿ ಹೇಳಿದ್ರಂತೆ ವೀರಸ್ವಾಮಿ..

ಬೆಂಗಳೂರು: ಸಂಗೀತ ಮಾಂತ್ರಿಕ, ಸ್ವರ ಸಾಮ್ರಾಟ,ನಾದಬ್ರಹ್ಮ ಹಂಸಲೇಖರಿಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎನ್ ವೀರಸ್ವಾಮಿ ತರಾಟೆ ತೆಗೆದುಕೊಂಡು ಬುದ್ದಿ ಮಾತು ಹೇಳಿದ್ದರು.ಕನ್ನಡ ಚಿತ್ರರಂಗದ ಮೈಲ್ ಸ್ಟೋನ್ ಸಿನಿಮಾ ಪ್ರೇಮಲೋಕ ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು.

ಅದು 80 ರ ದಶಕ.ಕನ್ನಡ ಚಿತ್ರರಂಗ ಹೊಸ ಆಯಾಮದತ್ತಾ ತಿರುಗುತ್ತಿದ್ದ ಸಮಯ.ರಾಜ್ ಕುಮಾರ್,ವಿಷ್ಣುವರ್ಧನ್, ಶಂಕರ್ ನಾಗ್,ಅಂಬರೀಷ್ ಮಿಂಚುತ್ತಿದ್ದ ಕಾಲಘಟ್ಟದಲ್ಲಿ ಬೆಳ್ಳಿಪರದೆಯ ಚಿತ್ರಣವನ್ನೇ ಬದಲಿಸಿದ ಜೋಡಿ ರವಿಚಂದ್ರನ್ ಹಂಸಲೇಖ ಜೋಡಿ.ಪ್ರೇಮಲೋಕ ಚಿತ್ರದ ಮೂಲಕ ದೇಶದ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದ ಹಿರಿಮೆ ಈ ಜೋಡಿಗೆ ಸಲ್ಲಲಿದೆ.

ಅಂದ ಹಾಗೆ ಈ ಚಿತ್ರದ ಚಿತ್ರೀಕರಣದ ವೇಳೆ ರವಿಚಂದ್ರನ್ ತಂದೆ ಹಿರಿಯ ನಿರ್ಮಾಪಕ ಎನ್ ವೀರಸ್ವಾಮಿ ಹಂಸಲೇಖರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಹೇಯ್ ಯಾರಿವನೂ… ಈ ಮನ್ಮಥನೂ…ಹಾಡಿನ ಚಿತ್ರೀಕರಣದ ವೇಳೆ ಹಾಡಿನಲ್ಲೇ ಫೈಟ್ ಸೀನ್ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಸ್ಟಂಟ್ ಮ್ಯಾನ್ ಬೈಕ್ ಜಂಪ್ ಮಾಡುವ ಸೀನ್ ವೇಳೆ ಅವಘಡವಾಗುತ್ತದೆ. ಸಂಗೀತಕ್ಕೆ ತಕ್ಕ ರೀತಿಯಲ್ಲಿ ಬೈಕ್ ಜಂಪ್ ಮಾಡಲು ಹೋಗಿ ಸ್ಟಂಟ್ ಮ್ಯಾನ್ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡುಕೊಂಡು ಆಸ್ಪತ್ರೆ ಸೇರಿದ್ದರು.

ಇದನ್ನು ಕಂಡ ವೀರಸ್ವಾಮಿ ಗರಂ ಆಗಿದ್ದರು. ಸ್ಟಂಟ್ ಮ್ಯಾನ್ ಗೆ ಚಿಕತ್ಸೆ ಕೊಡಿಸುವ ವ್ಯವಸ್ಥೆ ಮಾಡಿ ನಂತರ ನೇರವಾಗಿ ಹಂಸಲೇಖರಿಗೆ ಕರೆ ಮಾಡಿ ಬೈದು ಬುದ್ದಿಮಾತು ಹೇಳಿದ್ದರು. ಹಾಡಿನ‌ ಚಿತ್ರೀಕರಣದಲ್ಲಿ ಯಾರಾದರೂ ಫೈಟ್ ಶೂಟ್ ಮಾಡ್ತಾರಾ? ಸಂಗೀತಕ್ಕೆ ತಕ್ಕ ಸ್ಟಂಟ್ ಶೂಟ್ ಮಾಡೋಕಾಗುತ್ತಾ? ಬುದ್ದಿ ಬೇಡವಾ ನಿಮ್ಗೆ, ಮೊದಲ ಹಾಡಿನ ಚಿತ್ರೀಕರಣ ಮಾಡಿಕೊಳ್ಳಿ ನಂತರ ಫೈಟ್ ಸೀನ್ ಪ್ರತ್ಯೇಕವಾಗಿ ಶೂಟ್ ಮಾಡಿಕೊಂಡು ಕಡೆಯಲ್ಲಿ ಮುಕ್ಸಿಂಗ್ ಮಾಡಿಕೊಳ್ಳಿ ಎಂದು ಬುದ್ದಿ ಮಾತು ಹೇಳಿದ್ದರಂತೆ.

ವೀರಸ್ವಾಮಿ ಸೂಚನೆ ನಂತರ ಹಾಡಿನಲ್ಲೇ ಫೈಟ್ ಸೀನ್ ಒಟ್ಟಿಗೆ ಶೂಟ್ ಮಾಡುವುದನ್ನು ಬಿಟ್ಟು ಪ್ರತ್ಯೇಕವಾಗಿ ಶೂಟ್ ಮಾಡಿ ನಂತರ ಮಿಕ್ಸಿಂಗ್ ಮಾಡಿದ್ದರು. ಈ ವಿಷಯವನ್ನು ಸ್ವತಃ ಹಂಸಲೇಖ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ.

ಟಾಟಾ ಸನ್ಸ್ ಗ್ರೂಪ್ ಪಾಲಾದ ಏರ್ ಇಂಡಿಯಾ : ಬಿಡ್ ಗೆದ್ದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಏರ್ ಇಂಡಿಯಾ ಟಾಟಾ ಸನ್ಸ್ ಗ್ರೂಪ್ ಪಾಲಾಗಿದೆ.ಕಳೆದ ಕೆಲ ದಿನಗಳಿಂದ ಏರ್ ಇಂಡಿಯಾವನ್ನ ಟಾಟಾ ಖರೀದಿಸಿದೆಯಾ ಕೇವಲ ವದಂತಿಯಾ ಎಂದು ಹರಿದಾಡುತ್ತಿದ್ದ ಗೊಂದಲದ ಮಾಹಿತಿಗೆ ಕೇಂದ್ರ ಸರ್ಕಾರವೇ ಅಧಿಕೃತವಾಗಿ ತೆರೆ ಎಳೆದಿದ್ದು, ಏರ್ ಇಂಡಿಯಾ ಬಿಡ್ ಟಾಟಾ ಸಮೂಹ ಗೆದ್ದಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.

ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಅಮಿತ್ ಶಾ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನೊಳಗೊಂಡ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಯ ಏರ್ ಇಂಡಿಯಾ ನಿರ್ದಿಷ್ಟ ಪರ್ಯಾಯ ವ್ಯವಸ್ಥೆಯು (ಎ ಎಸ್ ಎ ಎಂ) ಏರ್ ಇಂಡಿಯಾದಲ್ಲಿರುವ ಭಾರತದ ಸರ್ಕಾರದ ಶೇ.100 ಇಕ್ವಿಟಿ ಷೇರುಗಳು ಜೊತೆಗೆ ಎ ಐ ಎಕ್ಸ್ ಎಲ್ ಮತ್ತು ಎ ಎಸ್ ಎ ಟಿ ಎಸ್ ನಲ್ಲಿರುವ ಏರ್ ಇಂಡಿಯಾದ ಇಕ್ವಿಟಿ ಷೇರುಗಳನ್ನು ಅತಿ ಹೆಚ್ಚಿನ ದರ ಸಲ್ಲಿಸಿದ್ದ ಟಾಟಾ ಸನ್ಸ್ ಸ್ವಾಮ್ಯದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಗೆ ಮಾರಾಟ ಮಾಡಲು ಅನುಮೋದನೆ ನೀಡಿದೆ.

ಏರ್ ಇಂಡಿಯಾಕ್ಕೆ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ 18,000 ಕೋಟಿ ರೂ.ಗಳ ಉದ್ಯಮ ಬೆಲೆಯ (ಇವಿ)ಬಿಡ್ ಸಲ್ಲಿಸಿತ್ತು. ಈ ವಹಿವಾಟಿನಲ್ಲಿ ಭೂಮಿ ಮತ್ತು ಕಟ್ಟಡ ಸೇರಿದಂತೆ 14,718 ಕೋಟಿ ರೂ. ಮೌಲ್ಯದ ಸ್ವತ್ತುಗಳು ಒಳಗೊಂಡಿಲ್ಲ, ಇವುಗಳನ್ನು ಭಾರತ ಸರ್ಕಾರದ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ (ಎ ಐ ಎ ಹೆಚ್ ಎಲ್) ಗೆ ವರ್ಗಾಯಿಸಲಾಗುವುದು ಎಂದು ಅಧಿಕೃತವಾಗಿ ಪ್ರಕಟಿಸಿದೆ.

ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳ ಮರುಹೂಡಿಕೆ ಪ್ರಕ್ರಿಯೆಯು ಜೂನ್ 2017 ರಲ್ಲಿ ಸಿಸಿಇಎಯ ‘ತಾತ್ವಿಕ’ಅನುಮೋದನೆಯೊಂದಿಗೆ ಆರಂಭವಾಯಿತು. ಮೊದಲ ಸುತ್ತಿನಲ್ಲಿ ಆಸಕ್ತಿ ವ್ಯಕ್ತಪಡಿಸಿದ ಯಾವುದೇ ಬಿಡ್ ಬರಲಿಲ್ಲ. ಪ್ರಕ್ರಿಯೆಯು 27 ಜನವರಿ 2020 ರಂದು ಪ್ರಾಥಮಿಕ ಮಾಹಿತಿ ಜ್ಞಾಪನೆ (ಪಿಐಎಂ) ಮತ್ತು ಆಸಕ್ತಿ ವ್ಯಕ್ತಪಡಿಸುವ ಬಿಡ್ ಗಳ ವಿನಂತಿಯೊಂದಿಗೆ (ಇಒಐ) ಮರು ಆರಂಭವಾಯಿತು. ಜನವರಿ 2020 ರ ಪಿಐಎಂನ ಮೂಲ ನಿರ್ಮಾಣದ ಪ್ರಕಾರ (i) ಪೂರ್ವ ನಿರ್ಧಾರಿತ, ಸ್ಥಿರ ಸಾಲವನ್ನು ಏರ್ ಇಂಡಿಯಾದಲ್ಲಿ ಉಳಿಸಿಕೊಳ್ಳಬೇಕು (ಬಾಕಿಯನ್ನು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್) ಗೆ ವರ್ಗಾಯಿಸಬೇಕು ಮತ್ತು (ii) ಏರ್ ಇಂಡಿಯಾ ಮತ್ತು ಎ ಐ ಎಕ್ಸ್ ಎಲ್ ನಲ್ಲಿ ಉಳಿಸಿಕೊಳ್ಳಬೇಕಾದ ಕರೆಂಟ್ ಮತ್ತು ನಾನ್ ಕರೆಂಟ್ ಹೊಣೆಗಾರಿಕೆಗಳು (ಸಾಲವನ್ನು ಹೊರತುಪಡಿಸಿ) ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ ಕೆಲವು ಗುರುತಿಸಲಾದ ಸ್ವತ್ತುಗಳ ಮೊತ್ತಕ್ಕೆ ಸಮನಾಗಿರುತ್ತದೆ (ಹೆಚ್ಚುವರಿ ಹೊಣೆಗಾರಿಕೆಗಳನ್ನು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ ಗೆ ವರ್ಗಾಯಿಸಲಾಗುವುದು) ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮ ಉದ್ಭವಿಸಿದ ಪರಿಸ್ಥಿತಿಯ ಕಾರಣದಿಂದ ಸಮಯಾವಧಿಯನ್ನು ವಿಸ್ತರಿಸಬೇಕಾಯಿತು. ಏರ್ ಇಂಡಿಯಾದ ಅತಿಯಾದ ಸಾಲ ಮತ್ತು ಇತರ ಹೊಣೆಗಾರಿಕೆಗಳ ದೃಷ್ಟಿಯಿಂದ ಬೃಹತ್ ಸಂಗ್ರಹವಾದ ನಷ್ಟ, ಬಿಡ್ಡಿಂಗ್ ಬ್ಯಾಲೆನ್ಸ್ ಶೀಟ್ ಅನ್ನು ಮರುಗಾತ್ರಗೊಳಿಸಲು ಮತ್ತು ಬಿಡ್‌ಗಳು ಮತ್ತು ಸ್ಪರ್ಧೆಯ ಅವಕಾಶಗಳನ್ನು ಹೆಚ್ಚಿಸಲು ನಿರೀಕ್ಷಿತ ಬಿಡ್ಡರ್‌ಗಳಿಗೆ ಅವಕಾಶ ನೀಡಲು ಬಿಡ್ಡಿಂಗ್ ರಚನೆಯನ್ನು 2020 ರ ಅಕ್ಟೋಬರ್‌ನಲ್ಲಿ ಉದ್ಯಮ ಮೌಲ್ಯಕ್ಕೆ (ಇವಿ) ಪರಿಷ್ಕರಿಸಲಾಯಿತು. ಇವಿ ರಚನೆಯು ಬಿಡ್ಡರ್‌ಗಳಿಗೆ ಈಕ್ವಿಟಿಯ ಕನಿಷ್ಠ ಶೇ.15 ರಷ್ಟು ನಗದು ಪರಿಗಣನೆಯೊಂದಿಗೆ ಪೂರ್ವನಿರ್ಧರಿತ, ಸ್ಥಿರ ಸಾಲದ ಬದಲಾಗಿ ಈಕ್ವಿಟಿ ಮತ್ತು ಸಾಲದ ಒಟ್ಟು ಪರಿಗಣನೆಗೆ ಬಿಡ್ ಮಾಡಲು ಅವಕಾಶ ನೀಡಿತು. ಮೂಲ ಮತ್ತು ಪರಿಷ್ಕೃತ ರಚನೆಯ ಪ್ರಕಾರ, ಎಲ್ಲಾ ಕೋರ್-ಅಲ್ಲದ ಸ್ವತ್ತುಗಳನ್ನು (ಭೂಮಿ, ಕಟ್ಟಡಗಳು, ಇತ್ಯಾದಿ) ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ ಗೆ ವರ್ಗಾಯಿಸಲಾಗುವುದು. ಆದ್ದರಿಂದ ಅವು ವಹಿವಾಟಿನ ಭಾಗವಾಗಿರುವುದಿಲ್ಲ. ಉದ್ಯೋಗಿಗಳು ಮತ್ತು ನಿವೃತ್ತ ನೌಕರರ ಹಿತಾಸಕ್ತಿ ಕಾಪಾಡಲಾಗುವುದು ಎಂದು ಕೇಂದ್ರ ತಿಳಿಸಿದೆ.

ವಹಿವಾಟಿನಲ್ಲಿ ಏಳು ಇಒಐಗಳೊಂದಿಗೆ 2020 ರ ಡಿಸೆಂಬರ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿತು. ಆದಾಗ್ಯೂ, ಸ್ಪಷ್ಟೀಕರಣಕ್ಕೆ ಅವಕಾಶ ನೀಡಿದ ನಂತರವೂ ಪಿಐಎಂ/ಇಒಐನಲ್ಲಿ ನಿಗದಿಪಡಿಸಿದ ಅವಶ್ಯಕತೆಗಳನ್ನು ಪೂರೈಸದ ಕಾರಣ ಐದು ಬಿಡ್ಡರ್‌ಗಳು ಅನರ್ಹಗೊಂಡರು. ಪ್ರಸ್ತಾವನೆ (ಆರ್‌ಎಫ್‌ಪಿ) ಮತ್ತು ಷೇರು ಖರೀದಿ ಒಪ್ಪಂದದ ಕರಡನ್ನು (ಎಸ್‌ಪಿಎ) 30 ಮಾರ್ಚ್ 2021 ರಂದು ನೀಡಲಾಯಿತು. ಏರ್ ಇಂಡಿಯಾ ಅರ್ಹ ಬಿಡ್ಡರ್‌ಗಳಿಗೆ ವರ್ಚುವಲ್ ಡಾಟಾ ರೂಂ ಮೂಲಕ ಸಮಗ್ರ ಮಾಹಿತಿಯನ್ನು ಒದಗಿಸಿದೆ, ಅವರು ಸ್ವತ್ತುಗಳು ಮತ್ತು ನೀಡುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಲು ಅವಕಾಶ ನೀಡಲಾಯಿತು. ವಹಿವಾಟಿನ ಭಾಗವಾಗಿ. ಬಿಡ್ಡರ್‌ಗಳ ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಾಗಿದೆ. ಬಿಡ್ಡರ್‌ಗಳ ಕೋರಿಕೆಯ ಮೇರೆಗೆ, ಬಿಡ್ ಸಲ್ಲಿಸುವ ದಿನಾಂಕವನ್ನು 15 ಸೆಪ್ಟೆಂಬರ್, 2021 ಕ್ಕೆ ವಿಸ್ತರಿಸಲಾಯಿತು, ಇದರಿಂದಾಗಿ ಅವರು ಬಿಡ್ ಸಲ್ಲಿಸುವ ಮೊದಲು ಮೌಲ್ಯಮಾಪನವನ್ನು ಕೈಗೊಳ್ಳಲು ಅವಕಾಶ ದೊರೆಯಿತು. ಅಂತಿಮ ಎಸ್‌ಪಿಎ ವಿವರವಾದ ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಿತ್ತು ನಿಗದಿತ ದಿನಾಂಕದಂದು ಹಣಕಾಸೇತರ ಬಿಡ್ ದಾಖಲೆಗಳು ಮತ್ತು ಅರ್ಹ ಇಬ್ಬರು ಬಿಡ್ಡರ್‌ಗಳಿಂದ ಬಿಡ್ ಭದ್ರತೆಯೊಂದಿಗೆ ಎರಡು ಮೊಹರು ಮಾಡಿದ ಬಿಡ್‌ಗಳನ್ನು ಸ್ವೀಕರಿಸಲಾಯಿತು.

ಕಾರ್ಯತಂತ್ರದ ಬಂಡವಾಳ ಹಿಂದೆಗೆತದ ಅನುಮೋದಿತ ಕಾರ್ಯವಿಧಾನಕ್ಕೆ ಅನುಗುಣವಾಗಿ, ಪ್ರಕ್ರಿಯೆಯ ಮೌಲ್ಯಮಾಪನದ ಆಧಾರದ ಮೇಲೆ ವಹಿವಾಟಿನ ಮೊಹರು ಮಾಡಿದ ಹಣಕಾಸಿನ ಬಿಡ್‌ಗಳನ್ನು ಸ್ವೀಕರಿಸಿದ ನಂತರ ಮೂಲ ಬೆಲೆಯನ್ನು ನಿಗದಿಪಡಿಸಲಾಯಿತು. ಮೂಲ ಬೆಲೆಯ ಸ್ವತಂತ್ರ ಸ್ಥಿರೀಕರಣದ ನಂತರ, ಈಗಾಗಲೇ ಸ್ವೀಕರಿಸಿದ ಮೊಹರು ಮಾಡಿದ ಹಣಕಾಸು ಬಿಡ್‌ಗಳನ್ನು ಬಿಡ್ಡರ್‌ಗಳ ಸಮ್ಮುಖದಲ್ಲಿ ತೆರೆಯಲಾಯಿತು, ಅವರು ಈ ಕೆಳಗಿನಂತಿದ್ದರು:

1. ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ 18,000 ಕೋಟಿ ರೂ. ಇವಿಯೊಂದಿಗೆ

2. 15,100 ಕೋಟಿ ರೂ. ಇವಿಯ ಶ್ರೀ ಅಜಯ್ ಸಿಂಗ್ ನೇತೃತ್ವದ ಸಂಸ್ಥೆ

ಎರಡೂ ಬಿಡ್‌ಗಳು 12,906 ಕೋಟಿ ರೂ.ಗಳ ಮೂಲ ಬೆಲೆಗಿಂತ ಹೆಚ್ಚಾಗಿದ್ದವು.

ಬಿಡ್‌ದಾರರ ಗೋಪ್ಯತೆಗೆ ಸಂಬಂಧಿಸಿದಂತೆ, ಅಂತರ ಸಚಿವಾಲಯ ತಂಡ (ಐಎಂಜಿ), ಬಂಡವಾಳ ಹಿಂದೆಗೆತ ಕುರಿತ ಕಾರ್ಯದರ್ಶಿಗಳ ತಂಡ (ಸಿಜಿಡಿ) ಮತ್ತು ಅತ್ಯುನ್ನತ ಸಚಿವರ ಮಟ್ಟದ ಏರ್ ಇಂಡಿಯಾ ನಿರ್ದಿಷ್ಟ ಪರ್ಯಾಯ ವ್ಯವಸ್ಥೆಯು ಬಹು-ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಿಡ್‌ದಾರರ ಗೋಪ್ಯತೆಗೆ ಸಂಬಂಧಿಸಿದಂತೆ ಬಂಡವಾಳ ಹಿಂದೆಗೆತ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದೆ. ವಹಿವಾಟು ಸಲಹೆಗಾರ, ಕಾನೂನು ಸಲಹೆಗಾರ, ಆಸ್ತಿ ಮೌಲ್ಯಮಾಪಕರು, ಕ್ಷೇತ್ರಗಳ ವೃತ್ತಿಪರರು ಸಂಪೂರ್ಣ ಪ್ರಕ್ರಿಯೆಯನ್ನು ಬೆಂಬಲಿಸಿದ್ದಾರೆ.

ಮುಂದಿನ ಹಂತವು ಯಶಸ್ವಿಯಾಗಿ ಬಿಡ್ಡುದಾರರು ಕಂಪನಿ ಮತ್ತು ಸರ್ಕಾರದ ಷರತ್ತುಗಳನ್ನು ಪೂರೈಸಿದ ನಂತರ, ಒಪ್ಪಂದ ಬಾಧ್ಯತಾ ಪತ್ರವನ್ನು (ಎಲ್ ಒ ಐ) ನೀಡಲಾಗುವುದು ಮತ್ತು ನಂತರ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು, ಡಿಸೆಂಬರ್ 2021 ರೊಳಗೆ ವಹಿವಾಟು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಡ್ ಬಗ್ಗೆ ಸಮಗ್ರ ಮಾಹಿತಿ ನೀಡಿದೆ.