ಡಿಕೆಶಿ ಪದಗ್ರಹಣಕ್ಕೆ ಅನುಮತಿ ನಿರಾಕರಣೆ: ಸಿದ್ದರಾಮಯ್ಯ ಖಂಡನೆ

ಬೆಂಗಳೂರು: ಕೆಪಿಸಿಸಿಯ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಮತ್ತೆ ಅನುಮತಿ ನಿರಾಕರಿಸಿರುವ ಸರ್ಕಾರದ ಕ್ರಮವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಸರ್ಕಾರದ ಈ ನಿರ್ದಾರ ರಾಜಕೀಯ ಪ್ರೇರಿತ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪದಗ್ರಹಣ ಸಮಾರಂಭಕ್ಕೆ ಎರಡನೇ ಬಾರಿ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಸರ್ಕಾರ ರಾಜಕೀಯ ದುರುದ್ದೇಶದಿಂದ ಈ ತೀರ್ಮಾನ ಕೈಗೊಂಡಿದೆ.

ದೇಶದ ಗೃಹ ಸಚಿವರಾದ ಅಮಿತ್ ಶಾ ಅವರು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ
ವರ್ಚುವಲ್ ರ್ಯಾಲಿ ನಡೆಸುವಾಗ ಅನ್ವಯ ಆಗದ ನಿಯಮಗಳು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಅನ್ವಯ ಆಗುವುದೇ ಎಂದು ಸಿದ್ದರಾಮಯ್ಯ ಅವರು ಪ್ರಶಿಸಿದ್ದಾರೆ.

ಸರ್ಕಾರ ಕೂಡಲೇ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರ ಏನೇ ದಮನಕಾರಿ ಪ್ರವೃತ್ತಿ ತೋರಿಸಿದರೂ ನಾವು ಕಾರ್ಯಕ್ರಮ ಮಾಡುತ್ತೇವೆ. ನಾವು ಕಾನೂನು ಗೌರವಿಸುವವರೇ ಹೊರತು ಕಾನೂನು ಭಂಗ ಮಾಡುವವರಲ್ಲ. ಕಾನೂನಿನ ಅಡಿಯಲ್ಲೇ ನಾವು ಕಾರ್ಯಕ್ರಮ ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ರಾಜ್ಯಸಭಾ ಚುನಾಣೆಗೆ ನಾಮ ಪತ್ರ ಸಲ್ಲಿಸಿದ ದೊಡ್ಡಗೌಡರು,ಬಿಜೆಪಿಯಿಂದಲೂ ಇಬ್ಬರು ಕಣಕ್ಕೆ

ಬೆಂಗಳೂರು, ಜೂ-9: ರಾಜ್ಯಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್.ಡಿ‌ ದೇವೇಗೌಡರು ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿಯಿಂದಲೂ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಪಕ್ಷೇತರ ಅಭ್ಯರ್ಥಿ ಸೇರಿ ಐವರು ಕಣದಲ್ಲಿದ್ದಾರೆ.

ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ನಿನ್ನೆ ನಾಮ ಪತ್ರ ಸಲ್ಲಿಸಿದ ಬೆನ್ನಲ್ಲೇ ಕಾಂಗ್ರೆಸ್ ಬೆಂಬಲದೊಂದಿಗೆ ದೊಡ್ಡಗೌಡರು ಇಂದು ಅಖಾಡಕ್ಕಿಳಿದರು.ವಿಧಾನಸೌಧ ಸೌಧಕ್ಕೆ ತೆರಳಿ 12.30 ಕ್ಕೆ ನಾಮಪತ್ರ ಸಲ್ಲಿಸಿದರು.

ದೇವೇಗೌಡರು ನಾಮಪತ್ರ ಸಲ್ಲಿಸಿದ ನಂತರ 1 ಗಂಟೆಗೆ ಬಿಜೆಪಿ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿಗಸ್ತಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಜೆಡಿಎಸ್ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತರ ಪಕ್ಷೇತರ ಅಭ್ಯರ್ಥಿಯಾಗಿ ಸಂಗಮೇಶ್ ಚಿಕ್ಕನರಗುಂದ ಎನ್ನುವವರು ನಾಮಪತ್ರ ಸಲ್ಲಿಕೆ ಮಾಡಿದರು.

ಪಕ್ಷೇತರ ಅಭ್ಯರ್ಥಿಗೆ ಸೂಚಕರು ಇಲ್ಲದ್ದರಿಂದ ಅವರ ನಾಮ ಪತ್ರ ತಿರಸ್ಕಾರ ಖಚಿತವಾಗಿದ್ದು,ಉಳಿದ ನಾಲ್ವರ ಅವಿರೋಧ ಆಯ್ಕೆ ಸ್ಪಷ್ಟವಾಗಿದೆ.

ನಾಲ್ಕು ಮದುವೆ, 20 ಗರ್ಲ್ ಫ್ರೆಂಡ್ಸ್: ಖಾಕಿ ಬಲೆಗೆ ಬಿದ್ದ ಹೈನಾತಿ ಖದೀಮ

ಬೆಂಗಳೂರು: ಈಗಿನ ಕಾಲದಲ್ಲಿ ಹುಡುಗ್ರು ಅಂದ್ರೆ ಗರ್ಲ್ ಫ್ರೆಂಡ್ ಇರಲ್ವಾ ಅನ್ನೊ ಹಾಗೆ ಆಗಿದೆ. ಆದ್ರೆ, ಒಂದೋ ಎರಡೋ‌ ಗರ್ಲ್ ಫ್ರೆಂಡ್ಸ್ ಇರೋದು ಕಾಮನ್. ಅದೇ 23 ಗರ್ಲ್ ಫ್ರೆಂಡ್ಸ್ ಇದ್ರೆ ಏನ್ ಹೇಳೋದು ಹೇಳಿ.

ಇತ್ತೀಚಿಗೆ ಹುಡುಗಿಯರು ಮದುವೆಯಾಗಲು ಸಾಮಾಜಿಕ‌ ಜಾಲತಾಣಗಳನ್ನ ಬಳಸ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಸುರೇಶ, ಅಂತಹ ಹುಡುಗಿಯರನ್ನು ಮದಯವೆಯಾಗುವುದಾಗಿ ಹೇಳಿ ನಂಬಿಸಿ ಅವ್ರಿಂದ ಹಣ ಪೀಕುತ್ತಿದ್ದ. ಹೀಗೆ ಇವನಿಂದ ಹಣ ಕಳೆದುಕೊಂಡ ಮಹಿಳೆಯೊಬ್ಬಳು ಬ್ಯಾಡರಹಳ್ಳಿ‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಮಹಿಳೆಯ ದೂರಿನ ಹಿನ್ನೆಲೆ ತನಿಖೆ ನಡೆಸಿದ್ದ ಪೊಲೀಸರು ಸುರೇಶನನ್ನ ಬಂಧಿಸಿದ್ದಾರೆ. ಆದ್ರೆ, ಪೊಲೀಸ್ರಿಗೆ ಇವನ ಕುರಿತು ಬಗೆದಷ್ಟೂ ರೋಚಕ‌ ವಿಚಾರಗಳು ಹೊರ ಬರ್ತಾ ಇವೆ ನಾಲ್ವರನ್ನ ಮದುವೆ ಆಗಿರೋ‌ ಸುರೇಶ 20 ಕ್ಕೂ ಹೆಚ್ಚು ಗರ್ಲ್ ಫ್ರೆಂಡ್ಸ್ ಹೊಂದಿದ್ದಾನೆ. ಮೈಸೂರು, ರಾಮನಗರ, ಬೆಂಗಳೂರು ಸೇರಿ ರಾಜ್ಯಾದ್ಯಂತ ಹತ್ತಾರು ಹುಡುಗಿಯರಿಗೆ ಮೋಸ ಮಾಡಿದ್ದಾನೆ.

ಪೌರ ಕಾರ್ಮಿಕರ ‘ಸುವಿಧಾ ಕ್ಯಾಬಿನ್‌’ ಉದ್ಘಾಟಿಸಿದ ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಪೌರ ಕಾರ್ಮಿಕರ ಅನುಕೂಲಕ್ಕಾಗಿ ಯಶವಂತಪುರದ ಆರ್‌ಟಿಓ ಕಚೇರಿ ಆವರಣದಲ್ಲಿ ನಿರ್ಮಿಸಿರುವ ‘ಸುವಿಧಾ ಕ್ಯಾಬಿನ್’ ಅನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಉದ್ಘಾಟಿಸಿದರು.

ಸುವಿಧಾ ಕ್ಯಾಬಿನ್‌ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮ ಬೆಂಗಳೂರಿನ ನೈರ್ಮಲ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರ ಸುರಕ್ಷತೆ, ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸುವಿಧಾ ಕ್ಯಾಬಿನ್‌ ನಿರ್ಮಿಸಲಾಗಿದೆ. ಬೆಳಗ್ಗೆ ಕೆಲಸ ಆರಂಭಿಸುವ ಮೊದಲು ತಮ್ಮ ವಸ್ತುಗಳನ್ನು ಇರಿಸಲು ಸುವಿಧಾ ಕ್ಯಾಬಿನ್‌ನಲ್ಲಿ ಸೂಕ್ತ ಸ್ಥಳಾವಕಾಶವಿದೆ. ಜತೆಗೆ, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪೌರ ಕಾರ್ಮಿಕರು ಇದರ ಪ್ರಯೋಜನ ಪಡೆಯಲಿ,”ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಮೇಯರ್‌ ಗೌತಮ್‌ ಕುಮಾರ್‌ ಜೈನ್‌, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಬಿಬಿಎಂಪಿ ಆಯಕ್ತರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಳೆದ ಬಾರಿಯ ಪ್ರವಾಹದಿಂದ ಸೋಯಾಬಿನ್ ಮೊಳಕೆಯಲ್ಲಿ ವ್ಯತ್ಯಾಸ:ಪರಿಸ್ಥಿತಿ ನೋಡಿಕೊಂಡು ಬಿತ್ತನೆಗೆ ಮುಂದಾಗಲು ಕೃಷಿ ಸಚಿವರ ಕರೆ

ಹಾವೇರಿ, ಜೂ.8: ಕಳೆದ ವರ್ಷ ಸುರಿದ ಹೆಚ್ಚಿನ ಪ್ರವಾಹದಿಂದಾಗಿ ಈ ವರ್ಷ ಸೋಯಾಬಿನ್ ಬೀಜ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಬಾರಿ ಪರಿಸ್ಥಿತಿ ನೋಡಿಕೊಂಡು ಬಿತ್ತನೆಗೆ ಮುಂದಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

ಸೋಯಾಬಿನ್ ಬಿತ್ತನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸಚಿವರು ಮಾತನಾಡಿದರು.ಸೋಯಾಬಿನ್ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವಯವುದು ಕೇವಲ ಕರ್ನಾಟಕದ್ದೇ ಅಷ್ಟೇ ಅಲ್ಲದೇ ದೇಶಾದ್ಯಂತ ಕಂಡುಬಂದಿರುವ ಸಮಸ್ಯೆಯಾಗಿದೆ.ಭಾರತ ಸರ್ಕಾರ ಈ ಮೊದಲು ಶೇ.65ರಷ್ಟು ಬಿತ್ತನೆ ಒಪ್ಪಿಗೆ ಕೊಟ್ಟಿತ್ತು. ಪ್ರವಾಹದಿಂದಾಗಿ ಇದನ್ನು ಕೇಂದ್ರ ಸರ್ಕಾರ ಶೇ.60 ಕ್ಕೆ ಇಳಿಸಿದೆ. ಎಲ್ಲಾ ಕಡೆ ಮೊಳಕೆ ಕಡಿಮೆ ಬಂದಿದೆ. ಬೆಳಗಾವಿ, ಧಾರವಾಡ, ಬೀದರ್, ಗುಲ್ಬರ್ಗಾ, ಹಾವೇರಿ,ಬಾಗಲಕೋಟೆ ಇವು ಸೋಯಾಬಿನ್ ಹೆಚ್ಚು ಸೋಯಾಬಿನ್ ಬಿತ್ತನೆಯಾಗುವ ಜಿಲ್ಲೆಗಳಾಗಿವೆ.ಕಳೆದ ವರ್ಷ ಹೆಚ್ಚು ಪ್ರವಾಹದಿಂದಾಗಿ ಸೋಯಾಬಿನ್ ಬೀಜ ಮಧ್ಯಪ್ರದೇಶ ಮತ್ತು ಆಂದ್ರಪ್ರದೇಶದಿಂದ ಕರ್ನಾಟಕಕ್ಕೆ ಪೂರೈಕೆಯಾಗಿದೆ. ಈ ವರ್ಷ 1,30,214 ಕ್ವಿಂಟಾಲ್ ಬೀಜವನ್ನು ಖರೀದಿಸಲಾಗಿದೆ ಎಂದರು.

ಸಾಧ್ಯವಿದ್ದಲ್ಲಿ ಮೊಳಕೆ ಪ್ರಮಾಣವನ್ನು ಅರಿತುಕೊಂಡು ಎಕರೆಗೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಬೀಜಗಳನ್ನು ಬಿತ್ತನೆ ಮಾಡಬಹುದಾಗಿದೆ.ಸೋಯಾಬಿನ್ ಬಿತ್ತನೆ ಸಂಬಂಧ ಶೀಘ್ರದಲ್ಲಿಯೇ ಪ್ರಮುಖರ ಸಭೆ ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.

ಎಚ್ಡಿಡಿ, ಖರ್ಗೆ ರಾಜ್ಯಸಭೆ ಅಖಾಡಕ್ಕೆ!

ಬೆಂಗಳೂರು: ರಾಜ್ಯದ ಇಬ್ಬರು ಧೀಮಂತ ರಾಜಕೀಯ ಮುಖಂಡರು ರಾಜ್ಯಸಭೆ ಪ್ರವೇಶಿಯಲು ಅಖಾಡ ಸಿದ್ಧವಾಗಿದೆ. ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ಶಾಸಕರು, ರಾಷ್ಟ್ರೀಯ ಮುಖಂಡರ ಒತ್ತಡಕ್ಕೆ ಮಣಿದು ದೇವೇಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ,ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆ ಪರಾಭವಗೊಂಡಾಗ ಲೋಕಸಭೆಯಲ್ಲಿ ರಾಜ್ಯದ ಶಕ್ತಿಯೇ ಕುಂದಿತ್ತು. ರಾಜ್ಯದ ಪರ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ನಾಯಕರ ಸೋಲು ಇಡೀ ರಾಜ್ಯದ ಸೋಲು ಅಂತಾ ಹಲವಾರು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದ್ರೆ, ಇದೀಗ ಇಬ್ಬರೂ ನಾಯಕರು ರಾಜ್ಯಸಭೆ ಪ್ರವೇಶಿಸುತ್ತಿರುವುದು ಮತ್ತೆ ರಾಜ್ಯದ ಜನರಲ್ಲಿ ಅಶಾಕಿರಣ ಮೂಡಿಸಿದೆ.

ಮಾಜಿ ಪ್ರಧಾನಿ ದೇವೇಗೌಡರು 1996ರಲ್ಲಿ ಪ್ರಧಾನಿಯಾದಾಗ 2 ವರ್ಷ ರಾಜ್ಯಸಭಾ ಸದಸ್ಯರಾಗಿದ್ದರು. ಅದನ್ನು ಬಿಟ್ಟರೆ ಎಂದೂ ಕೂಡ ಸಂಸತ್ ಹಾಗೂ ವಿಧಾನ ಸಭೆಯ ಮೇಲ್ಮನೆಗೆ ಹೋದವರಲ್ಲ. ಆದ್ರೆ, ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರಿಯ ಮುಖಂಡರ ಒತ್ತಡದ ಮೇರೆಗೆ ಹಾಗೂ ಪಕ್ಷದ ಶಾಸಕರ ಒತ್ತಡದ ಹಿನ್ನೆಲೆಯಲ್ಲಿ ದೇವೇಗೌಡರು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ. ನಾಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಜೆಡುಎಸ್ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ದೇವೇಗೌಡರು ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಳಿಕ ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ದೇರಿದಂತೆ ಪಕ್ಷದ ಹಿರಿಯ ಮುಖಂಡರೊಂದಿಗೆ ತೆರಳಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನನ್ನನ್ನು ಆಯ್ಕೆ ಮಾಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹೈಕಮಾಂಡ್ ನನ್ನ ಮೇಲೆ ಇಟ್ಟಿರೋ ನಂಬಿಕೆ ಉಳಿಸಿಕೊಳ್ತೇನೆ. ಜನರ ಪರ ಧ್ವನಿ ಎತ್ತುತ್ತೇನೆ ಅಂತಾ ತಿಳಿಸಿದ್ರು.

ಇನ್ನೂ ಬಿಜೆಪಿಯೂ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಯಣ್ಣ ಬ್ರಿಗೇಡ್ ಮೂಲದ ಅಶೋಕ್ ಗಸ್ತಿ, ಪ್ರಹ್ಲಾದ್ ಜೋಷಿ ಆಪ್ತ ಈರಣ್ಣ ಕಡಾಡಿಗೆ ಟಿಕೆಟ್ ಫೈನಲ್ ಆಗಿದೆ. ಒಟ್ಟಾರೆಯಾಗಿ ಮೂರು ಪಕ್ಷದಲ್ಲಿ ಮತಗಳ ಲೆಕ್ಕಾಚಾರದ ಮೇಲೆ ತಮ್ಮ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿವೆ.