ಸರ್ಕಾರದ ಅನುಮತಿ ನಂತರ ಪದಗ್ರಹಣ ‘ಪ್ರತಿಜ್ಞಾ’ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್

ಬೆಂಗಳೂರು:ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿಯಲ್ಲಿ ಜೂನ್ 8 ನೇ ತಾರೀಖಿನವರೆಗೂ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರ ಪದಗ್ರಹಣ ‘ಪ್ರತಿಜ್ಞಾ’ ಕಾರ್ಯಕ್ರಮ ನಡೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಡಿ.ಕೆ. ಶಿವಕುಮಾರ್, ಇದೇ ತಿಂಗಳು 7ರಂದು ನಡೆಸಲು ಉದ್ದೇಶಿಸಲಾಗಿದ್ದ ಪದಗ್ರಹಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು. ಈ ಅವರು ಹೇಳಿದ್ದಿಷ್ಟು:

ನನಗೆ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ನೀಡಿದ ಘಳಿಗೆಯಿಂದಲೇ ನಾನು ನನ್ನ ಕೆಲಸ ಆರಂಭಿಸಿದ್ದೇನೆ. ನಂತರ ಕೊರೋನಾ ಸೋಂಕು ಎದುರಾಗಿದ್ದು, ಎಲ್ಲ ಹಿರಿಯ ನಾಯಕರ ಸಹಕಾರದೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ನೀಡಿ ನನ್ನ ಕೆಲಸ ಮುಂದುವರೆಸಿದ್ದೇನೆ.

ಕೋವಿಡ್ ಸಮಯದಲ್ಲಿ ಯಾವುದೇ ರಾಜಕೀಯ ಸಮಾರಂಭ ನಡೆಸಬಾರದು ಎಂದು ಸರ್ಕಾರ ಆದೇಶ ನೀಡಿದೆ. ಕಳೆದ ಎರಡೂವರೆ ತಿಂಗಳಿಂದ ನಮ್ಮ ಹೋರಾಟ ನಡೆಯುತ್ತಿದ್ದು, ಮಾನವ ಸೇವೆಗಾಗಿ, ಮಾನವೀಯತೆಯಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಸರ್ಕಾರ ವಿಫಲವಾದಾಗ ಪ್ರತಿಪಕ್ಷವಾಗಿ ಎಲ್ಲ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ.

ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುವುದು ಒಂದು ಪದ್ಧತಿ. ನಮ್ಮ ಎಲ್ಲ ನಾಯಕರ ಜತೆ ಸೇರಿ ಸರಳ ಹಾಗೂ ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಅದೇನೆಂದರೆ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ 150 ಮಂದಿ ಸೇರಿ ಕಾರ್ಯಕ್ರಮ ಮಾಡುತ್ತೇವೆ. ಉಳಿದಂತೆ ಎಲ್ಲ ಪಂಚಾಯ್ತಿಗಳಲ್ಲಿ, ವಾರ್ಡ್ ಗಳಲ್ಲಿ ಸೇರಿ ಸುಮಾರು 7800 ಕಡೆಗಳಲ್ಲಿ ಏಕಕಾಲದಲ್ಲಿ “ವಂದೇ ಮಾತರಂ” ದೇಶಭಕ್ತಿ ಗೀತೆಯಿಂದ ಪ್ರಾರಂಭ ಮಾಡಿ ಸಂವಿಧಾನದ ಪೀಠಿಕೆ ವಾಚನದೊಂದುಮಿಗೆ ಪ್ರತಿಜ್ಞೆ ತೆಗೆದುಕೊಳ್ಳಲಾಗುವುದು.

ಸಾಮಾಜಿಕ ಅಂತರ ಕಾಯ್ದುಕೊಂಡು ದೇಶದ ಹಾಗೂ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಿ ಟಿವಿಯಲ್ಲಿ ನೇರ ಪ್ರಸಾರ ಮಾಡಿಸಲಾಗುವುದು. ಎಲ್ಲ ಕಡೆಯೂ ಕಾರ್ಯಕ್ರಮಗಳನ್ನು ಜೂಮ್ ಮೂಲಕ ನೇರ ಪ್ರಸಾರ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ಲಕ್ಷಂತರ ಜನರನ್ನು ಸೇರಿಸಿ, ಟ್ರಾಫಿಕ್ ಮತ್ತಿತರ ಸಮಸ್ಯೆ ಸೃಷ್ಟಿಸುವುದನ್ನು ತಡೆಯಲು ಹಾಗೂ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳು 7ರಂದು ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿಗಳು, ಪೊಲೀಸ್ ಆಯುಕ್ತರಿಗೆ ಅನುಮತಿ ಕೇಳಿ, ಮನವಿ ಮಾಡಿದ್ದೆವು. ಆದರೆ ಈಗ ಹೊಸ ಮಾರ್ಗಸೂಚಿ ಹೊರಬಿದ್ದಿದೆ‌. ಇದರ ಹಿಂದೆ ರಾಜಕೀಯ ಹುನ್ನಾರವಿದೆ.

*’ಪ್ರತಿಜ್ಞಾ’ ಕಾರ್ಯಕ್ರಮ*

ಈ ಕಾರ್ಯಕ್ರಮಕ್ಕೆ ನಾವು “ಪ್ರತಿಜ್ಞಾ” ಎಂದು ಹೆಸರಿಟ್ಟಿದ್ದೇವೆ. ಸರ್ಕಾರ ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ನಾನು ನಿಮಗೆ ಹೊಸ ದಿನಾಂಕ ತಿಳಿಸುತ್ತೇನೆ. ಹೀಗಾಗಿ ನಾನು ದಿನಾಂಕದ ವಿಚಾರದಲ್ಲಿ ಈವರೆಗೂ ಎಲ್ಲಿಯೂ ಘೋಷಣೆ ಮಾಡಿರಲಿಲ್ಲ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೂತನ ಮಾರ್ಗಸೂಚಿಯಲ್ಲಿ 8ನೇ ತಾರೀಕಿನವರೆಗೂ ರಾಜಕೀಯ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದ್ದು, ಆಮೂಲಕ 7ರಂದು ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಕೇವಲ 150 ಜನ ಸೇರಲು ಅವರು ಅವಕಾಶ ನೀಡುತ್ತಿಲ್ಲ.

ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದೀರಿ. ಕಾರ್ಯಕ್ರಮ ದಿನಾಂಕ ಬದಲಾಗಬಹುದು ಆದರೆ ಕಾರ್ಯಕ್ರಮ ರದ್ದಾಗುವುದಿಲ್ಲ. ನೀವು ನಿಮ್ಮ ಸಿದ್ಧತೆ ಮುಂದುವರಿಸಿಕೊಳ್ಳಿ. ಸರ್ಕಾರದ ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದರೆ ಶಾಸನ ರೂಪಿಸುವ ನಾವೇ ಕಾನೂನು ಮುರಿದಂತಾಗುತ್ತದೆ. ಜತೆಗೆ ನಿಮಗೆ ಸ್ಥಳೀಯವಾಗಿ ಅಧಿಕಾರಿಗಳು ತೊಂದರೆ ನೀಡಲಿದ್ದಾರೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರವೇ ಈ ಕಾರ್ಯಕ್ರಮ ನಡೆಸಲಾಗುವುದು. ಹೀಗಾಗಿ 7ರಂದು ಈ ಕಾರ್ಯಕ್ರಮ ಇರುವುದಿಲ್ಲ. ಸರ್ಕಾರದ ಅನುಮತಿಗಾಗಿ ಕಾಯೋಣ.

*ಮನೆಯಲ್ಲೂ ಕೂತು ಕಾರ್ಯಕ್ರಮದಲ್ಲಿ ಭಾಗವಹಿಸಿ*

ಮನೆಯಲ್ಲೇ ಕೂತು ಜನರು, ಕಾಂಗ್ರೆಸ್ ಅಭಿಮಾನಿಗಳು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಮಿಸ್ ಕಾಲ್ (7676366666) ನೀಡುವ ಅವಕಾಶ ಕಲ್ಪಸಿದ್ದು, ಈ ಸಂಖ್ಯೆಗೆ ಮಿಸ್ ಕಾಲ್ ಕೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

*ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ?*

ಸಾರ್ವಜನಿಕ ಹಕ್ಕುಪತ್ರ ಸಮಿತಿ ಕಾರ್ಯಕ್ಕೆ ಅಡ್ಡಿಪಡಿಸಿದ ವಿಧಾನಸಭೆ ಸ್ಪೀಕರ್ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾವುದೇ ಅವ್ಯವಹಾರ ಆರೋಪ ಬಂದರೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆ ಬಗ್ಗೆ ಪರಿಶೀಲನೆ ನಡೆಸುವ ಹಕ್ಕಿದೆ. ಈ ವಿಚಾರದಲ್ಲಿ ಸ್ಪೀಕರ್ ಅವರು ಹಸ್ತಕ್ಷೇಪ ಮಾಡಿದ್ದೇಕೆಂಬುದೇ ಗೊತ್ತಾಗುತ್ತಿಲ್ಲ. ಸರ್ಕಾರ ಪಾರದರ್ಶಕವಾಗಿರಬೇಕು. ಈಗ ಆರ್ಟಿಐ ಮೂಲಕ ಮಾಹಿತಿ ಸಿಗುವಾಗ ಸ್ಪೀಕರ್ ಅವರು ಪರಿಶೀಲನೆಗೆ ಅಡ್ಡಿ ಪಡಿಸಿದ್ದೇಕೆ? ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ? ಈ ಸರ್ಕಾರದಲ್ಲೇ ಸಚಿವರು ಅಧಿಕಾರಿಗಳ ವಿರುದ್ಧ ದೂರಿರುವುದನ್ನು ನಾವು ನೋಡಿದ್ದೇವೆ. ಮುಖ್ಯಮಂತ್ರಿಗಳಿಗೂ ಅನೇಕ ದೂರುಗಳು ಹೋಗಿವೆ. ಅವರೇ ಅಧಿಕಾರಿಗಳ ಬದಲಾವಣೆ ಮಾಡಿರುವುದನ್ನು ನೋಡಿದ್ದೇವೆ.

ಈ ಸಮಿತಿ ಸರ್ಕಾರಕ್ಕೆ ಸಹಾಯ ಮಾಡಲು ಇದೆಯೇ ಹೊರತು ತೊಂದರೆ ನೀಡಲು ಅಲ್ಲ. ಸರ್ಕಾರದ ಅನುಮತಿ ಮೇಲೆ ಸ್ಪೀಕರ್ ಅವರೇ ರಚಿಸಿರುವ ಸಮಿತಿ ಇದು. ಈ ವಿಚಾರದಲ್ಲಿ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ವಿಚಾರವಾಗಿ ಶಾಸಕಾಂಗ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಗೈರಾದ ಅಧಿಕಾರಿಗಳನ್ನು ಅಮಾನತುಗೊಳಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ

ತುಮಕೂರು,ಜೂ.1:ಕೃಷಿ ವಿಜ್ಞಾನ ಕೇಂದ್ರದಲ್ಲಿ ಗೈರಾದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.

ಸಚಿವರು ಇಂದು ತುಮಕೂರು ಜಿಲ್ಲೆಯ ಪ್ರವಾಸದ ಸಂದರ್ಭದಲ್ಲಿ ತಿಪಟೂರಿನಿಂದ ದೊಡ್ಡ ಮೇಟಿ ಕುರ್ಕೆಗೆ ಹೋಗುವ ಮಾರ್ಗ ಮಧ್ಯದಲ್ಲಿರುವ ಬಿದರೆಗುಡಿ ಕವಲುನ ಐಸಿಎಆರ್ ಪ್ರಾಯೋಜಿತ ಕೃಷಿ ವಿಜ್ಞಾನ ಕೇಂದ್ರಕ್ಕೆ ಆಕಸ್ಮಿಕ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ವಿಜ್ಞಾನ ಕೇಂದ್ರದ ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ಪುಸ್ತಕ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ ದಾಖಲೆಗಳು ಅಸ್ಪಷ್ಟವಾಗಿದ್ದು ಮತ್ತು ಅಧಿಕಾರಿಗಳು ಗೈರು ಹಾಜರಾಗಿದ್ದು ಕಂಡುಬಂದಿತು. ಈ ಬಗ್ಗೆ ಕೇಂದ್ರದಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಹಾಗೂ ಕೇಂದ್ರದ ಮುಖ್ಯಸ್ಥ ಗೋವಿಂದೇಗೌಡ ರವರ ಬಗ್ಗೆ ವಿಚಾರಿಸಿದಾಗ ಮುಖ್ಯಸ್ಥರು ಬೆಂಗಳೂರಿಗೆ ಹೋಗಿರುವುದಾಗಿ ತಿಳಿಸಿದರು.

ಇವರ ಉತ್ತರ ಸಮರ್ಪಕವೆನಿಸದೆ ಇದ್ದಾಗ ಸಚಿವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಹಾಗೂ ನ್ಯಾಷನಲ್ ಸೀಡ್ಸ್ ಪ್ರಾಜೆಕ್ಟ್ ಮುಖ್ಯಸ್ಥರೊಂದಿಗೆ ದೂರವಾಣಿಯಲ್ಲಿ ವಿಚಾರಿಸಿದಾಗ, ವಿಜ್ಞಾನ ಕೇಂದ್ರದ ಮುಖ್ಯಸ್ಥರು ಬರದೇ ಗೈರಾಗಿರುವ ಬಗ್ಗೆ ಮಾಹಿತಿ ಲಭ್ಯವಾಯಿತು.ಈ ಬಗ್ಗೆ ಕೃಷಿ ಸಚಿವರು ಬೆಂಗಳೂರಿನ ಕುಲಪತಿಗಳೊಂದಿಗೆ ಚರ್ಚಿಸಿ ಕೂಡಲೇ ತಪ್ಪಿತಸ್ಥರು ಹಾಗೂ ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಪದೇಪದೇ ಸಮರ್ಪಕ ಕಾರಣವಿಲ್ಲದೇ ಗೈರಾಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ಖಡಕ್ ಸೂಚನೆ ನೀಡಿದರು.

ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರಜತ ಮಹೋತ್ಸವ ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಬೆಂಗಳೂರು – ಜೂನ್ 1, 2020: ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇಂದು ರಜತ ಮಹೋತ್ಸವವನ್ನು ಆಚರಿಸುತ್ತಿದ್ದು ಕಾರ್ಯಕ್ರಮವನ್ನು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ಈ ಸಂಸ್ಥೆಯ ಧನ್ವಂತರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸದ ತೇಜಸ್ವಿ ಸೂರ್ಯ, ಜಯನಗರ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

*ಕೊರೋನ ವಿರುದ್ಧ ಕರ್ನಾಟಕದ ಕ್ರಮಗಳನ್ನು ಮೆಚ್ಚಿದ ನರೇಂದ್ರ ಮೋದಿ*

ಕೊರೋನ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ದಿಟ್ಟ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿಯವರು ಆರೋಗ್ಯ ರಂಗದಲ್ಲಿ ಹೆಚ್ಚು ಆವಿಷ್ಕಾರಗಳನ್ನು ನಡೆಸುವಂತೆ ಕರೆ ನೀಡಿದರು ಇದೇ ಸಂದರ್ಭದಲ್ಲಿ ಹ್ಯಾಕಥಾನ್ ಚಾಲೆಂಜ್ ಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿಯವರು ಸಂಸ್ಥೆಯ ಎಲ್ಲಾ ವೈದ್ಯಕೀಯ ಮತ್ತು ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು. ದೇಶದಲ್ಲಿ ಕೊರೋನ ಸಂಕಷ್ಟ ಇಲ್ಲವಾಗಿದ್ದರೆ ಖುದ್ದಾಗಿ ತಾವು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರೆಂದು ಮಾನ್ಯ ಪ್ರಧಾನಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆರ್.ಜಿ.ಯು.ಹೆಚ್.ಎಸ್ ಸಂಸ್ಥೆಗೆ ಇದೊಂದು ಐತಿಹಾಸಿಕ ದಿನವಾಗಿದ್ದು, ಪ್ರಧಾನಮಂತ್ರಿಗಳು ಸಮಾರಂಭವನ್ನು ಉದ್ಘಾಟಿಸಿರುವುದು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಸ್ಥೆಯು ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡುವಂತೆ ಪ್ರೇರಣೆ ನೀಡಿದೆ ಎಂದಿದ್ದಾರೆ. ಕೊರೋನ ವಿರುದ್ಧದ ಸಮರದಲ್ಲಿ ನೂತನ ಆವಿಷ್ಕಾರಗಳಿಗೆ ಮುಂದಾಗಿರುವ ಆರ್.ಜಿ.ಯು.ಹೆಚ್.ಎಸ್, ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಐಐಐಟಿ, ಐಐಎಂ, ಜೈವಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯಂತಹ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದೊಂದಿಗೆ ಹ್ಯಾಕಥಾನ್ ಹಮ್ಮಿಕೊಂಡಿದೆ. ರಾಜ್ಯದಲ್ಲಿ 80% ಕೋವಿಡ್ ಸೋಂಕಿತರಿಗೆ ಸೋಂಕಿನ ಲಕ್ಷಣಗಳೇ ಕಂಡುಬಂದಿಲ್ಲದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇಂತಹ ಅಂಶಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಉಪಯೋಗವಾಗುವಂತಹ ಔಷಧಿಗಳ ಆವಿಷ್ಕಾರ ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ. ಟೆಲಿ ಮೆಡಿಸಿನ್ ಅನ್ನು ವ್ಯಾಪಕವಾಗಿ ಬಳಸುವ ನಿಟ್ಟಿನಲ್ಲಿ ಟೆಕ್ ಕಂಪನಿಗಳು ಉತ್ತಮ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕಿದೆ ಎಂದು ಸಚಿವರು ಹೇಳಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಆರ್.ಜಿ.ಯು.ಹೆಚ್.ಎಸ್ ನ ಕೊಡುಗೆಗಳನ್ನು ಶ್ಲಾಘಿಸಿದ ಸಚಿವರು, ಈ ಸಂಸ್ಥೆಯು ಆನ್‍ಲೈನ್ ಕಾರ್ಯಾಗಾರದ ಮೂಲಕ ರಾಜ್ಯದ 1 ಲಕ್ಷ 75 ಸಾವಿರಕ್ಕೂ ಅಧಿಕ ವೈದ್ಯ ವೃತ್ತಿಪರರಿಗೆ ಕೊರೋನ ಚಿಕಿತ್ಸೆಯ ತರಬೇತಿ ನೀಡಿದೆ. ನೂತನ ಆವಿಷ್ಕಾರಗಳನ್ನು ಹಮ್ಮಿಕೊಂಡು ಕೋವಿಡ್ ವಿರುದ್ಧದ ಸಮರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೊರೋನ ಕುರಿತಾದ ಸಾಮಾನ್ಯ ಜನರಲ್ಲಿ ಇರುವ ಭಯವನ್ನು ಹೋಗಾಲಾಡಿಸಬೇಕಿದೆ. ಶಾಶ್ವತವಾಗಿ ಲಾಕ್ ಡೌನ್ ಅನ್ನು ಹೇರಲು ಸಾಧ್ಯವಿಲ್ಲ. ಸಾರ್ವಜನಿಕರು ಮತ್ತು ಸರ್ಕಾರಗಳು ಜೊತೆಯಾಗಿ ಈ ಹೋರಾಟವನ್ನು ಮುಂದುವರೆಸಬೇಕಿದೆ ಎಂದು ಡಾ.ಸುಧಾಕರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ನೀರಿಲ್ಲದೆ ಬತ್ತಿದ  ಬೋರ್ ವೆಲ್: ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ 

ಚಿಕ್ಕಬಳ್ಳಾಪುರ: ಸಾಲ ಮಾಡಿ ಎರಡು ತಿಂಗಳಲ್ಲಿ ಮೂರು ಬೋರ್ ವೆಲ್  ಕೊರೆಸಿದ್ದ ಮೂರು ಬೋರ್ ವೆಲ್ ವಿಫಲವಾದ ಹಿನ್ನೆಲೆ,  ಸಾಲಕ್ಕೆ  ಹೆದರಿ ಅನ್ನದಾತ ತೋಟದಲ್ಲಿ  ವಿಷ  ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯದೊ ಡ್ಡಬಳ್ಳಾಪುರ ತಾಲೂಕಿನ  ಆಚಾರಲಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ರೈತ ಚಂದ್ರಶೇಖರ (41) ಆತ್ಮಹತ್ಯೆಗೆ ಶರಣಾದ ದುರ್ದೈವಿ, ಮೃತ ವ್ಯಕ್ತಿ  ಒಂದೂವರೆ ಎಕರೆ  ಸ್ವಂತ ಜಮೀನು ಮೂರು ಎಕರೆ ಗುತ್ತಿಗೆ  ಜಮೀನಿನಲ್ಲಿ ರೇಷ್ಮೆ,  ಮತ್ತು  ಹೂ ಬೆಳೆಯುತ್ತಿದ್ದರು, ಎರಡು ತಿಂಗಳ ಅಂತರದಲ್ಲಿ ಮೂರು ಬೋರ್ ವೆಲ್ ಕೊರೆಸಿದ್ದರು. ಮೂರು ಬೋರ್ ವೆಲ್  ನಲ್ಲಿ ನೀರು ಬತ್ತಿ ಹೋಗಿತ್ತು, ಬೋರ್‌ವೆಲ್  ಗಾಗಿ 3 ಲಕ್ಷ ಸೇರಿದಂತೆ ಒಟ್ಟು 8 ಲಕ್ಷ ಬ್ಯಾಂಕ್  ಮತ್ತು  ಕೈ ಸಾಲ ಮಾಡಿದ್ದರು. ಬೋರ್‌ವೆಲ್ ಫೇಲ್ ಆದ ಹಿನ್ನೆಲೆ ಸಾಕಷ್ಟು  ನೊಂದಿದ್ದ  ರೈತ ಸಾಲಕ್ಕೆ  ಹೆದರಿ ತನ್ನ  ತೋಟದಲ್ಲಿ  ವಿಷ ಕುಡಿದು ಆತ್ಮ ಹತ್ಯೆಗೆ ಶರಣಾಗಿದ್ದಾನೆ.

ಮೃತ ರೈತ  ಹೆಂಡತಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನ ಅಗಲಿದ್ದಾರೆ. ದೊಡ್ಡಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಲ್ಲಿ  ಪ್ರಕರಣ ನಡೆದಿದೆ.

ಬಂಡಾಯದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ,ಕೋವಿಡ್ ನಿಯಂತ್ರಣದತ್ತ ಮಾತ್ರ ಗಮನ:ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತೀಯ ಚಟುವಟಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಕೋವಿಡ್ ನಿಯಂತ್ರಣ ಕಾರ್ಯ ಚಟುವಟಿಕೆಗಳ ಬಗ್ಗೆಯಷ್ಟೇ ಗಮನಹರಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಕುರಿತು ಪತ್ರಿಕಾಗೋಷ್ಟಿ ನಡೆಸಿದ ಸಿಎಂ ಯಡಿಯೂರಪ್ಪ, ಬಿಜೆಪಿಯಲ್ಲಿನ ಬಂಡಾಯದ ಬಗ್ಗೆ ಒಂದೇ ಒಂದು ಪದವನ್ನೂ ಆಡಲು ನಿರಾಕರಿಸಿದರು.

ಕೇಂದ್ರದ ಸಾಧನೆ ಬಗ್ಗೆ ಸಿಎಂ ಹೇಳಿದ್ದಿಷ್ಟು:

ದ್ವಿತೀಯ ಅವಧಿಯ, ಪ್ರಥಮ ವರ್ಷದ, ಅದ್ವೀತಿಯ ಸಾಧಕ ಸನ್ಮಾನ ಪ್ರಧಾನಿ ನರೇಂದ್ರ ಮೋದಿ ಜೀ ಅವರ ಸಾಧನೆಯ ಬಗ್ಗೆ ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವ ತಮ್ಮೆಲ್ಲರಿಗೂ ನನ್ನ ವೈಯಕ್ತಿಕ ಸ್ವಾಗತ

• ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ವ್ಯಕ್ತಿತ್ವದ ಪ್ರಧಾನಿ ನರೇಂದ್ರ ಮೋದಿ ಜಿ.

ಹಲವು ದಶಕಗಳಿಂದ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತಂದವರು.

ಆಡಳಿತದಲ್ಲಿ ಸುಧಾರಣೆ ತರಲು ಭ್ರಷ್ಟಾಚಾರಕ್ಕೆ ಕಡಿವಾಣ, ಕರ್ತವ್ಯ ನಿಷ್ಠ, ತಂತ್ರಜ್ಞಾನ ಅಳವಡಿಕೆ, ಪಾರದರ್ಶಕತೆ, ದೇಶದ ಸಂರಕ್ಷಣೆಗೆ ಆದ್ಯತೆ ಇವುಗಳನ್ನು ಅಳವಡಿಸಿಕೊಂಡು ಕಾಯಕ ಯೋಗಿಯಾಗಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಜೀ ಅವರು.

ಪ್ರಥಮ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಪಡೆಯುವುದಕ್ಕೆ ಮೊದಲು ಸಂಸತ್ತಿನ ಭವನಕ್ಕೆ ನಮನ ಮಾಡಿ ಸಂವಿಧಾನವನ್ನು ಎತ್ತಿ ಹಿಡಿಯುವ ಸಂಕಲ್ಪ ಮಾಡಿದರು.

ಮೊದಲನೇ ಸಂಸದರ ಸಭೆಯಲ್ಲಿ ಮೋದಿಯವರು ಭಾಷಣ ಮಾಡಿ ಮುಂದಿನ ಚುನಾವಣೆ ನನ್ನ ಸರ್ಕಾರದ ಸಾಧನೆಯ ಆಧಾರದಲ್ಲಿ ನಡೆಯಲಿದೆ ಎಂದು ಘೋಷಿಸಿದರು.

• ಅದರಂತ 5 ವರ್ಷದ ಆಡಳಿತದಲ್ಲಿ ನುಡಿದಂತೆ ನಡೆದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಜನರಿಗೆ ನೀಡಿದವರು ಪ್ರಧಾನಿ ನರೇಂದ್ರ ಮೋದಿ ಜಿ ಯವರು.

5 ವರ್ಷದ ಆಡಳಿತದಲ್ಲಿ ಜನಧನ ಯೋಜನೆ, ಆಯುಷ್ಮಾನ್ ಭಾರತ್, ಜನರಿಕ್ ಔಷಧಿ ಮಳಿಗೆ, ಬೇವು ಮಿಶ್ರಿತ ರಸಗೊಬ್ಬರ ಬಳಕೆ, ಮುದ್ರಾ ಯೋಜನೆ, ಸ್ಟಾರ್ಟ್ ಆಫ್ ಇಂಡಿಯಾ, ಇತ್ಯಾದಿ ಹಲವಾರು ದೇಶದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿದ ಸಾಧನೆಯನ್ನು ದೇಶದ 130 ಕೋ 9 ಜನರ ಮುಂದೆ 2019 ಲೋಕಸಭಾ ಚುನಾವಣೆಯಲ್ಲಿ ಮಂಡಿಸಿ 2ನೇ ಅವಧಿಗೆ ಆಶೀರ್ವಾದ ಕೇಳಿದರು.

ದೇಶದ ಜನತೆ ಮೋದಿಯವರ ಆಡಳಿತದಲ್ಲಿ ಪೂರ್ಣ ವಿಶ್ವಾಸವಿಟ್ಟು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಥಮವಾಗಿ 303 ಸ್ಥಾನಗಳನ್ನು ಎನ್‌ಡಿಎಗೆ 353 ಸ್ಥಾನಗಳನ್ನು ಲೋಕಸಭಾ ಸದಸ್ಯರನ್ನು ನೀಡಿ ಸ್ಥಿರ ಸರ್ಕಾರ ರಚಿಸಲು ಜನತೆ ಮೋದಿಯವರಿಗೆ ಆಶೀರ್ವಾದ ಮಾಡಿದರು,

• ಕರ್ನಾಟಕದಲ್ಲಿ ಸೋಲಿಲ್ಲದ ಸರದಾರ ರಾದ ಮಲ್ಲಿಕಾರ್ಜುನ ಖರ್ಗೆಯವರು, ಕೆ.ಹೆಚ್.ಮುನಿಯಪ್ಪ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಂತಹವರು ಸಹ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಸೋಲನ್ನು ಅನುಭವಿಸಿ, ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ 25 ಸ್ಥಾನಗಳು ಗೆಲುವಾಯಿತು.

ನರೇಂದ್ರ ಮೋದಿ ಜೀ ಯವರು 2ನೇ ಅವಧಿಯ ಪ್ರಥಮದಲ್ಲಿ ದೇಶದ ಸುರಕ್ಷತೆ ಹಲವು ದಶಕಗಳಿಂದ ಉಳಿದಿದ್ದ ಸಮಸ್ಯೆಗಳ ಪರಿಹಾರಕ್ಕೆ ದೃಢ ಸಂಕಲ್ಪದ ಘೋಷಣೆ ಮಾಡಿದರು.ದ್ವಿತೀಯ ಅವಧಿಯ ಆಡಳಿತ ಪ್ರಾರಂಭದಲ್ಲಿಯೇ ಪ್ರಪಂಚದ ನಾಯಕರಲ್ಲಿ ಅಗ್ರಗಣ್ಯ ನಾಯಕರೆಂಬ ಹೆಸರಿಗೆ ಪಾತ್ರರಾದ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವಾಗಿದೆ.

• 2ನೇ ಅವಧಿಗೆ ಪ್ರಾರಂಭದಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆಯ ಅಧ್ಯಾಯವನ್ನು ಪ್ರಾರಂಭಿಸಿದರು. ಇದು ಚರಿತ್ರೆಯಲ್ಲಿ ಸುವರ್ಣ

• ಹಲವಾರು ದಶಕಗಳಿಂದ ದೇಶದ ಜನತೆ ನಿರೀಕ್ಷಣೆ ಮಾಡಿದ್ದ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ನಿಂದ ತೀರ್ಪು ಪಡೆಯುವುದರಲ್ಲಿ ಪ್ರಧಾನಿಯವರು ನಡೆಸಿದ ಕಾನೂನು ಸಮರ, ಸಹನೆ ಹಾಗೂ ಚಾಣಕ್ಯ ತಂತ್ರಗಾರಿಕೆಯನ್ನು ದೇಶದ ಜನತೆಯ ಪ್ರಶಂಸಿದ್ದಾರೆ. ದೇಶದ ಭದ್ರತೆಗಾಗಿ 3 ಸೇನೆಗೆ ಒಬ್ಬರೇ ದಂಡನಾಯಕನನ್ನು ನೇಮಿಸಿದ್ದು ದೇಶದ ರಕ್ಷ ನೀಡಿದ ಕೊಡುಗೆ,

• ಶತಶತಮಾನಗಳಿಂದ ಆಚರಣೆಯಲ್ಲಿದ್ದ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದು ಮಾಡಿದ ಮುಸ್ಲಿಂ ಸಮುದಾಯದಲ್ಲಿನ ಹೀನ ಸಂಪ್ರದಾಯಕ್ಕೆ ಮಂಗಳ ಹಾಡಿದರು. ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆಯನ್ನು ಜಾರಿ ಮಾಡಿ ಉಗ್ರರ ನಿಗ್ರಹಕ್ಕೆ ಮತ್ತು ಅವರ ಬೆಂಬಲಕ್ಕೆ ಇದ್ದ ಸವಲತ್ತುಗಳನ್ನು ನಿಗ್ರಹ ಮಾಡಿದರು.ಸಣ್ಣ ಪುಟ್ಟ ಬ್ಯಾಂಕ್‌ಗಳನ್ನು ಸೇರಿಸಿ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ವಿಲೀನ ಮಾಡುವುದರ ಮೂಲಕ ಬ್ಯಾಂಕ್‌ಗಳ ಸುಧಾರಣೆ ಮತ್ತು ವಸೂಲಾಗದ ಸಾಲಗಳಿಂದ ಬ್ಯಾಂಕುಗಳಿಗೆ ಮುಕ್ತಿ ಹಾಗೂ ಬ್ಯಾಂಕ್‌ಗಳ ಅನಗತ್ಯ ವೆಚ್ಚವನ್ನು ತಗ್ಗಿಸಿದರು.

• ಕಂದಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಮಕ್ಕಳ ದೌರ್ಜನ್ಯ ಕಠಿಣ ಕಾಯ್ದೆ ರೂಪಿಸಿದರು.

• ದೇಶದ ಏಕತೆಗಾಗಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಕಾಶ್ಮೀರದ ಆಡಳಿತವನ್ನು ರಾಷ್ಟ್ರೀಯ ಆಡಳಿತಕ್ಕೆ ಒಳಪಡಿಸಿದ ಸರ್ವತೋಮುಖ ಅಭಿವೃದ್ಧಿಗೆ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡ ಉಕ್ಕಿನ ನಾಯಕರು.ವಿದೇಶದಲ್ಲಿ ನೆಲೆ ಇಲ್ಲದೆ ನಿರಾಶ್ರಿತರಿಗೆ ಆಶ್ರಯ ನೀಡಲು ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮೂಲಕ ಅಭಯ ಹಸ್ತ ಚಾಚಿದ್ದಾರೆ. ದೇಶದ ವಿಭಜನೆ ಸಂದರ್ಭದಲ್ಲಿ ಭಾರತದಿಂದ ಅನಿವಾರ್ಯವಾಗಿ ನೆರೆ ರಾಷ್ಟ್ರಗಳಿಗೆ ವಲಸೆ ಹೋಗಿ ನಿರಾಶ್ರಿತರಾಗಿ ಭಾರತಕ್ಕೆ ಹಿಂದಿರುಗಿದ ಭಾರತೀಯರಿಗೆ ಇದು ಜೀವ ರಕ್ಷಕ ಕಾಯ್ದೆಯಾಗಿದೆ.ವಾಹನ ಅಪಘಾತ ತಗ್ಗಿಸಲು ಹೊಸ ಮೋಟಾರು ಕಾಯ್ದೆ ಜಾರಿ ಮಾಡಿದರು. ದೇಶದಲ್ಲಿ ಸುಮಾರು 5 ಲಕ್ಷ ಅಪಘಾತಗಳಿಂದ ಸುಮಾರು 1.5 ಲಕ್ಷ ಪ್ರಾಣ ಕಳೆದುಕೊಳ್ಳುತ್ತಿರುವ ವಾಹನ ಚಾಲಕರ ಕುಟುಂಬಕ್ಕೆ ರಕ್ಷಣೆ ಕಾಯ್ದೆ ಯಾಗಿದೆ.

• ಈ ಕಾಯ್ದೆಗಳು ಜೊತೆಗೆ ರೈತರ ಮತ್ತು ಸಾಮಾನ್ಯ ಜನರ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.ಅವುಗಳಲ್ಲಿ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ 3 ಕಂತುಗಳಲ್ಲಿ ರೈತರಿಗೆ ರೂ. 6000 ಸಹಾಯಧನ, ಅಟಲ್ ಭೂ ಜಲ ಯೋಜನೆ, ಜಲ ಸಂರಕ್ಷಣೆ, ಜಲ ಜೀವನ ಮಿಷನ್ ಯೋಜನೆ ಜಾರಿ ಮಾಡಿದರು.ರೈತರಿಗೆ ಕಾರ್ಮಿಕರಿಗೆ, ಸಣ್ಣ ಬೀದಿ ವ್ಯಾಪಾರಿಗಳಿಗೆ, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಪಿಂಚಣಿ ಯೋಜನೆ ಜಾರಿ ಮಾಡಿದ್ದಾರೆ.

• ದೇಶವನ್ನು ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಮುಕ್ತಗೊಳಿಸಲು ಕಾರ್ಯಕ್ರಮಗಳನ್ನು ನೀಡಿದ್ದಾರೆ.ದೇಶದ ಆರ್ಥಿಕತೆಯ ಭದ್ರತೆಗೆ ಆರ್ಥಿಕ ಪುನರುಜ್ಜೀವನಕ್ಕೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆ ಸೃಷ್ಟಿಸಲು ಕಾರ್ಪೊರೇಟ್ ತೆರಿಗೆಯಲ್ಲಿ ಭಾರಿ ತೆರಿಗೆ

• ವಲಸಿಗ ಕಾರ್ಮಿಕರ ಅನುಕೂಲಕ್ಕಾಗಿ ಅಂತರರಾಜ್ಯ ಪಡಿತರ ರ್ಚೀಣ ಪೂರ್ಣ ಆವರಣ ಜಾಲಿ ಮಾಡಿ 1 ದೇಶ 1 ರೇಷನ್ ಕಾರ್ಡ್ ಜಾರಿ ಮಾಡಿದೆ.ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಮೊದಲನೇ ವರ್ಷದಲ್ಲಿ ನೀಡಿದ ಕೊಡುಗೆ

• ಕೇಂದ್ರೀಯ ಅನುದಾನ ಮತ್ತು ಕೇಂದ್ರದಿಂದ ಬಂದ ಇತರ ವರ್ಗಾವಣೆ ಮೊತ್ತ ರೂ.17,249 ಕೋಟಿ.

• ಪ್ರಾಯೋಜಿತ ಯೋಜನೆಗಳಿಗೆ ಅನುದಾನ ರೂ.10,079 ಕೋಟಿ,

• ಪ್ರವಾಹ ಪರಿಹಾರಕ್ಕೆ ನೆರವು ರೂ.1,869 ಕೋಟಿ.

• ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು 4912445 ಜನರು

• ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ.

• ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ.

ಬೆಂಗಳೂರಿನಲ್ಲಿ 148 ಕಿ.ಮೀ ಉದ್ದದ ಉಪನಗರ ರೈಲು ಯೋಜನೆಗೆ ರೂ.18600 ಕೊಣ.

• ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ನೆರವು.

• ಬೆಳಗಾವಿ-ಧಾರವಾಡ, ಮೈಸೂರು-ಕುಶಾಲನಗರ, ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಅನುದಾನ

• ಕೋಲಾರದಲ್ಲಿ ರೈಲ್ವೆ ವರ್ಕ್‌ಶಾಪ್‌ಗಾಗಿ ರೂ.485 ಕೋಟಿ ನೆರವು.

• 2022

ರಲ್ಲಿ ಕರ್ನಾಟಕದಲ್ಲಿ ಎಲ್ಲಾ ರೈಲ್ವೆ ಮಾರ್ಗ ಡಬ್ಲಿಂಗ್ ಹಾಗೂ ವಿದ್ಯುದೀಕರಣ.

ಕೊವಿಡ್-19 ಕೊರೊನಾ ವೈರಸ್ ಪ್ರಪಂಚದ ಮನುಕುಲವನ್ನು ನಡುಗಿಸಿದ ಭಯಂಕರ ಮಹಾಮಾರಿ, ಪ್ರಪಂಚದ ಬಲಿಷ್ಠ ರಾಷ್ಟ್ರಗಳು ಸಹ ಈ ಮಹಾಮಾರಿಯಿಂದ ಆಘಾತಕ್ಕೆ ಈಡಾಗಿವೆ.ಆದರೆ, ನಮ್ಮ ಪ್ರಧಾನಿ ಮೋದಿಯವರು ಸಕಾಲದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮವಾಗಿ ದೇಶದ ಜನತೆಯನ್ನು ಮಹಾಮಾರಿಯಿಂದ ಸಾಕಷ್ಟು ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

• ವಿಶ್ವ ಸಂಸ್ಥೆಯು ಸೇರಿದಂತೆ ಪ್ರಪಂಚದ ಎಲ್ಲಾ ರಾಷ್ಟ್ರಗಳು ಕೋವಿಡ್-19 ಕೊರೊನಾ ವೈರಸ್ ವಿಷಯದಲ್ಲಿ ತೆಗೆದುಕೊಂಡು ಕಾರ್ಯಕ್ಷಮತೆಯನ್ನು ಪ್ರಶಂಸಿಸಿದ್ದಾರೆ.

ಪ್ರಪಂಚದಲ್ಲೇ 2ನೇ ಅತೀ ಹೆಚ್ಚು ಜನಸಂಖ್ಯೆ ಇರುವ ಭಾರತ ದೇಶದ ಜೀವ ಮತ್ತು ಜೀವನವನ್ನು ಸಂರಕ್ಷಣೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.

• ದೇಶದ ಜನತೆ ಕೂಬಿಡ್-19 ಕೊರೊನಾ ವೈರಸ್‌ನಿಂದ ಸಿಲುಕಿ ಸಂಕಷ್ಟದಲ್ಲಿದ್ದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ್ ಭಾರತ್ | ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ರೂ. 20.00 ಲಕ್ಷ ಕೋಶ ಪ್ಯಾಕೇಜ್ ಅನ್ನು ನೀಡಿ ದೇಶದ ಜನತೆಯ ಕಷ್ಟಕ್ಕೆ ನೆರವಾಗಿದ್ದಾರೆ.

ಇದರಿಂದ ಸುಮಾರು 5.94 ಕೋವಿ ಜನರಿಗೆ ಉದ್ಯೋಗ ಸೃಷ್ಟಿ, ಅತೀ ಸಣ್ಣ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯೋಗಿಗಳಿಗೆ, ಲಿಯಲ್ ಎಸ್ಟೇಟ್ ವಲಯದ, ವಿದ್ಯುತ್ ವಲಯ, ರೈತರು, ಗ್ರಾಮೀಣ ಆರ್ಥಿಕತೆ ಬಲವರ್ಧನೆ, ವಲಸೆ ಕಾರ್ಮಿಕರು, ನಗರದ ಬಡವರು ಹಾಗೂ ಇತರ ಕ್ಷೇತ್ರಗಳ ಆರ್ಥಿಕ ಚಟುವಟಿಕೆಗೆ ಸಹಾಯವಾಗಲಿದೆ.

ಕರ್ನಾಟಕಕ್ಕೆ ಸಂಕಷ್ಟ ಕಾಲದಲ್ಲಿ ಬಡವರ ಹಸಿವು ನೀಗಿಸಲು ಆಹಾರ ವಿತರಣೆಗೆ 8 ಲಕ್ಷ ಟನ್ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ರೂ.2,351 ಕೋಟಿ ನೆರವನ್ನು ನೀಡಿದ್ದಾರೆ.

ಕರ್ನಾಟಕದಲ್ಲಿ ನಮ್ಮ ಸರ್ಕಾರ ಕೊಬಡ್-19 ಕೂರುವ ವೈರಸ್ ಮಹಾಮಾರಿಯ ಸಂಕಷ್ಟದಲ್ಲಿರುವ ಜನರಿಗೆ ರೂ.1,610 ಕೋಟಿ ಮತ್ತು ರೂ.662 ಕೊಟಿ ಪ್ಯಾಕೇಜನ್ನು ಶ್ರಮಿಕ ಸಮುದಾಯ, ರೈತರು ಮತ್ತು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಪುನರುಜ್ಜೀವನಕ್ಕೆ‌ ನೀಡಿದೆ.

ಕೆಲಸ ಕಿತ್ಕೊಂಡು ಕಳ್ಳತನದ ದಾರಿ ತೋರಿದ ಕೊರೋನಾ!

ಕೊಡಗು: ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಕೆಲಸ ಇಲ್ಲದೆ ಖಾಲಿ ಕೈಯಲ್ಲಿದ್ದ ಇಬ್ಬರು ಇದೀಗ ಸುಲಭವಾಗಿ ಹಣ ಗಳಿಸೋಕೆ ಕಳ್ಳತನದ ದಾರಿ ಹಿಡಿದುದು, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಕೊರೋನಾ ದುಡಿಯುವ ಕೈಗಳಿಂದ ಕೆಲಸ ಕೊತ್ಕೊಂಡು ಬೇಡಿ ಹಾಕಿದೆ. ವಿರಾಜಪೇಟೆ ತಾಲೂಕಿನ ಕಡಂಗ ಗ್ರಾಮದ ಮಹೇಶ, ಭರತ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದರು. ಇದೀಗ ಲಾಕ್ ಡೌನ್ ನಿಂದ ಇವರ ಕೆಲಸಕ್ಕೂ ಕುತ್ತು ಬಂದಿದೆ. ಹೇಗಾದ್ರೂ ದುಡ್ಡು ಮಾಡಬೇಕು ಅಂತಾ ನಿರ್ಧರಿಸಿದ್ದ ಇಬ್ಬರೂ,ಮೇ.19ರಂದಿ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಯುವಕಪಾಡಿ ಗ್ರಾಮದ ಮಾಚವ್ವ ಮನೆಯಲ್ಲಿ ಬೀಗ ಹೊಡೆದು ಒಂದು ಲಕ್ಷದ ತೊಂಬತ್ತ ನಾಲ್ಕು ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಆದ್ರೆ ಕೇಸ್ ದಾಖಲಾದ ಮೂರೇ ದಿನಕ್ಕೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಲಾಕ್ ಡೌನ್ ನಿಂದ ಕೆಲಸ ಇಲ್ಲದೆ ಮನೆಯಲ್ಲಿ ಖಾಲಿ ಕೈಯಲ್ಲಿ ಕುಳಿತಿದ್ದ ಇಬ್ಬರು ಸುಲಭವಾಗಿ ಹಣ ಮಾಡೋಕೆ ಮುಂದಾಗಿದ್ದಾರೆ. ಮಾಚವ್ವ ಕಾಫಿ ತೋಟ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕೆಲಸ ಮಾಡ್ಕೊಂಡಿದ್ದ ಇವ್ರಿಗೆ ನಿರುದ್ಯೋಗ ಸಮಸ್ಯೆ ಕಾಡ್ತಾ ಇತ್ತು. ಜೊತೆ ಕೈಯಲ್ಲಿ ಕಾಸಿಲ್ಲದೆ ಖಾಲಿಯಾಗಿದ್ರು. ಮನೆ ಮಾಲೀಕರಾದ ಮಾಚವ್ವ ಲಾಕ್ ಡೌನ್ ಸಡಿಲ ಆದ್ಮೇಲೆ ಮಗನ ಮನೆಗೆ ಹೋಗಿದ್ರು. ಮೇ.19 ರಂದು ಹೋದ ಮಾಲೀಕರು ಮೇ. 26 ರಂದು ವಾಪಸ್ ಬಂದು ನೋಡುವಷ್ಟರಲ್ಲಿ ಶಾಕ್ ಕಾದಿತ್ತು. ಮನೆಯಲ್ಲಿದ್ದ 1 ಲಕ್ಷದ 94 ಸಾವಿರ ಮೌಲ್ಯದ ಚಿನ್ನಾಭರಣ ದೋಚಿರೋದು ಬೆಳಕಿಗೆ ಬಂದಿತ್ತು.. ಇದು ಮಾಲೀಕರಿಗೂ ಕೂಡ ಶಾಕ್ ಆಗಿ, ಬಳಿಕ ನಾಪೋಕ್ಲು ಠಾಣೆಗೆ ದೂರು ನೀಡಿದ್ರು..

ಈ ಪ್ರಕರಣದ ಬಳಿಕ ಕೊಡಗು ಜಿಲ್ಲೆ ಪೊಲೀಸರು ಸಾರ್ವಕನಿಕರಿಗೆ ಮನವಿಯೊಂದನ್ನ ಮಾಡಿದ್ದಾರೆ.. ಜನರು ಕೆಲಸ ಕಳೆದುಕೊಂಡು ಖಾಲಿ‌ ಕೈಯಲ್ಲಿ ಕುಳಿತಿದ್ದಾರೆ. ಇಂಥಹ ವೇಳೆಯೇ ಕಳ್ಳತನ ಪ್ರಕರಣಗಳು ಹೆಚ್ಚುತ್ತವೆ. ನಿರುದ್ಯೋಗ ಕಳ್ಳತನಕ್ಕೆ ಪ್ರೇರಣೆ ನೀಡ್ತಿರೋದು ಆತಂಕ. ಹೀಗಾಗಿಯೇ ಜನ ಈ ಟೈಂ ನಲ್ಲಿ ಎಚ್ಚರದಿಂದ ಇರಬೇಕು. ನೀವು ಮನೆ ಬಿಟ್ಟು ಹೋಗೋ ವೇಳೆ ಪೊಲೀಸ್ರ ಗಮನಕ್ಕೆ ತರಬೇಕು ಅಂತಾ ಮನವಿ ಮಾಡಿದ್ದಾರೆ.