ರೈತ ಮಹಿಳೆಗೆ ಸಚಿವ ಮಾಧುಸ್ವಾಮಿ ಅವಾಜ್: ರಾಸ್ಕಲ್ ನಾನು ಕೆಟ್ಟ ಮನುಷ್ಯ ಇದೀನಿ ಎಂದ ಸಚಿವರು

ಬೆಂಗಳೂರು: ನಾನು ತುಂಬಾ ಕೆಟ್ಟ ಮನುಷ್ಯ ಇದ್ದೀನಿ. ರಾಸ್ಕಲ್, ಬಾಯಿ ಮುಚ್ಚಿಕೊಂಡು ಹೋಗು ಅಂತಾ ಕೋಲಾರದಲ್ಲಿ ರೈತ ಹೋರಾಟಗಾರ್ತಿಗೆ ಸಚಿವ ಮಾಧುಸ್ವಾಮಿ ಆವಾಜ್ ಹಾಕಿದ ಘಟನೆ ನಡೆದಿದೆ.

ಕೋಲಾರದ ಕೆಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳ ವೀಕ್ಷಣೆಯನ್ನ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಮಾಡಿದ್ರು. ಕೋಲಾರ ತಾಲೂಕಿನ ಎಸ್.ಆಗ್ರಹಾರ ಕೆರೆಯ ವೀಕ್ಷಣೆ ವೇಳೆ ಸಚಿವ ಮಾಧುಸ್ವಾಮಿ ಅವ್ರಿಗೆ ಕೋಲಾರ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ ಅವ್ರು ಕೆರೆ ಒತ್ತುವರಿ, ಚೆಕ್ ಡ್ಯಾಂಗಳ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ರು. ಈ ವೇಳೆ ಸಚಿವ ಮಾಧುಸ್ವಾಮಿ ಅವ್ರು, ಕೆರೆ ಒತ್ತುವರಿ ತೆರವು ನೀನೇ ಮಾಡು ಅಂತಾ ಹೇಳಿದ್ರು. ನಾವು ತೆರವು ಮಾಡುವುದಾದರೆ ಇಲಾಖೆ ಯಾಕೆ ಬೇಕು ಸರ್ ಅಂತಾ ನಳಿನಿ ಪ್ರಶ್ನೆ ಮಾಡಿದ್ರು. ಇದ್ರಿಂದ ಸಿಟ್ಟಾದ ಸಚಿವ ಮಾಧುಸ್ವಾಮಿ ಅವ್ರು, ನಾನು ತುಂಬಾ ಕೆಟ್ಟ ಮನುಷ್ಯ ಇದ್ದೀನಿ, ರಾಸ್ಕಲ್ ಬಾಯಿ ಮುಚ್ಚಿಕೊಂಡು ಹೋಗು ಅಂತಾ ಆವಾಜ್ ಹಾಕಿದ್ರು. ಈ ವೇಳೆ ಸಚಿವರು ಹಾಗೂ ನಳಿನಿ ನಡುವೆ ವಾಗ್ವಾದ ನಡೆಯಿತು.

ಕೂಡಲೇ ಪೊಲೀಸ್ರು ಮಧ್ಯೆ ಪ್ರವೇಶಿಸಿ ನಳಿನಿ ಅವ್ರನ್ನ ಅಲ್ಲಿಂದ ಹೊರಹಾಕಿದ್ರು. ನಂತ್ರ ಸಚಿವ ಮಾಧುಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಸಿ ವ್ಯಾಲಿಯ ನೀರನ್ನ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ರೈತರು ನೀರನ್ನ ಕದಿಯಬಾರದು ಅಂತ ಮನವಿ ಮಾಡಿದ್ರು. ನೀರು ಸರಾಗಾವಾಗಿ ಹರಿಯಲು ಚೆಕ್ ಡ್ಯಾಂಗಳ ಎತ್ತರವನ್ನು ಕಡಿತ ಮಾಡಲಾಗುತ್ತಿದೆ ಅಂತಾನೂ ಹೇಳಿದ್ರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೈ ನಾಯಕರ ಪ್ರತಿಭಟನೆ

ಬೆಂಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು. ವಿಧಾನ ಸೌಧ, ವಿಕಾಸ ಸೌಧದ ಮದ್ಯದಲ್ಲಿರೋ ಗಾಂಧಿ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ದೇಶದ ಜನರಿಗೆ ನರೇಂದ್ರ ಮೋದಿ ಸರ್ಕಾರ ವಂಚಿಸುತ್ತಿದೆ,  ಕಾರ್ಮಿಕರಿಗೆ, ರೈತರಿಗೆ ವಂಚಿಸುತ್ತಿದೆ. ಬಿಜೆಪಿ, ನರೇಂದ್ರ ಮೋದಿ ಹಠಾವೋ,  ಭಾರತ್ ಬಚಾವೋ ಎಂದು ಘೋಷಣೆ ಘೋಷಣೆ ಕೂಗಿದ್ರು.

ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಧಾನ ಮಂತ್ರಿಗಳು 20 ಲಕ್ಷ ಕೋಟಿ ಘೋಷಣೆ ‌ಮಾಡಿದ್ದಾರೆ. ಇದನ್ನ ಆರ್ಥಿಕ ತಜ್ಞ ರು ಬೊಗಸ್ ಪ್ಯಾಕೇಜ್ ಘೋಷಣೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬ್ಯಾಂಕ್ ನಲ್ಲಿ ಸಾಲ ಕೊಡಲು ಇವರೇ ಬೇಕಾಗಿಲ್ಲ. ವಿದ್ಯುತ್ ಕಂಪನಿಗಳಿಗೆ ಗ್ರಾಂಟ್ ಕೊಟ್ಟಿದ್ದಾರಾ..? ಯಾವುದೇ ರೀತಿಯಲ್ಲಿ ಸಹಾಯ ಮಾಡದೆ ಎಲ್ಲಾವನ್ನು ತಿರುಚಿದ್ದಾರೆ. ಇಂದು ಕೇಂದ್ರ, ರಾಜ್ಯ ಸರ್ಕಾರ ವಿಫಲಗೊಂಡಿವೆ. ಕಾರ್ಮಿಕರು, ಕಟ್ಟಡ ಕಾರ್ಮಿಕ , ರೈತರು ಬೀದಿಪಾಲಗಿದ್ದಾರೆ. ರಾಜ್ಯದಲ್ಲಿ ಪಂಚಾಯಿತಿ ಎಲೆಕ್ಷನ್ ಮಾಡಲ್ವಂತೆ. ಅವರ ಪಕ್ಷದ ಕಾರ್ಯಕರ್ತರನ್ನ ಮುನ್ನಡೆಸಲು ಇವರು ಹುನ್ನಾರ ಮಾಡುತ್ತಿದ್ದಾರೆ‌. ಕಾರ್ಮಿಕರನ್ನ ಸರಿಯಾಗಿ ನೋಡಿಕೊಂಡಿದ್ರೆ ಯಾವ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗುತ್ತಿರಲಿಲ್ಲ. ಕೊರೊನಾ ರೋಗ ನಿಯಂತ್ರಿಸುವಲ್ಲಿ  ರಾಜ್ಯ ಸರ್ಕಾರ ವಿಫಲವಾಗಿದೆ ಅಂತಾ ವಾಗ್ದಾಳಿ ನಡೆಸಿದ್ರು.

ಇದೇ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನ ಕೇಂದ್ರ ಸರ್ಕಾರವೇ ಕಳುಹಿಸಿದೆ. ಸುಗ್ರೀವಾಜ್ಞೆ ಹೊರಡಿಸಿ ವರದಿ ಕೊಡಿ ಅಂತಾ ಕೇಳಿದೆ. ಇವನ್ನ ರಾಜ್ಯ ಸರ್ಕಾರ ಮಾಡಬೇಕು. ಸಂವಿಧಾನಕ್ಕೆ ವಿರೋಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ತಿದೆ. ಇದು ಬಂಡವಾಳ ಶಾಹಿಗಳಿಗೆ ಮಣೆ ಹಾಕಿ ರೈತರ ಮಾರುಕಟ್ಟೆಗಳನ್ನ ನಾಶ ಮಾಡುತ್ತಿದೆ.. ಇದನ್ನ ನಾವು ವಿರೋಧ ಮಾಡುತ್ತೇವೆ. ಕಾಯ್ದೆ ತಿದ್ದುಪಡಿ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡಬೇಕಿತ್ತು. ಇದು ಪ್ರಜಾಪ್ರಭುತ್ವ ಆದ್ರೆ ಯಾವುದೇ ಚರ್ಚೆ ಮಾಡಿಲ್ಲ. ವಿರೋಧ ಪಕ್ಷವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಿರ್ಮಾನ ಮಾಡಿದ್ದಾರೆ ಅಂತಾ ಕಿಡಿ ಕಾರಿದ್ರು.

ಕಬಿನಿ ನಾಲೆಯಲ್ಲಿ ಮುಳುಗಿ ದಂಪತಿ ಸಾವು

ಚಾಮರಾಜನಗರ: ತವರು ಮನೆಯಿಂದ ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ ಪತ್ನಿ ದಾರಿ ಮಧ್ಯೆ ನಾಲೆಗೆ ಬಿದ್ದು ಸಾವನ್ನಪ್ಪಿದರೆ ಪತ್ನಿಯನ್ನು ಕಾಪಾಡಲು ಹೋದ ಪತಿಯೂ ಪತ್ನಿ ಜತೆ ಜಲಸಮಾಧಿಯಾಗಿದ್ದಾನೆ.

ಚಾಮರಾಜನಗರ ಜಿಲ್ಲೆಯ ಲಿಂಗಣಾಪುರ ಗೇಟ್ ಬಳಿಯ ಕಬಿನಿ ಬಲದಂಡೆ ನಾಲೆಯಲ್ಲಿ ದೇಮಹಳ್ಳಿಯ ಕೆಂಪಣ್ಣ(37), ಪೂರ್ಣಿಮಾ(27) ದಂಪತಿ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆಲ್ದೂರಿನಲ್ಲಿರುವ ತನ್ನ ತವರು ಮನೆಗೆ ಪತಿ ಕೆಂಪಣ್ಣ ಮತ್ತು ಮಗನೊಂದಿಗೆ ಹೋಗಿದ್ದ ಪೂರ್ಣಿಮಾ ದೇಮಹಳ್ಳಿಗೆ ಮರಳುತ್ತಿದ್ದಳು. ಈ ವೇಳೆ ದಾರಿ ಮಧ್ಯೆ ಬೈಕ್‌ನಿಂದ ಜಿಗಿದು ನಾಲೆಗೆ ಹಾರಿದ್ದಾಳೆ. ಆಕೆಯನ್ನು ರಕ್ಷಿಸಲು ಮುಂದಾದ ಪತಿ ಕೆಂಪಣ್ಣ ಕೂಡ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ಇದೇ ವೇಳೆ ಜಮೀನಿಗೆ ತೆರಳುತ್ತಿದ್ದ ಭೋಜರಾಜು ಎನ್ನುವವರು ನೀರಿನಲ್ಲಿ ರಕ್ಷಣೆಗಾಗಿ ಕೂಗುತ್ತಿದ್ದರುವುದನ್ನು ಕೇಳಿಸಿಕೊಂಡು ನಾಲೆಯ ಬಳಿಗೆ ಬಂದು ಸಹಾಯ ಮಾಡುವುದರೊಳಗೆ ದಂಪತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಪೊಲೀಸರು ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಈಜು ಪರಿಣಿತರ ನೆರವಿನೊಂದಿಗೆ ಮೃತ ದೇಹಗಳ ಹುಡುಕಾಟ ನಡೆಸಿತು. ದಂಪತಿ ಸಾವಿನ ಸುದ್ದಿ ಹರಡುತ್ತಿದ್ದಂತೆ ಅಕ್ಕ-ಪಕ್ಕದ ಗ್ರಾಮಗಳ ಜನರು ನಾಲೆ ಬಳಿ ಬಂದು ಜಮಾಯಿಸಿದರು.
ಪೂರ್ಣಿಮಾ ನಾಲೆಗೆ ಹಾರಲು ಕಾರಣ ತಿಳಿದು ಬಂದಿಲ್ಲ. ದಂಪತಿಗಳ ಮಧ್ಯೆ ಯಾವುದೇ ಕಲಹವಿರಲಿಲ್ಲ. ಇಬ್ಬರು ಅನ್ಯೋನ್ಯವಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದು, ಸಾವಿಗೆ ಕಾರಣ ನಿಗೂಢವಾಗಿ ಉಳಿದಿದೆ. ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್‌ಇನ್ಸ್‌ಪೆಕ್ಟರ್ ಸಿದ್ದಯ್ಯ ಮತ್ತು ಸಿಬ್ಬಂದಿ ತನಿಖೆ ಆರಂಭಿಸಿದ್ದಾರೆ

63 ಕೊರೊನಾ ಕೇಸ್ ಪತ್ತೆ,1458 ಕ್ಕೇರಿದ ಸೋಂಕಿತರ ಸಂಖ್ಯೆ

ಬೆಂಗಳೂರು:149 ಪ್ರಕರಣ ದೃಢವಾಗುವ ಮೂಲಕ‌ ರಾಜ್ಯದಲ್ಲಿ ಕೊರೊನಾಘಾತ ಸೃಷ್ಟಿಸಿ ಆತಂಕ ಮೂಡಿಸಿದ್ದ ಕೊರೊನಾ ಇಂದು 63 ಪ್ರಕರಣ ಮಾತ್ರ ದೃಢವಾಗಿದ್ದು ಸಂಖ್ಯೆಯಲ್ಲಿ ಇಳಿಕೆಯಾಗಿ ಸ್ವಲ್ಪ ನೆಮ್ಮದಿ ಮೂಡಿಸಿದೆ.

ಆರೋಗ್ಯ ಇಲಾಖೆ ಇಂದು ಬಿಡಿಗಡೆ ಮಾಡಿರುವ ಮಧ್ಯಾಹ್ನದ ಬುಲೆಟಿನ್ ಅನ್ವಯ ಹೊಸದಾಗಿ 63 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ1458 ಕ್ಕೆ ತಲುಪಿದೆ. ಇಂದ 10 ಸೋಂಕಿತರ ಗಯಣಮುಖರಾಗಿ ಬಿಡುಗಡೆಯಾಗಿದ್ದು ಬಿಡುಗಡೆ ಆದರ ಸಂಖ್ಯೆ 553 ಕ್ಕೆ ತಲುಪಿದೆ. ಸಧ್ಯ
864 ಆಕ್ಟೀವ್ ಕೇಸ್ ಇದ್ದು
40 ಸೋಂಕಿತರ ಈವರೆಗೆ ಸಾವಿಗೀಡಾಗಿದ್ದಾರೆ.

ಲಾಕ್ ಡೌನ್ ನಂತರ ರಾಜ್ಯಾದ್ಯಂತ ಪ್ರವಾಸ: ಡಿಕೆ ಶಿವಕುಮಾರ್

ಬೆಂಗಳೂರು: ಸರ್ಕಾರ ಲಾಕ್ ಡೌನ್ ತೆರವುಗೊಳಿಸಿದ ನಂತರ ರಾಜ್ಯದ ಮೂಲೆಮೂಲೆಗೂ ಪ್ರವಾಸ ಕೈಗೊಂಡು, ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ವರ್ಗ, ಧರ್ಮದ ಜನರ ಕುಂದು ಕೊರತೆಗಳನ್ನು ಆಲಿಸುತ್ತೇನೆ, ಅವರ ಧ್ವನಿಯಾಗಿ ಅವರ ಬೆನ್ನಿಗೆ ನಿಲ್ಲುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಮಾರ್ಚ್ 31ರವರೆಗೂ ಸರ್ಕಾರ ಲಾಕ್ ಡೌನ್ ವಿಸ್ತರಿಸಿದ್ದು, ಇದಾದ ನಂತರ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

1. ಲಾಕ್ ಡೌನ್ ಮುಗಿದ ತಕ್ಷಣ ಕೋವಿಡ್ ಸಮಸ್ಯೆಯಿಂದ ಎದುರಾಗಿರು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಈ ಸರ್ಕಾರಕ್ಕೆ ನಾವು ಸಹಕಾರ ನೀಡಿದರು, ಕೆಲವು ವಿಚಾರಗಳಲ್ಲಿ ಹೊರತುಪಡಿಸಿ ಬಹುತೇಕ ವಿಚಾರಗಳಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರೈತರ ಬೆಳೆ ಖರೀದಿಯಿಂದ ವಲಸೆ ಕಾರ್ಮಿಕರ ಸಂಕಷ್ಟದವರೆಗೂ ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಅಧಿಕಾರ ದುರುಪಯೋಗ, ತಮ್ಮ ಮತದಾರರಿಗೆ ಮಾತ್ರ ಸೌಲಭ್ಯ ಕಲ್ಪಿಸಿದೆ.

2. ಕೇಂದ್ರ ಸರ್ಕಾರ 21 ಲಕ್ಷ ಕೋಟಿ ಪರಿಹಾರ ಘೋಷಿಸಿದೆ. ಇದರ ಬಗ್ಗೆ ಆರ್ಥಿಕ ತಜ್ಞರು ಹಾಕಿರುವ ಲೆಕ್ಕಾಚಾರದ ಪ್ರಕಾರ ಕೇವಲ 2 ಲಕ್ಷ ಕೋಟಿ ಮಾತ್ರ ಸರ್ಕಾರಕ್ಕೆ ಹೊರೆಯಾಗಿದ್ದು, ಉಳಿದೆಲ್ಲವು ಬ್ಯಾಂಕ್ ಮೂಲಕ ಸಾಲವಾಗಿ ನೀಡಲು ನಿರ್ಧಾರವಾಗಿದೆ. ಇಂದು ಮೋದಿ ಸರ್ಕಾರ ಎಲ್ಲರನ್ನು ಸಾಲಗಾರರನ್ನಾಗಿ ಮಾಡಲು ಹೊರಟಿದೆ. ಆರಂಭದಲ್ಲಿ ಆರ್ಥಿಕ ನೆರವು ನೀಡುವ ನಿರೀಕ್ಷೆಯಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಕಲ್ಲಿದ್ದಲು, ವಿಮಾನಯಾನ ಕ್ಷೇತ್ರಗಳು ಖಾಸಗೀಕರಣಕ್ಕೂ, ಜನರ ಸಂಕಷ್ಟ ಪರಿಹಾರಕ್ಕೂ ಯಾವುದೇ ಸಂಬಂಧವಿಲ್ಲ.

3. ಮುಖ್ಯಮಂತ್ರಿಗಳೇ ನೀವು ಘೋಷಿಸಿರುವ 1610 ಕೋಟಿ ಪ್ಯಾಕೇಜ್ ನಲ್ಲಿ ಈವರೆಗೂ ಒಬ್ಬರಿಗೂ ಒಂದು ರೂಪಾಯಿ ನೀಡಲು ಸಾಧ್ಯವಾಗಿಲ್ಲ. ಪೀಣ್ಯ ಕೈಗಾರಿಕ ಪ್ರದೇಶದಲ್ಲಿ ನಾಲ್ಕೂವರೆ ಲಕ್ಷ ಮತದಾರರಿದ್ದು, ಮೂರು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಸರ್ಕಾರ ಈ ಕ್ಷೇತ್ರಕ್ಕೆ ನೀಡಿದ ಆಹಾರ ಪ್ಯಾಕೇಟ್ ಗಳು ಮಾತ್ರ ಕೇವಲ 3 ಸಾವಿರ. ಇದಕ್ಕೆ ದಾಖಲೆಗಳು ಬಿಬಿಎಂಪಿ ಕಾರ್ಮಿಕ ವಿಭಾಗದಲ್ಲಿ ಉಳಿದುಕೊಂಡಿದೆ.

4. ನಿಮಗೆ ನಿಜವಾಗಿ ಕಾಳಜಿ ಇದ್ದಿದ್ದರೆ, ನಮ್ಮ ರಾಜ್ಯ ಕಟ್ಟುತ್ತಿರುವ ಕಾರ್ಮಿಕರನ್ನು ಸರಿಯಾಗಿ ನೋಡಿಕೊಂಡಿದ್ದರೆ, ಅವರು ಇಂದು ತಮ್ಮ ಊರಿಗೆ ಮರಳುತ್ತಿರಲಿಲ್ಲ. ಈ ದೇಶಕ್ಕಾಗಿ ಬೆವರು, ರಕ್ತ ಹರಿಸಿದವರಿಗೆ ನೀವು ಅಪಮಾನ ಮಾಡಿದ್ದೀರಿ. ನೀವು ಲಾಕ್ ಡೌನ್ ಸಡಿಲ ಮಾಡಿದ ನಂತರ ರಾಜ್ಯದ ಪ್ರವಾಸ ಮಾಡುತ್ತೇನೆ. ಇದು ಪಕ್ಷದ ಕಾರ್ಯಕ್ರಮವಲ್ಲ. ನನ್ನ ಅಣ್ಣ ತಮ್ಮಂದಿರು, ನೊಂದು ಬೆಂದವರ ಕಣ್ಣೀರು ವರೆಗೆ ಸಾಂತ್ವಾನ ಹೇಳಲು ಹೋಗುತ್ತೇನೆ. ಎಲ್ಲ ವರ್ಗ, ಧರ್ಮದ ಜನರನ್ನು ಭೇಟಿ ಮಾಡಿ ಅವರ ಜತೆ ನಿಲ್ಲುತ್ತೇವೆ.

5. ನಮ್ಮ ಪಕ್ಷಕ್ಕೆ ಇತಿಹಾಸ, ಚರಿತ್ರೆ ಇದೆ. ಅಧಿಕಾರ, ರಾಜಕೀಯಕ್ಕೆ ಕಾರ್ಯಕ್ರಮ ಮಾಡುತ್ತಿಲ್ಲ. ಇದು ಮಾನವೀಯ ಸೇವೆ. ಅದಕ್ಕೆ ನಾನು ನಿಮ್ಮ ಸಹಕಾರವನ್ನು ಬೇಡುತ್ತೇನೆ. ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಲಿದ್ದೇವೆ. ಪ್ರತಿ ಕ್ಷೇತ್ರ, ವಾರ್ಡ್ ನಲ್ಲಿ ಸಂಘಟನೆ ಮಾಡಬೇಕು ಎಂಬುದನ್ನು ಚರ್ಚಿಸುತ್ತೇವೆ.

6. ದೇಶ ಹಾಗೂ ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಲು ಕಾರಣ, ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿಲ್ಲ. ಸರ್ಕಾರ ಕೇವಲ ಯೂಟರ್ನ್ ನಿರ್ಧಾರಗಳನ್ನೇ ನೀಡುತ್ತಿವೆ. ಈ ಗೊಂದಲಗಳು ಈ ವೈಫಲ್ಯಕ್ಕೆ ಕಾರಣ. ನಾವು ರಾಜಕಾರಣ ಮಾಡಬಾರದು ಅಂತಾ ಸುಮ್ಮನಿದ್ದೇವೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ.

7. ಸರ್ಕಾರ ಸರಿಯಾಗಿ ಮುಂದಾಲೋಚನೆ ಇಲ್ಲ, ಸಮನ್ವಯತೆ, ನಂಬಿಕೆ ಇಲ್ಲ. ಹೀಗಾಗಿ ಪರಿಣಾಮಕಾರಿ ಯೋಜನೆಗಳು ಇಲ್ಲದೆ ಸಮಸ್ಯೆ ಹೆಚ್ಚಾಗುತ್ತಿದೆ.

8. ಸರ್ಕಾರ ಈಗ ತೆಗೆದುಕೊಂಡಿರುವ ನರೇಗಾ ಹಾಗೂ ಇತರೆ ಉತ್ತಮ ನಿರ್ಧಾರಗಳನ್ನು ನಮ್ಮ ಪುಸ್ತಕದಿಂದಲೇ ತೆಗೆದುಕೊಂಡಿದ್ದಾರೆ. ಹೂವು, ಹಣ್ಣು, ತರಕಾರಿ ರೈತರಿಗೆ 6 ಸಾವಿರ ಕೊಡುತ್ತಾರೆ ಇದು ಯಾವ ರೀತಿಯ ಪರಿಹಾರ? ಸರ್ಕಾರಕ್ಕೆ ನಾಚಿಕೆಯಾಗಬೇಕು. ಯಾವ ಚಾಲಕನಿಗೆ, ಯಾವ ಕ್ಷೌರಿಕರಿಗೆ ಹಣ ಸಿಕ್ಕಿದೆ? ನಾವು ಅದಿಕಾರದಲ್ಲಿದ್ದರೆ ಇಷ್ಟು ಹೊತ್ತಿಗಾಗಲೇ ಜನರ ಮನೆ ಬಾಗಿಲಿಗೆ ಚೆಕ್ ತಲುಪುತಿತ್ತು.

9. ಈಗ ಹೇರಲಾಗಿರುವ ಲಾಕ್ ಡೌನ್ ಅವೈಜ್ಞಾನಿಕವಾಗಿದ್ದು, ಯಾವುದೇ ಸಾಮಾನ್ಯ ವ್ಯಕ್ತಿಯ ಅಭಿಪ್ರಾಯವನ್ನೂ ಪಡೆದಿಲ್ಲ. ಇದು ಸರ್ವಾಧಿಕಾರ ಧೋರಣೆ. ನಾವು ವಿಶೇಷ ಅಧಿವೇಶನ ಕರೆಯಲು ಮನವಿ ಮಾಡಿದೆವು. ಕರೆದು ಚರ್ಚಿಸಿದ್ದರೆ, ನಿಮಗೆ ನೆರವಾಗಲು ಆರ್ಥಿಕ ನಿರ್ಣಯಗಳಿಗೆ ಸಹಕಾರ ನೀಡುತ್ತಿದ್ದೆವು.

10. ಮಾರ್ಚ್ 11ರಂದು ನನ್ನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಕ ಮಾಡಿತು. ಅವತ್ತಿನಿಂದ ನನ್ನ ಕಾರ್ಯ ಪ್ರಾರಂಭಿಸಿದ್ದೇನೆ. ಸಾಂಕೇತಿಕವಾಗಿ ಧ್ವಜ ಬದಲಾಯಿಸುವುದು ಒಂದು ಪದ್ಧತಿ, ಸಂಪ್ರದಾಯ. ಈ ಕಾರ್ಯಕ್ಕೆ ಕೊರೋನಾ ಅಡ್ಡಿಯಾಯಿತು. ನಾನು ಸಾಂಕೇತಿಕವಾಗಿ ಅಧಿಕಾರ ಸ್ವೀಕರಿಸಿಲ್ಲಲ್ಲ ಎಂದು ಮನೆಯಲ್ಲಿ ಕೂರಲಿಲ್ಲ. ನಮ್ಮ ವಿರೋಧ ಪಕ್ಷದ ನಾಯಕರಿಂದ ಶಾಸಕರು, ನಾಯಕರು, ಕಾರ್ಯಕರ್ತರು ಎಲ್ಲರೂ ಸೇರಿ ನಮ್ಮ ಆರೋಗ್ಯವನ್ನು ಲೆಕ್ಕಿಸದೇ ರಸ್ತೆಗಿಳಿದು, ತೋಟಗಳಿಗೆ ಹೋಗಿ, ಅಧಿಕಾರಿಗಳ ಜತೆ ಚರ್ಚಿಸಿ, ಕಾಂಗ್ರೆಸ್ ಒಂದು ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಯಾವ ರೀತಿ ಕೆಲಸ ಮಾಡಲು ಸಾಧ್ಯ ಎಂಬುದನ್ನು ತೋರಿಸಿದೆ. ಸಂಕಷ್ಟದ ಸಮಯದಲ್ಲಿ ಜನರ ಮಧ್ಯೆ ಇರಬೇಕು ಎಂಬುದು ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಎಲ್ಲ ಕಾರ್ಯಕರ್ತರು, ಮುಖಂಡರು ತಮ್ಮ ಕ್ಷೇತ್ರದಲ್ಲಿ ಸರ್ಕಾರಕ್ಕಿಂತ ಹೆಚ್ಚಾಗಿ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಮಾಧ್ಯಮಗಳು ಪ್ರಕಟಿಸಿರುವ ವರದಿಗಳೇ ಸಾಕ್ಷಿ.

11. ಅನೇಕ ಸಂಘ ಸಂಸ್ಥೆಗಳು, ಯಾವ ಅಧಿಕಾರವನ್ನು ಬಯಸದೇ ಮಾನವೀಯ ಸೇವೆಗೆ ಮುಂದಾಗಿವೆ. ಇವರಿಗೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

12. ನನ್ನ ಕಾರ್ಯಕ್ರಮ ಕೇವಲ ಡಿಕೆ ಶಿವಕುಮಾರ್ ಕಾರ್ಯಕ್ರಮವಲ್ಲ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಾರ್ಯಕ್ರಮ. ಕೆಲವು ಮಾಧ್ಯಮಗಳಲ್ಲಿ ನಾನು ಇದೇ 31ರಂದು ಅಧಿಕಾರ ಸ್ವೀಕರಿಸುತ್ತೇನೆ ಎಂದು ಪ್ರಕಟಿಸಿದ್ದನ್ನು ನಾನು ನೋಡಿದ್ದೇನೆ. ನಾನು ಭಾನುವಾರದಂದು ಆ ಕಾರ್ಯಕ್ರಮ ನಡೆಸಿದರೆ ಸಾರಿಗೆ ಸೇರಿದಂತೆ ಇತರೆ ವಿಚಾರವಾಗಿ ಸಮಸ್ಯೆ ಆಗಬಾರದು ಎಂದು ಚರ್ಚಿಸಿದ್ದೆ. ಆದರೆ ಅಧಿಕೃತವಾಗಿ ಪ್ರಕಟಿಸಲಿಲ್ಲ.

13. ಆದರೆ ಪಾಪ ಯಡಿಯೂರಪ್ಪನವರು ಎಲ್ಲ ದಿನ ಕೆಲಸ ಮಾಡಬಹುದು, ಆದರೆ ಎಲ್ಲ ಭಾನುವಾರ ಮಾತ್ರ ಕರ್ಫ್ಯೂ ಜಾರಿ ಯಾವ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ನಾವು ಕಾನೂನು ಉಲ್ಲಂಘನೆ ಮಾಡಿ ಈ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಕಾನೂನಿಗೆ ನಾವೆಲ್ಲರೂ ಗೌರವ ಕೊಡಬೇಕಾಗುತ್ತದೆ. ಹೀಗಾಗಿ 31ರಂದು ಈ ಕಾರ್ಯಕ್ರಮ ಮಾಡುವುದಿಲ್ಲ. ಲಾಕ್ ಡೌನ್ ತೆರವಾದ ನಂತರ ಒಂದು ದಿನ ನಾನು ಆ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ.

14. ಈ ಬಾರಿ ಒಂದು ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮದ ರೂಪುರೇಷೆ ತಿಳಿಸುತ್ತೇವೆ. ಪ್ರತಿ ಗ್ರಾಮ ಪಂಚಾಯ್ತಿ, ವಾರ್ಡ್ ನಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. ನಾನು ಇಲ್ಲಿ ಧ್ವಜ ಸ್ವೀಕರಿಸಿ, ಜ್ಯೋತಿ ಹಚ್ಚಿದಾಗಿನಿಂದ ಪ್ರತಿ ಪಂಚಾಯ್ತಿ, ವಾರ್ಡ್ ನಲ್ಲಿ ಸುಮಾರು 7200 ಕಡೆಗಳಲ್ಲಿ ಈ ಕಾರ್ಯಕ್ರಮ ಮಾಡುತ್ತೇವೆ.

15. ಪ್ರತಿ ಕಡೆ ಎರಡು ಟಿವಿ ಇಟ್ಟು, ಮಾಧ್ಯಮಗಳ ಮನವಿ ಮಾಡಿ ಈ ಕಾರ್ಯಕ್ರಮ ನೇರಪ್ರಸಾರಕ್ಕೆ ಮಾಡಲಾಗುವುದು. ಈ ವೇಳೆ ಸಂವಿಧಾನದ ಪೀಠಿಕೆ ಓದಿ, ಪ್ರತಿಜ್ಞೆ ಸ್ವೀಕಾರ ಮಾಡಲಾಗುವುದು.

ಡಿಕೆಶಿ ಪ್ರಮಾಣ ವಚನಕ್ಕೆ 7200 ಕಡೆ ಕಾರ್ಯಕ್ರಮ!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ಅತ್ಯಂತ ವಿನೂತನವಾಗಿರಲಿದೆ. ರಾಜ್ಯದ ಉದ್ದಗಲಕ್ಕೂ 7200 ಕಡೆ ಕಾರ್ಯಕ್ರಮ ನಡೆಯಲಿದೆ. ವಾರ್ಡ್, ಗ್ರಾಮ  ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಕೊರೋನಾ ಅಡ್ಡಿಪಡಿಸಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಮಾಣ ವಚನ ಕಾರ್ಯಕ್ರಮದ ಕುರಿತು ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು,  ಪದಗ್ರಹಣಕ್ಕೆ ಒಂದು ವಿನೂತನ ಕಾರ್ಯಕ್ರಮ ಮಾಡಲಾಗುತ್ತೆ. ಇದು ಕೇವಲ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಅಲ್ಲ. ರಾಜ್ಯದ ಉದ್ದಗಲಕ್ಕೂ 7200 ಕಡೆ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದ್ದೇವೆ. ವಾರ್ಡ್, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಸಂವಿಧಾನದ ಪೀಠಿಕೆ ಓದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪ್ರತಿಜ್ಞೆ ಸ್ವೀಕರಿಸುವ ಯೋಜನೆ ರೂಪಿಸಿದ್ದೇವೆ ಅಂತಾ ತಿಳಿಸಿದ್ರು.

ಪದಗ್ರಹಣ ಕಾರ್ಯಕ್ರಮಕ್ಕೆ ಹಲವಾರು ನೂತನ ಯೋಜನೆಗಳನ್ನ ರೂಪಿಸಲಾಗಿದೆ. ಆದ್ರೆ ಇನ್ನೂ ದಿನಾಂಕ ಮಾತ್ರ ಫಿಕ್ಸ್ ಆಗಿಲ್ಲ. ಈ ಕುರಿತು ಮಾತನಾಡಿದ ಡಿಕೆಶಿ, ಮೇ 31 ರ ನಂತರ ಪದಗ್ರಹಣ ಕಾರ್ಯಕ್ರಮವನ್ನ ತಿಳಿಸ್ತೇನೆ. ಪಕ್ಷ ಸಂಘಟನೆ ಮಾಡೋಕೆ ಒತ್ತು ನೀಡ್ತೇವೆ. ಕಾರ್ಯಕ್ರಮಕ್ಕೆ ಯಾರೂ ಬರುವುದು ಬೇಡ, ಮಾಧ್ಯಮಗಳ ಮೂಲಕವೇ ನಾವು ಪದಗ್ರಹಣ ಕಾರ್ಯಕ್ರಮ ತೋರಿಸ್ತೇವೆ. ಪ್ರತಿ ಕ್ಷೇತ್ರದ ವಿಚಾರವನ್ನೂ ಗೌಪ್ಯವಾಗಿ ಪಡೆದುಕೊಳ್ತೇವೆ. ನಂತರ ಜನರ ಧ್ಚನಿಯಾಗಿ ಕೆಲಸ ಮಾಡ್ತೇವೆ. ಅಲ್ಲಿಯವರೆಗೆ ಎಲ್ಲ ಮುಖಂಡರನ್ನ ಕರೆಸಿ ಚರ್ಚಿಸುತ್ತೇನೆ ಅಂತಾ ತಿಳಿಸಿದ್ರು.