ಲೋಕಸಭಾ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆಯಾಗಿದೆ: ಡಿಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆ, ಆಶ್ಚರ್ಯವಾಗಿದೆ. ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯರು ಸೋತಿರೋದು ಶಾಕ್ ತಂದಿದೆ… ಇದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ನೀಡಿರುವ ಪ್ರತಿಕ್ರಿಯೆ.

ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿದ ನಂತರ ಲೋಕಸಭೆ ಚುನಾವಣೆ ಫಲಿತಾಂಶ ಕುರಿತಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ ಎಂದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಕರ್ನಾಟಕದಲ್ಲಿನ ಲೋಕಸಭಾ ಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಬಂದಿದೆ. ದೇವೇಗೌಡ್ರು, ಮಲ್ಲಿಕಾರ್ಜುನ ಖರ್ಗೆ, ಮೊಯ್ಲಿ ಅವರಂತಹ ಹಿರಿಯ ನಾಯಕರ ಸೋಲು ನಿಜಕ್ಕೂ ದೊಡ್ಡ ಶಾಕ್. ಅವರ ಹೋರಾಟ ಎಂತಹದ್ದು ಎಂಬುದು ಚರಿತ್ರೆಯಲ್ಲಿ ಉಳಿದುಕೊಂಡಿದೆ. ಸಂಸತ್ ನಲ್ಲಿ 10 ಸಂಸದರು ಕಾಂಗ್ರೆಸ್ ನಿಂದ ಆಯ್ಕೆಯಾಗುತ್ತಿದ್ದರು. ಈಗ ಕೇವಲ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಈ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲಿ ತಪ್ಪಾಗಿದೆ? ಏನಾಗಿದೆ? ಎಂದು ಹೇಳುವುದು ಕಷ್ಟವಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನನ್ನ ಸಹೋದರ ಒಬ್ಬನೇ ಗೆದ್ದಿರೋದು ನನಗೆ ಖುಷಿಯಾಗಿಲ್ಲ. ದೇವೇಗೌಡರು, ಖರ್ಗೆಯಂತಹ ಹಿರಿಯ ನಾಯಕರು ಸಂಸತ್ತಿನಲ್ಲಿಲ್ಲದೇ ಸುರೇಶ್ ಒಬ್ಬ ಇದ್ದು ಏನು ಪ್ರಯೋಜನ?
ಜನ ಪ್ರೀತಿ ವಿಶ್ವಾಸದಿಂದ ಮತಹಾಕಿ ಅವನನ್ನು ಉಲಿಸಿಕೊಂಡಿದ್ದಾರೆ. ಅದು ಬೇರೆ ವಿಚಾರ. ಅವನಿಗೂ 3 ಲಕ್ಷ ಅಂತರದ ಗೆಲುವು ನಿರೀಕ್ಷೆ ಮಾಡಲಾಗಿತ್ತು. ನಾನು ಕ್ಷೇತ್ರಕ್ಕೆ ಹೋಗದಿದ್ದರೂ ದಳದ ಹಾಕೂ ಕಾಂಗ್ರೆಸ್ ಎಲ್ಲ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಕೂಡ ನಮ್ಮ ಕ್ಷೇತ್ರದಲ್ಲಿ ಸುರೇಶ್ ಗೆ ಬೆಂಬಲಿಸಿದ್ದಾರೆ. ಆದರೆ ರಾಜ್ಯದ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ. ಈ ಫಲಿತಾಂಶದ ಕುರಿತಾಗಿ ಎಲ್ಲೆಲ್ಲಿ ಏನೇನಾಗಿದೆ ಎಂಬುದನ್ನು ಇನ್ನಷ್ಟೇ ನಾವು ವಿಮರ್ಷೆ ಮಾಡ, ಚರ್ಚಿಸಬೇಕಿದೆ.’

ಮೈತ್ರಿ ವಿಚಾರವಾಗಿ ನಾನು ಸದ್ಯಕ್ಕೆ ಏನನ್ನೂ ಮಾತನಾಡುವುದಿಲ್ಲ. ಹೀಗಾಗಿ ಗಾಂಧಿಜೀ ಹೇಳಿದಂತೆ ಕಣ್ಮಿಗೆ ಬಟ್ಟೆ ಕಟ್ಟಿ, ಕಿವಿಗೆ ಹತ್ತಿ ಇಟ್ಟು, ಬಾಯಿಗೆ ಬೀಗ ಹಾಕಿಕೊಂಡು ಇರುವಂತೆ ಇದ್ದೀನಿ. ನಾನು ಸರ್ಕಾರದ ಪರವಾಗಿದ್ದೇನೆ. ನಾವು ಯಾವ ಮಾತು ನೀಡಿದ್ದೇವೋ ಆ ಮಾತು ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ.’
ಇನ್ನು ಯಡಿಯೂರಪ್ಪನವರ ಆಪರೇಷನ್ ಕಮಲದ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಯಡಿಯೂರಪ್ಪನವರ ಕೈಯಲ್ಲಿ ಏನೇನು ಮಾಡಲು ಸಾಧ್ಯವೋ ಅವರು ಮಾಡಲಿ ನೋಡೋಣ’ ಎಂದರು. ಇನ್ನು ಲಿಂಗಾಯತ ಮತಗಳು ಬಿದ್ದಿಲ್ಲ ಎಂಬ ಪ್ರಶ್ನೆಗೆ, ‘ಸದ್ಯಕ್ಕೆ ನಾನು ಯಾವುದೇ ನಾಯಕರು, ಧರ್ಮದ ವಿಚಾರವಾಗಿ ನಾನು ಮಾತನಾಡುವಂತಿಲ್ಲ. ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ನಮಗೆ ಆದೇಶ ಬಂದಿದೆ. ಹೀಗಾಗಿ ಈ ವಿಚಾರಗಳ ಬಗ್ಗೆ ನಾನು ಉತ್ತರಿಸುವುದಿಲ್ಲ’ ಎಂದರು.

ಜಿಂದಾಲ್ ಸಂಸ್ಥೆಗೆ ಭೂಮಿ ಕ್ರಯ ವಿಚಾರ

ಇನ್ನು ಜಿಂದಾಲ್ ಸಂಸ್ಥೆಗೆ ಮೂರುವರೆ ಸಾವಿರ ಎಕರೆ ಜಮೀನು ನೀಡುವ ವಿಚಾರವನ್ನು ಸಮರ್ಥಿಸಿಕೊಂಡ ಸಚಿವರು ಹೇಳಿದಿಷ್ಟು…
ಈ ವಿಚಾರವಾಗಿ ಬಿಜೆಪಿ ಅವಧಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಜಿಂದಾಲ್ ಗೆ ಮೂರು ಸಾವಿರಾರು ಎಕರೆ ಜಮೀನು ನೀಡೋ ನಿರ್ಣಯ ಸರಿಯಾಗಿದೆ. ಈ ಹಿಂದೆಯೇ ಕ್ಯಾಬಿನೆಟ್ ಗೆ ಬರಬೇಕಿತ್ತು. ಇದರಿಂದ ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಸೃಷ್ಟಿಗೆ ಅನುಕೂಲವಾಗಲಿದೆ. ಹೀಗಾಗಿ ಇಂತಹ ನಿರ್ಣಯಗಳು ಅಗತ್ಯ. ಈ ಹಿಂದೆ ಇನ್ಫೋಸಿಸ್ ಕಂಪನಿಗೆ ಮೈಸೂರಲ್ಲಿ ಜಮೀನು ನೀಡಿದಾಗಲೂ ಆಕ್ಷೇಪ ವ್ಯಕ್ತವಾಗಿತ್ತು. ಆದ್ರೆ ಇದೀಗ ಆ ಸಂಸ್ಥೆಯಿಂದ ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಒಮ್ಮೊಮ್ಮೆ ಒಂದೊಂದು ಇಂತಹ ನಿರ್ಣಯಗಳನ್ನು ಮಾಡಬೇಕಾಗುತ್ತೆ.

ಪ್ರಜ್ವಲ್ ಮತ್ತು ನಾನು ಒಟ್ಟಾಗಿ ಪಕ್ಷ ಕಟ್ಟಬೇಕಿದೆ: ನಿಖಿಲ್

ಬೆಂಗಳೂರು: ಪ್ರಜ್ವಲ್ ವಿರುದ್ದ ಪ್ರತಿಷ್ಟೆಗಾಗಿ ನಾನು ಚುನಾವಣೆಗೆ ನಿಂತಿಲ್ಲ. ಲಕ್ಷಾಂತರ ಕಾರ್ಯಕರ್ತರ ಧ್ವನಿಯಾಗಿ ನಾನು ಮತ್ತು ಪ್ರಜ್ವಲ್ ಸ್ಪರ್ಧೆ ಮಾಡ್ತಾ ಇದ್ದೇವೆ. ಪ್ರಜ್ವಲ್ ಹಾಗೂ ನಾನು ಪಕ್ಷ ಕಟ್ಟಬೇಕಿದೆ, ಇಬ್ಬರೂ ಸೇರಿ ಪಕ್ಷಕ್ಕಾಗಿ ದುಡಿತೇವೆ. ಆದ್ರೆ, ಜನರ ತೀರ್ಪೇ ಅಂತಿಮ ಅದಕ್ಕೆ ನಾವು ತಲೆಬಾಗಲೇ ಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಭಾವ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ನಗರದ ಗಾಳಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ನಿಖಿಲ್ ಕುಮಾರಸ್ವಾಮಿ ಪೂಜೆ ಸಲ್ಲಿಸಿದರು. ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ನಿಖಿಲ್, ಈಗ ತಾನೆ ರಾಜಕಾರಣಕ್ಕೆ ಹೆಜ್ಜೆ ಇಡ್ತಾ ಇದೀನಿ. ನನಗೆ ರಾಜಕೀಯದ ಅನುಭವ ಕಡಿಮೆ ಮಡ್ಯದಲ್ಲಿ ದೊಡ್ಡವರ ಮಟ್ಟದಲ್ಲಿ ಮೈತ್ರಿಯಾಗಿದೆ. ಮಂಡ್ಯ ಕಾಂಗ್ರೆಸ್ ನಾಯಕರ ಜೊತೆ ನಾನು ಪ್ರತ್ಯೇಕ ಮಾತುಕತೆ ಮಾಡುವ ಅವಶ್ಯಕತೆ ಇಲ್ಲ. ಸುಮಲತಾ ವಿರುದ್ಧ ನನ್ನ ಗೆಲುವು ನಿಶ್ಚಿತ ಎಂದರು.

ಮಂಡ್ಯದ ಏಳೂ ಜನ ಜೆಡಿಎಸ್ ಶಾಸಕರ ಒತ್ತಡದಿಂದ ನನಗೆ ಟಿಕೆಟ್ ಸಿಕ್ಕಿದೆ. ಮಂಡ್ಯ ಮತ್ತು ದೇವೇಗೌಡ, ಕುಮಾರಸ್ವಾಮಿ ಸಂಬಂಧವೇ ನನ್ನ ಗೆಲುವಿಗೆ ಶ್ರೀರಕ್ಷೆ . ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಂ ಒಬ್ಬರು 9 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಅದುವೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಪರವಿರೋಧ ಚರ್ಚೆ ಆಗ್ತಿದೆ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ, ಕ್ಷೇತ್ರದ ಎಲ್ಲ ನಾಯಕರ ಬೆಂಬಲ ಇದೆ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು‌.

ತಮಿಳುನಾಡಿನಲ್ಲಿ ಕೊಲೆಯಾದ ಬೆಂಗಳೂರು ರೌಡಿ!

ಬೆಂಗಳೂರು: ನಗರದ ರೌಡಿಯೊಬ್ಬನನ್ನು ತಮಿಳುನಾಡಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕರ್ನಾಟಕ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಡೆಂಕನಿ ಕೋಟೆಯಲ್ಲಿ ನಡೆದಿದೆ. ಬೆಂಗಳೂರು ಹೊರವಲಯ ಬೊಮ್ಮನಹಳ್ಳಿಯ ಇಸ್ಮಾಯಿಲ್(30) ಕೊಲೆಯಾದ ರೌಡಿಯಾಗಿದ್ದು ಈತನ ವಿರುದ್ಧ ಬೊಮ್ಮನಹಳ್ಳಿ ಬಂಡೆಪಾಳ್ಯ ಹಾಗೂ ಮಡಿವಾಳ ಪೋಲಿಸ್ ಠಾಣೆಗಳಲ್ಲಿ 3 ಕೊಲೆ ಪ್ರಕರಣ ದಾಖಲಾಗಿವೆ.

ಇಸ್ಮಾಯಿಲ್ ಇಂದು ಆನೇಕಲ್ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಡೆಂಕಣಿ ಕೋಟೆಯ ತನ್ನ ಸ್ನೇಹಿತ ಬಶೀರ್ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಇಸ್ಮಾಯಿಲ್ ನನ್ನು ಹಿಂಬಾಲಿಸಿದ 7 ಜನ ದುಷ್ಕರ್ಮಿಗಳ ತಂಡ ಬಶೀರ್ ಮನೆಯಲ್ಲೇ ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ .

ಆರೋಪಿಗಳು ಇನ್ನೋವಾ ಕಾರಿನಲ್ಲಿ ಆಗಮಿಸಿದ್ದು ಮಂಕಿ ಕ್ಯಾಪ್ ಧರಿಸಿ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳ ಏಟಿಗೆ ಇಸ್ಮಾಯಿಲ್’ನ ಎಡಕೈ ತುಂಡಾಗಿದ್ದು ಜೊತೆಗೆ ಆತನ ತಲೆ ಛಿದ್ರವಾಗಿದೆ, ಇಸ್ಮಾಯಿಲ್ ನ ಕೊಲೆಗೆ ಹಲವುದಿನಗಳಿಂದ ಸಂಚು ರೂಪಿಸಿದ್ದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಿ ಕೊನೆಗೆ ಇಂದು ಕೊಲೆ ಮಾಡಿದ್ದಾರೆ. ಘಟನೆಯ ಸ್ಥಳದಲ್ಲೇ ಲಾಂಗ್’ ಡ್ರಾಗನ್ ದೊರೆತಿದ್ದು ಸ್ಥಳಕ್ಕೆ ಡೆಂಕನಿ ಕೋಟೆ ಪೊಲೀಸರು ಆಗಮಿಸಿ ಸ್ಥಳ ಮಹಜರ್ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಸ್ಮಾಯಿಲ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಮಂಡ್ಯ ನಾಯಕರಿಗೆ ಮೈತ್ರಿ ಧರ್ಮ ಮನದಟ್ಟು: ಸಚಿವ ಡಿಕೆಶಿ ಸಭೆ ಯಶಸ್ವಿ

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅವರ ಸ್ಪರ್ಧೆ ವಿಚಾರವಾಗಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಭಾನುವಾರ ಕರೆದಿದ್ದ ಮಂಡ್ಯ ಕಾಂಗ್ರೆಸ್ ನಾಯಕರ ಸಭೆ ಯಶಸ್ವಿಯಾಗಿದ್ದು, ಸಭೆಯಲ್ಲಿ ಸಚಿವರ ಮಾತಿಗೆ ಮಂಡ್ಯ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಶಿವಕುಮಾರ್, ಪಕ್ಷದ ಕಾರ್ಯಕರ್ತರಾಗಿ ಹೈಕಮಾಂಡ್ ಸೂಚನೆಯನ್ನು ಪಾಲಿಸೋಣ ಎಂದು ಕಾಂಗ್ರೆಸ್ ಮುಖಂಡರಿಗೆ ಮನವರಿಕೆ ಮಾಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ. ಹೀಗಾಗಿ ಅಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದು ಆ ಪಕ್ಷದ ನಾಯಕರ ತೀರ್ಮಾನವೇ ಅಂತಿಮ. ಅದರಲ್ಲಿ ನಾವು ತಲೆಹಾಕುವುದು ಬೇಡ. ಅದೇ ರೀತಿ ನಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿ ವಿಚಾರವಾಗಿ ಅವರು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಮೈತ್ರಿ ಧರ್ಮದ ಪ್ರಕಾರ ಮಂಡ್ಯದಲ್ಲಿ ಜೆಡಿಎಸ್ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತದೆಯೋ ಅದಕ್ಕೆ ನಮ್ಮ ಬೆಂಬಲ ಇರಬೇಕು. ಅವರು ಸುಮಲತಾರನ್ನೇ ಅಭ್ಯರ್ಥಿ ಮಾಡಲಿ ಅಥವಾ ಬೇರೆಯವರನ್ನೇ ಕಣಕ್ಕಿಳಿಸಲಿ. ಅವರನ್ನು ನಾವು ಬೆಂಬಲಿಸಬೇಕು. ಹೈಕಮಾಂಡ್ ಕ್ಷೇತ್ರ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಅವರ ಅಭ್ಯರ್ಥಿ ಆಯ್ಕೆಯನ್ನು ನಾವು ಪ್ರಶ್ನಿಸುವಂತಿಲ್ಲ. ಇಲ್ಲಿ ಯಾವ ಪಕ್ಷಕ್ಕೆ ಅನುಕೂಲ ಅಥವಾ ಯಾವ ಪಕ್ಷಕ್ಕೆ ಅನಾನುಕೂಲ ಎಂದು ಚರ್ಚೆ ಅನಗತ್ಯ. ಹೀಗಾಗಿ ಹೈಕಮಾಂಡ್ ಸೂಚನೆಯಂತೆ ನಾವು ನಡೆಯೋಣ ಎಂದಿದ್ದಾರೆ.

ಸುಮಲತಾ ಅವರು ನಮ್ಮ ಮನೆಯ ಹೆಣ್ಣು ಮಗಳು. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅಂಬರೀಶ್ ಕೂಡ ನನಗೆ ಆತ್ಮೀಯರಾಗಿದ್ದವರು. ಆ ಕುಟುಂಬದ ಜತೆ ಉತ್ತಮ ಸಂಬಂಧ ಹೊಂದಿದ್ದೇವೆ. ಅವರಿಗೆ ನಮ್ಮ ಭಾವನೆಯನ್ನು ತಿಳಿಸಿದ್ದೇವೆ. ಅವರೂ ತಮ್ಮ ಭಾವನೆಯನ್ನು ಹೇಳಿಕೊಂಡಿದ್ದಾರೆ. ಇಲ್ಲಿ ಯಾವುದೇ ಅಸಮಾಧಾನ, ವಿವಾದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ವಿವರಿಸಿದರು.

ಸಚಿವರ ಮಾತಿಗೆ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಮಧು ಮಾದೇಗೌಡ, ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಎಲ್ಲ ನಾಯಕರು ಸಹಮತ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣಾ ದಿನಾಂಕ ಪ್ರಕಟ:ಏ ೧೧ ರಿಂದ ಚುನಾವಣೆ,ಮೇ ೨೩ ಕ್ಕೆ ಫಲಿತಾಂಶ

ನವದೆಹಲಿ: ಲೋಕಸಭಾ ಚುನಾವಣಾ ದಿನಾಂಕ ಪ್ರಕಟಗೊಂಡಿದೆ, ಏಳು ಹಂತದಲ್ಲಿ ಮತದಾನ ನಡೆಯಲಿದ್ದು ಮೇ ೨೩ ರಂದು ಫಲಿತಾಂಶ ಪ್ರಕಟಗೊಳ್ಳಲಿದೆ, ಇಂದಿನಂದಲೇ ನೀತಿ ಸಂಹಿತಿ ಜಾರಿಗೆ ಬಂದಿದ್ದು ಯಾವುದೇ ಹೊಸ ಘೋಷಣೆ ಮಾಡದಂತೆ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣಾ ದಿನಾಂಕ ಪ್ರಕಟಿಸಿದರು.ಒಟ್ಟು ೭ ಹಂತಗಳಲ್ಲಿ‌ ಚುನಾವಣೆ ನಡೆಯಲಿದೆ, ಏಪ್ರಿಲ್ ೧೧ ರಂದು ಮೊದಲ‌ ಹಂತದ ಮತದಾನ,ಏಪ್ರಿಲ್ ೧೮ ಎರಡನೇ‌ ಹಂತ,ಏಪ್ರಿಲ್‌೨೩ ಮೂರನೇ‌ ಹಂತ, ಏಪ್ರಿಲ್ ೨೯ ನಾಲ್ಜನೇ ಹಂತ, ಮೇ‌೬ ಐದನೇ ಹಂತ, ಮೇ ೧೭ ಆರನೇ ಹಂತ , ಮೇ‌ ೧೯ ಏಳನೇ‌ ಹಂತದ ಮತದಾನ ನಡೆಯಲಿದೆ ನಡೆಯಲಿದೆ ಎಂದ್ರು.

ಕರ್ನಾಟಕದಲ್ಲಿ‌ ಎರಡು ಹಂತದ‌ಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ ೧೮ ರಂದು ೧೪ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು,
ಏಪ್ರಿಲ್ ೨೩ ರಂದು ೧೪ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ‌ ೨೩ ರಂದು ಮತಗಳ ಎಣಿಕೆ ನಡೆಯಲಿದೆ ಎಂದ್ರು.

೧೬ ನೇ ಲೋಕಸಭೆ ಜೂನ್ ೩ ಕ್ಕೆ ಮುಕ್ತಾಯಗೊಳ್ಳಲಿದ್ದು,ಚುನಾವಣಾ ಆಯೋಗದಿಂದ ೧೭ ನೇ ಲೋಕಸಭಾ ಚುನಾವಣೆಗೆ ಎಲ್ಲಾ‌ ಸಿದ್ಧತೆ ನಡೆದಿದೆ
ಜ.೨೧,೨೨,೨೩ ರಂದು ಎಲ್ಲಾ ರಾಜ್ಯ್ಳ ಜತೆ ಚರ್ಚೆ ನಡೆಸಲಾಗಿದೆ, ಸರಣಿ ಸಭೆ ನಡೆಸಲಾಗಿದೆ, ಕೇಂದ್ರಾಡಳಿತ ಪ್ರದೇಶಗಳು ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದೇವೆ ತಕ್ಷಣದಿಂದ ನೀತಿ ಸಂಹಿತೆ ಜಾರಿಯಾಗಲಿದೆ ಎಂದ್ರು.

ಎಲ್ಲಾ ರಾಜ್ಯಗಳ ಡಿಜಿ‌ ಐಜಿಪಿ, ಆಯುಕ್ತರ ಜೊತೆ ಚರ್ಚೆ ನಡೆಸಲಾಗಿದೆ,ಎಲ್ಲಾ ಐಟಿ ಅಬಕಾರಿ ಇಲಾಖೆಗಳ ಅಧಿಕಾರಿಗಳ ಜತೆಗೂ ಚರ್ಚಿಸಲಾಗಿದೆ. ಎಲ್ಲಾ ಹಬ್ಬಗಳು ಪರೀಕ್ಷೆಗಳನ್ನು ಪರಿಗಣಿಸಿ ದಿನಾಂಕ ನಿಗದಿ ಮಾಡಲಾಗಿದೆ, ಈ ಬಾರಿ ಒಟ್ಟು ೯೦ ಕೋಟಿ ಮತದಾರರು ‌ಮತಚಲಾಯಿಸಲಿದ್ದಾರೆ, ಹೊಸದಾಗಿ ೧,೫೦ ಕೋಟಿ ಮತದಾರರು ಸೇರ್ಪಡೆಗೊಂಡಿದ್ದಾರೆ, ಸರ್ಕಾರಗಳು ಇಂದಿನಿಂದ ಯಾವುದೇ ಯೋಜನೆಗಳನ್ನು ಘೋಷಿಸುವಂತಿಲ್ಲ ಎಂದ್ರು.

ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ, ವಯೋವೃದ್ಧರು ವಿಶೇಷಚೇತನರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದು, 1950 ಕ್ಕೆ ಕರೆ ಮಾಡಿ ನಿಮ್ಮ ಮತಗಟ್ಟೆಯಲ್ಲಿ ಹೆಸರಿರುವ ಕರಿತು ಪರೀಕ್ಷಿಸಬಹುದು, ೧೧ ರೀತಿಯ ಗುರುತಿನ ಚೀಟಿ ಪರಿಗಣಿಸಲಾಗುತ್ತದೆ,ಮೊದಲ ಬಾರಿಗೆ ಇವಿಎಂನಲ್ಲಿ ಅಭ್ಯರ್ಥಿಗಳ ಫೋಟೋ ಅಳವಡಿಸಿದ್ದು, ಸುಮಾರು ೧೦ ಲಕ್ಷ ಮತಗಟ್ಟೆಗಳ ನಿರ್ಮಿಸಲಾಗುತ್ತಿದೆ ಎಲ್ಲಾ ಕಡೆ ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತದೆ ಎಂದ್ರು.

ಅಭ್ಯರ್ಥಿಗಳು ಫಾರಂ ೨೬ ನಲ್ಲಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ, ನಮೂನೆಯಲ್ಲಿ ಯಾವುದೇ ಅಂಶವನ್ನು ಖಾಲಿಬಿಟ್ಟಲ್ಲಿ ನಾಮಪತ್ರ ತಿರಸ್ಕೃತಗೊಳಿಸಲಾಗುತ್ತದೆ, ಅಭ್ಯರ್ಥಿಗಳ ಕ್ರಿಮಿನಲ್‌ ಹಿನ್ನಲೆ ಬಗ್ಗೆ ದಾಖಲೆ ಸಲ್ಲಿಸಬೇಕು.
ಅಭ್ಯರ್ಥಿಗಳ ಕ್ರಿಮಿನಲ್‌ ಹಿನ್ನಲೆ ಬಗ್ಗೆ ಜಾಹಿರಾತು ನೀಡಬೇಕು,ನಾಮಪತ್ರದಲ್ಲಿ ಪ್ಯಾನ್ ಸಂಖ್ಯೆ ನಮೂದಿಸಬೇಕು,
ರಾತ್ರಿ ೧೦ ರಿಂದ ಬೆ.೬ ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ
ಪಾರದರ್ಶಕ ಮತದಾನಕ್ಕೆ ಸಿಆರ್‌ಪಿಎಫ್‌ ಬಳಕೆ ಮಾಡಲಾಗುತ್ತದೆ ಎಂದರು.

ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಿದವರ,ಹಣ ಹಂಚಿಕೆ ಬಗ್ಗೆ ಮಾಹಿತಿ ನೀಡದವರ ಹೆಸರು ಗೌಪ್ಯವಾಗಿ ಇಡಲಾಗುವುದು, ಮತಗಟ್ಟೆಗಳಲ್ಲಿ ಅಕ್ರಮ ನಡೆದ ಬಗ್ಗೆ ದೂರು ನೀಡಿದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ, ಮೊಬೈಲ್ನಲ್ಲಿ ಆಯೋಗದ ಆ್ಯಪ್ ಬಳಸಿ ದೂರು ನೀಡಬಹುದು ಎಂದ್ರು.

ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ಪ್ರಚಾರಕ್ಕೆ ಲೆಕ್ಕ ಕೊಡಬೇಕು ಮಾಧ್ಯಮಗಳ ಮೇಲೆ ಆಯೋಗದ ಕಣ್ಣಿರಲಿದೆ, ಸೋಷಿಯಲ್‌ಮೀಡಿಯಾ ಪ್ರಚಾರಕ್ಕೆ ಅನುಮತಿ‌ ಅಗತ್ಯ ಎಂದ್ರು.

*Election Commission announces Lok Sabha poll schedule*

Election will be conducted in 7 phases:

Phase 1 to be held on April 1

Phase 2 to be held on April 18

Phase 3 to be held on April 23

Phase 4 to be held on April 29

Phase 5 to be held on May 6

Phase 6 to be held on May 12

Phase 7 to be held on May 19

Counting of votes will take place on May 23

*Phase-wise poll details*

Phase 1: 91 constituencies in 20 states | Phase 2: 97 constituencies in 13 states | Phase 3: 115 constituencies in 14 states | Phase 4: 71 constituencies in 9 states | Phase 5: 51 constituencies in 7 states | Phase 6: 59 constituencies in 7 states | Phase 7 59 in 8 states

*States going in single phase*

Andhra Pradesh, Arunachal Pradesh, Goa, Gujarat, Haryana, Himachal, Kerala, Meghalaya, Mizoram, Nagaland, Punjab, Sikkim, Telangana, Tamil Nadu, Uttarakhand, Andaman and Nicobar, Dadra and Nagar Haveli, Daman and Diu, Lakshadweep, Delhi, Puducherry, Chandigarh

*States going to polls in two phases*

Karnataka, Manipur, Rajasthan, Tripura

*States going to polls in three phases*

Assam, Chhattisgarh

*States going to polls in four phases*

Jharkhand, MP, Maharashtra, Odisha

*States going to polls in five phases*

Jammu & Kashmir

*States going to polls in seven phases*

Bihar, Uttar Pradesh, West Bengal

*The Model Code of Conduct comes into effect from today in the entire country.*

ಬರ ಪರಿಹಾರ, ನರೇಗಾ ಬಾಕಿ ಅನುದಾನ ಬಿಡುಗಡೆ ಮಾಡಲು ಪ್ರಧಾನಿ ಮೋದಿಗೆ ಸಿಎಂ ಮನವಿ!

ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪ್ರಕೃತಿ ವಿಕೋಪ ಪರಿಹಾರ ಹಾಗೂ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಇರುವ ವೇತನ ಮತ್ತು ಸಾಮಗ್ರಿ ವೆಚ್ಚದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ರಾಜ್ಯವು 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರವಾಹ/ ಭೂಕುಸಿತ ಪರಿಸ್ಥಿತಿ ಹಾಗೂ ಬರ ಪರಿಸ್ಥಿತಿಗಳೆರಡನ್ನೂ ಎದುರಿಸಿದೆ. ಕೊಡಗು ಮತ್ತು ಸಮೀಪದ ಮಲೆನಾಡು ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಭೂ ಕುಸಿತದಿಂದ ತೀವ್ರ ಹಾನಿ ಸಂಭವಿಸಿದರೆ, ಇತರ ಭಾಗಗಳಲ್ಲಿ ಅಂದರೆ ರಾಜ್ಯದ 100 ತಾಲ್ಲೂಕುಗಳಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತಲೆದೋರಿತ್ತು. ಇದಕ್ಕೆ ಎಸ್‍ಡಿಆರ್‍ಎಫ್/ ಎನ್‍ಡಿಆರ್‍ಎಫ್ ಮಾರ್ಗಸೂಚಿಗಳ ಪ್ರಕಾರ 2434 ಕೋಟಿ ರೂ. ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಈ ಮೊತ್ತದ ಕೇವಲ ಶೇ. 50 ಕ್ಕೂ ಕಡಿಮೆ ಅಂದರೆ 949.49 ಕೋಟಿ ರೂ. ಪರಿಹಾರ ಮಂಜೂರು ಮಾಡಿದೆ.

ಹಿಂಗಾರಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ 188 ಮಿಮಿ ಮಳೆಯಾಗಬೇಕಾಗಿದ್ದು, ಕೇವಲ 96 ಮಿ.ಮೀ. ಮಳೆ ಆಗಿದ್ದು, ಉತ್ತರ ಒಳನಾಡಿನಲ್ಲಿ ಶೇ. 66 ರಷ್ಟು ಮಳೆ ಕೊರತೆ ಉಂಟಾಗಿತ್ತು. ರಾಜ್ಯದ 176 ತಾಲ್ಲೂಕುಗಳಲ್ಲಿ 156 ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದೆ. ಇದರಲ್ಲಿ 107 ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಹಾಗೂ 49 ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಗುರುತಿಸಲಾಗಿದೆ. ಹಿಂಗಾರು ಅವಧಿಯಲ್ಲಿ 11,384.47 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ.

ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡರಲ್ಲಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಭವಿಸಿದ ನಷ್ಟು 32,335 ಕೋಟಿ ರೂ. ಗಳಷ್ಟಾಗಿದ್ದು, ರಾಜ್ಯದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮಗಳನ್ನು ತೆಗೆದುಕೊಂಡಿದ್ದು, ಎಸ್‍ಡಿಆರ್‍ಎಫ್ ನಿಧಿಯಲ್ಲದೆ ರಾಜ್ಯ ಸರ್ಕಾರದಿಂದ 386 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು, ಮೇವು ಒದಗಿಸುವ ಜೊತೆಗೆ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 8.18 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದಕ್ಕಾಗಿ ಬಾಕಿ ಉಳಿದಿರುವ 1351 ಕೋಟಿ ರೂ. ಗಳಷ್ಟು ವೇತನ ಹಾಗೂ ಸಾಮಗ್ರಿ ವೆಚ್ಚದ ಕೇಂದ್ರದ ಪಾಲನ್ನೂ, ಕೇಂದ್ರದಿಂದ ಅನುದಾನ ಬಿಡುಗಡೆಯನ್ನು ನಿರೀಕ್ಷಿಸಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ. ಆದ್ದರಿಂದ ಈ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಿದರು.

ಇದಲ್ಲದೆ ಈಗಾಗಲೇ ಭಾರತ ಸರ್ಕಾರಕ್ಕೆ ರಾಜ್ಯವು ಪ್ರಸ್ತಾವನೆ ಸಲ್ಲಿಸಿರುವಂತೆ ಬರ ಪರಿಹಾರ ಹಾಗೂ ನಿರ್ವಹಣೆಗೆ ಎಸ್‍ಡಿಆರ್‍ಎಫ್/ ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಅಗತ್ಯವಿರುವ 2064.30 ಕೋಟಿ ರೂ. ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆ ಅವರು ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸತತ ಬರಗಾಲ, ಅನಿಶ್ಚಿತ ಮಳೆಯ ಪರಿಣಾಮವಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕಾದ್ದು ಅತಿ ಅಗತ್ಯವಾದ್ದರಿಂದ ಕೂಡಲೇ ಈ ಅನುದಾನ ಬಿಡುಗಡೆ ಮಾಡುವಂತೆ ಅವರು ಕೋರಿದರು.