ಬೀದಿಗೆ ಬಿದ್ದ ಅಗ್ನಿಸಾಕ್ಷಿ ಅಖಿಲ್ ಸಂಸಾರ!

ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿಯ ನಟ ರಾಜೇಶ್ ಧ್ರುವ ಸಂಸಾರದ ಕಿತ್ತಾಟ ಸದ್ಯಕ್ಕೆ ಮುಗಿಯೋ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಗಂಡ ಹೆಂಡತಿ ಜಗಳ ಬಿದ್ದಿಗೆ ಬಂದಿದ್ದು ಇದೀಗ ಜನಗಳ ಬಾಯಿಗೆ ಆಹಾರವಾಗಿದೆ.

ಅಗ್ನಿಸಾಕ್ಷಿಯ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ಹಾಗೂ ಶೃತಿ ಹಾವು ಮುಂಗುಸಿಗಳ ಹಾಗೆ ಕಿತ್ತಾಡ್ತಿದ್ದಾರೆ. ಇಷ್ಟು ದಿನಗಳ ಕಾಲ ನಾಲ್ಕು ಗೋಡೆಗಳ ಮಧ್ಯೆ ಇದ್ದ ಜಗಳ ಬೀದಿಗೆ ಬಂದು ನಿಂತಿದೆ. ಲವ್ ಮಾಡಿ, ಲಿವಿಂಗ್ ಟುಗೇದರ್ ನಲ್ಲಿದ್ದು, ಮದುವೆಯಾದ ನಟ ರಾಜೇಶ್ ಹಾಗೂ ಶೃತಿ ಬಾಳಲ್ಲಿ ಬಿರುಗಾಳಿ ಎದಿದ್ದೆ.

ಗಂಡನ ವಿರುದ್ಧ ಹೆಂಡತಿ ಸ್ಟೇಷನ್ ಮೆಟ್ಟಿಲು ಹತ್ತಿದ್ರೆ, ಹೆಂಡತಿ ವಿರುದ್ಧ ಗಂಡ ಸಾಕ್ಷಿ ತಂದು ಕೊಟ್ಟಿದ್ದಾನೆ. 2017ರಲ್ಲಿ ಕುಟುಂಬದವ್ರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದ ಜೋಡಿಗಳ ಮಧ್ಯೆ ಬಿರುಗಾಳಿ ಎದ್ದಿದ್ದು, ಕಳೆದ ಜುಲೈನಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ.. ಆದ್ರೆ ನಿನ್ನೆ ಧ್ರುವ ಪತ್ನಿ ಶೃತಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಜೇಶ್ ಧ್ರುವನ ವಿರುದ್ಧ ಪರದಕ್ಷಿಣೆ ಕಿರುಕುಳದ ಕೇಸ್ ರಿಜಿಸ್ಟರ್ ಮಾಡಿದ್ದಾರೆ..

ಶೃತಿ ಕೇಸ್ ಫೈಲ್ ಮಾಡ್ತಿದ್ದಂಗೆ ರಾಜೇಶ್ ಧ್ರುವ ಕೆಂಡ ಮಂಡಲವಾಗಿದ್ದಾರೆ. ತಮ್ಮ ಮೊಬೈಲ್ ನಲ್ಲಿ 2015ರಲ್ಲಿ ರೆಕಾರ್ಡ್ ಮಾಡಿದ್ದ ಶೃತಿ ಡ್ರಿಂಕ್ಸ್ ಮಾಡುತ್ತಿದ್ದ ವಿಡಿಯೋವನ್ನ ವಾಹಿನಿಗಳ ಮುಂದೆ ತಂದಿಟ್ಟು, ನನ್ನ ಹೆಂಡತಿ ಕುಡಿಯುತ್ತಾಳೆ, ನಾನ್ ವೆಜ್ ತಿನ್ನುತ್ತಾಳೆ ಅಂತ ಪ್ರೂಫ್ ನೀಡಿದ್ದಾರೆ. ಆದ್ರೆ ಶೃತಿ ನನಗೆ ಡ್ರಿಂಕ್ಸ್ ತಂದುಕೊಟ್ಟಿದ್ದೇ ರಾಜೇಶ್, ಇದು ತಮಾಷೆಗೆ ಮಾಡಿದ ವಿಡಿಯೋ ಅಂತಿದ್ದಾರೆ..

ರಾಜೇಶ್ ಧ್ರುವಗೆ ಬೇರೆ ಹುಡುಗಿಯ ಜೊತೆ ಸಂಬಂಧ ಇದೆ. ಹೀಗಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ನನ್ನಿಂದ ದೂರವಾಗ್ತಿದ್ದಾರೆ, ಜೊತೆಗೆ ಈ ಹಿಂದೆ ಮೂರುವರೆ ತಿಂಗಳು ಗರ್ಭಿಣಿ ಆಗಿದ್ದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಅಂತ ರಾಜೇಶ್ ಧ್ರುವ ಪತ್ನಿ ಶೃತಿ ಆರೋಪಿಸ್ತಿದ್ದಾರೆ.

ನನಗೆ ವಿಚ್ಚೇದನ ಬೇಕಾಗಿಲ್ಲ. ಇದು ನನ್ನ ಬದುಕಿನ ಪ್ರಶ್ನೆ. ಸಿಲ್ಲಿ ಕಾರಣ ಕೊಟ್ಟು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಇದಕ್ಕೆ ನಾನು ರೆಡಿ ಇಲ್ಲ ಅಂತ ಶೃತಿ ಹೇಳಿದ್ರೆ, ಈಕೆ ನನಗೆ ಬೇಡವೇ ಬೇಡ ಅಂತಿದ್ದಾರೆ ರಾಜೇಶ್ ಧ್ರುವ. ಒಟ್ನಲ್ಲಿ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆಯನ್ನ ರಾಜೇಶ್ ಹಾಗೂ ಶೃತಿ ಸುಳ್ಳು ಮಾಡಿದ್ದಾರೆ.

ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನ!

ಹೈದರಾಬಾದ್: ತೆಲುಗಿನ ಅರುಂಧತಿ, ದೇವಿ ಪುತ್ರುಡು ಚಿತ್ರಗಳ ನಿರ್ದೇಶಕ ಕೋಡಿ ರಾಮಕೃಷ್ಣ ಹೈದ್ರಾಬಾದ್ ನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ‌.

ಕನ್ನಡದ ನಾಗರಹಾವು ಸೇರಿದಂತೆ ನೂರಾರು ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಕೋಡಿ ರಾಮಕೃಷ್ಣ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಹೈದ್ರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ.

ಕೋಡಿ ರಾಮಕೃಷ್ಣ ಕೊನೆಯದಾಗಿ ಕನ್ನಡದ ನಾಗರಹಾವು ಚಿತ್ರವನ್ನ ನಿರ್ದೇಶನ ಮಾಡಿದ್ದರು.

ಹಣಕಾಸಿನ ನಿರೀಕ್ಷೆಯಲ್ಲಿ ನಾಗಮಂಡಲ ವಿಜಯಲಕ್ಷ್ಮಿ!

ಬೆಂಗಳೂರು: ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಜ್ವರ ಹಾಗೂ ಹೈ ಬಿಪಿ ಸಮಸ್ಯೆಯಿಂದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗಾಗಿ ಹಣಕಾಸಿನ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಖ್ಯಾತ ನಟಿ ವಿಜಯಲಕ್ಷ್ಮೀ ಕುಟುಂಬ ಹಣಕಾಸಿನ ಸಮಸ್ಯೆಯಲ್ಲಿದ್ದು ಹಣಕಾಸಿನ ನಿರೀಕ್ಷೆಯಲ್ಲಿದ್ದಾರೆ. ವಿಜಯಲಕ್ಷ್ಮೀ ಚಿಕಿತ್ಸಾ ವೆಚ್ಚ ಅಂದಾಜು ಒಂದು ಲಕ್ಷ ಆಗಲಿದ್ದು ನಮಗೆ ಧನಸಹಾಯ ಮಾಡಿ, ಅದನ್ನ ದುಡಿದು ತೀರಿಸುತ್ತೇವೆ ಎಂದು ವಿಜಯಲಕ್ಷ್ಮೀ ಅಕ್ಕ ಮನವಿ ಮಾಡಿದ್ದಾರೆ.

ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿದ್ದ ವಿಜಯಲಕ್ಷ್ಮೀಗೆ ಸಿನಿಮಾ ರಂಗದ ಕಡೆಯಿಂದ ಸಹಾಯ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ವಿಜಯಲಕ್ಷ್ಮೀ ಕುಟುಂಬ ಇದೆ.

ರಫೇಲ್ ವಿಷಯ ಮುಂದಿಟ್ಟು ಹೆಚ್ಎಎಲ್ ಟೀಕೆ: ಮಾಧನವನ್ ಅಸಮಧಾನ!

ಬೆಂಗಳೂರು: ರಫೇಲ್ ವಿಚಾರವನ್ನಿಟ್ಟುಕೊಂಡು ಹೆಚ್ ಎ ಎಲ್ ಸಾಮರ್ಥ್ಯ ದ ಬಗ್ಗೆ ಟೀಕೆ ಮಾಡಿದ್ರಿಂದ ಸಹಜವಾಗಿ ಬೇಸರವಾಗಿದೆ. ಆದ್ರೇ‌ ನಾವು ಈ‌ ವಿಚಾರದಲ್ಲಿ ಸ್ಥೈರ್ಯ ಕಳೆದುಕೊಂಡಿಲ್ಲ ಎಂದು ಹೆಚ್ಎಎಲ್ ಅಧ್ಯಕ್ಷ ಮಾಧವನ್ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜೊತೆ ಒಪ್ಪಂದಕ್ಕೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ರು.

ಯಲಹಂಕ ವಾಯುನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಧವನ್, ಹೆಚ್.ಎ.ಎಲ್ ನೇತೃತ್ವದಲ್ಲಿ ಶೋ ನಡೆಸಲಾಗ್ತಿದೆ. ಎರಡು ರೀತಿಯ ಇಂಜಿನ್ ಡಿಸ್‌ ಪ್ಲೇ ಹಾಕಲಾಗಿದೆ. ಹೊಸದಾಗಿ ಹೆಲಿಕಾಪ್ಟರ್ ತಯಾರಿಸಲಾಗಿದ್ದು, ನೌಕಾಸೇನೆಗೆ ಸಾಕಷ್ಟು ಉಪಯೋಗವಾಗಲಿದೆ. ಕಡಿಮೆ ತೂಕದ ಹೆಲಿಕಾಪ್ಟರ್‌ಗಳ ತಯಾರಿಕೆ ಮಾಡಲಾಗಿದೆ‌ ಎಂದರು.

ಹೆಚ್.ಎ.ಎಲ್ ನಷ್ಟದಲ್ಲಿದೆ ಅನ್ನೋದು ಸುಳ್ಳು ಮಾಹಿತಿ.
ಆರ್ಥಿಕವಾಗಿ ಹೆಚ್.ಎ.ಎಲ್ ಸದೃಡವಾಗಿದೆ. ಕಳೆದ ಡಿಸೆಂಬರ್ ಮಾಹಿತಿಯ ಪ್ರಕಾರ ಆರ್ಥಿಕತೆ ಹೆಚ್ಚಳವಾಗಿದೆ. ನೌಕರರಿಗೆ ಸಂಬಳ ಸಿಗದಿರೋದಕ್ಕೆ ಹಲವು ಕಾರಣಗಳಿವೆ.
ಹೊಸ ಹೊಸ ಪ್ರಾಜೆಕ್ಟ್‌ಗಳನ್ನ ಮಾಡಲು ನಾವು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.

ಹೆಚ್.ಎ.ಎಲ್ ನಿರ್ಮಿತ ಮಿರಾಜ್ 2000 ವಿಮಾನ ಪತನದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಹೊಣೆಯನ್ನು ನಾವೇ ಹೊರುತ್ತೇವೆ. ಏರ್ ಫೋರ್ಸ್ ಗೆ ಎಲ್ಲಾ ರೀತಿಯಲ್ಲೂ ನಾವು ಸಹಕಾರ ನೀಡುತ್ತೇವೆ. LCA ಹೆಲಿಕಾಪ್ಟರ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಹೆಚ್.ಎ.ಎಲ್ ನಿಂದ ರಫ್ತು ಮಾಡಲಾಗ್ತಿದೆ. IAF ನಿಂದ ಹೊಸ 83ಮಾಕ್ -1 ವಿಮಾನಕ್ಕೆ ಬೇಡಿಕೆ ಇಟ್ಟಿದ್ದಾರೆ. 2022ಕ್ಕೆ 83 ಮಾಕ್-1 ಸಿದ್ದವಾಗಲಿದೆ‌ ಎಂದು ಮಾಹಿತಿ ನೀಡಿದರು.

ಹೆಚ್.ಎ.ಎಲ್ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ ಆದ್ರೆ ಸಂಸ್ಥೆಯಿಂದ ಯಾವುದೇ ಮಾಹಿತಿ ನೀಡುವುದಿಲ್ಲ. ಪದೇ ಪದೇ ಏರ್ ಕ್ರಾಫ್ಟ್ ಆಗ್ತಿರೋದ್ರಿಂದ ಯಾವುದೇ ಸಮಸ್ಯೆ ಇಲ್ಲ. ನಮಗೆ ಬರುವ ವಿಮಾನ ತಯಾರಿಕೆ ಆರ್ಡರ್‌ನಲ್ಲಿ ಕಡಿಮೆಯಾಗಿಲ್ಲ. ಹೆಚ್ಎಎಲ್ ಗುಣಮಟ್ಟ ಕಡಿಮೆಯಾಗಿದೆ ಅನ್ನೋದು ಸುಳ್ಳು ನಾವು ಕ್ವಾಲಿಟಿಯ ಜೊತೆಗೆ‌ ಎಂದೂ ರಾಜೀ ಮಾಡಿಕೊಂಡಿಲ್ಲ. ನಾವು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡುತ್ತಿದ್ದೇವೆ ಎಂದರು.

ತೇಜಸ್ ನಲ್ಲಿ ಹಾರಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್!

ಬೆಂಗಳೂರು: ದೇಶಿಯ ತಂತ್ರಜ್ಞಾನದಿಂದ ಹೆಚ್ಎಎಲ್ ತಯಾರಿಸಿರುವ ತೇಜಸ್ ಲಘು‌ ಯುದ್ದ ವಿಮಾನ ದೇಶದ ರಕ್ಷಣಾ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿಶ್ವಾಸ ವ್ಯಕ್ತಪಡಿಸಿದ್ರು.

ಏರ್ ಶೋ ಪ್ರದರ್ಶನದ ವೇಳೆ ಭಾರತೀಯ ವಾಯುಪಡೆಯ ಹೆಮ್ಮೆಯ ಲೋಹದ ಹಕ್ಕಿ ತೇಜಸ್ ಹಗುರ ಯುದ್ಧ ವಿಮಾನದಲ್ಲಿ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಹ ಪೈಲಟ್ ಆಗಿ ಪ್ರಯಾಣಿಸಿದರು.ರಕ್ಷಣಾ ಇಲಾಖೆಯ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ವಿಜಯ್ ರಾಘವನ್ ಕೂಡ ತೇಜಸ್ ನಲ್ಲಿ ಪಯಣ ಮಾಡಿದರು.

ತೇಜಸ್ ನಲ್ಲಿ ಹಾರಾಟ ಮುಗಿಸಿ ಮಾತನಾಡಿದ ಜನರಲ್ ರಾವತ್, ದೇಶೀ ನಿರ್ಮಿತ ತೇಜಸ್ ಅದ್ಬುತವಾಗಿದೆ ಗುರಿಯನ್ನು ನಿಖರವಾಗಿ ಮುಟ್ಟಲಿದೆ ಪೈಲಟ್ ಆಗಿದ್ದ ಏರ್ ವೈಸ್ ಮಾರ್ಷಲ್ ತಿವಾರಿ ವಿಮಾನದ ಬಗ್ಗೆ ವಿವರವಾಗಿ ತಿಳಿಸದರು,ಸುಮಾರು ಅರ್ಧ ಗಂಟೆ ಹಾರಾಟ ನಡೆಸಿದೆ ಡೆಫೆನ್ಸ್ ಅವಶ್ಯಕತೆಗೆ ತಕ್ಕ ವಿಮಾನ ಇದಾಗಿದೆ ಎಲ್ಲ ಹವಾಗುಣಕ್ಕೆ ತಕ್ಕಂತೆ ವಿಮಾನ ಡಿಸೈನ್ ಮಾಡಲಾಗಿದೆ ಹಾರಾಟ ನಡೆಸಿ‌ ಖುಷಿಯಾಗಿದೆ ಎಂದ್ರು.

ವಿಮಾನದ ರಡಾರ್ ಮೋಡ್ ಬಹಳ ಚೆನ್ನಾಗಿದೆ
ಈ ಅದ್ಭುತ ವಿಮಾನ ನಿರ್ಮಾಣ ಮಾಡಿದ ಡಿಆರ್ ಡಿಒ ಮತ್ತು ಎಚ್ ಎ ಎಲ್ ಗೆ ಧನ್ಯವಾದ,ಇದು ರಾಷ್ಟಕ್ಕೆ ಯಾವ ರೀತಿ ಸಹಾಯ ಆಗಲಿದೆ ಎಂದು ಏರ್ ಫೋರ್ಸ್ ಹೇಳಲಿದೆ ಇದು ಡೆಫೆನ್ಸ್ ಗೆ ಸೇರಿದರೆ ದೇಶದ ಶಕ್ತಿ ಇಮ್ಮಡಿಯಾಗಲಿದೆ
ವಿಮಾನದ ಕಿಯೋನಿಕ್ಸ್ ಬಹಳ ಅಡ್ವಾನ್ಸ್ಡ್ ಆಗಿದೆ ಎಂದ್ರು.

ಕಡೆಗೂ ಶಾಸಕ ಗಣೇಶ್ ಬಂಧನ!

ಸೋಮನಾಥ: ಕಾಂಗ್ರೆಸ್ ಶಾಸಕ ಆನಂದಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್ ಕೊನೆಗೂ ಬಂಧಿಸಲ್ಪಟ್ಟಿದ್ದಾರೆ.ಖಚಿತ ಮಾಹಿತಿ ಮೇರೆಗೆ ಗುಜರಾತ್ ಗೆ ತೆರಳಿದ ಬಿಡದಿ ಪೊಲೀಸರು ಗಣೇಶ್ ರನ್ನು ವಶಕ್ಕೆ ಪಡೆದಿದ್ದಾರೆ.

ಜನವರಿ 19 ರಂದು ಬಿಡದಿಯ ಈಗಲ್ ಟನ್ ರೆಸಾರ್ಡ್ ನಲ್ಲಿ ನಡೆದಿದ್ದ ಆನಂದಸಿಂಗ್ ‌ಮೇಲಿನ ಹಲ್ಲೆ ಕೊಲೆ ಯತ್ನ ಪ್ರಕರಣದಲ್ಲಿ ವಾಟೆಂಡ್ ಆಗಿದ್ದ ಗಣೇಶ್ ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದು, ಬಿಡದಿ ಸಬ್ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಇಂದು ಬಂಧಿಸಲಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಗಣೇಶ್ ನಂತರ ಅರ್ಜಿ ವಾಪಸ್ ಪಡೆದಿದ್ದರು ಅದರ ನಡುವೆಯೇ ಗುಜರಾತ್ ನ ಸೋಮನಾಥದಲ್ಲಿ ಗಣೇಶ್ ಬಂಧನವಾಗಿದ್ದು, ರಾತ್ರಿ ವೇಳೆಗೆ ಗಣೇಶ್ ರನ್ನು ರಾಮನಗರಕ್ಕೆ ಕರೆತರುವ‌ ಸಾಧ್ಯತೆ ಇದೆ ಎನ್ನಲಾಗಿದೆ.

ರಾತ್ರಿಯೇ ನ್ಯಾಯಧೀಶರ ಮುಂದೆ ಹಾಜರು ಪಡಿಸಲಿರುವ ಪೊಲೀಸರು ನಂತರ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಸರೆ.
ಕೊಲೆ ಯತ್ನ ಆರೋಪಿಯಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕು, ಆರೋಪಿಯನ್ನು ಕರೆದೊಯ್ದು ಮಹಜರ್ ನಡೆಸಬೇಕು ಈಗಲ್ ಟನ್ ರೇಸಾರ್ಟ್ ನಲ್ಲಿ ಮಹಜರ್ ನಡೆಸಬೇಕು ಈ ಹಿನ್ನಲೆ ಕನಿಷ್ಟ 3 ದಿನ ಪೊಲೀಸರ ವಶಕ್ಕೆ ನೀಡುವಂತೆ ಪೊಲೀಸರು ಕೇಳಲಿದ್ದಾರೆ.