ಕೆಆರ್ ಪುರಂ ಉತ್ಸವದಲ್ಲಿ ಸಿದ್ದಗಂಗಾ ಶ್ರೀಗಳ 111 ಅಡಿ ಕಟೌಟ್

ಬೆಂಗಳೂರು, ಫೆಬ್ರವರಿ 20: ಸಿಲಿಕಾನ್ ಸಿಟಿ ಬೆಂಗಳೂರು ಇದೇ ಮೊದಲ ಬಾರಿಗೆ ಅತ್ಯದ್ಭುತವಾದ ಸಾಂಸ್ಕೃತಿಕ ಉತ್ಸವಕ್ಕೆ ಸಾಕ್ಷಿಯಾಗಲಿದೆ.  ಫೆಬ್ರವರಿ  24 ರಿಂದಮಾರ್ಚ್ 10 ರವರೆಗೆ ಕೆ.ಆರ್.ಪುರ ಉತ್ಸವ ನಡೆಯಲಿದೆ.ಒಟ್ಟು15 ದಿನಗಳ ಕಾಲ ನಡೆಯಲಿರುವ ಈ ಸಾಂಸ್ಕøತಿಕ ಉತ್ಸವಹಲವಾರು ಅಚ್ಚರಿಗಳು, ಮನೋರಂಜನೆ, ಮಾರ್ಗದರ್ಶಿಉಪನ್ಯಾಸಗಳು  ಸೇರಿದಂತೆ  ಇನ್ನಿತರೆ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಒದಗಿಸಿಕೊಡಲಿದೆ.

ಬರೋಬ್ಬರಿ 15 ದಿನಗಳ ಕಾಲ ನಡೆಯುತ್ತಿರುವ  ಸಾಂಸ್ಕೃತಿಕ ಉತ್ಸವ ಇದಾಗಿದ್ದು,  ಸಮಾಜ  ಸೇವಕರಾದ  ಕೆ.ಎನ್.ಪ್ರಕಾಶ್ ಅಧ್ಯಕ್ಷತೆಯ ವಲ್ರ್ಡ್  ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್  ನೇತೃತ್ವದಲ್ಲಿ ವೀರ್‍ಗ್ರೂಪ್ ಸಂಸ್ಥೆಯ  ಉಸ್ತುವಾರಿಯಲ್ಲಿ  ಈ  ಉತ್ಸವನಡೆಯುತ್ತಿದೆ.

ಈ ಉತ್ಸವದ ಹಿಂದಿನ ಉದ್ದೇಶ ಸಮಾಜಸೇವೆಯಾಗಿದೆ. ಇದರಿಂದ ಸಂಗ್ರಹವಾಗುವ  ಹಣವನ್ನು  ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುತ್ತದೆ.  ಗುದ್ದಲಿ ಪೂಜೆಯ ನಂತರ  ಈ ಮಹತ್ವದ ಉತ್ಸವದ  ಬಗ್ಗೆ ಮಾಹಿತಿ ನೀಡಿದ  ವಲ್ರ್ಡ್  ಹೆಲ್ತ್ ಅಂಡ್ಪಾವರ್ಟಿ  ಟ್ರಸ್ಟ್‍ನ ಅಧ್ಯಕ್ಷರಾದ ಕೆ.ಎನ್.ಪ್ರಕಾಶ್,ಇದು ಕೇವಲ ಕೆ.ಆರ್.ಪುರ ಉತ್ಸವವಲ್ಲ. ಇದು ಇಡೀ ಬೆಂಗಳೂರಿನ ಉತ್ಸವವಾಗಿದೆ. ಸತತ 15 ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ನಾಡಿನ ವಿವಿಧ  ಕ್ಷೇತ್ರಗಳ ದಿಗ್ಗಜರು ವೇದಿರೆ  ಎಂದರು.

ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಬೃಹತ್ ಕಟೌಟ್‍ಗೆ ಹೈಡ್ರಾಲಿಕ್ ಕ್ರೇನ್ ಮೂಲಕ  ಪುಷ್ಪಾರ್ಚನೆ ನಡೆಸಲಾಗುತ್ತದೆ. ನಾವು ಜನರಿಗೆ  ಮನೋರಂಜನೆ ನೀಡುವುದಷ್ಟಕ್ಕೆ ಈ  ಕಾರ್ಯಕ್ರಮವನ್ನು  ಸೀಮಿತಗೊಳಿಸಿಲ್ಲ. ಬದಲಾಗಿ  ಮನೋರಂಜನೆಯ ಜೊತೆ ಮಾನವತೆಯ
ಸಾರ್ಥಕತೆ ಎಂಬ ಟ್ಯಾಗ್‍ಲೈನ್‍ನೊಂದಿಗೆ  ಕಾರ್ಯಕ್ರಮ ನಡೆಸುತ್ತಿದ್ದೇವೆ. ಈಕಾರ್ಯಕ್ರಮದ  ಮೂಲಕ ಹಲವಾರು ಸಮಾಜಮುಖಿಕಾರ್ಯಕ್ರಮಗಳನ್ನು ಪ್ರಕಟಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾಗಿಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ  ಗ್ರಾಮ ದತ್ತು ತೆಗೆದುಕೊಳ್ಳುವ  ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.

ಈ ಗ್ರಾಮದಲ್ಲಿ ತುಂಡುಬಟ್ಟೆಗಳಲ್ಲಿ ಹೆಣೆದ ಜೋಪಡಿಗಳಲ್ಲಿ 180ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಜನಸಂಖ್ಯೆ ಸುಮಾರು 3  ಸಾವಿರದಷ್ಟಿದೆ.  ಕಿಂದರಿಜೋಗಿ ಎಂದು ಕರೆಯಲ್ಪಡುವ ಈ ಜನಾಂಗ   ಮೂಲತಃ ಜಾನಪದ ಕಲಾವಿದರನ್ನು ಹೊಂದಿದೆ.  ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಕುಟುಂಬಗಳಿವು. ಅಗತ್ಯ ಮೂಲಭೂತ ಸೌಲಭ್ಯಗಳಿಂದ
ವಂಚಿತವಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಗೆ ಕುಡಿಯುವ ನೀರು, ವಿದ್ಯುತ್,
ಮಕ್ಕಳಿಗೆ ಶಿಕ್ಷಣ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವ ನಿರ್ಧಾರ ಮಾಡಿದ್ದೇವೆ ಎಂದರು.

ಇದಲ್ಲದೇ, ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಕಟೌಟ್‍ಗೆ ಪುಷ್ಪಾರ್ಚನೆ
ಸಲ್ಲಿಸಲಾಗುತ್ತದೆ ಮತ್ತು ಸಿದ್ದಗಂಗಾ ಮಠದಲ್ಲಿ  ವ್ಯಾಸಂಗ ಮಾಡುತ್ತಿರುವ 111ವಿದ್ಯಾರ್ಥಿಗಳ  ಶೈಕ್ಷಣಿಕ ಖರ್ಚು ಮತ್ತು ಅವರ ಇತರೆ ಖರ್ಚುಗಳನ್ನು ವೀರ್ ಗ್ರೂಪ್ ಭರಿಸಲಿದೆ
ಎಂದು ತಿಳಿಸಿದರು.

ಈ ಸಾಂಸ್ಕೃತಿಕ ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ರಂಗದ ದಿಗ್ಗಜ ಕ್ರೇಜಿಸ್ಟಾರ್  ರವಿಚಂದ್ರನ್  ಮತ್ತು ಸಂಗೀತ ಮಾಂತ್ರಿಕ ಹಂಸಲೇಖ ಅವರು ಹಲವು ವರ್ಷಗಳ ನಂತರ ಇದೇ ಮೊದಲ  ಬಾರಿಗೆ ಫೆಬ್ರವರಿ 24 ರಂದು ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ.ರವಿಹಂಸ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಇಬ್ಬರೂ ಸಂಗೀತ ರಸಸಂಜೆಯನ್ನು
ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮಾತನಾಡಿದ ಸಿದ್ದಗಂಗಾ ಮಠದ ಸಿ ಮಹಾಸ್ವಾಮೀಜಿ ಅವರು,“ ವಲ್ರ್ಡ್  ಹೆಲ್ತ್ ಅಂಡ್
ಪಾವರ್ಟಿಟ್ರಸ್ಟ್ ಮತ್ತು ವೀರ್ ಗ್ರೂಪ್ ಸಂಸ್ಥೆಗಳು ಹಲವಾರುಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ.  ನಮ್ಮ ಸಿದ್ದಗಂಗಾ  ಮಠದಮ 111 ಮಕ್ಕಳವಿದ್ಯಾಭ್ಯಾಸದ  ಎಲ್ಲಾ ಖರ್ಚುಗಳನ್ನು ಈ ಸಂಸ್ಥೆಗಳೇ ವಹಿಸಿಕೊಳ್ಳುತ್ತಿರುವುದು ಆದರ್ಶಪ್ರಾಯವಾಗಿದೆ’’  ಎಂದು ಬಣ್ಣಿಸಿದರು.

“ಇದೇ ರೀತಿ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮ ದತ್ತುತೆಗೆದುಕೊಂಡು ಅಲ್ಲಿನ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನುಒದಗಿಸಲು ಮುಂದಾಗಿರುವುದು ವಲ್ರ್ಡ್ ಹೆಲ್ತ್ ಅಂಡ್ ಪಾವರ್ಟಿಟ್ರಸ್ಟ್‍ನ ಸಮಾಜಮುಖಿ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ’’ಎಂದು ಶ್ಲಾಘಿಸಿದರು.

ಶಾಸಕರ ರೆಸಾರ್ಟ್ ಗಲಾಟೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಪ್ರಕರಣ ಇತ್ಯರ್ಥಕ್ಕೆ ಸ್ವಾಮೀಜಿ ಎಂಟ್ರಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರೆಸಾರ್ಟ್ ‌ನಲ್ಲಿ ಶಾಸಕರ ಹೊಡೆದಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಇತ್ಯರ್ಥಕ್ಕೆ ಸ್ವಾಮೀಜಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ‌.

ಹೌದು, ಕಂಪ್ಲಿ ಶಾಸಕ ಗಣೇಶ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ರೆಸಾರ್ಟ್ ನಲ್ಲಿ ಪರಸ್ಪರ ಬಡಿದಾಡಿಕೊಂಡು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕಾಂಗ್ರೆಸ್ ಪಕ್ಷದಲ್ಲಿದ್ದ ಬಂಡಾಯ ಸದ್ಯಕ್ಕೆ ಶಮನವಾಗಿದ್ದು, ಇದೀಗ ಪ್ರಕರಣ ಇತ್ಯರ್ಥ ಪಡಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಬ್ಬರೂ ಶಾಸಕರನ್ನು ಒಂದುಗೂಡಿಸುವ  ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ನಿನ್ನೆ ಕಂಪ್ಲಿ ಗಣೇಶ್, ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಪ್ರಕರಣ ಹಿಂಪಡೆಯಲು‌ ಮನವೊಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ‌.

ಆದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವ ನಾಯಕರು ಮನವರಿಕೆ ಮಾಡಿಕೊಟ್ಟರು ಆನಂದ್ ಸಿಂಗ್ ಮಾತ್ರ ಪ್ರಕರಣ ಹಿಂಪಡೆಯಲು ಒಪ್ಪುತ್ತಿಲ್ಲ. ಹೀಗಾಗಿ ರಾಜಕಾರಣಿ ಗಳಿಂದ ಇಬ್ಬರನ್ನೂ ಒಂದುಗೂಡಿಸುವುದು ಕಷ್ಟವಿದೆ. ಸ್ವಾಮೀಜಿ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಮಾಜಿ ಸಿಎಂ ಸಲಹೆ ನೀಡಿದ್ದಾರೆ.

ಹರಿಹರ ವಾಲ್ಮೀಕಿ‌‌ ಮಠದ ಪ್ರಸನ್ನಾನಂದ ಸ್ವಾಮೀಜಿ ಮೇಲೆ ಆನಂದ್ ಸಿಂಗ್ ವಿಶೇಷ ಗೌರವ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸ್ವಾಮೀಜಿಯನ್ನು ಮುಂದಿಟ್ಟುಕೊಂಡು ಸಮಸ್ಯೆ ಇತ್ಯರ್ಥ ಕೈ ನಾಯಕರು ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದ್ದು, ಪ್ರಕರಣ ವಾಪಸ್ ಪಡೆಯಲು ಮನವೊಲಿಸುತ್ತೇನೆಂದು ಸ್ವಾಮೀಜಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಸ್ವಾಮೀಜಿ ಭರವಸೆ ಕೊಟ್ಟ ಬೆನ್ನಲ್ಲೇ ಗಣೇಶ್ ನೀರಿಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದಿದ್ದಾರೆ.

12 ನೇ ಏರ್ ಶೋಗೆ ರಕ್ಷಣಾ ಸಚಿವೆ ಚಾಲನೆ: ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭ

ಬೆಂಗಳೂರು: 12 ನೇ ಆವೃತ್ತಿಯ ಏರ್ ಶೋಗೆ ಸಿಲಿಕಾನ್ ಸಿಟಿಯಲ್ಲಿ ಚಾಲನೆ ಸಿಕ್ಕಿದೆ, ಐದು‌ದಿನಗಳ ಕಾಲ ಯಲಹಂಕ ವಾಯು ನೆಲೆಯಲ್ಲಿ ಲೋಹದ ಹಕ್ಕಿಗಳು‌ ಸಾಹಸ ಪ್ರದರ್ಶನ ನಡೆಯಲಿದ್ದು ವೈಮಾನಿಕ ಕ್ಷೇತ್ರದ ದೊಡ್ಡ ಮಟ್ಟದ ವಹಿವಾಟಿಗೂ ಏರೋ ಇಂಡಿಯಾ ಸಾಕ್ಷಿಯಾಗಲಿದೆ.

ಯಲಹಂಕ ವಾಯು ನೆಲೆಯಲ್ಲಿ ಏಷ್ಯಾದ ಅತಿದೊಡ್ಡ ಏರ್ ಶೋಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಸರಾಮನ್ ಚಾಲನೆ ನೀಡಿದರು.ಪೈಲಟ್ ಸಾಹಿಲ್ ಗಾಂಧಿ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಿ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವೈಮಾನಿಕ ಪ್ರದರ್ಶನ ವೀಕ್ಷಿಸಿ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.

ಈ ವೇಳೆ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್,ಬೆಂಗಳೂರಿಗೆ ಏರೋ ಇಂಡಿಯಾ ದೊಡ್ಡ ಹೆಮ್ಮೆಯ ಸಮಾರಂಭ.12 ನೇ ಏರ್ ಶೋ ಕೂಡಾ ಬೆಂಗಳೂರಲ್ಲೇ ನಡೆಯುತ್ತಿರುವುದು ಖುಷಿಯ ವಿಚಾರ, 600 ಭಾರತೀಯ ಕಂಪೆನಿಗಳು ಮತ್ತು 400 ವಿದೇಶಿ ಕಂಪೆನಿಗಳು ಭಾಗಿಯಾಗುತ್ತಿವೆ,ನಾಗರಿಕ ವಿಮಾನಯಾನ ಕೂಡ‌ ಈ ಬಾರಿ ಕೈಜೋಡಿಸಿದೆ.ಏರೋ ಇಂಡಿಯಾ ಕಾರ್ಯಕ್ರಮ ವಿಮಾನಯಾನ ಮತ್ತು ವೈಮಾನಕ ಕ್ಷೇತ್ರವನ್ನು ಇದೇ ಮೊದಲ ಬಾರಿಗೆ ಒಂದೆಡೆ ಸೇರಿಸಿದೆ ಭಾರತವನ್ನು ವಿಶ್ವದ ದಿಗ್ಗಜರ ಜೊತೆ ನಿಲ್ಲಿಸುವ ಕೆಲಸವನ್ನು ಏರ್ ಶೋ ಮಾಡುತ್ತದೆ ಮೇಕ್ ಇನ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಬಹಳ ಒತ್ತು ಕೊಟ್ಟಿದ್ದಾರೆ ಐಟಿ ಸೆಕ್ಟರ್ ಒಟ್ಟಾರೆ ಆದಾಯ ಮತ್ತು ಜಿಡಿಪಿಗೆ ಬಹುದೊಡ್ಡ ಕೊಡುಗೆ ಕೊಡ್ತಿದೆ, ಅದ್ರಲ್ಲೂ ಬೆಂಗಳೂರು ಈ ವಿವಾರದಲ್ಲಿ ಮುಂಚೂಣಿಯಲ್ಲಿದೆ ಎಂದ್ರು.

127,500 ಕೋಟಿ ಹಣವನ್ನು ರಕ್ಷಣಾ ಇಲಾಖೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಯುದ್ಧೋಪಕರಣಗಳ ಕೊಳ್ಳುವಿಕೆಗೆ ಖರ್ಚುಮಾಡಲಾಗಿದೆ, ಇದು ನಮ್ಮ ದೇಶದ ವಹಿವಾಟಿಗೆ ಬಹುದೊಡ್ಡ ಬೆಂಬಲ ನೀಡಲಿದೆ,ಬೇರೆ ದೇಶಗಳಿಗಿಂತ ಹೆಚ್ಚಾಗಿ ನಮ್ಮ ದೇಶದ ವೆಂಡರ್ಸ್ ಗೆ ಇದರ ಆರ್ಡರ್ ಕೊಡಲಾಗ್ತಿದೆ, ವಿದೇಶಿ ಹೂಡಿಕೆ 42% ಅವಕಾಶವಿದೆ, ಉಳಿದದ್ದು ಸರ್ಕಾರವೇ ಮಾಡಲಿದೆ,237 ಕೋಟಿಗೆ ಅವಕಾಶ ನೀಡಲಾಗಿತ್ತು, ಅದರಲ್ಲಿ ಈಗಾಗಲೇ 200 ಕೋಟಿ ಬಳಕೆಯಾಗಿದೆ, ಹೊಸೂರು ಮತ್ತು ಉತ್ಯರಪ್ರದೇಶದಲ್ಲಿ ಹೆಚ್ಚಿನ ರಕ್ಷಣಾ ಪರಿಕರಗಳ ತಯಾರಿಕೆ ನಡೆಯುತ್ತಿದೆ,ನಮ್ಮ ದೇಶದಲ್ಲಿ ತಯಾರಾಗುವ ಅನೇಕ ವಿಮಾನಗಳು, ವೈಮಾನಿಕ ಪರಿಕರಗಳು ನೇಪಾಳ, ಇಸ್ರೇಲ್, ರಷ್ಯಾ, ಬೋಟ್ಸ್ವಾನಾ, ಮೊರೀಶಿಯಸ್ ಗಳಿಗೆ ರಫ್ತಾಗುತ್ತಿವೆ
ಇದೆಲ್ಲಾ ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ವಿಚಾರ ಎಂದ್ರು

ನಂತರ ಮಾತನಾಡಿದ
ಕೇಂದ್ರ ಸಿವಿಲ್ ಏವಿಯೇಶನ್ ಸಚಿವ ಸುರೇಶ್ ಪ್ರಭು
ನಮ್ಮ ದೇಶದ ವೈಮಾನಿಕ ಉದ್ಯಮ ಕಳೆದ ನಾಲ್ಕು ವರ್ಷಗಳಲ್ಲಿ ಶತಮಾನದ ಎ.30 ಹೆಚ್ಚಿದೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ,65 ಬಿಲಿಯನ್ ಡಾಲರ್ಸ್ ನಲ್ಲಿ 103 ಹೊಸ ಏರ್ಪೋರ್ಟ್ ಗಳು ಭಾರತದಲ್ಲಿ ಆರಂಭವಾಗಲಿದೆ ದೇಶದ ಮೂರು ಮೂಲೆಗಳಿಗೆ ವಿಮಾನ ಪ್ರಯಾಣ ದೊರೆಯಲಿದೆ,ಸಣ್ಣ ಊರುಗಳಲ್ಲಿ ಕೂಡಾ ವಿಮಾನ ಹಾರಾಟ ನಡೆಯಲಿದೆ, ವಿಶನ್ 2040 ಎನ್ನುವ ಗುರಿಯಿಟ್ಟುಕೊಂಡಿದ್ದೇವ 2300 ಹೊಸ ವಿಮಾನಗಳು ಭಾರತಕ್ಕೆ ಅವಶ್ಯಕತೆ ಇದೆ, ಹೆಚ್ಚಿನ ಪ್ರಮಾಣದಲ್ಲಿ ಆ ವಿಮಾನಗಳನ್ನು ನಮ್ಮ ದೇಶದಲ್ಲೇ ತಯಾರಿಸುವ ಉದ್ದೇಶವಿದೆ,ನಾವು ಅನೇಕ ದೇಶಗಳ ಜೊತೆ ಚರ್ಚಿಸಿ ವೈಮಾನಿಕ ಉದ್ಯಮ ಹೆಚ್ಚಿಸುವಲ್ಲಿ ಕಾರ್ಯನಿರತವಾಗಿದ್ದೇವ ಎಲ್ಲಾ ಉದ್ಯಮದವರಿಗೂ ಈ ಏರ್ ಶೋ ಒಳ್ಳೆ ಅವಕಾಶ ನೀಡಲಿದೆ, ಏರೋ ಇಂಡಿಯಾ ನಮ್ಮ ಹೆಮ್ಮೆಯ ಕಾರ್ಯಕ್ರಮ ಎಂದರು.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತನಾಡಿ ಸಾಹಿಲ್ ಗಾಂಧಿ ನಿಧನಕ್ಕೆ ಸಂತಾಪ ಸೂಚಿಸಿದರು.ರಕ್ಷಣಾ ವಲಯಕ್ಕೆ ಏರೋ ಇಂಡಿಯಾ ಬಹಳ ಪ್ರಾಮುಖ್ಯತೆ ಇರುವ ಕಾರ್ಯಕ್ರಮ ಕಳೆದ ವರ್ಷ ರಾಜ್ಯದ 12 ಟ್ರಿಲಿಯನ್ ಜಿಆರ್ಡಿಪಿ ಇತ್ತು ನಮ್ಮ ರಾಜ್ಯದಲ್ಲಿ ಆವಿಷ್ಕಾರಗಳು, ನೂತನ ಉದ್ಯಮಗಳಿಗೆ ಉತ್ತೇಜನ, ಅವಶ್ಯಕ ಮೂಲಭೂತ ಸೌಕರ್ಯಗಳು ಉತ್ತಮವಾಗಿದೆ ಹಾಗಾಗಿ ಹೆಚ್ಚಿನ ಜನ ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ ಎಂದರು.

ಕಾಂಗ್ರೆಸ್ ಹಾಲಿ ಸಂಸದರ ಹತ್ತು ಕ್ಷೇತ್ರ ಬಿಟ್ಟುಕೊಡಲ್ಲ: ಸಿದ್ದು

ಬೆಂಗಳೂರು, ಫೆ.19– ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಪಟ್ಟಂತೆ ಯಾರು ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸರ್ಕಾರ ಮೈತ್ರಿಯಲ್ಲಿದೆ. ಯಾರಿಗೆ ಯಾರು ಬೆಗರ್ಸ್ ಅಲ್ಲ. ಅವರು ಭಿಕ್ಷಕರಲ್ಲ, ನಾವು ಭಿಕ್ಷಕರಲ್ಲ ಎಂದಿದ್ದಾರೆ.
ನಿನ್ನೆ ಚುನಾವಣೆ ಸಂಬಂಧ ಸಭೆ ನಡೆದಿದೆ. ಯಾವುದನ್ನು ಫೈನಲ್ ಮಾಡಿಲ್ಲ. ಆದರೆ ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಹತ್ತು ಸ್ಥಾನಗಳನ್ನು ಬಿಟ್ಟುಕೊಡಬಾರದು, ಅದರಲ್ಲಿ ರಾಜಿ ಆಗಬಾರದು ಎಂಬುದಾಗಿದೆ ಎಂದು ಹೇಳಿದರು.

ಯೋಧರ ಹತ್ಯೆ ಪ್ರಕರಣದಲ್ಲಿ ರಾಷ್ಟ್ರ ವಿರೋಧಿ ಹೇಳಿಕೆ ಕೊಟ್ಟವರ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,
ಯಾರೇ ಆದರೂ ರಾಷ್ಟ್ರ ವಿರೋಧಿ ಹೇಳಿಕೆ ನೀಡಬಾರದು. ಒಂದು ವೇಳೆ ಯಾರೇ ಹೇಳಿಕೆ ಕೋಟ್ರು ಕ್ರಮ ಕೈಗೊಳ್ಳಬೇಕು ಎಂದರು.

ನಾನು ಮಾನವ ಧರ್ಮದ ಸೇವಕ : ಹೆಚ್.ಡಿ.ಕುಮಾರಸ್ವಾಮಿ

 

ಮೈಸೂರು,ಫೆ.19: ಪ್ರತಿಯೊಬ್ಬರು ಭೂಮಿಯ ಮೇಲೆ ಎಷ್ಟು ದಿನ ಬದುಕುತ್ತೇವೆ ಎಂದು ಯಾರಿಗೂ ತಿಳಿದಿಲ್ಲ. ಬದುಕಿರುವ ಸಮಯದಲ್ಲಿ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಬೇಕು. ಈ ಧರ್ಮವನ್ನು ಪಾಲಿಸುತ್ತಿರುವ ನಾನು ಮಾನವ ಧರ್ಮದ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ತಿರುಮಕೂಡಲು ತಿ.ನರಸೀಪುರ ಶ್ರೀಕ್ಷೇತ್ರ ಕಾವೇರಿ,ಕಪಿಲಾ ಹಾಗೂ ಸ್ಫಟಿಕ ಸರೋವರ ನದಿಗಳ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 11 ನೇಯ ಕುಂಭಮೇಳದ ಅಂತಿಮ ದಿನವಾದ ಮಂಗಳವಾರ ನದಿಯ ಮಧ್ಯ ಭಾಗದ ಧಾರ್ಮಿಕ ಸಭಾ ಮಂಟಪದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ನಮ್ಮ ದೇಶದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಭಕ್ತರು ಪವಿತ್ರ ಪುಣ್ಯ ಸ್ನಾನ ಮಾಡಿ ತಮ್ಮ ಮನಸ್ಸನು ಶುದ್ಧ ಮಾಡಿಕೊಳ್ಳಬೇಕು. ಮೂರು ವರ್ಷಕೊಮ್ಮೆ ನಡೆಯುವ ಕುಂಭಮೇಳ ಯಶಸ್ವಿ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದರು.

ದಕ್ಷಿಣ ಭಾರತದಲ್ಲಿರುವವರಿಗೆ ಪ್ರಯಾಗದಲ್ಲಿ ನಡೆಯುವ ಕುಂಭಮೇಳಕ್ಕೆ ಹೋಗಲು ಕಷ್ಟವಾಗಬಹುದು. ಈ ಕುಂಭಮೇಳ ಪ್ರಯಾಗದಲ್ಲಿ ನಡೆಯುವ ಕುಂಭಮೇಳದಂತೆ ನಡೆಯಬೇಕು ಹೆಚ್ಚು ಜನರು ಭಾಗವಹಿಸುವಂತಾಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 70-80 ಪ್ರತಿಶತ ಭಾಗದಲ್ಲಿ ಮಳೆಯಾಧರಿತ ಕೃಷಿ ನಡೆಯುತ್ತದೆ. ಈ ಬಾರಿ ರೈತ ಸಮುದಾಯಕ್ಕೆ ಸರಿಯಾದ ಮಳೆಯಾಗಿ ನೆಮ್ಮದಿಯ ಜೀವನ ನಡೆಸಲು ಪರಮಾತ್ಮ ಮತ್ತು ಕಾವೇರಿ ಮಾತೆ ಕೃಪೆ ನೀಡಬೇಕೆಂದು ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ. ಕುವೆಂಪು ಅವರ ನಾಡಗೀತೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಾಲನ್ನು ಹೇಳಿ ನಮ್ಮ ನಾಡು ಎಲ್ಲರನ್ನು ಒಂದೇ ರೀತಿಯಲ್ಲಿ ಸರ್ವ ಸಮಾನವಾಗಿ ಕಾಣುವ ಶಾಂತಿಯ ತೋಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಬಸ್ ದುರಂತದಲ್ಲಿ ಇತ್ತೀಚೆಗೆ ಸಾವಿಗೀಡಾದ ಮಕ್ಕಳ ಮೃತದೇಹ ನೋಡಿ ಮನಸ್ಸಿಗೆ ಬಹಳ ನೋವಾಯಿತು. ಬಾಳಿ ಬದುಕ ಬೇಕಾಗಿದ್ದ ಮಕ್ಕಳನ್ನು ದೇವರು ಏಕೆ ಹೀಗೆ ಮಾಡುತ್ತಾನೆ ಎಂಬುದು ಪ್ರಶ್ನೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಮಾಜಿ ಸಚಿವ ಜಿ.ಮಾದೇಗೌಡ , ಶಾಸಕರಾದ ಅಶ್ವಿನ್ ಕುಮಾರ್, ಕೆ.ಮಹದೇವ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನದ ಶ್ರೀ ಶಿವಾನಂದಪುರಿ ಸ್ವಾಮಿ, ಆದಿಚುಂಚನಗಿರಿ ಮೈಸೂರು ಶಾಖಾ ಮಾಠದ ಶ್ರೀ ಸೋಮೇಶ್ವರನಾಥ ಸ್ವಾಮಿ ಹಾಗೂ ಇನ್ನಿತರ ಸ್ವಾಮೀಜಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

ಏರ್ ಶೋ ಆರಂಭಕ್ಕೆ ವಿಘ್ನ: ಸೂರ್ಯಕಿರಣ ವಿಮಾನ ಅಪಘಾತ

ಬೆಂಗಳೂರು,ಫೆ.19: ಯಲಹಂಕ ವಾಯುನೆಲೆ ಸಮೀಪ ಸೂರ್ಯ ಕಿರಣ ವಿಮಾನಗಳು ಡಿಕ್ಕಿ ಹೊಡೆದು ಇಬ್ಬರು ಪೈಲಟ್ ಗಳು ಗಾಯಗೊಂಡು ಓರ್ವ ಪೈಲಟ್ ನಾಪತ್ತೆಯಾಗಿರುವ ಘಟನೆ ನಡೆದಿದೆ.ದುರಂತ ಕುರಿತು ಐಎಎಫ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಏರ್ ಶೋನಲ್ಲಿ ಪ್ರದರ್ಶನ ನೀಡಿವ ಸಲುವಾಗಿ ಆಗಮಿಸಿದ್ದ ಸೂರ್ಯಕಿರಣ ವಿಮಾನಗಳು ಇಂದು ಬೆಳಗ್ಗೆ 11.50 ರ ಸಮಯದಲ್ಲಿ ಪೂರ್ವ ತಯಾರಿಗಾಗಿ ಹಾರಾಟ ನಡೆಸುವಾಗ ಎರಡು ವಿಮಾನಗಳು ಡಿಕ್ಕಿ ಹೊಡೆದಿವೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನಿವಾಸ ಸಮೀಪದಲ್ಲಿ ವಿಮಾನಗಳು ಪತನಗೊಂಡಿವೆ.

ವಿಂಗ್ ಕಮಾಂಡರ್ ವಿ.ಟಿ ಶೆಲ್ಕೆ, ಸ್ಕ್ವಾಡ್ರನ್ ಲೀಡರ್ ಟಿ.ಜೆ ಸಿಂಗ್ ಪ್ಯಾರಾಚೂಟ್ ಬಳಸಿ ವಿಮಾನದಿಂದ ಹಾರಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಅವರನ್ನು ಏರ್ ಲಿಫ್ಟ್ ಮೂಲಕ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ, ಮತ್ತೋರ್ವ ಪೈಲಟ್ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಗೆ ತಾಂತ್ರಿಕ ದೋಷ ಕಾರಣ ಎನ್ನಲಾಗಿದ್ದು ದುರಂತ ಸಂಬಂಧ ಎಐಎಫ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ, ಬ್ಲಾಕ್ ಬಾಕ್ಸ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಏರ್ ಶೋಗೆ ಧಕ್ಕೆಯಿಲ್ಲ:
ಸೂರ್ಯ ಕಿರಣ ವಿಮಾನ ದುರಂತ ಪ್ರಕರಣದ ಪರಿಣಾಮ ಏರ್ ಶೋ ಮೇಲೆ ಆಗಲ್ಲ, ನಿರಾತಂಕವಾಗಿ ನಿಗದಿತ ವೇಳಾಪಟ್ಟಿಯಂತೆಯೇ ಏರ್ ಶೋ ನಡೆಯಲಿದೆ ಎಂದು ಎಚ್.ಎ.ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.