ಪಂಚರಾಜ್ಯ ಚುನಾವಣಾ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ :ಮುಖ್ಯಮಂತ್ರಿ ಕುಮಾರಸ್ವಾಮಿ

 

ಬೆಳಗಾವಿ:ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪು ಜಾತ್ಯತೀತ ಪಕ್ಷಗಳತ್ತ ರಾಷ್ಟ್ರ ಸಾಗುತ್ತಿರುವುದರ ದ್ಯೋತಕವಾಗಿದೆ. ದೇಶದಾದ್ಯಂತ ಏಕಪಕ್ಷೀಯ ಆಡಳಿತದ ನಿರೀಕ್ಷೆ ಇಟ್ಟುಕೊಂಡು ವಿರೋಧ ಪಕ್ಷಗಳನ್ನು ದಮನ ಮಾಡಲು ಮುಂದಾಗಿದ್ದವರಿಗೆ ಮುಖಭಂಗವಾಗಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಐದೂ ರಾಜ್ಯಗಳ ಫಲಿತಾಂಶ ಜಾತ್ಯತೀತ ಪಕ್ಷಗಳೆಲ್ಲವೂ ಜೊತೆಯಾಗಿ ಚುನಾವಣೆ ಎದುರಿಸುವ ವೇದಿಕೆಯನ್ನು ದೊರಕಿಸಿಕೊಟ್ಟಿದೆ. ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿರುವ ಮುಖ್ಯಮಂತ್ರಿಗಳು ಸಮಾನ ಮನಸ್ಕ ರಾಜಕೀಯ ನಾಯಕರನ್ನು ಒಂದೆಡೆಗೆ ತರಲು ರಾಹುಲ್ ಗಾಂಧಿ ಹಾಗೂ ಜಾತ್ಯತೀತ ಪಕ್ಷಗಳ ನಾಯಕರು ಮುಂದಾಗಬೇಕು ಎಂದು ಆಶಿಸಿದ್ದಾರೆ.

ಪಂಚರಾಜ್ಯ ಚುನಾವಣೆ: ಮುದುಡಿದ ಕಮಲ,ಕೈಹಿಡಿದ ಮತದಾರ,ಪ್ರಾದೇಶಿಕ ಪಕ್ಷಕ್ಕೂ ಸಿಕ್ಕ ಅಧಿಕಾರ

ಫೋಟೋ ಕೃಪೆ: ಟ್ವಿಟ್ಟರ್

ಬೆಂಗಳೂರು: ಪಂಚರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಮಲ ವಿಲವಿಲ ಎಂದು ಒದ್ದಾಡಿದರೆ ಕೈ ಕಿಲಕಿಲ ಎನ್ನುವ ನಗೆ ಬೀರಿದೆ,ಎರಡು ರಾಜ್ಯದಲ್ಲಿ ಪ್ರಾದೇಶಕ‌ ಪಕ್ಷಗಳು ಅಧಿಕಾರದ ಗದ್ದುಗೆಗೇರಿವೆ.

ಐದು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಬಿಜೆಪಿ ಭದ್ರಕೋಟೆ ಮಧ್ಯಪ್ರದೇಶ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಜಿದ್ದಾಜಿದ್ದಿ ಮುಂದುವರೆದಿದ್ದು ಕಾಂಗ್ರೆಸ್ ಪಕ್ಷಕ್ಕೆ ಸರಕಾರ ರಚಿಸುವ ಅವಕಾಶ ಹೆಚ್ಚಿದೆ.

ರಾಜಸ್ಥಾನದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದು ಕಾಂಗ್ರೆಸ್ ಸರಳ ಬಹುಮತ ಪಡೆದು ಪಡೆದು ಅಧಿಕಾರಕ್ಕೆ ಬರುತ್ತಿದೆ,ಬಿಜೆಪಿಯ ಆಡಳಿತ ವಿರೋಧಿ ಅಲೆ,ಹಾಲಿ ಸಿಎಂ ವಸುಂಧರಾ ರಾಜೆ ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಛತ್ತೀಸ್ ಗಡದಲ್ಲಿ ಮೂರು ಬಾರಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈ ಬಾರಿ ಮುಗ್ಗರಿಸಿದ್ದು ಇಲ್ಲಿ ಮೊದಲ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಹೊಸ ರಾಜ್ಯವಾಗಿ ಉದಯಸಿದಂದಿನಿಂದ ನಡೆದ ಮೂರು ಚುನಾವಣೆಯಲ್ಲಿ ಬಿಜೆಪಿ ಸತತ ಗೆಲುವು ಸಾಧಿಸಿದ್ದು ನಾಲ್ಕನೇ ಚುನಾವಣೆಯಲ್ಲಿ ಭಾರೀ ಹಿನ್ನಡೆಯೊಂದಿಗೆ ಕೈಗೆ ಶರಣಾಗಿದೆ.

ತೆಲಂಗಾಣದಲ್ಲಿ ಅವಧಿಗೆ ಮುನ್ನವೇ ಚುನಾವಣೆಗೆ ಹೋಗಿದ್ದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಕಾಂಗ್ರೆಸ್,ಟಿಡಿಪಿ ಮೈತ್ರಿ ವಿಫಲವಾಗಿದ್ದು,ಬಿಜೆಪಿ ಕೂಡ 1 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಗೆಲುವಿನ ನಗೆ ಬೀರಿದ್ದು ಪ್ರಾದೇಶಿಕ ಪಕ್ಷವೇ ಇಲ್ಲಿ ಮುಖ್ಯ ಎನ್ನುವ ಸಂದೇಶ ರಾಷ್ಟ್ರೀಯ ಪಕ್ಷಗಳಿಗೆ ರವಾನಿಸಿದೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಇಲ್ಲಿ ನೆಲ ಕಚ್ಚಿದ್ದು ಕೇವಲ 5 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.ಬಿಜೆಪಿ ಇಲ್ಲಿ ಖಾತೆ ತೆರೆದಿದ್ದೇ ಸಾಧನೆ,ಮೊದಲ ಬಾರಿ ಕೇಸರಿ ಪಕ್ಷದ ಸದಸ್ಯ ಮಿಜೋರಾಂ ಅಸೆಂಬ್ಲಿ ಪ್ರವೇಶ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡ ಇಲ್ಲಿ ನೆಲ‌ ಕಚ್ಚಿದೆ.

ಪಕ್ಷಗಳ ಬಲಾಬಲ ಒಟ್ಟು ಸ್ಥಾನ:

ಮಧ್ಯಪ್ರದೇಶ:230
ಬಿಜೆಪಿ:108
ಕಾಂಗ್ರೆಸ್:114
ಇತರೆ:8

ರಾಜಸ್ಥಾನ ಒಟ್ಟು ಸ್ಥಾನ:199
ಬಿಜೆಪಿ:74
ಕಾಂಗ್ರೆಸ್:99
ಬಿಎಸ್ಪಿ:6
ಇತರೆ:20

ಛತ್ತೀಸ್ ಗಡ ಒಟ್ಟು ಸ್ಥಾನ:90
ಬಿಜೆಪಿ:17
ಕಾಂಗ್ರೆಸ್:66
ಬಿಎಸ್ಪಿ: 3
ಇತರೆ:4

ತೆಲಂಗಾಣ ಒಟ್ಟು ಸ್ಥಾನ:119
ಟಿ ಆರ್ ಎಸ್:87
ಕಾಂಗ್ರೆಸ್:19
ಟಿಡಿಪಿ:2
ಬಿಜೆಪಿ:1
ಇತರೆ:

ಮಿಜೋರಾಂ ಒಟ್ಟು ಸ್ಥಾನ:40
ಕಾಂಗ್ರೆಸ್: 5
ಎಂಎನ್ಎಫ್:26
ಬಿಜೆಪಿ:1
ಇತರೆ:8

ಪ್ರಬುದ್ಧ ಯೋಜನೆಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ವಿದೇಶಿ ಪ್ರಬುದ್ಧ ಯೋಜನೆಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ವ್ಯಾಸಂಗಕ್ಕಾಗಿ ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡುವ “ಪ್ರಬುದ್ಧ ಯೋಜನೆ”ಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸುವ ಅತ್ಯುತ್ತಮ ಕೆಲಸ ಮಾಡುತ್ತಿದೆ. ನಾನು 1980 ರಲ್ಲಿ ವಿದ್ಯಾರ್ಥಿ ವೇತನ ಪಡೆದುಕೊಂಡೆ ವಿದೇಶದಲ್ಲಿ ವ್ಯಾಸಾಂಗ ಮಾಡಿದ್ದೆ.‌

ಕೆಲ ಪ್ರತಿಭಾವಂತ ದಲಿತ ಮಕ್ಕಳು ಆರ್ಥಿಕ ಹಾಗೂ ಪರಿಸರದ ತೊಂದರೆಯಿಂದ ಓದಲು ಸಾಧ್ಯವಾಗಿರುವುದಿ್ಲ್ಲಲ್ಲ. ಅಂಥ ಮಕ್ಕಳಿಗಾಗಿ ಹೊರದೇಶದಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ, ಪ್ರಪಂಚ ಜ್ಞಾನ ವಿಕಾಸವಾಗುತ್ತದೆ. ರಾಜ್ಯ ಸರಕಾರ 2001 ರಿಂದ ಈ ಕಾರ್ಯಕ್ರಮ ಪ್ರಾರಂಭವಾಗಿದ್ದು, 197 ವಿದ್ಯಾರ್ಥಿಗಳು ವಿದೇಶದಲ್ಲಿ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ 78 ವಿದ್ಯಾರ್ಥಿಗಳು ಅಮೆರಿಕಾ ದೇಶವನ್ನೇ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ರಾಷ್ಟ್ರಗಿಗೂ ಕಳುಹಿಸಿ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಪದವಿ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸಿಕೊಡಲು ಯಾವ ರಾಜ್ಯವೂ ಮುಂದಾಗಿಲ್ಲ. ನಮ್ಮ ಸರಕಾರ ಯುಜಿ ಕಲಿಕೆಗೂ ವಿದೇಶಕ್ಕೆ ಕಳುಹಿಸುತ್ತಿರುವುದು ಪ್ರಶಂಸನೀಯ ಎಂದರು.

ನಮ್ಮಲ್ಲಿ ಶೇ.78 ರಷ್ಟು ಸಾಕ್ಷರತಾ ಪ್ರಮಾಣ ಬೆಳೆದಿದೆ.‌ ಎಸ್‌ಸಿ‌ ಎಸ್ಟಿ ಸಮುದಾಯದಲ್ಲಿ ಇನ್ನು ಶೇ.೪೦ ರ ಆಸು ಪಾಸಿನಲ್ಲಿದೆ. ಇವರನ್ನು ಶೈಕ್ಷಣಿಕವಾಗಿ ಮುಮನದೆ ತರುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಇಂಥ ಸಾಕಷ್ಟು ಕಾರ್ಯಕ್ರಮ‌ ಹಮ್ಮಿಕೊಂಡಿದೆ ಎಂದರು. ಅಂಬೇಡ್ಕರ್‌ ಅವರು ಸಹ ವಿದ್ಯಾರ್ಥಿ ವೇತನ ಪಡೆದೇ ವಿದೇಶದಲ್ಲಿ ವ್ಯಾಸಂಗ ಮಾಡಿ, ಉತ್ತಮ‌ ಸಂವಿಧಾನ ನೀಇದರು.‌ಅದೇ ರೀತಿಯಲ್ಲಿ ಮತ್ತೊಬ್ಬರು ಅಂಬೇಡ್ಕರ್‌ ಹೊರಹೊಮ್ಮಬಹುದು ಎಂದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ,2001 ರಿಂದ ಎಸ್‌ಸಿ , ಎಸ್‌ಟಿ ವಿದ್ಯಾರ್ಥಿಗಳನ್ಬು ವಿದೇಶಕ್ಕೆ ಕಳುಹಿಸಿ ವ್ಯಾಸಂಗ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಆದರೆ ಈವರೆಗು 287 ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಲಾಗಿದ್ದು, ಇದಕ್ಕಾಗಿ 57.65 ಕೋಟಿ ರು. ವ್ಯಹಿಸಲಾಗಿದೆ. ಕಳೆದ ವರ್ಷದಿಂದ ವಿದೇಶದಲ್ಲಿ ವ್ಯಾಸಾಂಗ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರಿ, ಅರ್ಜಿ ಸಲ್ಲಿಸುತ್ತಿದ್ದಾರೆ. ಈ ವರ್ಷ 250 ಯುಜಿ ಹಾಗೂ 150 ಪಿಜಿ ಶಿಕ್ಷಣಕ್ಕೆ ಕೊಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ 120 ಕೋಟಿ ರು. ಮೀಸಲಿಡಲಾಗಿದೆ ಎಂದರು.

ವಿದೇಶಿ ವ್ಯಾಸಂಗ ಮಾಡುವ ಇಚ್ಛೆ ಇರುವ ಕುಟುಂಬದ ಆದಾಯ ಮಿತಿ 8 ಲಕ್ಷ ರು. ವರೆಗೆ ಇದ್ದರೆ ಶೇ.100 ರಷ್ಟು ಉಚಿತ ಶಿಕ್ಷಣ ಕೊಡಿಸಲಾಗುವುದು. 8 ರಿಂದ 15 ಲಕ್ಷ ಆದಾಯ ಇರುವ ಕುಟುಂಬದ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ವೆಚ್ಚ ಹಾಗೂ ಇದಕ್ಕೂ ಹೆಚ್ಚಿನ ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇ.33 ರಷ್ಟು ಶಿಕ್ಷಣ ವೆಚ್ಚ ಭರಿಸಲಾಗುತ್ತದೆ. ಪುಸ್ತಕ ವೆಚ್ಚ, ವಿದೇಶದಲ್ಲಿ ಉಳಿದುಕೊಳ್ಳಲು ಹಾಗೂ ಇತರೆ ವೆಚ್ಚವನ್ನೂ ಸಹ ಸರಕಾರವೇ ಭರಿಸಲಿದೆ ಎಂದರು.
ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಾಪಾಸ್‌ ಭಾರತಕ್ಕೆ ಆಗಮಿಸಬೇಕೆಂಬ ಷರತ್ತು ಕೂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಇದೇವೇಳೆ ಪ್ರಬುದ್ಧ ಯೋಜನೆ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆ ಮಾಡಲಾಯಿತು.

ಮೇಕೆದಾಟು ನಮ್ಮ ಹಕ್ಕು,ತಮಿಳುನಾಡಿನ ಅಡಚಣೆ ಸರಿಯಲ್ಲ: ಡಿಕೆಶಿ

ಬೆಂಗಳೂರು:ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು.ನಮಗೆ ಬೇರೆ ರಾಜ್ಯದ ಮೇಲೆ ಯಾವುದೇ ದ್ವೇಷ ಇಲ್ಲ.ಮ್ಯಾನೇಜ್ಮೆಂಟ್ ಬೋರ್ಡ್ ಮೂಲಕ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಇದೆ.ಹೀಗಾಗಿ ಬೇರೆ ರಾಜ್ಯಗಳಿಗೆ ಯಾವುದೇ ಆತಂಕ ಬೇಡ ಎಂದು ಜಲಸಂಪನ್ಮೂಲ‌ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು,ಇಂದು ಮಾಜಿ ಸಿಎಂ ಹಾಗೂ ಮಾಜಿ ನೀರಾವರಿ ಸಚಿವರ ಜೊತೆ ಸಭೆ ನಡೆಸಿದ್ದೇವೆ‌.ದೇವೇಗೌಡರು, ಸದಾನಂದಗೌಡರು, ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲ ಮಾಜಿ ಸಿಎಂ ಗಳಿಗೆ ಆಹ್ವಾನ ನೀಡಲಾಗಿತ್ತು.ಅನ್ಯ ಕಾರ್ಯಕ್ರಮ ನಿಮಿತ್ತ ಕೆಲವರು ಸಭೆಗೆ ಬಂದಿಲ್ಲ. ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಸಭೆಯಲ್ಲಿ ಭಾಗಿಯಾಗಿ ಮಹತ್ವದ ಸಲಹೆ ಸೂಚನೆ ನೀಡಿದ್ದಾರೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕ್ಯಾತೆ ತೆಗೆದಿದೆ.
ಕರ್ನಾಟಕದ ಸರ್ಕಾರದ ಪರವಾಗಿ ವಿನಂತಿ ಮಾಡುತ್ತೇನೆ.
ಎರಡು ರಾಜ್ಯದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ.
ನಾಳೆ ಮೇಕೆದಾಟು ಯೋಜನೆ ಪ್ರದೇಶಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡುತ್ತಿದ್ದೇವೆ.ಯೋಜನೆ ಪ್ರದೇಶದಲ್ಲಿ ಒಂದು ಎಕರೆ ಕೃಷಿಗೂ ಅವಕಾಶ ಇಲ್ಲ.ಹೀಗಿರುವಾಗ ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಅಡಚಣೆ ಮಾಡೋದು ನ್ಯಾಯಸಮ್ಮತವಲ್ಲ ಎಂದರು.

ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಮೊದಲು ಅರ್ಥೈಸಿಕೊಳ್ಳಬೇಕು‌‌.ತಮಿಳುನಾಡಿನ ಜಾಗದಲ್ಲಿ ನಾವು ಮೇಕೆದಾಟು ಯೋಜನೆ ಮಾಡ್ತಿಲ್ಲ.ನಮ್ಮ ಜಾಗದಲ್ಲಿ ನಾವು ಅಣೆಕಟ್ಟೆ ಮಾಡುತ್ತಿದ್ದೇವೆ‌‌.ಮೇಕೆದಾಟು ಅಣೆಕಟ್ಟೆ ಮೂಲಕ ನೀರನ್ನು ಕೃಷಿಗೆ ಉಪಯೋಗಿಸಲು ಬರಲ್ಲ.ಮೇಕೆದಾಟು ನೀರನ್ನು ತಗೆದುಕೊಂಡು ನೀರಾವರಿ ಮಾಡಲು ಸಾಧ್ಯವಿಲ್ಲ.
ತಮಿಳುನಾಡಿನ ತಡೆಯಾಜ್ಞೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನಮ್ಮ ಕಾನೂನು ತಂಡಕ್ಕೆ ಸಲಹೆ ನೀಡಿದ್ದೇವೆ‌‌. ನಮ್ಮ ರಾಜ್ಯದ ಹಣ ಮತ್ತು ಜಾಗ.ನಾವು ಮೇಕೆದಾಟುವಿನಿಂದ ವಿದ್ಯತ್ ಚ್ಛಕ್ತಿ ಉತ್ಪಾದಿಸಿ ಬಳಕೆ ಮಾಡಿಕೊಳ್ಳಬಹುದು.ಇದನ್ನು ಬಿಟ್ರೆ ಯಾವುದೇ ಬಳಕೆ ಮಾಡಿಕೊಳ್ಳಲು ಅವಕಾಶ ನಮಗೆ ಇಲ್ಲ.ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ ಎಂದ್ರು.

ಮೇಕೆದಾಟು ಯೋಜನೆ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ.ತಮಿಳುನಾಡಿಗೆ ಯೋಜನೆ ಬಗ್ಗೆ ಮಾಹಿತಿ ನೀಡಲು ನಾವು ಸಿದ್ದ.ಬೇಕಾದ್ರೆ ಅವ್ರೇ ನಮ್ಮ ಬಳಿ ಬರಲಿ.ಯೋಜನೆ ಬಗ್ಗೆ ಮಾಹಿತಿ ನೀಡುತ್ತೇವೆ‌‌.ಇಲ್ಲವೇ ನಮಗೆ ಅನುಮತಿ ನೀಡಿದ್ರೆ ಅವರಲ್ಲಿಯೇ ಹೋಗಿ ಮಾಹಿತಿ ನೀಡಲಾಗುವುದು ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು.ಈ ಯೊಜನೆ ಯಾವ ಕಾರಣಕ್ಕೂ ದುರ್ಬಳಕೆಯಾಗುವುದಿಲ್ಲ ಎಂದ್ರು.

ಮೇಕೆದಾಟು ಯೋಜನೆಯಿಂದ ೪೯೧೯ ಎಕರೆ ಮುಳುಗಡೆ ಆಗುತ್ತದೆ.ಈ ಪೈಕಿ ಸುಮಾರು ೨೯೦ ಹೆಕ್ಟೇರ್ ರೈತರ ಜಮೀನು‌ ಇದೆ.ಮೇಕೆದಾಟು ವಿಚಾರದಲ್ಲಿ ಕರ್ನಾಟಕ ಜೊತೆ ಮಾತುಕತೆಗೆ ರೆಡಿ ಇಲ್ಲ ಎಂಬ ತಮಿಳುನಾಡು ಸಚಿವ ಷಣ್ಮುಗಮ್ಮ ಹೇಳಿಕೆ ವಿಚಾರ.ನಾವೆಲ್ಲಾ ಸಹೋದರರು.ನಮ್ಮ ಜೊತೆ ಅವ್ರು ಅವ್ರ ಜೊತೆ ನಾವು ಮಾತ್ನಾಡಲಿಲ್ಲ ಅಂದ್ರೆ ಹೇಗೆ‌‌?ನಾವೇನು ಅವ್ರ ಜೊತೆ ಫೈಟ್ ಮಾಡಲ್ಲ.ನೀರು ನಮ್ಮಿಂದಲೇ ಹೋಗಬೇಕು ಎಂದು ತಮಿಳುನಾಡು ಸಚಿವ ಷಣ್ಮುಗಮ್ಮ ಹೇಳಿಕೆಗೆ ಸಚಿವ ಡಿಕೆಶಿ ತಿರುಗೇಟು ನೀಡಿದ್ರು.

ಮಹದಾಯಿ ಯೋಜನೆಯಲ್ಲಿ ನಾವು ಎಷ್ಟು ನೀರು ಬಳಕೆ ಮಾಡಿಕೊಳ್ಳಬೇಕು ಅಂತ ನ್ಯಾಯಾಧೀಕರಣ ಸ್ಪಷ್ಟನೆ ನೀಡಿದೆ.
ನ್ಯಾಯಾಧೀಕರಣ ಆದೇಶದಲ್ಲಿ ನಮಗೆ ಅನ್ಯಾಯವಾಗಿದೆ. ಆದ್ರೆ ಹಂಚಿಕೆಯಾದ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ ಕ್ರಮ ಕೈಗೊಳ್ಳಲಿದ್ದೇವೆ.ಕೃಷ್ಣ ನ್ಯಾಧಿಕರಣ ವಿಚಾರದಲ್ಲಿ ತಡೆಯಾಜ್ಞೆ ಇದೆ.ಅದನ್ನ ತೆರವು ಮಾಡುವುದಕ್ಕೂ ಕಾನುನು ತಜ್ಞರಿಗೆ ಸೂಚನೆ ನೀಡಿದ್ದೇವೆ ಎಂದ್ರು.

ರಾಜಕೀಯ ಲಾಭಕ್ಕಾಗಿ ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ತಕರಾರು: ಸಿದ್ದರಾಮಯ್ಯ

ಬೆಂಗಳೂರು:ಮೇಕೆದಾಟು ಯೋಜನೆ ಹಿಂದಿನ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ಆದರೂ ಆ ರಾಜ್ಯ ರಾಜಕೀಯ ಉದ್ದೇಶ ಇಟ್ಟುಕೊಂಡು ತಕರಾರು ತೆಗೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಮಾಜಿ ಮುಖ್ಯಮಂತ್ರಿಗಳು, ಕಾನೂನು ತಜ್ಞರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ,ನಮ್ಮ ವ್ಯಾಪ್ತಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಸುಪ್ರೀಂಕೋರ್ಟ್ ಹಾಗೂ ನ್ಯಾಯ ಮಂಡಳಿ ಆದೇಶಗಳೂ ನಮಗೆ ಪೂರಕವಾಗಿವೆ. ಯೋಜನೆ ಬೇಡ ಎಂದು ಯಾವ ಅದೇಶವೂ ಹೇಳಿಲ್ಲ. ಯೋಜನೆಗೆ ನಾವು ತಮಿಳುನಾಡಿನ ಒಪ್ಪಿಗೆ ಪಡೆಯುವ ಅವಶ್ಯಕತೆ ಕೂಡ ಇಲ್ಲ.‌ಎಂದರು.

ತಮಿಳುನಾಡಿನ ತಕರಾರಿಗೆ ಯಾವುದೇ ಆಧಾರ, ಸಾಕ್ಷಿ ಇಲ್ಲ. ನ್ಯಾಯ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಆದೇಶಗಳೂ ಸ್ಪಷ್ಟವಾಗಿವೆ. ನಮ್ಮ ಯೋಜನೆ ನ್ಯಾಯಯುತ. ಹೀಗಾಗಿ ನಮ್ಮ ವಕೀಲರು ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮನವೊಲಿಸುವ ಕೆಲಸ ಮಾಡಬೇಕು. ಒಂದು ವೇಳೆ ಕೋರ್ಟ್ ಮಧ್ಯಂತರ ತಡೆ ಆದೇಶ ಕೊಟ್ಟರೆ ಕಷ್ಟವಾಗುತ್ತದೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು. ವಕೀಲರ ತಂಡ ಮುಂಜಾಗ್ರತೆ ವಹಿಸಬೇಕು. ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡು ಈಗ ಧ್ವನಿ ಎತ್ತಿದೆ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.

ಶೀಘ್ರದಲ್ಲಿ ನಿರೀಕ್ಷಿಸಿ “ಒಂದು ಕನಸಿನ ಬೆನ್ನತ್ತಿ”

ಅವಳು ಮುವತ್ತೆರಡು ವರ್ಷ ಅವನಿಗಾಗಿ ಕಾದಿದ್ದಳು

ಅವನು ಆ ಒಂದು ಕನಸಿನಿಂದ ಅವಳನ್ನು ಹುಡುಕಲಾರಂಭಿಸಿದ

ಅದು ಹೆತ್ತ ಕರುಳು, ಅವನು ಕಳೆದುಹೋದ ಮಗ

ಮುವತ್ತೆರಡು ವರ್ಷ, ಒಂದೇ ಒಂದು ಕನಸು, ಹೆತ್ತವರ ಹುಡುಕಾಟದ ರೋಚಕ ಪ್ರಯಾಣ

“ಒಂದು ಕನಸಿನ ಬೆನ್ನತ್ತಿ” ಪುಟ್ಟ ಪತ್ತೇದಾರಿ ಕಾದಂಬರಿ

ನಿರೀಕ್ಷಿಸಿ ಶೀಘ್ರದಲ್ಲಿ….