ಪಂಚಭೂತಗಳಲ್ಲಿ ‘ಅನಂತ’ಲೀನ!

ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು,ಬಿಜೆಪಿ ಅಗ್ರಗಣ್ಯ ನಾಯಕರ ಸಮ್ಮುಖದಲ್ಲಿ ಹಿರಿಯ ನಾಯಕನಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.

ವೈದಿಕ ಸಂಪ್ರದಾಯದಂತೆ ಅನಂತ್ ಕುಮಾರ್ ಅಂತ್ಯ ಸಂಸ್ಕಾರ ನಡೆಸಲಾಯಿತು.ನೆಚ್ಚನ ಶಿಷ್ಯನ ಅಗಲಿಕೆಗೆ ಕಂಬನಿ ಮಿಡಿದ ಲಾಲ್ ಕೃಷ್ಣ ಅಡ್ವಾಣಿ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಆರ್‌ಎಸ್‌ಎಸ್ ಸಹ ಕಾರ್ಯಕಾರಿ ಭಯ್ಯಾಜಿ ಜೋಷಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್, ಕೇಂದ್ರ ವಿಜ್ಞಾನ ಅರಣ್ಯ ಸಚಿವ ಹರ್ಷವರ್ಧನ್, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸಾಮಾಜಿಕ ನ್ಯಾಯ ರಾಜ್ಯಖಾತೆ ಸಚಿವ ರಾಮದಾಸ್ ಅಠವಾಲೆ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಂತಿಮ ನಮನ ಸಲ್ಲಿಸಿದರು.

ನಂತರ ಸಕಲ ಸರ್ಕಾರಿ ಗೌರವದೊಂದಿಗೆ ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು. ಅನಂತ್ ಕುಮಾರ್ ಪತ್ನಿ ಮತ್ತು ಪುತ್ರಿಯರಿಗೆ ಕಡೆಯ ಬಾರಿ ಮುಖ ನೋಡಲು ಅವಕಾಶ ನೀಡಿದ ಬಳಿಕ ಅನಂತ್ ಕುಮಾರ್ ಸಹೋದರ ನಂದಕುಮಾರ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.45 ನಿಮಿಷಗಳ ಕಾಲ ನಡೆದ ಅಂತ್ಯಕ್ರಿಯೆಯಲ್ಲಿ ಅನಂತಕುಮಾರ್ ಪಂಚಭೂತಗಳಲ್ಲಿ ಲೀನವಾದರು.

ಬೆಳಗ್ಗೆ ನಿವಾಸದಿಂದ ಬಿಜೆಪಿ ಕಚೇರಿಗೆ ಪಾರ್ಥೀವ ಶರೀರವನ್ನು ಸೇನಾ ವಾಹನದಲ್ಲಿ ತರಲಾಯಿತು, ಬಿಜೆಪಿ ಕಚೇರಿಇ1 ಗಂಟೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು ಅಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿ ನಂತರ ಮೆರವಣಿಗೆ ಮೂಲಕ ಚಾಮರಾಜಪೇಟೆಯ ರುದ್ರಭೂಮಿಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಕೇಂದ್ರ ಸಚಿವ ಅನಂತಕುಮಾರ್ ಇನ್ನಿಲ್ಲ!

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್​ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ತೀವ್ರ ಅನಾರೋಗ್ಯದ ಕಾರಣದಿಂದಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನಂತಕುಮಾರ್ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಕರೆತರಲಾಗಿತ್ತು. ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ.

ಅನಂತ್​ ಕುಮಾರ್​ ಅವರ ಪಾರ್ಥೀವ ಶರೀರವನ್ನು ಈಗಾಗಲೇ ಅವರ ನಿವಾಸಕ್ಕೆ ವರ್ಗಾಯಿಸಿದ್ದು, ಬೆಳಗ್ಗೆ 9 ಗಂಟೆ ಸಮಯದ ನಂತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ.

ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ ಅನಂತ್ ಕುಮಾರ್ ಒಬ್ಬ ಯಶಸ್ವಿ ರಾಜಕಾರಣಿ. ಕರ್ನಾಟಕದ ದಕ್ಷಿಣ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಜಯಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಮೋದಿ ಸಚಿವ ಸಂಪುಟದಲ್ಲಿ ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಅನಂತ್​ ಕುಮಾರ್​ ಅವರು ನಿರ್ವಹಿಸುತ್ತಿದ್ದರು.

ಎಲೆಕ್ಟ್ರಾನಿಕ್ ಸಿಟಿಯಲ್ಲೊಂದು ಹೃದಯ ವಿದ್ರಾವಕ ಘಟನೆ: ಉಸಿರು ಕಟ್ಟಿ ಎರಡು ಕಂದಮ್ಮಗಳ ಸಾವು!

ಬೆಂಗಳೂರು: ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದ ಉಂಟಾದ ಹೊಗೆಯಲ್ಲಿ ಉಸಿರುಕಟ್ಟಿ ಎರಡು ಕಂದಮ್ಮಗಳು ಸಾವಿಗೀಡಾದ ಹೃದಯವಿದ್ರಾವಕ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.

ಹೊಟ್ಟೆಪಾಡಿಗಾಗಿ ದೂರದ ನೇಪಾಳದಿಂದ ಬಂದಿದ್ದ ದೇವೇಂದ್ರ ಮತ್ತು ರೂಪಸಿ ದಂಪತಿಗಳ ಸೃಜನ್(5) ಮತ್ತು ಲಕ್ಷ್ಮಿ(2) ಮೃತ ದುದೈರ್ವಿ ಮಕ್ಕಳು.

ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಾ ಶೆಡ್ ಒಂದರಲ್ಲಿ ವಾಸವಿದ್ದ ನೇಪಾಳ ದಂಪತಿಗಳು ಕೂಲಿ ಕೆಲಸ ಮಾಡಿಕೊಂಡಿದ್ದರು, ಇಂದು ಬೆಳಿಗ್ಗೆ ದೇವೇಂದ್ರ ದಂಪತಿ ಶೆಡ್ ಒಳಗೆ ಮಕ್ಕಳನ್ನು ಬಿಟ್ಟು ಹೊರಗಿನಿಂದ ಚಿಲಕ ಹಾಕಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಕ್ಕಳು ಬೆಂಕಿ ಪೊಟ್ಟಣದಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದ್ದು ಇದರಿಂದ ಉಂಟಾದ ಹೊಗೆಯಿಂದ ಮಕ್ಕಳು ಉಸಿರುಗಟ್ಟಿ ಸಾವನಪ್ಪಿದ್ದಾರೆ.

ಪೋಷಕರು ಕೆಲಸದಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬ್ಬನ್ ಪಾರ್ಕ್ ಮಕ್ಕಳ ಹಬ್ಬಕ್ಕೆ ಉತ್ತಮ ರೆಸ್ಪನ್ಸ್!

ಬೆಂಗಳೂರು: ಮಕ್ಕಳ ದಿನಾಚರಣೆ ಅಂಗವಾಗಿ ನಿನ್ನೆಯಿಂದ ಮೂರು ದಿನಗಳ ಕಬ್ಬನ್ ಪಾರ್ಕ್ ನಲ್ಲಿ ನಡೆಯುತ್ತಿರೋ ಮಕ್ಕಳ ಹಬ್ಬದ ಎರಡನೇ ದಿನವಾದ ಹಿಂದು ಕಬ್ಬನ್ ಪಾರ್ಕ್ ಪುಲ್ ಬ್ಯುಸಿಯಾಗಿತ್ತು. ರಜೆ ದಿನವಾದ ಇಂದು ಫ್ಯಾಮಿಲಿಯೂಂದಿಗೆ ಕಬ್ಬನ್ ಪಾರ್ಕ್ ಗೆ ಎಂಚ್ರಿ ಕೂಟ್ಟಿದ್ದ ಪುಟಾಣಿಗಳಿಗೆ ಪುಲ್ ಎಂಜಾಯ್ ಮಾಡಿದ್ರು.

ಹೌದು ಕಬ್ಬನ್ ಪಾರ್ಕ್ ನ ಬಾಲಭವನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಎರಡು ದಿನದ ಮಟ್ಟಿಗೆ ಆಚರಿಸಲಾಗ್ತಿರೋ ಮಕ್ಕಳ ಹಬ್ಬಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಇನ್ನು ಪ್ರತೀ ವರ್ಷದಂತೆ ಈ ವರ್ಷವೂ ವಿಶೇಷ ರೀತಿಯಲ್ಲಿ ಫಲಪುಷ್ಪಮೇಳವನ್ನು ಪ್ರದರ್ಶನ ಆಯೋಜಿಸಲಾಗಿದೆ. ತರಕಾರಿಗಳಿಂದ ಅಂಗನವಾಡಿ ನಿರ್ಮಾಣ ಮಾಡಿ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಅಂಗನವಾಡಿ, ಭಾರತೀಯ ಸೇನೆ, ಪೊಲೀಸ್ಇಲಾಖೆ, ಅರಣ್ಯ ಇಲಾಖೆ ವತಿಯಿಂದ ವನ್ಯ ಜೀವಿಗಳ ಸಾಕ್ಷ್ಯ ಚಿತ್ರಗಳು, ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ನ ಮಾಡೆಲ್ ಗಳನ್ನು ಪರ್ದರ್ಶನಕ್ಕಿಡಲಾಗಿದೆ. ಇವುಗಳನ್ನ ನೋಡಲು ಬರುವವರ ಸಂಖ್ಯೆ ನಿನ್ನೆಗಿಂತ ಇಂದು ಹೆಚ್ಚಿದೆ.

ಇನ್ನು ಗ್ರಾಮೀಣ ಕ್ರೀಡೆಗಳಾದ ಚಿನ್ನಿದಾಂಡು, ಕುಂಟೇಬಿಲ್ಲೆ, ಮಲ್ಲಗಂಬ ಪ್ರದರ್ಶನ ಇದ್ದು ವೀಕೆಂಡ್ ಆಗಿದ್ರಿಂದ ಕಬ್ಬನ್ ಪಾರ್ಕ್ ನಲ್ಲಿ ಜನಜಂಗುಳಿ ಗಿಜಿಗುಡ್ತಾ ಇತ್ತು. ಇನ್ನು ಕಬ್ಬನ್ ಪಾರ್ಕ್ ನಲ್ಲಿರೋ ಬ್ಯಾಂಡ್ ವಾಧನ ಕೇಂದ್ರಕ್ಕೆ 100 ವರ್ಷವಾಗಿರೋ ಹಿನ್ನಲೆ ಪುಷ್ಪಗಳಿಂದ ನಿರ್ಮಿಸಿರುವ ಬ್ಯಾಂಡ್ ಸೆಂಟರ್ ಜನರ ಆಕರ್ಷಿಸ್ತಿದ್ದು, ಎಲ್ಲರು ಸೆಲ್ಫಿ ಕ್ಲಿಕ್ಕಿಸಿಕೂಳ್ಳೋದ್ರಲ್ಲಿ ಬ್ಯುಸಿಯಾಗಿದ್ರು.

ಒಟ್ಟಿನಲ್ಲಿ, ನಿನ್ನೆಯಿಂದ ಕಬ್ಬನ್ ಪಾರ್ಕ್ ನ ಯಾವ ಮೂಲೆ ನೋಡಿದ್ರು ಮಕ್ಕಳದ್ದೇ ಕಲರವ. ಸಂಡೇಯಾಗಿದ್ರಿಂದ ಇಂದು ಪುಲ್ ಫ್ಯಾಮಿಲಿಯೊಂದಿಗೆ ಬಂದಿದ್ದ ಪುಟಾಣಿಗಳು ಮೋಜು ಮಸ್ತಿ ಮಾಡೋದ್ರ ಜೊತೆಯಲ್ಲಿ ವಿವಿಧ ಇಲಾಖೆಗಳು ತೆರೆದಿರುವ ಸ್ಟಾಲ್ ಗಳಲ್ಲಿ ಪ್ರದರ್ಶನಕ್ಕಿಟ್ಟಿರುವ ಉಪಯುಕ್ತ ಮಾಹಿತಿಯನ್ನು ಮೈಂಡ್ ನಲ್ಲಿ ತುಂಬಿಕೂಂಡು ಎಂಜಾಯ್ ಮಾಡಿದ್ರು.

ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ: ಪ್ರತಿಭಟನೆಯ ಬಿಸಿ!

ಬೆಂಗಳೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಶುರು ಮಾಡಿದಾಗಿನಿಂದಲೂ ಅದನ್ನು ಬಿನೆಪಿ ವಿರೋಧಿಸುತ್ತಲೇ ಬಂದಿದೆ. ಈ ಬಾರಿಯೂ ಟಿಪ್ಪು ಜಯಂತಿಯನ್ನು ವಿರೋಧಿಸಿ ರಾಜ್ಯ ಬಿಜೆಪಿ ಘಟಕ ಪ್ರತಿಭಟನೆ ನಡೆಸಿತು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಸಂಸದ ಪಿ.ಸಿ.ಮೋಹನ್, ಮಾಜಿ ಡಿಸಿಎಂ ಆರ್. ಅಶೋಕ್, ಎಂ.ಎಲ್.ಸಿ. ನಾರಾಯಣ ಸ್ವಾಮಿ, ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ, ಬಿಬಿಎಂಪಿ ಸದಸ್ಯರು, ಬಿಜೆಪಿ ಮುಖಂಡರು ಭಾಗಿಯಾಗಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಓಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಮಾಡಲಾಗ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ನಾಳೆಯೂ ಟಿಪ್ಪು ಜಯಂತಿಗೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆ ಹಾಳಾಗದಂತೆ ಪೊಲೀಸ್ ಇಲಾಖೆ ಈಗಾಗಲೇ ಎಚ್ಚರ ವಹಿಸಿದೆ.

ಬಿಬಿಎಂಪಿ ಕಚೇರಿಯಲ್ಲಿ ತಮಿಳು ಚಿತ್ರದ ಶೂಟಿಂಗ್!

ಬೆಂಗಳೂರು: ಬಿಜೆಪಿ ಶಾಸಕರಾಗಿರುವ ಸುರೇಶ್ ಕುಮಾರ್ ಅವರು, ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದ ವಿಚಾರವೊಂದು ಇಂದು ಕೆಲಕಾಲ ಬಿಬಿಎಂಪಿ ಅಧಿಕಾರಿಗಳನ್ನು ಗೊಂದಲಕ್ಕಿಡು ಮಾಡಿತ್ತು. ಪಾಲಿಕೆ ಸದಸ್ಯರ ಗೊಂದಲಕ್ಕೆ ಕಾರಣವೇನು ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.

2016ರಲ್ಲಿ ಚಿತ್ರೀಕರಿಸಿದ ಇಮೈಕ ನೋಡಿಗಕಲ್ ಅನ್ನೋ ತಮಿಳು ಚಿತ್ರವನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶೂಟಿಂಗ್ ಮಾಡಲಾಗಿತ್ತು. ಆದ್ರೆ ಈ ಚಿತ್ರಕ್ಕೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಅನುಮತಿ ನೀಡಿಲ್ಲ ಎಂದಿದ್ದಾರೆ. ಆದ್ರಿಂದ ಈ ಚಿತ್ರೀಕರಣಕ್ಕೆ ಅನುಮತಿ ನೀಡಿದವರು ಯಾರು ಎಂದು ತನಿಖೆ ನಡಿಸಲೇಬೇಕೆಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಒತ್ತಾಯಿಸಿದ್ದಾರೆ‌

ಪ್ರಕರಣ ಸಂಬಂಧ ಬಿಬಿಎಂಪಿ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ, ಮೇಯರ್ ತನಿಖೆಗೆ ಸೂಚಿಸಿದರು. ತನಿಖೆಯಲ್ಲಿ ತಿಳಿದು ಬಂದಂತೆ, ಈ ಚಿತ್ರೀಕರಣ ಮಾಡೋದಕ್ಕೆ ಚಿತ್ರತಂಡ ಅನುಮತಿ ಪಡೆದಿದ್ದಾರೆ. ಆದ್ರೆ ಇನ್ನು ಮುಂದೆ ಇಂತ ಯಾವುದೇ ಚಿತ್ರಗಳು ಶೂಟ್ ಮಾಡೋದಕ್ಕೆ ಅನುಮತಿ ನೀಡೊಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭ, ಬಿಬಿಎಂಪಿ ಕಚೇರಿಯಲ್ಲಿ ಹಲವಾರು ಮಹತ್ವದ ಕಡೆತಗಳು ಇರುತ್ತವೆ ಅಂತದ್ರಲ್ಲಿ ತಮಿಳು ಚಿತ್ರ ನಮ್ಮ ಬಿಬಿಎಂಪಿ ಸರ್ಕಾರಿ ಕಚೇರಿಯಲ್ಲಿ ಶೂಟಿಂಗ್ ಮಾಡೋದಕ್ಕೆ ಅನುಮತಿ ಆದ್ರೂ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.