ಗೊಂದಲದ ಗೂಡಾದ ಟಿಪ್ಪು ಜಯಂತಿ: ನಾಳೆ ವಿಧಾಸೌಧದಲ್ಲಿ ಜಯಂತಿ ಆಚರಣೆ

0

ಬೆಂಗಳೂರು: ಕಳೆದ ಮೂರು ವರ್ಷದಿಂದ ಸರ್ಕಾರದ ವತಿಯಿಂದ ಆಚರಿಸ್ತಿರೋ ಟಿಪ್ಪು ಜಯಂತಿಯನ್ನು ಈ ಬಾರಿಯೂ ಆಚರಿಸಲು ರಾಜ್ಯ ಸರ್ಕಾರ ತಯಾರಿ ನಡೆಸ್ತಿದೆ. ನಾಳೆ ನಡೆಯುವ ಕಾರ್ಯಕ್ರಮಕ್ಕೆ ವಿಧಾನಸೌಧದಲ್ಲಿ ಸಕಲ ಸಿದ್ದತೆಗಳೂ ನಡೀತಿದ್ರೆ ಮತ್ತೊಂದು ಕಡೆ ಬಿಜೆಪಿ ಪ್ರತಿಭಟನೆ ಮಾಡ್ತಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭಿಸಿದ ಟಿಪ್ಪು ಜಯಂತಿ ವಿವಾದಗಳಿಂದಲೇ ಸದ್ದು ಮಾಡ್ತಿದೆ. ನಾಳೆ ನಡೆಯುವ ಟಿಪ್ಪು ಜಯಂತಿಗೆ ಈಗಾಗಲೇ ಆಹ್ವಾನ ಪತ್ರಿಕೆ ಸಿದ್ಧವಾಗಿದ್ದು ಸ್ಥಳ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಎಂದು ತೀರ್ಮಾನಿಸಲಾಗಿದೆ. ಜೊತೆಗೆ ಅದರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರೇ ನಾಪತ್ತೆಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿಗಳೇ ವಿಶ್ರಾಂತಿಗೆ ತೆರಳುವುದರಿಂದ ಹೆಸರು ಹಾಕದಂತೆ ಸೂಚಿಸಿದ್ದರು ಎಂದು ಸಮರ್ಥನೆ ನೀಡಿದ್ದಾರೆ.

ಟಿಪ್ಪು ಜಯಂತಿಯಿಂದ ದೂರ ಉಳಿಯಲೆಂದೆ ಸಿಎಂ ಕುಮಾರಸ್ವಾಮಿ ವಿಶ್ರಾಂತಿಗೆ ತೆರಳಿದ್ದಾರೆಯೇ ಎಂಬ ಪ್ರಶ್ನೆಗಳು ಸಹ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್!

ಬೆಂಗಳೂರು: ಬಹುನಿರೀಕ್ಷಿತ ಸಿನಿಮಾ ಕೆ.ಜಿ.ಎಪ್ ನ ಟ್ರೇಲರ್ ಲಾಂಚ್ ಬಾರಿ ಸೌಂಡ್ ಮಾಡ್ತಾ ಇದೆ. ಒರಾಯನ್ ಮಾಲ್ ಲ್ಲಿ ಇಂದು ಕೆ.ಜಿ.ಎಪ್ ನ ಟ್ರೇಲರ್ ಲಾಂಚ್ ಮಾಡಲಾಯಿತು. ೫ ಭಾಷೆಗಳಲ್ಲಿ ಟ್ರೇಲರ್ ಲಾಂಚ್ ಆಗಿದ್ದು ಸಿನಿಮಾವು ಕೂಡ ಅಷ್ಟೇ ಸೌಂಡ್ ಮಾಡುವುದರ ಬಗ್ಗೆ ನಿರೀಕ್ಷೆ ಮೂಡಿಸಿದೆ.

ನಟ ಯಶ್ ಅಭಿನಯದ ಕೆ.ಜಿ.ಎಪ್ ಚಿತ್ರ ಎರಡು ವರ್ಷ ಗಳಿಂದ ಸಿಕ್ಕಾಪಟ್ಟೆ ನಿರೀಕ್ಷೆ ಯನ್ನು ಹುಟ್ಟಿಸಿತ್ತು. ಎಲ್ಲ ಕುತೂಹಲಕ್ಕೂ ಪುಲ್ ಸ್ಟಾಪ್ ಇಡುವಂತೆ ಚಿತ್ರದ ಟ್ರೇಲರ್ ಲಾಂಚ್ ಆಗಿ ಆಗಲೇ ಸಾಮಾಜಿಕ ಜಾಲಾ ತಾಣದಲ್ಲಿ ‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ‌ಮಾಡ್ತಾ ಇದೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರು, ಸತತ ನಾಲ್ಕು ವರ್ಷಗಳ ಶ್ರಮದ ಫಲವಾಗಿ ಕೆ.ಜಿಎಪ್ ಚಿತ್ರ ಚೆನ್ನಾಗಿ ಮೂಡಿಬಂದಿದ್ದು ಒಂದು ಟೀಂ ನ ಪರಿಶ್ರಮ ಇಲ್ಲಿ ತುಂಬಾ ‌ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ರಾಕಿಂಗ್ ಸ್ಟಾರ್ ಕೆ.ಜಿಎಪ್ ನ ಸೆಂಟ್ರಾ ಆಪ್ ಅಟ್ರೇಕ್ಷನ್ ಕೆ‌.ಜಿ.ಎಪ್ ನಲ್ಲಿ ಯಶ್ ಅಬ್ಬರ ಜೋರಾಗಿಯೇ ಇದೆ. ಡಿಸೆಂಬರ್ ಲ್ಲಿ ಕೆ.ಜಿ.ಎಪ್ ದೂಳೆಬ್ಬಿಸಲು ರೆಡಿಯಾಗಿದೆ. ಕೆಜಿಎಫ್ ಮೂಲಕ ಚಂದನವನಕ್ಕೆ ಮತ್ತೊಬ್ಬ ಹೊಸ ನಾಯಕಿ ಎಂಟ್ರಿ ಕೂಟ್ಟಿದ್ದಾರೆ. ಮೊದಲ ಚಿತ್ರವೇ ಬಿಗ್ ಬಜೆಟ್ ಚಿತ್ರವಾಗಿದ್ದು, ಯಶ್ ಜೊತೆ ಅಭಿನಯಿಸಿದ್ದಾರೆ.

2019ಕ್ಕೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಮುಂದುವರೆಯಲಿದೆ: ವಿಶ್ವನಾಥ್

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಮೈತ್ರಿ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕಿಳಿಯಲಿದ್ದಾರೆ. ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.

ಬೆಂಗಳೂರಿನಲ್ಲಿಂದು ಮಧುಬಂಗಾರಪ್ಪ ಭೇಟಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಮಧು ಬಂಗಾರಪ್ಪ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಶಿವಮೊಗ್ಗ ಬೈ ಎಲೆಕ್ಸನ್ ನಲ್ಲಿ ಉತ್ತಮ ಹೋರಾಟ ಮಾಡಿದ್ದಾರೆ. ವಿದೇಶದಲ್ಲಿದ್ದ ವೇಳೆ ಸಿಎಂ ಕುಮಾರಸ್ವಾಮಿ ಅವ್ರು ಮಧುಗೆ ಸ್ಪರ್ಧಿಸಬೇಕು ಅಂತಾ ಹೇಳಿದ ತಕ್ಷಣವೇ. ವಿದೇಶದಿಂದ ವಾಪಸ್ ಬಂದು ಕಣಕ್ಕಿಳಿದ್ರು. 3 ಲಕ್ಷ ಲೀಡ್ ನಲ್ಲಿದ್ದ ಯಡಿಯೂರಪ್ಪ ಅವರ ಗೆಲುವನ್ನ 50 ಸಾವಿರಕ್ಕೆ ಇಳಿಸಿದ್ದು ಮಧು ಗರಿಮೆ. ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದರು.

ಯಡಿಯೂರಪ್ಪನವರ ಭದ್ರ ಕೋಟೆಯಲ್ಲಿ ದೊಡ್ಡ ಬಿರುಕು ಬಿಟ್ಟಿದೆ. ಬಳ್ಳಾರಿ ದೆಹಲಿಗೆ ಮಾರ್ಗವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಅಲ್ಲೂ ಕೂಡ ಅವರ ಕೋಟೆ ಛಿದ್ರ ಛಿದ್ರವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಎಲ್ಲೂ ಸುತ್ತಾಡದಂತೆ ಮಧು ಅವರನ್ನು ಶಿವಮೊಗ್ಗದಲ್ಲಿ ಕಟ್ಟಿಹಾಕಿದರು. ಮಧು ಕೇವಲ ಶಿವಮೊಗ್ಗಕ್ಕೆ ಸೀಮಿತವಲ್ಲ ಅವರು ರಾಜ್ಯದ ನಾಯಕರು. ಯುವಕರಿದ್ದಾರೆ ಅವರ ಭವಿಷ್ಯ ಉತ್ತಮವಾಗಿದೆ ಎಂದು ಹೇಳಿದರು.

2019 ಚುನಾವಣೆಯಲ್ಲಿ ಮೈತ್ರಿ ಸಂಬಂಧ ಆದಷ್ಟು ಬೇಗ ಎರಡೂ ಪಕ್ಷಗಳು ಮಾತುಕತೆ ಶುರು ಮಾಡುತ್ತೇವೆ. ಈಗಾಲೇ ಮೂರು ಕ್ಷೇತ್ರಗಳಲ್ಲಿ ಹಂಚಿಕೆ ಆಗಿದೆ. ಉಳಿದ 25 ಕ್ಷೇತ್ರಗಳನ್ನು ಎರಡೂ ಪಕ್ಷಗಳು ಮಾತುಕತೆ ನಡೆಸಿ ಹಂಚಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮಾತನಾಡಿದ ಮಧುಬಂಗಾರಪ್ಪ, ಸೋಲನ್ನು ನನ್ನ ಹೆಗಲಿಗೆ ತೆಗೆದುಕೊಳ್ಳುತ್ತೇನೆ. ಶಿವಮೊಗ್ಗದಲ್ಲಿ ಮಧು ಸೋತರು ಸಹ ರಾಜ್ಯದಲ್ಲಿ ಮೈತ್ರಿ ಸರ್ಕಾರ ಗೆದ್ದಿದೆ. ಶಿವಮೊಗ್ಗ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಉಪ ಚುನಾವಣೆಯ ಮತ ಗಳಿಕೆಯೇ ಸಾಕ್ಷಿ ಎಂದರು. ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರವೇ ನಮ್ಮದು ಅದರಲ್ಲಿ ನಾನು ಯಾವತ್ತು ಪಾಲು ಕೇಳುವುದಿಲ್ಲ ಎಂದು ಹೇಳಿದರು.

ದೀಪಾವಳಿ ಸಂಭ್ರಮದಲ್ಲಿದ್ದ ರೆಡ್ಡಿಗೆ ಸಿಸಿಬಿ ಶಾಕ್: ರೆಡ್ಡಿ ಬಂಧನ?

ಬೆಂಗಳೂರು: ಕಳೆದ ಬಾರಿ ವರಮಹಾಲಕ್ಷಿ ಹಬ್ಬದ ದಿನ ಐಟಿ ಇದ್ದಕ್ಕಿದ್ದ ಹಾಗೆ ಸಚಿವ ಡಿಕೆ ಶಿವಕುಮಾರ್ ‌ಗೆ ಶಾಕ್ ನೀಡಿತ್ತು. ಇಂದು ದೀಪಾವಳಿ ಸಂಭ್ರಮದಲ್ಲಿದ್ದ ಜನಾರ್ದನ ರೆಡ್ಡಿಗೆ ಸಿಸಿಬಿ ಶಾಕ್ ನೀಡಿದೆ. ನೋಟು ರದ್ಧತಿ ವೇಳೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಸಂಬಂಧ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ರೆಡ್ಡಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ‌.

ಗಣಿದಣಿ ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಹೊಸ ಪ್ರಕರಣ ಕಂಟಕ ತಂದಿದೆ. ಇಡಿ ಅಧಿಕಾರಿಯೋರ್ವನ ಜೊತೆ ಸೇರಿ ಹಳೆ ಪ್ರಕರಣವೊಂದನ್ನು ಮುಚ್ಚಿಹಾಕಲು ರೆಡ್ಡಿ 20 ಕೋಟಿ ಡೀಲ್ ಮಾಡಿ ಸಿಕ್ಕಿಬಿದ್ದಿದ್ದಾರೆ.

ಆ್ಯಂಬಿಡೆಂಟ್ ಮಾರ್ಕೇಟಿಂಗ್ ಕಂಪನಿ ಮೋಸ ಮಾಡಿದೆ ಅಂತ ಡಿಜೆ ಹಳ್ಳಿ ಸೇರಿದಂತೆ ಹಲವು ಕಡೆ ನೂರಾರು ಜನರು ಪ್ರಕರಣ ದಾಖಲಿಸಿದ್ರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ವಿಚಾರಣೆಗಾಗಿ ಆ್ಯಂಬಿಡೆಂಟ್ ಕಂಪನಿಯ ಮಾಲೀಕ ಫರೀದ್ ಖಾನ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಈ ವೇಳೆ ಆತನ ಅಕೌಂಟ್ ಪರಿಶೀಲನೆ ಮಾಡಿದಾಗ, ಫರೀದ್ ಖಾನ್ ರಮೇಶ ಕಠೋರಿಗೆ 18 ಕೋಟಿ ಹಣ ಕಳಿಸಿರೋದು ಬೆಳಕಿಗೆ ಬಂದಿದೆ.

18 ಕೋಟಿ ಹಣ ರಮೇಶನಿಗೆ ವರ್ಗಾ ಮಾಡಿದ್ದು ಏಕೆ? ಯಾರಿಗಾಗಿ ಅಂತ ಪೊಲೀಸ್ರು ವಿಚಾಸಿದಾಗ ಫರೀದ್ ಖಾನ್ ಹಳೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾನೆ. ಫರೀದ್ ಖಾನ್ ವಿರುದ್ಧ 2017 ರಲ್ಲಿ ಬ್ಲಾಕ್ ಅಂಡ್ ವೈಟ್ ಪ್ರಕರಣಕ್ಕೆ ಸಂಬಂಧಿಸದಂತೆ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಫರೀದ್ ಖಾನ್ ಮನೆ ಸೇರಿದಂತೆ ಹಲವು ಕಡೆ ದಾಳಿ ಮಾಡಿದ್ರು. ಅಲ್ಲದೇ ಕೋಟ್ಯಾಂತರ ರೂಪಾಯಿ ಮೌಲ್ಯದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಜೊತೆಗೆ ಪ್ರಕರಣ ಕೂಡ ಇನ್ನು ಇಡಿಯಲ್ಲೇ ನಡೆಯುತ್ತಿದೆ. ಈ ಪ್ರಕರಣವನ್ನು ಇಡಿ ಅಧಿಕಾರಿಗಳ ಜತೆ ಸೇರಿ ಮುಚ್ಚಿಹಾಕಲು ಫರೀಧ್ ಖಾನ್ ಪ್ಲಾನ್ ಮಾಡಿದ್ದ.

ಈ ಪ್ರಕರಣವನ್ನ ಮುಚ್ಚಿಹಾಕಲು ಏನು ಮಾಡಬೇಕು ಎಂದು ಫರೀದ್ ಖಾನ್, ಆಪ್ತ ಸ್ನೇಹಿತ ಅಲಿಖಾನ್ ಬಳಿ ಕೇಳಿದಾಗ ಅಲಿಖಾನ್, ಜನಾರ್ದನ ರೆಡ್ಡಿಯವರ ಹೆಸರನ್ನ ಪ್ರಸ್ತಾಪಿಸುತ್ತಾನೆ. ರೆಡ್ಡಿಯವರು ತಮ್ಮ ಕೇಸ್ ನ್ನ ಈಗಾಗಲೇ ಡೀಲ್ ಮಾಡಿ ಬಗೆ ಹರಿಸಿಕೊಂಡಿದ್ದು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅವರ ಆಸ್ತಿ ಮರಳಿ ಬರಲಿದೆ ಎಂದಿದ್ದರಂತೆ. ಅದರಂತೆ ಫರೀದ್ ಖಾನ್ ನನ್ನ ಸ್ನೇಹಿತ ಅಲಿಖಾನ್ ಮತ್ತು ಬ್ರೀಜೇಶ್ ರೆಡ್ಡಿ, ಗಾಲಿ ಜನಾರ್ದನ್ ರೆಡ್ಡಿ ಬಳಿ ಕರೆದೋಯ್ದು ಡೀಲಿಗೆ ಕೂರಿಸುತ್ತಾರೆ. ಕೊನೆಯಲ್ಲಿ 20 ಕೋಟಿಗೆ ಡೀಲ್ ಮುಗಿಯುತ್ತದೆ. 20 ಕೋಟಿಯಲ್ಲಿ ಮೊದಲು ಎರಡು ಕೋಟಿ ಹಣ ನಗದು ರೂಪದಲ್ಲಿ ಪಡೆಯುತ್ತಾರೆ ರೆಡ್ಡಿ. ಬಳಿಕ 18 ಕೋಟಿ ಹಣವನ್ನ ರಮೇಶ್ ಕಠೋರಿ ಮೂಲಕ ಬಂಗಾರದ ರೂಪದಲ್ಲಿ 57 ಕೆಜಿ ಚಿನ್ನವನ್ನು ಪಡಯುತ್ತಾರೆ.

ಒಟ್ಟಾರೆಯಾಗಿ ಜನಾರ್ದನ್ ರೆಡ್ಡಿ , ಫರೀದ್ ಖಾನ್ ಹಳೆ ಪ್ರಕರಣವೊಂದನ್ನು ಇಡಿ ಅಧಿಕಾರಿಗಳ ಜತೆ ಸೇರಿ ಮುಚ್ಚಿ ಹಾಕಲು ಹೋಗಿ ತಾವೇ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದೀಗ ರೆಡ್ಡಿ ಎಸ್ಕೆಪ್ ಆಗಿದ್ದು, ರೆಡ್ಡಿ ಬಂಧನಕ್ಕಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.

ಬಿಜೆಪಿ ಜೊತೆ ಹೋದ್ರೆ ಎಲ್ಲಾ ಕೇಸ್ ಖಲ್ಲಾಸ್, ಇಲ್ಲಾಂದ್ರೆ ಎಲ್ಲವನ್ನು ಎದುರಿಸಬೇಕು: ಡಿ.ಕೆ.ಸುರೇಶ್

ಬೆಂಗಳೂರು: ಬಿಜೆಪಿಗೆ ಹೋದ್ರೆ ಎಲ್ಲಾ ಕೇಸ್‌ಗಳು ಖಲ್ಲಾಸ್ ಆಗಲಿವೆ. ಇಲ್ಲದಿದ್ರೆ ಸಿಬಿಐ, ಇಡಿ, ಐಟಿ ದಾಳಿಗಳನ್ನು ಎದುರಿಸಬೇಕಾಗುತ್ತದೆ. ವಿರೋಧ ಪಕ್ಷಗಳಿಗೆ ಈ ಎರಡು ದಾರಿ ಬಿಟ್ಟರೆ ಬೇರೆ ದಾರಿ ಇಲ್ಲ. ಕೇಂದ್ರ ಸರ್ಕಾರ ತನ್ನ ಅದೀನದ ವಿವಿಧ ತನಿಖಾ ಸಂಸ್ಥೆಯನ್ನು ಬಳಸಿಕೊಂಡು ನಮ್ಮ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದರು.

ಸದಾಶಿವನಗರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಂಸತ್ ಸದಸ್ಯರಾದ ಡಿ.ಕೆ.ಸುರೇಶ್ ಮುದ್ದಹನುಮೇಗೌಡ, ಧೃವನಾರಾಯಣ್, ಚಂದ್ರಪ್ಪ, ಕೆ.ಸಿ. ರಾಮಮೂರ್ತಿ, ಜಿ.ಸಿ. ಚಂದ್ರಶೇಖರ್ ಜಂಟಿ ಸುದ್ಧಿಗೋಷ್ಠಿ ನಡೆಸಿದರು. ಉಪ ಚುನಾವಣೆ ಆರಂಭದಲ್ಲಿ ಬಿಜೆಪಿ ಮುಖಂಡ ಶ್ರೀರಾಮುಲು ಡಿಕೆಶಿ ಜೈಲಿಗೆ, ಶಾಂತಾ ದೆಹಲಿಗೆ ಎಂದು ಹೇಳಿದ್ದರು. ಇದನ್ನು ಗಮನಿಸಿದರೆ ನಮ್ಮ ವಿರುದ್ಧ ಸಿಬಿಐ ಮೋರ್ಚಾ, ಇಡಿ ಮೋರ್ಚಾ, ಐಟಿ ಮೋರ್ಚಾಗಳು ಕೆಲಸ ಮಾಡುತ್ತಿವೆ ಎಂಬುದು ಸ್ಪಷ್ಟ. ಶ್ರೀರಾಮುಲು ಹೇಳಿಕೆ ಅವರು ಕೊಟ್ಟಿದ್ದಲ್ಲ, ಅವರ ರಾಷ್ಟ್ರೀಯ ನಾಯಕರ ಹೇಳಿಕೆ ಎಂಬುದು ನನ್ನ ಅಭಿಪ್ರಾಯ ಎಂಬ ಅನುಮಾನವಿದೆ. ರಾಜ್ಯದ ಜನಪ್ರತಿನಿಧಿಗಳಿಗೆ ಇಡಿ ನಿರ್ದೇಶಕರು ಭೇಟಿಗೆ ಅವಕಾಶ ನೀಡುತ್ತಿಲ್ಲ ಇದು ಇನ್ನಷ್ಟು ಬೇಸರ ತರಿಸಿದೆ ಎಂದರು.

ಸಂಸದ ಕೆ.ಸಿ.ರಾಮಮೂರ್ತಿ ಮಾತನಾಡಿ, ಇಡಿ ನಿರ್ದೇಶಕರ ಭೇಟಿಗೆ ಒಂದೂವರೆ ತಿಂಗಳಿಂದ ಅವಕಾಶ ಕೇಳುತ್ತಿದ್ದೇವೆ. ಆದ್ರೆ, ಅವರು ಯಾವುದೇ ಉತ್ತರ ನೀಡಿಲ್ಲ. ಅವರಿಗೆ ಯಾವುದಾದರೂ ಒತ್ತಡವಿರ ಬಹುದು. ಕನಿಷ್ಠ ಹೊಸದಾಗಿ ಬಂದಿರುವ ಇಡಿ ನಿರ್ದೇಶಕರಾದರು ನಮಗೆ ಭೇಟಿಗೆ ಅವಕಾಶ ನೀಡಲಿ. ನಾವು ಮತ್ತೆ ಮತ್ತೆ ಅವರನ್ನು ಭೇಟಿಯಾಗಲು ಅವಕಾಶ ಕೇಳುತ್ತೇವೆ. ಇಡಿ ನಿರ್ದೇಶಕರ ನಡೆ ನಮಗೆ ಬೇಸರ ತರಿಸಿದೆ ಎಂದು ಹೇಳಿದರು.

ಸಂಸದ ದ್ರುವನಾರಾಯಣ್ ಮಾತನಾಡಿ, ಸಿಬಿಐ, ಇಡಿ, ಐಟಿಯನ್ನು ಕೇಂದ್ರ ಸರ್ಕಾರ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ತಮ್ಮ ರಾಜಕೀಯ ವಿರೋಧಿಗಳನ್ನು ಬಗ್ಗು ಬಡಿಯಲು ಈ ರೀತಿ ಮಾಡುತ್ತಿದ್ದಾರೆ‌. ಅಧಿಕಾರ ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಸದೆಬಡಿಯುವ ಕೆಲಸ ಮಾಡಲಾಗುತ್ತಿದೆ ಎಂದರು.

ಸಂಸದ ಜಿ.ಸಿ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿರುವ ಎಲ್ಲಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿರೋಧ ಪಕ್ಷದವರಿಗಿರುವುದು ಎರಡೇ ದಾರಿ. ಒಂದು ಅವರ ಜೊತೆ ಹೋಗುವುದು ಇಲ್ಲ ಏಜೆನ್ಸಿಗಳನ್ನು ಎದುರಿಸುವುದು. ಡಿಕೆ ಶಿವಕುಮಾರ್ ಅವರನ್ನು ದಿನದಿಂದ ದಿನಕ್ಕೆ ದೊಡ್ಡ ಲೀಡರ್ ಆಗಿ ನೀವೇ ಬೆಳೆಸುತ್ತಿದ್ದೀರಿ. ಇವತ್ತು ಡಿಕೆಶಿ ವ್ಯಕ್ತಿತ್ವದ ಬಗ್ಗೆ ರಾಷ್ಟ್ರೀಯ ವಾಹಿನಿಗಳಲ್ಲೂ ಚರ್ಚೆ ನಡೆಯುತ್ತಿದೆ. ಯಾರಿಂದಲೂ ಡಿಕೆಶಿ ಮುಗಿಸಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.

ಬಳ್ಳಾರಿಗೆ ಅಭಿವೃದ್ಧಿಯ ಬಾಂಬ್ ಹಾಕುವೆ: ಡಿಕೆಶಿ

ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದ ವೇಳೆ ನಾನು ಬಾಂಬ್ ಹಾಕ್ತೀನಿ ಎಂದು ಪ್ರಚಾರ ಆಯ್ತು ಆದರೆ ಬಳ್ಳಾರಿ ಅಭಿವೃದ್ದಿಯೇ ನನ್ನ ಬಾಂಬ್ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್,ಶ್ರೀರಾಮುಲು ಅಣ್ಣಗೆ ಅಭಿನಂದನೆ‌ ಬಹಳ ಶಾಂತ ರೀತಿಯಿಂದ ರಾಮುಲು ಚುನಾವಣೆ ಎದುರಿಸಿದ್ದಾರೆ
ಅವರು ಸೋತಿರಬಹುದು. ಆದರೆ ಅದು ಮುಖ್ಯ ಅಲ್ಲ ಎಂದು ಕುಟುಕಿದ್ರು.

ಕಾರ್ಯಕರ್ತರು, ಜನರಿಗೆ ತೊಂದರೆಯಾಗದ ರೀತಿಯಲ್ಲಿ ಚುನಾವಣೆ ನಡೆದಿದೆ‌ಪಕ್ಷ, ಜಾತಿ, ಧರ್ಮ ಬಿಟ್ಟು ಮತದಾರರು ಬೆಂಬಲಿಸಿದ್ದಾರೆ, ನಾವು ಗೆದ್ದಿದ್ದೇವು ಎಂದು ಹಿಗ್ಗಲ್ಲ ಇದು ಐದು ತಿಂಗಳಿಗಾಗಿ ನಡೆದ ಚುನಾವಣೆ ಆದರೆ ಐದು ವರ್ಷದ ಗುರಿಯಿಟ್ಟೇ ಚುನಾವಣೆ ನಡೆಸಿದ್ವಿ ನಾನು ಬಾಂಬ್ ಹಾಕ್ತೀನಿ ಎಂದು ಪ್ರಚಾರ ಆಯ್ತು ಅಭಿವೃದ್ದಿಯೇ ನನ್ನ ಬಾಂಬ್ ಬಳ್ಳಾರಿ ದೂಳು ಮುಕ್ತ ಆಗಬೇಕು ಉದ್ಯೋಗ, ನೀರು ಕೊಡುವುದು ನಮ್ಮ ಮುಂದಿರೋ ಸವಾಲು ಎಂದ್ರು.

ಚುನಾವಣೆ ಗೆಲುವು ರಾಹುಲ್ ಗೆ ಸಮರ್ಪಣೆ ಮಾಡುತ್ತೇನೆ,
ಎಲ್ಲಾ ಶಾಸಕರು, ಸಿದ್ದರಾಮಯ್ಯ, ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರು ನನಗೆ ಜವಾಬ್ದಾರಿ ನೀಡಿದ್ದರು. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದ್ರು.