ಇನ್ನಾದರೂ ಬಿಜೆಪಿಯವರು ಕುದುರೆ ವ್ಯಾಪಾರ ನಿಲ್ಲಿಸಲಿ: ವೇಣುಗೋಪಾಲ್

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ರಾಜ್ಯದಲ್ಲಿ ಅಸ್ಥಿರ ಗೊಳಿಸಲು ನಿರಂತರ ಯತ್ನ ಮಾಡುತ್ತಿರುವ ಬಿಜೆಪಿಗೆ ಈ ಫಲಿತಾಂಶ ಜನರು ನೀಡಿದ ಉತ್ತರವಾಗಿದೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ಅಸ್ಥಿರ ಗೊಳಿಸಲು ಕಳೆದ ನಾಲ್ಕೈದು ತಿಂಗಳಿಂದ ಬಿಜೆಪಿ ಯತ್ನಿಸುತ್ತಿದೆ. ಕುದುರೆ ವ್ಯಾಪಾರ ಮಾಡುತ್ತಲೇ ಬಂದಿದೆ. ಇದನ್ನು ಜನ ಒಪ್ಪಿಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಸೆಮಿಫೈನಲ್ ಗೆಲುವು
ನಾವು ಸೆಮಿಫೈನಲ್ಸ್ ಗೆದ್ದಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಗೆ ದೇಶದ ಸ್ಥಿತಿ ಏನಿರಲಿದೆ ಎಂದು ಕರ್ನಾಟಕದ ಮತದಾರರು ತೋರಿಸಿಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ಇದೇ ರೂಪದಲ್ಲಿ ಗೆಲುವು ಸಿಗಲಿದೆ ಎಂಬ ವಿಶ್ವಾಸ ಇದೆ. ಸೆಮಿಫೈನಲ್ಸ್ ಗೆದ್ದಿದ್ದೇವೆ, ಫೈನಲ್ ಕೂಡ ಗೆಲ್ಲುತ್ತೇವೆ ಎಂದರು.
ಐದೂ ಗೆದ್ದಿದ್ದೇವೆ
ಡಿಸಿಎಂ ಡಾ. ಜಿ. ಪರಮೇಶ್ವರ್ ಮಾತನಾಡಿ, ಶಿವಮೊಗ್ಗದಲ್ಲಿ ಬಿಜೆಪಿ ಗೆಲುವು ಮೂರು ಲಕ್ಷದಿಂದ 50 ಸಾವಿರಕ್ಕೆ ಇಳಿದಿದೆ. ನೈತಿಕವಾಗಿ ನಾವು ಇಲ್ಲಿಯೂ ಗೆದ್ದಿದ್ದೇವೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತೆ ಭದ್ರವಾಗಿದೆ. ಜಮಖಂಡಿಯಲ್ಲಿ ಗೆಲುವಿನ ಅಂತರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದೂ ಸಾಧನೆ. ಬಿಜೆಪಿಗೆ ಮುಖಭಂಗವಾಗಿದೆ. ಮೈತ್ರಿ ಸರ್ಕಾರಕ್ಕೆ ಮತದಾರರು ಸಮ್ಮತಿಯ ಮುದ್ರೆ ಒತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ರಾಜ್ಯದ ಮತದಾರ ಉತ್ತರ ಕೊಟ್ಟಿದ್ದಾನೆ. ನಾವು ಸಮ್ಮಿಶ್ರ ಸರ್ಕಾರ ಒಟ್ಟಾಗಿ ಕೇಂದ್ರದಲ್ಲಿ ಕೂಡ ಅಧಿಕಾರ ನಡೆಸಲು ಸೂಕ್ತ ಎಂಬ ಉತ್ತರ ಸಿಕ್ಕಿದೆ. 28 ಕ್ಷೇತ್ರದಲ್ಲಿ ಕೂಡ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಶ್ರಮಿಸುತ್ತೇವೆ. ಸಫಲತೆ ಸಿಗಲಿದೆ ಎಂಬ ವಿಶ್ವಾಸ ಇದೆ. ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮತದಾರರು ಉತ್ತಮ ಫಲಿತಾಂಶ ತೋರಿಸಿ ಸಮ್ಮಿಶ್ರ ಸರ್ಕಾರಕ್ಕೆ ಒಲವು ತೋರಿಸಿದ್ದಾರೆ ಎಂದರು.
ಇನ್ನಷ್ಟು ಅಂತರದ ಸೋಲಾಗಲಿದೆ
ಒಗ್ಗಟ್ಟಿನ ಪ್ರಯತ್ನಕ್ಕೆ ಗೆಲುವಾಗಿದೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನೀವು ನಕಾರಾತ್ಮಕ ರಾಜಕಾರಣ ಬಿಡಿ, ಜವಾಬ್ದಾರಿಯುತ ಪಕ್ಷವಾಗಿ ಮುಂದುವರಿಯಿರಿ. ಇದು ನಿಮಗೆ ಪಾಠ. ಇದೇ ರೀತಿ ಮುಂದುವರಿದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇನ್ನಷ್ಟು ಅಂತರದ ಸೋಲಾಗಲಿದೆ.
ಸಾಲಮನ್ನಾ ವಿಚಾರ ಸೇರಿದಂತೆ ಅನೇಕ ವಿಚಾರದಲ್ಲಿ ಬಿಜೆಪಿ ಪಕ್ಷವು ಸಮ್ಮಿಶ್ರ ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸುತ್ತಾ ಬಂದಿದೆ. ನಾವು ಒಟ್ಟಾಗಿ ಶ್ರಮಿಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇವೆ. ಹೈಕಮಾಂಡ್ ಮಾರ್ಗದರ್ಶನದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದೇವೆ. ರಾಜ್ಯದ ಐದು ಕ್ಷೇತ್ರದ ಮತದಾರರು, ದೇಶಕ್ಕೆ ಸಂದೇಶ ನೀಡಿದ್ದಾರೆ. ಮೋದಿ ಸರ್ಕಾರ ಮುಂದಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಮೋದಿ ಹೊಗಳುವ ಕಾರ್ಯ ಆಗುತ್ತಿದೆ. ಅವರ ಸಾಧನೆ ಏನೆಂದು ಎಲ್ಲೂ ಹೇಳುತ್ತಿಲ್ಲ. ಇಂದಿನ ಫಲಿತಾಂಶ ಭಾಷಣಕ್ಕೆ ಬೆಲೆ ಇಲ್ಲ ಅನ್ನುವುದನ್ನು ತೋರಿಸುತ್ತಿದೆ. ಬಿಜೆಪಿ ಜನವಿರೋಧಿ ನೀತಿ, ಮೋದಿ ಆಡಳೊತವನ್ನು ಪ್ರಶ್ನಿಸಿದೆ. ಇಂದಿನ ಫಲಿತಾಂಶ ಮುಂದಿನ ಐದು ರಾಜ್ಯ, 2019 ರ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿದೆ. ಜನ ಬಿಜೆಪಿ ಸರ್ವಾಧಿಕಾರ ಒಪ್ಪಿಲ್ಲ ಅನ್ನುವುದನ್ನು ತೋರಿಸಿದೆ ಎಂದರು.

ನಮ್ಮ ಶಾಸಕರ ಸೆಳೆಯಲು ಬಿಜೆಪಿಯಿಂದ ಕೋಟಿ ಕೋಟಿ‌ ಹಣದ ಆಮಿಷ: ಸಿಎಂ

ಬೆಂಗಳೂರು: ಬಿಜೆಪಿ ನಾಯಕರು ಇನ್ನೂ ಆಪರೇಷನ್ ಕಮಲದ ಯತ್ನವನ್ನು ಬಿಟ್ಟಿನಲ್ಲಿ ಕೋಟಿ ಕೋಟಿ ರೂ.ಗಳ ಆಮಿಷ ಒಡ್ಡಿ ನಮ್ಮ‌ ಶಾಸಕರನ್ನು ಸೆಳೆಯುವ ವ್ಯರ್ಥ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ‌ ಕುಮಾರಸ್ವಾಮಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಆಗಲೇ ತೀರ್ಮಾನಿಸಿದ್ದೇವೆ ಎರಡೂ ಪಕ್ಷದ ನಾಯಕರು ಚರ್ಚಿಸಿ ಸೀಟು ಹಂಚಿಕೆ ಮಾಡುತ್ತಾರೆ‌ ೨೮ ಸ್ಥಾನ ಗೆಲ್ಲುವುದು ನಮ್ಮ‌ ಗುರಿ‌ ಎರಡು ಸ್ಥಾನ ಗೆದ್ದಿದ್ದೇವೆ ಅಂತ ಮೈಮರೆಯಲ್ಲ‌ ನಮ್ಮ ಜವಬ್ದಾರಿಯನ್ನ ಜನ ಹೆಚ್ಚಿಸಿದ್ದಾರೆ‌ ಜವಬ್ದಾರಿಯಿಂದ ನಾವು ಮತ್ತಷ್ಟು ಪ್ರಬಲಗೊಳಿಸುತ್ತೇವೆ ಸರ್ಕಾರ ಇನ್ನಷ್ಟು ಜನಪರ‌ ಯೋಜನೆ ತರುತ್ತೇವೆ ಎಂದ್ರು.

ಮಂಡ್ಯ ಹಾಗೂ ಬಳ್ಳಾರಿಯಲ್ಲಿ ದಾಖಲೆಯ ಜಯ ಸಿಕ್ಕಿದೆ
ಶಿವಮೊಗ್ಗದಲ್ಲಿ ಕೊನೆಯ ಹಂತದಲ್ಲಿ ಜೆಡಿಎಸ್ ಅಭ್ಯರ್ಥಿ ತೀರ್ಮಾನ ಆಯ್ತು ಕೊನೆಯ ಹಂತದಲ್ಲಿ ಚುನಾವಣೆ ಸಿದ್ದತೆ ಮಾಡಿಕೊಂಡಿದ್ದೆವು.ಶಿವಮೊಗ್ಗದಲ್ಲಿಸೋತಿರಬಹುದು ಆದ್ರೆ ನೈತಿಕವಾಗಿ ಗೆದ್ದಿದ್ದೇವೆ,ಮೊದಲೇ ಅಭ್ಯರ್ಥಿ ತೀರ್ಮಾನ ಆಗಿದಿದ್ರೆ ಶಿವಮೊಗ್ಗದಲ್ಲೂ ಗೆಲ್ಲುತ್ತಿದ್ದೆವು‌,ಶಿವಮೊಗ್ಗ, ಜಮಖಂಡಿ ಹಾಗೂ ರಾಮನಗರದ ಜನತೆಗೆ ಎರಡೂ ಪಕ್ಷದ ವತಿಯಿಂದ ಅಭಿನಂಧನೆ ಸಲ್ಲಿಸುತ್ತೇನೆ ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ, ಡಿಸಿಎಂ ಪರಮೇಶ್ವರ್, ಡಿಕೆಶಿ, ದಿನೇಶ್ ಗುಂಡೂರಾವ್ ಸೇರಿ ಎಲ್ಲರೂ ಗೆಲುವಿಗೆ ಕಾರಣರಾಗಿದ್ದಾರೆ‌ವೈಯಕ್ತಿಕವಾಗಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸುತ್ತೇನೆ ಎಂದ್ರು.

ಮೈತ್ರಿ ಸರ್ಕಾರದ ಬಗ್ಗೆ ಬಿಜೆಪಿ ನಾಯಕರು ಅಪವಿತ್ರ ಮೈತ್ರಿ ಅಂತಿದ್ರು ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಬಿಜೆಪಿ ನಾಯಕರು ಮಾತನಾಡ್ತಿದ್ರು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ರು.

ಲೋಕಸಭೆಯಲ್ಲಿ ಸೀಟು ಹೊಂದಾಣಿಕೆ ಪ್ರಾಮಾಣಿಕವಾಗಿ ೯ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಲು ಈಗಾಗಲೇ ತೀರ್ಮಾನ ಆಗಿದೆ ೨೮ ಕ್ಕೆ ೨೮ ಕ್ಷೇತ್ರಗಳನ್ನ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡ್ತೀವಿ ಸೋಲು ಗೆಲುವು ಸಹಜ ನಮ್ಮ ಜವಾಬ್ದಾರಿಯನ್ನ ಇನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಲಿ ಅಂತ ಜನ ಆಶೀರ್ವಾದ ಮಾಡಿದ್ದಾರೆ ಎಂದ್ರು.

ಸಮ್ಮಿಶ್ರ ಸರ್ಕಾರದ ಯೋಜನೆಗಳ ಫಲ ಇನ್ನೂ ಜನರಿಗೆ ತಲುಪಿಲ್ಲ ಸಮಯವಕಾಶದ ಕೊರತೆಯಿಂದ ಯೋಜನೆಗಳು ತಲುಪಿಲ್ಲ‌ ರೈತರ ಸಾಲ ಮನ್ನಾ, ಬಡವರ ಬಂಧು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಇದೇ ತಿಂಗಳಿಂದ ಯೋಜನೆಗಳು ಕಾರ್ಯಾರಂಭ ಮಾಡುತ್ತೇವೆ ಗೆಲುವು ಸಿಕ್ಕಿದೆ ಅಂತ ಮೈಮರೆತು ಹೋಗಲ್ಲ ಎಂದ್ರು.

ಆಕ್ಸಿಸ್ ಬ್ಯಾಂಕ್ ನಿಂದ ರೈತರಿಗೆ ನೋಟೀಸ್ ನೀಡಿರುವ ಅಂಶ ಗಮನಕ್ಕೆ ಬಂದಿದೆ ಅವರೊಂದಿಗೆ ಮಾತನಾಡಿದ್ದೇವೆ ನೋಟೀಸ್ ಹಿಂಪಡೆದುಕೊಳ್ಳಲು ಬ್ಯಾಂಕ್ ನವರು ಒಪ್ಪಿದ್ದಾರೆ ಒಂದೇ ಕಂತಿನಲ್ಲಿ ಹಣ ಪಾವತಿಗೆ ಒಪ್ಪಿದ್ದಾರೆ. ೪೪ ಲಕ್ಷ ರೈತ ಕುಟುಂಬಗಳಿಗೆ ಸಾಲ ಮನ್ನಾ ಸೌಲಭ್ಯ ಸಿಗಲಿದೆ. ಬೆಳೆ ಸಾಲ ಹೊರತು ಪಡಿಸಿ, ಬೇರೆ ರೀತಿಯ ಸಾಲ ಪಡೆದು ಮರುಪಾವತಿ ಮಾಡದಿದ್ದಾಗ ಕ್ರಿಮಿನಲ್ ಕೇಸ್ ಹಾಕಲು ಸಾಧ್ಯವಿಲ್ಲ ಯಾವುದೇ ಬ್ಯಾಂಕ್ ಉದ್ದಟತನದಿಂದ ನಡೆದುಕೊಂಡ್ರೆ ಸರಕಾರ ಕ್ರಮ ಕೈಗೊಳ್ಳುತ್ತೆ ಈ ನಿಟ್ಟಿನಲ್ಲಿ ಮೂವತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದ್ರು.

ಟಿಪ್ಪು ಜಯಂತಿ ವಿರುದ್ದ ವಿರೋಧವಾಗಿ ನಾನು ಮಾತಮಾಡೇ ಇಲ್ಲ ಹಿಂದೆ ಬಿಜೆಪಿ ನಾಯಕರಿಗೆ ಯಾಕೆ ವಿರೋಧ ಮಾಡ್ತೀರಿ ಅಂದಿದ್ದೆ ಸಮಾಜಕ್ಕೆ ಕೊಡುಗೆ ಕೊಟ್ಟವರಿಗೆ ಜಯಂತಿ ಮಾಡಿದ್ರೆ ತಪ್ಪೇನು ಇಲ್ಲ ಇದಕ್ಕೆ ಯಾಕೆ ವಿರೋಧ ಮಾಡ್ತೀರಾ ಅಂತ ಬಿಜೆಪಿ ನಾಯಕರಿಗೆ ಹೇಳಿದ್ದೆ ಜೆಡಿಎಸ್ ಕಚೇರಿಯಲ್ಲಿ ಎಷ್ಟೋ ಭಾರಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದೇವೆ ಟಿಪ್ಪು ಜಯಂತಿ ಆಚರಣೆ ಮಾಡಿಲ್ಲ ಅಂದ್ರೆ ನೀವು ಮನೆಯಲ್ಲಿರಿ ಟಿಪ್ಪು ಜಯಂತಿ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದ್ರೆ ಕಠಿಣ ಕ್ರಮ ಶಾಂತಿಯುತವಾಗಿ ಯಾರು ಬೇಕಾದ್ರು ಪ್ರತಿಭಟನೆ ಮಾಡಿಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ರು.

ಸರ್ಕಾರ ರಚನೆ ಆದಾಗಿನಿಂದ ಗಡುವು ಕೊಡ್ತಿದ್ದಾರೆ‌.ಅಂತಹ ಗಡುವಿಗೆ ಮನ್ನಣೆ ಕೊಡಲ್ಲ ಬಿಜೆಪಿಯವರು ವ್ಯರ್ಥ ಕಸರತ್ತು ಪ್ರತೀದಿ‌ನ ಮಾಡ್ತಿದ್ದಾರೆ ನೆನ್ನೆ ಕೂಡ ನಮ್ಮ ಶಾಕರನ್ನ ಸಂಪರ್ಕ ಮಾಡಿದ್ದಾರೆ ಅವರು ನನಗೆ ಎಲ್ಲಾ ಮಾಹಿತಿ ನೀಡಿದ್ದಾರೆ
ಜೆಡಿಎಸ್ ಪಕ್ಷದ ನಿಷ್ಠಾವಂತ ಶಾಸಕರಿಗೆ ಆಮೀಷ ಕೊಡ್ತಿದ್ದಾರೆ
ಬಿಜೆಪಿಯವರಿಗೆ ಕೋಟಿಗಳಂದ್ರೆ ಲೆಕ್ಕ ಇಲ್ಲ ಎಂದು ಆರೋಪಿಸಿದ್ರು.

ಸುಪ್ರೀಂ ಆದೇಶದಿಂದ ಎಚ್ಚೆತ್ತ ಸಾರ್ವಜನಿಕರು: ಪಟಾಕಿ ವ್ಯಾಪಾರ ಠುಸ್!

ಬೆಂಗಳೂರು: ದೀಪಾವಳಿಗೆ ಪಟಾಕಿ ಹಚ್ತೀರಾ ಹಾಗಾದ್ರೆ ಈ ಸ್ಟೋರಿ ನೋಡಿ. ದೀಪಾವಳಿ ಬಂತಂದ್ರೆ ಸಾಕು ಇಡೀ ಊರಿಗೆ ಊರೇ ಸಂಭ್ರಮಿಸುತ್ತೆ. ಎಲ್ಲಾ ಧರ್ಮದವರು ದಿಪಾವಳಿಯನ್ನು ಐಕ್ಯತೆಯ ಸಂಕೇತವಾಗಿ ಆಚರಿಸ್ತಾರೆ. ಊರ ಮಂದಿ ಎಲ್ಲ ಸೇರಿ ಒಟ್ಟಾಗಿ ಪಟಾಕಿ ಸಿಡಿಸೋ ಮಜಾನೇ ಬೇರೆ ಇರುತ್ತೆ. ಆದ್ರೆ ಈಗ ಅದೇ ಪಟಾಕಿಗೆ ಕಂಟಕ ಎದುರಾಗಿದೆ.

ಮಾರುಕಟ್ಟೆಗೆ ಬಣ್ಣ ಬಣ್ಣದ ಪಟಾಕಿಗಳು ಬಂದಿದ್ದರು ಸಹ ಸುಪ್ರೀಂ ಕೋರ್ಟ್ ಆದೇಶದಿಂದ ಪಟಾಕಿ ವ್ಯಾಪಾರ ಠುಸ್ ಆಗಿದೆ. ಕೋರ್ಟ್ ಆದೇಶದಿಂದ ಎಚ್ಚೆತ್ತ ನಾಗರಿಕರು ಪಟಾಕಿ ವ್ಯಾಪಾರಕ್ಕೆ ಒಲ್ಲೆ ಅನ್ನುತಿದ್ದಾರೆ. ಡಿಸ್ಕೌಂಟ್ ಕೊಟ್ರೂ ಪಟಾಕಿ ಪ್ರಿಯರು ಪಟಾಕಿ ಬೇಡ ಅಂತಿದ್ದಾರೆ. ಶೇ 40 ರಿಂದ 50 ರಷ್ಟು ಡಿಸ್ಕೌಂಟ್ ಮಾಡಿ ಮಾರಾಟ ಮಾಡಿದ್ರೂ ನೋ ರೆಸ್ಪಾನ್ಸ್. ಡಿಸ್ಕೌಂಟ್ ಮೇಲೆ ಶೇ 10 ಡಿಸ್ಕೌಂಟ್ ಮಾಡಿದ್ರೂ ಪಟಾಕಿ ಕೊಳ್ಳಲು ಸಾರ್ವಜನಿಕರು ಮುಂದಾಗ್ತಿಲ್ಲ.

ಹೌದು ದೀಪಾವಳಿ ಹಬ್ಬವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಮಂದಿ ತಯಾರಾಗಿದ್ದಾರೆ. ಆದ್ರೆ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹಚ್ಚುವ ಮುನ್ನ ಈ ನಿಯಮಗಳನ್ನು ಮರೆಯದಿರಿ. ಹೌದು ವಾಯು ಮಾಲಿನ್ಯ ಶಬ್ದ ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಸರ್ಕಾರ ನಿಷೇಧಿಸಿದೆ.ಮಾಲಿನ್ಯ ನಿಯಂತ್ರಣ ಮಂಡಳಿಗೆ 14 ದಿನಗಳ ಕಾಲ ಮೇಲ್ವಿಚಾರಣೆ ಮಾಡುವಂತೆ ಆದೇಶಿಸಿದ್ದು ಒಂದು ವೇಳೆ ಹಾನಿವುಂಟು ಮಾಡುವ ಪಟಾಕಿ ಸಿಡಿಸುವುದು ಕಂಡು ಬಂದ್ರೆ ಕಾನೂನು ಕ್ರಮ ಜರಗಿಸುವಂತೆ ಉಲ್ಲೇಖಿಸಲಾಗಿದೆ.

ಇನ್ನು ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಭಾರಿ ಪಟಾಕಿ ವ್ಯಾಪಾರ ಅಷ್ಟಕಷ್ಟೇ. ಸುಪ್ರೀಂ ಕೋರ್ಟ್ ನ ತೀರ್ಪಿನಿಂದ ಜನರೇ ಎಚ್ಚೆತ್ತುಕೊಂಡು ಪಟಾಕಿ ಕೊಳ್ಳುವುದಕ್ಕೆ ಹಿಂದೇಟುಹಾಕಿದ್ದಾರೆ. ಇನ್ನು ನಗರದ ಬಿಬಿಎಂಪಿ ಗ್ರೌಂಡ್ ಗಳಲ್ಲಿ ಮೂರುದಿನಗಳ ಕಾಲ ಪಟಾಕಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರದ ಕಟ್ಟು ನಿಟ್ಟಿನ ಕ್ರಮ ದಿಂದಾಗಿ ವ್ಯಾಪಾರಿಗಳೂ ಕಂಗಾಲಾಗಿದ್ದು ವರ್ಷಕ್ಕೊಮ್ಮೆ ಭರ್ಜರಿ ವ್ಯಾಪಾರದ ಕನಸು ಕಂಡಿದ್ದ ವ್ಯಾಪಾರಿಗಳು ಪೆಚ್ಚುಮುಖ ಹಾಕಿದ್ದಾರೆ.

ಒಟ್ಟಾರೆ ಅದೇನೇ ಇರಲಿ ಪಟಾಕಿ ಹಚ್ಚಿ ದೀಪ ಬೆಳಕಿ ದೀಪಾವಳಿ ಆಚರಿಸಲು ಜನರು ಮುಂದಾದ್ರೆ ವ್ಯಾಪಾರಿಗಳ ಪಾಲಿಗೆ ವ್ಯಾಪಾರ ಠುಸ್ ಪಟಾಕಿಯಂತಿದೆ. ಸದ್ಯ ಪಟಾಕಿ ಬೆಲೆ ಕೂಡ ಇಳಿದಿದ್ದು ವ್ಯಾಪಾರವೂ ಇಲ್ಲದೆ ಗ್ರಾಹಕರಿಗಾಗಿ ಎದುರು ನೋಡ್ತಾ ಇದ್ದಾರೆ..

ಇದು ನನ್ನ ಜೀವನದ ಕಡೆಯ ಹೋರಾಟ: ದೇವೇಗೌಡ

ಬೆಂಗಳೂರು:ಹಳೇ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡ್ತೀವಿ. ಮುಂದಿನ ಲೋಕಸಭೆ ಸಹ ಕಾಂಗ್ರೆಸ್ ಜತೆ ಚುನಾವಣೆ ಎದುರಿಸುತ್ತೇವೆ. ರಾಹುಲ್ ಗಾಂಧಿ ಸೇರಿದಂತೆ ಸ್ಥಳೀಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಫೈನಲ್ ಮಾಡ್ತೀವಿ ಇದು ನನ್ನ ಜೀವನದ ಕಡೆಯ ಹೋರಾಟ ಎಂದು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ,ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಒಟ್ಟಾಗಿ ಕೆಲಸ ಮಾಡಿದ ಕಾರಣ 4 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಇದರ ಜತೆಗೆ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ.ಶಿವಮೊಗ್ಗ ದಲ್ಲಿ ಅಭ್ಯರ್ಥಿ ಹಾಕಿದ್ದು ಕಡೇ ಗಳಿಕೆಯಲ್ಲಿ.. ಸ್ವಲ್ಪ ಮೊದಲೇ ಹಾಕಿದ್ದರೆ ಗೆಲ್ಲುವ ಅವಕಾಶ ಇತ್ತು. 50 ಸಾವಿರ ಮತಗಳ ಅಂತರದಿಂದ ಅಲ್ಲಿ ಸೋತಿರುವುದನ್ನು ಒಪ್ಪುತ್ತೇನೆ ಎಂದ್ರು.

ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆ ಇರಬಹುದು, ಬಿಬಿಎಂಪಿ ಇರಬಹುದು ಎಲ್ಲದರಲ್ಲೂ ನಾವು ಕಾಂಗ್ರೆಸ್ ಜತೆ ನಿಂತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಗ್ಗೆ ಏನೇ ಮಾತನಾಡಿದ್ದರೂ, ಅವರು ನಮ್ಮ ಬಗ್ಗೆ ಏನೇ ಮಾತನಾಡಿದ್ದರೂ ಮರೆತು ಮುಂದುವರಿದಿದ್ದೇವೆ ಇದು ನನ್ನ ಬದುಕಿನ ಕಡೆಯ ಹೋರಾಟ ಎಂದ್ರು.

ಸಚಿವ ಸಂಪುಟ ವಿಸ್ತರಣೆ ಇನ್ನು ವಿಳಂಬ ಇಲ್ಲ
ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ
ಹೀಗಾಗಿ ಸಿಎಂ ಕುಮಾರಸ್ವಾಮಿ , ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜತೆ ಮಾತನಾಡಿ ವಿಸ್ತರಣೆ ಮಾಡಲಿದ್ದಾರೆ. ನಿಗಮ ಮಂಡಳಿಗಳ ನೇಮಕ ಸಹ ಶೀಘ್ರದಲ್ಲೇ ಮಾಡ್ತೀವಿ ಎಂದ್ರು

ಇದೆ ಸಂದರ್ಭದಲ್ಲಿ ದೇವೇಗೌಡ ಅವರ ನಿವಾಸಕ್ಕೆ ಅನಿತಾ ಕುಮಾರಸ್ವಾಮಿ ಭೇಟಿ ನೀಡಿದ್ರು.ರಾಮನಗರದಿಂದ ಚುನಾಯಿತರಾದ ಹಿನ್ನೆಲೆಯಲ್ಲಿ ಮಾವನವರ ಆಶೀರ್ವಾದ ಪಡೆಯಲು ಆಗಮಿಸಿದ್ರು.

ಈ ಗೆಲುವು, ಸಮ್ಮಿಶ್ರ ಸರಕಾರಕ್ಕೆ ಜನರ ಒಪ್ಪಿಗೆಯ ಮುದ್ರೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಮೈತ್ರಿ ಜಯ ಗಳಿಸುವ ಮೂಲಕ ಬಿಜೆಪಿಗೆ ಮುಖಭಂಗ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕೆಪಿಸಿಸಿ‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನತೆ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.ನಾವೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಜನರು ಮುಖಭಂಗ ಆಗುವಂತೆ ಮಾಡಿದ್ದಾರೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆ ಗೆಲುವಿನ‌ ಮುನ್ಸೂಚನೆ ಎಂದರು.

ಬಳ್ಳಾರಿ ಕ್ಷೇತ್ರವನ್ನೇ ಭದ್ರ ಕೋಟೆಯನ್ನಾಗಿ ಮಾಡಿ ಕೊಂಡಿದ್ದ ಬಿಜೆಪಿಗೆ ಅಲ್ಲಿನ‌ ಮತದಾರರು ಪಾಠ ಕಲಿಸಿದ್ದಾರೆ. ಬಿಜೆಪಿ ಭದ್ರ ಕೋಟೆ ಒಡೆದು, ಕಾಂಗ್ರೆಸ್‌ ತನ್ನ ಅಸ್ತಿತ್ವ ಸಾರಿದೆ. ಈ‌ ಮೊದಲು ಕೂಡ ಬಳ್ಳಾರಿ ಕಾಂಗ್ರೆಸ್‌ ಕೋಟೆಯಾಗಿತ್ತು ಎಂದರು.

ಶಿವಮೊಗ್ಗ ಕ್ಷೇತ್ರದಲ್ಲಿ ಕಳೆದ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಅಂತರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಕೇವಲ 52 ಸಾವಿರ ಮತಗಳ ಅಂತದಲ್ಲಿ ಗೆದ್ದಿದೆ. ಅಂದರೆ ಶಿವಮೊಗ್ಗದಲ್ಲೂ ಒಂದು ರೀತಿಯ ಸೋಲು ಅನುಭವಿಸಿದೆ. ಹೀಗಾಗಿ ಐದು ಕ್ಷೇತ್ರದಲ್ಲೂ ಮೈತ್ರಿ ಪಕ್ಷವೇ ಗೆದ್ದಂತಾಗಿದೆ.ಈ ಗೆಲುವು ಕಾಂಗ್ರೆಸ್ ಜೆಡಿಎಸ್ ‌ಮೈತ್ರಿ ಸರಕಾರಕ್ಕೆ ಮತದಾರರ ಒಪ್ಪಿಗೆ ಮುದ್ರೆ ಒತ್ತಿದ್ದು, ಐದು ವರ್ಷ ನಮ್ಮ ಸರಕಾರ ಸುಭದ್ರವಾಗಿರಲಿದೆ ಎಂದರು.

ಮಿನಿ ಸಮರದಲ್ಲಿ ಮೈತ್ರಿ ಸರ್ಕಾರಕ್ಕೆ ಮತದಾರರ ಮನ್ನಣೆ:ಮುದುಡಿದ ಕಮಲ

ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳಲ್ಲಿ ನಡೆದ ಮಿನಿ ಸಮರದಲ್ಲಿ ಮೈತ್ರಿ ಸರ್ಕಾರಕ್ಕೆ ಫಲಿತಾಂಶದ ಮೂಲಕ ಜನ ಬೆಂಬಲ ನೀಡಿದ್ದು ನಾಲ್ಕು‌ ಕ್ಷೇತ್ರಗಳು ಮೈತ್ರಿ ತೆಕ್ಕೆಗೆ ಬಂದಿದ್ದು ಯಡಿಯೂರಪ್ಪ ತವರಲ್ಲಿ ಮಾತ್ರ ಪ್ರಯಾಸದಿಂದ ಕಮಲ ಅರಳಿದೆ.

ನಿರೀಕ್ಷೆಯಂತೆ ಮಂಡ್ಯ ಲೋಕಸಭೆ ಹಾಗು ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯ ಪ್ರತಿರೋಧ ಇಲ್ಲದೆಯೇ ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದ್ದ ಶಿವರಾಮೇಗೌಡ ಮತ್ತು ರಾಮನಗರದಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಅನಿತಾ ಕುಮಾರಸ್ವಾಮಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಬಳ್ಳಾರಿಯಲ್ಲಿ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ದಾಖಲೆಯ ಗೆಲಿವಿನ ನಗೆ ಬೀರಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದು ಶ್ರೀರಾಮುಲು ರೆಡ್ಡಿಕೋಟೆ ಬೇಧಿಸಿ ಅಧಿಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜಮಖಂಡಿಯನ್ನು ಕಾಂಗ್ರೆಸ್ ಉಳಿಸಿಕೊಂಡಿದೆ ಸಿದ್ದುನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಹೆಚ್ಚಿನ ಅಂತರದಿಂದ ಗೆದ್ದಿದ್ದು ಬಿಜೆಪಿ ತೀವ್ರ ಮುಖಭಂಗವಾಗುವಂತೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾತ್ರ ಕಮಲ ಅರಳಿದೆ, ಅದೂ ಕೂಡ ಜೆಡಿಎಸ್ ನ ಮಧು ಬಂಗಾರಪ್ಪ ತೀವ್ರ ಪೈಪೋಟಿ ನೀಡಿದ್ದು ಮತಗಳ ಅಂತರವನ್ನು ಬಿಜೆಪಿ ಕಳೆದುಕೊಳ್ಲಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಬಿಜೆಪಿ ಗೆದ್ದರೂ ಕೂಡ ಕೊನೆ ಕ್ಷಣದವರೆಗೂ ಆತಂಕದಿಂದಲೇ ಕಾಯುವಂತೆ ಮಾಡಿ ಒಂದು ಕ್ಷಣ ಬಿಜೆಪಿ ಪಾಳಯವನ್ನು ಅಲ್ಲಾಡಿಸಿದ್ದಂತು ಸುಳ್ಳಲ್ಲ.