ಈಶ್ವರಪ್ಪ ಅವರ ಬಾಯಿ ಸರಿ ಇಲ್ಲ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಜಮಖಂಡಿ:ನಾನು ರಾಹು ಅಲ್ಲ, ನನ್ನ ತಂದೆ ತಾಯಿ ಪರಮೇಶ್ವರ್ ಎಂದು ನಾಮಕರಣ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ತಲೆ ಸರಿ ಇಲ್ಲದೇ ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುತ್ತುದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ಚರ್ ಟಾಂಗ್ ತಿರುಗೇಟು ನೀಡಿದರು.

ಜಮಖಂಡಿ ಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ
ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಾಬಾಯಿ ಪಟೇಲರ ಜನ್ಮದಿನ ಹಿನ್ನೆಲೆಯಲ್ಲಿ ಇಂಧಿರಾಗಾಂಧಿ ಹಾಗೂ ಸರ್ದಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಈಶ್ವರಪ್ಪ ಅವರ ಬಾಯಿ ಸರಿ ಇಲ್ಲ‌‌, ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಅವರು‌ ನನ್ನನ್ನು ರಾಹು‌ ಎಂದಿದ್ದಾರೆ. ನಾನೇನು ರಾಹು ಅಲ್ಲ. ನನ್ನ ತಂದೆ ತಾಯಿ ಪರಮೇಶ್ವರ ಎಂದು ನಾಮಕರಣ ಮಾಡಿದ್ದಾರೆ‌ ಅವರಂತೆ ನಾನು ಬಾಹಿಗೆ ಬಂದಂತೆ ಮಾತನಾಡುವುದಿಲ್ಲ ಎಂದು ಟಾಂಗ್ ನೀಡಿದರು.‌

ಈ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ಜಗದೀಶ್ ಶೆಟ್ಟರ್ ಅವರ ಕನಸು. ಕನಸಿಗೆ‌ ಮಿತಿ ಇಲ್ಲ. ಹೀಗಾಗಿ ಅವರಿಷ್ಟದಂತೆ ಕನಸು ಕಾಣುತ್ತಿದ್ದಾರೆ. ಸಮ್ಮಿಶ್ರ ಸರಕಾರ ಎಂದಿಗೂ ಪತನವಾಗುವುದಿಲ್ಲ. ಐದು ವರ್ಷ ಅವಧಿ ಪೂರ್ಣಗೊಳಿಸಲಿದೆ. ಯಾವುದೇ ಸ್ವಾಮೀಜಿಯ ಭವಿಷ್ಯವೂ ನಿಜವಾಗುವುದಿಲ್ಲ ಎಂದರು.

ಜಮಖಂಡಿಯಲ್ಲಿ ಬಿಜೆಪಿ ಗೆದ್ದರೂ 105 ಮಾತ್ರ ಆಗಲಿದೆ, ಹೀಗಿರುವಾಗ ಹೇಗೆ ಸರಕಾರ ರಚಿಸಿಬಿಡುತ್ತಾರೆ? ಶೆಟ್ಟರ್ ಅವರೇ ಆಪರೇಷನ್ ಕಮಲ‌ ಮಾಡುವ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ ಎಂದರು.

ಸಮ್ಮಿಶ್ರ ಸರಕಾರ ಸುಭದ್ರವಾಗಿರುವ ಜೊತೆಗೆ ಈ ಚುನಾವಣೆ ಬಳಿಕ ಸಚಿವ ಸಂಪುಟ ಹಾಗೂ ನಿಗಮ ಮಂಡಳಿ‌ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದರು.

ಚುನಾವಣೆ ಪ್ರಚಾರದ ಭರದಲ್ಲಿ ಯಾರೂ ಕೂಡ ವೈಯಕ್ತಿಕ‌ ನಿಂದನೆ ಮಾಡಬಾರದು. ಸಾರ್ವಜನಿಕ ಬದುಕಿನಲ್ಲಿರಿವವರು ರಾಜಕೀಯವಾಗಿ ಅಷ್ಟೇ ಟೀಕೆ ಮಾಡವೇಕು, ಅಭಿವೃದ್ಧಿ ವಿಚಾರ ಮುಂದಿಟ್ಟು ಪ್ರಚಾರ ಮಾಡಬೇಕೇ ವಿನಃ ವೈಯಕ್ತಿಕ ವಿಚಾರ ಅಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ‌ ಸಾಕಷ್ಟು ಪ್ರಚಾರ ನಡೆಸಿದ್ದು, ಕಾಂಗ್ರೆಸ್‌ ಪಕ್ಷವೇ ಗೆಲ್ಲಲಿದೆ ಎಂಬ ಮಾಹಿತಿ ಲಭ್ಯವಾಗಿದೆ‌. ಸಿದ್ದು‌ನ್ಯಾಮಗೌಡ ನಿಧನ ಬಳಿಕ, ಇದೇ ಕುಟುಂಬದ ಯಾರೇ ಸ್ಪರ್ಧಿಸಿದರೂ ಚುನಾವಣೆಗೆ ನಿಲ್ಲುವುದಿಲ್ಲ‌ ಎಂದು ಹೇಳಿದ್ದ ಬಿಜೆಪಿಯ ಕುಲಕರ್ಣಿ ಈಗ‌ ಸ್ಪರ್ಧಿಸುವ ಮೂಲಕ ವಚನ ಭ್ರಷ್ಟರಾಗಿದ್ದಾರೆ.‌ಈ ಎಲ್ಲವನ್ನು ಜನರು ಗಮನಿಸುತ್ತಿದ್ದಾರೆ‌ ಎಂದರು.

ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ಪರಿಹಾರಕ್ಕೆ ಕೇಂದ್ರದ ಮೊರೆ ಹೋದರೂ, ಕೇಂದ್ರ ಸರಕಾರ ನಯಾಪೈಸೆ ನೆರವು ನೀಡದೇ ಮಲತಾಯಿ‌ ಧೋರಣೆ ಅನುಸರಿಸಿದೆ ಎಂದು‌ ಕೇಂದ್ರದ ವಿರುದ್ಧ ವಾಗ್ದಾಳಿ‌ ನಡೆಸಿದರು.

ರಾಹುಲ್ ಗಾಂಧಿಯವರೇ ಯುಪಿಎ ಪ್ರಧಾನಿ ಅಭ್ಯರ್ಥಿ: ಖರ್ಗೆ

ಹುಬ್ಬಳ್ಳಿ: 2019 ರ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲಿದ್ದು ಅವರೇ ಮುಂದಿನ ಪ್ರಧಾನಿ, ಖಚಿತವಾಗಿ ರಾಹುಲ್ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸರದಾರ ವಲ್ಲಭಭಾಯ್ ಪಟೇಲ್ ಹೆಸರು ಬಿಜೆಪಿಯವರಿಗೆ ಈಗ ನೆನಪಿಗೆ ಬಂದಿದೆ. ಚುನಾವಣೆಗಾಗಿ ಅವರು ಗಿಮಿಕ್ ಮಾಡ್ತಿದ್ದಾರೆ. ಬಿಜೆಪಿಯವರಿಗೆ ಒಂದೊಂದು ವರ್ಷ ಒಂದೊಂದು ರಾಷ್ಟ್ರ ನಾಯಕರ ನೆನಪು ಬರುತ್ತದೆ. ಇದು ಚುನಾವಣೆ ಗಿಮಿಕ್ ಎಂದು ಟೀಕಿಸಿದ್ರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಚೇರಿಗಳಲ್ಲಿ ಸ್ವತಂತ್ರ ಹೋರಾಟಗಾರರು ಮತ್ತು ಅಂಬೇಡ್ಕರ್ ಭಾವಚಿತ್ರಗಳಿಲ್ಲ. ಅವರ ಕಚೇರಿಯಲ್ಲಿ ಆರ್‌ಎಸ್‌ಎಸ್ ನಾಯಕರ ಪೋಟೋಗಳಿವೆ.ನಾವು ಮೊದಲಿನಿಂದಲೂ ರಾಷ್ಟ್ರ ನಾಯಕರನ್ನು ಗೌರವಿಸುತ್ತೆವೆ.ಮೋದಿ ಅವರ ಅಪ್ಪಣೆ ಇಲ್ಲದೇ ಯಾವ ಗೃಹ ಮಂತ್ರಿಗಳು ಕೆಲಸ ಮಾಡುದಿಲ್ಲ.
ಹೊಸ ಮೂರ್ತಿಗಳನ್ನು ಕಟ್ಟಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.ಮೋದಿಯವರು ಹಲವು ಹಗರಣಗಳನ್ನು ಎದುರಿಸುತ್ತಿದ್ದಾರೆ.ಅದನ್ನು ಬೇರೆಡೆ ಸೆಳೆಯಲು ಬಿಜೆಪಿ ನಾಟಕ ಮಾಡುತ್ತಿದೆ ಎಂದ್ರು.

ರಾಜ್ಯದಲ್ಲಿ ನಡೆಯುತ್ತಿರುವ ಐದು ಉಪ ಚುನಾವಣೆಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತೊಡಿಸಿದ ಖರ್ಗೆ,ರಾಹುಲ್ ಗಾಂಧಿಯವರೇ ನಮ್ಮ ಪ್ರಧಾನಿ ಅಭ್ಯರ್ಥಿ. ಖಚಿತವಾಗಿ ಅವರು ಪ್ರಧಾನಿಯಾಗುತ್ತಾರೆ.ಪಿ. ಚಿದಂಬರಂ ಅವರು ತಮ್ಮ ವ್ಯಯಕ್ತಿವಾಗಿ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ,ರಾಹುಲ್ ಗಾಂಧಿ ಅವರೇ ಯುಪಿಎ ಪ್ರಧಾನಿ ಅಭ್ಯರ್ಥಿ ಎಂದ್ರು.

ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಜನ್ಮದಿನದ ಅಂಗವಾಗಿ ಏಕತಾ ಓಟ!

ಬೆಂಗಳೂರು: ದೇಶದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ದೇಶಾದ್ಯಂತ ಏಕತಾ ಓಟ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲೂ ಮೂರೂ ದಿಕ್ಕುಗಳಲ್ಲಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಏಕತಾ ಓಟ ನಡೆಯಿತು. ರಾಷ್ಟ್ರ ಧ್ವಜ ಹಿಡಿದು ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಗಿದರು.

ಮಾನ್ಯತಾ ಟೆಕ್ ಪಾರ್ಕ್ ನಿಂದ ಥಣಿಸಂದ್ರದವರೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ಏಕತಾ ಓಟ ನಡೆಯಿತು. ಶಾಸಕ ವೈ.ಎ.ನಾರಾಯಣಸ್ವಾಮಿ, ಕ್ರಿಕೆಟಿಗ ವಿನಯ್ ಕುಮಾರ್ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಜನರು ಓಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸದಾನಂದ ಗೌಡ, ದೇಶದ ಏಕತೆಗಾಗಿ ಶ್ರಮಿಸಿದ ಮಹಾತ್ಮನ ಜನ್ಮ ದಿನವನ್ನು ಏಕತಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಏಕತಾ ಓಟವನ್ನ ಹಮ್ಮಿಕೊಂಡಿದ್ದೇವೆ ಎಂದರು.

ಕಬ್ಬನ್ ಪಾರ್ಕ್ ನಿಂದ ವಸಂತ ನಗರದ ಸರ್ದಾರ್ ಪಟೇಲ್ ಭವನದವರೆಗೆ ಸಂಸದ ಪಿ.ಸಿ.ಮೋಹನ್ ನೇತೃತ್ವದಲ್ಲಿ ಏಕತಾ ಓಟ ಏರ್ಪಡಿಸಲಾಗಿತ್ತು. ಮಾಜಿ ಸಚಿವರಾದ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ ಹಾಗೂ ನೂರಾರು ಸಾರ್ವಜನಿಕರು ಈ ಏಕತಾ ಓಟದಲ್ಲಿ ಭಾಗಿಯಾಗಿದ್ದರು. ನಂತರ ಸರ್ದಾರ್ ಪಟೇಲ್ ಭವನದಲ್ಲಿ ವಲ್ಲಭಭಾಯ್ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಿಂದ ಶಾಸಕರಾದ ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ಬೆಂಗಳೂರು ನಗರ ಬಿಜೆಪಿ ಘಟಕದ ಅದ್ಯಕ್ಷ ಸದಾಶಿವ ನೇತೃತ್ವದಲ್ಲಿ ಏಕತೆಗಾಗಿ ಓಟ ಹಮ್ಮಿಕೊಳ್ಳಲಾಗಿತ್ತು.

ಸಿದ್ದು ಬಗ್ಗೆ ರೆಡ್ಡಿ ವೈಯಕ್ತಿಕ ವಿಷಯ‌ ಪ್ರಸ್ತಾಪ ಸರಿಯಲ್ಲ: ರವಿ ಸುಬ್ರಮಣ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ವೈಯಕ್ತಿಕ ವಿಷಯಗಳನ್ನು ಪ್ರಸ್ತಾಸಿದ್ದು ಸರಿಯಲ್ಲ‌ ಆದರೂ ಅವರು ಕ್ಷಮೆ ಕೇಳಿದ್ದು ಇದನ್ನು ಇಲ್ಲಿಗೆ ಮುಗಿಸುವುದು ಒಳಿತು ಎಂದು ಶಾಸಕ ರವಿಸುಬ್ರಮಣ್ಯ ಹೇಳಿದ್ದಾರೆ.

ಸರ್ದಾರ್ ಪಟೇಲ್ ಜನ್ಮದಿನದ ಅಂಗವಾಗಿ ಜಯನಗರದಲ್ಲಿ ಬಿಜೆಪಿ ನಾಯಕರ ನೇತೃತ್ವದಲ್ಲಿ ಏಕತಾ ಓಟ ನಡೆಸಲಾಯಿತು.
ಬಸವನಗುಡಿ ಶಾಸಕ‌ ರವಿ ಸುಬ್ರಮಣ್ಯ,ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ರಾಜ್ಯ ಕಾರ್ಯದರ್ಶಿ ಜಯದೇವ್, ರಾಜ್ಯ ಬಿಜೆಪಿ ಖಜಾಂಚಿ ಸುಬ್ಬಣ್ಣ,ಶಾಸಕ ಉದಯ ಗರುಡಾಚಾರ್ ಅವರ ನೇತೃತ್ವದಲ್ಲಿ ಜಯನಗರ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಏಕತಾ ಓಟ ನಡೆಯಿತು.ಚಂದ್ರಗುಪ್ತ ಮೌರ್ಯ ಸರ್ಕಲ್ ನಿಂದ ಪ್ರಾರಂಭವಾದ ಓಟ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮೂಲಕವಾಗಿ ಸಾಗಿ ಚಂದ್ರಗುಪ್ತ ಮೌರ್ಯ ಸರ್ಕಲ್ ನಲ್ಲಿ ಮುಕ್ತಾಯವಾಯಿತು.

ನಂತರ ಮಾತನಾಡಿದ ರವಿ ಸುಬ್ರಹ್ಮಣ್ಯ, ಮಾಜಿ‌ ಸಚಿವ ಜನರ್ದಾನರೆಡ್ಡಿ, ಸಿದ್ದರಾಮಯ್ಯ ಅವರ ವೈಯಕ್ತಿಕ ವಿಷಯ ಪ್ರಸ್ತಾಪಿಸಿ ಟೀಕಿಸಿದ್ದಾರೆ.ಯಾರೇ ಆದರು ಯಾರದೇ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕಬಾರದು ಅದು ಸೂಕ್ತವೂ ಅಲ್ಲ.
ರಾಜಕೀಯದಲ್ಲಿ ವೈಯಕ್ತಿಕ ವಿಚಾರವನ್ನು ತರಬಾರದು ಎಂದರು.

ನಾನು ಮಾತನಾಡಿರುವುದರಲ್ಲಿ ತಪ್ಪಿದ್ದರೆ ಕ್ಷಮೆ ಇರಲಿ ಎಂದು ರೆಡ್ಡಿ ಅವರು ಹೇಳಿದ್ದಾರೆ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದೂ ಹೇಳಿದ್ದಾರೆ.ಮಾಧ್ಯಮಗಳು ಅವರ ಕೆಲಸವನ್ನು ಮಾಡಿದ್ದಾರೆ.ಜನಾರ್ದನರೆಡ್ಡಿ ಹೇಳಿದ್ದನ್ನೂ ಅವರು ತೋರಿಸಿದ್ದಾರೆ.ನಂತರ ಅವರು ಕ್ಷಮೆಯಾಚಿಸಿದ್ದನ್ನು ತೋರಿಸಿದ್ದಾರೆ.ಇದರಲ್ಲಿ ಯಾರನ್ನು ದೂರುವುದು ಸರಿಯಿಲ್ಲ ಇದನ್ನು ಇಲ್ಲಿಗೆ ಬಿಡುವುದು ಒಳಿತು ಎಂದಿದ್ದಾರೆ.

ಸರ್ಜಾಪುರ ಕೆರೆ ಉಳಿಸುವಂತೆ ಸ್ಥಳೀಯರಿಂದ ಮಾನವ ಸರಪಳಿ ನಿರ್ಮಾಣ!

ಬೆಂಗಳೂರು: ಆನೇಕಲ್ ತಾಲೂಕಿನ ಸರ್ಜಾಪುರ ಡೊಡ್ಡಕೆರೆಯಲ್ಲಿ ಹೆಗ್ಗಿಲ್ಲದೆ ನಡೆಯುತ್ತಿರುವ ಫಿಲ್ಟರ್ ಮರಳು ಧಂದೆಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು. ವಾಯ್ಸ್ ಆಫ್ ಸಂಘಟನೆ ವತಿಯಿಂದ ವಿವಿಧ ಪ್ರಗತಿಪರ ಒಕ್ಕೂಟಗಳು ಸೇರಿ ಸರ್ಜಾಪುರದಿಂದ ದೊಡ್ಡಕೆರೆವರಗೂ ಪ್ರತಿಭಟನೆ ಮೆರವಣಿಗೆ ಮೂಲಕ ಸಾಗಿ ಅಕ್ರಮ ಮರಳು ಸಾಗಾಣೆ ತಡೆಯುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಸುಮಾರು ೧೦ ವರ್ಷಗಳಿಂದ ಮರಳು ದಂದೆಕೋರರು ಮಣ್ಣಿನಲ್ಲಿ ಪಿಲ್ಟರ್ ಮರಳನ್ನು ತಯಾರಿಸಿ ಹೊರ ರಾಜ್ಯಗಳಿಗೆ ಮಾರಟ ಮಾಡುತಿದ್ದಾರೆ. ಅದು ಮಾತ್ರವಲ್ಲದೇ ಅಕ್ಕಪಕ್ಕದ ಇಟ್ಟಿಗೆ ಕಾರ್ಖಾನೆ ಗಳಿಗೆ ಮಣ್ಣಿನ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಹಣ ಪಡೆದು ಮಣ್ಣನ್ನು ಮಾರಾಟ ಮಾಡಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಲಾಭ ಮಾಡಿದ್ದಾರೆ, ಹೀಗಾಗಿ ಸರ್ಜಾಪುರದ ಡೊಡ್ಡಕರೆಯನ್ನ ಉಳಿಸಿಂತೆ ವಾಯ್ಸ್ ಆಪ್ ಸರ್ಜಾಪುರ ಅಭಿಯಾನದಡಿ ಇಂದು‌ ಡೊಡ್ಡಕೆರೆ ಉಳಿಸುವಂತೆ ಬೀದಿಗಿಳಿದು ಹೋರಾಟ ನಡೆಸಿಲಾಯಿತು.

ಸರ್ಜಾಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಸಿ ಡೊಡ್ಡ ಕೆರೆವರಗೂ ಜಾಥ್ ಕೈಗೊಂಡಿದ್ದರು. ಡೊಡ್ಡಕರೆಯಲ್ಲಿ ಸುಮಾರು 50 ಎಕರೆ ಜಾಗದಲ್ಲಿ 40 ರಿಂದ 50 ಅಡಿಗಳಷ್ಟು ಆಳ ತೆಗೆದು ದಂದೆಕೋರರು ಕೆರೆಯನ್ನ ಸಂಪೂರ್ಣ ಹಾಳು ಮಾಡಿದ್ದಾರೆ. ಇದರ ಜೊತೆಗೆ ಕರೆಯ ಮಣ್ಣಿನಲ್ಲಿರುವ ಬಾಕ್ಸಯಿಟ್ (ಅದಿರು) ನ್ನು ಬೇರ್ಪಡಿಸಿ ಮಾರಾಟ ಮಾಡುತಿದ್ದರು ಅದರ ಜತಗೆ ಸುಣ್ಣದ ಕಲ್ಲನ್ನು ಬೇರ್ಪಡಿಸಿ ಹೊರ ರಾಜ್ಯಗಳಿಗೆ ರಪ್ತು ಮಾಡುತಿದ್ದರು. ಸರ್ಜಾಪುರದ ಪ್ರಭಾವಿಗಳು ಈ ಧಂಧೆಯಲ್ಲಿ ಶಾಮಲಾಗಿಗಿದ್ದಾರೆ. ಇಡೀ ಕೆರೆಯ ಚಿತ್ರಣವನ್ನ ಬದಲಾವಣೆ ಮಾಡಿದ್ದಾರೆ. ಈ ಎಲ್ಲಾ ಅಕ್ರಮ ಗಳು ಗೊತ್ತಿದ್ದರು ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಪಿಲ್ಟರ್ ಮರಳು ದಂಧೆಗೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ. ಹೀಗಾಗಿ ಕರೆಯನ್ನ ಉಳಿಸಬೇಂಕೆದು ಬೀದಿಗಿಳಿದು ನಾವು ಹೋರಾಟ ವನ್ನ ಕೈಗೊಳ್ಳಬೇಕಾಯಿತು ಎಂದು ಸ್ಥಳಿಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಹಣದ ಆಸೆಗೆ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನ ಬಗೆಯುತ್ತಿರುವ ದಂಧೆಕೋರರು ಲೂಟಿ ಮಾಡುವ ಮೂಲಕ ಹಲವು ಕೆರೆಗಳ ವಿನಾಶಕ್ಕೆ ಕಾರಣವಾಗಿದ್ದಾರೆ. ಇನ್ನಾದರೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಮಣ್ಣು ಲೂಟಿಕೋರರಿಗೆ ತಕ್ಕ ಪಾಠ ಕಲಿಸುವ ಜೊತೆಗೆ ಹಾಳದ ಕೆರೆಗಳನ್ನ ಉಳಿಸ ಬೇಕಿದೆ.

ಮತ್ತೆ ಕೆಣಕಿದ್ರೆ ಬೇಲ್ ರದ್ದಾಗಿ ಜೈಲಿಗೋಗುತ್ತೀರಿ: ರೆಡ್ಡಿಗೆ ಸಿದ್ದು ಟಾಂಗ್

ಕೂಡ್ಲಿಗಿ:ಸದನದಲ್ಲಿ ನಮ್ಮನ್ನು ಕೆಣಕಿ‌ ಸವಾಲೆಸೆದು ಜೈಲುಪಾಲಾಗಿ ಹೋಗಿದ್ದಿರಿ ಈಗ ನಮ್ಮನ್ನು ಮತ್ತೆ ಕೆಣಕಲು ಬರಬೇಡಿ, ಬೇಲ್ ರದ್ದಾಗಿ ಮತ್ತೆ ಜೈಲಿಗೆ ಹೋಗಬೇಕಾದೀತು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕೂಡ್ಲಿಗಿಯಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡರೊಂದಿಗೆ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ,ಜನಾರ್ಧನ ರೆಡ್ಡಿ ಸವಾಲು ಸ್ವೀಕರಿಸಿರುವುದಾಗಿ ಪ್ರಕಟಿಸಿದರು.ಚಳ್ಳಕೆರೆ, ಪಾವಗಡ, ಮೊಳಕಾಲ್ಮೂರುಗಳಿಗೆ ಕುಡಿಯುವ ನೀರಿನ ಪೂರೈಕೆಗೆ ತುಂಗಭದ್ರಾ ಹಿನ್ನೀರನ್ನು ಪೂರೈಸುವ ಶಾಶ್ವತ ಯೋಜನೆಯನ್ನು ರೂಪಿಸಿ, ಟೆಂಡರ್ ಕರೆದು, ಟೆಂಡರ್ ಎಜೆನ್ಸಿಯನ್ನು ಕೂಡ ನಿಗದಿಪಡಿಸಿರುವುದು ನಮ್ಮ‌ ಸರ್ಕಾರ. ಜನಾರ್ಧನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಮಂತ್ರಿಯಾಗಿದ್ದಾಗ ಜಿಲ್ಲೆಗೆ ಏನು ಮಾಡಿದ್ದಾರೆ? ಈ ಯೋಜನೆಯ ಅನುಷ್ಠಾನಕ್ಕಾಗಿ ರೂ.2250 ಬಳಕೆ ಮಾಡಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಇಷ್ಟು ದೊಡ್ಡ ಮೊತ್ತದ ಯೋಜನೆಯನ್ನು ಜಾರಿಗೊಳಿಸಿದ್ದು ಇದೇ ಮೊದಲು. ಬೆಂಗಳೂರಿನ ಶಾಸಕರ ಭವನ ಆವರಣದಲ್ಲಿ ವಾಲ್ಮೀಕಿ ಹಾಗೂ ಕನಕದಾಸರ ಪ್ರತಿಮೆ ಸ್ಥಾಪನೆಗೆ ನಿಜವಾಗಿ ಶ್ರಮಿಸಿದವರು ಉಗ್ರಪ್ಪನವರು ಎಂದು ಹೇಳಲು ನನಗೆ ಹೆಮ್ಮೆಯಿದೆ ಎಂದ್ರು.

1991ರಲ್ಲಿ ದೇವೇಗೌಡರು ಲೋಕಸಭಾ ಸದಸ್ಯರಾಗಿದ್ದಾಗ ಉಗ್ರಪ್ಪನವರು ನಾಯಕ, ವಾಲ್ಮೀಕಿ ಮುಂತಾದ ಜಾತಿಗಳಿಗೆ ಎಸ್.ಟಿ ಮೀಸಲಾತಿ ದೊರೆಯುವಂತೆ ಮಾಡಿದ್ದರು. ಇಂದು ಎಸ್.ಟಿ ಮೀಸಲು ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸಿ ಲೋಕಸಭೆಗೆ ಹೋಗಿದ್ದರೆ ಅದು ದೇವೇಗೌಡರು ಮತ್ತು ಉಗ್ರಪ್ಪನವರ ಕೊಡುಗೆ ಎಂಬುದನ್ನು ಅವರು ಮರೆಯಬಾರದು ಎಂದು ರಾಮುಲು ಕಾಲೆಳೆದ್ರು.

ಚಿನ್ನದ ಕಮೋಡ್, ಚಿನ್ನದ ಕುರ್ಚಿ ಇವೆಲ್ಲ ಜನಾರ್ಧನ ರೆಡ್ಡಿಯವರ ವೈಭವದ ಜೀವನಕ್ಕೆ ಸಾಕ್ಷಿಗಳು. ಇಷ್ಟೆಲ್ಲ ಎಲ್ಲಿಂದ ಬಂತು? ಇವರೇನು ಸಾಮ್ರಾಟ ವಂಶಸ್ಥರೇ?
ಈ‌ ಸಂಪತ್ತು ಗಣಿಲೂಟಿಯ ಸಂಪಾದನೆ ಎನ್ನುವುದು ಬಳ್ಳಾರಿ ಮಾತ್ರವಲ್ಲ‌ ಇಡೀ ದೇಶಕ್ಕೆ ಗೊತ್ತು. ಇಷ್ಟಾದ ಮೇಲೆಯೂ ತಮ್ಮನ್ನು ಪ್ರಾಮಾಣಿಕರೆಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ವೇ ಎಂದ್ರು.

ಜನಾರ್ಧನ ರೆಡ್ಡಿಯವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ, ಅವರ ಜೊತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ.
ಬಳ್ಳಾರಿಯಿಂದ‌ ಗಡಿಪಾರಾಗಿರುವ ರೆಡ್ಡಿಯವರೇ ಚರ್ಚೆಯ ಸ್ಥಳ ಮತ್ತು ಸಮಯ ನಿಗದಿಪಡಿಸಲಿ.ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿಯ ಮೇಲೆ ಸದನದಲ್ಲಿ ಚರ್ಚೆ ನಡೆದಿದ್ದಾಗ ತಾಕತ್ತಿದ್ದರೆ ಬಳ್ಳಾರಿಗೆ ಬರುವಂತೆ ಜನಾರ್ಧನ ರೆಡ್ಡಿ ನನಗೆ ಸವಾಲುಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ. ಆ ದಿನದಿಂದಲೇ ರೆಡ್ಡಿ ಗ್ಯಾಂಗ್ ಕಟ್ಟಿದ್ದ ಬಳ್ಳಾರಿ ರಿಪಬ್ಲಿಕ್ ಕುಸಿಯಲಾರಂಭಿಸಿತ್ತು. ಅದರ ನಂತರ ಜನಾರ್ಧನ ರೆಡ್ಡಿ ಜೈಲುಪಾಲಾಗಿ ಹೋದರು ಎಂದ್ರು.