ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣ ಮೊದಲ ಪತ್ನಿ ನಾಗರತ್ನ ವಿಚಾರಣೆ?

ಬೆಂಗಳೂರು: ನಟ ದುನಿಯಾ ವಿಜಯ್‌ ಜೈಲಿನಲ್ಲಿದ್ದಾಗ ವಿಜಯ್ 2 ನೇ ಪತ್ನಿ ಎನ್ನಲಾದ ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪತ್ನಿ ನಾಗರತ್ನರನ್ನು ಗಿರಿನಗರ ಠಾಣೆಯ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ನಟ ದುನಿಯ ವಿಜಯ್ ಜೈಲಿನಲ್ಲಿದ್ದಾಗ ಕೀರ್ತಿ ಗೌಡ ಮನೆಯವರೊಂದಿಗೆ ಕುಳಿತಿದ್ದ ವೇಳೆ ನಾಗರತ್ನ ಅವರು ಏಕಾಏಕಿ ಮನೆಗೆ ನುಗ್ಗಿ  ಚಪ್ಪಲಿಯಲ್ಲಿ  ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದಾಳಿ ನಡೆಸಿದ ಬಳಿಕ ನಾಗರತ್ನ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ಕೀರ್ತಿಗೌಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರನ್ನೂ ದಾಖಲಿಸಿದ್ದರು. ಈ ಕುರಿತು ಮಗಳು ಮೋನಿಕ ತಾಯಿ ಪರ ಸಾಕ್ಷಿ ಹೇಳಿದ್ದಳು.

ಹಲ್ಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ನಾಗರತ್ನ ಹಲ್ಲೆ ನಡೆಸಿದ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ದೃಶ್ಯಗಳು ಬಹಿರಂಗವಾಗಿವೆ. ಸಿಸಿ ಟಿವಿ ದೃಶ್ಯಾವಳಿಗಳ ಪ್ರಕಾರ ನಾಗರತ್ನ ಹಲ್ಲೆ ನಡೆಸಲು ಮಗಳು ಮೋನಿಕ ಸಹಾಯ ಮಾಡಿದ್ದಾಳೆ‌. ಹಲ್ಲೆ ವೇಳೆ ಮನೆಯಲ್ಲಿದ್ದ ಇತರರು ನಾಗರತ್ನ ಅವರನ್ನು ತಡೆದಿದ್ದರು. ಆದರೆ ಅವರಿಂದ ತಾಯಿಯನ್ನು ರಕ್ಷಿಸಿ ಕೀರ್ತಿಗೌಡಗೆ ಥಳಿಸಲು ತಾಯಿ ನಾಗರತ್ನಗೆ ಮೋನಿಕ ಸಹಾಯ ಮಾಡಿದ್ದಾಳೆ.

ಇಂದು ನಾಗರತ್ನ ಅವರನ್ನು ವಶಕ್ಕೆ ಪಡೆಯಲು ಗಂಟೆಗಳ ಕಾಲ ಮನೆಯ ಮುಂದೆ ಕಾಯಬೇಕಾದ ಪರಿಸ್ಥಿತಿ ಪೊಲೀಸರಿಗೆ ಬಂದೊದಗಿತು. ಮನೆಯೊಳಗಿದ್ದ ನಾಗರತ್ನ ಮತ್ತು ಪುತ್ರಿಯರಾದ ಮೋನಿಶಾ, ಮೋನಿಕಾ ಪೊಲೀಸರಿಗೆ ಬಾಗಿಲು ತೆರೆಯದೆ ಕಿಟಕಿಯಿಂದಲೇ ಸಂಭಾಷಣೆ ನಡೆಸಿದರು. ನಂತರ ನಾಗರತ್ನ ಪರ ವಕೀಲೆ ಆಗಮಿಸಿದ ಬಳಿಕ ಮಕ್ಕಳು ಬಾಗಿಲು ತೆರೆದು ಹೊರ ಬಂದು ಠಾಣೆಗೆ ತೆರಳಿದರು.

ಗಿರಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ ನಟ ದುನಿಯಾ ವಿಜಯ್‌ ಮಗಳನ್ನು ವಿಚಾರಣೆ ನಡೆಸಬೇಡಿ. ನಮ್ಮ ಜಗಳಕ್ಕೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳನ್ನು ಠಾಣೆಯಲ್ಲಿರಿಸ ಬೇಡಿ ಎಂದು ಮನವಿ ಮಾಡಿದರು.

ಬೀದರ್ ನಲ್ಲಿ ನ.14ರಂದು ಸಹಕಾರ ಸಪ್ತಾಹ ಉದ್ಘಾಟನೆ:ಬಂಡೆಪ್ಪ ಖಾಶೆಂಪೂರ

ಬೀದರ್: ನ.14ರಂದು ಬೀದರ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಹೇಳಿದರು.

ಬೀದರ್ ನ ಪ್ರತಾಪನಗರದ ಶಾರದಾ ರೂಡಶೆಟ್ಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.14ರಿಂದ ನ.20ರವರೆಗೆ ದೇಶಾದ್ಯಂತ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತಿಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬೀದರನಲ್ಲಿ ಈ ಬಾರಿಯ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದರು. ದೇಶದ ನಾನಾ ಭಾಗಗಳಿಂದ ಸಹಕಾರಿ ಧರೀಣರು ಆಗಮಿಸಲಿದ್ದಾರೆ. ಅಂದಾಜು 40 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ ಎಂದರು.

ಸಹಕಾರಿ ರಂಗದಲ್ಲಿ ಅದ್ಬುತ ಸೇವೆ ಸಲ್ಲಿಸಿದವರನ್ನು ಗುರುತಿಸಿ
ವಿಭಾಗಕ್ಕೆ ಒಬ್ಬರಂತೆ ಒಟ್ಟು ಐದು ಜನರಿಗೆ ಈ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಗ್ರಾಮೀಣ ಸಮೃದ್ದಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆ ಎಂಬುದು 65ನೇ ಸಹಕಾರ ಸಪ್ತಾಹದ ಧ್ಯೇಯವಾಗಿದೆ. ನ.14ರಂದು ಬೀದರನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರಿ ಮಾರಾಟ, ಸಂಸ್ಕರಣ ಮತ್ತು ಶೇಖರಣೆ ಎನ್ನುವ ಶೀರ್ಷಕೆಯಡಿ ಚರ್ಚೆ, ಚಿಂತನ ಮಂಥನ ನಡೆಯಲಿದೆ ಎಂದು ತಿಳಿಸಿದರು.
ನ.15ರಂದು ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮವು ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳದ ಕೃಷಿಯಲ್ಲಿ ಸಹಕಾರ ಸಂಸ್ಥೆಗಳ ಪ್ರಮುಖ ಪಾತ್ರ ಎನ್ನುವ ವಿಷಯದ ಮೇಲೆ ಬೆಳಕು ಚೆಲ್ಲಲಿದೆ.ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್‌ ನಿರ್ಮಾಣ ವಿಷಯದ ಮೇಲೆ
ನ.16ರಾಯಚೂರ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಿಂತನ ಮಂಥನ ನಡೆಯಲಿದೆ ಎಂದರು.

ನ.17ರಂದು ಮೈಸೂರಲ್ಲಿ ಕಾರ್ಯಕ್ರಮ ನಡೆಯಲಿದೆ. ನ.18ರಂದು ಹಾವೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸರಕಾರಿ ಯೋಜನೆಗಳು ಮತ್ತು ಆದಾಯೋತ್ಪನ್ನ ಕುರಿತು ಜಾಗೃತಿ ಮೂಡಿಸುವ ಕುರಿತು ಚರ್ಚೆ ನಡೆಯಲಿದೆ.ಯುವಜನ, ಮಹಿಳಾ ಮತ್ತು ಅಬಲವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ವಿಷಯದ ಮೇಲೆ 19ರಂದು ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವಲೋಕನ ನಡೆಯಲಿದೆ. ನ.20 ರಂದು ಶಿವಮೋಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ,‌ ತಾಂತ್ರಿಕತೆ ವೃದ್ದಿಪಡಿಸುವುದು ವಿಷಯದ ಮೇಲೆ ಚರ್ಚೆ ನಡೆಯಲಿದೆ ಎಂದು ಸಚಿವರು ಏಳೂ ದಿನಗಳ ಆಚರಣೆಯ ವಿಷಯಗಳನ್ನು ವಿವರಿಸಿದರು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೆಚ್ಚಿನ ಉಡುಪು ಯಾವುದು ಗೊತ್ತಾ?

ಬೆಂಗಳೂರು: ಇತ್ತೀಚೆಗೆ ಮಾನ್ಯವರ್ ನ ‘ಎಥ್ನಿಕ್ ವೀಕ್ ‘ಅಭಿಯಾನವನ್ನು ಬಿಡುಗಡೆ ಮಾಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೀಪಾವಳಿ ಹಬ್ಬ ಹಾಗೂ ಅದರ ಸಂಭ್ರಮ ಜತೆಗೆ ತನ್ನ ನೆಚ್ಚಿನ ಎಥ್ನಿಕ್ ವೇರ್ ಕುರಿತು ಮಾತು ಹಂಚಿಕೊಂಡರು.

ಹಬ್ಬದ ಸಂಭ್ರಮ ಹಾಗೂ ಅದರ ಉತ್ಸವದ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ‘ದೀಪಾವಳಿ ಸಮಯದಲ್ಲಿ ಧನ್ತರಸ್ ನಿಂದ ಹಿಡಿದು ಭಾಯಿ ದೂಜ್ ನವರೆಗೆ ಸ್ನೇಹಿತರು ಹಾಗೂ ಕುಟುಂಬದವರ ಜತೆ ಸಂತಸದಿಂದ ಕಳೆದ ಕ್ಷಣ ಈಗಲೂ ನೆನಪಿನಲ್ಲಿದೆ. ಹಾಗೇ ಈ ಹಬ್ಬದ ಸಮಯದಲ್ಲಿ ನಾನು ಎಥ್ನಿಕ್ ಉಡುಗೆಯನ್ನೇ ಧರಿಸುತ್ತಿದ್ದೆ. ಎಥ್ನಿಕ್ ಉಡುಪು ಧರಿಸುವುದರಿಂದ ಹಬ್ಬದ ಕಳೆ ಬಂದ ಹಾಗೇ ಆಗುತ್ತದೆ. ಹಾಗೇ ಇದು ಖುಷಿಯನ್ನು ನೀಡುತ್ತದೆ. ಇನ್ನು ಈ ಅಭಿಯಾನದ ಶೂಟಿಂಗ್ ವೇಳೆ ನನಗೆ ವೈಯಕ್ತಿಕವಾಗಿ ಇಷ್ಟವಾದದ್ದು ಗೋಲ್ಡನ್ ವರ್ಕ್ ಇರುವ ರಾಯಲ್ ಬ್ಲೂ ಕುರ್ತಾ ಜಾಕೆಟ್ ‘ ಎಂದು ದೀಪಾವಳಿ ಹಬ್ಬ ಹಾಗೇ ಎಥ್ನಿಕ್ ವೇರ್ ನ ಕುರಿತು ವಿರಾಟ್ ಹೇಳಿಕೊಂಡರು.

ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಈ ಪ್ರಚಾರದ ಕುರಿತು ಹೇಳಿದ್ದಾರೆ. ದನ್ತರಸ್, ಚೋಟಿ ದೀಪಾವಳಿ, ದೀಪಾವಳಿ, ಮಿನಿ ಹಾಗೂ ಭಾಯಿ ದೂಜ್ ದೀಪಾವಳಿಯ ಈ ಐದು ವಿಶೇಷ ದಿನಗಳಲ್ಲಿ ಎಥ್ನಿಕ್ ವೇರ್ ಧರಿಸಿ ಎಂದು ಅವರು ಎಲ್ಲರಿಗೂ ಹೇಳಿದರು.

ಈ ಎಥ್ನಿಕ್ ವೀಕ್ ವಿಚಾರದ ಕುರಿತು ನನ್ನ ಬಳಿ ಹೇಳಿದಾಗ ನನಗೆ ತುಂಬಾ ಖುಷಿಯಾಯಿತು. ದೀಪಾವಳಿಯ ಆ ವಾರವಿಡೀ ಎಥ್ನಿಕ್ ಧಿರಿಸುಗಳನ್ನು ಧರಿಸುವುದು ಒಂದು ಒಳ್ಳೆಯ ಸಂಗತಿ ಹಾಗಾಗಿ ನಾನು ತಕ್ಷಣವೇ ಒಪ್ಪಿಕೊಂಡೆ. ಈ ಎಥ್ನಿಕ್ ವೀಕ್ ಯಶಸ್ವಿಯಾಗಲು ಎಲ್ಲಾ ಯುವಕರು ಕೂಡ ಕೈಜೋಡಿಸಬೇಕು ಎಂದಿದ್ದಾರೆ ವಿರಾಟ್.

ದೀಪಾವಳಿ ಇದು ಒಂದು ದಿನಕ್ಕೆ ಸಂಬಂಧಪಟ್ಟಿದ್ದಲ್ಲ. ಈ ಹಬ್ಬ ಶುರುವಾಗುವ ಮೊದಲೇ ಇದರ ತಯಾರಿ ನಡೆಸಲಾಗುತ್ತದೆ. ದನ್ತರಸ್ ನಿಂದ ದೀಪವಾಳಿ ನಂತರ ಭಾಯಿ ದೂಜ್ ವರೆಗೆ ಈ ಹಬ್ಬದ ಸಂಭ್ರಮವಿದೆ. ಪ್ರತಿ ದಿನವೂ ಅದರದ್ದೇ ಆದ ಸಂಪ್ರದಾಯ ಧಾರ್ಮಿಕ ಆಚರಣೆ, ಸಾಮಾಜಿಕ ಸಂಪ್ರದಯ, ಸಂಭ್ರಮವನ್ನು ಹೊಂದಿದೆ. ಹಾಗಾಗಿ ಎಥ್ನಿಕ್ ಉಡುಪುಗಳನ್ನು ಧರಿಸುವ ಮೂಲಕ ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದು.ಪ್ರಚಾರದ ವೇಳೆ ‘ದೀಪಾವಳಿಯ ನಿಜವಾದ ಮಜಾ ಇರುವುದು ಎಥ್ನಿಕ್ ವೇರ್ ನಿಂದ ಬರುತ್ತದೆ’ ಎಂದು ವಿರಾಟ್ ಹೇಳುತ್ತಾರೆ.

ದೀಪಾವಳಿಗಿಲ್ಲ‌ ಲೋಡ್ ಶೆಡ್ಡಿಂಗ್: ಬೆಳಕಿನ ಹಬ್ಬಕ್ಕಿಲ್ಲ ಕಗ್ಗತ್ತಲ ಭೀತಿ

ಬೆಂಗಳೂರು: ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದರೂ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡುವುದಿಲ್ಲ,ದೀಪಾವಳಿಗೆ ಲೋಡ್ ಶೆಡ್ಡಿಂಗ್ ಜಾರಿ ಎನ್ನುವುದು ಸತ್ಯಕ್ಕೆ ದೂರವಾದ ಮಾಹಿತಿಯಾಗಿದ್ದು ನಾನು ಸಹಿ ಮಾಡದೇ ಹೇಗೆ ಲೋಡ್ ಶೆಡ್ಡಿಂಗ್ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ. ಎಸ್.ಎನ್. ಪ್ರಸಾದ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕೆಪಿಸಿಎಲ್, ಕೆಪಿಟಿಸಿಎಲ್, ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ‌ ಸಿಎಂ ಎಚ್ಡಿಕೆ, ದೀಪಾವಳಿಗೆ ಲೋಡ್ ಶೆಡ್ಡಿಂಗ್ ಅಂತ ಸುದ್ದಿ ಮಾಡಿದ್ದೀರಿ.
ಯಾರನ್ನೂ ಕತ್ತಲೆಗೆ ತಳ್ಳಲು ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿಲ್ಲ.ನಮ್ಮ ವಿದ್ಯುತ್ ಕಂಪನಿಗಳು ಲೋಡ್ ಶೆಡ್ಡಿಂಗ್ ಮಾಡಿಲ್ಲ.ಸರ್ಕಾರದಿಂದ ಯಾವುದೇ ತೀರ್ಮಾನ ಆಗಿಲ್ಲ.
ಆರ್ಥಿಕ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಮತ್ತು ಎಲ್ಲ ನಿಗಮಗಳ ಜೊತೆ ಸಭೆ ಮಾಡಿದ್ದೇನೆ. ಎಲ್ಲ ವಿದ್ಯುತ್ ಸರಬರಾಜು ಕಂಪನಿ ನಿರ್ದೇಶಕರ ಜೊತೆ ಸಭೆ. ನಡೆಸಿದ್ದೇನೆ.ಸೌರಶಕ್ತಿಯ ಮೂಲಕ ಜಲ ವಿದ್ಯುತ್ ಉತ್ಪಾದನೆ ಮೂಲಕ ಎಷ್ಟು ವಿದ್ಯುತ್ ಬರುತ್ತದೆ ಎನ್ನುವ ಚರ್ಚೆ ಮಾಡಿದ್ದೇನೆ.ಸಂಜೆ ೫ ರಿಂದ ರಾತ್ರಿ ೧೦ ರ ವರೆಗೆ ೩೦೦ ಮೆಗಾ ವ್ಯಾಟ್ ವಿದ್ಯುತ್ ಸಮಸ್ಯೆಯಾಗಿದೆ.ಜಲ ವಿದ್ಯುತ್ ಉತ್ಪಾದನೆಗೆ ಇನ್ನೂ ನೀರಿದೆ‌ ಎಂದ್ರು.

ಕಲ್ಲಿದ್ದಲು ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೆ ಪತ್ರ ಬರೆದಿದ್ದೇನೆ. ನಮಗೆ ರೈಲಿನ ಮೂಲಕ ಸರಬರಾಜು ಮಾಡಲು ರೇಕ್ ಗಳ ಕೊರತೆ ಇದೆ. ಅದನ್ನು ಒದಗಿಸಲು ಕೇಂದ್ರ ಸರ್ಕಾರ ಒಪ್ಪಿದೆ. ಮಹಾನಗರ ಮತ್ತು ಕೈಗಾರಿಕೆಗಳಿಗೆ ೨೪ ಗಂಟೆ ನಿರಂತರ ವಿದ್ಯುತ್ ನಿರಂತರ ಜ್ಯೋತಿಯಲ್ಲಿ ೨೨. ರಿಂದ ೨೪ ಗಂಟೆ ಗ್ರಾಮೀಣ ಪ್ರದೇಶದಲ್ಲಿ ೩ ಫೇಸ್ ೭ , ಒನ್ ಫೇಸ್ ೯ ಗಂಟೆ ವಿದ್ಯುತ್ ಸರಬರಾಜು.ಬೆಳಿಗ್ಗೆ ೧೧ ಗಂಟೆಯಿಂದ, ೧೨ಟೆಗೆ ೯೭೦೦ ಮೆಗಾವ್ಯಾಟ್.ಸಂಜೆ ೭೨೦೦ ಮೆಗಾವ್ಯಾಟ್ ಬೇಡಿಕೆ ಇದೆ. ಮಧ್ಯಾನ್ಹ ೨೦೦೦ ಮೆಗಾವ್ಯಾಟ್ ಕೊರತೆ ಇದೆ.ಬೆಳಗಿನ ೬ ರಿಂದ ೮೬೦೦ ಕೊತರೆಯಿಲ್ಲ.
ಬೆಳಿಗ್ಗೆ ೯ ರಿಂದ, ೫ ರ ವರೆಗೆ ೮೨೦೦-೧೦೨೦೦
ಸಂಜೆ ೫ ರಿಂದ ರಾತ್ರಿ ೧೦ ರ ವರೆಗೆ ೨೦೦-೪೦೦ ಮೆಗಾವ್ಯಾಟ್ ಕೊರತೆಯಿದೆ. ಅದನ್ನು ಸರಿಪಡಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಸಂಜೆ ೫-೧೦ ರವರೆಗೆ ೮೬೦೦-೯೧೦೦ ವರೆಗೆ ಬೇಡಿಕೆ ಇದೆ. ಲಭ್ಯತೆ ೮೦೦೦-೮೬೦೦ ಇದೆ.
ವರಾಹಿಯಿಂದ ತಾಂತ್ರಿಕ ತೊಂದರೆಯಿಂದ ಎರಡು ದಿನ ಸುಮಾರು ೨೦೦ ಮೆ.ವ್ಯಾ.ಕೊರತೆಯಾಗಿತ್ತು‌ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ರು.

ನಾನೇ ಮುಖ್ಯಮಂತ್ರಿಯಾಗಿದ್ದೇನೆ. ನಾನು ಸಹಿ ಮಾಡದೇ ಲೋಡ್ ಶೆಡ್ಡಿಂಗ್ ಹೇಗೆ ಮಾಡುತ್ತಾರೆ.
ನೀವು ಮಾಡ್ತೀರೊ ಡ್ಯಾಮೇಜ್ ನಿಂದ ಎಷ್ಟು ಹಾನಿಯಾಗುತ್ತಿದೆ ಗೊತ್ತಿದೆಯಾ. ಅತಿ ಒಳ್ಳೆತನ ಒಳ್ಳೆಯದಲ್ಲ ಅಂತ ವಿವೇಕಾನಂದ ಅವರೇ ಹೇಳಿದ್ದಾರೆ ಎಂದು
ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ.ಜನರು ಸಮಸ್ಯೆ ಇದೆ ಅಂತ ಬಂದರೆ ನಾನು ನಿದ್ದೆ ಮಾಡಿಲ್ಲ.ನಿನ್ನೆ ನನ್ನ ಆರೋಗ್ಯದ ಸಮಸ್ಯೆ ಇದ್ದರೂ ಕಷ್ಟ ಪಟ್ಟು.ಕೆಲಸ ಮಾಡುತ್ತಿದ್ದೇನೆ‌ ಎಂದ್ರು.

ಕಲ್ಲಿದ್ದಲು ಕೊರತೆ ನೀಗಿಸಲು ಪಿಯುಷ್ ಗೋಯಲ್ ಜೊತೆ ಸಂಪರ್ಕದಲ್ಲಿದ್ದೆನೆ. ೫ ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲು ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನ ಮಾಡಲಾಗಿದೆ.ಜನವರಿಯಲ್ಲಿ ವಿದೇಶದಿಂದ ಕೊಲ್ ಬರುತ್ತದೆ.
ನಮಗೆ ೧೮% ಮಾತ್ರ ಕಲ್ಲಿದ್ದಲು ಸರಬರಾಜ್ ಆಗಿದೆ.
ರಾಯಚೂರಿನಲ್ಲಿ ಒಂದು ದಿನ ಇಟ್ಟುಕೊಳ್ಳಲು ಆಗುತ್ತಿಲ್ಲ.
ಎಲ್ಲ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ.
ನಾನು ಕೇವಲ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದಿಲ್ಲ. ತಿತ್ಲಿ ಚಂಡ ಮಾರುತ ಬಂದಿರುವುದರಿಂದ ಮಹಾನದಿಯಿಂದ ಕಲ್ಲಿದ್ದಿಲು ಸರಬರಾಜು ಆಗುತ್ತಿಲ್ಲ.
ವಿದ್ಯುತ್ ಖರೀದಿ ಮಾಡಲು ಕೃತಕ ಅಭಾವ ಸೃಷ್ಠಿಸುತ್ತಿಲ್ಲ.
ವಿದ್ಯುತ್ ಖರೀದಿಸಿ ದುಡ್ಡು ಮಾಡುವ ಅಗತ್ಯ ನನಗಿಲ್ಲ‌ ಎಂದ್ರು.

ಕೆಎಂ ಎಫ್ ನಿಂದ ೨ ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ರೈತರಿಂದ ನೇರವಾಗಿ ಖರೀದಿಗೆ ಸೂಚನೆ.
ಮೆಕೆಕಜೋಳಗ ೫೪.೩೮ ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಇದೆ. ರಾಜ್ಯ ಸರ್ಕಾರ ೫೦ ಕೋಟೆ.ರುಪಾಯಿ ನೀಡಿದೆ.
ಖಾಸಗಿಯವರು ೮೦೦-೯೦೦ ಖರಿದಿಸುತ್ತಿದ್ದಾರೆ.
ಹೀಗಾಗಿ ಕೆಎಂ ಎಫ್ ನೇರವಾಗಿ ರೈತರಿಂದ ಖರೀದಿಸಲು ಸೂಚನೆ ನೀಡಿದ್ದೇನೆ. ಛತ್ತಿಸ್ ಗಡದಿಂದ ಅನ್ನಭಾಗ್ಯದ ಅಕ್ಕಿ ತರಿಸುವ ಬದಲು ರಾಜ್ಯದ ರೈತರು ಬೆಳೆದ ಬತ್ತ ಖರೀದಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ್ರು.

ಶನಿವಾರದೊಳಗೆ ಬೆಂಗಳೂರು ಗುಂಡಿ ಮುಕ್ತ ಎಂದು ಘೋಷಣೆ;ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಶನಿವಾರದೊಳಗಾಗಿ ಗುಂಡಿ ಮುಕ್ತ ಬೆಂಗಳೂರು ಮಾಎಉವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ‌ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ವೈಟ್‌ಟಾಪಿಂಗ್, ರಸ್ತೆಗುಂಡಿ, ಕಸ ನಿರ್ವಹಣೆ ಕುರಿತು ವಿಕಾಸಸೌಧದಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಬಿಬಿಎಂಪಿ ಆಡಳಿತದ ಬಗ್ಗೆ ಹೈಕೋರ್ಟ್‌ ನ್ಯಾಯಾದೀಶರು ಲೋಪದೋಷವನ್ನು ಎತ್ತಿಹಿಡಿದು, ಕಟುವಾಗಿ ಸೂಚನೆ ನೀಡಿದ್ದಾರೆ‌. ಇಂತಿಷ್ಟು ದಿನದಲ್ಲಿ‌ ರಸ್ತೆ ಗುಂಡಿ ಮುಚ್ಚಲು ಗಡುವು ನೀಡಿದ್ದು, ಈ ಸಂಬಂಧ ಶನಿವಾರ ವಿಚಾರಣೆ ಬರಲಿದೆ. ಅಷ್ಟರೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಎಂಟು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದು, ಇದರ ದಾಖಲೆಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿಯು ಪ್ರಕಟಿಸುವಂತೆ ಸೂಚಿಸಿದ್ದೇನೆ. ನಗರದ ಪ್ರತಿ ಬೀದಿಯ ರಸ್ತೆ ಗುಂಡಿ ಮುಚ್ಚಿರುವ ಮಾಹಿತಿ ಹಾಕಲಾಗುತ್ತದೆ. ಇದೇ ದಾಖಲೆಯನ್ನು ಹೈಕೋರ್ಟ್‌ಗೂ ಸಲ್ಲಿಸಲಾಗುವುದು.‌ ಈ ದಾಖಲೆ ತಪ್ತಪ್ಪಿದ್ದರೆ ಆಯಾ ವಲಯ ಜಂಟಿ ಆಯುಕ್ತರಿಗೆ ನೇರ ಕರೆ ಮಾಡಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದರು.

* ಎರಡು ವರ್ಷಗಳಿಂದ ಟೆಂಡರ್‌ ಶ್ಯೂರ್ ಹಾಗೂ ವೈಟ್‌ಟಾಪಿಂಗ್ ಯೋಜನೆ ಪ್ರಗತಿಯಲ್ಲಿದ್ದು, ಈ ಎರಡು ಪ್ರಾಜೆಕ್ಟ್‌ಗಳು ಬೇಸಿಗೆ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.‌

*100 ಕಿ.ಮೀ. ವ್ಯಾಪ್ತಿಯ ಈ ಯೋಜನೆ 945 ಕೋಟಿ ರು. ಅಂದಾಜಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಕೆಲ ರಸ್ತೆಗಳಲ್ಲಿ‌ಸಂಚಾರದ ಕೊರತೆಯಿಂದ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. 11 ತಿಂಗಳ ಅವಧಿ ಇದ್ದರೂ ಪೂರ್ಣಗೊಳಿಸಲು ಆಗಿಲ್ಲ.. ವೈಟ್‌ಟಾಪಿಂಗ್ ಯೋಜನೆಗೆ ಪೊಲೀಸರು ಅವಕಾಶ ನೀಡುವ ಸಂಬಂಧ ಅವರೊಂದಿಗೆ ಸಭೆ ನಡೆಸಲಾಗುವುದು. ಪ್ರಸ್ತುತ ಪ್ರಾರಂಭಿಸಿರುವ ಈ ಯೋಜನೆ ಬೇಸಿಗೆ ಒಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

* ಪ್ರಸ್ತುತ 665 ಕೋಟಿ ರು.ವೆಚ್ಚದಲ್ಲಿ 63 ಕಿ.ಮೀ. ರಸ್ತೆಯ ಎಂಟು ಪ್ಯಾಕೇಜ್‌ನ ಟೆಂಡರ್ ಕರೆಯಲಾಗಿದೆ. ಈ ಹಂತದಲ್ಲಿ‌ಒಟ್ಟು 41 ರಸ್ತೆಗಳನ್ನು ವೈಟ್‌ಟಾಪಿಂಗ್ ಮಾಡಲಾಗುತ್ತದೆ. ಈ ಯಾವುದೇ ಕಾನಗಾರಿಗೂ ಬಿಬಿಎಂಪಿ ಹಣದ ಕೊರತೆ ಇಲ್ಲ.

* ತ್ಯಾಜ್ಯ ನಿರ್ವಹಣೆ ಸಂಬಂಧ ಎರಡು ವರ್ಷದಿಂದ ಟೆಂಡರ್ ಕರೆದಿರಲಿಲ್ಲ. ಇನ್ನೊಂದು ತಿಂಗಳೊಳಗಾಗಿ ಹೊಸದಾಗಿ ಟೆಂಡರ್ ಆಹ್ವಾನಿಸಿ, ಕಸ ನಿರ್ವಹಣೆಯ ಮಷಿನರಿಗಳನ್ನು ಗುತ್ತಿಗೆದಾರರು ಹೊಂದಿರಬೇಕು ಎಂದು ಷರತ್ತು ಹಾಕಲಾಗಿದೆ.
ಕಸದಿಂದ ವಿದ್ಯುತ್ ಉತ್ಪಾದನೆ ಯೋಜನೆ ಘಟಕಗಳನ್ನು ಪ್ರತಿ ವಲಯದಲ್ಲೂ 10 ತಿಂಗಳೊಳಗಾಗಿ ತೆರೆಯಲಾಗುವುದು ಎಂದರು.

* ಪ್ರತಿ ಬೀದಿಯಲ್ಲಿ ಎಲ್‌ಇಡಿ ಬಲ್ಬ್‌ ಅಳವಡಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು. ೮೦೦ ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಈ ಯೋಜನೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಇದರಿಂದ ಶೇ.೮೦ ವಿದ್ಯುತ್ ಉಳಿತಾಯ ಆಗಲಿದೆ. ಇದರ ನಿರ್ವಹಣೆಗೆ ಪ್ರತ್ಯೇಕ
ಕಂಟ್ರೋಲ್‌ ರೂಮ್ ಇರಲಿದ್ದು, ಪ್ರತಿ ಬೀದಿಯನ್ನು ನಿರ್ವಹಣೆ ಮಾಡುತ್ತಾರೆ.

‌* ಗಾಂಧೀನಗರ ಹಾಗೂ ಸ್ವಾತಂತ್ರ್ಯ ಉದ್ಯಾನವನದಲ್ಲಿನ ಮಲ್ಟಿಪಾರ್ಕಿಂಗ್ ಕಾಮಗಾರಿ ಶೀಘ್ರವೇ ಮುಗಿಸಲು ಸೂಚನೆ ನೀಡಿದ್ದೇನೆ. ಜೆ.ಸಿ. ರಸ್ತೆಯಲ್ಲಿನ ಪಾರ್ಕಿಂಗ್ ಎರಡು ಮಹಡಿ ಹೆಚ್ಚಲು ಡಿಪಿಆರ್ ಮಾಡಲಾಗಿದೆ.

* ಬಿಬಿಎಂಪಿ ವಿಭಜನೆ ಮಾಡುವ ತೀರ್ಮಾನ ಸಂಪೂರ್ಣವಾಗಿಲ್ಲ. ಹೆಚ್ಚಿನ‌ಹೊರೆ ಆಯುಕ್ತರ ಒಬ್ಬರ ಮೇಲೇ ಬೀಳುತ್ತಿದೆ. ಬಿ.ಎಸ್‌ ಪಾಟೀಲ್ ವರದಿ ಪ್ರಕಾರ ಆಡಳಿತ ವಿಭಜನೆ ಮಾಡಲು ಸಲಹೆ ನೀಡಿದ್ದಾರೆ.‌ಈ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಹೀಗಾಗಿ ಬೆಂಗಳೂರು ಆ್ಯಕ್ಟ್ ತರುವುದು ಕೂಡ ಚರ್ಚೆಯಲ್ಲಿದೆ.

* ಬಿಬಿಎಂಪಿ ಮಹಿಳಾ ಪೌರಕಾರ್ಮಿಕರು ಮೀಟು ಅಭಿಯಾನದಡಿ ಆರೋಪ ಮಾಡುವರು ನೇರ ದೂರ ನೀಡಿದರೆ ಕ್ರಮ.

*ವಯರ್‌ಲೆಸ್‌‌‌ನಲ್ಲಿ ಅಕ್ರಮ‌ ನೇಮಕಾತಿ ಇದ್ದರೆ ಅವರ ಮೇಲೆ ಕ್ರಮ‌ ತೆಗೆದು ಕೊಳ್ಳುತ್ತೇವೆ. ಡಿಜಿ ಅವರು ಕ್ರಮ ತೆಗೆದುಕೊಳ್ಳುತ್ತಾರೆ.‌

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ:ರಾಜಕುಮಾರ ಅತ್ಯುತ್ತಮ ಮನರಂಜನಾ ಚಿತ್ರ

ಫೋಟೋ ಕೃಪೆ-ಫೇಸ್ ಬುಕ್

ಬೆಂಗಳೂರು:೨೦೧೭ ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು,ಶುದ್ಧಿ ಅತ್ಯುತ್ತಮ‌ ಚಿತ್ರವಾಗಿದ್ದು ರಾಜಕುಮಾರ್ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಲಭಿಸಿದೆ.

2017ನೆ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಎನ್.ಎಸ್ ಶಂಕರ್ ಅಧ್ಯಕ್ಷತೆಯ ಸಮಿತಿಯು ತನ್ನ ಶಿಫಾರಸನ್ನು ಇಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿತು.೧೨೧ ಚಲನಚಿತ್ರಗಳು ಪ್ರಶಸ್ತಿಗೆ ಬಂದಿದ್ದು ಅದರಲ್ಲಿ ಸಮಿತಿ ಆಯ್ಕೆ ಮಾಡಿ ಶಿಫಾರಸ್ಸು ಮಾಡಿದೆ. ಸಮಿತಿಯ ಶಿಫಾರಸನ್ನು ಸರ್ಕಾರವು ಅಂಗೀಕರಿಸಿದ್ದು ಪ್ರಶಸ್ತಿಗೆ ಆಯ್ಕೆಯಾದವರ ವಿವರ ಪ್ರಕಟಿಸಿದೆ.

ಪ್ರಶಸ್ತಿ ವಿವರ:

ಶುದ್ಧಿ- ಮೊದಲ ಅತ್ಯುತ್ತಮ ಚಿತ್ರ
ಮಾರ್ಚ್ ೨೨ – ಎರಡನೇ ಅತ್ಯುತ್ತಮ ಚಿತ್ರ
ಪಡ್ಡಾಯಿ- ಮೂರನೇ ಅತ್ಯುತ್ತಮ ಚಿತ್ರ
ಹೆಬ್ಬೆಟ್ ರಾಮಕ್ಕ- ವಿಶೇಷ ಸಮಾಜಿಕ ಕಾಳಜಿಯ ಚಿತ್ರ
ರಾಜಕುಮಾರ- ಅತ್ಯುತ್ತಮ ಮನರಂಜನಾ ಚಿತ್ರ
ಎಳೆಯರು ನಾವು ಗೆಳೆಯರು- ಅತ್ಯುತ್ತಮ ಮಕ್ಕಳ ಚಿತ್ರ
ಅಯನ – ನಿರ್ದೇಶಕರ ನಿರ್ದೇಶನದ ಅತ್ಯುತ್ತಮ ಚಿತ್ರ
ಸೋಪಿಯಾ- ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ
ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ
ಅತ್ಯುತ್ತಮ ಪೋಷಕ ನಟಿ- ರೇಖಾ
ಅತ್ಯುತ್ಯಮ ಚಿತ್ರಕಥೆ- ವೆಂಕಟ್ ಭಾರಧ್ವಾಜ್
ಅತ್ಯುತ್ಯಮ ಸಂಭಾಷಣೆ-ಎಸ್.ಜಿ.ಸಿದ್ದರಾಮಯ್ಯ, ಹೆಬ್ಬೆಟ್ ರಾಮಕ್ಕ
ಅತ್ಯುತ್ತಮ ಛಾಯಾಗ್ರಹಣ-ಸಂತೋಶ್ ರೈ ಪತಾಜೆ, ಚಮಕ್
ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ, ರಾಜಕುಮಾರ
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ,ಮಫ್ತಿ
ಅತ್ಯುತ್ತಮ ಬಾಲನಟ- ಮಾಸ್ಟರ್ ಕಾರ್ತಿಕ್
ಅತ್ಯುತ್ತಮ ಬಾಲನಟಿ- ಶ್ಲಘ ಸಾಲಿಗ್ರಾಮ
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ,ಮಫ್ತಿ
ಅತ್ಯುತ್ತಮ ನಟ- ವಿಶೃತ್ ನಾಯ್ಕ್,ಮಂಜರಿ ಚಿತ್ರ
ಅತ್ಯುತ್ತಮ ನಟಿ- ತಾರಾ ಅನೂರಾಧ,ಹೆಬ್ಬಟ್ಟು ರಾಮಕ್ಕ ಚಿತ್ರ