ಕೈ ನಾಯಕರಿಗಿಂತ ಸಿಎಂ‌ ಎಚ್ಡಿಕೆಗೆ ಹೆಚ್ಚಿನ ಆಧ್ಯತೆ ನೀಡಿದ ರಾಹುಲ್ ಗಾಂಧಿ

ಬೆಂಗಳೂರು:ಸಂವಾದ,ಸ್ವಾಗತ ಹೊರತುಪಡಿಸಿದರೆ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಿಎಂ ಕುಮಾರಸ್ವಾಮಿಯವರ ಜೊತೆಯೇ ಹೆಚ್ಚಾಗಿ ಮಾತುಕತೆ ನಡೆಸಿದರು.ರಾಜ್ಯ ಕಾಂಗ್ರೆಸ್ ನಾಯಕರು ಬರಮಾಡಿಕೊಂಡಿದ್ದು,ಬೀಳ್ಕೊಟ್ಟಿದ್ದು ಬಿಟ್ರೆ ಅವರೊಂದಿಗೆ ಚರ್ಚಿಸಿದ್ದು ಅಷ್ಟಕಷ್ಟೇ.ಆದರೆ ಕಾಂಗ್ರೆಸ್ ನಾಯಕರಿಗೆ ಕೊಡಬೇಕಾದ ಸೂಚನೆಗಳನ್ನೆಲ್ಲ ರಾಹುಲ್ ಕೊಟ್ಟು ಹೋಗಿದ್ದಾರೆ.

ಹೌದು,ಫಿಕ್ಸ್ ಆಗಿದ್ದು ರಾಜ್ಯ ಕಾಂಗ್ರೆಸ್ ನಾಯಕರೊಂದಿಗಿನ ಸಭೆ ಆದರೆ ಹೆಚ್ಚು ಸಮಯ ಮಾತುಕತೆ ನಡೆಸಿದ್ದು ಸಿಎಂ ಎಚ್ಡಿಕೆ ಜೊತೆ,ಸ್ವಾಗತಕ್ಕೆ,ಬೀಳ್ಕೊಡುಗೆಗೆ ಸೀಮಿತರಾದ್ರಾ ಕೈ ನಾಯಕರು? ಸಿಎಂ ಕುಮಾರಸ್ವಾಮಿ ಸಲಹೆಗೇ ಮನ್ನಣೆ ಕೊಟ್ರಾ ರಾಹುಲ್ ಎನ್ನುವ ಪ್ರಶ್ನೆ ಎದ್ದಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದು ತಮ್ಮ ಅಹವಾಲು,ಅಭಿಪ್ರಾಯಗಳಿಗೆಲ್ಲ ಮಣೆ ಹಾಕುತ್ತಾರೆಂಬ ರಾಜ್ಯ ಕಾಂಗ್ರೆಸ್ ನಾಯಕರ ಭರವಸೆ ಹುಸಿಯಾಗಿದೆ.ರಾಹುಲ್ ಗಾಂಧಿಯವರನ್ನು ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡು ಕರೆದುಕೊಂಡು ಬಂದಿದ್ದು ಬಿಟ್ರೆ ರಾಜ್ಯ ನಾಯಕರಿಗೆ ರಾಹುಲ್ ಜೊತೆ ಚರ್ಚಿಸಲು ಹೆಚ್ಚಿನ ಅವಕಾಶ ಸಿಗಲೇ ಇಲ್ಲ.ರಾಹುಲ್ ಬೆಂಗಳೂರಿಗೆ ಆಗಮಿಸಿ ಮೊದಲು ಕುಮಾರಕೃಪಾ ಅತಿಥಿ ಗೃಹದಲ್ಲಿ ಫಿಕ್ಸ್ ಆಗಿದ್ದ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸುತ್ತಾರೆ ಎಂದು ಹೇಳಲಾಗಿತ್ತು.ಹಾಗೆಯೇ ರಾಹುಲ್ ಕುಮಾರಕೃಪಾ ಗೆಸ್ಟ್ ಹೌಸ್ ಗೆ ಆಗಮಿಸಿದ್ದೂ ನಿಜ.ಆದರೆ ಅಷ್ಟು ಹೊತ್ತಿಗೆ ಅಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಜರಾಗಿದ್ದರು.

ಕಾಂಗ್ರೆಸ್ ನಾಯಕರ ಜೊತೆ ಅಷ್ಟಾಗಿ ಚರ್ಚಿಸದ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿಯವರ ಬಳಿಯೇ ಹೆಚ್ಚು ಆತ್ಮೀಯವಾಗಿ, ಆದ್ಯತೆ ಮೇರೆಗೆ ಸಮಾಲೋಚನೆ ನಡೆಸಿದರು.ಇದ್ರಿಂದ ಕಾಂಗ್ರೆಸ್ ನಾಯಕರೇ ಅಚ್ಚರಿಗೊಂಡರು. ಮೈತ್ರಿ ಸರ್ಕಾರದಲ್ಲಿನ ವಿದ್ಯಮಾನಗಳು, ಇತ್ತೀಚೆಗೆ ಆಗುತ್ತಿರುವ ಬೆಳವಣಿಗೆಗಳು, ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ಸಿಗರಿಂದಲೇ ಆಗುತ್ತಿರುವ ಗೊಂದಲಗಳು, ಕೇಳಿಬರುತ್ತಿರುವ ಅಪಸ್ವರಗಳ ಬಗ್ಗೆ ಸಹಜವಾಗಿ ಎಚ್ಡಿಕೆ ಮತ್ತು ರಾಹುಲ್ ಮಾತುಕತೆ ವೇಳೆ ಪ್ರಸ್ತಾಪವಾಯಿತು. ಕುಮಾರಸ್ವಾಮಿಯವರು ಮಂಡಿಸಿದ ಅಭಿಪ್ರಾಯಗಳು, ಮಾತುಗಳಿಗೆಲ್ಲ ರಾಹುಲ್ ಗಾಂಧಿ ಓಕೆ ಅಂತ ಹೇಳಿ ಪೂರ್ಣ ಭರವಸೆ ಕೊಟ್ಟು ಖುಷಿಪಡಿಸಿದರು.ಏನೂ ಯೋಚನೆ ಮಾಡಬೇಡಿ ಅಂತ ತಮ್ಮ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಬ್ರೇಕ್ ಹಾಕುವ ಬಗ್ಗೆ ಅವರು ಅಭಯ ನೀಡಿದರು.ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎಂಬ ಸಲಹೆಗೂ ರಾಹುಲ್ ಗಾಂಧಿ ಅಸ್ತು ಎಂದಿದ್ದಾರೆ ಎಂಬ ಬಗ್ಗೆಯೂ ಈಗ ಗುಸು ಗುಸು ಆರಂಭವಾಗಿದೆ.

ಇನ್ನು ಬೈ ಎಲೆಕ್ಷನ್ ನಲ್ಲಿ ಯಾವುದೇ ಗೊಂದಲಗಳಾಗದಂತೆ ನಿಭಾಯಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರ ನಾಯಕರಿಗೆ ರಾಹುಲ್ ಸೂಚನೆ ನೀಡಿದ್ದಾರೆ..ಮೈತ್ರಿ ಸರ್ಕಾರದಲ್ಲೂ ಗೊಂದಲಗಳಾಗದಂತೆ ನೋಡಿಕೊಳ್ಳಬೇಕೆಂದು ಅವರು ತಾಕೀತು ಮಾಡಿದ್ದಾರೆ.ಇನ್ನು ಬೈ ಎಲೆಕ್ಷನ್ ಅಭ್ಯರ್ಥಿಗಳ ವಿಚಾರದಲ್ಲಿ ಚರ್ಚಿಸಿ,ಬೇಗ ಅಂತಿಮ ನಿರ್ಧಾರ ಕೈಗೊಳ್ಳುವಂತೆ ರಾಹುಲ್ ಸೂಚನೆ ನೀಡಿದ್ದಾರೆ..ಅಷ್ಟು ಬಿಟ್ಟರೆ ರಾಹುಲ್ ಗಾಂಧಿಯವರ ಬೆಂಗಳೂರು ಭೇಟಿಯಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ನಿರೀಕ್ಷೆಗೆ ತಕ್ಕಂತೆ ಸ್ಪಂದನೆ ಸಿಗಲಿಲ್ಲ..ಆದ್ರೆ ಸಿಎಂ ಕುಮಾರಸ್ವಾಮಿಯವರೇ ಪ್ರಾಧಾನ್ಯತೆ ಪಡೆದುಕೊಂಡಿದ್ದು ಅನೇಕರು ಒಳಗೊಳಗೇ ಕುದಿಯುವಂತಾಗಿದೆ.

ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಂಪುಟ ವಿಸ್ತರಣೆ ಬೈ ಎಲೆಕ್ಷನ್ ಬಳಿಕವೇ ಆಗುವುದು ಬಹುತೇಕ ಖಚಿತವಾಗಿದೆ.ಇನ್ನು ನಿಗಮ ಮಂಡಳಿಗಳ ನೇಮಕವೂ ಜೆಡಿಎಸ್ ನಾಯಕರ ಅಭಿಪ್ರಾಯಂತೆಯೇ ಹೆಚ್ಚು ಕಡಿಮೆ ಫೈನಲ್ ಆಗಲಿದೆ.ಅಲ್ಲಿಗೆ ಈ ವಿಚಾರದಲ್ಲಿ ಕುಮಾರಸ್ವಾಮಿಯವರದ್ದೇ ಮೇಲುಗೈ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಅಪಪ್ರಚಾರಕ್ಕಾಗಿ ರಾಹುಲ್ ಸಂವಾದ: ಶೋಭಾ ಕರಂದ್ಲಾಜೆ

ಬೆಂಗಳೂರು:ರಫೇಲ್ ಡೀಲ್ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಬೆಂಗಳೂರಲ್ಲಿ ಸಭೆ ನಡೆಸ್ತಿದ್ದಾರೆ ಯಾವ ಪುರುಷಾರ್ಥಕ್ಕಾಗಿ ಈ ಸಂವಾದ ನಡೆಸ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ರಫೇಲ್ ಡೀಲ್ ಬಗ್ಗೆ ಮಾತಾಡ್ತಾ ಇದ್ದಾರೆ
ಸೈನ್ಯಕ್ಕೆ ಬೇಕಾದ ಅಗತ್ಯ ವಸ್ತುಗಳು ನಮ್ಮಲ್ಲಿ ಇರಲಿಲ್ಲ ಕಳೆದ 70 ವರ್ಷಗಳಲ್ಲಿ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿಲ್ಲ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಯಾರು ತಡೆದರು ಈಗ ನಾವು ರಫೆಲ್ ಯುದ್ಧ ವಿಮಾನ ಖರೀದಿಸಿದರೆ ಸಂಶಯ ಹುಟ್ಟು ಹಾಕುವ ಪ್ರಯತ್ನ ಮಾಡ್ತಿದ್ದಾರೆ ಸೈನ್ಯದ ಮಾನಸಿಕತೆಯನ್ನು ಖುಗ್ಗಿಸುವ ಪ್ರಯತ್ನ ರಾಹುಲ್ ಗಾಂಧಿ ಪ್ರಯತ್ನ ಮಾಡ್ತಿದ್ದಾರೆ‌ ಎಂದ್ರು.

ಎಚ್ಎಎಲ್ ಜೊತೆ ರಾಹುಲ್ ಸಭೆ ನಡೆಸುವ ಅಧಿಕಾರ ಇಲ್ಲ
ನೀವು ಒಬ್ಬ ಪಕ್ಷದ ನಾಯಕ ಮಾತ್ರ ನಿಷೇದಿತ ಪ್ರದೇಶದಲ್ಲಿ ಸಭೆ ಮಾಡ್ತಿದ್ದಾರೆ ರಾಹುಲ್ ಆ ಜಾಗದಲ್ಲಿ ಸಭೆ ನಡೆಸಲು ಆಗಲ್ಲ ಅದು ನಿಷೇದಿತ ಜಾಗ‌ ಆದರೂ ಸಭೆ ನಡೆಸಿ ಕಾನೂನು ಮುರಿಯಲು ಹೊರಟಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ರು.

ವಿಧಾನಸೌಧದಲ್ಲಿ ಆರಂಭವಾದ ಮಹಾಘಟಬಂಧನ ವಿಧಾನಸೌಧಲ್ಲೆ ಅಂತ್ಯ ಆಗಿದೆ.ಯಾಕೆ ಎನ್ ಮಹೇಶ್ ರಾಜೀನಾಮೆ ಕೊಟ್ಟಿದ್ದಾರೆ ನಿಮಗೆ ಜನರ ಬೆಂಬಲ ಇಲ್ಲ
ಇದು ಅಪವಿತ್ರ ಮೈತ್ರಿ ಮಹಾಘಟಬಂಧನ ಮುಳುಗಿದೆ
ದೇಶದಲ್ಲಿ ಘಟಬಂಧನ ಅಂತ್ಯ ಆಗಿದೆ ನೂರು ದಿನದಲ್ಲಿ ಅರವತ್ತು ದಿನವನ್ನು ಕುಮಾರಸ್ವಾಮಿ ದೇವಸ್ಥಾನದಲ್ಲಿ ಕಳೆದಿದ್ದಾರೆ.ಕರ್ನಾಟಕದಲ್ಲಿ ಎಚ್ ಒನ್ ಎನ್ ವನ್ ದಿಂದ ಏಳು ಜನ ಸತ್ತಿದ್ದಾರೆ.ರಾಜ್ಯ ಸರ್ಕಾರ ಎಲ್ಲಿದೆ ಯಾವ ಖಾತೆಯನ್ನು ಯಾವ ಮಂತ್ರಿ ನಿರ್ವಹಿಸುತ್ತಿದ್ದಾರೆ ಗೊತ್ತಿಲ್ಲ. ಸಿಎಂ ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ದಿನಕ್ಕೊಂದು ವಿಚಾರ ಹೇಳ್ತಿದ್ದಾರೆ ಅಣೆಕಟ್ಟಿಗೆ ಡೈನಾಮೇಟ್ ಇಡ್ತೀನಿ ಅಂತಾ ಹೇಳುವ ಶಾಸಕರನ್ನು ಇನ್ನೂ ಬಂಧಿಸಿಲ್ಲ ದಲೈಲಾಮಾ ಹತ್ಯೆ ಸಂಚು ಪ್ರಕರಣದಲ್ಲಿ ಬಂಧಿತರ ಪರವಾಗಿ ಸಿಎಂ ಕುಮಾರಸ್ವಾಮಿ ಮಾತಾಡ್ತಿದ್ದಾರೆ ಸಿಎಂ ರಾಜ್ಯದಲ್ಲಿ ಏನು ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಗೊಂದಲ ನಿರ್ಮಾಣ ಮಾಡುವ ಕೆಲಸ ಮಾಡ್ತಿದ್ದಾರೆ
ರಾಹುಲ್ ಗಾಂಧಿ ಹೆಚ್ ಎಎಲ್ ನ ನಿವೃತ್ತ ಅಧಿಕಾರಿಗಳು ಮತ್ತು ಕಾಂಗ್ರೆಸ್ ಚೇಲಾಗಳ ಜೊತೆ ಮಾತಾಡುವ ಬದಲು ರಾಜ್ಯದಲ್ಲಿ ಏನು‌ ಪ್ರಗತಿ ಆಗಿದೆ ಅಂತಾ ನೋಡಲಿ ಕಾಂಗ್ರೆಸ್ ಪಕ್ಷ ಹೆಚ್ ಎಂಟಿ ಸೇರಿ ಎಷ್ಟು ಕಂಪನಿಗಳನ್ನು ಮುಚ್ಚಿ ಹಾಕಿಲ್ಲ
ಇವತ್ತಿನ ರಾಹುಲ್ ಗಾಂಧಿ ಕಾರ್ಯಕ್ರಮ ಕೇವಲ ಅಪಪ್ರಚಾರ ಎಂದ್ರು.

ಎಚ್ಡಿಕೆ ಅಶ್ವಮೇಧ ಕುದುರೆ ಕಟ್ಟಿಹಾಕ್ತೇವೆ: ಡಿವಿಎಸ್

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಅಶ್ವಮೇಧದ ಕುದುರೆಯನ್ನು ರಾಮನಗರದಿಂದಲೇ ಕಟ್ಟಿಹಾಕುತ್ತೇವೆ ಎನ್ನುವ ಮೂಲಕ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ.

ದೇಶದ ರಕ್ಷಣಾ ವ್ಯವಸ್ಥೆಗೆ ಎಚ್ಎಎಲ್ ಕೊಡುಗೆ’ ಸಂವಾದ ಸಭೆಯಲ್ಲಿ ನಾಳೆ ರಾಹುಲ್ ಭಾಗಿ

ಬೆಂಗಳೂರು: ‘ದೇಶದ ರಕ್ಷಣಾ ವ್ಯವಸ್ಥೆಗೆ ಎಚ್ಎಎಲ್ ಕೊಡುಗೆ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಂಡು ಮಾತನಾಡಲಿದ್ದಾರೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ಈ ಸಂವಾದ ಕಾರ್ಯಕ್ರಮವನ್ನು ಎಚ್ಎಎಲ್ ಆವರಣದಲ್ಲಿಯೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅಲ್ಲಿ ಪರವಾನಗಿ ಸಮಸ್ಯೆ ಎದುರಾಗುವ ಸಾಧ್ಯತೆ ಹಿನ್ನೆಲೆ ಸ್ಥಳ ಬದಲಿಸಲಾಗಿದೆ.

ಏಕೆ ಸಭೆ?

ಕೇಂದ್ರ ಎನ್ಡಿಎ ನೇತೃತ್ವದ ಸರ್ಕಾರದ ರಫೇಲ್ ಯುದ್ಧ ವಿಮಾನ ಕರೀದಿ ವಿರುದ್ಧ ಯುಪಿಎ ನಿರಂತರ ಹೋರಾಟ ನಡೆಸುತ್ತಿದೆ. ಎಚ್ಎಎಲ್ಗೆ ದಕ್ಕಬೇಕಿದ್ದ ಈ ಕರೀದಿ ಟೆಂಡರ್, ಬೇರೆ ದೇಶದ ಖಾಸಗಿ ಕಂಪನಿ ಪಾಲಾಗಿದೆ. ರಿಲಯನ್ಸ್ ಸಂಸ್ಥೆ ಇದರ ಪಾಲುದಾರನಾಗಿದ್ದು, ಯುದ್ಧ ವಿಮಾನ ಸಿದ್ಧಪಡಿಸುವ ಅನುಭವ ಇಲ್ಲದ ಕಂಪನಿಗೆ ಡೀಲ್ ನೀಡಲಾಗಿದೆ. ಅಲ್ಲದೇ ಇದರ ಮೊತ್ತವನ್ನು ಕೂಡ ತಿಳಿಸುತ್ತಿಲ್ಲ. ಎಲ್ಲವನ್ನೂ ಗುಪ್ತವಾಗಿಡಲಾಗಿದೆ. ಇಲ್ಲೊಂದು ದೊಡ್ಡ ವಂಚನೆಯಾಗಿದೆ ಎಂದು ಕಾಂಘ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ.
ಅತ್ಯಂತ ಪ್ರಮುಖವಾಗಿ ಎಚ್ಎಎಲ್ಗೆ ಈ ಟೆಂಡರ್ ಸಿಕ್ಕಿದ್ದರೆ, ಸಾವಿರಾರು ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ದೇಶೀಯ ತಂತ್ರಜ್ಞಾನದಲ್ಲಿ ಅತ್ಯುತ್ತಮ, ಗುಣಮಟ್ಟದ ಯುದ್ದ ವಿಮಾನ ಲಭ್ಯವಾಗುತ್ತಿತ್ತು ಎಂದು ಆರೋಪಿಸಿ ಕಾಂಗ್ರೆಸ್ ಹೋರಾಟ ನಡೆಸಿದೆ. ಇದರ ಭಾಗವಾಗಿಯೇ ನಾಳಿನ ಸಂವಾದ ಕಾರ್ಯಕ್ರಮ ಕೂಡ ನಡೆಯಲಿದೆ.

ರಾಹುಲ್ ಭಾಷಣ

ಅದಾಗಲೇ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದು, ಎಚ್ಎಎಲ್ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿ ತಮಗೆ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಅವರಿಗೆ ಎಲ್ಲಾ ಮಾಹಿತಿ ಒದಗಿಸಲಾಗಿದೆ. ಅದನ್ನು ಆಧರಿಸಿ ನಾಳೆ ಅವರು ಸಭೆಯನ್ನು ಉದ್ದೇಶಿಸಿ ಭಾಷಣ ಕೂಡ ಮಾಡಲಿದ್ದಾರೆ. ಒಂದರಿಂದ ಎರಡು ಗಂಟೆ ಈ ಸಂವಾದ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

ಸಭೆಯಲ್ಲಿ ಯಾರ್ಯಾರು ಭಾಗಿ

ಸಂಸ್ಥೆಯ ನಿವೃತ್ತರು ಹಾಗೂ ನೌಕರರು ಸೇರಿ 100 ಮಂದಿಗೆ ಆಹ್ವಾನ ನೀಡಲಾಗಿದೆ. ಆಹ್ವಾನಿತರ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷರ ಕಾರ್ಯಾಲಯವೇ ಸಿದ್ಧಪಡಿಸಿದೆ. ಅದರಂತೆ ಶನಿವಾರ ಮಧ್ಯಾಹ್ನದ ನಂತರ ಕಾರ್ಯಕ್ರಮ ನಡೆಯಲಿದೆ.

ರಾಹುಲ್ ಪ್ರವಾಸ ವಿವರ

ಮಧ್ಯಾಹ್ನ 1.55ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಾಹುಲ್ ಗಾಂಧಿ ನೇರವಾಗಿ ಕುಮಾರಕೃಪ ಅತಿಥಿಗೃಹಕ್ಕೆ ಅಗಮಿಸುತ್ತಾರೆ. 2.30ಕ್ಕೆ ಅಗಮಿಸುವ ಅವರು ಆಯ್ದ ಕೆಲ ನಾಯಕರ ಜತೆ ಸಭೆ ನಡೆಸುತ್ತಾರೆ. ಸಂಜೆ 3.30ಕ್ಕೆ ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 5ರವರೆಗೆ ಇಲ್ಲಿದ್ದು, 6 ಗಂಟೆಗೆ ಮರಳಿ ದಿಲ್ಲಿಗೆ ಪ್ರಯಾಣ ಬೆಳೆಸುತ್ತಾರೆ.

ಬಸ್ ಪ್ರಯಾಣದರ ಏರಿಕೆ ಇಲ್ಲ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ಸಧ್ಯಕ್ಕೆ ಬಸ್ ಪ್ರಯಾಣದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ,ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ,ಸಾರಿಗೆ ಇಲಾಖೆ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ.ಸಂಸ್ಥೆಗಳು ನಷ್ಟದಲ್ಲಿ ಇವೆ.3000 ಕೋಟಿ ನಷ್ಟ ಆಗಿದೆ.ನಷ್ಟ ಸರಿದೂಗಿಸಲು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇನೆ.ಸಿಎಸ್ ಅಧ್ಯಕ್ಷತೆಯಲ್ಲಿ ಸಾರಿಗೆ ಇಲಾಖೆ, ಆರ್ಥಿಕ ಇಲಾಖೆಗೆ ಅಧಿಕಾರಗಳ ಜೊತೆ ಸಭೆ ಮಾಡಲು ಸೂಚನೆ ನೀಡಿದ್ದೇನೆ.ಅಧಿಕಾರಿಗಳ ಸಭೆ ಬಳಿಕ ನಾನು ಇನ್ನೊಂದು ಸಭೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ,ಸಧ್ಯದ ಮಟ್ಟಿಗೆ ಬಸ್ ಪ್ರಯಾಣದರ ಹೆಚ್ಚಳ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ರು.

ಕೆಪಿಎಸ್ ಸಿ ಅಧ್ಯಕ್ಷ ಶ್ಯಾಮ್ ಭಟ್ ಅಕ್ರಮ ಆರೋಪದ ಬಗ್ಗೆ ಮಾಹಿತಿ ಇಲ್ಲ ಇದು ನನ್ನ ಅವಧಿಯಲ್ಲಿ ಆಗಿಲ್ಲ.ಇದು ಸೂಕ್ಷ್ಮ ವಿಚಾರ.ನನ್ನ ಅವಧಿಯಲ್ಲಿ ಯಾರೇ ಅಕ್ರಮ ಮಾಡಿದ್ರು ಕ್ರಮ ತೆಗೆದುಕೊಳ್ಳುತ್ತೇನೆ.ಯಾವುದನ್ನು ಸುಮ್ಮನೆ ಬಿಡೋದಿಲ್ಲ ನನ್ನ ಇತಿಮಿತಿಯಲ್ಲಿ ಕ್ರಮ ತೆಗೆದುಕೊಳ್ತೀನಿ ಎಂದ್ರು.

ಮಾಧ್ಯಮದ‌ ಕೊಠಡಿ ಬದಲಾವಣೆ ವಿಚಾರ ಗೊಂದಲವಾಗಿತ್ತು.ಮೊದಲ ಕೊಠಡಿಯೇ ನೀಡಲು ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಈ‌ಕುರಿತು ಮಾಧ್ಯಮಗಳಿಗೆ ಅಸಮಾಧಾನವಿದೆ.ಅರಸು ಕಾಲದಲ್ಲಿ‌ ನೀಡಿದ ಕೊಠಡಿ ಇದು.ನಿಮಗೆ ಅದು ಅಡ್ಜೆಸ್ಟ್ ಆಗಿದೆ.ಹೀಗಾಗಿ ಅಧಿಕಾರಿಗಳಿಗೆ ಅದೇ ಕೊಠಡಿ‌ ನೀಡಲು ಸೂಚನೆ ನೀಡಿದ್ದೇನೆ ಎಂದ್ರು.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಕೃಷಿ , ತೋಟಗಾರಿಕೆ, ಲೋಕೋಪಯೋಗಿ ಹಾಗೂ ಪಶುಸಂಗೋಪನೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಚರ್ಚಿಸಲಾಯಿತು.

ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ವಿವರವಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ, ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿಗಳು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ತೋಟಗಾರಿಕೆ ಸಚಿವ ಮನಗೂಳಿ ಮಲ್ಲಪ್ಪ ಚನ್ನವೀರಪ್ಪ , ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ , ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ|| ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ|| ಇ.ವಿ.ರಮಣರೆಡ್ಡಿ, ಲೋಕೋಪಯೋಗಿ ಮತ್ತು ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ||ರಜನೀಶ್ ಗೋಯಲ್ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.