ಮುಖ್ಯಮಂತ್ರಿಗಳಿಂದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ರಾಜಸ್ವ ಸಂಗ್ರಹಣೆಯಲ್ಲಿ 131 ಕೋಟಿ ರೂ. ಹೆಚ್ಚಳವಾಗಿದ್ದು , ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಪ್ರಯಾಣಿಕರ ಆಶಯಗಳನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕೆಂದು ಮುಖ್ಯಮಂತ್ರಿಯವರು ಸೂಚಿಸಿದರು.

ಪ್ರಯಾಣಕರಿಗೆ ಬಸ್ ಸೌಲಭ್ಯ ಮಾತ್ರವಲ್ಲದೆ ಅವರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಪ್ರಯಾಣಿಕರಿಗೆ ಹೊರೆಯಾಗದಂತೆ ಇಲಾಖೆಯ ನಷ್ಟವನ್ನು ಸರಿದೂಗಿಸಲು ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.

ಮೆಟ್ರೋ ರೈಲಿನೊಂದಿಗೆ ಸಮನ್ವಯ ಸಾಧಿಸುವತ್ತ ಗಮನ ಹರಿಸಬೇಕು. ಬಸ್ ದರ ಹೆಚ್ಚಿಸುವ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದರು. ಬಸ್ ದರ ಹೆಚ್ಚಿಸದೇ ನಷ್ಟವನ್ನು ಸರಿದೂಗಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ|| ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ|| ಇ.ವಿ.ರಮಣರೆಡ್ಡಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಮೀಟೂ ಅಭಿಯಾನ ಗೇಮ್ ಚೇಂಜರ್ ಆಗಲಿದೆ: ಶ್ರುತಿ ಹರಿಹರನ್

ಫೋಟೋ ಕೃಪೆ: ಟ್ವಿಟ್ಟರ್

ಹುಬ್ಬಳ್ಳಿ: ಮೀ ಟೂ ಅಭಿಯಾನದ ಬಗ್ಗೆ ಖುಷಿ ಆಗುತ್ತಿದೆ.ಈಗಲಾದ್ರು ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹವಾಗಿದ್ದು ಈ ಅಭಿಯಾನ ‌ಗೇಮ್ ಚೆಂಜರ್ ಆಗಲಿದೆ ಎಂದು ಚಿತ್ರನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು,
ಈ ಅಭಿಯಾನ ಮುಂದುವರೆಯುತ್ತಿದೆ.ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಬಹಿರಂಗೊಳುತ್ತಿದೆ.ಈ .ಯಾವಾಗ ಹೇಳಿದರು ಸತ್ಯ ಸತ್ಯವೇ.ಒಬ್ಬ‌ ಮಹಿಳೆಗೆ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು‌ ಕಷ್ಟಕರ.ಇದು ಮಿಡಿಯಾ ಸೆನ್ಸೆಸನಲ್ ಆಗುತ್ತಿದೆ.ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಆಗದಿದ್ರು ಕೆಲವರಿಗೆ ಶಿಕ್ಷೆಯಾಗಲಿ‌ ಎಂದ್ರು.

ಮುಂದಿನ ದಿನಗಳಲ್ಲಿ ದೌರ್ಜನ್ಯ ಮಾಡುವರು ವಿಚಾರ ಮಾಡುವಂತಾಗಬೇಕು.ಇದು ಗಂಡು ಮತ್ತು ಹೆಣ್ಣಿನ ಪ್ರಶ್ನೆಯಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂತ ಕೃತ್ಯ ನಡೆಯುತ್ತಿವೆ.ಇದು ಚಿತ್ರ ರಂಗದಲ್ಲಿ ಮಾತ್ರ ಇಲ್ಲ.ಎಲ್ಲ ಫೀಲ್ಡ್ ಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ.ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಫೈರ್ ಅಂತ ಸಮಿತಿ ಮಾಡುತ್ತಿದೆ.ಈ ಸಮಿತಿಯಲ್ಲಿ ಕವಿತಾ ಲಂಕೇಶ, ನಾನು ಹಾಗೂ ಪ್ರಿಯಾಂಕಾ ಉಪೇದ್ರ ಇದ್ದಾರೆ.ತಾರ್ಕಿಕ ಅಂತ್ಯ ದೊರೆಯುವ ವರೆಗೂ ಮಿಟೂ ಅಭಿಯಾನ ಮುಂದುವರೆಯಲಿದೆ ಎಂದ್ರು.

ಸಚಿವ ಸ್ಥಾನಕ್ಕೆ ಎಸ್ ಮಹೇಶ್ ಗುಡ್ ಬೈ!

ಬೆಂಗಳೂರು:ರಾಜ್ಯದಲ್ಲಿ ಲೋಕಸಭೆ ಹಾಗು ವಿಧಾನಸಭೆಗಳ ಉಪಚುನಾವಣೆ ವೇಳೆ ಮೈತ್ರಿ ಸರ್ಕಾರಕ್ಕೆ ಬಿ.ಎಸ್.ಪಿ ಶಾಕ್ ನೀಡಿದೆ.ಮಹತ್ವದ ರಾಜಕೀಯ ಬೆಳವಣಿಗೆಗಳಲ್ಲಿ ಸಚಿವ ಸ್ಥಾನಕ್ಕೆ ಎಸ್.ಮಹೇಶ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಬಿಎಸ್ಪಿ ಅಧಿನಾಯಕಿ ಮಾಯಾವತಿ ಸೂಚನೆ ಮೇರೆಗೆ ಸರ್ಕಾರದಿಂದ ಹೊರಬಂದಿರುವ ಮಹೇಶ್ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರುಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದು,ಮೈತ್ರಿ ಸರ್ಕಾರಕ್ಕೆ ಬೆಂಬಲ ಮುಂದುವರೆಸುವ ಘೋಷಣೆ ಮಾಡಿದ್ದಾರೆ.

ರಾಜೀನಾಮೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಹೇಶ್,ಸಚಿವರಾಗಿ 4 ತಿಂಗಳು ಕೆಲಸ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಲು ನನಗೆ ಆಗ್ತಿಲ್ಲ.
ನನ್ನ ವರಿಷ್ಠೆ ಮಾಯಾವತಿ ರಾಜ್ಯಾಧ್ಯಕರಿಂದ ಸಚಿವರಾಗಿ ಆಯ್ಕೆ ಮಾಡಿದ್ರು.ಸಚಿವರಾದ ಮೇಲೆ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲ.ಲೋಕಸಭೆ ಚುನಾವಣೆ ಪಕ್ಷ ಬಲವರ್ಧನೆಗಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ,ಸಚಿವ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಡ್ತಿದ್ದೇನೆ.ಜೆಡಿಎಸ್ ಗೆ ನಮ್ಮ ಬೆಂಬಲ ಇರುತ್ತೆ.ಉಪ‌ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ಕೊಡ್ತೀವಿ ಅಂದ್ರು.

ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಹಾಗಾಗಿ ರಾಜೀನಾಮೆ ನೀಡಿದ್ದೇನೆ ನನ್ನ ಇಲಾಖೆಯಲ್ಲಿ ವೈಫಲ್ಯನಾಗಿದ್ದೇನೆ ಅನ್ನೋದು ಸರಿಯಲ್ಲ ಮುಂದೆ ಬರುವವರಿಗೂ ಇಲಾಖೆ ಏನು ಅನ್ನೋದು ಗೊತ್ತಾಗುತ್ತೆ.ನಾಲ್ಕು ತಿಂಗಳ ಅವಧಿಯಲ್ಲಿ ಪಕ್ಷದ ಚಟುವಟಿಕೆಗಳನ್ನ ಮಾಡಲು ಸಾಧ್ಯವಾಗಲಿಲ್ಲ ಸಚಿವ ಸ್ಥಾನ ವಹಿಸಿಕೊಂಡ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪಕ್ಷದ ಕೆಲಸ ಮಾಡಲು ಸಾಧ್ಯವಾಗಲಿಲ್ಲ
೨೦ ವರ್ಷಗಳ ಸತತ ಪರಿಶ್ರಮದಿಂದ ಗೆದ್ದಿದ್ದೇನೆ ಖಾತೆಯನ್ನ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು
ಜನರು ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ ಕೆಲವರು ಗೆದ್ದು ಬೆಂಗಳೂರಿಗೆ ಹೋದರು ಅಲ್ಲೇ ಇದ್ದಾರೆ ಎನ್ನುತ್ತಿದ್ದಾರೆ
ನನ್ನ ಕ್ಷೇತ್ರದ ಕಡೆಯೂ ನಾನು ಗಮನ ಕೊಡಬೇಕಾಗಿದೆ
ನಾನು ನನ್ನ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದೇನೆ ಮಾಯಾವತಿ ಅವರೂ ರಾಜೀನಾಮೆ ನೀಡುವಂತೆ ಹೇಳಿಲ್ಲ
ಆದರೂ ನಾನೇ ವೈಯಕ್ತಿಕವಾಗಿ ರಾಜೀನಾಮೆ ನೀಡಿದ್ದೇನೆ ಎಂದ್ರು.

ಬಿಜೆಪಿಗೆ ಬಿಸಿ ತುಪ್ಪವಾದ ಜಮಖಂಡಿ ಅಭ್ಯರ್ಥಿ ಆಯ್ಕೆ!

ಬೆಂಗಳೂರು: ಐದು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ರಾಜ್ಯ ಬಿಜೆಪಿಯಲ್ಲೂ ಕಗ್ಗಂಟು ಸೃಷ್ಟಿಸಿದೆ. ಅದರಲ್ಲೂ ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇಬ್ಬರು ಪ್ರಭಾವಿಗಳ ಮಧ್ಯೆ ಫೈಟ್ ನಡೀತಿದೆ. ಹೀಗಾಗಿ ಇವತ್ತು ಜಮಖಂಡಿ ಕ್ಷೇತ್ರದ ಮುಖಂಡರ ಜೊತೆ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಿದ್ರು. ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದೆ.

ರಾಜ್ಯ ಬಿಜೆಪಿಯಲ್ಲಿ ಈಗ ಚುನಾವಣಾ ಜಪ ಕಾಣಿಸಿಕೊಂಡಿದೆ. ಸರಕಾರ ರಚಿಸುವ ವಿಫಲ ಪ್ರಯತ್ನದ ಬಳಿಕ ಇದೀಗ ಐದು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುವ ಛಲ ಬಿಜೆಪಿಗೆ ಬಂದುಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿಯಲ್ಲಿ ಕಸರತ್ತು ಶುರುವಾಗಿದೆ. ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ತಮ್ಮ ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಜಮಖಂಡಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿದ್ರು. ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿಗೆ ಈ ಸಲವೂ ಟಿಕೆಟ್ ಕೊಡಬೇಕೆಂದು ಕ್ಷೇತ್ರದ ಮುಖಂಡರು ಯಡಿಯೂರಪ್ಪರಿಗೆ ಒತ್ತಾಯಿಸಿದ್ರು..

ಜಮಖಂಡಿ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವೇರ್ಪಟ್ಟಿದೆ. ಜಮಖಂಡಿ ಟಿಕೆಟ್​ಗಾಗಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಮಧ್ಯೆ ಫೈಟ್​ ನಡೆಯುತ್ತಿದೆ. ಹೀಗಾಗಿ ಅಲ್ಲಿ ಟಿಕೆಟ್ ಯಾರಿಗೆ ಸಿಗುತ್ತೆ ಎಂಬ ಬಗ್ಗೆ ನಾಯಕರು ಇನ್ನೂ ತೀರ್ಮಾನ ಕೈಗೊಂಡಿಲ್ಲ. ಮೂಲಗಳ ಪ್ರಕಾರ ಶ್ರೀಕಾಂತ್ ಕುಲಕರ್ಣಿಗೆ ಜಮಖಂಡಿ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇನ್ನು ರಾಮನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್ ರ ಹೆಸರು ಬಲವಾಗಿ ಕೇಳಿಬರ್ತಿದೆ. ಈ ಕುರಿತು ನಾಡಿದ್ದು ನಡೆಯುವ ಪಕ್ಷದ ಕೋರ್​ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ..

ಇನ್ನು ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಗಾಗಿ ಮಾಜಿ ಡಿಸಿಎಂ ಆರ್.ಅಶೋಕ್​ ಆಪರೇಷನ್ ಕಮಲ ನಡೆಸ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಕಾಂಗ್ರೆಸ್​ನಲ್ಲಿರುವ ಚೆಲುವರಾಯಸ್ವಾಮಿ, ಬಾಲಕೃಷ್ಣ, ಪರಿಷತ್ ಸದಸ್ಯ ಸಿ.ಪಿ.ಲಿಂಗಪ್ಪ ಪುತ್ರ ಚಂದ್ರಶೇಖರ್​ರನ್ನು ಪಕ್ಷಕ್ಕೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಯಾರು ಬಂದರೂ ಟಿಕೆಟ್ ಕೊಟ್ಟು ಜೆಡಿಎಸ್​ ಅಭ್ಯರ್ಥಿ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಇನ್ನುಳಿದ ಎರಡು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಗೆ ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕ ಶ್ರೀರಾಮುಲು ಸಹೋದರಿ ಜೆ.ಶಾಂತಾ, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಬಿಎಸ್​ವೈ ಪುತ್ರ ಬಿ.ವೈ.ರಾಘವೇಂದ್ರರಿಗೂ ಟಿಕೆಟ್ ನಿಕ್ಕಿಯಾಗಿದೆ. ಈ ಕುರಿತು ನಾಡಿದ್ದು ನಡೆಯುವ ಪಕ್ಷದ ಕೋರ್​ಕಮಿಟಿ ಸಭೆ ಬಳಿಕ ಪ್ರಕಟಿಸಲಾಗುತ್ತದೆ. ಒಟ್ಟಿನಲ್ಲಿ ಮೈತ್ರಿ ಪಕ್ಷಗಳಿಗೆ ತಿರುಗೇಟು ಕೊಡಲು ಬಿಜೆಪಿ ತಕ್ಕ ಚುನಾವಣಾ ತಂತ್ರವನ್ನೇ ಹೆಣೆಯುತ್ತಿದೆ..

ಮೈತ್ರಿ ಸರ್ಕಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ?

ಬೆಂಗಳೂರು: ರೈತರ ಸಾಲ ಮನ್ನಾ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಇದೀಗೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾಕ್ಕೆ ಮುಂದಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಸಹಕಾರಿ ಮತ್ತು ‌ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ‌ ಪಡೆದಿರುವ ಸಾಲ ಮನ್ನಾಕ್ಕೆ ಮೈತ್ರಿ ಸರ್ಕಾರ ಮುಂದಾಗಿದ್ಯಾ? ಹೌದು ಇದೀಗ ಇಂತದೊಂದು ಪ್ರಶ್ನೆ ಎದುರಾಗಿದೆ.

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡುವಂತೆ ಪ್ರಜಾ ಪರಿವರ್ತನಾ ವೇದಿಕೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಮನವಿ ಆಧರಿಸಿ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ವರದಿ ಕೇಳಿದೆ. ಸರ್ಕಾರಕ್ಕೆ ವರದಿ ಸಲ್ಲಿಸಲು ಆಯಾ ಜಿಲ್ಲೆಗಳ ಜಂಟಿ ನಿರ್ದೇಶಕರು ಕೂಡಲೇ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುವಂತೆ ಆಯುಕ್ತರು ಸುತ್ತೊಲೆ ಹೊರಡಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಖರ್ಚಾಗದೆ ಉಳಿದಿರುವ ೭೦ ಸಾವಿರ ಕೋಟಿಗೂ ಅಧಿಕ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಇದ ಲಾಭ ಪಡೆಯಲಿದ್ದಾರೆ.
‌‌‌ ‌‌

ರಾಮನಗರಕ್ಕೆ ನಾನೇ ಅಭ್ಯರ್ಥಿ: ಅನಿತಾ ಕುಮಾರಸ್ವಾಮಿ

ರಾಮನಗರ: ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಿದ್ದು ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ರಾಮನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ರಾಮನಗರ ನಮ್ಮ ಕುಟುಂಬದ ಪುಣ್ಯ ಭೂಮಿ, ಕಾರ್ಯಕರ್ತರೇ ನಮ್ಮ ಶಕ್ತಿ ಎಂದು ಹೇಳಿದರು.