ಸಚಿವ ಸಂಪುಟ ವಿಸ್ತರಣೆ ಮುಂದೂಡುವಂತೆ ನಾನು ರಾಹುಲ್‌ಗೆ ಸಲಹೆ ನೀಡಿಲ್ಲ: ಎಚ್‌ಡಿಡಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮುಂದೂಡುವಂತೆ ನಾನು ರಾಹುಲ್ ಗಾಂಧಿಯವರಿಗೆ ಸಲಹೆ ಮಾಡಿಲ್ಲ, ಅಲ್ಲದೆ ನಾನು ಅವರನ್ನು ಭೇಟಿಯೇ ಮಾಡಿಲ್ಲ. ನವದೆಹಲಿಯಲ್ಲಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದಾಗ ಎಷ್ಟು ಸಾಧ್ಯವೋ ಅಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಹೇಳಿದ್ದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಎಚ್‌.ಡಿ.ದೇವೇಗೌಡ, ಉಪಚುನಾವಣೆ ಮೈತ್ರಿಯ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟಪಡಿಸಿದ್ದೇವೆ. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾರು ಎಂದು ಇನ್ನೂ ನಿರ್ಧರಿಸಿಲ್ಲ. ನಿನ್ನೆಯಷ್ಟೇ ಚುನಾವಣೆ ಘೋಷಣೆಯಾಗಿದೆ. ಒಂದೆರಡು ದಿನ ಸಮಯ ಕೊಡಿ. ನಂತರ ಅಭ್ಯರ್ಥಿಯ ಘೋಷಣೆ ಮಾಡುತ್ತೇವೆ ಎಂದರು.

ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, ಸಚಿವ ಸಂಪುಟ ವಿಸ್ತರಣೆ ಮುಂದೂಡುವಂತೆ ನಾನು ರಾಹುಲ್ ಗಾಂಧಿಯವರಿಗೆ ಸಲಹೆ ಮಾಡಿಲ್ಲ, ಅಲ್ಲದೆ ನಾನು ಅವರನ್ನು ಭೇಟಿಯೇ ಮಾಡಿಲ್ಲ. ನವದೆಹಲಿಯಲ್ಲಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದಾಗ ಎಷ್ಟು ಸಾಧ್ಯವೋ ಅಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಿ, ನಿಗಮ‌ ಮಂಡಳಿಗಳ ನೇಮಕಾತಿಯನ್ನೂ ಮಾಡಿ ಎಂದು ಹೇಳಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಎಷ್ಟು ಜಾಗೃತೆ ಮಾಡಬೇಕೋ ಅಷ್ಟು ಮಾಡಿದ್ದೇನೆ ಎಂದರು.

ಬೈ ಎಲೆಕ್ಷನ್ ಗೂ ಮೈತ್ರಿ: ದೇವೇಗೌಡ

ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು‌ ಎದುರಿಸಲಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ,ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಲಿದೆ. ರಾಮನಗರ ನಮ್ಮದೇ ಕ್ಷೇತ್ರವಾಗಿತ್ತು ಅಲ್ಲಿ ಅಭ್ಯರ್ಥಿ ಹಾಕುತ್ತೇವೆ,ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲಿದೆ ಆದರೆ ಅನಿತಾಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದ್ರು.

ಶಿವಮೊಗ್ಗ, ಬಳ್ಳಾರಿ, ಮಂಡ್ಯ ಮೂರು ಲೋಕಸಭಾ ಉಪ ಚುನಾವಣೆ ಬಗ್ಗೆ ಕುಮಾರಸ್ವಾಮಿ , ಸಿದ್ದರಾಮಯ್ಯ , ಪರಮೇಶ್ವರ್ ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.ಮೈತ್ರಿಯಾಗೇ ಚುನಾವಣೆ ಎದುರಿಸುತ್ತೇವೆ,ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಡಲಿದ್ದಾರೆ,ಅಭ್ಯರ್ಥಿ ಯಾರು ಅನ್ನೋದು %B

ಸಿದ್ಧರಾಮಯ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಮಹಿಳಾಮಣಿಗಳು!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು‌ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಳೆಯರ ಪ್ರೊಗ್ರಾಂ ಎಂದ ತಕ್ಷಣ ನೆನಪಾಗೋದು ಸಿದ್ಧರಾಮಯ್ಯ ಸುತ್ತ ಸುತ್ತಿಕೊಳ್ಳುವ ಮಹಿಳಾ ಮಣಿಗಳು. ಹೌದು ಇವತ್ತು ಕೂಡ ಸಿದ್ಧರಾಮಯ್ಯ ಜೊತೆ ಸೆಲ್ಫಿಗೆ ಮಹಿಳೆಯರು ಮುಗಿಬಿದ್ದರು. ಅಷ್ಟೇ ಅಲ್ಲ, ಮಾಜಿ ಸಿಎಂ ಕೂಡ ಮಹಿಳೆಯರ ಕಾಲು ಎಳೆಯುತ್ತಲೇ ಅವರಿಗೆ ಉತ್ತಮ ಮೆಸೇಜ್ ನೀಡಿದರು.

ರಾಜ್ಯ ಪ್ರದೇಶ ಕುರುಬ ಸಂಘ ಮತ್ತು ಅಹಲ್ಯಾ ಹೊಳ್ಕರ್ ಮಹಿಳಾ ಸಂಘ ಹಮ್ಮಿಕೊಂಡಿದ್ದ ಮಾಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಸಿದ್ಧರಾಮಯ್ಯ ಕಾರ್ಯಕ್ರಮದ ಸ್ಥಳಕ್ಕೆ ಬಂದ ತಕ್ಷಣ, ಸಿದ್ಧು ಜೊತೆ ಸೆಲ್ಫಿಗೆ ಮಹಿಳೆಯರು ನಾ ಮುಂದು, ತಾಮುಂದು ಎಂದು ಮುಗಿಬಿದ್ದರು. ಸಿದ್ಧು ಕಾರ್ಯಕ್ರಮಕ್ಕೆ ಎಂಟ್ರಿಯಾದಾಗಿನಿಂದ, ಮುಗಿಯುವವರೆಗೆ ನಿಂತಲ್ಲಿ , ಕೂತಲ್ಲಿ ಸೆಲ್ಫಿಗಾಗಿ ಮಹಿಳೆಯರು ಗುಂಪುಗಟ್ಟಿ ಮುಗಿಬಿದ್ದಿದರು. ವೇದಿಕೆ ಸನ್ಮಾನದಲ್ಲೂ ಸೆಲ್ಫಿಯದೇ ಸದ್ದು ಕಾಣುತ್ತಿತ್ತು.

ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಲೇ ಸಾಮಾಜಿಕ ನ್ಯಾಯದ ಬಗ್ಗೆ ಪಾಠ ಶುರು ಮಾಡಿದರು. ಈ ಪಾಠದಲ್ಲೇ ನಗೆಯ ಅಲೆಯನ್ನು ಸೃಷ್ಟಿಸಿದರು. ವರದಕ್ಷಿಣೆ ಕಿರುಕುಳ ಬಂದಿದ್ದು ಬರೀ ಗಂಡಸರಿಂದಲ್ಲ, ಹೆಂಗಸರಿಂದಲೂ ವರದಕ್ಷಿಣೆ ಕಿರುಕುಳ ಬಂದಿದೆ.
ಸೊಸೆಗೆ ಅತ್ತೆಯಿಂದ ಕಿರುಕುಳ- ಹೌದೋ ಅಲ್ವೋ?? ಎಲ್ಲೂ ಮಾವನಿಂದ ಸೊಸೆಗೆ ಕಿರುಕುಳ ಅಂತ ಕೇಳೊ ಪ್ರಮಾಣ ಕಡಿಮೆ ಅಲ್ವಾ ? ಸತ್ಯ ಒಪ್ಪಿಕೊಳ್ಳೋಣ, ಜಾಗೃತಿ ಬರಬೇಕಲ್ಲ- ಏನಂತೀರಿ? ಮಹಿಳಾ ಗ್ರಾಮ ಪಂಚಾಯತ್ ಸದಸ್ಯೆಯರ ಹಿಂದೆ ಗಂಡ ಕೂತಿರ್ತಾನೆ ಅವನಿಗೇನು ಕೆಲಸ ಅಲ್ಲಿ? ಜಾಗೃತಿ ಬಂದ ಹೆಣ್ಣು ಮಕ್ಕಳು ಗಂಡನಿಗೆ ಮನೆಯಲ್ಲಿ ಕೂರು, ನನ್ನ ಜೊತೆ ಬರಬೇಡ ಅಂತ ಹೇಳಬೇಕು ಎಂದರು.

ಇಷ್ಟೆಲ್ಲ ಕ್ರೇಜ್ ಮಧ್ಯೆಯೂ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಮರೆಯಲಿಲ್ಲ. ಹಲವು ಯಶಸ್ವಿ ಭಾಗ್ಯ ನೀಡಿದ್ರು, ಯಾವ್ದೇ ಪ್ರಯೋಜನವಾಗಲಿಲ್ಲ. ಮತ್ತೆ ಸಿಎಂ ಆಗೋ ವಿಚಾರಕ್ಕೆ ಮಾತನಾಡಿದ ಸಿದ್ದರಾಮಯ್ಯ. ಹೊಟ್ಟೆ ಕಿಚ್ಚಿಗೆ ಮದ್ದು ಎಲ್ಲಿದೆ..?ನಾನು ಐದು ವರ್ಷ ಪೂರೈಸಿದ ನಂತರ ಮತ್ತೆ ಸಿಎಂ ಆಗ್ತೀನಿ ಅಂತ ಬಹಳ ಜನ ಹೊಟ್ಟೆ ಕಿಚ್ಚು ಪಟ್ಟಿದ್ರು. ಅದೆಲ್ಲ‌ ಇರಲಿ ಬಿಡಿ. ಯಾರ್ ಏನಾದ್ರೂ ಹೊಟ್ಟೆ ಕಿಚ್ಚು ಪಟ್ಟುಕೊಳ್ಳಲಿ, ನನಗಂತೂ ಆತ್ಮ ತೃಪ್ತಿಯಾಗೋ ರೀತಿ ಕೆಲಸ ಮಾಡಿದ್ದೇನೆ. ದೇವರಾಜು ಅರಸು ನಂತರ ನನಗೆ ಈ ಅವಕಾಶ ಸಿಕ್ಕಿದ್ದು ಎಂದು ಚುನಾವಣೆ ವೇಳೆ ಆದ ಬೆಳವಣಿಗೆ ಬಗ್ಗೆ ಬಿಚ್ಚಿಟ್ಟರು.

ಶಿವಮೊಗ್ಗ ಕ್ಷೇತ್ರಕ್ಕೆ‌ ಬಿ.ವೈ ರಾಘವೇಂದ್ರ ಅಭ್ಯರ್ಥಿ: ಬಿಎಸ್ವೈ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪುತ್ರ ಬಿ.ವೈ ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಗೆ ನೀರಾವರಿ ಕಲ್ಪಿಸುವ ಯೋಜನೆಯ ಸರ್ವೇಕಾರ್ಯಕ್ಕೆ ಚಾಲನೆ ನೀಡಿದ ವೇಳೆ ಚುನಾವಣಾ ದಿನಾಂಕ ಪ್ರಕಟಗೊಂಡ ಮಾಹಿತಿ ತಿಳಿದು ಅಭ್ಯರ್ಥಿ ಹೆಸರು ಘೋಷಿಸಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ.ವೈ. ರಾಘವೇಂದ್ರರನ್ನು ಮತ್ತೊಮ್ಮೆ ಸಂಸದರಾಗಿ ಆಯ್ಕೆ ಮಾಡಲು ಜನತೆಗೆ ಮನವಿ ಮಾಡಿದ ಯಡಿಯೂರಪ್ಪ ಪುತ್ರನ ಪರ ಪ್ರಚಾರ ಆರಂಭಿಸಿದದ್ರು.

ಎಲೆಕ್ಷನ್ ,ಬೈ ಎಲೆಕ್ಷನ್ ಗೆ ಮುಹೂರ್ತ ಫಿಕ್ಸ್ !

ಫೋಟೋ ಕೃಪೆ: ಟ್ವಿಟ್ಟರ್

ನವದೆಹಲಿ: ರಾಜ್ಯದ ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ.ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆಗೆ ನಡೆಯಲಿದೆ ಎಂದುಕೊಂಡಿದ್ದ ರಾಜಕೀಯ ಪಕ್ಷಗಳಿಗೆ‌ಲೋಕಸಭಾ ಉಪಚುನಾವಣೆಗೆ ಪ್ರಕಟಿಸಿ ಅಚ್ಚರಿ ಮೂಡಿಸಿದೆ.

ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಓಪಿ ರಾವತ್ ಸುದ್ದಿಗೋಷ್ಠಿ ನಡೆಸಿ ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಮಿಜೋರಾಂ, ಛತ್ತಿಸ್ ಗಡ್ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಿದರು.ಛತ್ತೀಸ್ ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ. ಮೊದಲ ಹಂತ ನವೆಂಬರ್ 12ರಂದು ಎರಡನೇ ಹಂತ ನವೆಂಬರ್ 20 ರಂದು ಮತದಾನ. ಮಧ್ಯಪ್ರದೇಶ ಮತ್ತು ಮಿಜೋರಾಂಗಳಲ್ಲಿ ಒಂದೇ ಹಂತದಲ್ಲಿ ನವೆಂಬರ್ 28 ರಂದು ಮತದಾನ. ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ಒಂದೇ ಹಂತದ ಮತದಾನ ಡಿಸೆಂಬರ್ 7 ರಂದು ಚುನಾವಣೆ. ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶವೂ ಡಿಸೆಂಬರ್ 11 ರಂದು ಪ್ರಕಟ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಇದರೊಂದಿಗೆ ಬಳ್ಳಾರಿ, ಶಿವಮೊಗ್ಗ ಮಂಡ್ಯ ಲೋಕಸಭೆಗೆ ಹಾಗೂ ಜಮಖಂಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ಮತದಾನ ನಡೆಯಲಿದ್ದು ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.

ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ, ವರ್ಗಾವಣೆ,ಸಭೆಗಳನ್ನು ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಗೆ ಮೂಹುರ್ತ ಫಿಕ್ಸ್!

ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಹಾಗೂ ಎರಡೂ ವಿಧಾನಸಭೆಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಂಜೀವ್ ಕುಮಾರ್, ಅಕ್ಟೋಬರ್‌16 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, 17 ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ, 20 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆ ದಿನ ಹಾಗೂ ನವೆಂಬರ್ 3ಕ್ಕೆ ಮತದಾನ ನಡೆಯಲಿದ್ದು, 6 ರಂದು ಮತ ಏಣಿಕೆ ಕಾರ್ಯ ನಡೆಯಲಿದೆ. ನವೆಂಬರ್‌8 ಕ್ಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಅಧಿಕಾರಿಗಳ ವರ್ಗಾವಣೆ ಮಾಡುವಂತಿಲ್ಲ, ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಹೊಸ ಘೋಷಣೆಗಳನ್ನು ಮಾಡುವಂತಿಲ್ಲ, ಯಾವುದೇ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಮಾಹಿತಿ ನೀಡಿದರು.

ಲೋಕಸಭಾ ಕ್ಷೇತ್ರಗಳಾದ ಶಿವಮೊಗ್ಗದಲ್ಲಿ ಒಟ್ಟು 16ಲಕ್ಷದ 96ಸಾವಿರದ 978, ಬಳ್ಳಾರಿಯಲ್ಲಿ 17ಲಕ್ಷದ 1ಸಾವಿರದ 50, ಮಂಡ್ಯದಲ್ಲಿ 17ಲಕ್ಷದ 22ಸಾವಿರದ 476 ಮತದಾರರಿದ್ದು, ವಿಧಾನ ಸಭಾ ಕ್ಷೇತ್ರಗಳಾದ ಜಮಖಂಡಿಯಲ್ಲಿ 1ಲಕ್ಷದ 99ಸಾವಿರದ 339, ರಾಮನಗರದಲ್ಲಿ 2 ಲಕ್ಷದ 02ಸಾವಿರದ 599 ಮತದಾರರಿದ್ದಾರೆ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಇವಿಎಂ ಯಂತ್ರ ಬಳಕೆ ಮಾಡಲಾಗುತ್ತಿದೆ. ಈಗಾಗಲೇ ವಿವಿ ಪ್ಯಾಟ್ ರೆಡಿ ಇದ್ದಾವೆ. ವೋಟರ್ ಐಡಿಯಲ್ಲಿ ಹೆಸರು ಇರುವವರು ಮಾತ್ರ ವೋಟ್ ಮಾಡಬೇಕು. ಮೊದಲೇ ವೋಟರ್ ಐಡಿ ನೋಡಿಕೊಂಡು ಹೆಸರು ಇಲ್ಲದವರು ಈಗಲೂ ಸೇರಿಸಬಹುದು ಎಂದು ಹೇಳಿದರು‌.

5 ಕ್ಷೇತ್ರಗಳಲ್ಲಿ 6453 ಮತ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ಚುನಾವಣೆಗೆ ಬೇಕಿರೋ ಎಲ್ಲ ಇವಿಎಂ ಯಂತ್ರಗಳು ಮತ್ತು ವಿವಿ ಪ್ಯಾಟ್ ರೆಡಿ ಇದೆ. ಚುನಾವಣಾ ಪ್ರಕ್ರಿಯೆಗೆ 34433 ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿತ್ತಿದೆ ಎಂದರು.