ಮುಖ್ಯಮಂತ್ರಿಗಳನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಬೆಂಗಳೂರು: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ರಾಜ್ಯಪಾಲರಾದ ಲಿಂಡಾ ಡೆಸ್ಸೌ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿತು.

ಕರ್ನಾಟಕ ಮತ್ತು ವಿಕ್ಟೋರಿಯಾದ ನಡುವೆ ತಂತ್ರಜ್ಞಾನ, ಶಿಕ್ಷಣ ಮತ್ತು ಸಂಶೋಧನೆ, ಆರೋಗ್ಯ, ಮೂಲಭೂತ ಸೌಕರ್ಯ, ತ್ಯಾಜ್ಯ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಉತ್ಸುಕವಾಗಿದೆ. ಆಸ್ಟೇಲಿಯಾದಲ್ಲಿ ಕರ್ನಾಟಕ ಮೂಲದ ಟೆರ್ರಾ ಬ್ಲೂ ಸ್ಟಾರ್ಟ್‍ಅಪ್ ಕಂಪನಿ ಸೇರಿದಂತೆ ಇನ್‍ಫೋಸಿಸ್ ನಂತಹ ದೈತ್ಯ ಕಂಪನಿಯೂ ಕಾರ್ಯನಿರ್ವಹಿಸುತ್ತಿವೆ ಎಂದು ವಿಕ್ಟೋರಿಯಾದ ರಾಜ್ಯಪಾಲರಾದ ಲಿಂಡಾ ಡೆಸ್ಸೌ ತಿಳಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ವಿಕ್ಟೋರಿಯಾ ಹಾಗೂ ಕರ್ನಾಟಕದ ಸಹಯೋಗದಲ್ಲಿ ಏರೋಸ್ಪೇಸ್ ತಂತ್ರಜ್ಞಾನ, ಕೃಷಿಯಲ್ಲಿ ನೂತನ ವಿಧಾನಗಳು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಒಟ್ಟಾಗಿ ಕಾರ್ಯನಿರ್ವಹಿಸಬಹುದಾದ ಕ್ಷೇತ್ರಗಳನ್ನು ಗುರುತಿಸಲಾಗುವುದು ಎಂದರು. ಮುಂಬರಲಿರುವ ಬೆಂಗಳೂರು ಟೆಕ್ ಸಮ್ಮಿಟ್- 2018 ರಲ್ಲಿ ವಿಕ್ಟೋರಿಯಾದ ಕಂಪನಿಗಳು ಭಾಗವಹಿಸಲು ಅವರು ಆಹ್ವಾನವಿತ್ತರು.

ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕಾರ್ಯದರ್ಶಿ ಸೆಲ್ವಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

ಕಾಂಪೀಟ್ ವಿತ್ ಚೈನಾ ಯೋಜನೆ: ಪ್ರಸಕ್ತ ವರ್ಷ 500 ಕೋಟಿ ರೂ. ಅನುದಾನ

ಬೆಂಗಳೂರು: ರಾಜ್ಯ ಸರ್ಕಾರವು ‘ಕಾಂಪೀಟ್ ವಿತ್ ಚೈನಾ’ ಎಂಬ ಯೋಜನೆಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಮುಂದಿನ ವರ್ಷ 2000 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ‘ಕಾಂಪೀಟ್ ವಿತ್ ಚೈನಾ’ ಯೋಜನೆಯಡಿ ಸ್ಥಾಪಿಸಲಾದ ವಿವಿಧ ವಲಯಗಳ ಉದ್ಯಮಿಗಳನ್ನೊಳಗೊಂಡ 6 ವಿಷನ್ ಗ್ರೂಪ್‍ಗಳ ಸದಸ್ಯರೊಂದಿಗೆ ಸಂವಾದ ನಡೆಸಿದರು. ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಮೂಲಕ ಸ್ಥಳೀಯ ಸಂಪನ್ಮೂಲಗಳ ಬಳಕೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕಲಬುರಗಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳ ತಯಾರಿಕೆ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳು, ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆ, ಮೈಸೂರಿನಲ್ಲಿ ಪಿಸಿಬಿ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ತಯಾರಿಕೆ, ತುಮಕೂರಿನಲ್ಲಿ ಕ್ರೀಡೆ ಮತ್ತು ಫಿಟ್‍ನೆಸ್ ಉಪಕರಣಗಳ ತಯಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ.

ರಾಜ್ಯ ಸರ್ಕಾರವು 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಿದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ 2ನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರುವವರಿಗೆ ಸರ್ಕಾರ ಎಲ್ಲ ರೀತಿಯಲ್ಲೂ ನೆರವಾಗಲಿದೆ ಎಂದು ತಿಳಿಸಿದರು.

ಸಂವಾದದ ವೇಳೆ ಕೊಪ್ಪಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಟಿಕೆಗಳ ಉತ್ಪಾದನಾ ಕ್ಲಸ್ಟರ್, ಬಳ್ಳಾರಿಯ ವಸ್ತ್ರೋದ್ಯಮ ಕ್ಲಸ್ಟರ್, ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐಸಿಬಿ/ ಪಿಸಿಬಿ ಕ್ಲಸ್ಟರ್, ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೊಬೈಲ್ ಫೋನ್ ಬಿಡಿಭಾಗಗಳ ಕ್ಲಸ್ಟರ್, ಕಲಬುರಗಿಯ ಸೋಲಾರ್ ಉಪಕರಣಗಳ ಉತ್ಪಾದನಾ ಕ್ಲಸ್ಟರ್ ಹಾಗೂ ಚಿತ್ರದುರ್ಗದ ಎಲ್‍ಇಡಿ ಲೈಟ್ ತಯಾರಿಕಾ ಕ್ಲಸ್ಟರ್‍ಗಳ ವಿಷನ್ ಗ್ರೂಪ್‍ನ ಸದಸ್ಯರು ತಮ್ಮ ತಮ್ಮ ವಲಯದ ಸವಾಲುಗಳು ಹಾಗೂ ಈ ಕೈಗಾರಿಕಾ ಕ್ಲಸ್ಟರ್‍ಗಳ ಸ್ಥಾಪನೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು, ಕೌಶಲ್ಯ ಅಭಿವೃದ್ಧಿ, ಸರ್ಕಾರ ಕಲ್ಪಿಸಬೇಕಾದ ಮೂಲಸೌಕರ್ಯಗಳ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಇನ್ನಷ್ಟು ಆಳವಾದ ಅಧ್ಯಯನ ಮಾಡಿ ವರದಿ ಸಲ್ಲಿಸುವುದಾಗಿ ಈ ವಿಷನ್ ಗ್ರೂಪ್‍ಗಳ ಸದಸ್ಯರು ತಿಳಿಸಿದರು.
ಸಂವಾದದಲ್ಲಿ ಗಮನಕ್ಕೆ ತರಲಾದ ವಿಷಯಗಳ ಕುರಿತು ಸರ್ಕಾರವು ಸಕಾರಾತ್ಮಕ ಕ್ರಮ ಕೈಗೊಳ್ಳಲಿದೆ. ಈ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಿಸಲು ಅಗತ್ಯ ಸಲಹೆಗಳೊಂದಿಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿಗಳು ಈ ವಿಷನ್‍ಗ್ರೂಪ್‍ಗಳ ಸದಸ್ಯರಿಗೆ ಮನವಿ ಮಾಡಿದರು.

ಸಂವಾದದಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆಗೆ ಸಿಎಂ‌ ಚಾಲನೆ

ಬೆಂಗಳೂರು:ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ‌ ಭೂಮಾಲೀಕರಿಗೆ 2165 ನಿವೇಶನಗಳನ್ನ ನೀಡಲಾಗಿದೆ‌.869 ನಿವೇಶನಗಳನ್ನ ಅರ್ಕಾವತಿ ಲೇಔಟ್ ನಿವೇಶನದಾರರಿಗೆ ಹಂಚಿಕೆ ಮಾಡಲಾಗಿದೆ ಹಂಚಿಕೆದಾರರ ಹೆಸರುಗಳನ್ನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ಐದು ಸಾವಿರ ಸೈಟ್ ಹಂಚಿಕೆ‌ ರ್ಯಾಂಡಮೈಸೇಶನ್ ಮೂಲಕ ಸಿಎಂ ಸೈಟ್ ಹಂಚಿಕೆ ಮಾಡಿದ್ರು. ಗೃಹ ಕಚೇರಿ ಕೃಷ್ಣಾದಲ್ಲಿ 20*30, 30*40, 40*60*, 60*80 ಅಳತೆಯ ಸೈಟ್ ಗಳು ಹಂಚಿಕೆಗೆ ಚಾಲನೆ ನೀಡಿದ್ರು.ನಂತರ ಮಾತನಾಡಿದ ಕುಮಾರಸ್ವಾಮಿ, ಮೂಲಭೂತ ಸೌಕರ್ಯಗಳ ಕೆಸಲ ನಡೀತಿದೆ ನಿವೇಶನ ಪಡೆದವರು ಮನೆ ಕಟ್ಟಲು ಸಮಸ್ಯೆ ಇಲ್ಲ ರಸ್ತೆ, ಚರಂಡಿ ಕೆಲಸ ನಡೀತಿದೆ‌ ಎಲ್ಲಾ ಸೌಕರ್ಯಗಳನ್ನ ಸಂಪೂರ್ಣವಾಗಿ ಒದಗಿಸಿಕೊಡ್ತೀವಿ‌ ಮೂರು ಸಾವಿರ ಕೋಟಿ ವೆಚ್ಚದಲ್ಲಿ ಕೆಲಸ ನಡೀತಿದೆ ಎಂದ್ರು.

ಮಾನವೀಯತೆಯನ್ನ ನೋಡಬೇಕು‌ ಒತ್ತುವರಿದಾರರನ್ನ ಸಡನ್ನಾಗಿ ಆಚೆ ಹಾಕಿದ್ರೆ ತೊಂದ್ರೆಯಾಗುತ್ತೆ ಕೆಲವು ತಪ್ಪುಗಳು ಆಗಿರೋದು ನಿಜ‌ ಪ್ರತಿಯೊಬ್ಬ ನಾಗರೀಕನಿಗೆ ಉತ್ತಮ ಬದುಕು ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಸಿಎಸ್ ತಕ್ಷಣ ಸಭೆ ಮಾಡುವಂತೆ ಸೂಚನೆ ಕೊಟ್ಟಿದ್ದೇವೆ‌ 28 ರಂದು ಸಭೆ ಕರೆದಿದ್ದೇನೆ‌ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತೀವ ಶಾಶ್ವತವಾಗಿ ಪರಿಹಾರ ನೀಡೋದಕ್ಕೆ ಯೋಜನೆ ಜಾರಿ ಮಾಡ್ತೀವಿ ಸರ್ವೇ ರಿಪೋರ್ಟ್ ಬಂದ ನಂತರ ಒತ್ತುವರಿ ತೆರವು ಸದ್ಯಕ್ಕೆ ತೆರವು ಕಾರ್ಯಾಚರಣೆ ನಿಲ್ಲಿಸಿದ್ದೇವೆ ಎಂದ್ರು.

ಬಿಬಿಎಂಪಿ ಕಮಿಶನರ್ ಗೆ ಸೂಚನೆ ಕೊಟ್ಟಿದ್ದೇವೆ‌ ಮೂರ್ನಾಲ್ಕು ದಿನ ಮಳೆ ಹೆಚ್ಚಾಗುತ್ತೆ ಅಂತ ಹವಾಮಾನ ಇಲಾಖೆ ಹೇಳಿಕೆ ನೀಡಿದೆ.ಡಿಸಿಎಂ ಕೂಡ ಸಭೆ ಮಾಡಿದ್ದಾರೆ.‌ಅಧಿಕಾರಿಗಳನ್ನ ಅಲರ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ.ಬೆಳಿಗ್ಗೆ ನಾಲ್ಕು ಗಂಟೆ ತನಕ ಅಧಿಕಾರಿಗಳು ಫೀಲ್ಡ್ ನಲ್ಲಿದ್ರು.ಮನೆಗಳಿಗೆ ನುಗ್ಗಿದ ನೀರನ್ನ ಹೊರ ಹಾಕುವಂತೆ ಸೂಚನೆ ನೀಡಿದ್ದೇನೆ.ಮರಗಳು ಬಿದ್ದಿದ್ದರಿಂದ ಸಂಚಾರಕ್ಕೆ ತೊಂದ್ರೆಯಾಯ್ತು.ಸಿಎಸ್ ಬಳಿಯೂ ಕೂಡ ಚರ್ಚೆ ಮಾಡಿದ್ದೇವೆ.ಮಾಧ್ಯಮಗಳ ಸಲಹೆಗಳನ್ನೂ ಸ್ವೀಕರಿಸುತ್ತೇವೆ‌ ಹಳ್ಳ ಪ್ರದೇಶಗಳಲ್ಲಿ ಕ್ರಮ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ತೆಗೆದುಕೊಳ್ಳುವಂತೆ ಸಿಎಸ್ ಗೆ ಸೂಚನೆ ನೀಡಿದ್ದು ಅನಾನುಕೂಲವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು,ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ರೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದ್ರು.

ಕಾರು ಅಪಘಾತದಲ್ಲಿ ಕೈ ಮುರಿದುಕೊಂಡ ಚಾಲೆಂಜಿಂಗ್‌ ಸ್ಟಾರ್ ದರ್ಶನ್!

ಫೋಟೋಕೃಪೆ: ಟ್ವಿಟ್ಟರ್

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತಕ್ಕೀಡಾಗಿದ್ದು ಕುರುಕ್ಷೇತ್ರದ ದುರ್ಯೋಧನ ಪಾತ್ರಧಾರಿಯಾಗುದ್ದ ದರ್ಶನ್ ಬಲಗೈ ಮುರಿದಿದೆ.ಡೈನಮಿಕ್ ಸ್ಟಾರ್ ಫ್ಯಾಲಿಗೂ ಗಾಯಗಳಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರು ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ.ಅಪಘಾತದಲ್ಲಿ ದರ್ಶನ್ ಅವರ ಬಲಗೈ ಮುರಿದಿದೆ.ದರ್ಶನ್ ಜೊತೆ ಹಿರಿಯ ನಟ ಡೈನಮಿಕ್ ಸ್ಟಾರ್ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್‌ ಕೂಡ ಗಾಯಗೊಂಡಿದ್ದಾರೆ.

ಒಂದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ನಟರು‌ ಅಪಘಾತದಲ್ಲಿ ಗಾಯಗೊಂಡಿದ್ದಾರೆ.ಕಾರು ಚಲಾಯಿಸುತ್ತಿದ್ದ ದರ್ಶನ್ ಕೈ ಮುರಿದಿದ್ದರೆ, ದೇವರಾಜ್‌ಗೆ ಎದೆ ಭಾಗಕ್ಕೆ ಗಾಯವಾಗಿದೆ.ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್‌ಗೆ ಕುತ್ತಿಗೆ ಭಾಗಕ್ಕೆ ಗಾಯವಾಗಿದ್ದು,ಕಾರಿನಲ್ಲಿದ್ದ ಆಂಟೋನಿ ಎಂಬ ದರ್ಶನ್ ಗೆಳೆಯ ಕೂಡ ಗಂಭೀರವಾಗಿ ಗಾಯಗೊಂಡಿದ್ದು ನಾಲ್ವರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರಿನ ರಿಂಗ್ ರಸ್ತೆ ಬಳಿ ತಡರಾತ್ರಿ 3.35ರ ಸಮಯದಲ್ಲಿ ಅಪಘಾತ ನಡೆದಿದೆ.ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನಿನ್ನೆಯಷ್ಟೆ ಇಡೀ ದಿನ ಮೈಸೂರು ಪ್ರವಾಸ ಕೈಗೊಂಡಿದ್ದ ನಟರು.ಮೃಗಾಲಯದಲ್ಲಿ ಪ್ರಾಣಿ ದತ್ತು ಹಾಗೂ ಅರಮನೆಯಲ್ಲಿ ಮಾವುತರೊಂದಿಗೆ ಪಂಕ್ತಿಭೋಜನದಲ್ಲೂ ಭಾಗಿಯಾಗಿದ್ರು.ಮೈಸೂರಿನಿಂದ ವಾಪಸ್ಸಾಗುತ್ತಿದ್ದಾಗ ಘಟನೆ ಜರುಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿಗೆ ಬಂದ ದರ್ಶನ್ ಪತ್ನಿ ಮತ್ತು ಮಗ ಆಸ್ಪತ್ರೆಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದರು.ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಆಗಬೇಕಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರ ಜೊತೆ ವಿಜಯಲಕ್ಷ್ಮಿ ಮಾತುಕತೆ ನಡೆಸುತ್ತಿದ್ದಾರೆ.

ಮೈತ್ರಿ ಸರ್ಕಾರದ ಜವಾಬ್ದಾರಿ ಸಿದ್ದು ಹೆಗಲ ಮೇಲಿದೆ: ಎಚ್‌ಡಿಡಿ

ಹಾಸನ: ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಅಸ್ಥಿರಗೊಳ್ಳುವುದಿಲ್ಲ, ಸರ್ಕಾರದ ಜವಾಬ್ದಾರಿ ಸಿದ್ದರಾಮಯ್ಯ ಅವರ ಹೆಗಲ ಮೇಲಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವರು ಸಿಎಂಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.

ಹಾಸನ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ
ಮಾತನಾಡಿದ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ, ಈ ಸರ್ಕಾರ ಯಾವುದೇ ಕಾರಣಕ್ಕೂ ಅಸ್ಥಿರ ಆಗಲ್ಲ ನಾನು ಭವಿಷ್ಯ ನುಡಿಯುತ್ತಿದ್ದೇನೆ ಸಿದ್ಧರಾಮಯ್ಯ ನಾನು ಒಂದು ಕಾಲದಲ್ಲಿ ಉತ್ತಮ ಸ್ನೇಹಿತರು, ಕೆಲಕಾರಣದಿಂದ ದೂರಾಗಬೇಕಾಯಿತು. ಆದರೆ, ಇಂದು ಸಿದ್ದರಾಮಯ್ಯನವರು ನಮ್ಮ ಜೊತೆ ಕೈಜೋಡಿಸಿದ್ದಾರೆ. ಈ ಸರ್ಕಾರದ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅದಕ್ಕೆ ಸಿದ್ದರಾಮಯ್ಯ ಅವರು ಇಂದು ಸಿಎಂ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕಾಂಗ ನಾಯಕರಾಗಿ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಮಾಧ್ಯಮದವರು ದಯವಿಟ್ಟು ಇನ್ನು ಮುಂದೆ ಅಸ್ಥಿರ ಸರ್ಕಾರವೆಂದು ಜನರಿಗೆ ಹೇಳಬೇಡಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಾಮಾನ್ಯವಾಗಿ ಸಣ್ಣ ಪುಟ್ಟ ಲೋಪದೋಷಗಳು ಇರೋದು ನಿಜ ಅದನ್ನು ಸರಿಪಡಿದಿಕೊಳ್ಳುತ್ತೇವೆ ಮತ್ತು ಅದನ್ನ ಸ್ವಾಭಾವಿಕವಾಗಿ ಸರಿಪಡಿಸೋ ಶಕ್ತಿ 135 ವರ್ಷ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷಕ್ಕೂ ಇದೆ ಎಂದರು.

104 ಸ್ಥಾನ ಪಡೆದ ಬಿಎಸ್ ವೈ ಅವರಿಗೆ ಕೋಪ ಇರುವುದು ಸಹಜ. ಆದರೆ, ಅವರು ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾದ ಮೇಲೆ ಕುಮಾರಸ್ವಾಮಿ ಬಹುಮತ ಸಾಭೀತುಪಡಿಸಿ ಮುಖ್ಯಮಂತ್ರಿ ಆಗಿದ್ದಾರೆ ದಯವಿಟ್ಟು ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ನಾನು ಪ್ರಧಾನಿ ಆಗಿದ್ದಾಗ ವಿರೋಧ ಪಕ್ಷದಲ್ಲಿದ್ದ
ವಾಜಪೇಯಿ ಅವರಾಗಲಿ ಅಥವಾ ಬಿಜೆಪಿ ಪಕ್ಷವಾಗಲಿ ಒಂದು ದಿನವೂ ಸದನದ ಘನತೆಗೆ ಅಡ್ಡಿ ಪಡ್ಡಿಸಿಲ್ಲ ಅಂತಹ ನಾಯಕರ ಪಕ್ಷದಲ್ಲಿ ಬೆಳೆದ ರಾಜ್ಯದ ಹಿರಿಯ ನಾಯಕರಾದ ಯಡಿಯೂರಪ್ಪ ನವರು ಯೋಚಿಸಿ ನಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ರಾಜ್ಯದ ಇತಿಹಾಸದಲ್ಲಿ ರೈತರ ದೊಡ್ಡ ಮಟ್ಟದ ಸಾಲ ಮನ್ನವಾಗಿದೆ. ಬಡವರಿಗೆ ತೊಂದರೆ ಆಗಬಾರದು ಎಂದು ಖಾಸಗಿ ಸಾಲವನ್ನು ಸಹ ಮನ್ನಾ ಮಾಡಲಾಗಿದೆ. ಪೆಟ್ರೋಲ್,ಡೀಸೆಲ್ ಬೆಲೆಯನ್ನು ಸಹ ಕಡಿಮೆ ಮಾಡಿದ್ದಾರೆ. ಈ ದಿನ ಹೇಳುತ್ತಿದ್ದೀನಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಜಿಲ್ಲೆಯಲ್ಲಿ ನಾನು ಅಭಿಪ್ರಾಯ ಪಟ್ಟ ಎಲ್ಲಾ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಆ ಕೆಲಸಗಳನ್ನ ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಡೋ ಭಾಗ್ಯ ದೊರಕಿದೆ ಎಂದರು.

ಸಿಎಂ ವಿರುದ್ಧ ರಾಜ್ಯಪಾಲರಿಗೆ‌ ದೂರು ನೀಡಿದ ಬಿಜೆಪಿ

ಬೆಂಗಳೂರು:ದಂಗೆ ಏಳುವಂತೆ ಕರೆ ನೀಡುವ ಹೇಳಿಕೆ ಖಂಡಿಸಿ ಸಿಎಂ ವಿರುದ್ಧ ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಸಿದ ಬಿಜೆಪಿ ಅಂತಿಮವಾಗಿ ರಾಜ್ಯಪಾಲರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ,ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್,ಸಂಸದೆ ಶೋಭಾಕರಂದ್ಲಾಜೆ ನೇತೃತ್ವದ ನಿಯೋಗದಿಂದ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಲಾಯ್ತು.ರಾಜ್ಯದಲ್ಲಿ ದಂಗೆ ಎಬ್ಬಿಸಲು ಪ್ರಚೋದನೆ ನೀಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ವಜಾ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಕೆ ಮಾಡಿತು.ನಿನ್ನೆ ಹಾಸನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಹಾಗೂ ಬೆಂಗಳೂರಿನಲ್ಲಿ ಯಡಿಯೂರಪ್ಪ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ದೃಷ್ಯಗಳನ್ನು ಒಳಗೊಂಡ ಸಿಡಿಗಳನ್ನು ಪೂರಕ ಸಾಕ್ಷಿಯಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿ ನಿಯೋಗದ ಮನವಿ ಆಲಿಸಿದ ರಾಜ್ಯಪಾಲರು ನಾನು ನಿನ್ನೆಯಿಂದಲೂ ಎಲ್ಲವನ್ನೂ ಗಮನಿಸುತ್ತಿದ್ದೇನೆ.ಇವತ್ತು ಪತ್ರಿಕೆಗಳಲ್ಲಿ ಬಂದಿರುವ ವಿಚಾರವನ್ನೂ ಗಮನಿಸುತ್ತಿದ್ದೇನೆ. ಎಲ್ಲವೂ ನನ್ನ ಗಮನದಲ್ಲಿದೆ.ಈ ಬಗ್ಗೆ ನಾನು ಕಾನೂನು ಅಭಿಪ್ರಾಯ ಪಡೆಯುತ್ತೇನೆ ಎಂದು ರಾಜಭವನದಲ್ಲಿ ರಾಜ್ಯ ಬಿಜೆಪಿ ನಿಯೋಗಕ್ಕೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯಪಾಲರ ಭೇಟಿ ನಂತರ ಮಾತನಾಡಿದ ಡಿ.ವಿ.ಸದಾನಂದಗೌಡ,ದಂಗೆಯನ್ನು ಹತೋಟಿಗೆ ತರಬೇಕಾದ ಮುಖ್ಯಮಂತ್ರಿಯೇ ತಾನೇ ದಂಗೆ ಏಳುವಂತೆ ಜನರನ್ನು ಪ್ರಚೋದಿಸಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು. ಸಂವಿಧಾನದ ಎಲ್ಲ ವಿಧಿಗಳ ಉಲ್ಲಂಘನೆ. ಹಾಗಾಗಿಯೇ ನಾವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೆವು. ರಾಜ್ಯಪಾಲರು ತಕ್ಷಣ ಅವರ ಮೇಲೆ ಸಂವಿಧಾನಬದ್ದವಾದ ಕಾರ್ಯಾಚರಣೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದ್ರು.

ನಂತರ ಮಾತನಾಡಿದ ಆರ್.ಅಶೋಕ್, ಮೈತ್ರಿ ಸರ್ಕಾರ ಗಟ್ಟಿ ಇರೋದಾದ್ರೆ ಕಾಂಗ್ರೆಸ್ ಜೆಡಿಎಸ್ ನಾಯಕರು ಪದೇ ಪದೇ ಸಭೆ ಮಾಡೋದೇಕೆ.ನಿಮ್ಮ ಶಾಸಕರು ಓಡಿ ಹೋದ್ರೆ ಅದು ನಿಮ್ಮ ಜವಾಬ್ದಾರಿಯೇ ಹೊರತು ಬಿಜೆಪಿ ಹೊಣೆಯಲ್ಲ.ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡೋದಿಲ್ಲ ಎಂದ್ರು.