ಬಿಜೆಪಿ ವಿರುದ್ಧ ರಾಹುಲ್ ನೇತೃತ್ವದಲ್ಲಿ ಹೋರಾಟ: ಈಶ್ವರ್ ಖಂಡ್ರೆ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಅಧಿಕಾರ ಬಿಟ್ಟು ತೊಲಗಿ ಎಂಬ ಹೋರಾಟ ಮಾಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ಅಂಗವಾಗಿ ಫ್ಲ್ಯಾಗ್ ಆಫ್ ಮಾಡಿದ ಬಳಿಕ ಮಾತನಾಡಿದ ಈಶ್ವರ್ ಖಂಡ್ರೆ, ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ನೀಡಿಲ್ಲ, ಉದ್ಯೋಗ ಸೃಷ್ಟಿ ಮಾಡಿಲ್ಲ , ರೈತರ ಸಂಕಷ್ಟಗಳಿಗೆ ಮೋದಿ ನೆರವಾಗಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಎಲ್ಲ ಅಂಶಗಳನ್ನು ಆಧಾರವಾಗಿಸಿಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ. ಬೀದರ್‌ನಿಂದ ನಮ್ಮ ಹೋರಾಟ ಆರಂಭ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಶಾಸಕರು ಕಾಂಗ್ರೆಸ್ ನತ್ತ ಒಲವು ಎಂಬ ವಿಚಾರವು ಸತ್ಯ. ಆದ್ರೆ ಯಾರೆಲ್ಲ ಪಕ್ಷ ಸೇರ್ತಾರೆ ಎಂಬ ಮಾಹಿತಿ ಕೊಡಲು ಸಾಧ್ಯ ಇಲ್ಲ ಎಂದರು.

“ದಂತ ಕಥೆಯ ಅಂತ್ಯ” ಕರುಣಾನಿಧಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಕಣ್ಣೀರು

ಚೆನ್ನೈ: ‘ಬದುಕಿರುವಾಗಲೇ ದಂತಕಥೆಯಂತಿದ್ದ’ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
“ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ ಅವರು ಪ್ರಾದೇಶಿಕ ಪಕ್ಷವನ್ನು ಸಧೃಢಗೊಳಿಸುವಲ್ಲಿ ಪ್ರದರ್ಶಿಸಿದ ಮುತ್ಸದ್ದಿತನ ವೈಶಿಷ್ಟ್ಯಪೂರ್ಣ. ಹಲವು ಬಾರಿ ಶ್ರೀ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದೆ. ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಪ್ರತಿ ಬಾರಿಯೂ ನನಗೆ ಮನವರಿಕೆ ಮಾಡಿಕೊಡುತ್ತಿದ್ದರು. ಹಿಂದುಳಿದ ವರ್ಗ ಹಾಗೂ ತುಳಿತಕ್ಕೊಳಗಾದವರ ಬಗ್ಗೆ ಅವರು ತೆಗೆದುಕೊಂಡ ಜನಪ್ರಿಯ ಯೋಜನೆಗಳನ್ನು ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಅನುಕರಿಸುತ್ತಿವೆ. ಶ್ರೀ ಹೆಚ್.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಮ್ಮಿಶ್ರ ಸರ್ಕಾರದ ರಚನೆಗೆ ಶ್ರೀ ಕರುಣಾನಿಧಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಚಿತ್ರರಂಗದ ಮೂಲಕ ರಾಜಕೀಯಕ್ಕೆ ಬಂದು ತಮಿಳುನಾಡಿನ ಶೋಷಿತ ವರ್ಗಕ್ಕೆ ಗಟ್ಟಿದನಿ ನೀಡಿದ ಕರುಣಾನಿಧಿ, ರಾಜಕೀಯ ಸಿದ್ಧಾಂತ ನಮಗೆಲ್ಲರಿಗೂ ಮಾದರಿ. ಅವರ ನಿಧನದಿಂದ ಭಾರತದ ರಾಜಕೀಯ ರಂಗದಲ್ಲಿ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವೊಂದು ಕಣ್ಮರೆಯಾಗಿದೆ. ಅವರ ನಿಧನದಿಂದ ತಮಿಳುನಾಡು ಒಬ್ಬ ದಾರ್ಶನಿಕ ನಾಯಕನನ್ನು ಕಳೆದುಕೊಂಡಿದೆ” ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮರೀನಾ ಬೀಚ್ ನಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅಂತ್ಯಕ್ರಿಯೆಯನ್ನು ಮರೀನಾ ಬೀಚ್‍ನಲ್ಲಿ ನಡೆಸಲು ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆ ನಡೆಸಬಾರದು ಎಂದು ಸಲ್ಲಿಕೆಯಾಗಿದ್ದ ಐದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ವಾದ ಪ್ರತಿ ವಾದ ಆಲಿಸಿ ಮರೀನಾ ಬೀಚ್ ನಲ್ಲಿಯೇ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಿ ತೀರ್ಪು ನೀಡಿತು.

ವಿಚಾರಣೆ ವೇಳೆ ಹಾಲಿ ಸಿಎಂ ಮತ್ತು ಮಾಜಿ ಸಿಎಂ ಇಬ್ಬರು ಒಂದೇ ಅಲ್ಲ. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳು ಸಾವನ್ನಪ್ಪಿದಾಗ ಮರೀನಾ ಬೀಚ್‍ನಲ್ಲಿಯೇ ಸ್ಥಳ ನೀಡಲಾಗಿತ್ತು. ಹಾಗಾಗಿ ಕರುಣಾನಿಧಿ ಅವರಿಗೆ ಮರೀನಾ ಬೀಚ್‍ನಲ್ಲಿಯೇ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲ. ಬೇಕಾದರೆ ಗಾಂಧಿ ಮಂಟಪದ ಬಳಿ 2 ಎಕರೆ ಸ್ಥಳ ನೀಡಲು ಸಿದ್ಧವಾಗಿದೆ ಎಂದು ಆಡಳಿತಾರೂಢ ಸರ್ಕಾರ ಪರ ವಕೀಲರು ವಾದ ಮಂಡಿಸಿದ್ದರು.

ಸಾವಿನಲ್ಲೂ ದ್ವೇಷದ ರಾಜಕಾರಣ ಬೇಡ. ಕೋಟಿ ಕೋಟಿ ತಮಿಳುಗರ ಭಾವನೆಗಳಿಗೆ ಧಕ್ಕೆ ತರೋದು ಬೇಡ. ಕರುಣಾನಿಧಿ ಅವರ ಅಂತ್ಯಕ್ರಿಯೆಯ ಮರೀನಾ ಬೀಚ್ ನಲ್ಲಿ ನಡೆಸುವ ಸರ್ಕಾರ ಗೌರವ ಸಲ್ಲಿಸಬೇಕು. ಗಾಂಧಿ ಮಂಟಪದ ಬಳಿ ಅಂತ್ಯಕ್ರಿಯೆ ನಮ್ಮ ಆಯ್ಕೆ ಅಲ್ಲ. ಕರುಣಾನಿಧಿ ಸಾವಿನ ಬಳಿಕ ಒಂದು ವಾರ ಶೋಕಾಚರಣೆ ಮಾಡುತ್ತಿದ್ದೀರಿ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದೀರಿ. ಹಾಗಾದ್ರೆ ಸ್ಥಳ ಕೊಡುತ್ತಿಲ್ಲ ಯಾಕೆ ಎಂದು ಡಿಎಂಕೆ ಪರ ವಕೀಲರು ಪ್ರತಿವಾದ ಮಂಡಿಸಿದ್ದರು.

ಈ ವೇಳೆ ಮರೀನಾ ಬೀಚ್ ಗೆ ಸಂಬಂಧಿಸಿದ ಎಲ್ಲ ಪಿಐಎಲ್ ಅರ್ಜಿಗಳನ್ನು ಅರ್ಜಿದಾರರು ವಾಪಾಸ್ ಪಡೆದರು. ಹೀಗಾಗಿ ಕರುಣಾನಿಧಿ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ವಿವಾದಕ್ಕೆ ತೊಡಕಾಗಿದ್ದ ಎಲ್ಲ 5 ಅರ್ಜಿಗಳು ವಜಾಗೊಳಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ ರಮೇಶ್ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್ ನಲ್ಲಿ ಅವಕಾಶ ಕಲ್ಪಿಸಿ ಆದೇಶ ಹೊರಿಡಿಸತು.

ಆದೇಶದಿಂದಾಗಿ ಮರೀನಾ ಬೀಚ್‍ನಲ್ಲಿ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದ್ದು ಅವರ ಪಕ್ಕದಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರ ನಡೆಯಲಿದೆ.

ತಮಿಳುನಾಡಿನಲ್ಲಿ ಕರುಣಾಸ್ತಂಗತ: ಎಐಡಿಎಂಕೆ ನಂತರ ಡಿಎಂಕೆ ಅನಾಥ

ಚೆನ್ನೈ: ಡ್ರಾವಿಡ ಮುನ್ನೇಟ್ರಿ ಕಳಗಂ ಪಕ್ಷದ ಅಧಿನಾಯಕ ಕರುಣಾನಿಧಿ ನಿಧನರಾಗಿದ್ದಾರೆ.ಕಳೆದ 15 ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಮಾಜಿ ಸಿಎಂ ಸಂಜೆ 6.10 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು.

ಕರುಣಾನಿಧಿ ನಡೆದುಬಂದ ದಾರಿ:

  • ಜೂನ್ 3. 1924 ರಲ್ಲಿ ತಮಿಳುನಾಡಿನ ತಿರುಕ್ಕುವಲೈ ನಲ್ಲಿ ಜನನ
  • ತಿರು ಮುತುವೇಳರ್, ತಿರುಮತಿ ಅಂಜುಗಂ ದಂಪತಿ ಪುತ್ರ
  • ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದ ಕರುಣಾನಿಧಿ
    ಕರುಣಾನಿಧಿಯ ಮೂಲ ಹೆಸರು ದಕ್ಷಿಣಾಮೂರ್ತಿ
  • ಪದ್ಮಾವತಿ , ದಯಾಳು , ರಾಜಥಿ ಯವರನ್ನ ವರಿಸಿದ್ದ ಎಂ ಕರುಣಾನಿಧಿ
  • ಎಂ. ಕೆ. ಮುತ್ತು, ಎಂ. ಕೆ. ಅಳಗಿರಿ, ಎಂ. ಕೆ. ಸ್ಟಾಲಿನ್,
    ಎಂ.ಕೆ ತಮಿಳರಸು, ಎಂ.ಕೆ ಸೆಲ್ವಿ, ಎಂ. ಕೆ ಕನಿಮೋಳಿ ಕರುಣಾನಿಧಿ ಮಕ್ಕಳು
  • 1957ರಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದ ಕರುಣಾನಿಧಿ
  • ಅಳಗಿರಿ ಸ್ವಾಮಿ ಭಾಷಣದಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ
  • 14ನೇ ವಯಸ್ಸಿಗೆ ರಾಜಕೀಯಕ್ಕೆ ಧುಮುಕಿದ್ದ ಎಂ.ಕರುಣಾನಿಧಿ
  • ತಮಿಳುನಾಡಿನ ಕುಳಿತಲೈ ವಿಧಾನಸಭಾ ಕ್ಷೇತ್ರದಿಂದ ಮೊದಲು ಸ್ಪರ್ಧೆ
  • ದಾಲ್ಮಿಯಾಪುರಂ ರೈಲ್ವೆ ನಿಲ್ದಾಣ ಹೆಸರು ಬದಲಾವಣೆ ಚಳುವಳಿಯಲ್ಲಿ ಜೈಲುವಾಸ
  • 1961ರಲ್ಲಿ ಡಿಎಂಕೆ ಪಕ್ಷದ ಕೋಶಾಧಿಕಾರಿಯಾಗಿ ಅಧಿಕಾರ
  • 1962 ರಲ್ಲಿ ರಾಜ್ಯ ವಿಧಾನಸಭೆಯ ವಿರೋಧಪಕ್ಷದ ಉಪನಾಯಕನಾಗಿ ಆಯ್ಕೆ
  • 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಲೋಕೋಪಯೋಗಿ ಇಲಾಖೆ ಮಂತ್ರಿ
    ಸ್ಪರ್ಧಿಸಿದ ಪ್ರತೀ ಚುನಾವಣಾ ಸೋಲನ್ನೇ ಕಾಣದ ನಾಯಕ
  • ಸಂಸ್ಥಾಪಕ ಸಿ. ಎನ್. ಅಣ್ಣಾದೊರೆ ನಿಧನ ನಂತರ ಡಿಎಂಕೆ ನಾಯಕತ್ವ
  • 1969ರಲ್ಲಿ ಮೊದಲ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆ
  • ತಮಿಳುನಾಡಿನ ಮುಖ್ಯಮಂತ್ರಿಯಾಗಿ 5 ಬಾರಿ ಅಧಿಕಾರ ಸ್ವೀಕಾರ
  • 1969-71, 1971-76, 1989-91,1996-2001, 2006-2011ರಲ್ಲಿ ಮುಖ್ಯಮಂತ್ರಿ
  • 2006ರಲ್ಲಿ ಜೆ.ಜಯಲಲಿತಾ ವಿರುದ್ದ ರೋಚಕ ಜಯ
  • ತಮಿಳುನಾಡು ವಿಧಾನಸಭೆಗೆ ದಾಖಲೆಯಾಗಿ 11 ಬಾರಿ ಆಯ್ಕೆ

ತಮಿಳು “ನಿಧಿ” ಇನ್ನಿಲ್ಲ!

ಚೆನ್ನೈ : ಡಿಎಂಕೆ ಮುಖ್ಯಸ್ಥ  ಎಂ ಕರುಣಾನಿಧಿ ಅವರು ತೀವ್ರ ಅನಾರೋಗ್ಯದಿಂದ ಚೈನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಸಾವನ್ನಿಪ್ಪಿದ್ದು, ಆಸ್ಪತ್ರೆ ಮುಂಭಾಗ ಮತ್ತು ಕರುಣಾನಿಧಿ ಅವರ ನಿವಾಸದ ಎದುರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಮಿಳು ನಾಡು ಪೊಲೀಸ್‌ ಡಿಜಿಪಿ ರಾಜ್ಯಾದ್ಯಂತ 1 ಲಕ್ಷಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಜ್ಯದ ಎಲ್ಲ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟೆಚ್ಚರದಲ್ಲಿ ಮತ್ತು ಸಮವಸ್ತ್ರದಲ್ಲಿ  ಇರುವಂತೆ ಫ್ಯಾಕ್ಸ್‌ ಸಂದೇಶ ರವಾನಿಸಿದ್ದಾರೆ.

ಡಿಎಂಕೆ ಕಾರ್ಯಾಧ್ಯಕ್ಷ  ಮತ್ತು ಕರುಣಾನಿಧಿಯವರ ಪುತ್ರ ಎಂ ಕೆ ಸ್ಟಾಲಿನ್‌ ಮತ್ತು ಅವರ ಕುಟುಂಬ ಸದಸ್ಯರು ತಮಿಳು ನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಆಸ್ಪತ್ರೆಯ ಇತ್ತೀಚಿನ ವರದಿ ಪ್ರಕಾರ ಕರುಣಾನಿಧಿ ಅವರ ದೇಹಾರೋಗ್ಯ ಅತ್ಯಂತ ಕ್ಷೀಣಿಸಿದೆ.

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ರಾಜ್ಯದಿಂದ ತಮಿಳುನಾಡಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಅಹಿತಕರ ಘಟನೆ ನಡೆಯುವ ಹಿನ್ನೆಲೆ ಬಸ್ ಸಂಚಾರ ಸ್ಥಗಿತಕ್ಕೆ ನಿರ್ಧರಿಸಲಾಗಿದ್ದು, 300 ರಿಂದ 400 ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಮೂಲಗಳ ತಿಳಿಸಿವೆ.

ಆಪರೇಷನ್ ಕಮಲ ಯತ್ನ ಫಲಿಸಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು: ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಶಾಸಕರನ್ನ ಸಂರ್ಪಕ ಮಾಡಿ ಆಮಿಷ ಒಡ್ಡಿ ಅನೈತಿಕತೆಯಿಂದ ಸರ್ಕಾರ ರಚನೆ ಮಾಡಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಆಪರೇಷನ್ ಕಮಲ ಯತ್ನದ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಹೇಗಾದರೂ ಮಾಡಿ ಸರ್ಕಾರವನ್ನ ಬೀಳಿಸಬೇಕು ಎಂದು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಶಾಸಕರನ್ನ ಬಿಜೆಪಿ ನಾಯಕರು ನಿರಂತರವಾಗಿ ಸಂಪರ್ಕ ಮಾಡುತ್ತಿದ್ದಾರೆ ಎಲ್ಲ ಶಾಸಕರನ್ನ ಸಂರ್ಪಕ ಮಾಡಿ ಆಮಿಷ ನೀಡುತ್ತಿದ್ದಾರೆ ಅನೈತಿಕತೆಯಿಂದ ಸರ್ಕಾರ ರಚನೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ರು.

ದೇವರು, ಸ್ವಾಮೀಜಿಗಳ ಕಾಲಿಗೆ ಬಿಜೆಪಿ ನಾಯಕರು ಬೀಳುತ್ತಿದ್ದಾರೆ ಹೀಗಿದ್ದರೂ ಅನೈತಿಕತೆಯ ಮಾರ್ಗದಿಂದ ಸರ್ಕಾರ ರಚನೆ ಮಾಡಲು ಪ್ರಯತ್ನ ಏಕೆ? ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ ಮೂರು ದಿನ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.ಬಿಜೆಪಿಗೆ ಬಹುಮತ ಇಲ್ಲ ಅನ್ಯ ಮಾರ್ಗದಲ್ಲಿ ಸರ್ಕಾರ ರಚನೆ ಮಾಡೋದು ಸರಿ ಅಲ್ಲ ಎಂದ್ರು.

ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನ ಸಂಪರ್ಕ ಮಾಡುತ್ತಿದ್ದಾರೆ. ಯಡಿಯೂರಪ್ಪ ಜೊತೆ ಕಾಂಗ್ರೆಸ್ ಶಾಸಕರು ದೆಹಲಿಗೆ ಹೋದ್ರು ಅನ್ನೋದು ಸುಳ್ಳು. ಅವರೆಲ್ಲ ನಮ್ಮ ಕಾಂಗ್ರೆಸ್ ಕಟ್ಟಾಳುಗಳು.ನಿಮಗೆ ಯಾರು ಆ ರೀತಿಯ ಸುದ್ದಿ ಹೇಳ್ತರೋ ಗೊತ್ತಿಲ್ಲ.ಯಡಿಯೂರಪ್ಪ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. ಇನ್ನಾದ್ರೂ ಸುಮ್ಮನೆ ಸರ್ಕಾರ ಬೀಳಿಸುವ ಕೆಲಸ ಮಾಡದಿರುವುದು ಒಳಿತು.ನಮ್ಮ ಶಾಸಕರು ಯಾರು ಸಹ ಪಕ್ಷ ಬಿಡಲ್ಲ ಎಂದ್ರು.

ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರಕ್ಕೆ ಸ್ಥಳೀಯ ಮಟ್ಟದಲ್ಲಿ ವಿರೋಧ ಇದೆ.ಅದ್ರೆ ಬಿಜೆಪಿ ಯನ್ನ ದೂರ ಹಿಡಲು ಮೈತ್ರಿ ಮಾಡಿಕೊಳ್ಳಬೇಕಾಗಿದೆ. ಸ್ಥಳೀಯ ಮಟ್ಟದ ನಾಯಕರಿಗೆ ಮನವರಿಕೆ ಮಾಡಿಕೊಳ್ಳುವ ಕೆಲಸ ಮಾಡಬೇಕಿದೆ ಎಂದ್ರು.

ಬ್ಯಾಕಿಂಗ್ ಪರೀಕ್ಷೆ ಗಳನ್ನ ಸ್ಥಳೀಯ ಭಾಷೆಗೆ ಆದ್ಯತೆ ಕೊಡಬೇಕು. ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯಬೇಕಾಗಿರುವುದರಿಂದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಬರೀ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬರೋರಿಗೆ ಅನುಕೂಲವಾಗುತ್ತಿದೆ. ಪರೀಕ್ಷೆ ಸ್ಥಳೀಯ ಭಾಷೆಯಲ್ಲಿ ಬರೆಯಲು ಅನುಕೂಲ ಮಾಡಿಕೊಡಿ. ಹಳೆಯ ನಿಯಮದ ರೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದ್ರು.

ರೆಫಲ್ ಡೀಲ್ ನಲ್ಲಿ ಎಚ್ ಎ ಎಲ್ ಕಂಪನಿಗೆ ಅನ್ಯಾಯವಾಗಿದೆ. ರಾಜ್ಯಕ್ಕೆ ಬರಬೇಕಿದ್ದ ಸಿಆರ್ ಪಿಎಫ್ ಕೇಂದ್ರ ಉತ್ತರ ಪ್ರದೇಶಕ್ಕೆ ಶಿಫ್ಟ್ ಆಯ್ತು. ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ರು.