ಅಖಂಡ ಕರ್ನಾಟಕ ಬಿಜೆಪಿಯ ಸ್ಪಷ್ಟ ನಿಲುವು: ಬಿಎಸ್ವೈ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರಕರ್ನಾಟಕ-ದಕ್ಷಿಣ ಕರ್ನಾಟಕ ಎಂದು ಒಡೆದಾಳುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದು ಸ್ಪಷ್ಟವಾಗಬೇಕಾಗಿದೆ. ಉತ್ತರ ಕರ್ನಾಟಕದ ಜನರು ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಮಾತನಾಡ ಬಾರದು. ಬಿಜೆಪಿ ಇಂದಿಗೂ ಪ್ರತ್ಯೇಕ ರಾಜ್ಯಕ್ಕೆ ಬೆಂಬಲಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಯಲಹಂಕದಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಅನೇಕ ಸಾಹಿತಿಗಳು, ಕನ್ನಡದ ಕಟ್ಟಾಳುಗಳ ಹೋರಾಟದ ಫಲವಾಗಿ ಕರ್ನಾಟಕದ ಏಕೀಕರಣವಾಗಿದೆ. ಕರ್ನಾಟಕದ ಅಖಂಡತೆಗೆ ಅಪಾಯವಾಗುತ್ತಿದೆ. ಕುಮಾರಸ್ವಾಮಿ ತಾವು ಅಖಂಡ ಕರ್ನಾಟಕದ ಸಿಎಂ ಆಗದೆ 37 ಜೆಡಿಎಸ್ ಕ್ಷೇತ್ರಗಳ ಸಿಎಂ ಎಂದು ಭಾವಿಸಿರೋದು ದುರ್ದೈವ. ಕರ್ನಾಟಕದ ಜನ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದರು.

ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದರ ಪರಿಣಾಮವನ್ಮು ಮೈತ್ರಿ ಸರ್ಕಾರ ಹೊರಬೇಕಾಗುತ್ತದೆ.
ಉತ್ತರ ಕರ್ನಾಟಕದ ‌ಜನರ ಆಕ್ರೋಶ ಭುಗಿಲೇಳಲು ನಿಮ್ಮ ಒಡೆದಾಳುವ ನೀತಿ, ನಿಮ್ಮ ಕುಟುಂಬ ರಾಜಕಾರಣ ಅಧಿಕಾರ ದಾಹ ಕಾರಣ. ನಿಮ್ಮ ಕೈ ಹಿಡಿದ ಪಕ್ಷಗಳನ್ನು, ಜನತಾ ಪರಿವಾರವನ್ನು ಒಡೆದ್ರಿ, ಈಗ ಕರ್ನಾಟಕವನ್ನು ಒಡೆಯಲು ಹೊರಟಿದ್ದೀರಿ ಆಕ್ರೋಶ ವ್ಯಕ್ತ ಪಡಿಸಿದರು.

ದಯವಿಟ್ಟು ಯಾವ ಕಾರಣಕ್ಕೂ ಉತ್ತರ ಕರ್ನಾಟಕದ ಜನರ ಬಾಯಿಂದ ಪ್ರತ್ಯೇಕತೆಯ ಕೂಗು ಬರಬಾರದು. ವಿಪಕ್ಷವಾಗಿ ಬಿಜೆಪಿ ನಿಮ್ಮ ಜೊತೆಗಿದೆ. ಶಾಂತಿ, ಸುವ್ಯವಸ್ಥೆಗೆ ಯಾವುದೇ ಧಕ್ಕೆ ಆಗದಂತೆ ಸಹಕರಿಸಬೇಕು ಎಂದರು.

ಪ್ರತ್ಯೇಕ ರಾಜ್ಯದ ಬಗ್ಗೆ ಬಿಜೆಪಿ ನಾಯಕರು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಶ್ರೀರಾಮುಲು ಅವರ ಜೊತೆ ನಾನು ಮಾತಾಡಿದ್ದೇನೆ. ಅಖಂಡ ಕರ್ನಾಟಕ ಬಿಜೆಪಿಯ ಸ್ಪಷ್ಟ ನಿಲುವು ಎಂದು ಹೇಳಿದರು.

ಗದಗಕ್ಕೆ ಮೋದಿ‌ ಸಹೋದರ ಭೇಟಿ

ಗದಗ: ನಗರಕ್ಕೆ ಪ್ರಧಾನಿ‌ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಭೇಟಿ ನೀಡಿದ್ರು.ಅಖಿಲ ಭಾರತ ಪಡಿತ ವಿತರಕರ ಸಂಘ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಪ್ರಹ್ಲಾದ್ ಮೋದಿ ಬಳ್ಳಾರಿ‌ನಲ್ಲಿ ಪಡಿತರ ವಿತಕರ ಸಂಘದ ರಾಜ್ಯ ಕಾರ್ಯದರ್ಶಿ ನಿಧನ ಹಿನ್ನಲೆ‌ ಸಾಂತ್ವಾನ ಹೇಳಲು ಆಗಮನಿಸಿದ್ದು ಗದಗ ಜಿಲ್ಲೆಯಲ್ಲೂ ಕಾರ್ಯಕರ್ತನ್ನು ಭೇಟಿಮಾಡಿದ್ರು.

ನಗರದ ಡಾ, ಶೇಖರ್ ಸಜ್ಜನರ್ ಮನೆಗೆ ಭೇಟಿ ನೀಡಿ ಅವರ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಉಪಹಾರ ಸೇವನೆ ಮಾಡಿದ್ರು.ನಾಳೆ ಹುಬ್ಬಳ್ಳಿನಲ್ಲಿ ನಡೆಯುವ ಅಖಿಲ ಭಾರತ ಗಾಣಿಗ ಸಮಾಜ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಹೇರಾಮ್ ಎನ್ನೋಣ ಬನ್ನಿ……

ಇವತ್ತು ಸಾಮಾನ್ಯವಾಗಿ ನಮಗೆಲ್ಲ ರಾಮ ಅಂದ ತಕ್ಷಣ ನೆನಪಾಗೋದು ಸೀತೆಯ ಪತಿ ರಾಮ. ಆ ರಾಮನನ್ನ ನಾವು ಕೇವಲ ದೈವ ಸ್ವರೂಪಿಯಾಗಿಯೇ ನೋಡುತ್ತ ಬಂದಿದ್ದೇವೆ. ಆದರೆ ರಾಮ ಎನ್ನುವುದರ ನಿಜವಾದ ಅರ್ಥ ಏನಿರಬಹುದು ಎನ್ನುವುದರ ಹುಡುಕಾಟಕ್ಕೆ ಬಹುಶಃ ನಾವು ಯಾರು ತಲೆಹಾಕಿರುವುದಿಲ್ಲ. ಇಲ್ಲಿ ರಾಮ ಎಂದರೆ ಅವನೊಬ್ಬ ಸಾಮಾನ್ಯ ಮನುಷ್ಯ ಎನ್ನುವುದು ನಮ್ಮ ಜನಪದ ಸಾಹಿತ್ಯದಿಂದ ತಿಳಿದುಬರುತ್ತದೆ. ಜೊತೆಗೆ ರಾಮ ಎನ್ನುವುದು ಒಂದು ಜಪಿತವಾದ ಪದ.

ಈ ವುಚಾರವಾಗಿ ನಿನ್ನೆ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಗ್ರಾಮ‌ ಸೇವಾ ಸಂಘ ಆಯೋಜಿಸಿದ್ದ ಹೇ ರಾಮ್ ಎನ್ನೋಣ ಬನ್ನಿ ಎಂಬ ಬಹು ಭಾಷ ಸಾಂಸ್ಕೃತಿಕ ಸಂಜೆ ಈ ಕಾರ್ಯಕ್ರಮ ಸಾಹಿತ್ಯದ ವಿವಿಧ ಮಜಲುಗಳನ್ನ ವೇದಿಕೆ ಮೇಲೆ ಅನಾವರಣಗೊಳಿಸಿತ್ತು. ಇಲ್ಲಿ ಹೆಸರಾಂತ ಗಾಯಕರಾದ ವಾಸು ದೀಕ್ಷಿತ್ ಹಾಗೂ ಬಿಂದು ಮಾಲಿನಿ ಇವರು ರಘುಪತಿ ರಾಘವ ರಾಜರಾಮ್ ಹಾಡು ಹಾಡುವ ಮೂಲಕ ಈ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿ ಮತ್ತೊಬ್ಬ ಜನಪದ ಗಾಯಕ ಜನ್ನಿ ಅವರ ಜನಪದ ಹಾಡಿನೊಂದಿಗೆ ಈ ಕಾರ್ಯಕ್ರಮ ಅಂತ್ಯವಾಯಿತು.

ಇಲ್ಲಿ ಕನ್ನಡ ಸಾಹಿತ್ಯದ ಬಹುಮಖಗಳಾದ ಕವನ, ಕವಿತೆ, ಸಿನಿಮಾ, ಹಾಡು, ಜೊತೆಗೆ ಒಂದಷ್ಟು ಸಾಹಿತ್ಯದಾಯಕ ಮಾತುಗಾರಿಕೆಗಳು ಕೇಳುಗರನ್ನ ಹಿಡಿದಿಟ್ಟುಕೊಳ್ಳುವಂತೆ ಮಾಡಿದ್ದವು.

ಮುಖ್ಯವಾಗಿ ಹೇ ರಾಮ್ ಎನ್ನೋಣ ಬನ್ನಿ ಎನ್ನುವುದು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಷ್ಟೇ ಅಲ್ಲ ಅದೊಂದು ರೀತಿಯ ಚಳುವಳಿ ಎನ್ನುವುದು ಮತ್ತೊಂದು ವಿಶೇಷ. ಹಾಗಾಗಿ ಇಲ್ಲಿ ಪ್ರೊ.ರಹಮತ್ ತರಿಕೆರೆ, ಮೈಸೂರು ರಾಜೇಂದ್ರ ಚನ್ನಿ, ವನಮಲ ವಿಶ್ವನಾಥ್, ವಿಜಯಮ್ಮ, ಶಿವಸ್ವಾಮಿ, ಶಿಲ್ಪ ಇವರೇ ಮೊದಲಾದವರು ಕನ್ನಡ ಸಾಹಿತ್ಯದ ಬಹುಮುಖಗಳಿಗೆ ವೇದಿಕೆ ಮೇಲೆ ಜೀವತುಂಬಿದರು.

ಈ ಕಾರ್ಯಕ್ರಮದಲ್ಲಿ ನೂರಾರು ಜನ ಸಾಹಿತ್ಯಾಸಕ್ತರು, ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಈ ಕಾರ್ಯಕ್ರಮದ ಮುಖ್ಯ ರುವಾರಿಗಳು ಹಾಗೂ ಆಯೋಜಕರಾಗಿ ಕೈ ಉತ್ಪನ್ನಗಳ ಹೋರಾಟಗಾರ ಪ್ರಸನ್ನ ಹೆಗ್ಗೂಡು ಇವರು ಕಾರ್ಯಕ್ರಮವನ್ನ ನಡೆಸಿಕೊಟ್ಟರು.

ಬಿಜೆಪಿ ಮುಕ್ತ ಭಾರತ ನಿರ್ಮಾಣವೇ ನಮ್ಮ ಗುರಿ: ಪಿ.ಚಿದಂಬರಂ

ಬೆಂಗಳೂರು: ಬಿಜೆಪಿ ಮುಕ್ತ ಭಾರತ ನಿರ್ಮಾಣವೇ ನಮ್ಮ ಗುರಿ ಎಂದು ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿ ಕಲ್ಪನೆಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ‌ ಚಿದಂಬರಂ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ
ಬಿಜೆಪಿಗಿಂತ ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ.೨ ಹೆಚ್ಚಿದೆ
ನಮ್ಮದು ಯೂನಿಫಾರಂ ಲೆವೆಲ್ ನಲ್ಲಿ ಮುಂದುವರಿದಿದೆ
ಮುಂದೆ ಒಂದೊಂದು ಬೂತ್ ನಮಗೆ ಇಂಪಾರ್ಟೆಂಟ್
ಹೀಗಾಗಿ ಪ್ರತಿಬೂತ್ ಗೂ ಹೆಚ್ಚಿನ ಒತ್ತು ನೀಡಬೇಕಿದೆ ಎಂದ್ರು.

ಕರಾವಳಿ ಕರ್ನಾಟಕದಲ್ಲಿ ನಮ್ಮ ಸಂಘಟನೆ ದುರ್ಬಲವಾಗಿದೆ ಇದ್ದೇವೆ.ಮೈಕ್ರೋಮ್ಯಾನೇಜ್ ಮೆಂಟ್ ನಂತೆ ಬೂತ್ ಗೆ ಒತ್ತು
ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರನ್ನ ಒಟ್ಟುಗೂಡಿಸಬೇಕಿದೆ
ಈ ನಿಟ್ಟಿನಲ್ಲಿ ಶಕ್ತಿ ಯೋಜನೆ ಸಹಾಯಕಾರಿಯಾಗಲಿದೆ ಎಂದ್ರು.

ನಂತ್ರಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ
ನಾನು ಪಕ್ಷದ ತತ್ವ ಸಿದ್ಧಾಂತಗಳಿಗೆ ಬೆಲೆಕೊಡುವವನು
ನಾನು ಅಧಿಕಾರಕ್ಕೆ ಬೆಲೆ ಕೊಟ್ಟವನಲ್ಲ ಕಾರ್ಯಕರ್ತರ ಶ್ರಮವೇ ಪಕ್ಷದ ಶಕ್ತಿ.ಪಕ್ಷದ ಒಟ್ಟು ಶಕ್ತಿಯೇ ಅಧಿಕಾರಕ್ಕೆ ಕಾರಣವಾಗುತ್ತದೆ.ಈ ನಿಟ್ಟಿನಲ್ಲಿ ಶಕ್ತಿ ಯೋಜನೆ ಬಹಳ ಮುಖ್ಯವಾದುದು.ಮೊದಲು ವಿದ್ಯಾರ್ಥಿ ಸಂಘಟನೆ ಬಲಿಷ್ಠಗೊಳಿಸಬೇಕುಅಲ್ಲಿ ಸಂಘಟನೆಯಾದರೆ ಪಕ್ಷ ಬಲವರ್ಧನೆಯಾಗುತ್ತದೆ.ಯುವ ಜನತೆಯನ್ನ ಮೊದಲು ಕಲೆಹಾಕಬೇಕು.ಆಗ ಪಕ್ಷವನ್ನ ಮತ್ತಷ್ಟು ಬಲಗೊಳಿಸಬಹುದು
ವಿದ್ಯಾರ್ಥಿ,ಯುವ ಸಮೂಹ ನಮಗರ ಬಹಳ ಮುಖ್ಯ
ನಮ್ಮ‌ ಮುಖಂಡರು ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದ್ರು.

ಖಾಸಗಿ ವೈದ್ಯರ ಮುಷ್ಕರ: ಸರ್ಕಾರಿ ವೈದ್ಯರಿಗೆ ಇಲ್ಲ ರಜೆ

ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ವಿಧೇಯಕವನ್ನು ವಿರೋಧಿಸಿ ದೇಶದಾದ್ಯಂತ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘಟನೆ ಕರೆ ನೀಡಿದೆ. ದೇಶದಾದ್ಯಂತ 2.15 ಲಕ್ಷ ವೈದ್ಯರು ಇಂದು ಕೆಲಸಕ್ಕೆ ಗೈರಾಗಿ ಹೋರಾಟ ನಡೆಸಲಿದ್ದಾರೆ.

ಐಎಂಎ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ, ರೋಗಿಗಳಿಗೆ ಅಗತ್ಯ ಸೇವೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್ಲ ರಾಜ್ಯಗಳ ವೈದ್ಯಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲೂ ಮುಷ್ಕರದ ಅಂಗವಾಗಿ ಖಾಸಗಿ ವೈದ್ಯರು ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ಒಪಿಡಿ ಬಂದ್‌ ಮಾಡಿ ಹೋರಾಟ ಮಾಡಲಿದ್ದಾರೆ. ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಖಾಸಗಿ ವೈದ್ಯರ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆಯಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ವೈದ್ಯರಿಗೆ ರಜೆ ನೀಡಿಲ್ಲ. ಹೊರ ರೋಗಿಗಳ ವಿಭಾಗ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಸಂಜೆ 6 ಗಂಟೆ ಬಳಿಕ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಒಪಿಡಿ ಸೇವೆ ಸಿಗಲಿದೆ.

ಖಗ್ರಾಸ ಚಂದ್ರಗ್ರಹಣ: ಭುವಿಯ ಛಾಯೆಯಲ್ಲಿ ಮಿಂಚಿ ಮರೆಯಾದ ಚಂದಮಾಮ

ಫೋಟೋ ಕ್ರೆಡಿಟ್: ಸಿ.ಆರ್ ಸುಪ್ರೀತ್

ಬೆಂಗಳೂರು: ಶತಮಾನದ ಅತಿ ದೀರ್ಘ ಕಾಲದ ಖಗ್ರಾಸ ಚಂದ್ರಗಹಣ ನಡೆಯಿತು. ಹಾಲಿನಂತೆ ಹೊಳೆಯುತ್ತಿದ್ದ ಚಂದಮಾಮ ಕತ್ತಲೆ ಬೆಳಕಿನಾಟದ ಕೆಂಬಣ್ಣದಲ್ಲಿ ಕಂಗೊಳಿಸಿದ.

ಖಗ್ರಾಸ ಚಂದ್ರಗ್ರಹಣ ತಡರಾತ್ರಿ 11.54 ಕ್ಕೆ ಆರಂಭಗೊಂಡಿತು.ಭುವಿಯ ನೆರಳು‌ ಚಂದಿರನ ಅಂಗಳದ ಮೇಲೆ‌ ಬೀಳಲು ಶುರುವಾಯಿತು.ರಾತ್ರಿ 1.51 ಕ್ಕೆ‌ ಗ್ರಹಣದ ಮಧ್ಯಭಾಗ ನಡೆದಿದ್ದು ಸರಿಯಾಗಿ 3.49ಕ್ಕೆ ಚಂದಿರನ ಮೇಲಿನ ಭೂಮಿಯ ನೆರಳು ಸಂಪೂರ್ಣ ಸರಿಯಿತು. ಒಟ್ಟು
3.55 ಗಂಟೆಗಳ ಕಾಲ ದೀರ್ಘಕಾಲದ‌ ಚಂದ್ರಗ್ರಹಣ ನಡೆಯಿತು.

ರಕ್ತ ಚಂದಿರನಂತೆ ಬಾನಂಗಳಲ್ಲಿ ಕಂಡ‌ ಚಂದಿರ ಮೋಡಗಳ‌ ಚಲ್ಲಾಟದ ನಡುವೆ ಆಗಾಗ ಕಂಡು ಮರೆಯಾಗುತ್ತಿದ್ದ.ನಗರದ

ವಿದ್ಯಾಮಂದಿರ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಅಧ್ಯಾಪಕ‌‌ರಾದ ಸಿ.ಆರ್ ಸುಪ್ರೀತ್ ಸೇರಿದಂತೆ ಕೆಲ ಭೌತಶಾಸ್ತ್ರ ಆಸಕ್ತ ಯುವಕರು ತಮ್ಮ ತಮ್ಮ ಮನೆಯ ಮೇಲೆ ಟೆಲಿಸ್ಕೋಪ್ ಇಟ್ಟು ಅಪರೂಪದ‌‌ ಚಂದ್ರಗ್ರಹಣ ವೀಕ್ಷಿಸಿದರು. ಬಹುತೇಕ ಜನರು ಜವಾಹರ್ ಲಾಲ್ ನೆಹರೂ ತಾರಾಲಯಕ್ಕೆ ಹೋಗಿ ಆಗಸದಲ್ಲಿ ಕಂಡ ಕತ್ತಲೆ ಬೆಳಕಿನ‌‌ ಚಂದಮಾಮನ ಆಟವನ್ನು ವೀಕ್ಷಿಸಿದ್ರು.