ಮೋದಿಗೆ ದೇಶಕ್ಕಿಂತ ಸ್ನೇಹಿತರೇ ಮುಖ್ಯ: ದಿನೇಶ್ ಗುಂಡೂರಾವ್ ಟೀಕೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ರಕ್ಷಣೆಗಿಂತ ಸ್ನೇಹಿತರ ರಕ್ಷಣೆ ಮುಖ್ಯ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ರು. ಜೊತೆಗೆ ಮೈತ್ರಿ ಸರಕಾರದ ಪಾಲುದಾರ ಪಕ್ಷವಾಗಿ ಕೆಲ ವಿಚಾರದಲ್ಲಿ ಸಿಎಂ ವಿರುದ್ಧವೂ ಪರೋಕ್ಷ ಅಸಮಧಾನ ವ್ಯಕ್ಯಪಡಿಸಿದ್ರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಒಂದೊಂದು ಏರ್ ಕ್ರಾಫ್ಟ್ ಗೆ 1670ಕೋಟಿ ಕೊಟ್ಟಿದ್ದಾರೆ‌ ಫ್ರಾನ್ಸ್ ಆನ್ಯುಯಲ್ ರಿಪೋರ್ಟ್ ನಲ್ಲಿ ದರ ರಿಪೋರ್ಟ್ ಇದೆ
ಮೋದಿ ದೇಶದ ಹಿತಾಸಕ್ತಿ ಗಮನಿಸಿಲ್ಲ‌ ಮ್ಯಾನುಫ್ಯಾಕ್ಚರ್ ಮಾಡುವ ಜವಾಬ್ದಾರಿ ಅನಿಲ್ ಅಂಬಾನಿಯ ರಿಲಾಯನ್ಸ್ ಗೆ ಕೊಟ್ಟಿದ್ದಾರೆ ಅನಿಲ್ ಅಂಬಾನಿ ಸಂಸ್ಥೆಗೆ ಯಾವುದೇ ಅನುಭವವಿಲ್ಲ ಮೋದಿಗೆ ದೇಶದ ಹಿತರಕ್ಷಣೆ ಬಗ್ಗೆ ಕಮಿಟ್ ಮೆಂಟ್ ಇಲ್ಲ‌ ರಿಲಾಯನ್ಸ್ ಕಂಪನಿಗೆ ಹಿನ್ನೆಲೆ ಏನಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ರು.

ಅವರ ಕಂಪನಿಗೆ ಇನ್ನೂ 36 ತಿಂಗಳಾಗಿದೆ ಅಷ್ಟೆ. ಇನ್ನೂ ಇದರ ಬಗ್ಗೆ ಮಾಹಿತಿ ಇಲ್ಲ ಒಂದು ಏರ್ ಕ್ರಾಫ್ಟ್ ಕೂಡ ಬಂದಿಲ್ಲ ಮೋದಿ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿದ್ದೇವೆ. 126 ವಿಮಾನ ಬಿಟ್ಟು 36 ವಿಮಾನಗಳನ್ನು ಮೋದಿ ಏಕೆ ಖರೀದಿ ಮಾಡಿದ್ರು ಅನ್ನೋದಕ್ಕೆ ಮೋದಿ ಉತ್ತರ ಕೊಡಬೇಕು ಚರ್ಚೆ ನಡೆಸಿಲ್ಲ, ಡಿಫೆನ್ಸ್ ಮಿನಿಸ್ಟರ್ ಗೂ ಗೊತ್ತಿಲ್ಲದೆ ಮೋದಿ ಹೇಗೆ ಖರೀದಿಸಿದ್ರು ಮೋದಿ ಎಚ್ ಎ ಎಲ್ ಅನ್ನು ಕಡೆಗಣಿಸಿದ್ದು ಏಕೆ‌ ಏರ್ ಕ್ರಾಫ್ಟ್ ಬೆಲೆ ಹೇಳಲು ಮೋದಿ ಹಿಂದೆ ಮುಂದೆ ನೋಡ್ತಿರೋದು ಏಕೆ
ಮೋದಿಗೆ ಭಯ-ಭೀತಿ ಬೇಕೆ, ಮೋದಿ ದೇಶವನ್ನು ಮಾರಾಟ ಮಾಡಲು ಇಟ್ಟಿದ್ದಾರೆ ದೇಶದ ಬಗ್ಗೆ ಗಂಭೀರ ಯೋಚನೆ ಮಾಡ್ತಿಲ್ಲ ಎಂದು ಟೀಕಿಸಿದ್ರು.

ಮೋದಿಯದ್ದು ಬೂಟಾಟಿಕೆ ಸರ್ಕಾರ ದೊಡ್ಡ ದೊಡ್ಡ ಉದ್ಯಮಿಗಳಿಗೆ, ತಮ್ಮ ಸ್ನೇಹಿತರಿಗೆ ಮೋದಿ ಅನುಕೂಲ ಮಾಡಿಕೊಡ್ತಿದ್ದಾರೆ ಜನಸಾಮಾನ್ಯರಿಗೆ ಯಾವುದೇ ಅನುಕೂಲ ಇಲ್ಲ ಮೋದಿ ದೇಶದ ಅತ್ಯಂತ ಭ್ರಷ್ಟ ಪ್ರಧಾನಿ‌. ಜನಪರ ಯೋಜನೆ ಕೊಡೋದಕ್ಕೂ ಮೋದಿಗೆ ಯೋಗ್ಯತೆ ಇಲ್ಲ. ಪ್ರಧಾನಿ ಮೋದಿ ಕಾರ್ಪೋರೇಟ್ ಜಗತ್ತಿನ ಪಾಲುದಾರರು‌. ಮೋದಿ ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಕೊಡದಿದ್ರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುತ್ತೆ ಅಂತಾ ಎಚ್ಚರಿಕೆ ನೀಡಿದ್ರು.

ಅಭಿವೃದ್ಧಿಗೂ ವೋಟ್ ಹಾಕೋದಕ್ಕೂ ಸಂಬಂಧ ಇಲ್ಲ ವೋಟ್ ಹಾಕಿಲ್ಲ ಅಂತೇಳಿ ಆ ಭಾಗದ ಜನರನ್ನ ತಿರಸ್ಕಾರ ಮಾಡೋದು ಸರಿಯಿಲ್ಲ ಕರಾವಳಿಯಲ್ಲಿ ಜನ ವೋಟ್ ಹಾಕಿಲ್ಲ ಅಂತೇಳಿ ಆ ಭಾಗವನ್ನು ನಿರ್ಲಕ್ಷ್ಯ ಮಾಡೋದಕ್ಕೆ ಆಗುತ್ತಾ? ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಬದ್ಧ ಎಂದು ಮತ ಹಾಕುವಾಗ ಜೆಡಿಎಸ್ ನೆನಪಾಗಲಿಲ್ಲವೇ ಎಂಬ ಸಿಎಂ ಎಚ್.ಡಿ.ಕೆ ಹೇಳಿಕೆ ದಿನೇಶ್ ಗುಂಡೂರಾವ್ ಟಾಂಗ್ ನೀಡಿದ್ರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಸರಿಯಲ್ಲ. ಬಜೆಟ್ ನಲ್ಲಿ ಅನ್ಯಾಯ ಆಗಿಲ್ಲ‌ ಕೆಲವರು ಬಜೆಟ್ ಅನ್ನು ತಪ್ಪಾಗಿ ಅರ್ಥೈಸಿ ಸುಳ್ಳು ಹರಡಿಸುತ್ತಿದ್ದಾರೆ‌ ಎಲ್ಲ ಭಾಗಗಳನ್ನೂ ಅಭಿವೃದ್ಧಿ ಮಾಡುವುದು ಕಾಂಗ್ರೆಸ್ ನ ಉದ್ದೇಶ ಜೆಡಿಎಸ್ ಶಾಸಕರು ಇಲ್ಲಿಂದ ಗೆದ್ದು ಬಂದಿದ್ದಾರೆ ಕಾಂಗ್ರೆಸ್ ಎಲ್ಲ ಭಾಗಗಳಿಂದಲೂ ಗೆದ್ದು ಬಂದಿದ್ದಾರೆ ಉತ್ತರ ಕರ್ನಾಟಕಕ್ಕೆ ನಾವು ಸಚಿವ ಸಂಪುಟದಲ್ಲೂ ಹೆಚ್ಚಿನ ಆದ್ಯತೆ ನೀಡೇ ನೀಡುತ್ತೇವೆ ರಾಜ್ಯದ ಸಿಎಂ ಆಗಿ ಎಚ್ಡಿಕೆ ಎಲ್ಲ ಜನರನ್ನೂ ಪ್ರತಿನಿಧಿಸುತ್ತಾರೆ ಎಂದ್ರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ವಿಚಾರ ಈಗಾಗಲೇ ಅಂತಿಮವಾಗಿದೆ. ಕಾಂಗ್ರೇಸ್ ನ ನಡವಳಿಕೆ ಮೈತ್ರಿ ಯನ್ನು ನಿರ್ಧರಿಸುತ್ತದೆ ಎಂದು ಈಗ ಸಿಎಂ ಹೇಳಿಕೆ ನೀಡಿದ್ದಾರೆ.ಆದ್ರೆ ಇದು ಮೈತ್ರಿ ಸರ್ಕಾರವಾದ್ದರಿಂದ ಇಬ್ಬರ ನಡವಳಿಕೆಯೂ ಮುಖ್ಯ.ಇಬ್ಬರ ನಡವಳಿಕೆಯೂ ಸರಿಯಾಗಿರಬೇಕು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳೋದು ಅಂತ ಸರಕಾರ ರಚನೆ ವೇಳೆ ಕುಮಾರಸ್ವಾಮಿಯವರ ಸಮ್ಮುಖದಲ್ಲೇ ತೀರ್ಮಾನವಾಗಿದೆ ಎಂದ್ರು.

ನಾನು ಯಾವುದೇ ಕ್ಯಾಂಪ್ ನಲ್ಲಿ ಇಲ್ಲ.ನಾನು ಕಾಂಗ್ರೆಸ್ಕ್ಯಾಂಪ್ ನಲ್ಲಿದ್ದೇನೆ.ನನ್ನ, ಪರಮೇಶ್ವರ್, ಡಿ.ಕೆ ಶಿವಕುಮಾರ್, ಈಶ್ವರ್ ಖಂಡ್ರೆ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಿದ್ದರಾಮಯ್ಯ ಕ್ಯಾಂಪ್, ಪರಮೇಶ್ವರ್ ಕ್ಯಾಂಪ್ ಅಂತಾ ಮಾಧ್ಯಮಗಳಲ್ಲಿ ಬರ್ತಿದೆ ಅಷ್ಟೇ.ನಾನು ಕಾಂಗ್ರೆಸ್ ಕ್ಯಾಂಪ್ ನಲ್ಲಿದ್ದೇನೆ ಎಂದ್ರು.

ರೈತರ ಪರ ಈಗಲಾದ್ರೂ ಬಿಜೆಪಿ ಹೋರಾಟ ಮಾಡ್ತಿದೆ: ಸಿಎಂ ವ್ಯಂಗ್ಯ

ಬೆಂಗಳೂರು: ಬಿಜೆಪಿ ಪಾದಯಾತ್ರೆಯನ್ನು ನಾನು ಸ್ವಾಗತಿಸುತ್ತೇನೆ ಹೋರಾಟ, ಪ್ರತಿಭಟನೆ ಮಾಡೋದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ ಈಗಲಾದರೂ ರೈತರ ಪರವಾಗಿ ಹೋರಾಟ ಮಾಡ್ತಿದ್ದಾರಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ರು.

ಜಯನಗರದ ಆರ್. ವಿ. ಟೀಚರ್ಸ್ ಕಾಲೇಜಿನಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಎಂ ಮಾತನಾಡಿದ್ರು. ರೈತರ ಸಾಲ ಮನ್ನಾ ವಿಚಾರ ಪದೇ ಪದೇ ಚರ್ಚೆ ಮಾಡೋದು ಬೇಡ ಇವತ್ತು ಬಂದಿರೋದು ಕಾರ್ಗಿಲ್ ವೀರ ಯೋಧರಿಗೆ ಗೌರವ ಸಲ್ಲಿಸೋದಕ್ಕೆ.ಆದರೂ ಟೀಕೆಗೆ ಉತ್ತರ ನೀಡಬೇಕಲ್ವಾ? ದೇಶದಲ್ಲೇ ಮೊದಲ ಬಾರಿಗೆ ದೊಡ್ಡ ಮೊತ್ತದ ರೈತರ ಸಾಲ ಮನ್ನಾ ಮಾಡಿದ್ದೇನೆ. ನನಗೆ ಬೆಂಬಲ ಸೂಚಿಸೋದಕ್ಕೆ ಪಾದಯಾತ್ರೆ ಮಾಡ್ತಾರೋ, ಇಲ್ಲಾ ವಿರೋಧ ಮಾಡ್ತಾರೋ ಹೇಳಬೇಕು. ವೈಯುಕ್ತಿಕವಾಗಿ, ರಾಜಕೀಯವಾಗಿ ಕರಲವರಿಗೆ ಲಾಭವಾಗಬಹುದು ಕೇಂದ್ರ ಸರ್ಕಾರವೇ 4 ವರ್ಷದಿಂದ ಸಾಲಮನ್ನಾ ಮಾಡಲಿಲ್ಲ ಎಂದ್ರು.

ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ ಗೆ ಕರೆ ನೀಡಿರೋರು ಯಾರು?
ಆ ಸಂಘಟನೆ ಅವರಿಗೆ ಕೇಳ್ತೀನಿ ಈಗ ಎರಡು ತಿಂಗಳಿನಿಂದ ಶುರುವಾಗಿದ್ಯಾ ಇದು? ಅಭಿವೃದ್ಧಿ ಎಷ್ಟಾಗಿದೆ ಅನ್ನೋದನ್ನ ಚರ್ಚೆ ಮಾಡಲಿ ಸಾರ್ವಜನಿಕವಾಗಿ ಚರ್ಚೆಗೆ ನಾನು ಸಿದ್ಧನಿದ್ದೇವೆ, ಆ ಸಂಘಟನೆ ಅವರನ್ನು ಕರೆಯುತ್ತೇವೆ, ಚರ್ಚೆ ಮಾಡಲಿ ಅವರು ಎಂದು ಸವಾಲೆಸೆದ್ರು.

ರಾತ್ರೋ ರಾತ್ರಿ ಮನೆಯಾಗಿ ಪರಿವರ್ತನೆಯಾದ ಬಸ್ ನಿಲ್ದಾಣ

ಬೆಳಗಾವಿ: ರಾತ್ರೋ ರಾತ್ರಿ ಬಸ್ ನಿಲ್ದಾಣವೊಂದು ಇದ್ದಕ್ಕಿಂದಂತೆ ಕಾಣೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ರಾತ್ರಿ ಇದ್ದ ಬಸ್ ನಿಲ್ದಾಣದ ಜಾಗದಲ್ಲಿ ಬೆಳಗ್ಗೆ ಕಂಡ ದೃಶ್ಯ ನೋಡಿದ ಗ್ರಾಮಸ್ಥರ ಬೆಸ್ತು ಬಿದ್ದಿದ್ದಾರೆ.

ರಾತ್ರಿವರೆಗೆ ಇದ್ದ ಬಸ್ ನಿಲ್ದಾಣ ಬೆಳಗಾಗುತ್ತಿದ್ದಂತೆ ಮನೆಯಾಗಿ ಮಾರ್ಪಾಡಾದ ಘಟನೆ ನಡೆದಿದೆ.ರಾತ್ರೋ ರಾತ್ರಿ ಬಸ್ ನಿಲ್ದಾಣದಲ್ಲಿ ಕಿಡಿಗೇಡಿಗಳು ಮನೆ ನಿರ್ಮಾಣ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹೊಸಕಾದರವಳ್ಳಿ ಗ್ರಾಮದಲ್ಲಿ ನಡೆದ ಘಟನೆ ಈಗ ಇಡೀ ರಾಜ್ಯದಲ್ಲಿ ಸುದ್ದಿಯಾಗಿದೆ.

ನಿನ್ನೆ ರಾತ್ರಿವರೆಗೆ ಪ್ರಯಾಣಿಕರಿಗೆ ಕೂರಲು ಅನುಕೂಲವಾಗಿದ್ದ ಬಸ್ ನಿಲ್ದಾನದಲ್ಲಿ, ಇಂದು ಬೆಳಗಾಗುತ್ತಿದ್ದಂತೆ ಮನೆ ನಿರ್ಮಾಣ ಮಾಡಲಾಗಿದೆ. ಬಸ್ ನಿಲ್ದಾಣಕ್ಕೆ‌ ಗೋಡೆ ಕಟ್ಟಿ, ಎರಡು ಬಾಗಿಲು ಹಚ್ಚಿ ಬಸ್ ನಿಲ್ದಾಣವನ್ನ ಮನೆ ಮಾಡಲಾಗಿದೆ.

ಬೆಳಿಗ್ಗೆ ಗ್ರಾಮಸ್ಥರಿಗೂ ಬಸ್ ನಿಲ್ದಾಣ ಕಂಡು ಅಚ್ಚರಿಯಾಗಿದೆ. ತಡ ರಾತ್ರಿಯಲ್ಲಿ ಕಿಡಿಕೇಡಿಗಳಿಂದ ಕೃತ್ಯ ನಡೆಸಿದ್ದು ಇದನ್ನು ಯಾರು ಮಾಡಿದ್ದಾರೆ ಎಂಬುದ ಸದ್ಯಕ್ಕೆ ಗೊತ್ತಾಗಿಲ್ಲ. ಬಸ್ ನಿಲ್ದಾಣವನ್ನ ಹೊಸಕಾದರವಳ್ಳಿ ಗ್ರಾಮಸ್ಥರು ಅಚ್ಚರಿಯಿಂದ ನೋಡುತ್ತಿದ್ದಾರೆ.

ಯೋಧರಿಗಾಗಿ ಹೊಸ ಕಾನೂನು: ಡಿಸಿಎಂ ಪರಂ

ಬೆಂಗಳೂರು: ನಿವೃತ್ತಿ ಹೊಂದುವ ಅಥವಾ ಯುದ್ಧದಲ್ಲಿ ಹುತಾತ್ಮರಾಗುವ ಯೋಧರ ಕುಟುಂಬಗಳಿಗೆ ಮೂರು ತಿಂಗಳ ಒಳಗಾಗಿ ಸಂಪೂರ್ಣ ಪರಿಹಾರ ಹಾಗೂ ಇತರೆ ಸೌಲಭ್ಯ ಒದಗಿಸಿಕೊಡಲು ನೂತನ ಕಾನೂನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ‌ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಬಳಿಕ ಮಾತನಾಡಿದ ಪರಮೇಶ್ವರ್, 1999ರಲ್ಲಿ ಕಾಂಗ್ರಿಲ್ ಯುದ್ಧದ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಇವರ ಸೇವೆ ಹಾಗೂ ತ್ಯಾಗ ಸ್ಮರಣಾರ್ಥ. ಇವರನ್ನು‌‌ ನೆನೆದು ಗೌರವ ಸಲ್ಲಿಸಲು ಈ ದಿನ ಆಚರಿಸುತ್ತೇವೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಬದುಕಿರುವ ಸಾಕಷ್ಟು ಯೋಧರು ನಮ್ಮೊಟ್ಟಿಗಿದ್ದಾರೆ. ಅವರಿಗೂ ಕೃತಜ್ಞತೆ ಸಲ್ಲಿಸುವೆ. ಇಂದಿನ‌ ಯುವ ಪೀಳಿಗೆಗೆ ಹುತಾತ್ಮ ಯೋಧರು ಆದರ್ಶರಾಗಿದ್ದಾರೆ ಎಂದರು.

ಗಡಿ ಕಾಯುವ ಯೋಧರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸುತ್ತಾರೆ. ಇವರಿಗೆ ಪರಿಹಾರ ನೀಡುವ ಕಾರ್ಯ ತಡವಾಗಬಾರದು. ಅದಕ್ಕಾಗಿಯೇ ಸೈನಿಕ ವೆಲ್‌‌ಫೇರ್ ಬೋರ್ಡ್ ತೆರೆಯಲಾಗಿದೆ. ಆದರೂ ಪರಿಹಾರ ತಡವಾಗುವ ಆರೋಪವಿದೆ. ಹೀಗಾಗಿ ನೂತನ ಕಾನೂನು ತರಲು ಹೊರಟಿದ್ದೇವೆ.‌ ಕನಿಷ್ಠ ಮೂರು ತಿಂಗಳ ಒಳಗಾಗಿ ನಿವೃತ್ತ ಯೋಧರು ಅಥವಾ ಯುದ್ಧದಲ್ಲಿ ಹುತಾತ್ಮರಾಗುವ ಯೋಧ ಕುಟುಂಬಗಳಿಗೆ ಪರಿಹಾರ ಹಾಗೂ ಇತರೆ ಸೌಕರ್ಯ ಒದಗಿಸಿಕೊಡುವ ಕೆಲಸವಾಗುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಅವರು, ದೇವನಹಳ್ಳಿಯಲ್ಲಿರುವ ವೀರಗಲ್ಲು ತರುವ ಪ್ರಯತ್ನ‌ ಮಾಡಲಾಗುತ್ತಿದ್ದು, ಎರಡು ಬಾರಿ ಸಭೆ ನಡೆಸಲಾಗಿದೆ.
ಇದಕ್ಕೆ ಸಾರಿಗೆ ಸಮಸ್ಯೆ ಆಗುತ್ತಿದೆ. ಆದರೂ ಶೀಘ್ರವೇ ವೀರಗಲ್ಲನ್ನು ಈ ಸ್ಮಾರಕಕ್ಕೆ ತರಿಸಲಾಗುವುದು ಎಂದು ಭರವಸೆ‌ ನೀಡಿದರು.

ಜನಸಾಮಾನ್ಯರಿಗೆ ಸುಲಭ ದರದಲ್ಲಿ ಆರೋಗ್ಯ ಸೇವೆಗೆ ಜಯದೇವ ಆಸ್ಪತ್ರೆ ಮಾದರಿ!

ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆ ಸುಲಭ ದರದಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಸೌಲಭ್ಯವನ್ನು ನೀಡುತ್ತಿದ್ದು, ಸಂಸ್ಥೆಯು ಕರ್ನಾಟಕ ರಾಜ್ಯಕ್ಕೆ ಅಷ್ಟೇ ಅಲ್ಲ, ದೇಶಕ್ಕೇ ಮಾದರಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ, ಸಂಸ್ಥೆಯ ಬೆಳವಣಿಗೆಗೆ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎಸ್.ಮಂಜುನಾಥ್ ಅವರ ಕೊಡುಗೆ ಅಪಾರ ವೈದ್ಯರು, ಕೆಳಹಂತದ ಸಿಬ್ಬಂದಿ ನಡುವೆ ತಾರತಮ್ಯವಿಲ್ಲದೆ ಸಂಸ್ಥೆಯನ್ನು ಈ ಮಟ್ಟಕ್ಕೆ ತಂದಿದ್ದಾರೆ. 50 ಲಕ್ಷ ರೋಗಿಗಳಿಗೆ ಶ್ರೀಮಂತರು, ಬಡವರು ಎನ್ನುವ ಬೇಧವಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜನಸಾಮಾನ್ಯರು ದುಡ್ಡಿಲ್ಲದೆ ಬಂದರೂ ಕೂಡ ನೇರವಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ಪ್ರಾರಂಭಿಸುವ ಏಕೈಕ ಆಸ್ಪತ್ರೆ ಜಯದೇವ. ಸರ್ಕಾರಿ ಆರೋಗ್ಯ ಸಂಸ್ಥೆಗಳಿಂದ ಉತ್ತಮವಾದ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಕಿದ್ವಾಯಿಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 12 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಂಗಾಂಗ ಕಸಿಗೆ ಸಹ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

ವೈದ್ಯರಿಗೆ ಎಲ್ಲಾ ರೀತಿಯ ರಕ್ಷಣೆ ಕೊಡಬೇಕಾದುದ್ದು ಸರ್ಕಾರದ ಜವಾಬ್ದಾರಿ. ವ್ಯಕ್ತಿ ಸತ್ತ ತಕ್ಷಣ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆಗಳ ಮೇಲೆ ದಾಳಿ, ವೈದ್ಯರ ಮೇಲಿನ ಹಲ್ಲೆ ನಡೆಯುತ್ತಿರುವುದು ದುರದೃಷ್ಟಕರ. ಇದನ್ನು ತಡೆಯುವ ನಿಟ್ಟಿನಲ್ಲಿಯೂ ಸರ್ಕಾರ ಕ್ರಮಕೈಗೊಳ್ಳುತ್ತದೆ. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ: ಸಿ.ಎಸ್.ಮಂಜುನಾಥ್, ಶಾಸಕಿ ಸೌಮ್ಯರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯುತ್ ಉತ್ಪಾದನೆ ಸ್ವಾವಲಂಬನೆ: ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

ಬೆಂಗಳೂರು: ಸೌರ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಈಗಾಗಲೇ 2022 ರ ಉತ್ಪಾದನಾ ಸಾಮರ್ಥ್ಯದ ಗುರಿಯನ್ನು ತಲುಪಿದೆ. ಇತರ ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯಲ್ಲೂ ಶೀಘ್ರವೇ ನಿಗದಿತ ಗುರಿ ಸಾಧಿಸಲಾಗುವುದು ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ವಿದ್ಯುತ್ ವಲಯದ ಸ್ಥಿತಿ-ಗತಿಗಳ ಕುರಿತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳ ಸಭೆ ನಡೆಸಿ ಪರಿಶೀಲಿಸಿದರು. ಸಭೆಯಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಸಿಎಂ ಎಸಿಎಸ್ ರಮಣರೆಡ್ಡಿ, ಕಾರ್ಯದರ್ಶಿ ಸೆಲ್ವಕುಮಾರ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್ ಎನ್ ಪ್ರಸಾದ್ ಸಭೆಯಲ್ಲಿ ಭಾಗವಹಿಸಿದ್ದರು.

ಯಲಹಂಕದಲ್ಲಿ ಅನಿಲ ಆಧಾರಿತ 370 ಮೆಗಾವ್ಯಾಟ್ ವಿದ್ಯುತ್ ಘಟಕ ಸ್ಥಾಪನೆ, ಶಿವನ ಸಮುದ್ರದಲ್ಲಿ ರನ್ ಆಫ್ ದಿ ರಿವರ್ ಯೋಜನೆ ಜಾರಿ, ಸೇರಿ ಒಟ್ಟು 10 ಕ್ಕೂ ಹೆಚ್ಚು ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ ಹಾಗೂ ಕಾರ್ಯ ನಿರ್ವಹಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಕೇಂದ್ರ ಸರ್ಕಾರ ರೂಪಿಸಿರುವ ಇಂಧನ ನೀತಿಗೆ ಅನುಗುಣವಾಗಿ ರಾಜ್ಯದ ವಿದ್ಯುತ್ ಯೋಜನೆಗಳನ್ನು ಪರಿಷ್ಕೃತ ಗೊಳಿಸಿ ಜಾರಿಗೊಲಿಸುವ ಕುರಿತು ಚರ್ಚಿಸಲಾಯಿತು.