ಜಲಾಶಯಗಳ ಭರ್ತಿಯಿಂದ ನೆಮ್ಮದಿ ಮೂಡಿದೆ: ಸಿಎಂ ಕುಮಾರಸ್ವಾಮಿ

ಮೈಸೂರು: ಹಳೇ ಮೈಸೂರು ಭಾಗದ ನಾಲ್ಕು ಜಲಾಶಯಗಳ ಭರ್ತಿಯಿಂದ ರೈತರ ಬಾಳಲ್ಲಿ ಹಸಿರು ಮೂಡುತ್ತಿರುವುದು ಖುಷಿ ತಂದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಭಾಗಮಂಡಲ ಭಗಂಡೇಶ್ವರ ದೇವಾಲಯ ಮತ್ತು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಚಿವರಾದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಕೂಡ ಹಾಜರಿದ್ದರು.

ಪೂಜೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನೀರಿನ ಕೊರತೆಯಿಂದ ತಮಿಳುನಾಡು ಮತ್ತು ರಾಜ್ಯದ ನಡುವೆ ವ್ಯಾಜ್ಯಗಳು ಏರ್ಪಟ್ಟು ರಾಜ್ಯದ ರೈತರು ಭತ್ತ ಬೆಳೆಯದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ನಾಲ್ಕೂ ಜಲಾಶಯಗಳ ಭರ್ತಿಯಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.

ಸಂಸತ್‌ನಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ: ಅಪ್ಪುಗೆ, ಕಣ್ಣೇಟು!

ನವದೆಹಲಿ: ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇಂದು ಅವಿಶ್ವಾಸ ಕಲಾಪ ಆರಂಭವಾಗಿದೆ. ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ಸಮರ ನಡೆದಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಎನ್‌ಡಿಎ ಸರ್ಕಾರದ ಹಲವು ವಿಚಾರಗಳನ್ನು ಪ್ರಸ್ತಾವಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು. ನಂತರ ಮೋದಿಯವರನ್ನು ಕಲಾಪದಲ್ಲೇ ಆಲಂಗಿಸಿದರು, ಬಳಿಕ ಕಣ್ಣು ಹೊಡೆದು ಎಲ್ಲರ ಅಚ್ಚರಿಗೆ ಕಾರಣರಾದರು.

ಪ್ರಧಾನಿ ಮೋದಿ ಚೌಕಿದಾರ್‌ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗಿದಾರ ಎಂದು ಹೇಳಿದ ರಾಹುಲ್‌ ಗಾಂಧಿ ಪ್ರಧಾನಿ ಮೋದಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವಿಲ್ಲ ಎಂದು ಹೇಳಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನಗುತ್ತಾ ಕುಳಿತಿದ್ದರು.

ರಾಹುಲ್ ಗಾಂಧಿ ಸಂಸತ್‌ನಲ್ಲಿ ಪ್ರಧಾನ ಮಂತ್ರಿಗಳ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದಾರೆ.

* ರಾಫೆಲ್‌ ಯುದ್ದ ವಿಮಾನ ಖರೀದಿ ವಿಚಾರದಲ್ಲಿ ನಾನು ಫ್ರಾನ್ಸ್‌ ಅಧ್ಯಕ್ಷರೊಂದಿಗೆ ನಾನು ಮಾತನಾಡಿದ್ದೇನೆ. ಅವರು ಭಾರತದೊಂದಿಗೆ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಹೇಳಿದ್ದಾರೆ. ಮೋದಿ ತಮ್ಮ ಆಪ್ತರ ಜೇಬು ತುಂಬುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

* 45 ಸಾವಿರ ಕೋಟಿ ಭ್ರಷ್ಟಾಚಾರ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ.

* ಅಚ್ಚೇದಿನ್ ಸರ್ಕಾರ್ ಅಲ್ಲ ಇದು ಸೂಟ್ ಬೂಟ್ ಸರ್ಕಾರ.

*  ಅಮಿತ್ ಷಾ ಪುತ್ರನ ಕಂಪನಿ ಆದಾಯ ಸಾವಿರ ಪಟ್ಟು ಹೆಚ್ಚಾಗಿದೆ.

* ಪ್ರಧಾನಿ ಯಾವುದೇ ಅಜೆಂಡಾ ಇಲ್ಲದೆ ಚೀನಾ ಪ್ರವಾಸ ಮಾಡಿದರು. ಅಲ್ಲಿ ಡೋಕ್ಲಾಂ ವಿಚಾರ ಕುರಿತು ಚಕಾರವೆತ್ತಿಲ್ಲ.

* ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಅಂದು ಮೋಸ ಮಾಡಿದರು.

* 4 ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ವಂಚಿಸಿದರು. ಕೆಲವು ಕಡೆ ಹೋಗಿ ಪಕೋಡಾ ಮಾರಿ ಎನ್ನುತ್ತಾರೆ.

* ಪ್ರಧಾನಿ 15 ರಿಂದ 20 ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಕೂಗು ಅವರಿಗೆ ಕೇಳಿಸುತ್ತಿಲ್ಲ.

* ಅಮಿತ್‌ ಶಾ ಮತ್ತು ಮೋದಿಗೆ ಅಧಿಕಾರ ಇಲ್ಲದಿದ್ದರೆ ಆಗುವುದಿಲ್ಲ. ನಾವು ವಿಪಕ್ಷಗಳೆಲ್ಲಾ ಒಂದಾಗಿ ಪ್ರಧಾನಿಯನ್ನು ಸೋಲಿಸಲು ಹೊರಟಿದ್ದೇವೆ.

* ನಾನು  ನಿಮಗೆ ಪಪ್ಪು ಆಗಿರಬಹುದು. ಆದರೆ ಕಾಂಗ್ರೆಸ್‌ ಪಕ್ಷ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ.

* ನನ್ನಲ್ಲಿರುವ ಆಕ್ರೋಶ ಭಾವನೆಗಳು ಬಿಜೆಪಿ ಸದಸ್ಯರಲ್ಲೂ ಇದೆ. ನಾನು ಎಲ್ಲರನ್ನೂ ಕಾಂಗ್ರೆಸಿಗರನ್ನಾಗಿಯೂ ಬದಲಾಯಿಸುತ್ತೇನೆ.

ದಮನಿತರ ದನಿಯಾಗಿದ್ದ ಖರ್ಗೆ: ಡಿಸಿಎಂ ಪರಂ ಬಣ್ಣನೆ

ಬೆಂಗಳೂರು: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಅವರ ವಿರುದ್ಧ ಒಮ್ಮೆಯೂ ಗುರುತರ ಆಪಾದನೆ ಕೇಳಿ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೇಳಿದರು.

ಮಲ್ಲಿಕಾರ್ಜುನ್ ಖರ್ಗೆ ಅವರ ಹುಟ್ಟು ಹಬ್ಬದ ಅಂಗವಾಗಿ ಶುಕ್ರವಾರ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಪೊಲಿಟಿಕಲ್ ಅಡ್ವೈಸರ್’ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಪರಮೇಶ್ವರ್, ಖರ್ಗೆ ಅವರು ರಾಜ್ಯದ ವಿಭಿನ್ನ ನಾಯಕ. ನಾನು ಅವರನ್ನು ದಲಿತ ನಾಯಕ ಎನ್ನುವುದಿಲ್ಲ. ಎಲ್ಲ ಸಮುದಾಯಕ್ಕೂ‌ ಸಮಾನ‌ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ನೊಂದ ಸಮುದಾಯಕ್ಕೆ ಹೆಚ್ಚು ಆಪ್ಯವಾಗಿ ನಿಂತವರು ಎಂದು ಹೇಳಿದರು.

ಇಡೀ ಸರ್ವಸ್ವವನ್ನು ಸಾರ್ವಜನಿಕರ ಬದುಕಿಗೋಸ್ಕರ ಮೀಸಲಿಟ್ಟವರು. ಅವರು ನನಗೆ ಹಿರಿಯ ಸಹೋದರ, ಮಾರ್ಗದರ್ಶಕ. ನಾನು ವಿದ್ಯಾರ್ಥಿಯಾಗಿದ್ದಾಗಲೇ ಇವರು ಸಚಿವರಾಗಿದ್ದರು. ಪರಿಶಿಷ್ಟ ಜಾತಿಯವರಿಗೆ ವಿದ್ಯಾರ್ಥಿ ವೇತನ ತಡವಾಗುತ್ತಿತ್ತು.‌ ಆ ಸಂದರ್ಭದಲ್ಲಿ ಖರ್ಗೆ ಅವರು ನಮ್ಮ ಪರ ನಿಂತರು. ನನ್ನ ತಂದೆಗೆ ಹೆಚ್ಚು ಆಪ್ತರಾಗಿದ್ದರು. ನಮ್ಮ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ೧೮ ವರ್ಷ ಅಧ್ಯಕ್ಷರಾಗಿದ್ದರು. ನಮ್ಮ ಕುಟುಂಬದ ಒಬ್ಬ ಸದಸ್ಯರಂತೆ ನಮ್ಮೊಟ್ಟಿಗೆ ಇದ್ದರು ಎಂದರು.

ಖರ್ಗೆ ಅವರು ರಾಜಕೀಯದ ತತ್ವ, ಸಿದ್ಧಾಂತಕ್ಕೆ ಅಂಟಿಕೊಂಡವರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶದ ದಾರಿಯಲ್ಲಿ ನಡೆದವರು. ಶಿಕ್ಷಣ ಸಚಿವರಾದ ಮೇಲೆ, ದಲಿತ ಸಮುದಾಯಕ್ಕೆ ಸೇರಿದವರು ಕೂಡ ಶಿಕ್ಷಣ ಸಂಸ್ಥೆ ಮಾಡಬಹುದು ಎಂದು ಕಾನೂನು ತಂದು ಅನುದಾನವಿಟ್ಟರು. ೧೧ ಬಾರಿ ಶಾಸಕ, ೨ ಬಾರಿ ಲೋಕಸಭೆಗೆ ಗೆದ್ದಿದ್ದಾರೆ. ಒಂದು ಕ್ಷೇತ್ರದಲ್ಲಿ ಇಷ್ಟು ಬಾರಿ ಗೆಲ್ಲುವುದು ಈಗಿನ ರಾಜಕೀಯದಲ್ಲಿ‌ ಅಸಾಧ್ಯದ ಮಾತು. ಇವರು ಎಲ್ಲ ಖಾತೆ‌ಗಳ ಸಚಿವರಾಗಿ ಕೆಲಸ ನಿಭಾಯಿಸಿದ್ದಾರೆ‌ ಎಂದು ಬಣ್ಣಿಸಿದರು.‌

ಗೌರಿ ಹತ್ಯೆ ಪ್ರಕರಣ: ಮತ್ತೊಬ್ಬ ಶಂಕಿತ ಆರೋಪಿ ಬಂಧನ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಮತ್ತೊಬ್ಬ ಶಂಕಿತ ಆರೋಪಿಯನ್ನು ಬಂಧಿಸಿದ್ದು ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಂಪಾಜೆ ನಿವಾಸಿ ಮೋಹನ್ ನಾಯ್ಕ್‌ನನ್ನು ಪೊಲೀಸರು ಬಂದಿಸಿದ್ದು ಈತ ಆರೋಪಿ ಅಮೋಲ್ ಕಾಳೆಗೆ ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ ಆರೋಪ ಎದುರಿಸುತ್ತಿದ್ದಾನೆ‌.

ಮೋಹನ್ ನಾಯ್ಕ್‌ನನ್ನು ಬಂಧಿಸಿರುವ ಎಸ್‌ಐಟಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜುಲೈ 24 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದು,
ಆರೋಪಿಯನ್ನ ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ದ: ಸಿಎಂ

ಕೊಡಗು:ಕೊಡಗು ಜಿಲ್ಲೆಯ ಜನತೆ ಅತಂಕಕ್ಕೊಳಗಾಗಬೇಕಿಲ್ಲ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಮಳೆಹಾನಿ ನಿರ್ವಹಣೆ ಹಾಗೂ ಪರಿಹಾರ ವಿತರಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳ ಸಭೆ ನಡೆಸಿದ್ರು.ಜಿಲ್ಲೆಯಲ್ಲಿನ ಮಳೆ ಹಾನಿ,ಪರಿಹಾರ ಕಾರ್ಯಾಚರಣೆ ಸಂಬಂಧ ಸಂಪೂರ್ಣ ಮಾಹಿತಿ ಮಾಡಿದುಕೊಂಡ್ರು.ನಂತ್ರ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಎಂ, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ, ಮಳೆಯಿಂದ ಕೊಡಗಿನಲ್ಲಿ ಉಂಟಾಗಿರುವ ಸಮಸ್ಯೆ ಅರಿಯಲು ಖುದ್ದು ಬಂದಿದ್ದೇನೆ,ಮಳೆ ಹಾನಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಡಿಸಿಗೆ ಸೂಚನೆ ನೀಡಲಾಗಿದೆ,ಜಿಲ್ಲಾಧಿಕಾರಿಗಳ ಖಾತೆಯಲ್ಲಿ  10 ಕೋಟಿ ಹಣ ಇದ್ದು ಹಣದ ಸಮಸ್ಯೆ ಇಲ್ಲ ಎಂದ್ರು.

ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ.ಈ ಕಾರಣಕ್ಕೆ ಸಮೀಪದ ಹಾಸನ ಮತ್ತು ಮೈಸೂರು ಜಿಲ್ಲೆಯಿಂದ ಸಿಬ್ಬಂದಿ ಕರೆಸಿಕೊಳ್ಳಲು ಕ್ರಮ ವಹಿಸಲಾಗಿದೆ.ಬೆಳೆ ಮತ್ತು ಮನೆ ಹಾನಿ ಬಗ್ಗೆ ಸಮಗ್ರ ಮಾಹಿತಿ ತರಿಸಿಕೊಂಡು ಸೂಕ್ತ ಪರಿಹಾರ ನೀಡಲಾಗುವುದು.ಭತ್ತದ ಬೆಳೆಗೆ ಹಾನಿಯಾಗಿದ್ದಲ್ಲಿ ಉಚಿತ ಭತ್ತ ಬೀಜ ವಿತರಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದ್ರು.

ಲೋಕೋಪಯೋಗಿ ರಸ್ತೆ ಸರಿಪಡಿಸಲು ಹೆಚ್ಚುವರಿ ಹಣ ಬೇಕೆಂದು ಜಿಲ್ಲಾಡಳಿತ ಕೇಳಿದೆ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ.ಮಳೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತೆ.ಜಿಲ್ಲೆಯ ಎಲ್ಲಾ ರೀತಿಯ ಮಳೆ ಹಾನಿ ಶಾಶ್ವತ ಪರಿಹಾರಕ್ಕೆ  329 ಕೋಟಿ ಬೇಡಿಕೆ ಬಂದಿದೆ.ಮೊದಲ ಹಂತದಲ್ಲಿ  100 ಕೋಟಿ ನೀಡಲಾಗುವುದು.ಮಳೆ ನಿಂತ ತಕ್ಷಣ ರಸ್ತೆ ಸರಿಪಡಿಸುವ ಕಾರ್ಯ ನಡೆಯಲಿದೆ ಎಂದ್ರು.

ಕೊಡಗು ಜಿಲ್ಲೆಯ ಜನತೆ ಅತಂಕಕ್ಕೊಳಗಾಗಬೇಕಿಲ್ಲ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಲಾಗುವುದು.ಸದ್ಯದಲ್ಲೇ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ವಿಶೇಷ ಸಭೆ ನಡೆಸಲಾಗುವುದು ಎಂದ್ರು.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ.! ಯಾರಿಗೆ ಯಾವ ಜಿಲ್ಲೆ ?

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಚುಕ್ಕಾಣಿ‌ ಹಿಡಿದಿರುವ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರ ಸಂಪುಟ ರಚನೆ ಸರ್ಕಸ್ ಮುಗಿದ ಬಳಿಕ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಗೊಳಿಸಿದೆ.ಜಿಲ್ಲೆಗಳ‌ ಉಸ್ತುವಾರಿಗೆ ಸಾಕಷ್ಟು ಲಾಭಿಗಳು ನಡೆದಿದ್ದು ಮೈಸೂರು‌ ಉಸ್ತುವಾರಿ ಪಡೆದುಕೊಳ್ಳುವಲ್ಲಿ ಕೊನೆಗೂ ಜಿಟಿ ದೇವೇಗೌಡ ಸಕ್ಸಸ್ ಆಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ:

ಮೈಸೂರು
ಜಿ.ಟಿ.ದೇವೆಗೌಡ

ಮಂಡ್ಯ
ಸಿ.ಎಸ್.ಪುಟ್ಟರಾಜು

ಹಾಸನ
ಹೆಚ್.ಡಿ.ರೇವಣ್ಣ

ತುಮಕೂರು
ಶ್ರೀನಿವಾಸ್ ( ಗುಬ್ಬಿ)

ಚಾಮರಾಜನಗರ ಪುಟ್ಟರಂಗಶೆಟ್ಟಿ

ಕೋಲಾರ
ಕೃಷ್ಣ ಬೈರೆಗೌಡ

ಚಿಕ್ಕಬಳ್ಳಾಪುರ
ಎನ್ ಹೆಚ್ ಶಿವಶಂಕರರೆಡ್ಡಿ

ಕೊಡಗು
ಕೆ.ಜೆ.ಜಾರ್ಜ್

ದಕ್ಷಿಣಕನ್ನಡ
ಯು.ಟಿ.ಖಾದರ್

ಉಡುಪಿ
ಡಾ.ಜಯಮಾಲಾ

ಶಿವಮೊಗ್ಗ
ಡಿ.ಸಿ.ತಮ್ಮಣ್ಣ

ಚಿಕ್ಕಮಗಳೂರು
ಸಾ.ರಾ.ಮಹೇಶ್

ರಾಮನಗರ
ಡಿ.ಕೆ.ಶಿವಕುಮಾರ್

ಬಳ್ಳಾರಿ
ಡಿ.ಕೆ.ಶಿವಕುಮಾರ್

ದಾವಣಗೆರೆ
ಎನ್ ಮಹೇಶ್

ಬೆಂಗಳೂರು ಗ್ರಾಮಾಂತರ
ಜಮೀರ್ ಅಹ್ಮದ್ ಖಾನ್

ಬೆಂಗಳೂರು ನಗರ
ಡಾ.ಜಿ.ಪರಮೇಶ್ವರ

ಚಿತ್ರದುರ್ಗ
ವೆಂಕಟರಮಣಪ್ಪ

ಹಾವೇರಿ
ಆರ್.ಶಂಕರ್

ಧಾರವಾಡ
ರಮೇಶ್ ಜಾರಕಿಹೊಳಿ

ಬೆಳಗಾವಿ
ರಮೇಶ್ ಜಾರಕಿಹೊಳಿ

ಉತ್ತರಕನ್ನಡ
ಆರ್.ವಿ.ದೇಶಪಾಂಡೆ

ಗದಗ
ಕೃಷ್ಣ ಬೈರೆಗೌಡ

ಕೊಪ್ಪಳ
ಬಂಡೆಪ್ಪ ಖಾಶಂಪೂರ

ಕಲಬುರ್ಗಿ
ಪ್ರಿಯಾಂಕ ಖರ್ಗೆ

ಯಾದಗಿರಿ
ಪ್ರಿಯಾಂಕ ಖರ್ಗೆ

ರಾಯಚೂರು
ವೆಂಕಟರಾವ್ ನಾಡಗೌಡ

ಬಾಗಲಕೋಟ ಎಂ.ಸಿ.ಮನಗೂಳಿ

ವಿಜಯಪುರ
ಶಿವಾನಂದ ಪಾಟೀಲ್

ಬೀದರ
ರಾಜಶೇಖರ್ ಪಾಟೀಲ್ ಹುಮ್ನಾಬಾದ್