ಸಿಎಂ ಕಾರ್ಯಕ್ರಮಕ್ಕೆ ಹೆದ್ದಾರಿ ಬಂದ್: ಮದ್ದೂರು ಶ್ರೀರಂಗಪಟ್ಟಣ‌ ನಡುವೆ ಸಂಚಾರ ನಿಷೇಧ

ಮಂಡ್ಯ:ನಾಳೆ ಬೆಂಗಳೂರಿನಿಂದ ಮೈಸೂರು ಕಡೆ ಹೋಗೋ ಪ್ಲಾನ್ ಮಾಡಿದಿರಾ ಹಾಗಾದ್ರೆ ಮಂಡ್ಯ ಮಾರ್ಗವಾಗಿ ಹೋಗೋ ರೂಟ್ ಅನ್ನು ಬದಲು ಮಾಡಿಕೊಳ್ಳಿ ಇಲ್ಲಾಂದ್ರೆ ಪರದಾಡಬೇಕಾಗುತ್ತೆ.

ಸಕ್ಕರೆನಗರಿ ಮಂಡ್ಯದಲ್ಲಿ ನಾಳೆ ಸಿ.ಎಂ. ಕುಮಾರಸ್ವಾಮಿ ಕಾರ್ಯಕ್ರಮ ಹಿನ್ನೆಲೆ ಮಂಡ್ಯದ ಮೂಲಕ ಹಾದು ಹೋಗಿರೋ ರಾಷ್ಟ್ರೀಯ ಹೆದ್ದಾರಿ 275 ನಾಳೆ ಮಧ್ಯಾಹ್ನ 2ರಿಂದ ರಾತ್ರಿ 9 ರವರೆಗೆ ಬಂದ್ ಮಾಡಲಾಗುತ್ತಿದೆ.ಮೈಸೂರು ಬೆಂಗಳೂರು ಸಂಪರ್ಕ ಕಲ್ಪಿಸೋ ನಂ. 275 ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ದೂರಿನಿಂದ ಶ್ರೀರಂಗಪಟ್ಟಣದವರೆಗೂ ರಸ್ತೆ ಸಂಚಾರ ನಿಷೇಧಿಸಿ ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.

ಮಂಡ್ಯದಲ್ಲಿ ಸಿ.ಎಂ.‌ಕಾರ್ಯಕ್ರಮದಿಂದ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಳ್ಳೊ ಹಿನ್ನಲೆಯಲ್ಲಿ ನಿಷೇದ ಆದೇಶ ಹೊರಡಿಸಲಾಗಿದೆ.ಬೆಂಗಳೂರಿನಿಂದ ಮೈಸೂರಿಗೆ ತೆರಳೋ ವಾಹನಗಳಿಗೆ ಮತ್ತು ಮೈಸೂರಿನಿಂದ ಬೆಂಗಳೂರಿಗೆ ತೆರಳೋ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿದ್ದು,ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳೋ ವಾಹನಗಳು‌ ಮದ್ದೂರು ಟಿ.ಬಿ ವೃತ್ತದ ಮೂಲಕ ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ತೆರಳಬೇಕು,ಮೈಸೂರಿನಿಂದ ಬೆಂಗಳೂರಿಗೆ ತೆರಳೂ ವಾಹನಗಳು ಶ್ರೀರಂಗಪಟ್ಟಣದ ಕರಿಘಟ್ಟದ ಮೂಲಕ ಬನ್ನೂರು ಮಾರ್ಗವಾಗಿ ಬೆಂಗಳೂರಿಗೆ ತೆರಳಲು ಸೂಚನೆ ನೀಡಲಾಗಿದೆ.

ಮಂಡ್ಯ ನಗರದ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಿಲು ಆರ್.ಪಿ. ರಸ್ತೆಯಲ್ಲಿ ಏಕಮುಖ ಸಂಚಾರ ರದ್ದುಗೊಳಿಸಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ

ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಕಿರಣ್ ಮಜುಂದಾರ್ ಷಾ

ಬೆಂಗಳೂರು: ಮಹಾ ನಗರವನ್ನು ಮೇಲ್ದರ್ಜೆಗೇರಿಸಲು ಹಲವು ಸಲಹೆಗಳನ್ನು ಬಿಪ್ಯಾಕ್ ತಂಡದ ಕಿರಣ್ ಮಜುಂದಾರ್ ಷಾ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರಿಗೆ ನೀಡಿದರು.

ಗುರುವಾರ ವಿಧಾನಸೌಧದ ಕಚೇರಿಗೆ ಆಗಮಿಸಿದ ಬಿ ಪ್ಯಾಕ್ ತಂಡ ಪರಮೇಶ್ವರ್ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ಟ್ರಾಫಿಕ್,ಕಸ, ಅನಧಿಕೃತ ಕೇಬಲ್ ,ಸಾರಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗೆ ಪರಿಹಾರದ ಬಗ್ಗೆ ಚರ್ಚಿಸಿದ್ರು.
ಪ್ರತಿ ಕಾರ್ಯಕ್ರಮಕ್ಕೂ ಡೆಡ್‌ಲೈನ್ ನೀಡಿದರೆ ಎಲ್ಲ ಯೋಜನೆಗಳು ಸಮಯಕ್ಕೆ ಸರಿಯಾಗಿ ನಡೆಯಲಿವೆ. ಈಗಿರುವ ವ್ಯವಸ್ಥೆಯಿಂದ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದ್ದು, ಈ ಸಮಸ್ಯೆ ನೀಗಿಸಲು ಕ್ರಮಕ್ಕೆ ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ರಸ್ತೆ‌ನಿರ್ಮಾಣ, ರಸ್ತೆ ಗುಂಡಿ‌ಮುಚ್ಚುವ ಕೆಲಸಗಳು ಗಂಭೀರವಾಗಿ ನಡೆಯುತ್ತಿವೆ. ಡೆಂಡರ್‌ ಶ್ಯೂರ್ ಕಾರ್ಯಕ್ರಮ ಸಹ ಪ್ರಗತಿಯಲ್ಲಿ. ಈ ಎಲ್ಲ ಸಲಹೆಯನ್ನು ಪರಿಶೀಲಿಸಿ, ಬೆಂಗಳೂರಿನ ಟ್ರಾಫಿಕ್,ಕಸ, ರಸ್ತೆ ಸಮಸ್ಯೆ‌ ನೀಗಿಸೋಣ ಎಂದು ಭರವಸೆ ನೀಡಿದ್ರು.

ಮಹಿಳಾ ಸುರಕ್ಷತೆಯ ಜಾಹಿರಾತನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡಿ: ಡಿಸಿಎಂ ಡಾ.ಜಿ. ಪರಮೇಶ್ವರ್

ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಕಷ್ಟು ಕಾನೂನು ಹಾಗೂ ಕಾರ್ಯಕ್ರಮಗಳಿವೆ.‌ ಆದರೆ ಇದು ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. ಹೀಗಾಗಿ ಮಹಿಳಾ ಸುರಕ್ಷತೆಗೆ ಇರುವ ಕಾನೂನು , ಕಾರ್ಯಕ್ರಮ, ಸಹಾಯವಾಣಿ‌ ಎಲ್ಲವನ್ನೂ ಜಾಹಿರಾತು ಮೂಲಕ ಪರಿಣಾಮಕಾರಿಗೆ ತಲುಪುವ ರೀತಿ ಕ್ರಮ ವಹಿಸಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.

ವಿಧಾನಸೌಧ ಕಚೇರಿಯಲ್ಲಿ ಕರೆಯಲಾಗಿದ್ದ ಆ್ಯಪ್‌ ಆಧಾರಿತ ಟ್ಯಾಕ್ಸಿ ಕುರಿತ ಎರಡನೇ ಸಭೆಯಲ್ಲಿ ಪೊಲೀಸ್ ಕಮಿಷನರ್, ಡಿಜಿ ಹಾಗೂ ನಗರ ಸಂಚಾರ ಪೊಲೀಸ್ ಆಯುಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಮಹಿಳೆಯರ ಸುರಕ್ಷತೆ ಬಹಳ ಮುಖ್ಯ.ಯಾವುದೇ ಕಾರಣಕ್ಕೂ ಮಹಿಳೆ ಮೇಲೆ ದೌರ್ಜನ್ಯ ಸಂಭವಿಸಬಾರದು. ರಾತ್ರಿ ವೇಳೆ ತೆರಳುವ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಅಗತ್ಯವಿದೆ. ಇದಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ಕ್ರಮ ಕೈಗೊಳ್ಳಿ ಎಂದ್ರು.

ಮಹಿಳೆಯರ ಸುರಕ್ಷತೆಗೆ ಸಾಕಷ್ಟು ಕಾರ್ಯಕ್ರಮವಿದೆ. ಅದನ್ನು ಮಹಿಳೆಯರಿಗೆ ತಲುಪುವ ರೀತಿಯಲ್ಲಿ ಪರಿಣಾಮಕಾರಿ ಜಾಹಿರಾತು ಪ್ರಸಾರ ಮಾಡಿಸಿ. ನಿರ್ಭಯ ಯೋಜನೆಯಡಿ ಸಾಕಷ್ಟು ಅನುದಾನವಿದೆ. ಅದನ್ನು ಪಡೆದು ೫೦೦೦ ಸಿಸಿ ಕ್ಯಾಮರಾ, ೧ ಸಾವಿರ ದ್ವಿಚಕ್ರ ವಾಹನ, ಪೊಲೀಸ್ ವಾಹನ ಖರೀಸಿ, ಮಫ್ತಿ ಹೆಚ್ಚಿಸಿ ಮಹಿಳೆಯರಿಗೆ ಹೆಚ್ವಿನ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಸೂಚಿಸಿದರು. ಮುಂದೆಂದೂ ಈ ರೀತಿಯ ಪ್ರಕಟಣ ದಾಖಲಾಗದಂತೆ ಎಚ್ಚರ ವಹಿಸಿ ಎಂದು ಹೇಳಿದ್ರು.

ಬವೇರಿಯಾ ಪ್ರತಿನಿಧಿಯಿಂದ ಪೊಲೀಸ್‌ ಸಿಬ್ಬಂದಿಗೆ ತರಬೇತಿ

ಬೆಂಗಳೂರು:ಬವೇರಿಯಾ ಪ್ರತಿನಿಧಿಯಾದ ವೋಲ್ಕ್ ರ್‌ ಹಾಗೂ ಅವರ ತಂಡ ವಿಧಾನಸೌಧಕ್ಕೆ ಆಗಮಿಸಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಪೊಲೀಸ್ ಸಿಬ್ಬಂದಿಗೆ ತರಬೇತಿ ಕೊಡುವ ಕುರಿತ ಚರ್ಚಿಸಿದರು.

ಇದೇ ನವೆಂಬರ್ ತಿಂಗಳಲ್ಲಿ ಬೆಳಗಾವಿ ಭಾಗದಲ್ಲಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಮೈಸೂರಿನಲ್ಲಿ ತರಬೇತಿ ನೀಡಿದ್ದೆವು. ಅದೇ ಮಾದರಿಯಲ್ಲಿ ಈಗ ಬೆಳಗಾವಿನಲ್ಲಿ ತರಬೇತಿ ನೀಡಲಾಗುವುದು‌ ಎಂದು ಬವೇರಿಯಾ ಪ್ರತಿನಿಧಿ ವೋಲ್ಕ್ ರ್ ಹೇಳುದರು.

ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವುದು ಸ್ವಾಗತಾರ್ಹ. ಜತೆಗೆ, ಮಹಿಳಾ ಸುರಕ್ಷತೆಗೂ ಸಹ ನಿಮ್ಮ ತಂಡ ಕೊಡುಗೆ ನೀಡಬೇಕು. ಪೊಲೀಸ್ ಠಾಣೆ ಹೆಚ್ವಿಸುವುದು, ಪೊಲೀಸ್ ಫೋರ್ಸ್‌ನಲ್ಲಿ ಶೇ. ೨೦ ರಷ್ಟು ಫೋರ್ಸ್ ಮಹಿಳಾ ಪೊಲೀಸ್ ಇರುವಂಥೆ ತಯಾರು ಮಾಡಬೇಕಿದೆ. ಈ‌ ನಿಟ್ಟಿನಲ್ಲಿ ಯೋಜನೆ ರೂಪಿಸಿದರೆ ಒಳಿತು ಎಂದು ಸಲಹೆ‌ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಬವೇರಿಯಾ ತಂಡ, ಮುಂದಿನ ಬಾರಿ ಈ ಬಗ್ಗೆಯೂ ಪ್ರಸ್ತಾವನೆ ತರಲಿದ್ದೇವೆ ಎಂದರು.‌

ಸಕಲೇಶಪುರ ರಸ್ತೆ ಅಗಲೀಕರಣಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್!

ಬೆಂಗಳೂರು: ಬೆಂಗಳೂರು-ಮಂಗಳೂರು ಹೈವೆ ಅಗಲೀಕರಣ ವಿಚಾರಕ್ಕೆ ಸಂಬಂಧಿಸಿದಂತೆ

ಸಕಲೇಶಪುರ ನಗರ ರಸ್ತೆಯ ಪಕ್ಕದ‌ 40 ಅಡಿ ಕಟ್ಟಡಗಳ ತೆರವಿಗೆ ನೀಡಿದ್ದ ಎಸಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ರಸ್ತೆ ಅಗಲೀಕರಣ ಸಂಬಂಧ ಎಸಿ ನೀಡಿದ್ದ ಆದೇಶ ಪ್ರಶ್ನಿಸಿ ಹಲವರು ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರಿದ್ದ ಏಕ ಸದಸ್ಯ ಪೀಠ, ಬೈಪಾಸ್ ರಸ್ತೆಗೆ ಈಗಾಗಲೇ ನಕಾಶೆ ಸಿದ್ದವಾಗಿದ್ದು, ಬೈಪಾಸ್ ಯೋಜನೆ ಪ್ರಗತಿಯಲ್ಲಿರುವಾಗ ಬಿಎಂ ರಸ್ತೆ ಅಗಲೀಕರಣ ಸರಿಯಲ್ಲ ಎಂದು ಎಸಿ ಆದೇಶಕ್ಕೆ ತಡೆ ಕೋರಿದ್ದ ಅರ್ಜಿದಾರರ ಮನವಿ ಪುರಸ್ಕರಿಸಿ ನಗರದ ರಸ್ತೆ ಅಗಲೀಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸಕಲೇಶಪುರ ಎಸಿ ಕಚೇರಿ ಹಾಗೂ ಲೋಕೋಪಯೋಗಿ ಇಲಾಖೆ ನಿರ್ದೇಶನ ನೀಡಿದ್ದು ಈ ಮೂಲಕ ಎಸಿ ಕಛೇರಿ ಮತ್ತು ಲೋಕೋಪಯೋಗಿ ಇಲಾಖೆಗೆ ಭಾರಿ ಮುಖಭಂಗವಾಗಿದೆ.

ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಿರ್ಮಾಣ: ಇನ್‍ಫೋಸಿಸ್ ಪ್ರತಿಷ್ಠಾನದೊಂದಿಗೆ ಒಡಂಬಡಿಕೆಗೆ ಸಹಿ

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಕಾಮಗಾರಿ ಕೈಗೊಳ್ಳಲು ಇನ್‍ಫೋಸಿಸ್ ಪ್ರತಿಷ್ಠಾನ 200 ಕೋಟಿ ರೂ. ದೇಣಿಗೆ ನೀಡಲು ಮುಂದಾಗಿದ್ದು, ಈ ಕುರಿತು ಬೆಂಗಳೂರು ಮೆಟ್ರೋ ನಿಗಮ ನಿಯಮಿತದೊಂದಿಗೆ ಇಂದು ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು, ನಮ್ಮ ಮೆಟ್ರೋ ಬೆಂಗಳೂರಿಗೆ ಅತ್ಯಾವಶ್ಯಕವಾಗಿದೆ. ಮೊದಲ ಹಂತದಲ್ಲಿ 47 ಕಿ.ಮೀ ಕಾರ್ಯ ಪೂರೈಸಿದೆ. 2 ನೇ ಹಂತದ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಕಾರ್ಯದಲ್ಲಿ ಇನ್‍ಫೋಸಿಸ್ ಪ್ರತಿಷ್ಠಾನ ಕೈಜೋಡಿಸಿರುವುದು ಶ್ಲಾಘನೀಯ ಎಂದರು. ಕೋನಪ್ಪ ಅಗ್ರಹಾರದ ಮೆಟ್ರೋ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಮುಂದಿನ 30 ವರ್ಷಗಳ ಕಾಲ ಅದರ ನಿರ್ವಹಣೆಯನ್ನೂ ಮಾಡಲು ತೀರ್ಮಾನಿಸಿರುವುದು ಇನ್‍ಫೋಸಿಸ್ ಸಂಸ್ಥೆಯ ಅಧ್ಯಕ್ಷೆ ಡಾ: ಸುಧಾ ಮೂರ್ತಿಯವರ ಬದ್ಧತೆಯನ್ನು ತೋರುತ್ತದೆಯಲ್ಲದೆ ಈ ನೆಲದ ಬಗ್ಗೆ ಅವರಿಗಿರುವ ಅಭಿಮಾನವನ್ನೂ ಎತ್ತಿಹಿಡಿದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇನ್‍ಫೋಸಿಸ್ ಹಂತಹಂತವಾಗಿ ಬೆಳೆದು ರಾಜ್ಯದಿಂದ ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವ ಸಂಸ್ಥೆ. ಸಂಸ್ಥೆಯ ಲಾಭದ ಒಂದು ಭಾಗವನ್ನು ರಾಜ್ಯದ ಕ್ಯಾನ್ಸರ್ ಸಂಸ್ಥೆ, ಶಿಕ್ಷಣ ಕ್ಷೇತ್ರ ಮತ್ತು ಹಲವಾರು ಸಾಮಾಜಿಕ ಕಾರ್ಯಕ್ರಮಗಳಿಗೆ ಇನ್‍ಫೋಸಿಸ್ ಪ್ರತಿಷ್ಠಾನದ ಮೂಲಕ ಕೈಗೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಅವರ ಪಾಲು ದೊಡ್ಡದು. ಸರ್ಕಾರ ಇನ್‍ಫೋಸಿಸ್ ಪ್ರತಿಷ್ಠಾನದ ಕೊಡುಗೆಯ ಸದ್ಬಳಕೆ ಮಾಡಿಕೊಳ್ಳುತ್ತದೆ ಎಂದು ಭರವಸೆಯನ್ನಿತ್ತರು.

ಈ ಸಂದರ್ಭದಲ್ಲಿ ಮಾತನಾಡಿದ ಇನ್‍ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ, ರಾಜ್ಯದ ಅಭಿವೃದ್ಧಿಗೆ ಕೈಜೋಡಿಸುವುದು ಉಪಕಾರವಲ್ಲ ಬದಲಿಗೆ ನಮ್ಮ ತಾಯಿಗೆ ಮಾಡುವ ಕರ್ತವ್ಯ. ಬೆಂಗಳೂರಿನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮೆಟ್ರೋ ಮಹತ್ವದ ಪಾತ್ರ ವಹಿಸಿದೆ ಎಂದರು. ಜನರಿಗಾಗಿ ಮಾಡುವ ಕೆಲಸದಲ್ಲಿ ದೊರಕುವ ಆನಂದ ಮತ್ಯಾವುದರಲ್ಲಿಯೂ ದೊರಕುವುದಿಲ್ಲ. ವಿಶ್ವದ ಬಹುತೇಕ ನಗರಗಳಲ್ಲಿ ಸುತ್ತಾಡಿ ಬಂದರೂ ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರೀಯಸಿ ಎಂಬಂತೆ ತಾಯಿ ನಾಡು ಕರ್ನಾಟಕ ನಮಗೆ ಅತ್ಯಂತ ಪ್ರಿಯವಾದದು ಎಂದರು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾವು ಮಾಡುತ್ತಿರುವುದು ಅಳಿಲು ಸೇವೆ ಎಂದರು.

ಸಮಾರಂಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಬೆಂಗಳೂರು ಏಷ್ಯಾ ಖಂಡದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಓಡಾಡುವುದು ಒಂದು ಸವಾಲಾಗಿರುವ ಇಂದಿನ ದಿನಗಳಲ್ಲಿ ನಮ್ಮ ಮೆಟ್ರೋ ವರದಾನವಾಗಿದೆ ಎಂದರು. ಮೆಟ್ರೋ 2 ನೇ ಹಂತದ ಕಾಮಗಾರಿಯಲ್ಲಿ ಪಾಲುದಾರರಾಗಿರುವ ಇನ್‍ಫೋಸಿಸ್ ಪ್ರತಿಷ್ಠಾನವನ್ನು ಅವರು ಅಭಿನಂದಿಸಿದರು.