ಕ.ರಾ.ವೇ ಸ್ವಾಭಿಮಾನಿ ಬಣದ ಕೃಷ್ಣೇಗೌಡರಿಂದ 4 ಕೋಟಿ ರೂ.ಗಾಗಿ ಬ್ಲಾಕ್ ಮೇಲ್:ಎಂಇಪಿ ಗಂಭೀರ

ಬೆಂಗಳೂರು : ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ- ಎಂಇಪಿ ರಾಜ್ಯ ಕಚೇರಿಯನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸ್ವಯಂ ಘೋಷಿತ ಮುಖಂಡ ಕೃಷ್ಣೇಗೌಡ ಸುಮಾರು 4 ಕೋಟಿ ರೂಪಾಯಿಗಳಿಗಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಪಕ್ಷದ ರಾಜ್ಯ ವಕ್ತಾರ ಸಿರಾಜ್ ಜಾಫ್ರಿ ಹಾಗೂ ರಾಜ್ಯ ಯುವ ಘಟಕದ ಆಧ್ಯಕ್ಷ ಡಾ.ಎಂ.ಕೆ.ಪಾಶ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ಕೃಷ್ಣೇಗೌಡ ಪಕ್ಷದ ಹೆಸರಿಗೆ ಮಸಿಬಳಿಯಲು ಮಾಡುತ್ತಿರುವ ಷಡ್ಯಂತರವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಪಕ್ಷದ ಪ್ರಚಾರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಗುರು ಖಾಜಾ ಅವರಿಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ಸುಮಾರು ನಾಲ್ಕು ಕೋಟಿ ರೂಪಾಯಷ್ಟು ಭಾರಿ ಮೊತ್ತಕ್ಕೆ ಕೃಷ್ಞೇಗೌಡ ಬೇಡಿಕೆ ಇಟ್ಟಿರುವ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ಗಳನ್ನು ಒಳಗೊಂಡ ದಾಖಲೆಯನ್ನು ಈ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.

ಕೃಷ್ಣೇಗೌಡ ಪಕ್ಷದ ಅಭ್ಯರ್ಥಿಗಳ ಪೈಕಿ ಕೆಲವರನ್ನು ಎತ್ತಿ ಕಟ್ಟಿ ಬೆಂಗಳೂರಿನ ಶಿವಾಜಿ ನಗರದ ಇನ್ ಫೆಂಟ್ರಿ ರಸ್ತೆಯ ಜೆಮ್ ಪ್ಲಾಜಾದಲ್ಲಿರುವ ಕಚೇರಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಕಚೇರಿ ಸಿಬ್ಬಂದಿಗಳನ್ನು ಬೆದರಿಸಿ ಹೊರಗೆ ಅಟ್ಟಿದ್ದರು. ಕೃಷ್ಞೇಗೌಡನೊಂದಿಗೆ ಕೈಜೋಡಿಸಿ ಚುನಾವಣಾ ವೆಚ್ಚದ ಹಣಕ್ಕಾಗಿ ಒತ್ತಾಯಿಸುತ್ತಿದ್ದರು.

ಇದೇ ವೇಳೆ, ಪಕ್ಷದ ಕಚೇರಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಕೆಲವರು, ತಮಗೆ ದೂರವಾಣಿ ಮೂಲಕ ಕರೆ ಮಾಡಿ ಅಶ್ಲೀಲ ಪದಗಳಿಂದ ವಾಚಾಮಾಗೋಚರವಾಗಿ ನಿಂದಿಸಿ, ಮಾನಹಾನಿಯನ್ನುಂಟು ಮಾಡಿದ್ದರು. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ತಾವು ಎಫ್ ಐಆರ್ ದಾಖಲಿಸಿರುವುದಾಗಿ ಡಾ.ಪಾಶ ತಿಳಿಸಿದರು.
ಪಕ್ಷ ಯಾರಿಗೂ ಮೋಸ ಮಾಡಿಲ್ಲ
ಇದೇ ವೇಳೆ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿ.ಫಾರಂ ನೀಡುವಾಗ ಪಕ್ಷದ ಕೆಲ ಅಭ್ಯರ್ಥಿಗಳು ತಮ್ಮ ಇತಿಮಿತಿಯಲ್ಲಿ ತಮ್ಮ ಕೈಲಾದಷ್ಟು ದೇಣಿಗೆಯನ್ನು ಚೆಕ್ ರೂಪದಲ್ಲಿ ನೀಡಿದ್ದರು. ಅದನ್ನು ಪಕ್ಷ ಅವರಿಗೆ ವಾಪಸ್ ಕೊಟ್ಟಿದೆ. ಆದರೂ ಕೆಲವರು ದುರುದ್ದೇಶಪೂರ್ವಕವಾಗಿ ಪಕ್ಷದ ವಿರುದ್ಧ ವಂಚನೆ ಆರೋಪಹೊರೆಸಿ ಸುಳ್ಳು ಮೊಕದ್ದಮೆ ಹೂಡಿದ್ದಾರೆ ಎಂದು ಪಕ್ಷದ ರಾಜ್ಯ ವಕ್ತಾರ ಸಿರಾಜ್ ಜಾಫ್ರಿ ಹೇಳಿದ್ದರು. ಪಕ್ಷ ಯಾರಿಂದಲೂ ಬಲವಂತವಾಗಿ ಚೆಕ್ ಪಡೆದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪಕ್ಷದ ಕಚೇರಿಯಲ್ಲಿ ಅಕ್ರಮವಾಗಿ ಇನ್ನೂ ಬೀಡುಬಿಟ್ಟಿರುವ ಕೆಲ ಅಭ್ಯರ್ಥಿಗಳು ಕಚೇರಿಯಿಂದ ಹೊರಗೆ ಬರಲು ಸಿದ್ಧವಾಗಿದ್ದರೂ, ಕೃಷ್ಞೇಗೌಡ ಮತ್ತು ಪಠಾಲಂ ಅವರನ್ನು ಹೆದರಿಸಿ-ಬೆದರಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಾ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ನಮ್ಮ ತಾಳ್ಮೆಗೂ ಇತಿ-ಮಿತಿ ಇದೆ. ನಾವು ಇನ್ನು ಮುಂದೆ ಸುಮ್ಮನಿರುವುದಿಲ್ಲ ಹಣಕ್ಕಾಗಿ ಬ್ಲಾಕ್ ಮೇಲ್ ಮತ್ತು ಬೆದರಿಕೆ ತಂತ್ರಕ್ಕೆ ಇಳಿದಿರುವ ಕೃಷ್ಣೇಗೌಡ ಮತ್ತು ಪಠಾಲಂನ ಕಾನೂನು ಬಾಹಿರ ಕೆಲಸಗಳನ್ನು ಬಹಿರಂಗಪಡಿಸಿ ಅವರ ವಿರುದ್ದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಿ ತೀವ್ರ ಹೋರಾಟ ಮುಂದುವರಿಸುತ್ತೇವೆ ಎಂದು ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಕನ್ನಡ ರಕ್ಷಣ ವೇದಿಕೆ ಹೆಸರಿನಲ್ಲಿ ಒಬ್ಬ ಹೆಣ್ಣುಮಗಳ ವಿರುದ್ದ ತೊಡೆತಟ್ಟಿ, ಸಮರ ಸಾರಿ ಅವರಿಗೆ ಮಾನಸಿಕ ಹಿಂಸೆ ಕೊಡುತ್ತಿರುವುದು ಖಂಡನೀಯ, ಬದಲಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೃಷ್ನೇಗೌಡ ಹೋರಾಟ ಮಾಡಲಿ, ನಾವು ಅದಕ್ಕ ಸಾಥ್ ಕೊಡುತ್ತೇವೆ, ನಾವು ಕನ್ನಡಿಗರೇ ರಾಜಕೀಯದಲ್ಲಿ ಉದಯವಾಗುತ್ತಿರುವ ಹೊಸ ಪಕ್ಷ ಕತ್ತನ್ನು ಹಿಸುಕಿ ಎಂಇಪಿ ಬೆಳೆಯಲು ಬಿಡುವುದಿಲ್ಲ, ನಾಶ ಮಾಡುತ್ತೇವೆ ಎಂದು ಧಮ್ಕಿ ಹಾಕಲು ಅವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ದಲಿತ ಸಂಘಟನೆಯ ಮಹಿಳಾ ಅಧ್ಯಕ್ಷೆ ಪುಷ್ಫಲತಾ, ಅಂಬೇಡ್ಕರ್ ದಲಿತ ಸೇನಾ ನಾಯಕಿ ಶಶಿಕಲಾ, ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ, ಲೀಲು ಸನಾ, ಮುಖಂಡರಾದ ಜಿಲಾನಿ ಫಾತೀಮಾ, ಶರೀಫ್ ಮತ್ತಿತರರು ಹಾಜರಿದ್ದರು.

ನಗರದ ಅಭಿವೃದ್ಧಿಗೆ ಇತರೆ ಕಂಪನಿಗಳು ಸಿಎಸ್‌ಆರ್‌ ಫಂಡ್ ತೆಗೆದಿಡಲಿ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಇನ್‌ಫೋಸೆಸ್‌ ಕಂಪನಿ ಮಾದರಿಯಲ್ಲೇ ಇತರೆ ದೊಡ್ಡ ಕೈಗಾರಿಕೆಗಳು ತಮ್ಮ ಲಾಭದಲ್ಲಿ ಶೇ.2 ರಷ್ಟು ಹಣವನ್ನು ನಗರದ ಅಭಿವೃದ್ಧಿಗೆ ನೀಡುವ ಮೂಲಕ ಸಹಕಾರ ಕೊಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ‌ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೋಣಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ಮಾಣ ಹಾಗೂ ನಿರ್ವಹಣೆ ಮಾಡಲು ಬೆಂಗಳೂರು ಮೆಟ್ರೋ ಜೊತೆ ಇನ್‌ಫೋಸಿಸ್ ಫೌಂಡೇಷನ್ ಒಡಂಬಡಿಕೆಗೆ ಸಹಿ‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಧಾಮೂರ್ತಿ ಅವರು ಸರಕಾರದೊಂದಿಗೆ ಒಪ್ಪಂದಕ್ಕೆ ಮುಂದಾಗಿರುವ ಇವರ ನಡೆ ಇಡೀ ದೇಶಕ್ಕೆ ಮಾದರಿಯಾಗಲಿದೆ. ಬೆಂಗಳೂರು ಇಡೀ ದೇಶದಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ಜನದಟ್ಟಣೆ ಜತೆಗೆ ಟ್ರಾಫಿಕ್ ಸಮಸ್ಯೆಯಿಂದ ನಿತ್ಯ ಜನರು ಪರದಾಡುವಂತಾಗಿದೆ. ಈ ಸಮಸ್ಯೆ ನೀಗಿಸಲು ೨೦೦೬ರಲ್ಲಿ ಕುಮಾರಸ್ವಾಮಿ ಅವರು ಮೆಟ್ರೋಗೆ ಅಡಿಗಲ್ಲು ಹಾಕಿದರು. ಇದರ ಮೊದಲ ಹಂತದಲ್ಲಿ
ನಿತ್ಯ ಐದು ಲಕ್ಷ ಜನರು ಮೆಟ್ರೋದಲ್ಲಿ ಓಡಾಡುತ್ತಿದ್ದಾರೆ. ಎರಡನೇ ಹಂತ ಪೂರ್ಣಗೊಂಡರೆ ಸುಮಾರು ೩೦ ಲಕ್ಷ ಜನ ಓಡಾಡುವ ಅಂದಾಜು ಇದೆ. ಜನರು ನೆಮ್ಮದಿಯಿಂದ ಸಂಚಾರ ಮಾಡಬಹುದು ಮೆಟ್ರೋದ ಉದ್ದೇಶ ಎಂದು ಹೇಳಿದರು.

ನಗರದಲ್ಲಿ ದೊಡ್ಡ ಕೈಗಾರಿಕೆ, ಮಾಹಿತಿ ತಂತ್ರಜ್ಞಾನಗಳಿವೆ. ಇವರ ಲಾಭದಲ್ಲಿ ಸಿಎಸ್‌ಆರ್‌ ಫಂಡ್‌ನಲ್ಲಿ ಶೇ.೨ರಷ್ಟು ಹಣ ತೆಗೆದಿಡುವ ಕಾನೂನು ಇದೆ. ಟ್ರಸ್ಟ್, ದೊಡ್ಡ ಕಂಪನಿಗಳು ಸರಕಾರದೊಂದಿಗೆ ಕೈ ಜೋಡಿಸಿದರೆ ಬೆಂಗಳೂರು ಹೆಚ್ಚು ಸುರಕ್ಷಿತ ಹಾಗೂ ಶಾಂತಿಯುತ ನಗರವಾಗಿ ನಿರ್ಮಾಣವಾಗಲಿದೆ.

ಐದು ವರ್ಷ ಪೂರೈಸಲಿದ್ದೇವೆ:

ಸಮ್ಮಿಶ್ರ ಸರಕಾರದ ಬಗ್ಗೆ ಕೆಲವರು ಏನೇನೋ ಹೇಳುತ್ತಾರೆ.‌ಆದರೆ ನಮ್ಮ ಸಮ್ಮಿಶ್ರ ಸರಕಾರ ಐದು ವರ್ಷ ಪೂರೈಕೆ ಮಾಡೇ ಮಾಡಲಿದೆ ಎಂದು ಹೇಳಿದರು.ಕರ್ನಾಟಕದ ದೃಷ್ಟಿಯಿಂದ ಒಳ್ಳೆ ಆಡಳಿತ ನೀಡಬೇಕು , ರಾಷ್ಟ್ರದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಲು ಮೈತ್ರಿ ಸರಕಾರ ರಚನೆಯಾಗಿದೆ. ಹೀಗಾಗಿ ಐದು ವರ್ಷ ಪೂರೈಸಲಿದ್ದೇವೆ ಎಂದರು. ಕರ್ನಾಟಕವನ್ನು ಅಭಿವೃದ್ಧಿ ಮಾಡುವ ಕಲ್ಪನೆ ಮುಖ್ಯಮಂತ್ರಿ ಅವರಿಗಿದೆ. ಇದಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.

ತನಿಖೆಗೂ ಸಿದ್ಧ:
ಉಡುಪಿಯ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ವಿಷ ಪ್ರಾಸನ ಆಗಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಅಗತ್ಯ ಬಿದ್ದರೆ ಖಂಡಿತ ತನಿಖೆ ಮಾಡಿಸಲಾಗುವುದು.

ಉಡುಪಿಯ ಶಿರೂರು ಶ್ರೀ ವಿಧಿವಶ: ದೇವೇಗೌಡ ಸಂತಾಪ

ಉಡುಪಿ:ಶಿರೂರು ಮಠದ ಲಕ್ಷ್ಮೀವರ ತೀರ್ಥಶ್ರೀ ವಿಧಿ ವಶರಾಗಿದ್ದಾರೆ.ಕಳೆದ ಎರಡು ದಿನದಿಂದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು‌ ಚಿಕಿತ್ಸೆ ಫಲಕಾರಿಯಾಗದೆ ಇಂದು‌ ಇಹಲೋಕ ತ್ಯೆಜಿಸಿದ್ರು.

ಆಹಾರ ವ್ಯತ್ಯಯದಿಂದಾಗಿ ಅನಾರೋಗ್ಯಕ್ಕೆ ಸಿಲುಕಿದ ಶ್ರೀಗಳನ್ನು ಉಡುಪಿ ಜಿಲ್ಲೆ ಮಣಿಪಾಲ ನಗರದಲ್ಲಿರುವ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ತೀವ್ರ ನಿಗಾ ಘಟಕದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸ್ವಾಮಿಜಿ ವಿಧಿವಶರಾದ್ರು.

ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸಂತಾಪ ಸೂಚಿಸಿದ್ರು.ಶ್ರೀಗಳ ಅಗಲಿಕೆ ಸುದ್ದಿ ಕೇಳಿ ತೀವ್ರ ನೋವುಂಟಾಗಿದೆ .ಸ್ವಾಮೀಜಿಗಳ ಅಗಲಿಕೆಯಿಂದ ಇಡೀ ಭಕ್ತ ಸಮೂಹಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ.ಶ್ರೀ ಗಳು ನಮಗೆಲ್ಲ ಮಾರ್ಗದರ್ಶಕರಾಗಿದ್ದರು.ಶಿರೂರು ಶ್ರೀಗಳು ಅತ್ಯಂತ ಕಿರಿಯ ವಯಸ್ಸಿನಲ್ಲೇ ಸನ್ಯಾಸತ್ವವನ್ನು ತೆಗೆದುಕೊಂಡವರು.ಶ್ರೀಗಳಿಗೆ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಬಹಳ ಆಸಕ್ತಿ ಇತ್ತು.ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವಲ್ಲಿ ಶ್ರೀಗಳು ಮಾರ್ಗದರ್ಶಕರಾಗಿದ್ದರು.ಭಗವಂತ ಇಡಿ ಭಕ್ತ ಸಮೂಹಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಸಂತಾಪ ಸಂದೇಶದ ಮೂಲಕ ಕೋರಿದ್ರು.

ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಲು ಎನ್‍ಡಿಎ  ಸನ್ನದ್ದ: ಅನಂತಕುಮಾರ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಅವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಯನ್ನು ಸಮರ್ಥವಾಗಿ ಎದುರಿಸಲಿದೆ ಎಂದು‌ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಹೇಳಿದ್ದಾರೆ.

ಮುಂಗಾರು ಅಧಿವೇಶನದ ಮೊದಲ ದಿನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎನ್ ಡಿ ಎಪಕ್ಷಗಳು ಒಗ್ಗಟ್ಟಾಗಿದ್ದು, ನಾವೆಲ್ಲರೂ ಅವಿಶ್ವಾಸಗೊತ್ತುವಳಿಯನ್ನು ಎದುರಿಸಲು ಸಜ್ಜಾಗಿದ್ದೇವೆ,  ಅಲ್ಲದೆ, ಎನ್ ಡಿಎ ಹೊರತುಪಡಿಸಿ ಇನ್ನುಳಿದ ಪಕ್ಷಗಳ ಬೆಂಬಲವನ್ನೂಪಡೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಜೆಟ್ ಅಧಿವೇಶನದ ವೇಳೆ ಅವಿಶ್ವಾಸ ಗೊತ್ತುವಳಿಯನ್ನು  ಏಕೆ ಸ್ವೀಕರಿಸಿರಲಿಲ್ಲಾ ಎನ್ನುವ ಪ್ರಶ್ನೆಗೆ  ಉತ್ತರಿಸಿದ ಸಚಿವರು, ಅವಿಶ್ವಾಸ ಗೊತ್ತುವಳಿಯನ್ನು ಸ್ವೀಕರಿಸುವ ಮೊದಲ
ಮಾನದಂಡ ಸದನ ಸಮರ್ಪಕವಾಗಿ ನಡೆಯುವುದು.ಆದರೆ  ಕಳೆದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಸದನ ಸರಿಯಾಗಿ  ನಡೆಯಲು ಬಿಡಲಿಲ್ಲ ಈ ಹಿನ್ನಲೆಯಲ್ಲಿ  ಕಳೆದ ಬಾರಿಯ  ಅಧಿವೇಶನದಲ್ಲಿ ಈ ಗೊತ್ತುವಳಿಯನ್ನು ಸಭಾಧ್ಯಕ್ಷರು  ಸ್ವೀಕರಿಸಿರಲಿಲ್ಲ ಬಿಜೆಪಿ ನೇತೃತ್ವದ ಎನ್ ಡಿಎ ಕಳೆದ  ಬಾರಿಯೂ ಈ ಪರೀಕ್ಷೆಗೆಸಿದ್ದವಾಗಿತ್ತು, ಈ ಬಾರಿಯೂ ಈ  ಗೊತ್ತುವಳಿಯನ್ನು ಸಮರ್ಥವಾಗಿ ಎದುರಿಸಲಿದೆ  ಎಂದು ಉತ್ತರಿಸಿದರು.

ಅತಿ ಹೆಚ್ಚು ಮತಗಳಿಂದ ಈ ಅವಿಶ್ವಾಸ ಗೊತ್ತುವಳಿಯನ್ನು ಸೋಲಿಸುವ ಮೂಲಕ ಪ್ರತಿಪಕ್ಷಗಳಿಗೆ ಸರಿಯಾದ ಉತ್ತರ ನೀಡಲಿದ್ದೇವೆ ಎಂದರು.

ರಾಜ್ಯಸಭೆಯ ಉಪಸಭಾಪತಿ ಸ್ಥಾನದ ಚುನಾವಣೆಯ
ದಿನಾಂಕ ಹಾಗೂ ಸಮಯವನ್ನು ನಿರ್ಧರಿಸುವುದು  ರಾಜ್ಯಸಭೆಯ ಸಭಾಪತಿ ಅವರ ನಿರ್ಧಾರಕ್ಕೆ ಬಿಟ್ಟಿದ್ದು,  ಅವರು ಸರಿಯಾದ ಸಮಯದಲ್ಲಿ ಈ ನಿರ್ಣಯವನ್ನು  ಕೈಗೊಳ್ಳಲಿದ್ದಾರೆ ಎಂದರು.

ಕಸ ವಿಲೇವಾರಿ ಯೋಜನೆಯಲ್ಲಿ ಕೋಟಿ ಕೋಟಿ ಗುಳುಂ: ಸಚಿವ ಜಾರ್ಜ್ ರಾಜೀನಾಮೆಗೆ ಎನ್.ಆರ್ ರಮೇಶ್ ಆಗ್ರಹ

ಬೆಂಗಳೂರು: ಸಿಲಿಕಾನ್ ಸಿಟಿಯ ಕಸದ ಸಮಸ್ಯೆ ನಿವಾರಣೆ ಯೋಜನೆ ನೆಪದಲ್ಲಿ 40ಕೋಟಿ ತೆರಿಗೆ ಹಣ ಗುಳಂ ಮಾಡಲಾಗಿದ್ದು ಕೋಟಿ‌ ಕೋಟಿ‌ ರೂ.ಗಳ ಹಗರಣದ ರುವಾರಿ ಸಚವ ಕೆ.ಜೆ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್, ಹೈಟೆಕ್ ಬೆಂಗಳೂರು ,ಗಾರ್ಡನ್ ಸಿಟಿ ಬೆಂಗಳೂರು ಖ್ಯಾತಿ ಪಡೆದ ಬೆಂಗಳೂರಿಗೆ ಗಾರ್ಬೇಜ್ ಸಮಸ್ಯೆ ಬಂದಾಗ ಕಸದ ಸಮಸ್ಯೆ ನಿವಾರಣೆಗೆ ಹಲವಾರು ಯೋಜನೆಗಳನ್ನು ರೂಪಿಸಲಾಯಿತು .ಅದರೂ ಕಸದ ಸಮಸ್ಯೆಗೆ ಪರಿಹಾರ ಸಿಗದೇ ಬೆಂಗಳೂರು ಗಾರ್ಬೇಜ್ ಸಿಟಿ ಎಂದು ಕುಖ್ಯಾತಿ ಪಡೆಯಿತು.ಯೋಜನೆ ಸಮರ್ಪಕವಾಗಿ ಜಾರಿಗೆ ತರದೇ ಭಷ್ಟಾಚಾರ ಹಗರಣಗಳ ಕೂಪವಾದರೆ ಇನ್ನು ಕಸದ ಸಮಸ್ಯೆ ನಿವಾರಣೆ ಸಾಧ್ಯವೆ ಎಂದು ಪ್ರಶ್ನಿಸಿದರು.

ಬೆಂಗಳೂರು ಸುಂದರವಾಗಿ ಕಾಣಲು ನೆಲದಡಿಯ ಕಸದ ಡಬ್ಬಗಳನ್ನು 200ಕ್ಕೂ ಹೆಚ್ಚು ಕಡೆ ಸ್ಥಾಪಿಸಲು ರಾಜ್ಯ ಸರ್ಕಾರವು ಕೌನ್ನಿಲ್ ಸಭೆಗೆ ತರದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿತ್ತು .ನೆಲದಡಿಯ ಕಸದ ಡಬ್ಬ ಸ್ಥಾಪನೆ ನಿರ್ಮಾಣದಲ್ಲಿ ಪ್ರಥಮ ಹಂತದಿಂದ ಭಷ್ಟಚಾರ ,ಅಧಿಕಾರ ದುರುಪಯೋಗ ಮಾಡಿಕೊಂಡು ಕಾನೂನು ಗಾಳಿಗೆ ತೂರಿ ಟೆಂಡರ್ ನೀಡಲಾಯಿತು.ಜೋನಾಟ ಇನ್ಪೋಟೆಕ್ ಪೈ ಲಿಮಿಟೆಡ್ ಕಂಪನಿಗೆ ಯಾವುದೇ ಆರ್ಹತೆ ಇಲ್ಲದೆ ಇದ್ದರು ಟೆಂಡರ್ ನೀಡಲಾಯಿತು .ಆಯಾ ಸ್ಥಳಕ್ಕೆ ಅನುಗುಣವಾಗಿ 2.5ಹಾಗೂ 1.5ಕ್ಯೂಬಿಕ್ ಮೀಟರ್ ಸಾಮರ್ಥದ ಬಿನ್ ಕಸದ ಡಬ್ಬಗಳನ್ನು ಆಳವಡಿಸಲು ಕ್ರಮ ಕೈಗೊಳ್ಳಲಾಯಿತು. ಉತ್ತಮ ಗುಣಮಟ್ಟದ ಡಬ್ಬಗಳು 50000ಸಾವಿರಕ್ಕೆ ಲಭ್ಯವಿದೆ ,ಅದರೆ ಆರು ಲಕ್ಷ ರೂಪಾಯಿಗಳ ನೀಡಿ ಖರೀದಿಸಲಾಗಿದೆ.400ಪರಿಚರರು ನೇಮಿಸಲಾಗಿದೆ ಸುಳ್ಳು ದಾಖಲೆ ನೀಡಲಾಗಿದೆ ಹಾಗೂ 8 ಲಾರಿ ವಿತ್ ಕ್ರೆನ್ ಸೌಲಭ್ಯದೊಂದಿದೆ ಕಸದ ಡಬ್ಬಗಳ ವಿಲೇವಾರಿ ಮಾಡಲು ಇದೆ ಎಂದು ಪುಸ್ತಕ ದಾಖಲೆಯಲ್ಲಿ ಮಾತ್ರ ಇದೆ .ಎರಡು ಲಾರಿಗಳು ಮಾತ್ರ ಚಾಲನೆಯಲ್ಲಿ ಇದೆ ಎಂದು ಗಂಭೀರ ಆರೋಪ ಮಾಡಿದ್ರು.

ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಈ ಯೋಜನೆಗೆ ಅನುಮತಿ ನೀಡಲಾಗಿದೆ .ಈ ಹಗರಣ ರೂವಾರಿ ಸಚಿವ ಕೆ.ಜ್.ಜಾರ್ಜ್. ಕೊಡಲೆ ಅವರು ರಾಜೀನಾಮೆ ನೀಡಬೇಕು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ,ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಲೋಕಯುಕ್ತ ,ಎ.ಸಿ.ಬಿ.ಯಲ್ಲಿ ಹಗರಣದ ಬಗ್ಗೆ ದೂರು ನೀಡಲಾಗಿದೆ ಎಂದ್ರು.

ಪಕ್ಷಭೇದ ಮರೆತು ಕಾವೇರಿಗಾಗಿ ಒಗ್ಗೂಡಬೇಕು ಸರ್ವಪಕ್ಷ ಸಭೆಯಲ್ಲಿ ಸಿಎಂ ಮನವಿ

ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ವಿಚಾರದಿಂದ ರಾಜ್ಯಕ್ಕೆ ಕ್ಲಿಷ್ಠ ಪರಿಸ್ಥಿತಿ ಒದಗಿದೆ. ಈ ಬಗ್ಗೆ ಎಲ್ಲರೂ ಒಗ್ಗೂಡಿ ಪಕ್ಷಭೇದ ಮರೆತು ಒಗ್ಗಟ್ಟಿನ ಕಾವೇರಿ ವಿಚಾರವಾಗಿ ನಮ್ಮ ಬಲವನ್ನು ತೋರಿಸಬೇಕು ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.

ಕಾವೇರಿ ನದಿ ನೀರು ವಿಚಾರ ಸೇರಿದಂತೆ ರಾಜ್ಯದ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಸಭೆ ಕರೆದಿದ್ದರು. ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರುಗಳಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ ಹಾಗೂ ಅನಂತಕುಮಾರ್ ಹೆಗಡೆ, ಹಿರಿಯ ಸಂಸದರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸೇರಿದಂತೆ ಕರ್ನಾಟಕದ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.

ಸಭೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯದ ನೆಲ-ಜಲ, ಸಂಪನ್ಮೂಲಗಳ ರಕ್ಷಣೆಯ ವಿಚಾರದಲ್ಲಿ ರಾಜ್ಯದ ಸಂಸದರು ಪಕ್ಷ ಭೇದ ಮರೆತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕೈಜೋಡಿಸಿದ್ದನ್ನು ಸ್ಮರಿಸಿದರು. ಅಲ್ಲದೆ, ಈಗ ಕಾವೇರಿ ನಿರ್ವಹಣಾ ಮಂಡಳಿ ವಿಚಾರದಿಂದ ರಾಜ್ಯವು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಹಕ್ಕಿನ ನೀರನ್ನು ನಾವು ನ್ಯಾಯಯುತವಾಗಿ ಪಡೆದುಕೊಳ್ಳುವ ದಿಶೆಯಲ್ಲಿ ಎಲ್ಲರೂ ಒಗ್ಗೂಡಿ ಧ್ವನಿ ಎತ್ತುವಂತೆ ಮುಖ್ಯಮಂತ್ರಿಗಳು ಸಂಸದರಲ್ಲಿ ಮನವಿ ಮಾಡಿದರು.

ಸಂಸತ್ ಅಧಿವೇಶನದ ಸಮಯದಲ್ಲಿ ರಾಜ್ಯದ ಎಲ್ಲಾ ಸಂಸದರ ಸಭೆ ನಡೆಸಿ, ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ರಾಜ್ಯದ ಪ್ರಸ್ತಾವನೆಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳುವುದು ಒಂದು ಸಂಪ್ರದಾಯವಾಗಿ ನಡೆದು ಬಂದಿದೆ‌. ಈ ಹಿನ್ನೆಲೆಯಲ್ಲಿ ಇಂದಿನ ಈ ಸಭೆ ಕರೆಯಲಾಗಿದೆ ಎಂದು ಸಭೆಯ ಆರಂಭದಲ್ಲಿ ಮುಖ್ಯಮಂತ್ರಿಗಳು ಸಭೆಗೆ ಮನವರಿಕೆ ಮಾಡಿಕೊಟ್ಟರು.

ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಮೈತ್ರಿ ಸರ್ಕಾರ ತನ್ನ ಚೊಚ್ಚಲ ಬಜೆಟ್ ಗೆ ಅಧಿವೇಶನದಲ್ಲಿ ಅನುಮೋದನೆಯನ್ನು ಪಡೆದುಕೊಂಡಿದೆ. ಹಿಂದಿನ ಜನಪರ ಯೋಜನೆಗಳನ್ನು ಮುಂದುವರೆಸುವುದರ ಜೊತೆಗೆ, ಮತ್ತಷ್ಟು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಎಲ್ಲಾ ಜನಪರ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲದ ಕ್ರೂಡೀಕರಣಕ್ಕಾಗಿ ರಾಜ್ಯದ ಪ್ರಸ್ತಾವನೆಗಳ ಶೀಘ್ರ ವಿಲೇವಾರಿಯ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೇಂದ್ರದಲ್ಲಿ ಬಾಕಿ ಉಳಿದಿರುವ ವಿಷಯಗಳು ಮತ್ತು ಯೋಜನೆಗಳ ಬಗ್ಗೆ ಕೇಂದ್ರದ ಗಮನ ಸೆಳೆಯುವಂತೆ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರುಗಳಿಗೆ ಕುಮಾರಸ್ವಾಮಿ ಅವರು ಮನವಿ ಮಾಡಿದರು.

ರಾಜ್ಯದಲ್ಲಿ ರೈತರ ಪರಿಸ್ಥಿತಿ, ಪ್ರಕೃತಿ ವಿಕೋಪ ಪರಿಹಾರ, ರೈತರ ಸಾಲ ಮನ್ನಾ, ನೀರಾವರಿ ಯೋಜನೆಗಳು, ಕಾವೇರಿ-ಕೃಷ್ಣ ನದಿ ವಿವಾದ ಹೀಗೆ ಹತ್ತು ಹಲವು ವಿಷಯಗಳ ಮೇಲೆ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಯಬೇಕಿದೆ. ಈ ದಿಸೆಯಲ್ಲಿ ಸಂಸದರ ಸಹಾಯ, ಸಹಕಾರ ಹಾಗೂ ಮಾರ್ಗದರ್ಶನವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೋರಿದರು.