ಸೆಲ್ಫಿ ಕ್ರೇಜ್ ಗೆ ಹೇಮಾವತಿ ನದಿಯಲ್ಲಿ ಕೊಚ್ಚಿಹೋದ ಯುವಕ

ಮಂಡ್ಯ: ಪ್ರವಾಹದ ಸೆಲ್ಫಿ ತೆಗೆದುಕೊಳ್ಳಲು‌ ಹೋಗಿ ಯುವಕನೊಬ್ಬ ನೀರು ಪಾಲಾದ ಘಟನೆ ಹರಿಹರಪುರ ಗ್ರಾಮದ ಸಮೀಪದಲ್ಲಿರುವ ಹೇಮಾವತಿ ನದಿ ಸೇತುವೆ ಬಳಿ ನಡೆದಿದೆ.

ಮಂಡ್ಯ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದ ಶಿವು(30)ನೀರು ಪಾಲಾದ ಯುವಕ.ಉಕ್ಕಿ ಹರಿಯುತ್ತಿದ್ದ ಹೇಮಾವತಿ ನದಿಯ ಪ್ರವಾಹವನ್ನು ಸೇತುವೆ ಮೇಲೆ ನಿಂತು ಮೊಬೈಲ್ ನಲ್ಲಿ ಸೆಲ್ಫಿ ತೆಗೆಯಲು ಹೋಗಿದ್ದಾ ದುರ್ಘಟನೆ ಸಂಭವಿಸಿದೆ. ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ.

ಯುವಕ ನದಿ ನೀರಿನಲ್ಲಿ ಕೋಚ್ಚಿ‌ ಹೋಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಯುವಕ ಈಜುವ ಪ್ರಯತ್ನ ನಡೆಸಿದರೂ ನೀರು ಹರಿವ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ, ಕಣ್ಣೆದುರೇ ತಮ್ಮೂರಿನ ಯುವಕ ನೀರು ಪಾಲಾಗುತ್ತಿದ್ದರೂ ಯಾವ ಸಹಾಯವನ್ನೂ ಮಾಡಲಾಗಿದೆ ಸ್ಥಳೀಯುರು ಮೂಖ ಪ್ರೇಕ್ಷಕರಾಗಬೇಕಾಯ್ತು.

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭಿಸಲಾಗಿದೆ.ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ವಪಕ್ಷಗಳ ಸಭೆ ಸಕಾರಾತ್ಮಕ: ಅನಂತಕುಮಾರ್

ನವದೆಹಲಿ: ನಾಳೆಯಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನ ಸಮರ್ಪಕವಾಗಿ ನಡೆಯಲು ಸಹಕರಿಸುವುದಾಗಿ ಪ್ರತಿಪಕ್ಷಗಳ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದ್ದಾರೆ.

ನವದೆಹಲಿಯ ಸಂಸತ್ ಭವನ ನಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಮುಂಗಾರು ಅಧಿವೇಶನ ಸರಿಯಾಗಿ ನಡೆಯಲು ಸಹಕರಿಸುವಂತೆ ಪ್ರಧಾನಿ ಪ್ರತಿಪಕ್ಷಗಳ ನಾಯಕರನ್ನು ಕೇಳಿದರು. ಪ್ರತಿಪಕ್ಷಗಳು ಯಾವುದೇ ವಿಷಯಗಳನ್ನು ಮಂಡಿಸಬಹುದಾಗಿದೆ. ಇದಕ್ಕೆ ಸಮರ್ಪಕವಾಗಿ ಉತ್ತರಿಸಲು ಕೇಂದ್ರ ಸರಕಾರ ಸಿದ್ದವಿದೆ ಎಂದು ಸಚಿವರು ತಿಳಿಸಿದರು.

ಸಂಸತ್ ಅಧಿವೇಶನ ಸರಿಯಾಗಿ ನಡೆಯಲಿ ಎಂದು ಜನರು ಆಶಿಸುತ್ತಾರೆ. ಇದನ್ನು ಜನಪ್ರತಿನಿಧಿಗಳಾದ ನಾವು ಖಚಿತಪಡಿಸಬೇಕಾಗಿದೆ.ಈ ಬಾರಿಯ ಅಧಿವೇಶನದಲ್ಲಿ ಹಲವಾರು ಮಹತ್ವದ ಶಾಸನಾತ್ಮಕ ಅಂಶಗಳನ್ನು ಚರ್ಚೆಗೆ ಕೇಂದ್ರ ಸರಕಾರ ತರಲು ಯೋಜಿಸಿದೆ. ಈ ನಿಟ್ಟಿನಲ್ಲಿ ಈ ಮಳೆಗಾಲದ ಅಧಿವೇಶನ ಸಮರ್ಪಕವಾಗಿ ನಡೆಯಲು ಪ್ರತಿಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಲೋಕಸಭೆಯಿಂದ ಅಂಗೀಕೃತವಾಗಿ, ರಾಜ್ಯ ಸಭೆಯಲ್ಲಿ ಚರ್ಚೆಯಾಗಬೇಕಾಗಿರುವ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಳಲ್ಲೊಂದಾಗಿರಲಿದೆ. ಅಲ್ಲದೆ, ಓಬಿಸಿ ರಾಷ್ಟ್ರಿಯ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆಯನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಲಾಗುವುದು. ಹಾಗೆಯೇ, ವೈದ್ಯಕೀಯ ಶಿಕ್ಷಣದ ರಾಷ್ಟ್ರೀಯ ಆಯೋಗ ಮಸೂದೆ ಹಾಗೂ ತೃತೀಯ ಲಿಂಗಿಗಳ ಮಸೂದೆಯನ್ನೂ ಮಂಡಿಸಲಾಗುವುದು ಎಂದರು.

ರಾಜ್ಯಸಭಾ ಉಪಸಭಾಪತಿ ಪಿ ಜೆ ಕುರಿಯನ್ ಅವರ ಅಧಿಕಾರಾವಧಿ ಕೊನೆಯಾಗುವುದರಿಂದ, ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೂ ಚುನಾವಣೆಯನ್ನು ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಎನ್ ಸಿ ಪಿ ಮುಖಂಡ ಶರದ್ ಪವಾರ್, ಸಿಪಿಐ ಮುಖಂಡರಾದ ಡಿ ರಾಜ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು

ಸಂಸದರಿಗೆ ಐಫೋನ್ ಕೊಟ್ಟಿದ್ದು ನಾನೇ: ಡಿಕೆಶಿ

ಬೆಂಗಳೂರು: ರಾಜ್ಯದ ಸಂಸದರಿಗೆ ವೈಯಕ್ತಿಕವಾಗಿ ಐಫೋನ್ ಉಡುಗೊರೆ ನೀಡಿದ್ದೇನೆ,ಸರಕಾರಕ್ಕೂ ಐಫೋನ್ ಗಿಫ್ಟ್ ಗೂ ಯಾವುದೇ ಸಂಬಂಧವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬ್ಯಾಗ್ ಮಾತ್ರ ಸರಕಾರದಿಂದ ನಾವು ನೀಡಿದ್ದು, ಆಪಲ್ ಐ ಫೋನ್ ಅನ್ನು ನಾನೇ ವೈಯ್ಯಕ್ತಿಕವಾಗಿ ಕೊಟ್ಟಿದ್ದೇನೆ.ಒಳ್ಳೆಯ ಉದ್ದೇಶದಿಂದ ರಾಜ್ಯದ ಸಂಸದರಿಗೆ ಐಫೋನ್ ಮತ್ತು ಬ್ಯಾಗನ್ನು ನೀಡಿದ್ದೇವೆ. ಮಾಹಿತಿಗಳು ತ್ವರಿತವಾಗಿ ಸಂಸದರಿಗೆ ತಲುಪಲಿ ಎಂದು 50 ಸಾವಿರದ ಐ ಫೋನ್ ನೀಡಿದ್ದೇನೆ. ನಾನೇ ಐ ಫೋನ್ ನೀಡಿದ್ದೇನೆ. ಅದರಲ್ಲೇನು ತಪ್ಪಿದೆ ಎಂದು‌ ಗಿಫ್ಟ್ ನೀಡಿದ್ದನ್ನು ಸಮರ್ಥಿಸಿಕೊಂಡ್ರು.

ಒಳ್ಳೆಯ ಹೃದಯವಂತಿಕೆಯಿಂದ ಐಫೋನ್ ನೀಡಿದ್ದೇನೆ. ಕಾಮಲೆ ಕಣ್ಣಿಗೆ ಎಲ್ಲವೂ ಹಳದಿಯಂತೆ ಎಲ್ಲವೂ ತಪ್ಪಾಗಿ ಕಾಣಿಸುತ್ತದೆ.ಫೋನ್ ಗಿಫ್ಟ್ ಕೊಟ್ಟ ನಂತರ ಅದರಲ್ಲಿ ಕೆಲವರು ವಾಪಾಸು ಕೊಟ್ಟಿದ್ದಾರೆ. ಅದಕ್ಕೆ ನಾನು ಏನು ಮಾಡಲಿ? ಕಳೆದ ವರ್ಷವೂ ಐ ಫೋನ್ ಕೊಟ್ಟಿದ್ದೇನೆ. ಐ ಫೋನ್ ಪಡೆದ ಹಲವು ಬಿಜೆಪಿ ಸಂಸದರು ನನಗೆ ಕರೆ ಮಾಡಿ‌ ಕೃತಜ್ಞತೆ ಸಲ್ಲಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಹಣವಂತರು. ಹೀಗಾಗಿ‌ ಐಫೋನ್ ಗಿಪ್ಟ್ ಅನ್ನು ಮರಳಿಸಿದ್ದಾರೆ. ಬೇರೆಯವರು ಅವರಂತೆ ಶ್ರೀಮಂತರಿಲ್ಲ ಎಂದು ಸಚಿವ ಡಿಕೆಶಿ ಟಾಂಗ್ ನೀಡಿದ್ರು.

ಬಿಜೆಪಿಯವರೂ ಕೂಡ ದೆಹಲಿಗೆ ಹೋದಾಗ ಫೋನು,ವಾಚು ಗಿಫ್ಟ್ ನೀಡ್ತಾರೆ,ಅದರಂತೆ ನಾವು ನೀಡಿದ್ದರಲ್ಲಿ ತಪ್ಪೇನಿದೆ ಅಂತಾ ಸಮರ್ಥಿಸಿಕೊಂಡ್ರು.

ಅನ್ನಭಾಗ್ಯದಡಿ 7 ಕೆಜಿ ಅಕ್ಕಿ ವಿತರಣೆ: ಜಮೀರ್ ಅಹಮದ್

ಬೆಂಗಳೂರು:ಅನ್ನಭಾಗ್ಯ ಯೋಜನೆಯಡಿ ಈ ತಿಂಗಳು 7 ಕೆಜಿ ವಿತರಣೆ ಮಾಡಲಿದ್ದು,ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆಯಂತೆ ಮುಂದಿನ ತಿಂಗಳು‌ ಎಷ್ಟು‌ ಅಕ್ಕಿ ವಿತರಣೆ ಮಾಡಬೇಕು ಎಂದು ನಿರ್ಧರಿಸಲಾಗುತ್ತೆ ಅಂತಾ ಆಹಾರ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್,
ಅನ್ನಭಾಗ್ಯ‌ಯೋಜನೆಯಡಿ ನೀಡುವ 7 ಕೆಜಿ ಅಕ್ಕಿಯಲ್ಲಿ 2 ಕೆ.ಜಿ. ಅಕ್ಕಿ ಕಡಿತ ಮಾಡುವುದಾಗಿ ಸಿಎಂಎಲ್ಲೂ ಹೇಳಿಲ್ಲ ಸದನದಲ್ಲೂ ಉತ್ತರ ಕೊಡುವಾಗ ಅವರೇ ಹೇಳಿದ್ದಾರೆ ಈ ಭಾರಿಯೂ 7 ಕೆ.ಜಿ.ಅಕ್ಕಿ ನೀಡುತ್ತೇವೆ. ನನ್ನ ಕರೆದು 5 ಕೆ.ಜಿ.ಕೊಡಿ ಅಂತ ಎಲ್ಲೂ ಚರ್ಚಿಸಿಲ್ಲ ಇದರಿಂದ ಈ ತಿಂಗಳು 7ಕೆ.ಜಿ.ಮುಂದುವರಿಸುತ್ತೇವೆ ಅವರು ಕರೆದು 5 ಕೆ.ಜಿ.ಕೊಡಿ ಅಂದ್ರೆ ಅಷ್ಟೇ ನೀಡುತ್ತೇವೆ ಎಂದ್ರು.

ಅನ್ವರ್ ಮಾಣಿಪ್ಪಾಡಿ ವಕ್ಫ್ ಆಸ್ತಿ ವರದಿ ವಿಚಾರ ಸಂಬಂಧ ಹೇಳಿಕೆ ನೀಡಿದ ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್,ಈಗ ಕೇಸ್ ಕೋರ್ಟ್ ನಲ್ಲಿದೆ ನ್ಯಾಯಾಲಯದಲ್ಲಿ ತನಿಖೆ ಮುಂದುವರಿದಿದೆ ಕೋರ್ಟ್ ನಲ್ಲಿದ್ದಾಗ ಸಿಬಿಐಗೆ ಹೇಗೆ ಕೊಡೋಕೆ ಬರುತ್ತೆ ಬಿಜೆಪಿಯವರದ್ದೇ ಆಗ ಒಂದು ವರ್ಷ ಸರ್ಕಾರವಿತ್ತು ಸತ್ಯ ಇದ್ದಿದ್ದರೆ ಅವರು ಯಾಕೆ ಸುಮ್ಮನಾಗ್ತಿದ್ದರು
ಅವರೇ ಕ್ರಮ ಕೈಗೊಳ್ಳಬಹುದಿತ್ತಲ್ಲ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಕ್ಯಾಬಿನೆಟ್ ನಲ್ಲೂ ಅದೂ ವಜಾ ಆಗಿದೆ ಹೈಕೋರ್ಟ್ ನಲ್ಲೂ ಅದು ನಿಂತಿಲ್ಲ ಸದನದಲ್ಲೂ ಪ್ರಸ್ತಾಪವಾಗುತ್ತು,ಚರ್ಚೆಯನ್ನೇ ಮಾಡಲಿಲ್ಲ ಎಂದು
ಬಿಎಸ್ ವೈ ಆರೋಪಕ್ಕೆ ಟಾಂಗ್ ನೀಡಿದ್ರು.

ವಕ್ಫ್ ಆಸ್ತಿ ದೇವರ ಆಸ್ತಿ‌ಇದ್ದಂತೆ ಮುಜರಾಯಿ ದೇವಸ್ಥಾನದ ಆಸ್ತಿ ಕೂಡ ದೇವರಿದ್ದಂತೆ ಅದನ್ನ ತಿಂದವರು ಯಾರೂ ಉದ್ಧಾರವಾಗಿಲ್ಲ.ವಿಡ್ಸಂರ್ ಮ್ಯಾನರ್ ಹೊಟೇಲ್ ವಕ್ಫ್ ಆಸ್ತಿ 33 ವರ್ಷ ಲೀಸ್ ಗೆ ನೀಡಲಾಗಿತ್ತು ಲೀಸ್ ಅವಧಿ ಈಗ ಮುಗಿದುಹೋಗಿದೆ.ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಕೋರ್ಟ್ ನಲ್ಲಿ ಜಯ ಸಿಗುವ ವಿಶ್ವಾಸವಿದೆ ಅದೇಗೆ ಅವರಿಗೆ ಸೇರುತ್ತದೆ,ಸಮುದಾಯದ ಆಸ್ತಿ ಎಂದ್ರು.

ಸಿಎಂ ಕುಮಾರಸ್ವಾಮಿ ಕಣ್ಣೀರು ವಿಚಾರದ ಬಗ್ಗೆ ನಾನು ಏನೂ ಮಾತನಾಡಲ್ಲ ನನ್ನ ಇಲಾಖೆ ಬಗ್ಗೆ ಮಾತ್ರ ಕೇಳಿ
ನೋ ಕಮೆಂಟ್ಸ್ ..ನೋ ಕಮೆಂಟ್ಸ್ ಅಂದ್ರು ಜಮೀರ್.

ಭರ್ತಿಯಾಗುವತ್ತಾ ಆಲಮಟ್ಟಿ ಜಲಾಶಯ:ವಿದ್ಯುತ್ ಉತ್ಪಾದನೆಗೆ ನೀರು ಬಿಡುಗಡೆ

ವಿಜಯಪುರ:ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಿದ್ದು ವಿದ್ಯುತ್ ಉತ್ಪಾದನೆಗಾಗಿ ಆಲಮಟ್ಟಿಯಲ್ಲಿನ ಜಲವಿದ್ಯುತ್ ಘಟಕಕ್ಕೆ 37500 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಜಿಲ್ಲೆಯ ಆಲಮಟ್ಟಿ ಕೃಷ್ಣಾ ಜಲಾಶಯಕ್ಕೆ 1.42 ಲಕ್ಷ ಕ್ಯೂಸೆಕ್ಸ್ ನೀರಿನ ಒಳಹರಿವಿದ್ದು,123.081 ಟಿಎಂಸಿ ಗರಿಷ್ಠ ಜಲ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿಂದು 108 ಟಿಎಂಸಿ
ನೀರು ಸಂಗ್ರಹವಾಗಿದೆ.519 .60 ಮೀಟರ್, ಗರಿಷ್ಠ ಎತ್ತರವಿರುವ ಡ್ಯಾಮ್ ನಲ್ಲಿ ಇಂದು 518 .67
ಮೀಟರ್ ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದ ,
ಧಾಮ್, ಕನೇರ್, ಅಗ್ನಿ ನದಿ, ಕೊಯ್ನಾ, ಪಂಚ ಗಂಗಾ, ವೇದ ಗಂಗಾ, ದೂಧ ಗಂಗಾ, ಹಿರಣ್ಯ ಕೇಶಿ, ತುಳಸಿ, ರಾಧಾನಗರಿ, ಪಾಟ್ ಗಾಂವ್,ಅಲ್ಲದೆ, ಕರ್ನಾಟಕದ ರಾಜಾಪುರ ಬ್ಯಾರೇಜ್,
ಘಟ ಪ್ರಭಾ, ಹಿಪ್ಪರಗಿ ಬ್ಯಾರೇಜ್ ಗಳಿಂದ,ಅಲ್ಲದೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಅಧಿಕ ಗೊಂಡಿದೆ.

ಜಲಾಶಯದ 26 ಕ್ರಸ್ಟ್ ಗೇಟ್ ಗಳಲ್ಲಿ ಕೆಲವು ಗೇಟ್ ಗಳನ್ನು ತೆರೆದು 10151 ಕ್ಯೂಸೆಕ್ಸ್ ನೀರನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯಕ್ಕೆ ಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಗಾಗಿ ಕೆಪಿಸಿಎಲ್ ಗೆ 37500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಒಟ್ಟು 290 ಮೆಗಾವ್ಯಾಟ್ ಸಾಮರ್ಥ್ಯದ ಆಲಮಟ್ಟಿ ಕೆಪಿಸಿಎಲ್ ಘಟಕದಲ್ಲಿ ಸದ್ಯ 175 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ.

ಕೂಡಗಿಯ ಎನ್‌ಟಿಪಿಸಿ ಆಲಮಟ್ಟಿ ಎಡದಂಡೆ ಮತ್ತು ಬಲದಂಡ ಕಾಲುವೆಗಳಿಗೆ ಯಾವುದೇ ತರದ ನೀರನ್ನು ಡ್ಯಾಮ್ ನಿಂದ ಬಿಡಲಾಗುತ್ತಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

ನಾನು ಭಾವನಾತ್ಮಕ ವ್ಯಕ್ತಿ: ಕುಮಾರಸ್ವಾಮಿ

ನವದೆಹಲಿ:ಸರಕಾರದ ಮಟ್ಟದಲ್ಲಿ ನಾನು ನಿರ್ಧಾರ ಕೈಗೊಳ್ಳುವಾಗ ಎಷ್ಟು ಕಠಿಣವಾಗಿರುತ್ತೇನೆಯೋ, ಅದೇ ರೀತಿ ನೋವಿನ ಸಂದರ್ಭದಲ್ಲಿ ನಾನು ಅಷ್ಟೇ ಭಾವನಾತ್ಮಕವಾಗಿರುತ್ತೇನೆ. ಇದು ನನ್ನ ಸಹಜ ನಡವಳಿಕೆ. ರಾಜ್ಯದ ಜನತೆಯ ನೋವಿಗಾಗಿ ನಾನು ಬಹಿರಂಗವಾಗಿ ಕಣ್ಣೀರಿಡುತ್ತೇನೆ. ಅದು ನನ್ನಲ್ಲಿ ಮೂಡಿಬರುವ ಸಹಜ ಪ್ರಕ್ರಿಯೆ. ಅದಕ್ಕೆ ಯಾವುದೇ ‘ಬಣ್ಣ’ವಿರುವುದಿಲ್ಲ. ನನ್ನ ನಡವಳಿಕೆ ಕೂಡ ಕಣ್ಣೀರಿನಷ್ಟೇ ಪಾರದರ್ಶಕವಾಗಿರುತ್ತೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ದೆಹಲಿಯಲ್ಲಿ ನಡೆಸ ಖಾಸಗಿ ಸಮಾರಂಭದಲ್ಲಿ ಭಾವನಾತ್ಮಕವಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು,ನಾನು ನನ್ನ ಕುಟುಂಬದಂತಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸದಸ್ಯರೊಂದಿಗೆ ಚರ್ಚಿಸುವಾಗ ಭಾವನಾತ್ಮಕವಾಗಿದ್ದು ನಿಜ. ನಾನು, ನನ್ನವರೊಂದಿಗೆ ನನ್ನ ನೋವನ್ನು ಹಂಚಿಕೊಂಡಿದ್ದೇನೆ. ಕಣ್ಣೀರು ಹಾಕಿದ್ದು ನಿಜ. ಇದಕ್ಕಾಗಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದರು.

ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತ ಮಿಗಿಲಾಗಿ ನಾನೂ ಒಬ್ಬ ಮನುಷ್ಯ. ನನ್ನಲ್ಲಿಯೂ ಕೆಲವು ಹುಟ್ಟುಗುಣಗಳಿವೆ. ಅವುಗಳನ್ನು ಹೊರಹಾಕುವ ಸಂದರ್ಭದಲ್ಲಿ ಭಾವನಾತ್ಮಕವಾಗಿದ್ದು ನಿಜ. ಆದರೆ, ನಾನು ಸರಕಾರದ ಸಮಾರಂಭದಲ್ಲಿ ಇಲ್ಲವೆ ಸರಕಾರಿ ಸಭೆಗಳಲ್ಲಿ ಕಣ್ಣೀರು ಹಾಕಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅಂದಿನ ಸಭೆಯಲ್ಲಿ ಸುಮಾರು ಒಂದು ಗಂಟೆ ಮಾತನಾಡಿದ್ದೇನೆ. ಎಲ್ಲಿಯೂ ನಾನು, ಯಾವುದೇ ಪಕ್ಷ ನನಗೆ ತೊಂದರೆ ಇಲ್ಲವೆ ಕಿರುಕುಳ ನೀಡುತ್ತಿದೆ ಎಂದು ಹೇಳಿಕೊಂಡಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಸಾಲ ಮನ್ನಾ ಮಾಡಲು ಕಷ್ಟ ಪಟ್ಟಿದ್ದೇನೆ. ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದೇನೆ. ಆದರೂ ನನ್ನನ್ನು ಜನರು ಬೆಂಬಲಿಸುತ್ತಿಲ್ಲ. ಅವರಿಂದ ಪ್ರೋತ್ಸಾಹ ದೊರೆಯುತ್ತಿಲ್ಲ. ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ನೋವನ್ನು ವ್ಯಕ್ತ ಪಡಿಸುವಾಗ ಭಾವನಾತ್ಮಕವಾಗಿದ್ದು ನಿಜ ಆದರೆ, ಯಾವುದೇ ಪಕ್ಷದ ನೀಡುತ್ತಿರುವ ತೊಂದರೆಯನ್ನು ಸಹಿಸಿಕೊಳ್ಳದೇ, ನೋವನ್ನು ಈ ರೀತಿ ಹೊರಹಾಕಿದ್ದೇನೆ ಎಂದು ಹೇಳುವುದು ಅಸಮಂಜಸ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.