ಕುಮಾರಸ್ವಾಮಿಗೆ ಕಾಂಗ್ರೆಸ್ ವಿಷ ನೀಡಿಲ್ಲ,ಅಮೃತವನ್ನೇ ನೀಡಿದೆ: ಡಾ.ಸುಧಾಕರ್

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷ ವಿಷವನ್ನು ನೀಡಿಲ್ಲ,ಅಮೃತವನ್ನೇ ನೀಡಿದೆ,ಕಷ್ಟ ಸುಖ ಎರಡೂ ಪಕ್ಷ ಹಂಚಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕರ ಡಾ.ಸುಧಾಕರ್ ಹೇಳಿದ್ದಾರೆ.

ನಾನು ವಿಷವನ್ನೇ ಉಣ್ಣುತ್ತಿರುವ ವಿಷಕಂಠ ಎಂಬ ಸಿಎಂ ಹೇಳಿಕೆಗೆ ಕೈ ಶಾಸಕ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿ,
ಅವರಿಗೆ ಕಾಂಗ್ರೆಸ್ ಪಕ್ಷ ಅಮೃತವನ್ನೇ ಕೊಟ್ಟಿದೆ ಕುಮಾರಸ್ವಾಮಿಯವರಿಗೆ ವಿಷವನ್ನೇನು ಕೊಟ್ಟಿಲ್ಲ ಯಾರೂ ಕೂಡ ಊಹೆಮಾಡಿಕೊಳ್ಳಲು ಸಾಧ್ಯವಿಲ್ಲ 37 ಶಾಸಕರಿರುವ ಪಕ್ಷಕ್ಕೆ ನಾವು ಸಹಕಾರ ನೀಡಿದ್ದೇವೆ ನಮ್ಮ ಕಾರ್ಯಕ್ರಮ ಇಲ್ಲದಿದ್ದರೂ ನಾವು ಒಪ್ಪಿದ್ದೇವೆ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ ನಾವು 80,ಅವರು37 ಶಾಸಕರಿದ್ದೇವೆ ಎಂದ್ರು.

ಸಿಎಂ ಆರೂವರೆ ಕೋಟಿ ಜನರ ಕಣ್ಣೀರು ಒರೆಸಬೇಕು ಅದು ಬಿಟ್ಟು ನೀವೇ ಅಳುವುದು ಬೇಡ ನೀವೇ ಅತ್ತರೆ ನಿಮ್ಮ ಕಣ್ಣೀರು ಒರೆಸುವವರು ಯಾರು? ನಾವು ನಿಮ್ಮ‌ಹಿಂದೆ ಇದ್ದೇವೆ
ಕಷ್ಟ ಸುಖ ಇಬ್ಬರೂ ಹಂಚಿಕೊಳ್ಳೋಣ ನಮ್ಮ ಕಾರ್ಯಕ್ರಮ ನಿಮಗೂ ಕಿರ್ತಿ ತರುತ್ತೆ ಸಾಲಮನ್ನಾ ನಿಮಗೂ,ನಮಗೂ ಕೀರ್ತಿ ತರಲಿದೆ ಎಂದ್ರು.

ಸಚಿವ ಸ್ಥಾನ ಸಿಗದೆ ಅಸಮಾಧಾನ ವಿಚಾರ ಸಂಬಂಧ ಮಾತನಾಡಿದ ಸುಧಾಕರ್ ನಾನು ಅಧಿಕಾರ ಕೊಡಿ ಅಂತ ಕೇಳುವುದಕ್ಕೆ ಹೋಗಿಲ್ಲ ಅದಾಗೆ ಬಂದರೆ ನಾನೇನು ಸನ್ಯಾಸಿಯಲ್ಲವಲ್ಲ ಕೊಟ್ಟ ಕೆಲಸ ಸಮರ್ಥವಾಗಿ ನಿಭಾಯಿಸುತ್ತೇನೆ ಕೊಡದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದ್ರು.

ರಾಹುಲ್ ಗಾಂಧಿ ನಾಯಕತ್ವಕ್ಕೆ ಅಭ್ಯಂತರವಿಲ್ಲ: ಎಚ್.ಡಿ ದೇವೇಗೌಡ

ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವ ವಹಿಸುವುದಕ್ಕೆ ನನ್ನ ಅಭ್ಯಂತರವಿಲ್ಲ ಎನ್ನುವ ಮೂಲಕ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಕುರಿತು ಜೆಡಿ ಎಸ್ ವರಿಷ್ಠ ಎಚ್.ಡಿ ದೇವೇಗೌಡ ಸುಳಿವು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಮುಂದೆ ಬರುವ ಲೋಕಸಭಾ, ಜಿಲ್ಲಾ, ತಾಲೂಕು ಪಂಚಾಯತ ಚುನಾವಣೆಗೆ ಪಕ್ಷವನ್ನ ಚುರುಕು ಗೊಳಿಸಲು ಇವತ್ತು ಹುಬ್ಬಳ್ಳಿಗೆ ಬಂದಿದ್ದೆನೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ನಮ್ಮ ಪಕ್ಷಕ್ಕೆ ಸರಿಯಾದ ಫಲಿತಾಂಶ ಬಂದಿಲ್ಲ ಕುಮಾರಸ್ವಾಮಿ ಮುಖ್ಯಮಂತ್ರಿ ಇರುವುದರಿಂದ ಪಕ್ಷ ಸಂಘಟನೆ ಮಾಡಲು ಸಮಯ ಸಿಗುವುದಿಲ್ಲ ಇದರಿಂದ ನಾನು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದ್ರು.

ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ
ಎನ್‌ಡಿಎ ಹೊರತು ಪಡಿಸಿ ಎಲ್ಲಾ ಮುಖಂಡರು ಬೆಂಗಳೂರಿನಲ್ಲಿ ಸೇರಿದ್ದೆವು. ದೇಶದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಿಗೆ ಇದೆ ಇನ್ನೂ ಕೆಲವು ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಇವೆ. ಲೋಕಸಭಾ ಚುನಾವಣೆ ಮುಂಚೆ ಕೆಲವು ಪಕ್ಷಗಳು ಹೊಂದಾಣಿಕೆ ಆಗಬಹುದು ಚುನಾವಣಾ ನಂತರವೂ ಹೊಂದಾಣಿಕೆ ಆಗಬಹುದು.ನನಗೆ ನನ್ನ ಪಕ್ಷವನ್ನ ಉಳಿಸಿಕೊಳ್ಳವುದು ಮುಖ್ಯವಾಗಿದೆ ಎಂದ್ರು.

ಕಳೆದ ಚುನಾವಣೆಯಲ್ಲಿ ಕೆಲವು ಜಿಲ್ಲೆಯಲ್ಲಿ ಶೂನ್ಯ ಫಲಿತಾಂಶ ಬಂದಿದೆ ಇದರಿಂದ ಬಹಳ ನೋವಾಗಿದೆ.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಬೇಕಿದೆ.ನಮ್ಮ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಎಷ್ಟು ಸೀಟು ನಮಗೆ ಬರುತ್ತವೆ ಎಂಬುದು ಖಚಿತವಾಗಿಲ್ಲ ಜೊತೆಗೆ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ನನ್ನ ಅಭ್ಯಂತರವೇನೂ ಇಲ್ಲಾ.ಚುನಾವಣಾ ಸಮಯದಲ್ಲಿ ಅದು ನಿರ್ಧಾರವಾಗಲಿದೆ ಎಂದ್ರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ನನ್ನ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿದೆ.ಉತ್ತರ ಕರ್ನಾಟಕಕ್ಕೆ ಯಾವುದೇ ತಾರತಮ್ಯ ಆಗಿಲ್ಲ ಭಾಷಾವಾರು ಪ್ರಾಂತದ ನಂತರ ಉತ್ತರ ಕರ್ನಾಟಕಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಲೆಕ್ಕ ತರಿಸುತ್ತೇನೆ.1965 ರಿಂದ ಉತ್ತರ ಕರ್ನಾಟಕಕ್ಕೆ ಬಿಡುಗಡೆಯಾದ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಿಲು ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ರು.

ಕುಮಾರಸ್ವಾಮಿ ಇದನ್ನು ತೆಗೆದುಕೊಂಡ ವಿಧಾನಸಭೆಯಲ್ಲಿ ಚರ್ಚೆ ಮಾಡಿ ರಾಜ್ಯದ ಜನರ ಮುಂದೆ ಇಡಲಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ ಜೊತೆಗೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ.ಮೋದಿಯವರ ಆಡಳಿತಕ್ಕೆ ಇನ್ನೂ ಆರು ತಿಂಗಳ ಬಾಕಿ ಇದೆ ಕಾದು ನೋಡೋಣ ದೇಶದ ಜನರೆ ಉತ್ತರ ಕೊಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಹೇಳಿದರು.

ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಆರಂಭ: ಲಘು ವಾಹನಗಳಿಗೆ ಮಾತ್ರ ಅನುಮತಿ

ಮಂಗಳೂರು:ಕಳೆದ 6 ತಿಂಗಳಿನಿಂದ ಕಾಂಕ್ರೀಟ್ ರಸ್ತೆ ನಿರ್ಮಾಣದ ಉದ್ದೇಶದಿಂದ ವಾಹನ ಸಂಚಾರವನ್ನು ನಿಷೇಧಿಸಿದ್ದ ಶಿರಾಡಿ ಘಾಟ್ ನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಇಂದಿನಿಂದ ಮತ್ತೆ ಸಂಚಾರ ಪುನರಾರಂಭಗೊಂಡಿದೆ.

ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ, ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್,ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೂತನವಾಗಿ ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಗುಂಡ್ಯದಲ್ಲಿ ಸಾಂಕೇತಿಕವಾಗಿ ಉದ್ಘಾಟನೆ  ಮಾಡುವ ಮೂಲಕ ಶಿರಾಡಿ ಘಾಟ್ ಅನ್ನ ಸಂಚಾರಕ್ಕೆ ಮುಕ್ತಗೊಳಿಸಿದ್ರು.

ಶಿರಾಡಿ ಘಾಟ್ ನಲ್ಲಿ ಸಧ್ಯ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಘಾಟ್ ಕಾಮಗಾರಿ ಅಪೂರ್ಣ ಆಗಿದ್ದರಿಂದ ಭಾರೀ ವಾಹನ, ಬಸ್ ಸಂಚಾರಕ್ಕೆ ತಡೆ ಮುಂದುವರದಿದೆ.ಕೇವಲ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೊ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

15 ದಿನಗಳ ಕಾಲಾವಕಾಶವನ್ನು ಗುತ್ತಿಗೆದಾರರಿಗೆ ನೀಡಿದ್ದು,ಈ ಅವಧಿಯೊಳಗೆ ಡೇಂಜರ ಝೋನ್ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ.ಆಗಸ್ಟ್ ಮೊದಲ ವಾರದಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ ಎಂದು ಅಧಿಕಾರಿಗಳು ಸುದ್ದಿಲೋಕ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಮ್ಮ ಜನರಿಗೆ ಕಿರುಕುಳ ನೀಡಿದ್ರು: ಜಿಟಿ ದೇವೇಗೌಡ

ಮೈಸೂರು: ಮುಖ್ಯಮಂತ್ರಿ ಆಗಿದ್ದ ವೇಳೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ನಮ್ಮ ಜನರಿಗೆ ಕೊಡಬಾರದ ಕಷ್ಟ ಕೊಟ್ಟಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಜಿ.ಟಿ‌ ದೇವೇಗೌಡ ಶಕ್ತಿ ಪ್ರದರ್ಶನ ನಡೆಸಿದ್ರು.ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ಜಿಟಿ ದೇವೇಗೌಡ 36 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಚುನಾವಣೆ ವೇಳೆ ಪ್ರಚಾರಕ್ಕೆ ಚಾಲನೆ ನೀಡಿದ್ದ ಸ್ಥಳದಲ್ಲೇ ಕೃತಜ್ಞತಾ ಸಮಾವೇಶ ಏರ್ಪಡಿಸಿ ಇಂದು ಮತ್ತೆ ಶಕ್ತಿ ಪ್ರದರ್ಶನ ಮಾಡಿದ್ರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಟಿಡಿ, ನನಗೆ ಬಂದ ಮತಗಳ ಅಂತರದಿಂದ ಪ್ರಧಾನಿ ನರೇಂದ್ರ ಮೋದಿಯೇ ನಡುಗಿ ಹೋಗಿದ್ದಾರೆ. ಭಾರತದ ಭೂಪಟದಲ್ಲಿ ಈ ಚುನಾವಣೆಯನ್ನು ದಾಖಲಾಗುವಂತೆ ಮಾಡಿದ್ದೀರಿ. ಸಾರ್ವಜನಿಕ ಸೊಸೈಟಿಯಲ್ಲಿ ಅಕ್ಕಿ ತೂಕ ಮಾಡುತ್ತಿದ್ದ ನನ್ನನ್ನು ಈ ಸ್ಥಾನಕ್ಕೆ ತಂದಿದ್ದು ನೀವು. ಐದು ವರ್ಷ ಚಾಮುಂಡೇಶ್ವರಿ ಕ್ಷೇತ್ರದ ಜನ ಬಹಳ ಕಿರುಕುಳ ಅನುಭವಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಎನ್ನುವ ಕಾರಣಕ್ಕೆ ಅವರ ಬೆಂಬಲಿಗರು ನಮ್ಮ ಜನರಿಗೆ ಕೊಡಬಾರದ ಕಷ್ಟ ಕೊಟ್ಟಿದ್ದಾರೆ. ನಮ್ಮ ಜನರ ಮೇಲೆ ಇಲ್ಲ ಸಲ್ಲದ ಕೇಸ್ ದಾಖಲಿಸಿದ್ದಾರೆ. ಕ್ಷೇತ್ರಕ್ಕೆ ಸಂಬಂಧಪಡದವರು ಗುದ್ದಲಿ ಪೂಜೆ ಮಾಡಿದ್ದಾರೆ. ಇದೆಲ್ಲವನ್ನು ಸುಮ್ಮನೆ ಸಹಿಸಿದ್ದೇನೆ. ಕೆಲವೊಮ್ಮೆ ಮನೆಯಲ್ಲಿ ಕುಳಿತು ಕಣ್ಣೀರು ಹಾಕಿದ್ದೇನೆ ಎಂದ್ರು.

ಸುಬ್ರಮಣಿ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ವಿತರಣೆ ಮಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಿಬಿಎಂಪಿ‌ ಪೌರಕಾರ್ಮಿಕ ಸುಬ್ರಮಣಿ ಅವರ ನಿವಾಸಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ, 10 ಲಕ್ಷ ರು. ಚೆಕ್ ವಿತರಿಸಿದರು.

ಗಾಂಧಿನಗರದ ದತ್ತಾತ್ರೇಯ ವಾರ್ಡ್‌ನಲ್ಲಿರುವ ಸುಬ್ರಮಣಿ ಅವರ ನಿವಾಸಕ್ಕೆ ಭಾನುವಾರ ತೆರಳಿದ ಪರಮೇಶ್ವರ್ ಸಾಂತ್ವಾನ ಹೇಳಿದರು. ಸುಬ್ರಮಣಿ ಆತ್ಮಹತ್ಯೆ ಬೇಸರ ತರಿಸಿದೆ. ವೇತನ ವಿಚಾರಕ್ಕೆ ಪೌರಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಬಾರದು. ಗುತ್ತಿಗೆದಾರರು, ಪೌರಕಾರ್ಮಿಕರ ಆರು ತಿಂಗಳ ಸಂಬಳ ಬಾಕಿ ಇಟ್ಟಿರುವುದು ಗಮನಕ್ಕೆ ಬಂದಿದೆ. ವಾರದೊಳಗೆ ಎಲ್ಲ ಪೌರಕಾರ್ಮಿಕರ ವೇತನ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಸುಬ್ರಮಣಿ ಗುತ್ತಿಗೆ ಆಧಾರದಲ್ಲಿ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ವೇತನ ಪಾವತಿ ಆಗುತ್ತಿಲ್ಲ. ಹೀಗಾಗಿ ಈ ಪದ್ಧತಿ ಖಾಯಂ ಮಾಡುವ ಅಗತ್ಯವಿದೆ. ಈ ವ್ಯವಸ್ಥೆ ಬದಲಾಗಿ, ನೇರವಾಗಿ ವೇತನ ಪಾವತಿಯಾಗಬೇಕು ಎಂದರು.

ಅಷ್ಟೆ ಅಲ್ಲದೆ, ಇಂತಿಷ್ಟು ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಗುತ್ತಿಗೆದಾರರು ಅಗತ್ಯಕ್ಕಿಂತ ಹೆಚ್ಚು ಪೌರಕಾರ್ಮಿಕರನ್ನು ತೆಗೆದುಕೊಂಡಿದ್ದಾರೆ. ಅದಕ್ಕಾಗಿಯೇ ಈ ಸಮಸ್ಯೆ ಉಲ್ಬಣಿಸಿದೆ. ಇನ್ನು‌ಮುಂದೆ ವೇತನದ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಈ ವೇಳೆ ಮೇಯರ್ ಸಂಪತ್ ಕುಮಾರ್, ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆರು ದಿನಗಳ ನಿರ್ಬಂಧ!

 

ತಿರುಮಲ: ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಕೆಲವು ಜೀರ್ಣೋದ್ದಾರ ಕೆಲಸಗಳಿರುವುದರಿಂದ ಆಗಸ್ಟ್‌ 11 ರಿಂದ 17 ರವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಈ ಕುರಿತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಹಿತಿ ನೀಡಿದೆ.

ನಿರ್ಬಂಧದ ಈ ಆರು ದಿನಗಳ ಅವಧಿಯಲ್ಲಿ ವೇದ ಝೇಂಕಾರಗಳೊಂದಿಗೆ ತಿರುಪತಿ ತಿಮ್ಮಪ್ಪನ ವಿಗ್ರಹಕ್ಕೆ “ಅಷ್ಟಬಂಧನ ಬಾಲಾಲಯ ಮಹಾಸಂ ಪ್ರೋಕ್ಷಣಮ್‌’ ನಡೆಲಾಗುತ್ತದೆ. ಮತ್ತು ಕೆಲವು ಗಿಡಮೂಲಿಕೆ ಗಳನ್ನು ಉಪಯೋಗಿಸಿ ವಿಗ್ರಹದಲ್ಲಿ ಉಂಟಾಗಿರುವ ಸಣ್ಣಪುಟ್ಟ ಬಿರುಕು ಗಳನ್ನು ಸರಿಮಾಡಲಾಗುತ್ತದೆಂದು ಟಿಟಿಡಿ ಅಧ್ಯಕ್ಷ ಸುಧಾಕರ್ ಯಾದವ್‌ ಮಾಹಿತಿ ನೀಡಿದ್ದಾರೆ.

12 ವರ್ಷಗಳ ನಂತರ ಈ ಪೂಜೆ ನಡೆಸಲಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ಭಕ್ತರಿಗೆ ತಿರುಮಲ ಬೆಟ್ಟಕ್ಕೆ ಪ್ರವೇಶ ನೀಡಲಾಗುವುದಿಲ್ಲ. ದೇಗುಲಕ್ಕೆ ಬರುವ ಎಲ್ಲಾ ಮಾರ್ಗಗಳನ್ನು 10 ಕಿ.ಮೀ. ದೂರದಲ್ಲೇ ಮುಚ್ಚಲಾಗುತ್ತದೆ. ಆ.17ರ ನಂತರ ಮತ್ತೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸುಧಾಕರ್ ಯಾದವ್‌ ತಿಳಿಸಿದ್ದಾರೆ.