ಬಿಸಿಯೂಟ ಸೇವಿಸಿದ 15 ಮಕ್ಕಳು ಅಸ್ವಸ್ಥ!

ಕೋಲಾರ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿದ 15ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬಂಗಾರಪೇಟೆ ತಾಲ್ಲೂಕಿನ ಡಿ.ಪಿ.ಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಮದ್ಯಾಹ್ನ ಬಿಸಿಯೂಟದ ಸಾಂಬಾರ್​ನಲ್ಲಿ ಹಲ್ಲಿ ಬಿದ್ದಿದ್ದು, ಸಾಂಬರ್ ಸೇವಿಸಿದ ನಂತರ 15 ಮಕ್ಕಳು ವಾಂತಿ-ಬೇದಿಯಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಶಾಲಾ ಶಿಕ್ಷಕರು ಅಸ್ವಸ್ಥ ಮಕ್ಕಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆಗೆ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂದು ಶಾಲೆಯ ಮುಖ್ಯೋಪದ್ಯಾಯ ವೆಂಕೋಬರಾವ್​ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ವಿಧ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಸಮುದ್ರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇಂದಿರಾ ಕ್ಯಾಂಟೀನ್ ಅವ್ಯವಹಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವೆ: ರಾಮದಾಸ್

ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ನಡೆದಿರವ ಅವ್ಯವಹಾರ ಹಾಗೂ ಎಐಸಿಸಿಗೆ ಕಿಕ್ ಬ್ಯಾಕ್ ನೀಡಿರುವ ಕುರಿತು ತನಿಖೆಗೆ ಆಗ್ರಹಿಸಿ‌ ಹೈಕೋರ್ಟ್ ಮೆಟ್ಟಿಲೇರುತ್ತೇನೆ, ತಾರ್ಕಿಕ ಅಂತ್ಯ ಕಾಣಿಸುವವರೆಗೂ‌ಹೋರಾಟ ನಡೆಸುತ್ತೇನೆ ಎಂದು ಮಾಜಿ ಸಚಿವ ರಾಮದಾಸ್ ಹೇಳಿದ್ದಾರೆ.

ವಿಧಾನಸಭೆ ಕಲಾಪದ‌ ಬಳಿಕ ಮಾತನಾಡಿದ ರಾಮದಾದ್,
ಸದನದ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಹಾರ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ದಾಖಲೆಗಳ ಸಮೇತ ಆರೋಪ ಮಾಡಿ ಎಂದು ಹೇಳಿದ್ರು ಅದನ್ನ ಚಾಲೆಂಜ್ ಆಗಿ ತೆಗೆದುಕೊಂಡು ನಾನು ದಾಖಲೆಗಳ ಸಮೇತ ಬಂದೆ ಇವತ್ತು ಕಲಾಪದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೆ ಆದ್ರೆ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡಲಿಲ್ಲ ಹಿಟ್ ಅಂಡ್ ರನ್ ಅಂತ ಆಡಳಿತ ಪಕ್ಷದವರು ಹೇಳಿದ್ರು ಆದ್ರೆ ಹಿಟ್ ಅಂಡ್ ರನ್ ಅಲ್ಲ ಇದು ಹಿಟ್ ಅಂಡ್ ಕ್ಯಾಚ್.ದಾಖಲೆಗಳ ಸಮೇತ ನಾನು ಬಯಲು ಮಾಡೋದಕ್ಕೆ ಮುಂದಾಗಿದ್ದೇನೆ ನಾನು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡುತ್ತೇನೆ ಅಕ್ರಮಕ್ಕೆ ಒಂದು ತಾರ್ಕಿಕ ಅಂತ್ಯ ಕಣಿಸಬೇಕು ಅಂತ ಹೋರಾಟ ಮಾಡುತ್ತೇನೆ ಎಂದ್ರು.

ಎಲ್ಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಎಷ್ಟು ಜನ ಊಟ ಮಾಡುತ್ತಾರೆ ಎಂಬ ಮಾಹಿತಿಯಿಲ್ಲ ಎಷ್ಟು ತೂಕದ ಆಹಾರ ಬರ್ತಿದೆ ಎಂಬುದರ ಬಗ್ಗೆಯೂ ಲೆಕ್ಕಇಲ್ಲ ಅಡುಗೆ ಕಾರ್ಯವನ್ನ ದೆಹಲಿ ಮೂಲದ ರಿವಾರ್ಡ್ಸ್ ಎಂಬ ಕಂಪನಿಗೆ ನೀಡಿದ್ದಾರೆ ಇದೇ ಕಂಪನಿಯ ವಿರುದ್ಧ ಬಿಹಾರದಲ್ಲಿ ಕೇಸ್ ಗಳಿವೆ ಒಂದೇ ದಿನ ಎರಡು ಒಪ್ಪಂದ ಮಾಡಿಕೊಂಡಿದೆ ಪ್ರತಿ ಊಟಕ್ಕೆ 57ರೂ ಇದ್ದ ಬೆಲೆ 60ರೂಗೆ ಏರಿಕೆ ಮಾಡಿದ್ದಾರೆ ಸರ್ಕಾರ ರಿವಾರ್ಡ್ಸ್ ಕಂಪನಿಗೆ ನೀಡುವ ಹಣದಲ್ಲಿ ಯಾರಿಗೆ ಕಿಕ್ ಬ್ಯಾಕ್ ಸಿಗುತ್ತಿದೆ ಎಂಬುದು ಬಯಲಾಗಬೇಕು ಎಂದು ಆಗ್ರಹಿಸಿದ್ರು.

ಕ್ಯಾಂಟೀನ್ ನಿರ್ಮಾಣಕ್ಕಾಗಿ ಸರ್ಕಾರ ಆದೇಶ ಹೊರಡಿಸಿತು
ಗ್ಲೋಬಲ್ ಟೆಂಡರ್ ಬದಲಾಗಿ ನೇರ ಗುತ್ತಿಗೆ ನೀಡಲಾಯಿತು
ಕ್ಯಾಂಟೀನ್ ನಿರ್ಮಾಣದಲ್ಲೂ ಅಕ್ರಮವಾಗಿ ಗುತ್ತಿಗೆ ನೀಡಿದ್ರು
ಕೆಇಎಫ್ ಎಂಬ ಅರಬ್ ನಲ್ಲಿರುವ ಕಂಪನಿಗೆ 4ಜಿ ವಿನಾಯಿತಿ ನೀಡಲಾಯ್ತು.ಖಾಸಗಿ ಕಂಪನಿಗೆ 4ಜಿ ವಿನಾಯಿತಿ ನೀಡಲು ಬರುವುದಿಲ್ಲ ಪ್ರತಿ ಕ್ಯಾಂಟೀನ್ ನಿರ್ಮಾಣಕ್ಕೆ 25 ಲಕ್ಷ ರೂ ತೆಗೆದುಕೊಂಡಿದೆ ಆದರೆ ಬಿಬಿಎಂಪಿ ಕೇವಲ 12 ಲಕ್ಷ ರೂ ಮಾತ್ರ ಖರ್ಚು ಮಾಡಿ ತಾನೆ ನಿರ್ಮಾಣ ಮಾಡಿತು ಹೆಚ್ಚುವರಿಯಾಗಿ ಕೆಇಎಫ್ ಗೆ ನೀಡಿದ 123 ಕೋಟಿ ರೂ ಕಿಕ್ ಬ್ಯಾಕ್ ಯಾರಿಗೆ ಹೋಗಿದೆ? ಅರಬ್ ನಲ್ಲಿರುವ ಕೆಇಎಫ್ ಮುಖ್ಯಸ್ಥ ಯಾರು?ಆತನ ಜತೆ ಎಐಸಿಸಿ ಮುಖಂಡರ ಜತೆ ಇರುವ ಸಂಬಂಧ ಏನು?ಇದನ್ನೆಲ್ಲ ಬಯಲು ಮಾಡುತ್ತೇನೆ, ಕೋರ್ಟ್ ಗೆ ಎಲ್ಲ ದಾಖಲೆ ಸಲ್ಲಿಸುತ್ತೇನೆ.ಆಹಾರ ಪೂರೈಕೆಗೆ ಪ್ರತಿನಿತ್ಯ 80 ಲಕ್ಷ ರೂ ಹೋಗುತ್ತಿದೆ ಇದರಲ್ಲಿ 35 ಲಕ್ಷ ಅಕ್ರಮವಾಗಿ ನೀಡಲಾಗುತ್ತಿದೆ ಕೆಇಎಫ್ ಹಾಗೂ ರಿವಾರ್ಡ್ಸ್ ಕಂಪನಿಯ ಅಕ್ರಮದ ವಿರುದ್ಧ ಹೊರಾಟ ಮಾಡುತ್ತೇನೆ ಎಂದ್ರು.

ಉಡ್ತಾ ಪಂಜಾಬ್ ಆಗ್ತಿದ್ಯಾ ರಾಜ್ಯ? ಡ್ರಗ್ ಮಾಫಿಯಾ ಕುರಿತು ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ!

ಬೆಂಗಳೂರು: ರಾಜ್ಯದಲ್ಲಿ ಡ್ರಗ್ ಮಾಫಿಯಾ ಹೆಚ್ಚುತ್ತಿದೆ. ವೀಸಾ ಮುಗಿದರು ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಕೆಲವು ಫಾರ್ಮ್ ಹೌಸ್‌ಗಳಲ್ಲೂ ಗಾಂಜಾ ಬೆಳೆಯಲಾಗುತ್ತಿದೆ. ಈ ವಿಚಾರ ಪೊಲೀಸರಿಗೆ ತಿಳಿದಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ! ಹೀಗೆ ರಾಜ್ಯದಲ್ಲಿ ಹರಡಿರುವ ಡ್ರಗ್ ಮಾಫಿಯಾ ಕುರಿತು ವಿಧಾನಸಭೆಯಲ್ಲಿ ಇಂದು ಬಿಸಿ ಬಿಸಿ ಚರ್ಚೆ ನಡೆಯಿತು.

ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಓದುತ್ತಿದ್ದ ನನ್ನ ಮಗನೇ ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದ. ಅವನನ್ನು ಅದರಿಂದ ಹೊರತರಬೇಕಾದರೆ ನಾವು ಪಟ್ಟ ಶ್ರಮ ಅಶಿಷ್ಟಲ್ಲ. ಡ್ರಗ್ ದಂಧೆ ವಿರುದ್ದ ಕ್ರಮ ಆಗಲೇಬೇಕು ಬಿಜೆಪಿಯ ಕಳಕಪ್ಪ ಬಂಡಿ ವಿಧಾನಸಭೆಯಲ್ಲಿ ತಮ್ಮ ಸಂಕಟ ಹೊರಹಾಕಿದರು.

ರಾಜ್ಯಾದ್ಯಂತ ಹರಡಿರುವ ಡ್ರಗ್ ಮಾಫಿಯಾ ಬಗ್ಗೆ ವಿಧಾನಸಭೆಯಲ್ಲಿ ಮಾಜಿ ಗೃಹ ಸಚಿವ ಆರ್.ಅಶೋಕ್
ಸರ್ಕಾರದ ಗಮನ ಸೆಳೆದರು. ರಾಜ್ಯದಲ್ಲಿ ಐದು ಲಕ್ಷ ಮಾದಕ ವಸ್ತು ವ್ಯಸನಿಗಳಿದ್ದಾರೆ.14 ರಿಂದ 30 ವಯಸ್ಸಿನ ಯುವಕರೇ ಮಾದಕ ವಸ್ತುಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅಪಘಾತಗಳು, ಆತ್ಮಹತ್ಯೆ ಪ್ರಕರಣಗಳು, ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಮಾದಕ ವಸ್ತು ಸೇವನೆಯೇ ಕಾರಣವಾಗಿದೆ ಎಂದರು.

ಅಷ್ಟೇ ಅಲ್ಲದೆ ಬನ್ನೇರುಘಟ್ಟದ ಫಾರಂಗಳಲ್ಲಿ ಗಾಂಜಾ ಬೆಳೆಯುತ್ತಾರೆ. ಇದನ್ನು ಯಾರೂ ಪತ್ತೆ ಹಚ್ಚಕ್ಕಾಗಲ್ಲ ಪೊಲೀಸರೇ ಈ ಮಾಹಿತಿ ನನಗೆ ಹೇಳಿದ್ದಾರೆ.
ಶಾಂತಿನಗರದ ಸುತ್ತಮುತ್ತವೂ ಡ್ರಗ್ಸ್ ಸೇವನೆ ಹೆಚ್ಚಿದೆ ಎಂದು ಸದನದ ಗಮನ ಸೆಳೆದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡ್ರಗ್ ಮಾಫಿಯಾದ ಅಡ್ಡೆಯಾಗಿ ಬಳಕೆಯಾಗುತ್ತಿದೆ. ಡ್ರಗ್ ಸಾಗಾಟಕ್ಕೆ ಮನುಷ್ಯರನ್ನು ಪ್ರಾಣಿಗಳ ರೀತಿ ಬಳಕೆ ಮಾಡಲಾಗುತ್ತದೆ. ಇತ್ತೀಚೆಗೆ ಉಗಾಂಡದ ವ್ಯಕ್ತಿಯೊಬ್ಬನಿಗೆ ಡ್ರಗ್ ಮಾತ್ರೆಗಳನ್ನು ನುಂಗಿಸಿ, ಹತ್ತೊಂಬತ್ತು ಗಂಟೆಗಳ ಕಾಲ ಪ್ರಯಾಣ ಮಾಡಿಸಿ, ಬೆಂಗಳೂರಿಗೆ ಡ್ರಗ್ ಸಾಗಿಸಿದ್ದಾರೆ. ಈ ರೀತಿ ಕೋಟ್ಯಂತರ ರೂಪಾಯಿ ಬೆಲೆಯ ಡ್ರಗ್ ಸಾಗಿಸಲು ಅವನಿಗೆ ಐದು ಲಕ್ಷ ರೂಪಾಯಿ ನೀಡಲಾಗಿತ್ತು ಎಂದರು.

ಬೆಂಗಳೂರು ಕೂಡ “ಉಡ್ತಾ ಪಂಜಾಬ್” ಆಗುವ ಹಾದಿಯಲ್ಲಿದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬಾರದು ಎಂದು ಗೋಡೆ‌ಮೇಲೆ ಬರೆದರೆ ಜನ ಅದರ ಮೇಲೆ ಮೂತ್ರ ಮಾಡುತ್ತಾರೆ‌. ಬದಲಿಗೆ ಅಲ್ಲಿ ಶನಿಮಹಾತ್ಮನ ಫೋಟೋ ಇಟ್ಟು ಇಲ್ಲಿ ಮೂತ್ರ ಮಾಡಿದ್ರೆ ಶನಿ‌ಮಹಾತ್ಮ ನಿಮ್ಮ ಮನೆ ಬಾಗಿಲಿಗೆ ಬರುತ್ತಾನೆ ಎಂದು ಬಿಂಬಿಸಿದ್ರೆ ಸಾಕು ಜನ ಹೆದರುತ್ತಾರೆ. ಹಾಗೆಯೇ ಡ್ರಗ್ ದಂಧೆ ಹೆಚ್ಚು ನಡೆಯುವ ಶಾಲೆಗಳ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗಳವರ ಮನೆ ಬಾಗಿಲಿಗೆ ಪೊಲೀಸರು ಬರುತ್ತಾರೆ ಎನ್ನುವಂತಾದರೆ ಅವರೂ ಸರಿದಾರಿಗೆ ಬರುತ್ತಾರೆ. ತಮ್ಮ ಶಾಲೆಗಳಲ್ಲಿ ಡ್ರಗ್ ದಂಧೆಗೆ ಕಡಿವಾಣ ಹಾಕುತ್ತಾರೆ ಎಂದು ಆರ್.ಅಶೋಕ್ ಸಲಹೆ ನೀಡಿದರು.

ಶಾಂತಿನಗರದ ಕ್ಷೇತ್ರದ ಶಾಸಕ ಹ್ಯಾರಿಸ್ ಮಾತನಾಡಿ, ನನ್ನ ಕ್ಷೇತ್ರದಲ್ಲೂ ಡ್ರಗ್ ಹಾವಳಿ ಜಾಸ್ತಿ ಆಗ್ತಿದೆ. ನೈಜಿರೀಯಾದಿಂದ ಬರೋರ ಬ್ಯುಸಿನೆಸ್ ಇದೆ ಆಗಿದೆ.
ಡ್ರಗ್ಸ್ ಮಾಫಿಯಾದ ವಿದೇಶಿಯರನ್ನ ಓಡಿಸಬೇಕು. ಮತ್ತೆ ಅವರು ಬರದಂತೆ ತಡೆಯಬೇಕು ಎಂದರು.

ವಿಧಾನಸಭೆಯಲ್ಲಿ ಮೊದಲ ಬಾರಿಗೆ ಡ್ರಗ್ಸ್ ಮಾಫಿಯಾ ಮತ್ತು ಅದರ ಮೂಲದ ಕುರಿತು ಬಿಜೆಪಿ ಶಾಸಕ ಭರತ್ ಶೆಟ್ಟಿ ಮಾತನಾಡಿದರು. ನಾನು ಒಂದು ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದೆ. ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ಕುರಿತು ನನ್ನ ಗಮನಕ್ಕೂ ಬಂದಿದೆ. ಡ್ರಗ್ಸ್ ಸೇವಿಸುವವರನ್ನೇ ಅರೆಸ್ಟ್ ಮಾಡ್ತಾರೆ. ಆದರೆ, ಡ್ರಗ್ಸ್ ಮಾರಾಟ ಮಾಡುವವರನ್ನು ಹಿಡಿಯಬೇಕು. ಡ್ರಗ್ಸ್ ಪೂರೈಕೆಯ ಮೂಲ ಹುಡುಕಬೇಕು. ಆಗ ಮಾತ್ರ ಮಾಫಿಯಾ ತಡೆಗಟ್ಟಬಹುದು. ಡ್ರಗ್ಸ್ ಸೇವನೆ ಮಾಡುವ ಶೇ.2 ರಷ್ಟು ಜನ ಮಾತ್ರ ಅರೆಸ್ಡ್ ಆಗ್ತಾರೆ. ಆದರೆ, ಶೇ.98 ರಷ್ಟು ಡ್ರಗ್ಸ್ ಸೇವನೆ ಮಾಡುವವರನ್ನು ಬಂಧನ ಮಾಡಕ್ಕೆ ಕಷ್ಟ ಇದೆ. ಪೊಲೀಸರಿಗೆ ಈ ನಿಟ್ಟಿನಲ್ಲಿ ಅಧಿಕಾರ ಕೊಡಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಹಾವಳಿ ತಪ್ಪಿಸಬಹುದು ಎಂದು ಹೇಳಿದರು.

ಎಲ್ಲೆಲ್ಲಿ ಡ್ರಗ್ ದಂಧೆ ನಡೆಯುತ್ತಿದೆ ಎಂಬುದು ಪೊಲೀಸರಿಗೆ ಚೆನ್ನಾಗಿ ಗೊತ್ತು. ಆದರೆ ನಾವು ಕಂಪ್ಲೆಂಟ್ ಕೊಟ್ಟಾಗ ಕ್ರಮ ಕೈಗೊಂಡಂತೆ ವರ್ತಿಸುತ್ತಾರೆ ಹೊರತು ಕ್ರಮ ಕೈಗೊಳ್ಳಲ್ಲ. ನಮ್ಮ ದೇಶವನ್ನು ಹಾಳು ಮಾಡಲು ಪಾಕಿಸ್ತಾನವೂ ಬೇಡ, ಭಯೋತ್ಪಾದಕರೂ ಬೇಡ. ಹೀಗೆ ಬಿಟ್ರೆ ನಮ್ಮ ಯುವಪೀಳಿಗೆ ಡ್ರಗ್ ಮಾಫಿಯಾಗೆ ಬಲಿಯಾಗಿ ದೇಶವೇ ಅವನತಿಯತ್ತ ಸಾಗುತ್ತದೆ ಎಂದು ಬಿಜೆಪಿಯ ಸುರೇಶ್ ಕುಮಾರ್ ಅಭಿಪ್ರಾಯ ಪಟ್ಟರು.

ಡ್ರಗ್ ಮಾಫಿಯಾ ದಲ್ಲಿ ತೊಡಗಿರುವ ವಿದೇಶಿಯರನ್ನು ವಾಪಸ್ ಕಳಿಸುವ ಕೆಲಸ ಆಗಬೇಕು. ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾದರಿಯಲ್ಲೇ ರಾತ್ರಿ ವೇಳೆ ಡ್ರಗ್ ಟೆಸ್ಟ್ ಆಗಬೇಕು. ಹೊಸದಾಗಿ ಮದುವೆಯಾದ ಅನೇಕರು ಡ್ರಗ್ಸ್ ತೆಗೆದುಕೊಂಡ ಕಾರಣ ಡಿವೋರ್ಸ್ ಆಗಿರುವ ಘಟನೆಗಳೂ ಇವೆ. ರಾತ್ರಿಯಿಡೀ ತೆರೆದಿರುವ ಕಂಪನಿಗಳಲ್ಲೂ ಡ್ರಗ್ ಹಾವಳಿ ಇದೆ ಎಂದು ಸದನದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು.

ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಪ್ರದೇಶಗಳ ಶಾಲೆಗಳವರು ಯಾರೂ ಡ್ರಗ್ ವ್ಯಸನಿಗಳಾಗಲ್ಲ. ಯಾರು ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೋ, ಪ್ರತಿಷ್ಟಿತರ ಮಕ್ಕಳು ಇದ್ದಾರೋ, ಅಪ್ಪ ಅಮ್ಮನ ಬಿಟ್ಟಿ ದುಡ್ಡು ಸಿಕ್ಕಿತ್ತೋ ಅಂತಹವರು ಮಾತ್ರ ಡ್ರಗ್ ಗೆ ಬಲಿಯಾಗುತ್ತಿದ್ದಾರೆ. ಜತೆಗೆ ಯಾವ ರೈತರೂ ಬುದ್ದಿ ಪೂರ್ವಕವಾಗಿ ಗಾಂಜಾ ಅಫೀಮು ಬೆಳೆಯಲ್ಲ. ಯಾರು ಬುದ್ದಿಗೇಡಿಗಳೋ ಸಮಾಜದ ಮಾನ ಮರ್ಯಾದೆಗೆ ಅಂಜೋದಿಲ್ವೋ ಅಂತಹವರು ಮಾತ್ರ ಗಾಂಜಾ ಬೆಳೆಯುತ್ತಾರೆ ಎಂದರು.

ಡ್ರಗ್ ಮಾಫಿಯಾ ಕುರಿತು ಸದನದಲ್ಲಿ ಉತ್ತರ ನೀಡಿದ ಗೃಹಸಚಿವ ಜಿ.ಪರಮೇಶ್ವರ್, ಡ್ರಗ್ಸ್ ಸೇವನೆಗೆ ಶಾಸಕರು, ಸಚಿವರು, ಪ್ರತಿಷ್ಠಿತರು, ಶ್ರೀಮಂತರ ಮಕ್ಕಳು ಬಲಿಯಾಗಿದ್ದಾರೆ. ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚು. ಕರ್ನಾಟಕವನ್ನು ಪಂಜಾಬ್ ರೀತಿ ಆಗಲು ಬಿಡಲ್ಲ. ಡ್ರಗ್ಸ್ ಹಾವಳಿ ರಾಜ್ಯದಲ್ಲಿ ನಿಲ್ಲಬೇಕು. ಕಾನೂನು ಚೌಕಟ್ಟಿನಲ್ಲಿ ಡ್ರಗ್ಸ್ ಮಾಫಿಯಾ ನಿಲ್ಲಿಸಲು ಏನೇನು ಮಾಡಬಹುದೋ ಎಲ್ಲವನ್ನು ಮಾಡ್ತೇವೆ. ಪೊಲೀಸರಿಗೆ ತರಬೇತಿ ಕೊಡಲಾಗ್ತಿದೆ. ಡ್ರಗ್ಸ್ ಹಾವಳಿ ತಡೆಯುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿದೆ. ಆದರೆ, ತರಬೇತಿಗೊಂಡ ಪೊಲೀಸರು ಡ್ರಗ್ಸ್ ದಂಧೆ ತಡೆಯುತ್ತಿದ್ದಾರಾ ಇಲ್ಲವಾ ಅಂತ ನೋಡಬೇಕಿದೆ. ಡ್ರಗ್ಸ್ ಮಾರಾಟಗಾರರನ್ನು ಹಿಡಿದಿದ್ದರೆ ನಿಮ್ಮ ವಿರುದ್ಧ ಕ್ರಮ ಎಂಬ ಎಚ್ಚರಿಕೆ ಪೊಲೀಸರಿಗೆ ಕೊಡಲಾಗಿದೆ. ಎಲ್ಲೆಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆಯೋ ಅಲ್ಲೆಲ್ಲ ಕಠಿಣ ಕ್ರಮಗಳ ಮೂಲಕ ತಡೆ ಹಾಕ್ತಿದ್ದೇವೆ.

ಡ್ರಗ್ಸ್ ದಂಧೆ ಹೊಸದಲ್ಲ. ನಮ್ಮ ಸಮಾಜದಲ್ಲಿ ಹಿಂದಿನಿಂದಲೂ ಇದ್ದೇ ಇದೆ.1985ರಲ್ಲೇ ನಾರ್ಕೋಟಿಕ್ ಡ್ರಗ್ ಪ್ರಿವೆನ್ಷನ್ ಕಾಯ್ದೆ ಮಾಡಲಾಗಿದೆ. ನಮ್ಮ ರಾಜ್ಯ ಇನ್ನೂ ಪಂಜಾಬ್ ಸ್ಥಿತಿಗೆ ತಲುಪಿಲ್ಲ. ಕರ್ನಾಟಕವನ್ನು ಪಂಜಾಬ್ ಸ್ಥಿತಿಗೆ ಆಗೋದಕ್ಕೆ ನಾವು ಬಿಡುವುದಿಲ್ಲ ಎಂದರು.

ಡ್ರಗ್ ಮಾಫಿಯಾ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಕೇಂದ್ರ ಸರಕಾರ ಕಠಿಣ ಕಾನೂನು ತರಬೇಕು. ಆಗ ಮಾತ್ರ ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಸಾಧ್ಯ ಎಂದರು.

ಸಚಿವರಾದ ಬಳಿಕ ಮೊದಲ ಬಾರಿ ತವರಿಗೆ ಜಿಟಿ ದೇವೇಗೌಡ ಭೇಟಿ: ಮೈಸೂರಲ್ಲಿ ಟೆಂಪಲ್‌ರನ್

ಮೈಸೂರು: ಸಚಿವರಾದ ಬಳಿಕ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ರು.ತವರು ಜಿಲ್ಲೆ ಮೈಸೂರಿನಲ್ಲಿ ಕುಟುಂಬ ಸಮೇತ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಸಚಿವ ಜಿ.ಟಿ ದೇವೇಗೌಡ, ಆದಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಾಗೆಯೇ ಹುಟ್ಟೂರು ಗುಂಗ್ರಾಲ್ ಛತ್ರದಲ್ಲಿ ಮನೆದೇವರಿಗೆ ಪೂಜೆ ಸಲ್ಲಿಸಿದ ಅವರು ನಂತ್ರ ತ್ರಿಪುರ ಸುಂದರಿ ಉತ್ತನಹಳ್ಳಿ ಮಾರಮ್ಮನ ದರ್ಶನ ಮಾಡಿದ್ರು.

ಇದಾದ ಬಳಿಕ ನಂಜನಗೂಡು ಭೇಟಿ ನೀಡಿ ಅಲ್ಲಿನ ಪ್ರಸಿದ್ಧ ನಂಜುಂಡೇಶ್ವರನಿಗೆ ವಿಶೇಷ ಪೂಜೆ ವಿಶೇಷ ಪೂಜೆ ಸಲ್ಲಿಸಿ ನಂತರ ತಗಡೂರು ಅಂಕನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು.ಹೀಗೆ ಉನ್ನತ ಶಿಕ್ಷಣ ಸಚಿವರಾದ ಬಳಿಕ ತವರು ಜಿಲ್ಲೆಯಲ್ಲಿ ಜಿಟಿ ದೇವೇಗೌಡ ಟೆಂಪಲ್ ರನ್ ಮಾಡಿದ್ರು.

ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಸಚಿವ ಜಿ.ಟಿ ದೇವೇಗೌಡರು, ಮೊದಲ ಆಷಾಡ ಶುಕ್ರುವಾರಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮು ಚಾಮುಂಡೇಶ್ವರಿ ಬೆಟ್ಟಕ್ಕೆ ಬರ್ತಾರೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿದ್ದು ನಾಡಿನ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಈ ಭಾರಿ ಅದ್ದೂರಿ ,ವೈಭವವಾಗಿ ದಸರಾ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಸಿ ಎಂ ಎಚ್ ಡಿ ಕುಮಾರಸ್ವಾಮಿ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಉನ್ನತ ಶಿಕ್ಷಣ ಖಾತೆ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಜಿ.ಟಿ ದೇವೆಗೌಡ, ಕೊಟ್ಟ ಖಾತೆಯನ್ನ ಉತ್ತಮವಾಗಿ ನಿಭಾಯಿಸುತ್ತೇನೆ. ರಾಜ್ಯಪಾಲರ ಜೊತೆ ಕಾರ್ಯಕ್ರಮ ಮಾಡಿದ್ದೇನೆ. ಹತ್ತು ಸಾವಿರ ಅತಿಥಿ ಉಪನ್ಯಾಸಕರ ನೇಮಕ ಮಾಡ್ತೇನೆ. ಅತೀ ಶೀಘ್ರದಲ್ಲಿ ಮೈಸೂರು ಕುಲಪತಿ ನೇಮಕ ಮಾಡಲಾಗುತ್ತದೆ.
ಇನ್ನು ಕೆ ಎಸ್ ಒಯು ಮಾನ್ಯತೆ ವಿಚಾರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದರು.

ಗಣರಾಜ್ಯೋತ್ಸವಕ್ಕೆ ಆಗಮಿಸುತ್ತಾರಾ ಟ್ರಂಪ್?

ನವದೆಹಲಿ: 2019 ರ ಗಣರಾಜ್ಯೋತ್ಸವ ಪರೇಡ್‌ಗೆ ಅತಿಥಿಯಾಗಿ ಆಗಮಿಸುವಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನಕ್ಕೆ ಔಪಚಾರಿಕ ಆಮಂತ್ರಣ ಕಳುಹಿಸಿರುವುದಾಗಿ ತಿಳಿದುಬಂದಿದೆ.

ಪ್ರಧಾನಿ ಕಾರ್ಯಾಲಯವು ಶ್ವೇತಭವನದ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದು, ಟ್ರಂಪ್‌ ಅವರು ಆಹ್ವಾನವನ್ನು ಸ್ವೀಕರಿಸಿದರೆ 4 ವರ್ಷದಲ್ಲಿ ಎರಡು ಬಾರಿ ಟ್ರಂಪ್ ಭಾರತಕ್ಕೆ ಆಗಮಿಸಿದ ಮೂಲಕ ಭಾರತದ ವಿದೇಶಾಂಗ ನೀತಿಯ ದೊಡ್ಡ ಸಾಧನೆಯಾಗಲಿದೆ.

2015 ರ ಗಣರಾಜ್ಯೋತ್ಸವಕ್ಕೆ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಅತಿಥಿಯಾಗಿ ಬಂದಿದ್ದರು.

ನೀರಾವರಿ ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಶಿಫ್ಟ್ ಮಾಡಿ: ಎಸ್.ಆರ್ ಪಾಟೀಲ್

ಬೆಂಗಳೂರು:ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ‌ ನೀರಾವರಿ ಇಲಾಖೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಶೀಪ್ಟ್ ಮಾಡಬೇಕು, ಸಮಸ್ಯೆ ಬಗೆಹರಿಯುವರೆಗೂ ಕೆಲವು ಇಲಾಖೆಗಳು ನಮ್ಮ ಭಾಗದಲ್ಲಿ ಆಡಳಿತ ನಡೆಸಲಿ ಎಂದು ಕಾಂಗ್ರೆಸ್ ಸದಸ್ಯ ಎಸ್.ಆರ್ ಪಾಟೀಲ್ ಸಲಹೆ ನೀಡಿದ್ದಾರೆ.

ಪರಿಷತ್ ಕಲಾಪದಲ್ಲಿ ಬಜೆಟ್ ಮೇಲೆ ಸಿಎಂ ಕುಮಾರಸ್ವಾಮಿ ಉತ್ತರದ ಬಳಿಕ ಕಾಂಗ್ರೆಸ್ ನ ಎಸ್.ಆರ್.ಪಾಟೀಲ್ ಮಾತನಾಡಿದ್ರು.ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಯುವ ಸಿಎಂ ಶ್ರಮಿಸಬೇಕು.ಬೆಳಗಾವಿಯಲ್ಲಿ ಹೆಚ್ಚು ದಿನ ಅಧಿವೇಶನ ನಡೆಸಬೇಕು.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು.ಉತ್ತರ ಕರ್ನಾಟಕ ಭಾಗ ದಕ್ಷಿಣ ಕರ್ನಾಟಕ ಭಾಗದಷ್ಟೇ ಅಭಿವೃದ್ಧಿಯಾಗಬೇಕಿದೆ ಎಂದ್ರು.

ಸ್ವಾತಂತ್ರ ಪೂರ್ವಕ್ಕೂ ಮುನ್ನ ದಕ್ಷಿಣ ಕರ್ನಾಟಕದಲ್ಲಿ ನೀರಾವರಿ ಅಭಿವೃದ್ಧಿಯಾಗಿದೆ.ಕನ್ನಂಬಾಡಿ ಅಣೆಕಟ್ಟು ನಿರ್ಮಾಣವಾಗಿದೆ.ಆದರೆ ನಮ್ಮ‌ಭಾಗದಲ್ಲಿ ಯಾವುದೇ ಅಣೆಕಟ್ಟು ನಿರ್ಮಾಣ ಆಗಲಿಲ್ಲ.ನೀರಾವರಿ ಇಲಾಖೆಗಳನ್ನು ನಮ್ಮ ಭಾಗಕ್ಕೆ ಶೀಪ್ಟ್ ಮಾಡಿ ಸಮಸ್ಯೆ ಬಗೆಹರಿಯುವರೆಗೂ ಕೆಲವು ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ಆಡಳಿತ ನಡೆಸಲಿ.ಈ ದಿಟ್ಟ ನಿರ್ಧಾರ ಯುವ ಸಿಎಂ ಕುಮಾರಸ್ವಾಮಿ ಕೈಗೊಳ್ಳಲಿ.ಈ ಮೂಲಕ ಇತಿಹಾಸ ಸೃಷ್ಟಿಸಲಿ.
ದಯವಿಟ್ಟು ನಮ್ಮ ಮನವಿ ಪರಿಗಣಿಸಿ ಎಂದು ಕಳಕಳಿಯವಾಗಿ ಮನವಿ ಮಾಡಿಕೊಂಡರು.

ಎಸ್.ಆರ್.ಪಾಟೀಲ್ ಮಾತಿಗೆ ಬಿಜೆಪಿಯ ಮಹಾಂತೇಶ್ ಕವಟಗಿಮಠ ಬೆಂಬಲ ನೀಡಿದ್ರು.ಕಾವೇರಿ ಸಮಸ್ಯೆ ಬಗೆಹರಿದಿದೆ.ಕೃಷ್ಣೆಯ ಸಮಸ್ಯೆಯೂ ಬಗೆಹರಿಸಿ.ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಂಡರೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತೆ ಎಂದ್ರು.