ಬಾಯ್ಲರ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರ ಸಾವು

ರಾಮನಗರ:ಬಾಯ್ಲರ್ ಸ್ವಚ್ವತೆಗೆಂದು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಆಂಥ್ಯಾಮ್ ಬಯೋಸೈನ್ ಕಾರ್ಖಾನೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಲೋಕೇಶ್, ಕನಕಪುರ ತಾಲೂಕಿನ ಗೊಟ್ಟಿಗೆಹಳ್ಳಿ ನಿವಾಸಿ ಮಹೇಶ್, ತಮಿಳುನಾಡು ಮೂಲದ ಶರವಣ ಮೃತ ದುರ್ದೈವಿಗಳಾಗಿದ್ದು, ಮತ್ತೊಬ್ಬ ಹರಿ ವಿಲಿಘನ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರೋ ಆಂಥ್ಯಾಮ್ ಬಯೋಸೈನ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ವಚ್ವತೆಗೆಂದು ನಾಲ್ವರು ಕಾರ್ಮಿಕರು ಇಳಿದಿದ್ದರು.ಆದರೆ ಆಮ್ಲಜನಕ ಕೊರತೆಯಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶತಮಾನದಷ್ಟು ಹಳೆಯ ರೈಲುಗಳಲ್ಲಿ ಸಂಚರಿಸ ಬೇಕೆಂಬ ಬಯಕೆಯೇ? ಹಾಗಾದ್ರೆ ನೀಲಗಿರಿಸ್‌ಗೆ ಹೋಗಿ!

‘ನೀಲಿ ಪರ್ವತಗಳು’ ಎಂದು ಪ್ರಶಂಸಿಸಲ್ಪಟ್ಟಿರುವ ನೀಲಗಿರಿಸ್ ತನ್ನ ಪ್ರಕೃತಿ ಸೌಂದರ್ಯದಿಂದ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಭವ್ಯವಾದ ಬೆಟ್ಟಗಳು, ಕಣಿವೆಗಳು, ಜಲಪಾತಗಳು, ಸುಂದರವಾದ ಚಹಾ ತೋಟಗಳು, ಸಮೃದ್ಧ ಸಸ್ಯ ಮತ್ತು ಪ್ರಾಣಿ, ಆಹ್ಲಾದಕರ ಹವಾಮಾನ ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ

ಪ್ರಕೃತಿಯ ದೊಡ್ಡ ಕೊಡುಗೆಯಾದ ನೀಲಗಿರಿಸ್‌ನಲ್ಲಿ ರೈಲ್ವೇ ಇಲಾಖೆ ಮತ್ತೊಂದು ಅಧ್ಬುತ ಸೃಷ್ಟಿಸಲು ಹೊರಟಿದೆ. ಇದು ಶತಮಾನದಷ್ಟು ಹಳೆಯ ತಂತ್ರಜ್ಞಾನದ ಅದ್ಭುತವಾಗಿದೆ. ಭಾರತೀಯ ರೈಲ್ವೆಯ ಬಹುಮಾನ ಪಡೆದು, ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಪಟ್ಟಿ ಮಾಡಲಾದ ಈ ಹಳೆಯ ರೈಲ್ವೇ ವ್ಯವಸ್ಥೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಕನಸನ್ನು ನನಸುಗೊಳಿಸಲು ರೈಲ್ವೇ ಇಲಾಖೆ ಮುಂದಾಗಿದೆ.

ಪ್ರವಾಸಿಗರ ಬೇಡಿಕೆಗಳನ್ನು ಪೂರೈಸಲು ಮತ್ತು ಪ್ರವಾಸಿಗರಿಗೆ ಹೊಸ ಅನುಭವ ನೀಡುವ ಭರವಸೆ ನೀಡುತ್ತಿರುವ ಮೌಂಟೇನ್ ರೈಲ್ವೇ ರೈಲು ನಿಲ್ದಾಣಗಳನ್ನು ಮತ್ತು ರೈಲುಗಳನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತಿದೆ‌

ಉದಗಮಂಡಲಂ, ಕೂನೂರು ಮತ್ತು ಮೆಟ್ಟುಪಾಳಯಂ ರೈಲು ನಿಲ್ದಾಣಗಳನ್ನು ವಿಶ್ವ ಪರಂಪರೆಯ ಕೇಂದ್ರಗಳಾಗಿ ಗುರುತಿಸಲಾಗಿದ್ದು, ಈ ಕೇಂದ್ರಗಳನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸ್ಟೇಷನ್ ಕಟ್ಟಡದ ವಿನ್ಯಾಸ, ಸುತ್ತಲಿನ ಪ್ರದೇಶ, ಉದ್ಯಾನಗಳು ಸುತ್ತುವ ಮೂಲಕ ಪ್ರಯಾಣಿಕರು ಶತಮಾನಗಳ ಹಿಂದಿನ ಅದ್ಬುತ ರೈಲು ಪ್ರಯಾಣದ ಅನುಭವವನ್ನು ಪಡೆಯಬಹುದಾಗಿದೆ. ಅಲ್ಲದೆ ಊಟಿಯ ಹೊಸ ವಸ್ತು ಸಂಗ್ರಹಾಲಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಡಿಕೆಶಿ ಔತಣಕೂಟದಲ್ಲಿ ಬಿಜೆಪಿ ಶಾಸಕ!

ಬೆಂಗಳೂರು: ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆ ರೂವಾರಿಯಾಗಿರುವ ಸಚಿವ ಡಿ.ಕೆ.ಶಿವಕುಮಾರ್‌ ಅವರು ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ  ಔತಣ ಕೂಟದಲ್ಲಿ  ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಪಾಲ್ಗೊಂಡು ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರಿಗಾಗಿ ಡಿ.ಕೆ.ಶಿವಕುಮಾರ್ ಔತಣ ಕೂಟ ಆಯೋಜಿಸಿದ್ದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ , ಸಚಿವ ಎಚ್‌.ಡಿ.ರೇವಣ್ಣ ಸೇರಿದಂತೆ ಮೈತ್ರಿ ಸರ್ಕಾರದ ಹಲವು ಸಚಿವರು, ಕಾಂಗ್ರೆಸ್-ಜೆಡಿಎಸ್ ಶಾಸಕರು ಔತಣ ಕೂಟದಲ್ಲಿ ಭಾಗಿಯಾಗಿದ್ದರು.

ಕಾಂಗ್ರೆಸ್‌ ಶಾಸಕ ಸುಧಾಕರ್‌ ಅವರೊಂದಿಗೆ ಗೂಳಿಹಟ್ಟಿ ಶೇಖರ್‌ ಔತಣ ಕೂಟಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಮಗ ಡಿಸಿಯಾದರೂ ಪೌರ ಕಾರ್ಮಿಕ ವೃತ್ತಿ ತೊರೆಯದೇ ನಿವೃತ್ತಿಯಾದ ತಾಯಿ

0

ಜಾರ್ಖಂಡ್:ಓರ್ವ ಮಗ ಡಿಸಿ ಮತ್ತೋರ್ವ ರೈಲ್ವೆ ಇಂಜಿನಿಯರ್ ಇನ್ನೊಬ್ಬ ಸರಕಾರಿ ಆಸ್ಪತ್ರೆ ವೈದ್ಯ ಆದ್ರೂ ತಾಯಿ ಪೌರಕಾರ್ಮಿಕರು.ಮಕ್ಕಳು ಉನ್ನತ ಹುದ್ದೆಗೇರಿದರೂ ಬೀದಿಗಳ ಕಸ ಗುಡಿಸುತ್ತಲೇ ನಿವೃತ್ತಿಯಾಗಿ ಇವರು ಮಾದರಿಯಾಗಿದ್ದಾರೆ.

ಜಾರ್ಖಂಡ್ ನ ರಾಜ್ರಪ್ ನಗರದ ಸಿಸಿಎಲ್ ಕಾಲನಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕಸಗೂಡಿಸಿದ ಪೌರಕಾರ್ಮಿಕರಾದ ಸುಮಿತ್ರಾದೇವಿ ನಿವೃತ್ತಿಯಾಗುತ್ತಿದ್ದು,
ನಗರಸಭೆ ಸಿಬ್ಬಂದಿ,ನೆರೆಹೊರೆಯವರಿಂದ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.ಚಿಕ್ಕ‌ಸಮಾರಂಭವನ್ನು ನಡೆಸಲಾಯ್ತು.ಈಕೆಗೊಂದು ಖುರ್ಚಿ.ಆಜೂ ಬಾಜೂ ನೆರೆಹೊರೆಯವರು‌ ಅಷ್ಟೇ.

ಅಷ್ಟರಲ್ಲಿ ಸಮಾರಂಭದ ಸ್ಥಳಕ್ಕೆ ನೀಲಿ ದೀಪದ ಕಾರು ಬರುತ್ತದೆ.ಜಿಲ್ಲಾಧಿಕಾರಿ ಮಹೇಂದ್ರಕುಮಾರ ಕೆಳಗಿಳಿದು ಬರುತ್ತಾರೆ.ಸುಮಿತ್ರಾದೇವಿಯ ಪಾದಗಳಿಗೆ ಹಣೆಹಚ್ಚಿ ನಮಸ್ಕರಿಸುತ್ತಾರೆ.ಅವರ ಹಿಂದೆ ಹಿಂದೆಯೇ ಮತ್ತೆರಡು ಕಾರುಗಳು ಬರುತ್ತವೆ.ರೇಲ್ವೆ ಇಂಜನಿಯರ್ ವಿರೇಂದ್ರಕುಮಾರ ಮತ್ತು ಸರಕಾರಿ ವೈದ್ಯ ಧಿರೇಂದ್ರಕುಮಾರ ವೇದಿಕೆಯಡಿ ಬರುತ್ತಾರೆ.ಅವರೂ ಸುಮಿತ್ರಾದೇವಿಯ ಪಾದಗಳಿಗೆ ನಮಸ್ಕರಿಸುತ್ತಾರೆ.ಸುಮಿತ್ರಾದೇವಿಯ ಬಾಯಿಂದ ಮಾತೇ ಹೊರಡುವದಿಲ್ಲ.ಗಳಗಳನೇ ಅಳಲು ಆರಂಭಿಸುತ್ತಾಳೆ.ಸುತ್ತಲಿನ ಜನರಿಗೆ ಅಚ್ಚರಿಯೋ ಅಚ್ಚರಿ. ಉನ್ನತ ಹುದ್ದೆ ಅಧಿಕಾರಿಗಳು ಯಾಕೆ ಬಂದ್ರು,ಯಾಕೆ ಕಾಲಿನ ನಮಸ್ಕರಿಸಿದ್ರು ಅಂತಾ ಗೊಂದಲ.

ಅಗಲೇ ಸುಮಿತ್ರಾದೇವಿಯವರ ಆದರ್ಶ ಎಂತದ್ದು ಎಂದು ಗೊತ್ತಾಗಿದ್ದು.ಪೌರಕಾರ್ಮಿಕಳಾಗಿ ಸೇವೆ ಸಲ್ಲಿಸುತ್ತಲೇ ಮೂವರೂ ಪುತ್ರರನ್ನು ಚೆನ್ನಾಗಿ ಓದಿಸಿ ದೊಡ್ಡ ಅಧಿಕಾರಿಗಳನ್ನಾಗಿ ಮಾಡಿದವಳು ಸುಮಿತ್ರಾದೇವಿ.ದೊಡ್ಡ ಮಗ ವಿರೇಂದ್ರಕುಮಾರ ರೇಲ್ವೆ ಇಂಜನಿಯರ್,ಎರಡನೇ ಮಗ ಧಿರೇಂದ್ರಕುಮಾರ ಸರಕಾರಿ ವೈದ್ಯ ಹಾಗೂ ಮೂರನೇ ಮಗ ಮಹೇಂದ್ರಕುಮಾರ ಬಿಹಾರದ ಸಿವಾನ್ ಜಿಲ್ಲೆಯ ಜಿಲ್ಲಾಧಿಕಾರಿ.ಐ ಎ ಎಸ್ ಅಧಿಕಾರಿ‌ ಎನ್ನುವುದ ತಿಳಿದ ನೆರೆಹೊರೆಯ ಜನರು ಕ್ಷಣ ಕಾಲ ತಬ್ಬಿಬ್ಬಾದರು.

ನಂತರ ಸಾವರಿಸಿಕೊಂಡು,ತನ್ನ ಮೇಲಾಧಿಕಾರಿಗಳತ್ತ ಮುಖ ಮಾಡಿ ಮಾತಾಡಿದ ಸುಮಿತ್ರಾ ದೇವಿ, ಸಾಹೇಬರೇ,30 ವರ್ಷದಿಂದ ಈ ಕಾಲನಿಯ ಬೀದಿಗಳ ಕಸಗೂಡಿಸಿದ್ದೇನೆ.ಆದರೆ ನನ್ನ ಮಕ್ಕಳೂ ನಿಮ್ಮಂತೆಯೇ ಸಾಹೇಬರಾಗಿದ್ದಾರೆ ಎಂದಳು. ಮುಗ್ಧ ಹೃದಯದ ಮನದಾಳದ ಮಾತುಗಳು ಹೊರಬರುತ್ತಿದ್ದಂತೆ ಸುತ್ತಲಿದ್ದವರ ಕಣ್ಣುಗಳು ಒದ್ದೆಯಾದವು.

ಮಗ ಜಿಲ್ಲಾ ಕಲೆಕ್ಟರ್,ಮತ್ತೊಬ್ಬ ರೈಲ್ವೆ ಇಂಜಿನಿಯರ್,ಇನ್ನೊಬ್ಬ ಡಾಕ್ಟರ್ ಆದರೂ ನಾನು ನನ್ನ ವೃತ್ತಿಯನ್ನು ಬಿಡಲಿಲ್ಲ. ಇದರಿಂದಲೇ ನನ್ನ ಕನಸುಗಳು ನನಸಾಗಿರುವಾಗ ನಾನೇಕೆ ಈ ವೃತ್ತಿ ಬಿಡಬೇಕು ಎಂದಳು ಭಾವುಕಳಾದಳು. ಮಕ್ಕಳ ಭವಿಷ್ಯ ರೂಪಿಸಲು ವೃತ್ತಿ ಮುಖ್ಯವಲ್ಲ,ಇಚ್ಛಾಶಕ್ತಿ,ಬದ್ದತೆ ಮುಖ್ಯ ಎನ್ನುವ ಸಂದೇಶ ನೀಡಿದ್ರು.

ಡಿಸಿ ಮಹೇಂದ್ರಕುಮಾರ್ ಮಾತನಾಡಿ, ನಮ್ಮ ತಾಯಿ ನಮಗಾಗಿ ಬಹಳಷ್ಟು ತ್ಯಾಗ ಮಾಡಿದ್ದಾಳೆ.ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಜೀವನದಲ್ಲಿ ಯಾವದೇ ಉದ್ಯೋಗದಲ್ಲೂ ಯಶಸ್ಸನ್ನು ಸಾಧಿಸಬಹುದು ಇದಕ್ಕೆ ನನ್ನ ತಾಯಿಯೇ ಸಾಕ್ಷಿ ಎಂದ್ರು.

ಹೆಲ್ಮೆಟ್ ಧರಿಸದ ಸವಾರರಿಗೆ ವಾರ್ನಿಂಗ್ ನೀಡಲು ಬೀದಿಗಿಳಿದ ಯಮ: ಪೊಲೀಸರ ಕೆಲಸಕ್ಕೆ ಜನರಿಂದ ಮೆಚ್ಚುಗೆ

ಬೆಂಗಳೂರು: ಟ್ರಾಫಿಕ್ ರೂಲ್ಸ್ ಇರೋದೇ ಬ್ರೇಕ್ ಮಾಡೋಕೆ ಅನ್ನೋ ಮನೋಭಾವ ವಾಹನ ಸವಾರರಲ್ಲಿ ಹೆಚ್ಚಾಗುತ್ತಿದೆ. ಹೇರ್ ಸ್ಟೈಲ್ ಹಾಳಾಗುತ್ತೆ,ಕೂದಲು ಉದುರುತ್ತೆ ಅನ್ನೋ ಕಾರಣಕ್ಕೆ ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಚಲಾಯಿಸುತ್ತಾರೆ.ಇಂತವರಿಗೆ ಪಾಠ ಮಾಡಲು ಇಂದು ಪೊಲೀಸರು ಯಮನನ್ನೇ ಕರೆತಂದಿದ್ರು.

ಪೊಲೀಸ್ರು ಏನೇ ಸರ್ಕಸ್ ಮಾಡಿದ್ರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರು ಮಾತ್ರ ಸಂಚಾರ ನಿಯಮ ಉಲ್ಲಂಘನೆ ಮಾಡ್ತಾನೆ ಇರ್ತಾರೆ. ವಾಹನ ಚಾಲನೆ ಮಾಡುವವರೊಂದಿಗೆ ಹಿಂಬದಿ ಸವಾರ ಕೂಡ ಹೆಲ್ಮೆಟ್ ಧರಿಸೋದು ಕಡ್ಡಾಯ ಮಾಡಿದ್ದರೂ ಕೂಡ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗ್ತಾ ಇದೆ.

ಬಹುತೇಕ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರ ಹಾಗು ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ಇರೋದೇ ಅವರ ಸಾವಿಗೆ ಕಾರಣವಾಗುತ್ತಿದೆ.ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೋಲೀಸ್ರು. ದುಬಾರಿ ಫೈನ್ ಹಾಕೋ ಬದಲು ಜಾಗೃತಿ ಮೂಡಿಸುವ ಪ್ರಯತ್ನ ನಡೆಸ್ತಿದ್ದಾರೆ.

ನಗರದ ಟೌನ್ ಹಾಲ್ ಎದುರು ಹಲಸೂರು ಗೇಟ್ ಪೊಲೀಸ್ರು ಯಮನ ವೇಷಧಾರಿ ವ್ಯಕ್ತಿಯಿಂದ ಹೆಲ್ಮೆಟ್ ಧರಿಸದೇ ಇರೋ ಸವಾರರಿಗೆ ವಾರ್ನಿಂಗ್ ಕೊಡಿಸಿದ್ರು.ಗುಲಾಬಿ ಹೂವು ಕೊಡಿಸಿ ಜಾಗೃತಿ ಮೂಡಿಸಿದ್ರು. ಬೀದಿ ನಾಟಕದ ರೀತಿಯಲ್ಲಿ ಕಿರುನಾಟಕ ಪ್ರದರ್ಶಿಸಿ ಹೆಲ್ಮೆಟ್ ಧರಿಸುವ ಅಗತ್ಯತೆ ಕುರಿತು ಮಾಹಿತಿ ನೀಡಿದ್ರು.ಪೊಲೀಸರ ಈ ಜಾಗೃತಿ ಅಭಿಯಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಮನುಷ್ಯ ಮಾನವೀಯತೆ ಮರೆಯುತ್ತಿದ್ದಾನೆ ಎಂಬುದು ಪದೇ ಪದೇ ಸಾಭೀತಾಗುತ್ತಿದೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮಾನವೀಯತೆ, ಮನುಷ್ಯತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಮನುಷ್ಯ ಜೀವಿ ಮಾನವೀಯತೆ ಮರೆತು ಕಾಡುಮೃಗದಂತೆ ವರ್ತಿಸುತ್ತಿದ್ದಾನೆ. ಅಂತಹ ಅದೆಷ್ಟೋ ನಿದರ್ಶನಗಳು ದಿನನಿತ್ಯ ನಮ್ಮ ಕಣ್ಮುಂದೆ ಕಾಣಸಿಗುತ್ತಿವೆ. ತಮ್ಮ ಕಣ್ಮುಂದೆ ಕರುಳು ಕಿತ್ತುಬರುವ ಘಟನೆಗಳು ನಡೆಯುತ್ತಿದ್ದರೂ ಜೀವದ ಬೆಲೆ ಗೊತ್ತಿಲ್ಲದ ರೀತಿ ನಟಿಸುತ್ತಾರೆ. ನೋವು, ನರಳಾಟ, ಚೀರಾಟ ಕೇಳಿದರೂ ನೋಡಿದರೂ ನಮಗೆ ಸಂಬಂಧವೇ ಇಲ್ಲವೆಂಬಂತೆ ದೂರಸರಿದುಬಿಡುತ್ತಾರೆ. ಹಾಗಾದರೆ ಎಲ್ಲಿದೆ ಮಾನವೀಯತೆ, ಮನುಷ್ಯತ್ವ..??

ಹೌದು, ಗೌರಿಬಿದನೂರಿನ ಮೇಳ್ಯ ಗ್ರಾಮದಲ್ಲಿ ಇಂತಹ ಒಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ಯಾರೊಬ್ಬರೂ ಆ ಜೀವದ ನೆರವಿಗೆ ಬರಲಿಲ್ಲ. ಹೆಂಡತಿ ತನ್ನ ಗಂಡನ ಜೀವ ಉಳಿಸಿಕೊಳ್ಳಲು ಎಷ್ಟು ಗೋಗರೆದರೂ ಯಾವೊಬ್ಬ ವ್ಯಕ್ತಿಯೂ ಜೀವ ಉಳಿಸಲು ಮುಂದಾಗಲಿಲ್ಲ. ಬದಲಾಗಿ ಅಪಘಾತದ ವಿಡೀಯೋ ಮಾಡುತ್ತಾ ನಿಂತಿದ್ದರು ಆ ಕಲ್ಲು ಹೃದಯದ ಜನರು. ಕೊನೆಗೂ ಆ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಆಟೋವೊಂದರ ಮುಂದಿನ ಚಕ್ರ ಪಲ್ಟಿ ಹೊಡೆದು ಮಹ್ಮದ್​​ ಖಾನ್​​(50) ಎಂಬಾತ ಗಂಭೀರ ಗಾಯಗೊಂಡಿದ್ದ. ರಕ್ತದ ಮಡುವಿನಲ್ಲಿ ಬಿದ್ದು ಚೀರಾಟ ನಡೆಸಿದ್ದ. ಆತನ ಪತ್ನಿ ಅಸಹಾಯಕತೆಯಿಂದ ಅಲ್ಲಿದ್ದ ಸಾರ್ವಜನಿಕರನ್ನು ಗೋಗರೆಯುತ್ತಿದ್ದಳು. ಆದರೆ ಆ ಮೃಗಮನಸ್ಸಿನ ಸಾರ್ವಜನಿಕರು ಮಾತ್ರ ಜೀವ ಉಳಿಸುವ ಪುಣ್ಯ ಕಾರ್ಯಕ್ಕೆ ಮುಂದಾಗಲೇ ಇಲ್ಲ. ತಡವಾಗಿ ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾನೆ.

ಸಾರ್ವಜನಿಕರು ಅಪಘಾತದಲ್ಲಿ ಸಿಲುಕಿ ನರಳಿತ್ತುರವವರ ಸಹಾಯಕ್ಕೆ ಮುಂದಾಗದ ಘಟನೆಗಳು ಆಗಾಗ ಮರುಕಳಿಸುತ್ತಲೇ ಇದೆ. ಒಂದು ಜನರಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎಂಬ ಅಂಶ ಕಾರಣವಾದರೆ, ಇನ್ನೊಂದೆಡೆ ಪೊಲೀಸರ ಭಯವೂ ಇದಕ್ಕೆ ಕಾರಣ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದರೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿದರೆ, ನಂತರ ಸಾಕ್ಷಿ ಹೇಳುವಂತೆ, ಜತೆಗೆ ಠಾಣೆಗೆ ಬರುವಂತೆ ಪೀಡಿಸುವುದನ್ನು ಕೆಲ ಪೊಲೀಸರು ಇನ್ನೂ ಬಿಟ್ಟಿಲ್ಲ. ಪೊಲೀಸರು ಕರೆದುಕೊಂಡು ಹೋಗುವುದಿಲ್ಲ ಎಂಬ ನಿರ್ಭಯದ ವಾತಾವರಣ ನಿರ್ಮಾಣವಾದಲ್ಲಿ ಮಾತ್ರ ಸಾರ್ವಜನಿಕರು ಇಂಥ ಸಂದರ್ಭಗಳಲ್ಲಿ ನೆರವಿಗೆ ಧಾವಿಸುತ್ತಾರೆ.