ರಾಮನಗರಕ್ಕೂ ಫಿಲ್ಮ್ ಸಿಟಿಗೂ ಏನ್ ಸಂಬಂಧ ಗೊತ್ತಾ?

ಫೈಲ್ ಫೋಟೋ:

ಬೆಂಗಳೂರು:ಶೋಲೆಯಂತಾ ಸಿನೆಮಾ ಶೂಟಿಂಗ್ ಆಗಿದ್ದು ರಾಮನಗರದಲ್ಲಿ ಹೊರತು ಬಿಜಾಪುರದಲ್ಲೋ ಬಾಗಲಕೋಟೆಯಲ್ಲೋ ಅಲ್ಲ ಹಾಗಾಗಿ ರಾಮನಗರದಲ್ಲಿ ಫಿಲ್ಮ್ ಸಿಟಿ ಆರಂಭಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡ್ರು.

ವಿಧಾನಸಭೆ ಕಲಾಪದಲ್ಲಿ ರಾಮನಗರಕ್ಕೂ ಫಿಲ್ಮಸಿಟಿಗೂ ಏನು ಸಂಬಂಧ ರಾಮನಗರಕ್ಕೆ ಏಕೆ ಫಿಲ್ಮ್ ಸಿಟಿ ಎಂದು ಬಿಜೆಪಿ ಸದಸ್ಯ ಮಾಧುಸ್ವಾಮಿ ಕೇಳಿದ ಪ್ರಶ್ನೆಗೆ ಸಚಿವ ಡಿಕೆಶಿ ಉತ್ತರಿಸಿದ್ರು.ಶೋಲೆಯಂತಾ ಸಿನೆಮಾ ಶೂಟಿಂಗ್ ಆಗಿದ್ದು ರಾಮನಗರದಲ್ಲಿ ಹೊರತು ಬಿಜಾಪುರದಲ್ಲೋ ಬಾಗಲಕೋಟೆಯಲ್ಲೋ ಅಲ್ಲ.ಸಿನೆಮಾ ಮಾಡೋರು ಅಲ್ಲಿಗೆ ಯಾರು ಬರುತ್ತಾರೆ.ಹಾಗಾಗಿ ರಾಮನಗರದಲ್ಲಿ ಫಿಲ್ಮ್ ಸಿಟಿ ಮಾಡುವುದರಿಂದ ಚಿತ್ರೋದ್ಯಮಕ್ಕೆ ಅನುಕೂಲವಾಗುತ್ತದೆ ಎಂದು ಸಮರ್ಥಿಸಿಕೊಂಡ್ರು.

ವಿಜಯಪುರಕ್ಕೆ ಮಹಿಳಾ ಯೂನಿವರ್ಸಿಟಿ,ತೋಟಗಾರಿಕಾ ಯೂನಿವರ್ಸಿಟಿ ಎಲ್ಲವನ್ನೂ ಕೊಟ್ಟಿದ್ದೇನೆ ಎನ್ನುವ ಡಿಕೆಶಿ ಹೇಳಿಕೆಗೆ ಗೋವಿಂದ ಕಾರಜೋಳ‌ ಆಕ್ಷೇಪ ವ್ಯಕ್ತಪಡಿಸಿದರು. ಡಾ.ರಾಜ್ ಕುಮಾರ್ ಗೆ ನಾಟಕ ಕಲೆ ಕಲಿಸಿದವರು ವಿಜಯಪುರದವರು.ಕಲೆ ಸಂಸ್ಕೃತಿ ಉಳಿವಿಗೆ ಕೊಡುಗೆ ಕೊಟ್ಟಿರುವವರು ಉತ್ತರ ಕರ್ನಾಟಕದವರೇ ಹೊರತು ನೀವಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಸಿ.ಟಿ ರವಿ ಅತಿ ಹೆಚ್ಚು ಸಿನೆಮಾ ಶೂಟಿಂಗ್ ಗೆ ಬರೋದು ಚಿಕ್ಕಮಗಳೂರು ಕೊಡಗಿಗೆ.ಹಾಗಾಗಿ ಫಿಲ್ಮ್ ಸಿಟಿ ಅಲ್ಲಿಗೆ ಕೊಡಬೇಕಿತ್ತು ಎಂದು ವಾದಿಸಿದರು.

ವಿರೋಧ ಪಕ್ಷದ ಸದಸ್ಯರ ವಾದ,ಅಭಿಪ್ರಾಯಗಳನ್ನು ಆಲಿಸಿದ ಸಚಿವ ಡಿಕೆ ಶಿವಕುಮಾರ್ ನಮ್ಮ ಸರ್ಕಾರ ಚಿತ್ರರಂಗವನ್ನು‌ ದೃಷ್ಠಿಯಲ್ಲಿಟ್ಟುಕೊಂಡೇ ರಾಮನಗರದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುತ್ತಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿ ವಾದಕ್ಕೆ ತೆರೆ ಎಳೆದ್ರು.

ಸದನದಲ್ಲಿ ಫಾರ್ವರ್ಡೆಡ್ ಮೆಸೇಜ್ ಓದಿ ಪೇಚಿಗ ಸಿಲುಕಿದ ಶರವಣ

ಫೈಲ್ ಫೋಟೋ:

ಬೆಂಗಳೂರು:ವಿಧಾನ ಪರಿಷತ್ ಕಲಾಪ ನಡೆಯುವ ವೇಳೆ ವಾಟ್ಸ್ ಆ್ಯಪ್ ಮೆಸೇಜ್ ಓದಿ ಜೆಡಿಎಸ್ ಸದಸ್ಯ ಶರವಣ್ ಪೇಚಿಗೆ ಸಿಲಿಕಿದರು.ಸ್ವಪಕ್ಷದ ಸದಸ್ಯರಿಂದಲೇ ಟೀಕೆಗೆ ಒಳಗಾದರು.

ವಿಧಾನ ಪರಿಷತ್ ಕಲಾಪದಲ್ಲಿ ಮೊಬೈಲ್‌ ಬಳಕೆ ನಿಷೇಧವಿದ್ದರೂ ಕೂಡ ಜೆಡಿಎಸ್ ಸದಸ್ಯ ಶರವಣ ಮೊಬೈಲ್ ವಾಟ್ಸ್ ಆಪ್ ನೋಡಿದರು.ಅದರಲ್ಲಿನ ಸಂದೇಶವನ್ನು ಓದಿ ಹೇಳಿದರು.ಮೂರನೇ ಕ್ಲಾಸ್ ಪಾಸ್ ಆದವರು ರಾಜಕೀಯಕ್ಕೆ ಬರ್ತಾರೆ ಎನ್ನುವ ಮೆಸೇಜ್ ಓದುತ್ತಿದ್ದಂತೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸದಸ್ಯರು ಗರಂ ಆದರು.ಪಕ್ಷಾತೀತವಾಗಿ
ಶರವಣ್ ವಿರುದ್ಧ ಎಲ್ಲ ಸದಸ್ಯರು ಮುಗಿಬಿದ್ದರು.

ವಿದ್ಯಾರ್ಹತೆ ಇಲ್ಲದವರು ಯಾರು ರಾಜಕಾರಣಿಗಳಾಗಲ್ಲ ಎಂದು ಬಿಜೆಪಿಯ ತೇಜಸ್ವಿನಿಗೌಡ ತಿರುಗೇಟು ನೀಡಿದ್ರೆ
ಏನೋ ಬಂದಿದ್ದು ಓದಿದ್ರೆ ಹೇಗೆ ಎಂದ ಸಚಿವ ಬಂಡೆಪ್ಪ ಕಾಶೆಂಪುರ ಅಸಮಧಾನ ಹೊರಹಾಕಿದ್ರು.
ನಾನು ಪದವಿ ಮುಗಿಸಿದ್ದೇನಪಾ ನನಗೂ ನೋವಾಗುತ್ತೆ ಎಂದ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ, ನೀ ಏನ್ ಓದಿದಿಯೋ ಗೊತ್ತಿಲ್ಲ ಎಂದು ಶರವಣ್ ಗೆ ತಿರುಗೇಟು ನೀಡಿದ್ರು.ಮೇಲ್ಮನೆಯ ವೈಭವ ಎತ್ತಿಹಿಡಿಬೇಕು ಎಂದು ಶರವಣ್ ಗೆ ಜೆಡಿಎಸ್ ನ ಬೋಜೇಗೌಡ ತಿವಿದರೆ ವಾಟ್ಸ್ ಆ್ಯಪ್ ನೋಡೋದನ್ನೇ ಬಿಟ್ಟುಬಿಡು ಎಂದು ಹೊರಟ್ಟಿ ಸಲಹೆ ನೀಡಿದ್ರು.

ರೈತರಿಗೆ ಸಿಹಿಸುದ್ದಿ ನೀಡಿದ ಸರ್ಕಾರ: ಎಲ್ಲಾ ಜಲಾಶಯಗಳಿಂದ ನಾಲೆಗೆ ನೀರು ಹರಿಸಲು ಸೂಚನೆ

ಫೈಲ್ ಫೋಟೋ

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಉತ್ತಮ ಒಳಹರಿವು ಬರುತ್ತಿದೆ. ಹೀಗಾಗಿ

ಐಸಿಐಸಿ ಮೀಟಿಂಗ್ ಗಳನ್ನ ಮಾಡಿ ರೈತರಿಗೆ ಅನುಕೂಲವಾಗುವ ರೀತಿ ನೀರು ಬಿಡಲು ತೀರ್ಮಾನವಾಗಿದೆ ಎಂದು ಜಲಸಂಪನ್ಮೂಲ‌ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ‌ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಡಿಕೆಶಿ,ರಾಜ್ಯದಲ್ಲಿ ಉತ್ತಮವಾದ ಮಳೆಯಾಗುತ್ತಿದೆ
ಕಳೆದ ವರ್ಷಕ್ಕಿಂತ ಈ ವರ್ಷ ಎಲ್ಲಾ ಡ್ಯಾಂಗಳಲ್ಲಿ ಒಳ ಹರಿವು ಹೆಚ್ಚಿದೆ. ಕಬಿನಿ, ಹಾರಂಗಿ ಜಲಾಶಯಗಳು ತುಂಬಿವೆ
ಕಾವೇರಿ, ಕೃಷ್ಣಾ, ತುಂಗಭಧ್ರೆಯಲ್ಲೂ ಒಳಹರಿವು ಹೆಚ್ಚಾಗಿ ಬರ್ತಿದೆ ಐಸಿಐಸಿ ಮೀಟಿಂಗ್ ಗಳನ್ನ ಮಾಡಿ ರೈತರಿಗೆ ಅನುಕೂಲವಾಗುವ ರೀತಿ ನೀರು ಬಿಡಲು ತೀರ್ಮಾನವಾಗಿದೆ
ಭದ್ರಾಡ್ಯಾಂನಿಂದ 100 ದಿನ ನೀರು ಬಿಡಲು ಹೇಳಿದ್ದೇನೆ ಎಂದರು.

ನೀರಾವರಿ ಸಲಹಾ ಸಮಿತಿಗೆ ಸಚಿವನ್ನು ನೇಮಕ ಮಾಡಲಾಗಿದೆ. ‌ತುಂಗಭದ್ರಾ ಜಲಾಶಯಕ್ಕೆ ನಾಡಗೌಡ,
ರಮೇಶ್ ಜಾರಕಿಹೊಳಿಯವರನ್ನ ಮಲಪ್ರಭ, ಘಟಪ್ರಭಕ್ಕೆ
ಕೆಆರ್ ಎಸ್ ಗೆ ಪುಟ್ಟರಾಜು, ಕಬಿನಿ ಜಲಾಶಯಕ್ಕೆ ಪುಟ್ಟರಂಗಶೆಟ್ಟಿ, ಹಾರಂಗಿ ಜಲಾಶಯಕ್ಕೆ ಸಾ.ರಾ ಮಹೇಶ್‌, ಹೇಮಾವತಿಗೆ ಎಚ್.ಡಿ ರೇವಣ್ಣನವರನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಕೂಡಲೇ ಸ್ಥಳೀಯ ಶಾಸಕರು, ಜಲಪ್ರತಿನಿಧಿಗಳ ಜೊತೆ ಮಾತಾಡಿ ನೀರು ಬಿಡಲು ಹೇಳಿದ್ದೇವೆ ತುಮಕೂರು ಭಾಗಕ್ಕೆ ಕುಡಿಯುವ ನೀರು ಬಿಟ್ಟಿದ್ದೇವೆ ಎಂದ್ರು.

ಕೆಆರ್ ಎಸ್ ನಿಂದ ತಮಿಳುನಾಡಿಗೆ ಕಳೆದ ಜೂನ್ ತಿಂಗಳಲ್ಲಿ 9 ಟಿಎಂಸಿ ನೀರು ಬಿಡಬೇಕಿತ್ತು ಆದರೆ 13 ಟಿಎಂಸಿ ಬಿಟ್ಟಿದ್ದೇವೆ ಈ ತಿಂಗಳಲ್ಲಿ 5 ಟಿಎಂಸಿ ನೀರು ಬಿಟ್ಟಿದ್ದೇವೆ ಎರಡು ತಿಂಗಳಲ್ಲಿ 18 ಟಿಎಂಸಿ ನೀರು ಬಿಟ್ಟಿದ್ದೇವೆ ಒಟ್ಟಾರೆ 40 ಟಿಎಂಸಿ ಬಿಡಬೇಕಿತ್ತು 18 ಟಿಎಂಸಿ ನೀರು ಬಿಟ್ಟಿದ್ದೇವೆ ರಾಜ್ಯದ ರೈತರ ಹಿತ ಕಾಪಾಡಬೇಕಾಗಿದೆ ಹಾಗಾಗಿ ಪರಿಸ್ಥಿತಿ ನೋಡಿಕೊಂಡು ನೀರು ಹರಿಸಲಾಗುತ್ತದೆ ಎಂದರು.

ಪ್ರತಿ ದಿನ ತಮಿಳುನಾಡಿಗೆ3 ಟಿಎಂಸಿ ನೀರು: ಸಿಎಂ

ಬೆಂಗಳೂರು:ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ‌ ಎಚ್ಡಿಕೆ, 90 ಸಾವಿರ ಕ್ಯೂಸೆಕ್ಸ್ ಒಳ ಹರಿವು ಇದೆ ತಮಿಳುನಾಡಿಗೆ ಪ್ರತೀ ದಿನ 3 ರಿಂದ 4 ಟಿಎಂಸಿ ನೀರು ಬಿಡುತ್ತಿದ್ದೇವೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ತಮಿಳು ನಾಡಿಗೆ ನೀರು ಬಿಡುತ್ತಿದ್ದೇವೆ ಇವತ್ತೂ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ
ನಮ್ಮ ರೈತರಿಗೆ ಬೇಕಾಗುವಷ್ಟು ನೀರು ರಿಸರ್ವ್ ಇಟ್ಟುಕೊಳ್ಳುವಂತೆ ಹೇಳಿದ್ದೇನೆ ನಮ್ಮ ರೈತರಿಗೆ ಮೊದಲು ನೀರು ಬಿಡುವಂತೆ ಖಡಕ್ ಎಚ್ಚರಿಕೆ ಕೊಟ್ಟಿದ್ದೇನೆ ಎಂದ್ರು.

ತಮಿಳುನಾಡಿಗೆ ನಾನು ಏನೂ ಹೇಳಿಲ್ಲ ಕಾವೇರಿ ಜಲಾನಯನ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸುವಂತೆಯೂ ಅಧಿಕಾರಿಗಳಿಗೆ ಹೇಳಿದ್ದೇನೆ ಕಳೆದ ಮೂರು ವರ್ಷಗಳಿಂದ ನಮ್ಮ ರೈತರಿಗೆ ನೀರಿಲ್ಲದೆ ತೊಂದರೆಯಾಗಿದೆ.ಹಾಗಾಗಿ ಈ ಬಾರಿ ಉತ್ತಮ ಮಳಯಾಗುತ್ತಿರುವ ಕಾರಣ ಕೆರೆ ಕಟ್ಟೆ‌ ತುಂಬಿಸಲು ಸೂಚನೆ ಕೊಟ್ಟಿರುವುದಾಗಿ ಹೇಳಿದ್ರು.

ಜನತಾ ದರ್ಶನದಿಂದ ಆಡಳಿತ ಯಂತ್ರಕ್ಕೆ ಸಮಸ್ಯೆಯಾಗ್ತಿದೆ
ಪ್ರತೀ ದಿನ ರಾಜ್ಯಾದ್ಯಂತ ಸುಮಾರು ಹತ್ತು ಸಾವಿರ ಜನರು ನಮ್ಮ ಮನೆಗೆ ಬರ್ತಾರೆ ನನ್ನ ಜೇಬಿನಿಂದ ನಾನು ದುಡ್ಡು ಕೊಡ್ತಿದ್ದೇನೆ ನಾನು ಯಾವುದೇ ಸರ್ಕಾರಿ ಸೌಲಭ್ಯ ತೆಗೆದುಕೊಳ್ಳುತ್ತಿಲ್ಲ ಬಜೆಟ್ ಚರ್ಚೆ ವೇಳೆ ಎಲ್ಲವನ್ನೂ ಹೇಳಿದ್ದೇನೆ ದಾಖಲೆಗಳನ್ನ ಒದಗಿಸಿಕೊಂಡು ನಾನು ಮಾತನಾಡಬೇಕಾಗುತ್ತೆ ಮಾಧ್ಯಮದವರನ್ನ ಸ್ಯಾಟಿಸ್ಫೈ ಮಾಡಲು ಇದೆಲ್ಲ ಮಾಡ್ತಿಲ್ಲ ಮಾಧ್ಯಮದವರ ಮೇಲೆ ಮತ್ತೆ ಸಿಎಂ ಸಿಟ್ಟಾದರು.

ಸಿಎಜಿ ವರದಿಯಲ್ಲಿ ಗೃಹ ಇಲಾಖೆ ವೈಫಲ್ಯ ಬಗ್ಗೆ ಪ್ರಸ್ತಾಪವಾಗಿದೆ.ಆದರೆ ಅದೆಲ್ಲಾ ಹಿಂದಿನ ಸರ್ಕಾರದಲ್ಲಿ ಆಗಿರೋದು.ಹಿಂದಿನ ಸರ್ಕಾರದಲ್ಲಿ ಇಲಾಖೆಗೆ ಸೂಕ್ತ ನಿರ್ದೇಶನ ಸಿಕ್ಕಿಲ್ಲ.ಈಗ ನಮ್ಮ ಸರ್ಕಾರದ ವೇಳೆ ಸಿಎಜಿ ವರದಿಯಲ್ಲಿ ಯೋಜನೆಗಳು ಅನುಷ್ಠಾನ ಆಗಿಲ್ಲ ಅಂತ ಹೇಳಿದೆ ನಮ್ಮ ಸರ್ಕಾರ ಸಮಸ್ಯೆ ಬಗೆಹರಿಸಲಿದೆ ಎಂದ್ರು.

ಸರಕಾರಿ ನೌಕರರ ರಿಯಾಯಿತಿ ಬಸ್ ರದ್ದು: ಬಿಎಂಟಿಸಿ ಆದೇಶ

ಬೆಂಗಳೂರು:ಭಾರೀ ನಷ್ಟಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ರಿಯಾಯಿತಿ ಬಸ್ ಪಾಸ್ ಅನ್ನು ಬಿಎಂಟಿಸಿ ರದ್ದು ಮಾಡಿದೆ.ಆರ್ಥಿಕ ಹೊರೆಯಿಂದ ಕಂಗಾಲಾಗಿರುವ ಬಿಎಂಟಿಸಿಯಿಂದ ನಷ್ಟ ಕಡಿಮೆ ಮಾಡೋ ಯತ್ನದ ಭಾಗವಾಗಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ನೀಡುತ್ತಿದ್ದ ಬಸ್ ಪಾಸ್ ರದ್ದುಪಡಿಸಿದೆ.

ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ನೀಡುವ ಮಾಸಿಕ ಪಾಸ್ ಗಳನ್ನು ಪಡೆಯುವಂತೆ ನೌಕರರಿಗೆ ಸೂಚನೆ ನೀಡಿದೆ.ಬಿಎಂಟಿಸಿಯಿಂದ ಎಲ್ಲಾ ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೆ ಈ ಸಂಬಂಧ ಪತ್ರ ರವಾನೆ ಮಾಡಿದ್ದು, ಬಿಎಂಟಿಸಿ ನಿರ್ಧಾರಕ್ಕೆ ರಾಜ್ಯ ಸರ್ಕಾರಿ ನೌಕರರ ವರ್ಗ ತೀವ್ರ ವಿರೋಧ ವ್ಯಕ್ತಪಡಿಸಿದೆ.ಸಕಾರಣಗಳನ್ನು ನೀಡದೇ ರಿಯಾಯಿತಿ ಪಾಸ್ ಗಳನ್ನು ರದ್ದು ಮಾಡಿರೋದಕ್ಕೆ ಅಸಮಧಾನ ವ್ಯಕ್ತಪಡಿಸಿದೆ.