ಮೊದಲ ಬಾರಿಗೆ ಮಾವಿಗೆ ಬೆಂಬಲ ಬೆಲೆ: ಪ್ರತಿ ಟನ್ ಗೆ 2500 ರೂ.ಘೋಷಣೆ

ಬೆಂಗಳೂರು: ನಿಫಾ ವೈರಸ್ ಭೀತಿಗೆ ಸಿಲುಕಿ ಬೆಲೆ ಕಳದುಕೊಂಡ ಮಾವು ಬೆಳೆಗೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ.ಪ್ರತಿ ಟನ್ ಮನವಿಗೆ 2500 ರೂ.ಗೆ ಖರೀದಿಸಲು ಸೂಚನೆ ನೀಡಿದೆ.

ವಿಧಾನಸಭೆಯ ಆರನೇ ದಿನದ ಕಲಾಪದಲ್ಲಿ ಮಾವಿನ ಘಮಲು ಪಸರಿಸಿತು. ಮಾವಿನ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ವಿಷಯ ಪ್ರಸ್ತಾಪವಾಯಿತು. ನಿಫಾ ವೈರಸ್ ವದಂತಿ ಹಿನ್ನೆಲೆಯಲ್ಲಿ ಮಾವು ಬೆಳೆಯನ್ನು ರೈತರು ರಸ್ತೆಗೆ ಸುರಿಯುತ್ತಿರುವ ಬಗ್ಗೆ ಕೃಷಿ ಸಚಿವ ಶಿವಶಂಕರರೆಡ್ಡಿ ಉಲ್ಲೇಖಿಸಿದರು.ಹೊರ ರಾಜ್ಯದಲ್ಲಿನ‌ ಸಂಸ್ಕರಣಾ ಘಟಕಗಳಲ್ಲೂ ಸಹ ರಾಜ್ಯ ಮಾವನ್ಮು ನಿಷೇಧಿಸಲಾಗಿದೆ ಎನ್ನುವ ಮಾಹಿತಿ ನೀಡಿದರು.

ಈ ವೇಳೆ ಸದನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಹಾರಾಷ್ಟ್ರದಲ್ಲಿನ‌‌ ಮಾವು ಸಂಸ್ಕರಣಾ ಘಟಕಕ್ಕೆ ಮಾವು ಸರಬರಾಜು ಮಾಡಲು ಪ್ರಯತ್ನಿಸಿದೆ.ಆದರೆ ಮಹಾರಾಷ್ಟ್ರದಲ್ಲೂ ಹೆಚ್ಚಿನ ಬೆಳೆ ಬಂದಿದೆ.ಆಂಧ್ರ ಪ್ರದೇಶ ಸಿಎಂ ಜತೆ ಮಾತನಾಡಲು ಪ್ರಯತ್ನಿಸಿದೆ ಅವರು ವಿದೇಶ ಪ್ರವಾಸದಲ್ಲಿದ್ದಾರೆ.ಅಮೇರಿಕಾದಲ್ಲೂ ಬೆಳೆ ಇಳುವರಿ ಹೆಚ್ಚಾಗಿದೆ.ಪ್ರತಿಬಾರಿ ಕೋಲಾರ ಶ್ರೀನಿವಾಸಪುರದಿಂದ ಚಿತ್ತೂರಿಗೆ ಮಾವು ರವಾನೆಯಾಗುತ್ತಿತ್ತು.ಆದರೆ ಈ ಬಾರಿ ಅಲ್ಲಿಯೇ ಹೆಚ್ಚು ಬೆಳೆ ಬಂದ ಕಾರಣ ಚಿತ್ತೂರಿಗೆ ರಾಜ್ಯದ ಮಾವು ತರಿಸುವುದನ್ನು ಸ್ಥಗಿತಮಾಡಿದೆ ಎನ್ನುವ ಮಾಹಿತಿ ನೀಡಿದರು.

ಆದರೂ ರೈತರಿಗೆ ಸಾಂತ್ವನ ಹೇಳಲು ಸರ್ಕಾರವೇ ಮಾರುಕಟ್ಟೆ ಪ್ರವೇಶಿಸಿ ಬೆಂಬಲ ಬೆಲೆ ಕೊಟ್ಟು ಮಾವು ಖರೀದಿಗೆ ಆದೇಶಿಸಲಾಗಿದೆ.ಪ್ರತಿ ಟನ್ ಗ 2500 ರೂ.ಬೆಲೆ ಘೋಷಿಸಿದ್ದು ಇದರಿಂದ ಸರ್ಕಾರಕ್ಕೆ 15-20ಕೋಟಿ ಹೆಚ್ಚಿನ‌ಹೊರೆಯಾಗುತ್ತದೆ.ವಿಧಾನಸಭೆ ಕಲಾಪ ಮುಗಿದ ಬಳಿಕ ರಾಜ್ಯದಲ್ಲಿ ಮಾವು ಸಂಸ್ಕರಣ ಘಟಕಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ವೇಳ ಸರ್ಕಾರದ ತ್ವರಿತ ಸ್ಪಂಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ಎಪಿಎಂಸಿ ಮೂಲಕ ಪ್ರಮಾಣಪತ್ರ ಪಡೆದ ಬಳಿಕವೇ ಮಾವು ಖರೀದಿಗೆ ಸೂಚನೆ ಕೊಡಿ.ಇಲ್ಲವಾದರೆ ದುರುಪಯೋಗ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

ಸಚ್ಛತೆ ಕಾಯ್ದುಗೊಳ್ಳದ ಸಿಬ್ಬಂದಿ:ಇಂದಿರಾ ಕ್ಯಾಂಟೀನ್‌ಗೆ ಬಿತ್ತು ಬೀಗ!

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳಹಿಡಿಯಲಿದೆಯೇ ಎನ್ನುವ ಅನುಮಾನ ಮೂಡಿದೆ.ಸ್ವಚ್ಚತೆ ಕಾಪಾಡದ ಸಿಬ್ಬಂದಿಯ ನಡೆ ಖಂಡಿಸಿ ಒಂದು ಕ್ಯಾಂಟೀನ್ ಗೆ ಸ್ಥಳೀಯರೇ ಬೀಗ ಜಡಿದಿದ್ದಾರೆ.

ಅಗ್ಗದ ದರಕ್ಕೆ ಊಟ ತಿಂಡಿ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸ್ವಚ್ಛತೆಯ ಸಮಸ್ಯೆ ತಲೆದೂರಿದೆ ಎನ್ನುವ ಆರೋಪಗಳು ಕೇಳಿಬಂದಿದೆ.ಬಿಳೇಕಳ್ಳಿ ವಾರ್ಡಿನಲ್ಲಿರುವ ಇಂದಿರಾ ಕ್ಯಾಂಟೀನ್ ಸಮೀಪ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕ್ಯಾಂಟೀನ್ ಗೆ ಸಾರ್ವಜನಿಕರೇ ಬೀಗ ಜಡಿದಿದ್ದಾರೆ.

ಸರ್ಕಾರದ ಅವ್ಯವಸ್ಥೆಗೆ ಸಾರ್ವಜನಿಕರ ಆಕ್ಷೇಪ.ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಬಿತ್ತು ಬೀಗ.ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದ ಸಾರ್ವಜನಿಕರು.
ಇಂದಿರಾ ಕ್ಯಾಂಟೀನ್ ಸ್ವಚ್ಛತೆ ಮಾಡದ ಸಿಬ್ಬಂದಿ ಕ್ಯಾಂಟೀನ್ ವೇಸ್ಟೇಜ್ ತಂದು ಮೋರಿಗೆ ಸುರಿಯುತ್ತಿದ್ದು ಇದರಿಂದ ಸುತ್ತಮುತ್ತ ಗಬ್ಬು ನಾರುತ್ತಿದೆ ಎಂದು ಆಕ್ರೋಶಗೊಂಡ ಸ್ಥಳೀಯರು ವಾರ್ಡ್ ನಂಬರ್ 188ರ ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದಿದ್ದಾರೆ.ವ್ಯವಸ್ಥೆ ಸರಿಪಡಿಸಿಕೊಳ್ಳೋವರೆಗೆ ಬೀಗ ತೆಗೆಯದಿರಲು ತೀರ್ಮಾನಿಸಿದ್ದಾರೆ.

ಮಾವು ಬೆಳೆಗೆ ಬೆಂಬಲ ಬೆಲೆಗೆ ಚಿಂತನೆ:ಸಿಎಂ

ಬೆಂಗಳೂರು:ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೆರೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ನೆರೆ ರಾಜ್ಯದಲ್ಲಿ ಕಾಣಿಸಿಕೊಂಡ ನಿಫಾ ವೈರಸ್‌ ಆತಂಕದಿಂದ ಮಾವಿಗೆ ಬೇಡಿಕೆ ಕುಸಿದು ರೈತರು ಸಂಕಟಕ್ಕೆ ಸಿಲುಕಿದ್ದು, ರೈತರು ಬೆಳೆದ ಟನ್‌ಗಟ್ಟಲೆ ಮಾವು‌ ಕೊಳ್ಳುವವರಿಲ್ಲದೆ ನಷ್ಟಕ್ಕೆ ಸಿಲುಕಿದ್ದಾರೆ.ಮಾವು ಬೆಳೆಗಾರರ ಸಮಸ್ಯೆಯನ್ನು ಮನಗಂಡಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾವಿಗೆ ಬೆಂಬಲ ಬೆಲೆ ನೀಡುವ ಕುರಿತು ಚಿಂತನೆ ನಡೆಸಿದ್ದಾರೆ.

ಮಾವು ಬೆಳೆಯನ್ನು ಆಂಧ್ರಪ್ರದೇಶ ಹಾಗೂ ಮಹರಾಷ್ಟ್ರ ರಾಜ್ಯಗಳಿಗೆ ರವಾನಿಸಲು ಆಯಾ ರಾಜ್ಯದ ಮುಖ್ಯಮಂತ್ರಿ ಗಳೊಡನೆ ಚರ್ಚೆ ನಡೆಸಿದ್ದಾರೆ. ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಮಾವು ಬೆಳೆಗಾರರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿಗಳು ರೈತರಿಗೆ ಅಭಯ ನೀಡಿದ್ದಾರೆ.

ಅಮೆರಿಕಾ ವಿದೇಶಾಂಗ ನೀತಿ ಅಧ್ಯಯನಕ್ಕೆ ಕನ್ನಡಿಗ ಅಧಿಕಾರಿ ಆಯ್ಕೆ!

ನವದಹಲಿ: ಅಮೆರಿಕಾ ವಿದೇಶಾಂಗ ನೀತಿಯ ವಿಶೇಷ ಅಧ್ಯಯನಕ್ಕೆ ಕನ್ನಡಿಗ ಐಎಫ್ಎಸ್ ಅಧಿಕಾರಿ ರಾಜೇಶ್ ನಾಯ್ಕ್ ಆಯ್ಕೆಯಾಗಿದ್ದಾರೆ.

ಜಪಾನ್ ದೇಶದ ಪೂರ್ವ ಅಧೀನ ರಾಯಭಾರಿ ಹಾಗು ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಂತೀಯ ಪಾಸ್ ಪೋರ್ಟ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಶ್ ನಾಯ್ಕ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿದೇಶಾಂಗ ನೀತಿಯ ವಿಶೇಷ ಅಧ್ಯಯನಕ್ಕಾಗಿ ಏಷಿಯ ಫೌಂಡೇಶನ್ ಸಂಸ್ಥೆಯಿಂದ ಆಯ್ಕೆಗೊಂಡ ಏಕೈಕ ಭರತೀಯ ಅಧಿಕಾರಿಯಾಗಿದ್ದಾರೆ.

ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಒಂದು ತಿಂಗಳ ತರಬೇತಿ ಪಡೆಯುತ್ತಿರುವ ಕರ್ನಾಟಕದ ಹೆಮ್ಮೆಯ ಅಧಿಕಾರಿ ರಾಜೇಶ್ ನಾಯ್ಕ ಭಾರತ ಮತ್ತು ಅಮೇರಿಕಾ ದೇಶಗಳ ನಡುವಿನ ವಿದೇಶಾಂಗ ವ್ಯವಹಾರಗಳ ಸಂಬಂಧ ಅಭಿವೃದ್ದಿಗೆ ಶ್ರಮಿಸಲಿದ್ದಾರೆ.

ರಾಜೇಶ್ ನಾಯ್ಕ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಉತ್ತರ ಕನ್ನಡ ಜಿಲ್ಲೆಯ ವಕೀಲರಾದ ಎನ್.ಡಿ ನಾಯ್ಕರವರ ಪುತ್ರ.ಸ್ನಾತಕೋತ್ತರ ಪದವೀಧರರಾದ ರಾಜೇಶ ನಾಯ್ಕ್ 2010 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಮೂಲಕ ಭಾರತೀಯ ವಿದೇಶಾಂಗ ಸೇವೆಗೆ ಆಯ್ಕೆಯಾಗಿದ್ದ ಅಧಿಕಾರಿ. ಜಪಾನಿನ ಭಾರತೀಯ ರಾಯಭಾರಿ ಕಛೇರಿಯಲ್ಲಿ ಕಾರ್ಯದರ್ಶಿಯಾಗಿ ಸುಮಾರು 4 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ದೇಹಲಿಯ ವಿದೇಶಾಂಗ ಮಂತ್ರಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ಪ್ರಾಂತೀಯ ಪಾಸ್ ಪೋರ್ಟ್ ಕಛೇರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎನ್‌ಇಟಿ ಪರೀಕ್ಷೆಗೆ ಹಾಜರಾಗಲು ತಾಳಿ, ಕಾಲುಂಗುರ ತೆಗೆಯಬೇಕು: ಶಾಲಾ ಆಡಳಿತ ಮಂಡಳಿ ನಿಯಮಕ್ಕೆ ಪೋಷಕರ ಆಕ್ರೋಶ

ಬೆಂಗಳೂರು: ನೆಟ್ ಪರೀಕ್ಷೆ ಬರಿಬೇಕಾದ್ರೆ ತಾಳಿ ಕಾಲುಂಗರ ತೆಗಿಬೇಕು. ಇಲ್ಲ ಅಂದ್ರೆ ಪರೀಕ್ಷೆಗೆ ಅವಕಾಶ ಕೊಡಲ್ಲ ಎಂದು ಶಾಲಾ ಆಡಳಿತ ಮಂಡಳಿ ಪತಿಯರ ಮುಂದೆ ಪತ್ನಿಯರ ತಾಳಿ ಕಾಲುಂಗುರ ತೆಗೆಸಿದ ಘಟನೆ ಇಂದು ಜೆಪಿ ನಗರದ ಬ್ರಿಗೆಡ್ ಸ್ಕೂಲ್ ನಲ್ಲಿ ನಡೆದಿದೆ.

ಜೆಪಿ ನಗರದ ಬ್ರಿಗೆಡ್ ಸ್ಕೂಲ್ ನಲ್ಲಿ ಇಂದು ನೀಟ್ ಪರೀಕ್ಷೆ ನಡೆಯಿತು. ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕಾದ್ರೆ ತಾಳಿ ಕಾಲುಂಗುರ ತೆಗೆಯ ಬೇಕು ಎಂದು ಶಾಲಾ ಆಡಳಿತ ಮಂಡಳಿ ಹೊಸದೊಂದು ನಿಯಮ ಮಾಡಿದೆ. ತಾಳಿ, ಕಾಲುಂಗುರ ಹಿಂದೂ ಸಂಪ್ರದಾಯ ಎಂದೂ ಹೇಳಿದರೂ ಆಡಳಿತ ಮಂಡಳಿ ಅದನ್ನು ಕಿವಿಗೆ ಹಾಕಿಕೊಂಡಿಲ್ಲ. ಕೊನೆಗೆ ಕಣ್ಣಿರಾಕುತ್ತಾ ತಮ್ಮ ಗಂಡಂದಿರ ಎದರೇ ತಾಳಿ ಕಾಲುಂಗರ ತೆಗದು ಮಹಿಳೆಯರು ಪರೀಕ್ಷೆ ಬರೆದಿದ್ದಾರೆ.

ಇದು ನಮ್ಮ ನಂಬಿಕೆ ಮತ್ತು ಧರ್ಮಕ್ಕೆ ವಿರುದ್ದವಾದುದ್ದು ಎಂದು ಪೊಷಕರ ಆರೋಪಿಸಿದ್ದು, ಸರ್ಕೂಲರ್ ನಲ್ಲಿ, ಎಲೆಕ್ಟ್ರಿಕ್ ವಸ್ತುಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಇದೆ. ಆದ್ರೆ ತಾಳಿ ಕಾಲುಂಗರ ತೆಗೆಸಿದ್ದು ಪೊಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಡಗಿನಲ್ಲಿ ಹೆಚ್ಚಿದ ಮಳೆ: ಶಾಲಾ, ಕಾಲೇಜುಗಳಿಗೆ ನಾಳೆ ರಜೆ

ಕೊಡಗು: ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ದಾರಾಕಾರ ಮಳೆಯಾಗಿತ್ತಿರುವ ಹಿನ್ನೆಲೆ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ‌.

ಕಳೆದೆರೆಡು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ವರುಣನ ಅರ್ಭಟ ಹೆಚ್ಚಾಗಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ನಾಳೆ ಶಾಲಾ, ಕಾಲೇಜುಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.

ಹಾರಂಗಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದ್ದು, ನದಿ ತೊರೆಗಳು ತುಂಬಿಹರಿಯುತ್ತಿವೆ.