ತಮಿಳುನಾಡಿಗೆ ಕಾವೇರಿ ನೀರು: ಜುಲೈ 19 ಕ್ಕೆ ನಿರ್ಧಾರ!

ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಜುಲೈ 19 ರಂದು ನಿರ್ಧಾರ ಕೈಗೊಳ್ಳುವ ತೀರ್ಮಾನಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಬಂದಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಿತು.ಸಮಿತಿ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ನಾಲ್ಕು ಗಂಟೆಗಳ‌ ಕಾಲ ಸಭೆ ನಡೆಸಲಾಯಿತು.ಪ್ರಾಧಿಕಾರದ ಸೂಚನೆ,ಜಲಾಶಯದ ವಸ್ತುಸ್ಥಿತಿ,ಮಳೆ ಪ್ರಮಾಣ ಕುರಿತು ಚರ್ಚೆ ನಡೆಸಲಾಯಿತು.

ಸಭೆಯ ಬಳಿಕ ಮಾತನಾಡಿದ ನವೀನ್ ಕುಮಾರ್, ಇಂದಿನ ಸಭೆ ಸುಸೂತ್ರವಾಗಿ ನಡೆಯಿತು.ಪ್ರಾಧಿಕಾರದ ಸೂಚನೆ ಪಾಲನೆ ಬಗ್ಗೆ ಚರ್ಚೆಯಾಗಿದೆ ಮಳೆಯ ಪ್ರಮಾಣ, ಒಳ ಹರಿವು, ನೀರಿನ ಶೇಖರಣೆ ಮತ್ತು ಬಿಡುಗಡೆಯ ಮಾಹಿತಿ ಸಂಗ್ರಹ ಕುರಿತು ಚರ್ಚಿಸಲಾಗಿದೆ ಈ ಬಗ್ಗೆ ಕಾವೇರಿ ಕೊಳ್ಳದ ರಾಜ್ಯಗಳಿಂದ ಮಾಹಿತಿ ಕೇಳಿದ್ದೇವೆ ಎಂದರು.

ಜುಲೈ 16 ನೇ ತಾರೀಖಿನೊಳಗೆ ಮಾಹಿತಿ ನೀಡುವಂತೆ ಕಾವೇರಿ ಕೊಳ್ಳದ ರಾಜ್ಯಗಳಿಗೆ ಕೇಳಿದ್ದೇವೆ.19ನೇ ತಾರೀಖು ಮತ್ತೆ ಸಭೆ ಸೇರಿ ಮುಂದಿನ ಕಾರ್ಯ ನಿರ್ಧರಿಸಲಿದ್ದೇವೆ ಎಂದರು.

ಖರ್ಗೆಗೆ ಸಿಎಂ ಇರಲಿ ಡಿಸಿಎಂ ಪಟ್ಟವೂ ಸಿಗ್ಲಿಲ್ಲ,ನಂಗೆ ಪ್ರಮೋಷನ್ನೂ ಇಲ್ಲ ಅಂದಿದ್ದು ಯಾರು‌ ಗೊತ್ತಾ?

ಬೆಂಗಳೂರು: ನನ್ನ ಪರಿಸ್ಥಿತಿ ಕೂಡ ದಲಿತ ನೌಕರರ ರೀತಿಯೇ ಆಗಿದೆ.ಇನ್ನೂ ಪ್ರಮೋಷನ್ ಆಗಿಲ್ಲ.ನಿಮಗಾದ್ರೆ ಕಾನೂನಿದೆ, ನನಗೆ ಯಾವುದಿದೆ ಎಂದು ಮುಖ್ಯಮಂತ್ರಿ ಒದವಿ ಸಿಗದ ಬಗ್ಗೆ ಡಿಸಿಎಂ‌ ಡಾ.ಜಿ ಪರಮೇಶ್ವರ್ ತಮ್ಮ ಸಾತ್ವಿಕ ಸಿಟ್ಟು ಹೊರ ಹಾಕಿದ್ರು.

ಎಸ್ಸಿ ಎಸ್ಟಿ ಎಂಎಲ್.ಎ, ಎಂಎಲ್‌ಸಿ, ಎಂ.ಪಿ, ರಾಜ್ಯ ಸಭಾ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಪರಮೇಶ್ವರ್, ತೊಂದರೆ ಆದಾಗ ಅಂಬೇಡ್ಕರ್ ನೆನಪಿಸಿಕೊಂಡಿದ್ದೀರಿ. ಸ್ವಲ್ಪ‌ ತಡವಾಗಿ ನೆನಪಿಸಿಕೊಂಡಿದ್ದೀರಿ.ಮೊದಲೇ‌ ಹೆಚ್ಚು ಒಗ್ಗಟ್ಟಾಗಿದ್ದರೆ ಯಾವೋನೂ ಹೀಗೆ ಮುಟ್ಟುತ್ತಿರಲಿಲ್ಲ.ದಲಿತ ಮುಖ್ಯಮಂತ್ರಿ ಅಂತಾರೆಯೇ ಹೊರತು‌ ನಮ್ಮನ್ನೂ ಮುಖ್ಯಮಂತ್ರಿ ಅನ್ನೋದಿಲ್ಲ.ಈಗ ದಲಿತ ಉಪಮುಖ್ಯಮಂತ್ರಿ ಅಂತಿದ್ದಾರೆ.ಬಸವಲಿಂಗಯ್ಯನವರಿಗೆ, ರಂಗನಾಥ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ.ಮಲ್ಲಿಕಾರ್ಜುನ ಖರ್ಗೆ ನಾನು ‌ಕಂಡ ಅಪ್ರತಿಮ ನಾಯಕ.ನಾನು ವಿದ್ಯಾರ್ಥಿ ದೆಸೆಯಿಂದಲೂ ಖರ್ಗೆಯನ್ನ ನೋಡಿದ್ದೇನೆ.ಅಂಥ ಧೀಮಂತ ‌ಖರ್ಗೆ ಅವರು ಡಿಸಿಎಂ ಕೂಡ ಆಗಲಿಲ್ಲ.ಯಾರು ಮಾಡಿದ ಪುಣ್ಯವೂ ಇಂದು ನಾನು ಡಿಸಿಎಂ ಆಗಿದ್ದೇನೆ ಎಂದ್ರು.

ಭಡ್ತಿ ಮೀಸಲಾತಿ ವಿಚಾರದಲ್ಲಿ ಯಾವುದೇ ಡಿಕ್ರಿ, ಆದೇಶ ಹೊರಡಿಸಲು ಆಗೋದಿಲ್ಲ.‌ ಬಿಲ್ ನಲ್ಲಿಯೇ ನ್ಯಾಯಾಲಯ ಮಧ್ಯ ಬರುವಂತಿಲ್ಲ‌ ಎಂದು ಸ್ಪಷ್ಟವಾಗಿ ಹೇಳಲಾಗಿದೆ.ಶೀಘ್ರದಲ್ಲೇ ನಾನು ಭಡ್ತಿ ಮೀಸಲಾತಿ ಬಗ್ಗೆ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸೂಕ್ತ ನಿರ್ಧಾರ ಕೈಗೊಳ್ತೀನಿ.ರಾಷ್ಟ್ರಪತಿಗಳ ಸಹಿ ಆದ್ರೂ ಅದು ಜಾರಿಗೆ ಬರ್ತಿಲ್ಲ.ಯಾವುದೇ ಕಾರಣಕ್ಕೂ ಹಿಂಬಡ್ತಿ ಆಗೋದಕ್ಕೆ ಬಿಡೊಲ್ಲ.ಸುಪ್ರೀಂ ಕೋರ್ಟ್ ಆದೇಶ ಆದಷ್ಟು ಬೇಗ ಪಾಲಿಸಬೇಕಿದೆ.ಗೆಜೆಟ್ ನೋಟಿಫಿಕೇಷನ್ ಮಾಡಬೇಕಿದೆ.
ನಾವು ಎಂದೂ ಇಂಥ ವಿಚಾರದಲ್ಲಿ ಎದೆಗುಂದುವುದಿಲ್ಲ.
ದಲಿತ ನೌಕರರು ಯಾರೂ ಎದೆಗುಂದುವುದು ಬೇಡ ಎಂದು ಅಭಯ ನೀಡಿದ್ರು.

ಹಳ್ಳಿಗಾಡಿನಲ್ಲಿ ಪರಿಶಿಷ್ಟ ಜಾತಿ, ವರ್ಗದ ಪರಿಸ್ಥಿತಿ ಕಷ್ಟ ಇದೆ.
ಇಂದಿಗೂ ದಲಿತರಿಗೆ ದೇವಸ್ಥಾನಗಳಿಗೆ ಸೇರಿಸೊಲ್ಲ. ನಮ್ಮ ಸರ್ಕಾರದಲ್ಲಿರುವ ನಾವೂ ಬಹಳ ಬುದ್ದಿವಂತರು.ಎಸ್ಸಿ, ಎಸ್ಟಿ ಸಮುದಾಯದವರಿಗೆ ವಸತಿ ಸಮುಚ್ಚಯ ಮಾಡಿದ್ರೂ ಊರ ಹೊರಗೆ ಮಾಡ್ತೀವಿ.ಆದ್ದರಿಂದ ಮೊದಲು ನಮ್ಮ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಬೇಕು.ನಮ್ಮ ಮಕ್ಕಳನ್ನು ಐಎಎಸ್, ಐಪಿಎಸ್ ಮಾಡಬೇಕು.ಆ ಮೂಲಕ ಆಡಳಿತ ಯಂತ್ರದ ಚುಕ್ಕಾಣಿ ಹಿಡಿಯುವ ಕೆಲಸ‌ಮಾಡಬೇಕು ಎಂದ್ರು.

ಇದು ಸರ್ಪೈಸ್ ಬಜೆಟ್: ಚೊಚ್ಚಲ ಬಜೆಟ್ ಸಮರ್ಥಿಸಿಕೊಂಡ‌ ಸಿಎಂ

ಬೆಂಗಳೂರು:ಈಬಜೆಟ್ ನಲ್ಲಿ ಏನೂ ಇಲ್ಲ ಅಂತ ಅಂದುಕೊಳ್ಳುವುದು ಬೇಡ ಬೇರೆ ರೀತಿಯಲ್ಲಿ ಮಾತನಾಡುವುದು ಬೇಡ.ಇದೊಂದು ಸರ್ಪೈಸ್ ಬಜೆಟ್,ಸೋಮವಾರದಿಂದ ಬಜೆಟ್ ಬಗ್ಗೆ ಚರ್ಚೆ ನಡೆಯಲಿದೆ ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

 

ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ರಾಜಸ್ವ ವೆಚ್ಚ ೧.೬೬.೩೯೩ ಕೋಟಿ ಇದೆ ಬಂಡವಾಳ ವೆಚ್ಚ ಶೇ ೧೮.೭೯ ಕ್ಕೆ ಹೆಚ್ಚಳವಾಗಿದೆ ವಿತ್ತೀಯ ಹೊಣೆಗಾರಿಕೆ ಶಾಸನ ಬದ್ಧವಾಗಿದೆ ಯಾವುದೇ ಆರ್ಥಿಕ ಅಶಿಸ್ತಿಗೆ ಅವಕಾಶ ಕೊಟ್ಟಿಲ್ಲ.೧೧೦ ಕೋಟಿ ಸರ್ ಪ್ಲಸ್ ಚಾರ್ಜ್ ಇಟ್ಟಿದ್ದೇವೆ ೩೪ ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದರು.

 

ಅಶೋಕ್ ಹಾಸನಕ್ಕೆ ಮಾತ್ರ ಅವಕಾಶ  ಕೊಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ ಆದರೆ ಬೆಂಗಳೂರಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅವಕಾಶ ನೀಡಿದ್ದೇವೆ ಇದನ್ನ ಅವರು ಅರ್ಥ ಮಾಡಿಕೊಳ್ಳಬೇಕು. ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್, ಕೆ.ಆರ್.ಪುರಂ-ಗೊರಗುಂಟೆ ಪಾಳ್ಯ, ರಿಚ್ಮಂಡ್ ಸರ್ಕಲ್,ಸೇರಿ ಒಳಭಾಗಗಳು, ಮಿನರ್ವ ಸರ್ಕಲ್ ನಿಂದ ನೈಸ್ ರೋಡ್ ಜಂಕ್ಷನ್, ಇಲ್ಲಿ ಎಲಿವೆಟೇಡ್ ಕಾರಿಡಾರ್ ಗೆ ಒಪ್ಪಿಗೆ ಕೊಟ್ಟಿದ್ದೇವೆ, ಇದು ಬೆಂಗಳೂರು ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮಾಡಿದ್ದು, ಇದನ್ನ ಅಶೋಕ ಚಕ್ರವರ್ತಿ ತಿಳಿದುಕೊಳ್ಳಬೇಕು ಎಂದು ಟೀಕಿಸಿದ್ರು.

 

ಬಜೆಟ್ ಓದುವಾಗ ಬಿಜೆಪಿ ನಾಯಕರು ಎಲ್ಲಿ ನೋಡ್ತಿದ್ರೋಆ ರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ೧೦ ಕೋಟಿ ಇಟ್ಟಿದ್ದೇವೆ ಅದನ್ನ ಬಜೆಟ್ ನಲ್ಲಿ ತಿಳಿಸಿಲ್ಲ ಅಷ್ಟೇ ಹಾಸನಕ್ಕೆ ಹೆಚ್ಚಿನ ಕೊಡುಗೆ ಅಂತ ಆರೋಪಿಸ್ತಾರೆ ಹಾಸನದಲ್ಲಿ ಜೆಡಿಎಸ್ ಶಾಸಕರಲ್ಲ,ಬಿಜೆಪಿ ಶಾಸಕರಿರೋದು ಅವರು ಬೇಡ ಅಂದರೆ ವಾಪಸ್ ಪಡೆದುಕೊಳ್ತೇನೆ ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು ನೀಡಿದ್ರು.

 

ಇನ್ನೂ ಆರೇಳು ಸಾವಿರ ಕೋಟಿ ಹಣ ನಾವು ಒದಗಿಸಬೇಕಿದೆ.ಈ ಹಣವನ್ನ ನಾವು,ಪರಮೇಶ್ವರ್ ಹೊಂದಿಸೊಕೆ ಆಗುತ್ತಾ?ಕೇಂದ್ರ ಸರ್ಕಾರ ಏನು ಹೆಚ್ಚಿನ ನೆರವು ಕೊಡುತ್ತಾ ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ಹೆಚ್ಚಿಲ್ಲ ದಕ್ಷಿಣ ಭಾರತದಲ್ಲಿ ಅತಿ ಕಡಿಮೆ ದರ ನಮ್ಮದು ಬಿಜೆಪಿ ನಾಯಕರು ಚಪ್ಪಾಳೆಯನ್ನ ಕೇಂದ್ರದಲ್ಲಿ ಹೊಡೆಸಬೇಕು. ೯ಭಾರಿ ಪೆಟ್ರೋಲ್ ಬೆಲೆ ಕೇಂದ್ರದಿಂದ ಏರಿಕೆಯಾಗಿದೆ ಬಿಜೆಪಿ ನಾಯಕರು ಕೇಂದ್ರದಲ್ಲಿ ಟೇಬಲ್ ಕುಟ್ಟಲಿ. ಶೆಟ್ಟರ್ ಕಾಲದಲ್ಲಿ ಸಾಲಮನ್ನಾ ಮಾಡಿದ್ರು ಹಣ ಪಾವತಿ ಮಾಡಿದ್ದು ೮೦೦ ಕೋಟಿ ಮಾತ್ರ.ಉಳಿದ ಹಣವನ್ನ ತೀರಿಸಿದ್ದು ಸಿದ್ದರಾಮಯ್ಯ ಏನು ಹಣವನ್ನ ಹುಬ್ಬಳ್ಳಿಯಿಂದ ತರ್ತಾರಾ ಶೆಟ್ಟರ್ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದರು.

 

ಕರಾವಳಿ ಭಾಗದ ಜನರಿಗೂ ಹೇಳುತ್ತೇನೆ ಬೆಂಕಿ‌ ಹಚ್ಚುವವರನ್ನ ನಂಬ ಬೇಡಿ ಎಂದು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದೇವೆ ಬೇರೆ ಯಾವ ಕಾರ್ಯಕ್ರಮ ಬೇಕು ಹೇಳಿ ಎಲ್ಲವನ್ನೂ ಕೊಡುತ್ತೇವೆ ಯಾವ ಸೆಕ್ಟರ್ ನಾವು ಕೈಬಿಟ್ಡಿದ್ದೇವೆ ಹೇಳಿ ನೊಡೋಣ ಕಲಬುರಗಿಯಲ್ಲಿ ಸೋಲಾರ್ ಪ್ಲಾಂಟ್ ಹಾಕುತ್ತಿದ್ದೇವೆ ಇದನ್ನ ಮಾಡ್ತಿರೋದು ನಿಮ್ಮ ಯುವಕರಿಗೆ ಉದ್ಯೋಗ ಕೊಡೋಕೆ ಬಳ್ಳಾರಿ,ಕೊಪ್ಪಳಕ್ಕೂ ಯೋಜನೆ ಕೊಟ್ಟಿದ್ದೇವೆ ಸ್ವಲ್ಪ ಹೃದಯ ವೈಶಾಲ್ಯತೆ ತೋರಿಸಿ ಕಲ್ಮಶ ಮನಸ್ಸು ಇಟ್ಟುಕೊಂಡರೆ ಎಲ್ಲವೂ ಅಸತ್ಯವೇ ಕಾಣುತ್ತೆ ಎಂದು ಪದೇ ಪದೇ ಬಿಜೆಪಿ ನಾಯಕರಿಗೆ ಸಿಎಂ ಟಾಂಗ್ ನೀಡಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳನ್ನ ಮುಂದುವರೆಸಿದ್ದೇವೆ ಕಳೆದ ಬಾರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ ಫ್ರೆಬ್ರವರಿ ೧೬ ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ ಸಿದ್ದರಾಮಯ್ಯದ ಎಲ್ಲ ಕಾರ್ಯಕ್ರಮಗಳು ಎಲ್ಲ ಮುಂದುವರೆದಿದೆ ಅವ್ರ ಮಂಡಿಸಿದ್ದ ಬಜೆಟ್ ನಾನು ಇವತ್ತು ಓದಿಲ್ಲ ಅದನ್ನ ಓದಿದ್ರೆ ಇವತ್ತು ಸಂಜೆ ಆರು ಗಂಟೆಯಾಗುತ್ತಿತ್ತು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಸೇದಿದಂತೆ ಅನೇಕ ಕಾರ್ಯಕ್ರಮಗಳು ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದ್ರು.

ಉತ್ತರ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನಾವು ನೀಡಿದ್ದೇವೆ. ಬೆಳಗಾವಿ, ಬೀದರ್, ಬಾಗಲಕೋಟೆ, ವಿಜಿಯಪುರಕ್ಕೆ ಎಷ್ಟು ಕೊಟ್ಟಿದ್ದೇವೆ ಎಂದು ಸದನದಲ್ಲಿ ಉತ್ತರ ಕೊಡುತ್ತೇನೆ. ಹಾಸನ – ಮಂಡ್ಯಕ್ಕೆ ಸಾಕಷ್ಟು ಹಣ ಕೊಟ್ಟಿದ್ದಾರೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಹಿಂದಿನ ಸರ್ಕಾರದ ಯಾವ್ ಕಾರ್ಯಕ್ರಮಗಳು ಮೊಟಕುಗೊಳಿಸಿಲ್ಲ ರೈತರ ಸಾಲಮನ್ನಾ ಮಾಡಿರೋವ ಬಗ್ಗೆ  ಕೃತಜ್ಞತೆ ಸಲ್ಲಿಸುವ ಹೃದಯ ವೈಶಾಲತೆ ನಿಮಗೆ ಇಲ್ವಾ ಈಗಿನ ಬಜೆಟ್ ಹಾಗು ಕಳೆದ ಕಾಂಗ್ರೆಸ್ ಸರ್ಕಾರದ ಬಜೆಟ್ ನ ಕಾರ್ಯಕ್ರಮಗಳು ಮುಂದುವರೆಯಲಿದೆ ಎನ್ನುತ್ತಾ ಬಿಜೆಪಿ ನಾಯಕರ ವಿರುದ್ದ ಸಿಎಂ ಸಿಡಿಮಿಡಿಗೊಂಡರು.

ಆರ್ಥಿಕ ಶಿಸ್ತು ಕಾಪಡಿಕೊಂಡು ಬಜೆಟ್ ಮಂಡನೆ ಮಾಡಿದ್ದೇನೆ.ಬಿಜೆಪಿ ನಾಯಕರ ಮೆಚ್ಚುಗೆ ನನಗೆ ಬೇಕಾಗಿಲ್ಲ ರಾಜ್ಯದ ಜನತೆಯ ಸರ್ಟಿಫಿಕೇಟ್ ನನಗೆ ಮುಖ್ಯ ಕಾಂಗ್ರೆಸ್ ಬೆಂಬಲದಿಂದಲೇ ನಾನು ಉತ್ತಮ ಬಜೆಟ್ ಮಂಡನೆ ಮಾಡಿದ್ದೇನೆ ರೈತರ ಸಾಲಮನ್ನಾ ವಿಚಾರದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ ರಾಹುಲ್ ಗಾಂಧಿ ಟ್ವೀಟ್ ಸಾಕು ಮೈತ್ರಿ ಸರ್ಕಾರ ಹೇಗೆ ನಡೆಯುತ್ತಿದೆ ಎಂದು ನಿಮಗೆ ಗೊತ್ತಾಗುತ್ತದೆ ಎಂದ್ರು.

ಎಚ್ಡಿಕೆ ಮಂಡಿಸಿದ್ದು ಅಣ್ ತಮ್ಮಾಸ್ ಬಜೆಟ್:ಬಿಎಸ್ವೈ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಹಾಸನ,ರಾಮನಗರ ಜಿಲ್ಲೆಯ ಅಣ್ ತಮ್ಮರ ಬಜೆಟ್ ಎಂದು ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಬಜೆಟ್ ಬಳಿಕ ವಿಧಾನಸೌಧದಲ್ಲಿ ಮಾತನಾಡಿಸ ಬಿಎಸ್ವೈ, ಮಾತಿಗೆ ತಪ್ಪಿದ, ರೈತ ಸಮುದಾಯಕ್ಕೆ ಮೋಸ ಮಾಡಿದ ಬಜೆಟ್ ಇದಾಗಿದ.34 ಸಾವಿರ ಕೋಟಿ ಸಾಲ ಮನ್ನಾ ಮಾಡಿರೋದಾಗಿ ಹೇಳಿದ್ದಾರೆ‌ ಇದಕ್ಕೆ ಹಣವನ್ನ ಎಲ್ಲಿಂದ ಹೊಂದಾಣಿಕೆ ಮಾಡಿದ್ದೀರಾ? ನೀವು ಮಾಡಿರೋದು ಸುಸ್ತಿ ಸಾಲ ಮನ್ನಾ.ಖುಣ ಮುಕ್ತ ಪತ್ರ ನೀಡಲು 6500 ಕೋಟಿ ಮೀಸಲು ಅಂತ ಹೇಳಿದ್ದೀರಾ?‌ ರೈತರ ಪೂರ್ಣ ಸಾಲ ಮನ್ನಾ ಎಲ್ಲಿ ಆಗಿದೆ ಹೇಳಿ ಎಂದರು.

ಡೀಸೆಲ್, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ ರಾಜಕೀಯ ದೊಂಬರಾಟ ಮಾಡ್ತಿದ್ದಾರೆ ಶ್ರೀ ಸಾಮಾನ್ಯ ಬದುಕೋದು ಹೇಗೆ? ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು ಉತ್ತರ ಕರ್ನಾಟಕ ಜನರಿಗೆ ಅನ್ಯಾಯವಾಗಿದೆ ಇದು ಅಣ್ಣ ತಮ್ಮಂದಿರ ಬಜೆಟ್ ಕೇವಲ ಹಾಸನ, ರಾಮನಗರಕ್ಕೆ ಬಜೆಟ್ ಮಂಡನೆ ಮಾಡಿದ್ದಾರೆ ಎಂದರು.

ಬಜೆಟ್ ಮೇಲೆ ಚರ್ಚೆ ಆಗುತ್ತೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದಾರೆ ಬಜೆಟ್ ನೋಡಿ ಮರುಳಾಗಬೇಡಿ ಅನ್ನಭಾಗ್ಯ ಯೋಜನೆ ಏಳು ಕೆಜಿಯಿಂದ ಐದು ಕೆಜಿಗೆ ಇಳಿಸಿದ್ದೀರಾ ಗರ್ಭಿಣಕಯರಿಗೆ ಆರು ಸಾವಿರ ಕೊಡೋದಾಗಿ ಹೇಳಿ ಸಾವಿರಕ್ಕೆ ಇಳಿಸಿದ್ದೀರಾ ಇದೆಲ್ಲಾ ನಿಮ್ಮ ಸಾಧನೆನಾ ನೇಕಾರರ ಸಾಲ ಮನ್ನಾ ಬಗ್ಗೆ ಶಬ್ದ ಇಲ್ಲ
ಸ್ವಸಹಾಯ ಸಂಘ, ಮೀನುಗಾರರ ಸಾಲ ಮನ್ನಾ ಬಗ್ಗೆ ಮಾತನಾಡಿಲ್ಲ ಇದನ್ನ ನಾವು ಬಜೆಟ್ ಅಂತ ಕರೆಯಬೇಕಾ
ಯಾವುದೇ ವರ್ಗದ ಜನರಿಗೆ ಅನುಕೂಲವಾಗುವ ಬಜೆಟ್ ಇದಲ್ಲ 34 ಸಾವಿರ ಕೋಟಿ ಎಲ್ಲಿಂದ ಹೊಂದಾಣಿಕೆ ಮಾಡ್ತಾರೆ ಅನ್ನೋದನ್ನ ಹೇಳಿಲ್ಲ ಸಿದ್ದರಾಮಯ್ಯ ಬಜೆಟ್ ಜೊತೆ ಹೊಂದಾಣಿಕೆ ಮಾಡಲ್ಲ 12 ನೇ ತಾರೀಖಿನ ಮೇಲೆ ಬಜೆಟ್ ಮುಗಿಯುತ್ತೆ ನಂತರ ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ ಎಂದ್ರು.

ಸಿಎಂ ಎಚ್ಡಿಕೆ ಬಜೆಟ್ ಹೈಲೈಟ್ಸ್!

ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್‌ನ್ನು ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿದರು.

ಬಜೆಟ್‌ನ ಪ್ರಮುಖ ಅಂಶಗಳು

* 2 ಲಕ್ಷದ 13 ಸಾವಿರದ 734 ಕೋಟಿ ರೂಪಾಯಿ ಬಜೆಟ್ ಗಾತ್ರ.

* ಪ್ರತಿ ರೈತ ಕುಟುಂಬದ 2 ಲಕ್ಷ ರೂಪಾಯಿವರೆಗಿನ ಸುಸ್ತಿ ಬೆಳೆ ಸಾಲ ಮನ್ನಾ.

* ಸಾಲ ಮನ್ನಾ ಮಾಡಲು 34 ಸಾವಿರ ಕೋಟಿ ರೂಪಾಯಿ ಮೀಸಲು

* ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂಪಾಯಿ ವಿನಿಯೋಗ.

*ಪೆಟ್ರೋಲ್ ಬೆಲೆ ಲೀಟರ್ ಗೆ 1.14 ರೂಪಾಯಿ, ಡೀಸೆಲ್ ಬೆಲೆ 1.12 ರೂಪಾಯಿ ಹೆಚ್ಚಳ.

*ವಿದ್ಯುತ್ ದರ ಪ್ರತಿ ಯೂನಿಟ್ ಗೆ 20 ಪೈಸೆ ಹೆಚ್ಚಳ

*ಕನಕಪುರಕ್ಕೆ ಹೊಸ ವೈದ್ಯಕೀಯ ಕಾಲೇಜು.

*ಮಂಡ್ಯ ವೈದ್ಯಕೀಯ ಆಸ್ಪತ್ರೆಯ ಮೇಲ್ದರ್ಜೆಗೆ 30 ಕೋಟಿ ರೂಪಾಯಿ.

* ಸಂಧ್ಯಾ ಸುರಕ್ಷಾ ಯೋಜನೆ ಮೊತ್ತ 600 ರೂಪಾಯಿಯಿಂದ 1 ಸಾವಿರ ರೂಪಾಯಿಗೆ ಏರಿಕೆ.

* ರಾಮನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

* ರಾಮನಗರದಲ್ಲಿ ಚಲನಚಿತ್ರ ವಿವಿ ಆರಂಭಿಸಲು 30 ಕೋಟಿ ರೂ. ಅನುದಾನ

* 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಗೆ ನಿಗಾವಹಿಸಲು ಬಯೋಮೆಟ್ರಿಕ್ ಅವಳವಡಿಕೆ 5 ಕೋಟಿ ರೂಪಾಯಿ ಅನುದಾನ, ಮುಂದಿನ 3 ವರ್ಷ ಗಳಲ್ಲಿ ಜಾರಿ.

* ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ.

* ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂಪಾಯಿ.

* ಮಂಡ್ಯ ವಿಮ್ಸ್ ಅಭಿವೃದ್ಧಿಗೆ 30 ಕೋಟಿ ರೂಪಾಯಿ ಮೀಸಲು.

* ಮೈಸೂರಿನಲ್ಲಿ ರೇಶ್ಮೆ ಮಾರುಕಟ್ಟೆ ಸ್ಥಾಪನೆ.

*ಮದ್ಯ ಮೇಲಿನ ತೆರಿಗೆ ಶೇ. 4ರಷ್ಟು ಹೆಚ್ಚಳ.

* ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಟ್ರಾನ್ಸ್ ಪ್ಲಾಂಟ್ ಘಟಕ ಸ್ಥಾಪನೆ.

* ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂಪಾಯಿ.

* ಹಂತ ಹಂತವಾಗಿ ಮರು ಭೂ ಮಾಪನ ಕಾರ್ಯ. ಐದು ಜಿಲ್ಲೆಗಳಲ್ಲಿ ಪ್ರಾರಂಭ.

* 10 ಕೋಟಿ ರೂಪಾಯಿ ವೆಚ್ಚದಲ್ಲಿ ನಾಡಕಚೇರಿಗಳಿಗೆ ಮೂಲಭೂತ ಸೌಕರ್ಯ, 50 ನಾಡಕಚೇರಿಗಳಿಗೆ ತಲಾ 20 ಲಕ್ಷ ರೂಪಾಯಿ ಅನುದಾನ.

* ಅನ್ಯಭಾಗ್ಯ ಯೋಜನೆಯಡಿ ಪ್ರತಿ ಫಲಾನುಗಳಿವೆ 5 ಕೆ.ಜಿ ಅಕ್ಕಿ ಉಚಿತ, ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿಬೇಳೆ.

* ಹಾಸನ ನಗರದ ಸುತ್ತ 30 ಕೋಟಿ ರೂ. ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಾಣ.

* ವಿದ್ಯುತ್ ಪ್ರಸರಣ ಜಾಲ ಬಲವರ್ಧನೆ 35 ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ.75 ಉಪ ಕೇಂದ್ರಗಳು ಮೇಲ್ದರ್ಜೆಗೆ.

* ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಚಾಲ್ತಿಯಲ್ಲಿರುವ ಶೇ.6 ರಿಂದ ಶೇ.9 ಕ್ಕೆ ಹೆಚ್ಚಳ.

* ಸ್ವಂತ ಬಳಕೆಯ ವಿದ್ಯುತ್ ಮೇಲಿನ ತೆರಿಗೆ ದರವನ್ನು ಪ್ರತಿ ಯೂನಿಟ್ ದರ 10 ಪೈಸೆಯಿಂದ 20 ಪೈಸೆ ಹೆಚ್ಚಳ.

* ಹಂತ ಹಂತವಾಗಿ 53,000 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಜಲಧಾರೆ ಯೋಜನೆ.

* ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರನ್ನು ಜೀವನದಿ ಅಥವಾ ಜಲಾಶಯಗಳಿಂದ ಪಡೆದು ಶುದ್ದೀಕರಿಸಲು ತೀರ್ಮಾನ.

* ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ.

* ಬೇಲೂರು, ಹಂಪಿ ಹಾಗೂ ವಿಜಯಪುರದಲ್ಲಿ ವಿವಿಧ ಭಾಷೆಗಳ ಪ್ರವಾಸಿ ಮಾರ್ಗದರ್ಶಿಗಳ ನೇಮಕಕ್ಕೆ ಒತ್ತು.

* ಮಾರ್ಗದರ್ಶಿಗಳಾಗಿ ಕೆಲಸ ಮಾಡುವ ಯುವಕ- ಯುವತಿಯರಿಗೆ ಕೌಶಲ್ಯ ಅಭಿವೃದ್ದಿಗೆ ಯೋಜನೆಯಡಿ ತರಬೇತಿ.

* ಪ್ರವಾಸಿ ಸ್ಥಳಗಳಲ್ಲಿ ಪರಿಸರ ಹಾಗೂ ಆಹಾರ ಶುದ್ಧತೆ ಕಾಪಾಡಲು ಸ್ಥಳೀಯ ಸಂಸ್ಥೆಗಳಿಗೆ ನೆರವಾಗಲು 20 ಕೋಟಿ ರೂಪಾಯಿ.

* 500 ಕೊಠಡಿ ಸೌಲಭ್ಯವಿರುವ ೩ ಸ್ಟಾರ್ ಹೊಟೇಲ್ ತೆರೆಯಲು ಖಾಸಗಿ ಕಂಪೆನಿಗಳಿಗೆ ೩ ಕೋಟಿ ರೂಪಾಯಿ ಬಂಡವಾಳ.

* ಅಮ್ಯೂಸ್ ಮೆಂಟ್ ಪಾರ್ಕ್ , ಜಲಕ್ರೀಡೆ ಅಭಿವೃದ್ದಿಪಡಿಸುವ ಖಾಸಗಿ‌ ಕಂಪೆನಿಗಳಿಗೆ ಶೇ.30ರಷ್ಟು ಬಂಡವಾಳ.

* ಪ್ರವಾಸಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಈ ವರ್ಷ 80 ಕೋಟಿ ರೂಪಾಯಿ ಅನುದಾನ.

* ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತಗಳ ಪ್ರವಾಸಿ ತಾಣಗಳ ಅಭಿವೃದ್ದಿಗೆ 5 ಕೋಟಿ ರೂಪಾಯಿ ಅನುದಾನ.

* ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡಗಳ ದುರಸ್ತಿಗಾಗಿ ವಿಶೇಷ ಅನುದಾನ 150 ಕೋಟಿ ಮೀಸಲು.

* ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ತರಬೇತಿ ಕೇಂದ್ರಕ್ಕೆ 5 ಕೋಟಿ ರೂಪಾಯಿ ಅನುದಾನ.

* ರಾಜ್ಯದ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ವಿಶೇಷ ಪ್ಯಾಕೇಜ್ 250 ಕೋಟಿ ಮೀಸಲು.

* ಹಂಪಿಯಲ್ಲಿ ಪ್ರವಾಸೋದ್ಯಮ ವಿವಿ ಆರಂಭಿಸಲು 3 ಕೋಟಿ ರೂಪಾಯಿ ಅನುದಾನ.

* ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿಗೆ ಬಡ ರೋಗಿಗಳಿಗೆ 30 ಕೋಟಿ ಅನುದಾನದ ಪ್ರತ್ಯೇಕ ಯೋಜನೆ.

* ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.

* ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಸ್ಥಾಪನೆಗೆ 12 ಕೋಟಿ ಅನುದಾನ….

* ರಾಮನಗದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ 40 ಕೋಟಿ ಅನುದಾನ.

* ಬೆಳಗಾವಿ, ಕಲಬುರ್ಗಿ, ಮೈಸೂರು ನಗರದಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಇತರೆ ರೋಗಗಳಿಗೆ ತೃತೀಯ ಹಂತದ ಆರೋಗ್ಯ ಸೇವೆ ನೀಡಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ.

* ಗದಗ, ಕೊಪ್ಪಳ, ಚಾಮರಾಜನಗರ, ಹಾಸನ ನಗರದ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ಸ್ಥಾಪನೆಗೆ 200 ಕೋಟಿ ಅನುದಾನ.

* 104 ಮತ್ತು 108 ಕರೆಯಡಿ ತುರ್ತು ಸೇವೆಗಳ ವ್ಯಾಪ್ತಿ ವಿಸ್ತರಣೆ.

* ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ 40 ಕೋಟಿ ರೂಪಾಯಿ ಹೊಸ ಯೋಜನೆ ಜಾರಿ, ಈ ವರ್ಷ 10 ಕೋಟಿ ಅನುದಾನ

* ಬೆಂಗಳೂರಿನ ಲಕ್ಷ ಮನೆ ನಿರ್ಮಾಣ ಯೋಜ‌ನೆ ಎಲ್ಲಾ ನಗರಕ್ಕೆ ವಿಸ್ತರಣೆ.

* ಬೆಂಗಳೂರಿನಲ್ಲಿ ಬಡವರಿಗೆ ಆಯ್ದ ಸ್ಥಳದಲ್ಲಿ ಬಹುಮಹಡಿ ಮನೆಗಳ ನಿರ್ಮಾಣ.

* ವಿಕಲಚೇತನ ಫಲಾನುಭವಿಗಳ ಬೇಡಿಕೆಯ ಮೇರೆಗೆ ಆನ್ ಲೈನ್ ನಲ್ಲಿ ಅರ್ಜಿ ಪಡೆದು ಮನೆ ಹಂಚಿಕೆ ವ್ಯವಸ್ಥೆ.

* ಹಿಂದಿನ ಸರ್ಕಾರದ ವಸತಿ ಯೋಜನೆಗಳ ಮುಂದುವರಿಕೆ. ಬೇಡಿಕೆಗೆ ತಕ್ಕಂತೆ ಮನೆಗಳ ನಿರ್ಮಾಣ.

* ಖಾಸಗಿ ಭದ್ರತಾ ಸಿಬ್ಬಂದಿಗೆ ಅಗತ್ಯ ತರಬೇತಿಗೆ ವಿಶ್ವವಿದ್ಯಾಲಯ ಸ್ಥಾಪನೆ.

* ತಾಯಿನಾಡು ಭದ್ರತಾ ವಿವಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ. ಶಿವಮೊಗ್ಗದಲ್ಲಿ ವಿವಿ ಸ್ಥಾಪನೆಗೆ ಅಗತ್ಯ ನೆರವು.

* ಪೊಲೀಸ್ ಇಲಾಖೆಗೆ ನಿರಾಶಾದಾಯಕ ಬಜೆಟ್. ಪೊಲೀಸರಿಗೆ ಯಾವುದೇ ಯೋಜನೆ ಘೋಷಣೆ ಮಾಡದ ಸಿ.ಎಂ.

* ಪೊಲೀಸರಲ್ಲಿ ನಿರಾಶೆ ಮೂಡಿಸಿದ ಬಜೆಟ್ .

ಬಜೆಟ್‌ನಲ್ಲಿ ಎರಡೂ ಲಕ್ಷದವರೆಗೆ ರೈತರ ಸಾಲ ಮನ್ನಾ ಘೋಷಣೆ!

ಬೆಂಗಳೂರು: ಎರಡು ಲಕ್ಷ ರೂಪಾಯಿವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಸಿಎಂ ಕುಮಾರಸ್ವಾಮಿ ಬಜೆಟ್‌ನಲ್ಲಿ ಬಂಪರ್ ಗಿಫ್ಟ್ ನೀಡಿದ್ದಾರೆ.

ಚುನಾವಣೆ ವೇಳೆ ರೈತರ ಸಂಪೂರ್ಣ ಸಾಲ ಮನ್ನಾ ಮಾಟುವುದಾಗಿ ಜೆಡಿಎಸ್ ಪಕ್ಷ ಭರವಸೆ ನೀಡಿತ್ತು. ಆದರೆ, ಮುಖ್ಯಮಂತ್ರಿಯಾದ ನಂತರ ಹಣಕಾಸಿನ ತೊಂದರೆಯಿಂದ ಹಂತ ಹಂತವಾಗಿ ಸಾಲ ಮನ್ನಾ ಮಾಡುವ ಸುಳಿವನ್ನು ಸಿಎಂ ನೀಡಿದ್ದರು. ಅದರಂತೆ ಇದೀಗ 2 ಲಕ್ಷ ರೂಪಾಯಿವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗಿದೆ.

ಬಜೆಟ್ ನಲ್ಲಿ 31-12-2017 ರವರೆಗೆ ರೈತರು ಮಾಡಿದ ೨ ಲಕ್ಷ ರೂ.ವರೆಗಿನ ಸುಸ್ತಿ ಬೆಳೆ ಸಾಲ ಮನ್ನಾ ಘೋಷಣೆ ಮಾಡಲಾಗಿದ್ದು, ೪೦ ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಆದಾಯ ತೆರಿಗೆ ಪಾವತಿ ಮಾಡಿರುವ ರೈತರಿಗೆ ಈ ಸಾಲ ಮನ್ನಾ ಅನ್ವಯವಾಗುವುದಿಲ್ಲ. ಒಟ್ಟು ೩೪ ಸಾವಿರ ಕೋಟಿ ರೈತರ ಸಾಲ ಮನ್ನಾ ಘೋಷಣೆ ಮಾಡಲಾಗಿದೆ.