ಸೋನಾಲಿ ಬೇಂದ್ರೆಗೆ ಕ್ಯಾನ್ಸರ್​​..!

ಫೋಟೋ ಕೃಪೆ: ಟ್ವಿಟ್ಟರ್

ಮುಂಬೈ:ಇರ್ಫಾನ್​​ ಖಾನ್​​ ನಂತರ ಬಾಲಿವುಡ್​ನ ಮತ್ತೊಬ್ಬ ಸೆಲಬ್ರಟಿಗೆ ಕ್ಯಾನ್ಸರ್​​ ಅಟ್ಯಾಕ್​ ಆಗಿದೆ. ಪ್ರಖ್ಯಾತ ಬಹುಭಾಷಾ ನಟಿ ಸೊನಾಲಿ ಬೇಂದ್ರೆ ಅವ್ರಲ್ಲಿ ಕ್ಯಾನ್ಸರ್​​ ರೋಗ ಕಾಣಿಸಿಕೊಂಡಿದೆ.

ನ್ಯೂಯಾರ್ಕ್​​ನಲ್ಲಿ ತಾನು ಕ್ಯಾನ್ಸರ್​​​ ಚಿಕಿತ್ಸೆ ಪಡೆದುಕೊಳ್ತಿರೋದಾಗಿ ಸ್ವತಃ ಸೊನಾಲಿ ಬೇಂದ್ರ ಪ್ರಕಟಣೆ ಹೊರಡಿಸಿದ್ದಾರೆ. ಕಳೆದ ತಿಂಗಳಷ್ಟೇ ಹಿಂದುಜಾ ಸರ್ಜಿಕಲ್ ಹೆಲ್ತ್​​ಕೇರ್​ ಆಸ್ಪತ್ರೆಗೆ ಸೊನಾಲಿ ದಾಖಲಾಗಿದ್ದರು. ಆನಂತ್ರ ಇದೀಗ ನ್ಯೂಯಾರ್ಕ್​​ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾನು ಹೈಗ್ರೇಡ್​ ಕ್ಯಾನ್ಸರ್​​​ನಿಂದ ಬಳಲುತ್ತಿದ್ದೇನೆ. ನನ್ನ ಪೋಷಕರು ಮತ್ತು ಆಪ್ತ ಸ್ನೇಹಿತರು ನನಗೆ ಸಹಕಾರ ನೀಡ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪಕ್ಷ ಕಷ್ಟದ ದಿನ ಎದುರಿಸುತ್ತಿರುವಾಗ ಹುದ್ದೆ ಸಿಕ್ಕಿದ್ದು ಹೆಮ್ಮಯ ವಿಚಾರ: ದಿನೇಶ್ ಗುಂಡೂರಾವ್

ಚಿಕ್ಕಮಗಳೂರು : ಕಾಂಗ್ರೆಸ್ ಪಕ್ಷ ಸವಾಲಿನ ದಿನಗಳನ್ನು ಎದುರಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಸಾರಥ್ಯವನ್ನು ಪಕ್ಷ ನನಗೆ ವಹಿಸಿದ್ದು ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತೇನೆ ಎಂದು ನೂತನವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತಗೊಂಡಿರುವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಪೀಠಕ್ಕೆ ಕುಟುಂಬ‌ ಸದಸ್ಯರೊಂದಿಗೆ ದಿನೇಶ್ ಗುಂಡೂರಾವ್ ಭೇಟಿ ನೀಡಿದರು.ಶಾರದಾಂಬೆಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ನಂತರ ಶೃಂಗೇರಿ ಶ್ರೀಗಳಿಂದ‌ ಆಶೀರ್ವಾವದ ಪಡೆದುಕೊಂಡರು

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ನೂತನ ಸಾರಥಿ ದಿನೇಶ್ ಗುಂಡುರಾವ್,ಇಂತಹ ದೊಡ್ಡ ಜವಬ್ದಾರಿ ಕೊಟ್ಟಿದ್ದಕ್ಕೆ ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ‌ ಹಾಗೂ ರಾಜ್ಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸವಾಲಿನ ದಿನಗಳು.ಸವಾಲಿನ ದಿನಗಳಲ್ಲಿ ಈ ಜವಾಬ್ದಾರಿ ಸಿಕ್ಕಿರುವುದು ಹೆಮ್ಮೆಯ ವಿಚಾರ.ಪಕ್ಷದ ಸಂಘಟನೆಯಲ್ಲಿ ನನ್ನ ಅನುಭವ ಅಧ್ಯಕ್ಷ ಸ್ಥಾನ ಸಿಗಲು ಸಹಕಾರಿಯಾಗಿದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸರ್ಕಾರವನ್ನು ಯಶಸ್ವಿಯಾಗಿ ಕೊಂಡಯ್ಯಬೇಕು.ರಾಜ್ಯದ ಜನರಿಗೆ ಪಕ್ಷದ ಯೋಜನೆಗಳನ್ನು ತಲುಪಿಸಬೇಕು.ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಭೀಕರ ರಸ್ತೆ ಅಪಘಾತ: ಐವರ ದುರ್ಮರಣ

ತುಮಕೂರು: ಸಿಮೆಂಟ್ ಲಾರಿ ಮತ್ತು ಕಾರಿನ ನಡುವೆ ಮುಖಮುಖಿ ಡಿಕ್ಕಿಯಾಗಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಮಧುಗಿರಿ ಸಮೀಪದ ಕೆರೆಗಳಪಾಳ್ಯದ ತಿರುವಿನಲ್ಲಿ ನಡೆದಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಪಾವಗಡದಲ್ಲಿದ್ದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ಮಧುಗಿರಿ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐದು ಜನರು ದುರ್ಮರಣ ಹೊಂದಿದ್ದಾರೆ.

ಮರುಳೀ (20), ಮಂಜುನಾಥ್ (24), ದಿನೇಶ್ (24), ರಾಮ್ ಮೋಹನ್ (23) ಶಿವಪ್ರಸಾದ್ (25) ಮೃತ ದುರ್ದೈವಿಗಳು. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ಲಾಸ್ಟಿಕ್ ಅಕ್ಕಿ ಆಯ್ತು ಈಗ ರಬ್ಬರ್ ಅಕ್ಕಿ ಕಾಟ: ಮಂಡ್ಯ ಜನ ಕಂಗಾಲು

ಮಂಡ್ಯ:ಪ್ಲಾಸ್ಟಿಕ್ ಅಕ್ಕಿ ಆಯ್ತು ಇದೀಗ ರಬ್ಬರ್ ಅಕ್ಕಿಯ ಕಾಟ ಆರಂಭಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ರಬ್ಬರ್ ಅಕ್ಕಿಯ ಭೀತಿ ಶುರುವಾಗಿದ್ದು ಜನ ಕಂಗಾಲಾಗಿದ್ದಾರೆ.

ರಬ್ಬರ್ ರೀತಿಯಲ್ಲಿ ಧಗಧಗನೆ ಹೊತ್ತಿ ಉರಿಯತ್ತಿರೋ ಅನ್ನಭಾಗ್ಯದ ಅಕ್ಕಿ ಗ್ರಾಮಸ್ತರಲ್ಲಿ ಆತಂಕ ಸೃಷ್ಠಿಸಿದೆ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ರಬ್ಬರ್ ಅಕ್ಕಿ ಪತ್ತೆಯಾಗಿದೆ.ಗ್ರಾಮದ ಪಡಿತರ ಅಂಗಡಿಯಿಂದ ಕೊಡಲಾಗಿದ್ದ ಅನ್ನಭಾಗ್ಯದ ಅಕ್ಕಿಯನ್ನು ನೀರಿನಲ್ಲಿ ನೆನೆಸಿಟ್ಟ ಅಕ್ಕಿಯನ್ನು ರುಬ್ಬಿದಾಗ ರಬ್ಬರ್ ರೀತಿಯ ತುಣುಕುಗಳಾಗಿ ಮಾರ್ಪಾಟಾಗಿ ಆತಂಕಕ್ಕೆ ಕಾರಣವಾಗಿದೆ.

ಜೂನ್ ತಿಂಗಳಿನಲ್ಲಿ ಪಡಿತರ ಅಂಗಡಿಯಲ್ಲಿ ವಿತರಿಸಲಾಗಿರೋ ಅನ್ನಭಾಗ್ಯದ ಅಕ್ಕಿ ರಬ್ಬರ್ ರೀತಿ ಹೊತ್ತಿ ಉರಿಯುತ್ತಿರೋ ಕಂಡು‌ ಗ್ರಾಮಸ್ಥರಲ್ಲಿ ಆತಂಕ ಸೃಷಿಯಾಗಿದೆ.ಪಡಿತರ ಅಂಗಡಿಯಲ್ಲಿ ರಬ್ಬರ್ ಅಕ್ಕಿ ವಿತರಿಸಲಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು,ರಬ್ಬರ್ ಅಕ್ಕಿ ವಿತರಿಸಿದ ಸರ್ಕಾರದ ಕ್ರಮಕ್ಕೆ ಚೊಟ್ಟನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ವಾಸ್ತವವಾಗಿ ಈ ಅಕ್ಕಿ ಏಕೆ ರಬ್ಬರ್ ರೀತಿ ಆಗಿದೆ ಅಥವಾ ರಬ್ಬರ್ ರೀತಿಯ ಸ್ಥಿತಿಗೆ ಮಾರ್ಪಾಡಿಗೆ ಕಾರಣವೇನು ಎನ್ನುವುದು ನಿಗೂಢವಾಗಿದ್ದು ಆಹಾರ ಇಲಾಖೆ ಈ ಸಂಬಂಧ ತನಿಖೆ ನಡೆಸಿ ಸ್ಪಷ್ಟೀಕರಣ ನೀಡಬೇಕಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ನೇಮಕ!

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಹಾಗೂ ಈಶ್ವರ್ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಾಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಉತ್ತಮ ಕೆಲಸ ನಿರ್ವಹಿಸಿರುವುದನ್ನು ಪರಿಗಣಿಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ಕಾನೂನು ಸಮರದಲ್ಲಿ ಸಿಹಿಕಹಿ ಕಂಡ ಕೇಜ್ರಿ ಸರ್ಕಾರ: ಸುಪ್ರೀಂ ನೀಡಿದ‌ ತೀರ್ಪೇನು ಗೊತ್ತಾ?

ಫೋಟೋ ಕೃಪೆ-ಟ್ವಿಟ್ಟರ್

ನವದೆಹಲಿ:ದೆಹಲಿಯಲ್ಲಿ ಪೂರ್ಣ ಪ್ರಮಾಣದ ಸ್ವತಂತ್ರ ಆಡಳಿತ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು,ಪೂರ್ಣ ರಾಜ್ಯದ ಸ್ಥಾನಮಾನ ಕೇಳಿದ್ದ ಕೇಜ್ರಿವಾಲ್​ ಸರ್ಕಾರಕ್ಕೆ ಕಾನೂನು ಸಮರದಲ್ಲಿ ಹಿನ್ನಡೆಯಾಗಿದೆ.

ದೆಹಲಿಗೆ ಸ್ವತಂತ್ರ ರಾಜ್ಯ ಸ್ಥಾನಮಾನ ಹಾಗು ಎಲ್​ಜಿ ಅಧಿಕಾರ ವ್ಯಾಪ್ತಿ ಪ್ರಶ್ನಿಸಿ ಆಪ್​ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ,
ಲೆಫ್ಟಿನೆಂಟ್​ ಗೌರ್ನರ್​ಗೆ ಯಾವುದೇ ಸ್ವತಂತ್ರ ಅಧಿಕಾರ ಇಲ್ಲ ಎಂದು ಮಹತ್ವದ ಆದೇಶ ನೀಡಿತು.ಸರ್ಕಾರದ ಸಂಪುಟದ ನಿರ್ಣಯಗಳಿಗೆ ಎಲ್​​ಜಿ ಮನ್ನಣೆಯನ್ನು ನೀಡಬೇಕು ಎಂದು ನ್ಯಾಯಪೀಠ ತಿಳಿಸಿತು.

ಆದರೆ ದೆಹಲಿಯನ್ನು ಸ್ವತಂತ್ರ ರಾಜ್ಯ ಎಂದು ಘೋಷಿಸಲು ಸಾಧ್ಯವಿಲ್ಲ,ಕೇಂದ್ರ-ರಾಜ್ಯ ಸರ್ಕಾರಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು,ಪಬ್ಲಿಕ್​​ ಆರ್ಡರ್, ಪೊಲೀಸ್​ ಮತ್ತು ಭೂಮಿ ವಿಚಾರದಲ್ಲಿ ರಾಜ್ಯಕ್ಕೆ ಅಧಿಕಾರವಿಲ್ಲ, ಸಂಘರ್ಷ ಇಲ್ಲದೇ ಸಂವಿಧಾನದ ಆಶಯದಂತೆ ಆಡಳಿತ ನಡೆಸಲು ಪೀಠ ಸೂಚನೆ ನೀಡಿತು.

ಇತ್ತೀಚೆಗೆ ಐಎಎಸ್ ಅಧಿಕಾರಿಗಳ ವಿಚಾರಕ್ಕೆ ಲೆಫ್ಟಿನೆಂಟ್​ ಗೌರ್ನರ್​​​ ಅನಿಲ್ ಬೈಜಾಲ್​​​​ ಮತ್ತು ಸಿಎಂ ಕೇಜ್ರಿವಾಲ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಗೌರ್ನರ್​​​ ಕಚೇರಿ ಮುಂದೆ ಕೇಜ್ರಿವಾಲ್​​ ಪ್ರತಿಭಟನಾ ಧರಣಿ ನಡೆಸಿದ್ದರು. ಅಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಈ ವಿಚಾರ ಮೋದಿ ವಿರುದ್ಧದ ಸಮರಕ್ಕೆ ಬಳಕೆಯಾಗಿತ್ತು.