ಮಾನಸ ಸರೋವರ ಯಾತ್ರಿಗಳ ರಕ್ಷಣೆಗೆ ಸಿಎಂ ಸೂಚನೆ

ಬೆಂಗಳೂರು:ಮಾನಸ ಸರೋವರ ಯಾತ್ರೆ ಕೈಗೊಂಡು ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 200ಕ್ಕೂ ಹೆಚ್ಚು ಯಾತ್ರಾರ್ಥಿಗಳ ರಕ್ಷಣೆ ಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ದೆಶನ ನೀಡಿದ್ದಾರೆ.

ಈ ಸಂಬಂಧ ಎಲ್ಲಾ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ದೆಹಲಿಯ ಕರ್ನಾಟಕ ಭವನದಲ್ಲಿರುವ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.ಸ್ಥಾನಿಕ ಆಯುಕ್ತರು ನೇಪಾಳ ಸರ್ಕಾರ ಭಾರತ ರಾಯಭಾರಿ ಕಛೇರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ.

ನೇಪಾಳದ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳು ನಮ್ಮ ಮನವಿಗೆ ತಕ್ಷಣ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಸಾಲಮನ್ನಾ,ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿ: ರಾಜ್ಯಪಾಲರ ಸುಳಿವು

ಬೆಂಗಳೂರು:ಅನ್ನದಾತನ ಬದುಕನ್ನ ಹಸನುಗೊಳಿಸಲು ನಮ್ಮ ಸರ್ಕಾರ ಮಾನವೀಯ ಚೌಕಟ್ಟಿನಲ್ಲಿ‌ ನಿರ್ಧಾರ ಕೈಗೊಳ್ಳಲಿದೆ.ಹಿಂದಿನ ಯೋಜನೆಗಳ ಜೊತೆಗೆ ನಾಡಿನ ಜನತೆಯ ಹಿತ ಕಾಪಾಡಲಿದೆ ಎನ್ನುವ ಮೂಲಕ ಸಾಲಮನ್ನಾ ಹಾಗು ಮೈತ್ರಿ ಪಕ್ಷಗಳ ಸಾಮಾನ್ಯ ಕನಿಷ್ಠ ಯೋಜನೆಗಳ ಜಾರಿ ಕುರಿತು ರಾಜ್ಯಪಾಲ ವಜುಭಾಯ್ ವಾಲಾ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸುಳಿವು ನೀಡಿದರು.

ವಿಧಾನ ಮಂಡಲ ಉಭಯ ಸದನವನ್ನುದ್ದೇಶಿಸಿ ಭಾಷಣ ಮಾಡಿದ ಅವರು,ಎಲ್ಲ ವರ್ಗದ ಅವಕಾಶ ವಂಚಿತರ ಕಲ್ಯಾಣಕ್ಕೆ ನಮ್ಮ‌ ಸರ್ಕಾರ ಬದ್ಧವಾಗಿದೆ ಎನ್ನುವ ಅಭಯದೊಂದಿಗೆ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಂಡರು.

ಹಳ್ಳಿ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಸರಿ ಸಮನಾದ ಯೋಜನೆ ರೂಪಿಸಲಾಗುವುದು.ರೈತರ ರಕ್ಷಣೆಗೆ ನಮ್ಮ ಸರ್ಕಾರ ಸದಾ ಚಿಂತಿಸುತ್ತದೆ.ರೈತರನ್ನು ಆಧುನಿಕ ಕೃಷಿ ತಂತ್ರಜ್ಞಾನದ ಬಳಕೆಗೆ ಅಣಿಗೊಳಿಸಲಿದೆ.ಶಿಕ್ಷಣದಲ್ಲಿ ವೃತ್ತಿ ಕೌಶಲ್ಯ ಅಳವಡಿಸಿ ಉದ್ಯೋಗ ಸೃಷ್ಟಿ.ಶಿಕ್ಷಣದಲ್ಲಿ ಕೌಶಲ್ಯ ಸಹಿತ ವೃತ್ತಿ ತರಬೇತಿ ಕಡ್ಡಾಯ.ರೈತರು ನೀರಿನ ಲಭ್ಯತೆ ಆಧರಿಸಿ ಬೆಳೆ ಬೆಳೆಯಬೇಕು.ಅತಿವೃಷ್ಠಿ, ಅನಾವೃಷ್ಟಿಯಿಂದ ರೈತನ ಬೆಳೆಗೆ ನ್ಯಾಯಯುತ ಬೆಲೆ ಇಲ್ಲ.ಹೀಗಾಗಿ ರೈತರ ಬಾಳಿನಲ್ಲಿ ಬೆಳಕು‌ ಮೂಡಿಸಲಿ ಹೊಸ ಯೋಜನೆ ಜಾರಿಗೆ ಚಿಂತನೆ.ರಾಜ್ಯದ ರೈತರು ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು.ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ರೈತರಿಗೆ ಸಲಹೆ.ದೇಶದಲ್ಲೇ ಮೊದಲ ಬಾರಿ ರೈತರಿಗೆ ನ್ಯಾಯಯುತ ಬೆಲೆ ನಿಗದಿ ಮಾದರಿಯ ಪ್ರಾಯೋಗಿಕ ಯೋಜನೆ ಕರ್ನಾಟಕದಲ್ಲಿ ಜಾರಿಗೆ ಚಿಂತನೆ.ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ತೃಪ್ತಿಕರ ಜಾನೂನು ಸುವ್ಯವಸ್ಥೆ ಕಾಯ್ದುಕೊಂಡಿದೆ.ಮುಂದಿನ ಸಾಲಿನಿಂದ ಪೊಲೀಸ್ ಭದ್ರತೆ ತರಬೇತಿ ಸಾಮರ್ಥ್ಯ ಹೆಚ್ಚಳ.ಸೈಬರ್ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ.ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳನ್ನು‌ ಸ್ಥಾಪನೆ.ಹೈದ್ರಾಬಾದ್ ಕರ್ನಾಟಕದ ವ್ಯಕ್ತಿಗಳಿಗೆ ವಿವಿಧ ಪ್ರವರ್ಗದ ಹುದ್ದೆಗಳಿಗೆ ಮೀಸಲಾತಿ.ನಾಡಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಡಿಜಿ ಲಾಕರ್ ಗಳ ಅಳವಡಿಕೆ.ಕರ್ನಾಟಕ ಹಾಲಿನ ಸಂಗ್ರಹಣೆಯಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ.ಮೊಟ್ಟೆಗಳ ಉತ್ಪಾದನೆಯಲ್ಲಿ 7 ನೇ ಸ್ಥಾನದಲ್ಲಿದೆ.ಮಾಂಸ ಉತ್ಪಾದನೆಯಲ್ಲಿ 11 ಸ್ಥಾನದಲ್ಲಿದೆ.ರಾಜ್ಯ ಸರ್ಕಾರ ರಾಜ್ಯ ಮೇವು ಭದ್ರತಾ ನೀತಿ ಜಾರಿಗೆ ತರಲಿದೆ ಎಂದರು.

ಕೆರೆ ತುಂಬುವ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ.ಹುಲಿ, ಆನೆ, ಚಿರತೆ ಸಿಂಗಲೀಕಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಪರಿಶೀಲನೆ ಕೇಂದ್ರ ಸ್ಥಾಪಿಸಿದೆ.ಎಸ್ಸಿ, ಎಸ್ಟಿ ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಭೇತಿ.ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಎಸ್ಸಿ, ಎಸ್ಟಿ ನಿರುದ್ಯೋಗಿಗಳಿಗೆ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ ಎಂದರು.

2021 ಮಾರ್ಚ್ ಹೊತ್ತಿಗೆ ನಮ್ಮ ಮೆಟ್ರೋ 118 ಕಿ ಮೀ ಮಾರ್ಗ ಪೂರ್ಣ ಮೈಸೂರು ಮಾದರಿಯಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ ಕಾರ್ಯಕ್ರಮ ಜಾರಿ ಬೆಂಗಳೂರಿನಲ್ಲಿ ಸಮರ್ಥ ಸಾರಿಗೆ ವ್ಯವಸ್ಥೆ ಜಾರಿಗೆ ಯೋಚನೆ ಬಸ್ ಪ್ರಯಾಣಿಕರಿಗೆ ಉಚಿತ ವೈ ಫೈ ಸೌಲಭ್ಯ ಮಹಿಳಾ ಪ್ರಯಾಣಿಕರ ಸುರಕ್ಷಿತೆಗಾಗಿ ಬಸ್ ಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತದೆ ಎಂದರು.

ಐಟಿ- ಬಿಟಿಯಲ್ಲಿ ಕರ್ನಾಟಕ ನಾಯಕತ್ವ ವಹಿಸಿಕೊಂಡಿದೆ ಬೆಂಗಳೂರು ಡಿಜಿಟಲ್ ನಗರ ಎನಿಸಿದೆ ಐಟಿ ರಫ್ತು 3 ಲಕ್ಷ ಕೋಟಿ ದಾಟಿದೆ ದೇಶದ ಜೈವಿಕ ತಂತ್ರಜ್ಞಾನ ಉದ್ಯಮಕ್ಕೆ ಶೇ. ೩೫ ರಷ್ಟು ಕೊಡುಗೆ ನೀಡಿದೆ ಕರ್ನಾಟಕ 7000 ನವೋದ್ಯಮ ಸ್ಥಾಪಿಸಿದೆ ಬೆಂಗಳೂರು ನವೋದ್ಯಮದ ರಾಜಧಾನಿ ಎನಿಸಿದೆ ಉದ್ದೇಶಿತ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಕರ್ನಾಟಕ ಆರ್ಥಿಕ ಸ್ಥಿತಿಯನ್ನು ದಕ್ಷತೆಯಿಂದ ನಿರ್ವಹಿಸುತ್ತಿದೆ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ವಿತ್ತಿಯ ಕ್ರೋಢೀಕರಣ ನಕ್ಷೆ ರೂಪಿಸುವಲ್ಲಿ ನನ್ನ ಸರ್ಕಾರ ಮುಂಚೂಣಿಯಲ್ಲಿದೆ ಎಂದರು.

ಕರ್ನಾಟಕ ದೇಶದಲ್ಲಿ ಮಾದರಿ ರಾಜ್ಯ‌ ಹಲವು ಪ್ರಗತಿಪರ ಯೋಜನೆಗಳಿಂದಾಗಿ ಮಾದರಿ ಎನಿಸಿದೆ ವಿಧಾನ ಪರಿಷತ್ ಸದಸ್ಯರು ರಾಜ್ಯದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ
ರಾಜ್ಯದ ಯೋಜನೆಗಳನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯವಿದೆ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ರಾಜ್ಯಪಾಲರ ವಿ ಆರ್ ವಾಲಾ ಭಾಷಣ ಮುಗಿಸಿದರು.

ಕಾವೇರಿ ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ಸುಸೂತ್ರ,ಸಕಲ ಮಾಹಿತಿ ಕ್ರೂಡೀಕರಣ:ಮಸೂದ್ ಹುಸೈನ್

ನವದೆಹಲಿ:ಮೊದಲ ಸಭೆ ಸೌಹಾರ್ದಯುತವಾಗಿ ನಡೆದಿದ್ದು ಪ್ರಾಧಿಕಾರ ರಚನೆ ಹಾಗೂ ಕ್ರೀಯಾಯೋಜನೆಯ ಬಗ್ಗೆ ಚರ್ಚೆ ಯಾಗಿದೆ ಸಿಬ್ಬಂದಿ ಹಾಗೂ ಕಚೇರಿ ನಿರ್ಮಾಣ ಕುರಿತು ಮಾತುಕತೆಯಾಗಿದೆ ಎಲ್ಲ ಜಲಾಶಯಗಳ ಒಳ ಹರಿವು ಹರಿವು ಮಾಹಿತಿ ಪಡೆಯಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೈನ್ ಹೇಳಿದ್ದಾರೆ.

ಶಕ್ತಿಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಯನಾಡಿದ ಹುಸೈನ್,ಜುಲೈ ತಿಂಗಳ ಬಾಕಿ‌ ಇರುವ ನೀರನ್ನು ಬಿಡಬೇಕು ಅಂತಾ ಪ್ರಾಧಿಕಾರ ತಿರ್ಮಾನ ಮಾಡಿದೆ ಈ ಬಾರಿ ಮಾನ್ಸೂನ್ ಸಾಮಾನ್ಯಕ್ಕಿಂತ ಹೆಚ್ಚಿದೆ ಎಷ್ಟು ಪ್ರಮಾಣದ ನೀರು ಬಿಡಬೇಕು ಎಂಬುದು ಅಂತಿಮ ಆಗಿಲ್ಲ ಜೂನ್ ತಿಂಗಳ‌ಮಳೆ ಆಧರಿಸಿ ನೀರು ಬಿಡಲು ತಿರ್ಮಾನ ಕೈಗೊಳ್ಳಲಾಗುತ್ತದೆ. ನ್ಯಾಯಾಧಿಕರಣ ತೀರ್ಪಿನ ಪ್ರಕಾರ ಕರ್ನಾಟಕ 34 ಟಿಎಂಸಿ ನೀರು ಬಿಡಬೇಕು. ಆದರೆ ಸುಪ್ರೀಂಕೋರ್ಟ್ 14 ಟಿಎಂಸಿ ನೀರು ಕಡಿಮೆ ಮಾಡಿ 177ಕ್ಕೆ ನಿಗದಿ ಮಾಡಿತ್ತು. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪಿಗೆ ಅನ್ವಯವಾಗ್ಗಿ ಜುಲೈ ತಿಂಗಳಲ್ಲಿ ಹರಿಸಬೇಕಾದ ನೀರಿನ ಪ್ರಮಾಣ ನಿಗದಿ ಮಾಡಲಾಗುವುದು ಎಂದ್ರು.

ಜೂನ್ ತಿಂಗಳಲ್ಲಿ ತಮಿಳುನಾಡಿಗೆ ಒಂದು ಟಿಎಂಸಿಯಷ್ಟು ನೀರು ಬಿಡಲಾಗಿದೆ ಮಳೆ ಸಂದರ್ಭದಲ್ಲಿ ಹೆಚ್ಚುವರಿ ಒಂದು ಟಿಎಂಸಿ ‌ನೀರು‌ ಕೊಟ್ಟಿದೆ ಸದ್ಯ ನೀಡಬೇಕಾದ 31 ಟಿಎಂಸಿಯಲ್ಲಿ ಒಂದು ಟಿಎಂಸಿ ಕಡಿತಗೊಳಿಸಿ ಸುಮಾರು 30 ಟಿಎಂಸಿ ಯಷ್ಟು ನೀರನ್ನು ತಮಿಳುನಾಡಿಗೆ ಕೊಡಬೇಕು ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿದ ಬಳಿಕ ತಮಿಳುನಾಡು‌ ಪುದುಚೇರಿಗೆ ನೀರು ಹರಿಸಬೇಕು 7 ಟಿಎಂಸಿ ನೀರನ್ನು ‌ತ.ನಾಡು ಪುದುಚೇರಿಗೆ ನೀಡಬೇಕು ಎಂದ್ರು.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯ ಚಟುವಟಿಕೆ ಹಾಗೂ ನಿಯಮಾವಳಿಗಳನ್ನು ರೂಪಿಸುವುದು
ಕಾವೇರಿ ನದಿಯ ಎಂಟು ಜಲಾಶಯಗಳ ನಿರ್ವಹಣೆ ಕುರಿತು ಚರ್ಚೆ ನಡೆಸುವುದು, ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ನಿಯೋಜನೆ ಸಿಬ್ಬಂದಿಯ ಸೇವಾ ನಿಯಮಗಳು ರೂಪಿಸುವುದು. ಪ್ರಾಧಿಕಾರದ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಹಣಕಾಸಿನ ಕ್ರೂಡಿಕರಣ,ಪ್ರಾಧಿಕಾರದ ಕಚೇರಿಗಾಗಿ ಸ್ಥಳ ನಿಯೋಜನೆ ಪೀಠೋಪಕರಣ ವ್ಯವಸ್ಥೆ ಕಂಪ್ಯೂಟರ್ ಮತ್ತಿತರ ಅಧುನಿಕ ಸಲಕರಣೆಗಳ ವ್ಯವಸ್ಥೆ ಮೂಲ ಸೌಲಭ್ಯ ಹಾಗೂ ವಾಹನ ವ್ಯವಸ್ಥೆ ಕುರಿತು, ಕಾವೇರಿ ನೀರು ನಿಯಂತ್ರಣ ಸಮಿತಿಗೆ ನಿರ್ದೇಶನ ನೀಡುವ ಬಗ್ಗೆ ಚರ್ಚೆ ನದಿ ವ್ಯಾಪ್ತಿಯಲ್ಲಿರುವ ಕೇರಳದ ಬಾಣಾಸುರ ಸಾಗರ , ರಾಜ್ಯದ ಹೇಮಾವತಿ, ಕಬಿನಿ, ಹಾರಂಗಿ, ಕೃಷ್ಣ ರಾಜ ಸಾಗರ, ತಮಿಳುನಾಡಿನ ಭವಾನಿ, ಅಮರಾವತಿ ಮತ್ತು ಮೆಟ್ಟೂರು ಜಲಾಶಯಗಳ ಒಳ ಮತ್ತು ಹೊರ ಹರಿವಿನ ಮಾಹಿತಿ ಸಂಗ್ರಹ ನೀರಿನ ಬಳಕೆ ಸಂಗ್ರಹ ಸಾಮರ್ಥ್ಯ, ಮಳೆಯ ಪ್ರಮಾಣ, ಬೆಳೆಯ ವ್ಯಾಪ್ತಿ, ಮತ್ತು ಸ್ಥಳೀಯ ಹಾಗೂ ಕೈಗಾರಿಕಾ ಅಗತ್ಯತೆ ಈ ಸಮಿತಿಯಿಂದಲೇ ಕಾರ್ಯ ನಿರ್ವಹಿಸುವ ಕುರಿತು, ಜೂನ್ 1ರಿಂದ ಜೂನ್ 30 ರವರೆಗೆ ಸಂಗ್ರಹವಾಗಿರುವ ನೀರಿನ ಪ್ರಮಾಣದ ಮಾಹಿತಿ ಈ ಅವಧಿಯಲ್ಲಿ ಮಳೆಯ ಕೊರತೆ ಇದ್ದಲ್ಲಿ ಆ ಬಗ್ಗೆ ಚರ್ಚೆ ಹಾಗು ಮಾಸಿಕ 10 ದಿನಗಳಂತೆ ಮೂರು ಭಾಗಗಳಲ್ಲಿ ಮಾಹಿತಿ ಸಂಗ್ರಹಿಸಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದ್ರು.

ಹಿಮಾಲಯ ಏರಿದ ಅಧಿಕಾರಿಗೆ ಸಿಎಂ ಅಭಿನಂದನೆ

ಬೆಂಗಳೂರು: ಹಿಮಾಲಯ ಪರ್ವತ ಯಶಸ್ವಿಯಾಗಿ ಏರಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಅರಣ್ಯ ರಕ್ಷಕ ವಿಕ್ರಮ್.ಸಿ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಹಿಮಾಲಯ ಪರ್ವತ ಏರಿದ ಯಶೋಗಾಥೆಯನ್ನು ವಿಕ್ರಮ್ ಅವರು ವಿವರಿಸಿದರು.ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿಯವರು, ನಿಮ್ಮ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.

ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವಿಜಯಪುರ ಗ್ರಾಮದವರಾದ ವಿಕ್ರಮ್ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಏನಾದರೊಂದು ಸಾಧಿಸಬೇಕೆಂದು ಛಲ ಹೊಂದಿದ್ದ ಅವರು ಹಿಮಾಲಯ ಪರ್ವತವೇರುವ ಸಾಹಸಕ್ಕೆ ಕೈ ಹಾಕಿದ್ದರು.

ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕ್ರಮ್, ಹಿಮಾಲಯ ಪರ್ವತವೇರಲು ಸಾಕಷ್ಟು ತಯಾರಿ ನಡೆಸಿದ್ದರು. ಪರ್ವತಾರೋಹಿಗಳಿಗೆ ನಡೆದ ಆಯ್ಕೆ ಸಂದರ್ಶನದಲ್ಲಿ ದೇಶದ ವಿವಿಧ ಭಾಗಗಳಿಂದ 25 ಮಂದಿ ಆಯ್ಕೆಯಾಗಿದ್ದರು.

ಅದರಲ್ಲಿ ಯಶಸ್ವಿಯಾಗಿ ಹಿಮಾಲಯ ಪರ್ವತವನ್ನು ಏರಿದ 8 ಮಂದಿಗಳ ಪೈಕಿ ವಿಕ್ರಮ್ ಕೂಡ ಒಬ್ಬರು. ಇನ್ನೂ ವಿಶೇಷವೆಂದರೆ ಕರ್ನಾಟಕದ ಪೈಕಿ ಇವರೊಬ್ಬರೇ ಈ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ವಿಕ್ರಮ್ ಅವರ ಈ ಸಾಧನೆಯನ್ನು ಮುಖ್ಯಮಂತ್ರಿಯವರು ಮುಕ್ತಕಂಠದಿಂದ ಹೊಗಳಿ ಶ್ಲಾಘಿಸಿದರು.

ರಾಜ್ಯಕ್ಕೆ ಕಾವೇರಿ ಶಾಕ್:31.24 ಟಿಎಂಸಿ ನೀರು ಬಿಡಬೇಕಾ ರಾಜ್ಯ?

ನವದೆಹಲಿ : ಉತ್ತಮ ಮುಂಗಾರು ಮಳೆಯಿಂದ ಕಾವೇರಿ ಕೊಳ್ಳದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ತಮಿಳುನಾಡಿಗೆ ಹರಿಸಬೇಕಾದ 34 ಟಿಎಂಸಿ ನೀರು ಹರಿಸುವ ಸಲಹೆಯನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ ಎನ್ನಲಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ದೆಹಲಿಯ ಶಕ್ತಿ ಭವನದಲ್ಲಿ ಇಂದು ನಡೆಯಿತು.
ಕೇಂದ್ರ ಜಲ ಮಂಡಳಿ ಮತ್ತು ಪ್ರಾಧಿಕಾರದ ಮುಖ್ಯಸ್ಥ ಮಸೂದ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಐವರು, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ತಲಾ ಒಬ್ಬ ಪ್ರತಿನಿಧಿಗಳು ಭಾಗವಹಿಸಿದ್ದರು.ರಾಜ್ಯದ ಪರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಜರಿದ್ದರು.

ಕಾವೇರಿ ಕೊಳ್ಳದ ಡ್ಯಾಂಗಳಲ್ಲಿರುವ ನೀರಿನ ಸಂಗ್ರಹ, ಒಳ ಹರಿವಿನ ಪ್ರಮಾಣದ ಮಾಹಿತಿಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಪ್ರತಿ ಹತ್ತು ದಿನಕ್ಕೊಮ್ಮೆಯಂತೆ ತಿಂಗಳಲ್ಲಿ 3 ಬಾರಿ ಕರ್ನಾಟಕದಿಂದ ಹರಿಸಬೇಕಿರುವ ನೀರಿನ ಪ್ರಮಾಣ ಕುರಿತು ಮಾರ್ಗ ಸೂಚಿ, ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಜುಲೈನಲ್ಲಿ ಹರಿಸಬೇಕಿರುವ ನೀರು ಪ್ರಮಾಣದ ಕುರಿತು ಹಾಗೂ ಗೃಹ ಬಳಕೆ ಮತ್ತು ಕೈಗಾರಿಕಾ ಬಳಕೆ ನೀರಿನ ಪ್ರಮಾಣದ ಮಾಹಿತಿ ಸಂಗ್ರಹ, ಜಲಾಶಯಗಳಿಂದ ನಾಲೆಗಳಿಗೆ ಎಷ್ಟು ನೀರು ಬಿಡಬೇಕು. ಪ್ರಾಧಿಕಾರ ರಚನೆಯಲ್ಲಿನ ಲೋಪ ಮತ್ತಿತರ ವಿಷಯಗಳು ಸಭೆಯಲ್ಲಿ ವ್ಯಕ್ತವಾಗಿವೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಉತ್ತಮ ಮಳೆಯಾಗುತ್ತಿರುವ ಕಾರಣ ಜುಲೈ ತಿಂಗಳ ಕೋಟಾದ ಅಡಿ 34 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡಬೇಕು ಈಗಾಗಲೇ ತಮಿಳುನಾಡಿಗೆ ಹರಿಸಿರುವ ನೀರು ಕಳೆದು ಉಳಿದ ನೀರನ್ನು ರಾಜ್ಯ ಬಿಡಬೇಕಾಗಲಿದೆ ಅಂದಾಜು 31.24 ಟಿಎಂಸಿ ನೀರು ಬಿಡಬೇಕು ಎನ್ನುವ ಮಾಹಿತಿ ತಿಳಿದುಬಂದಿದೆ.

ರಾಜ್ಯಪಾಲರ ಭಾಷಣ ನೀರಸ, ನಿರರ್ಥಕ: ಬಿಎಸ್ವೈ ವ್ಯಂಗ್ಯ

ಬೆಂಗಳೂರು: ಸರ್ಕಾರ ಟೇಕಾಫ್ ಆಗುವ ಯಾವುದೇ ಲಕ್ಷಣ ಇಂದಿನ‌ ರಾಜ್ಯಪಾಲರ ಭಾಷಣದಲ್ಲಿ ಕಾಣಿಸುತ್ತಿಲ್ಲ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಯೂ ಕಂಡು ಬರುತ್ತಿಲ್ಲ. ಇಂದಿನ ರಾಜ್ಯಪಾಲರ ಭಾಷಣ ನೀರಸ ಮತ್ತು ನಿರರ್ಥಕ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಇಂದಿನ ರಾಜ್ಯಪಾಲರ ಭಾಷಣದಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ರೈತರ ಯಾವುದೇ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿಲ್ಲ. ಕೇಂದ್ರ ಸರ್ಕಾರದ ಉಜ್ವಲ‌ ಯೋಜನೆಯನ್ನು ತಮ್ಮದೇ ಯೋಜನೆ ಎಂಬಂತೆ ಬಿಂಬಿಸಿದ್ದಾರೆ‌ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದ ಮೂಲಭೂತ ಸೌಲಭ್ಯದ ಬಗ್ಗೆಯೂ ಭಾಷಣದಲ್ಲಿ ಪ್ರಸ್ತಾಪವಾಗಿಲ್ಲ. ದೂಧ್ ಗಂಗಾ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದು ಯಾವುದಕ್ಕೂ ಉಪಯೋಗವಿಲ್ಲ. ರಾಜ್ಯಪಾಲರ ಭಾಷಣ ನೀರಸ, ನಿರರ್ಥಕವಾದುದು ಎಂದು ಭಾಷಣದ ಬಗ್ಗೆ ಬಿಎಸ್ವೈ ವ್ಯಂಗ್ಯವಾಡಿದರು.