ಕಣ್ಣಿನ ಸುತ್ತ ಇರುವ ಕಪ್ಪು ಕಲೆಯನ್ನು ನಿವಾರಣೆ ಮಾಡಬೇಕೇ? ಹಾಗಾದ್ರೆ ಈ ಮನೆಮದ್ದು ಉಪಯೋಗಿಸಿ!

ಕಣ್ಣಿನ ಸುತ್ತ ಕಪ್ಪು ಕಲೆ ಇದ್ರೆ ಮುಖದ ಅಂದವೇ ಹಾಳಾಗುತ್ತದೆ. ನಿದ್ರಾಹೀನತೆ ಸೇರಿದಂತೆ ಹಲವು ಕಾರಣಗಳಿಂದ ಕಣ್ಣಿನ ಸುತ್ತಾ ಕಪ್ಪು ಕಲೆಗಳು ಉಂಟಾಗುತ್ತವೆ. ಒಮ್ಮೆ ಕಪ್ಪು ಕಲೆಗಳು ಬಂದರೆ ಸುಲಭವಾಗಿ ಹೋಗುವುದಿಲ್ಲ. ಆದರೆ, ಮನೆ ಮದ್ದುಗಳಿಂದಲೇ ಕಪ್ಪು ಕಲೆ ನಿವಾರಣೆ ಮಾಡಬಹುದಾಗಿದೆ.

ಕಪ್ಪು ಕಲೆಗಳನ್ನು ಹೋಗಲಾಡಿಸಲು ಹಲವಾರು ಬಗೆಯ ಔಷಧ ಮತ್ತು ಕ್ರೀಮ್ ಗಳಿವೆ, ಆದರೆ, ಕಡಿಮೆ ಖರ್ಚಿನಲ್ಲಿ ಕೆಮಿಕಲ್ಸ್ ಇಲ್ಲದೆ ಮನೆಯಲ್ಲೇ ಮಾಡುವಂತಹ ಮನೆ ಮದ್ಧುಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.

ಟೀ ಪುಡಿ
ಮನೆಯಲ್ಲಿರುವ ಟೀ ಪುಡಿಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ತಣ್ಣಗಾದ ನಂತರ ಹತ್ತಿಯಿಂದ ಕಣ್ಣಿನ ಸುತ್ತಲೂ ಅದನ್ನು ಹಚ್ಚಿ. ಮೂರು ದಿನ ಈ ರೀತಿ ಮಾಡಿದರೆ ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಯಾಗುತ್ತದೆ.

ಸೌತೆಕಾಯಿ, ಟೊಮೇಟೊ ಮತ್ತು ಲಿಂಬೆಹಣ್ಣಿನ ರಸ
ತಲಾ ಒಂದೊಂದು ಸ್ಪೂನ್ ಸೌತೆಕಾಯಿ ಮತ್ತು ಟೊಮೇಟೊ ರಸಕ್ಕೆ 4 ಹನಿ ನಿಂಬೆರಸವನ್ನು ಮಿಶ್ರಣ ಮಾಡಿ ಕಣ್ಣಿನ ಕೆಳಗಿನ ಕಪ್ಪು ಕಲೆಗಳಿಗೆ ಹಚ್ಚಿ 1/2 ಗಂಟೆಯ ನಂತರ ತೊಳೆಯಿರಿ ಹೀಗೆ ಪ್ರತಿ ನಿತ್ಯ ಮಾಡಿದರೆ 15 ದಿನಗಳಲ್ಲಿ ಕಪ್ಪು ಕಲೆಗಳು ಕಡಿಮೆಯಾಗುತ್ತವೆ. ಈ ಮಿಶ್ರಣವನ್ನು ಮುಖಕ್ಕೂ ಹಚ್ಚಬಹುದಾಗಿದೆ.

ಆಲೋವೆರಾ (ಲೋಳೆಸರ)
ಲೋಳೆಸರದ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಂಡು 30 ನಿಮಿಷ ಬಿಟ್ಟು ಮುಖ ತೊಳೆದುಕೊಂಡರೆ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

ಹಾಲಿನ ಕೆನೆ ಮತ್ತು ಮೊಸರು
ಒಂದು ಚಮಚ ತಾಜಾ ಮೊಸರಿನ ಜೊತೆಗೆ ಅರ್ಧ ಚಮಚ ಹಾಲಿನ ಕೆನೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ಮಾಡಿಕೊಂಡು ಈ ಪೇಸ್ಟ್‌ ನ್ನು ಕಪ್ಪು ಕಲೆಗಳ ಸುತ್ತ ಹಚ್ಚಿ. 10-15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.

ಈ ರೀತಿ ಮನೆ ಮದ್ದುಗಳನ್ನು ಬಳಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಸಹ ಇರುವುದಿಲ್ಲ.

                ಜ್ಞಾನಜ್ಯೋತಿ ಬ್ಯೂಟಿ ಎಕ್ಸ್‌ಪರ್ಟ್

ಗ್ರೂಪ್ ನಲ್ಲಿ ಅಡ್ಮಿನ್ ಮಾತ್ರ ಪೋಸ್ಟ್ ಮಾಡಬಹುದು: ವಾಟ್ಸ್ ಆ್ಯಪ್ ನಿಂದ ಹೊಸ‌ ಫೀಚರ್!

ನವದೆಹಲಿ: ಗ್ರೂಪ್ ರಚಿಸಿದ‌ ಅಡ್ಮಿನ್ ನನ್ನು ಸಹ ಅಡ್ಮಿನ್ ಗಳು ರಿಮೂವ್ ಮಾಡದ ರೀತಿ ವ್ಯವಸ್ಥೆ ಜಾರಿಗೊಳಿಸಿ ಅಡ್ಮಿನ್ ಗೆ ಪವರ್ ನೀಡಿದ್ದ ವಾಟ್ಸ್ ಆಪ್ ಇದೀಗ ಗ್ರೂಪ್ ಅಡ್ಮಿನ್ ಹೊರತು ಮತ್ಯಾರೂ ಗ್ರೂಪ್‌ಗೆ ಸಂದೇಶ ಹಾಕದಂತೆ ವ್ಯವಸ್ಥೆ ಅಳವಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.

ಕೆಲವೊಂದು ಗ್ರೂಪ್ ಗಳನ್ನು ಸದಸ್ಯರಿಗೆ ಮಾಹಿತಿ ನೀಡಲು ಮಾತ್ರವೇ ರಚಿಸಲಾಗಿರುತ್ತದೆ.ಅಲ್ಲಿ ಇತರರ ಚರ್ಚೆ ಮಾಹಿತಿ ಹಂಚಿಕೆ ಅಗತ್ಯವಿರುವುದಿಲ್ಲ,ಆದರೂ ಅಲ್ಲಿ ಸದಸ್ಯರು ಅನಗತ್ಯ ವಿಷಯಗಳ ಪೋಸ್ಟ್ ಮಾಡವುದು ಚರ್ಚೆ ಮಾಡುವುದು ಮಾಡುತ್ತಾರೆ,ಇಲ್ಲಿ ಅಡ್ಮಿನ್ ಪದೇ ಪದೇ ಎಚ್ಚರಿಕೆ ನೀಡಬಹುದು ಇಲ್ಲವೇ ಅಂತಹ ವ್ಯಕ್ತಿಗಳನ್ನು ಗ್ರೂಪ್ ನಿಂದ ರಿಮೂವ್ ಮಾಡಬಹುದು.ಆದರೆ ಇದಕ್ಕೂ ಈಗ ವಾಟ್ಸ್ ಆ್ಯಪ್‌ ಪರಿಹಾರ ನೀಡಿದೆ.ಅದೇ ಅಡ್ಮಿನ್ ಪರಮಾಧಿಕಾರ.

ವಾಟ್ಸ್​ಆಪ್ ಗ್ರೂಪ್​ಗೆ ಅನವಶ್ಯಕ, ಕಿರಿಕಿರಿ ಉಂಟುಮಾಡುವ ಸಂದೇಶಗಳು ಬರುತ್ತಿವುದನ್ನು ನಿಯಂತ್ರಿಸಲು ವಾಟ್ಸ್ ಆ್ಯಪ್ ಸಂಸ್ಥೆ ಹೊಸ ಫೀಚರ್ ಬಿಡುಗಡೆ ಮಾಡಿದೆ. ಇದನ್ನು ಅಪ್​ಡೇಟ್ ಮಾಡಿಕೊಂಡಲ್ಲಿ ಅಡ್ಮಿನ್​ಗೆ ಗ್ರೂಪ್ ಮೇಲೆ ಸಂಪೂರ್ಣ ಹಿಡಿತ ಸಾಧ್ಯವಾಗಲಿದೆ. ಅನವಶ್ಯಕ ಸಂದೇಶಗಳನ್ನು ಅಡ್ಮಿನ್ ನಿಯಂತ್ರಿಸಬಹುದು. ಮೂರು ದಿನಗಳ ಹಿಂದೆ ವಾಟ್ಸ್​ಆಪ್ ತನ್ನ ಬ್ಲಾಗ್​ನಲ್ಲಿ ಈ ಮಾಹಿತಿ ನೀಡಿದೆ.

ಒನ್ಲಿ ಅಡ್ಮಿನ್’ ಫೀಚರ್ ಅಪ್​ಡೇಟ್ ಮಾಡಿಕೊಂಡರೆ ಅಡ್ಮಿನ್ ಮಾತ್ರ ಗ್ರೂಪ್​ನಲ್ಲಿ ಮೆಸೆಜ್ ಪೋಸ್ಟ್ ಮಾಡಲು ಸಾಧ್ಯ.ಅಡ್ಮಿನ್ ಹೊರತಾಗಿ ಉಳಿದವರು ಯಾವುದೇ ಸಂದೇಶವನ್ನು ಗ್ರೂಪ್​ಗೆ ಹಾಕಲು ಸಾಧ್ಯವಾಗುವುದಿಲ್ಲ. ಪ್ರಮುಖ ಸಂದೇಶವಿದ್ದಲ್ಲಿ ಅದನ್ನು ಅಡ್ಮಿನ್​ಗೆ ಕಳಿಸಿ, ಆತ ಪೋಸ್ಟ್ ಮಾಡಬೇಕು.ಗ್ರೂಪ್​ನಲ್ಲಿ ಒಮ್ಮುಖ ಸಂವಹನ ನಡೆಯುತ್ತದೆ.ಗ್ರೂಪ್​ನಲ್ಲಿ ಯಾವುದೇ ವಿಷಯ ಕುರಿತು ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ. ಅಡ್ಮಿನ್ ಯಾವುದನ್ನು ಪೋಸ್ಟ್ ಮಾಡುತ್ತಾನೋ ಸದಸ್ಯರು ಅದನ್ನು ಓದಬೇಕು, ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ.

ಅಪ್​ಡೇಟ್ ಹೇಗೆ?

ಗ್ರೂಪ್ ಮೊದಲು ಅಡ್ಮಿನ್ ತಾವು ರಚಿಸಿದ ಗ್ರೂಪ್ ಓಪನ್ ಮಾಡಿಕೊಳ್ಳಬೇಕು,ನಂತರ ಗ್ರೂಪ್ ಇನ್ಪೋ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು ಬಳಿಕ ಗ್ರೂಪ್ ಸೆಟ್ಟಿಂಗ್ ಆಯ್ಕೆ ಮಾಡಿಕೊಂಡು ಸೆಂಡ್ ಮೆಸೆಜ್ ಎಂಬ ಆಪ್ಶನ್ ನಲ್ಲಿಒನ್ಲಿ ಅಡ್ಮಿನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಸಾಲಮನ್ನಾಗೆ ಸಮನ್ವಯ ಸಮಿತಿ ಸಮ್ಮತಿ:ಹಿಂದಿನ ಸರ್ಕಾರದ ಯೋಜನೆಗಿಲ್ಲ ತಡೆ

ಬೆಂಗಳೂರು:ರೈತರ ಸಾಲಮನ್ನಾ,ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳ ಮುಂದುವರಿಕೆ ಸೇರಿದಂತೆ ಉಭಯ ಪಕ್ಷಗಳ ಪ್ರಣಾಳಕೆಯ ಕೆಲ ಭರವಸೆಗಳನ್ನು ಬಜೆಟ್ ನಲ್ಲಿ ಪ್ರಕಟಿಸಲು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ನಾಳೆಯಿಂದ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸಲಾಯಿತು. ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಉಪಸ್ಥಿತರಿದ್ದರು.

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಹಾಗೂ ಹಂಚಿಕೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬಜೆಟ್, ಸಚಿವ ಸಂಪುಟ ವಿಸ್ತರಣೆ, ರೈತರ ಸಾಲ ಮನ್ನಾ ವಿಚಾರ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯಲ್ಲಿ ಶಿಫಾರಸ್ಸಾಗಿರುವ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚರ್ಚೆ ನಡೆಸಿ ಕೆಲಸ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯ್ತು.

ಸಭೆ ಕೈಗೊಂಡ ನಿರ್ಧಾರಗಳ ಹೈಲೈಟ್ಸ್:

*ರೈತರ ಸಾಲಾ ಮನ್ನಾ ಗೆ ಸಮ್ಮತಿ..ಬಜೆಟ್ ನಲ್ಲಿ ಸಾಲ‌ಮನ್ನಾ ವಿವರಗಳ‌ ಪ್ರಕಟ
*1,25000 ಕೋಟಿ ನೀರಾವರಿಗೆ ನಿಗದಿ.
* ವಸತಿ ರಹಿತರಿಗೆ 20 ಲಕ್ಷ ಮನೆಗಳ ನಿರ್ಮಾಣ
*ನೂತನ ಕ್ರೀಡಾ ನೀತಿ ಪ್ರಕಟ
*ಮುಂದಿನ‌ಐದು ವರ್ಷಗಳಲ್ಲಿ ಐದು ಕೋಟಿ ಉದ್ಯೋಗ ಸೃಷ್ಟಿ
*ಯೂನಿರ್ವಸಲ್ ಹೆಲ್ತ್ ಕಾರ್ಡ್ ಜಾರಿ
*ಹಿಂದಿನ‌ಕಾಂಗ್ರೆಸ್ ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳ ಮುಂದುವರಿಕೆ.

ಸಮನ್ವಯ ಸಮಿತಿ ಸಭೆಯ ವಿವರ ನೀಡಿದ ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ, ಕೆಲವು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಸಾಮಾನ್ಯ ಕನಿಷ್ಟ ಕಾರ್ಯಕ್ರಮ‌ ಜಾರಿಗೆ ಸಮನ್ವಯ ಸಮಿತಿ ಸಮ್ಮತಿಸಿದೆ ಎಂದರು.

ವಿಧಾನ ಮಂಡಳ ಅಧಿವೇಶನದ ತರವಾಯು ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ.ನಿಗಮ ಮಂಡಳಿ ಹಂಚಿಕೆಗೆ ಎರಡೂ ಪಕ್ಷಗಳ ಪಟ್ಟಿ ವಿನಿಮಯ ಮಾಡಿಕೊಳ್ಳಲಾಗಿದೆ.ನಾಳೆ ಒಟ್ಟು ಸ್ಥಾನಗಳ ಹಂಚಿಕೆ ಪ್ರಕಟಿಸಲಾಗುತ್ತದೆ ಎಂದರು.

ಬಜೆಟ್ ಮಂಡನೆ ಸಂಬಂಧ ಎರಡೂ ಪಕ್ಷಗಳಲ್ಲಿ ಯಾವುದೇ ಗೊಂದಲವಿಲ್ಲ.ದೃಷ್ಯ ಬಿಡುಗಡೆ ಕೆಲವು ಕಿಡಿಗೇಡಿಗಳ ಕೃತ್ಯ ಹಾಗಾಗಿ ಎಚ್.ಡಿ.ಕುಮಾರಸ್ವಾಮಿಯವರ ಬಜೆಟ್ ಮಂಡನೆಗೆ ಯಾವುದೇ ಅಡ್ಡಿಯಿಲ್ಲ.ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ.ಸಿದ್ದರಾಮಯ್ಯ ಅವರಿಗೆ ಕ್ಯಾಬಿನೆಟ್ ಸ್ಥಾನ ಮಾನ ನೀಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದರು.

ಸಿಎಂ ಕುಮಾರಸ್ವಾಮಿ ಮಾತನಾಡಿ, ಸರ್ಕಾರದಲ್ಲಿ ಯಾವ ಗೊಂದಲಗಳು ಇಲ್ಲ.ಸಾಮಾನ್ಯ ಕನಿಷ್ಟ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತೇವೆ.ಹಂತ ಹಂತವಾಗಿ ಕಾರ್ಯಕ್ರಮಗಳ ಪಟ್ಟಿ ರೆಡಿ ಮಾಡುತ್ತೇವೆ.ರೈತರ ಸಾಲಮನ್ನಾ ವಿಚಾರದ ಬಗ್ಗೆ ಬಜೆಟ್ ಮಂಡನೆವರೆಗೂ ಕಾಯಿರಿ. ಎಲ್ಲವನ್ನೂ ಸಹಿತ ಈವಾಗ್ಲೆ ಹೇಳಲಿಕ್ಕೆ ಆಗಲ್ಲ ಎಂದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮಾತನಾಡಿ, ಯಾವುದೇ ಗೊಂದಲವಿಲ್ಲ.ಎಲ್ಲವೂ ಬಗೆ ಹರಿದಿದೆ.ರೈತರ ಸಾಲ ಮನ್ನಾವನ್ನು ಕಾಂಗ್ರೆಸ್ ಎಂದೂ ವಿರೋಧಿಸಿಲ್ಲ.ಜತೆಗೆ ಸಚಿವರೂ ಸಹ ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬಹುದು.ಎರಡೂ ಪಕ್ಷಗಳ ಮಾಹಿತಿ ನೀಡಲು ಎರಡೂ ಪಕ್ಷಗಳಿಂದ ಇಬ್ಬರು ವಕ್ತಾರರನ್ನು ನೇಮಕ ಮಾಡಲಾಗುತ್ತದೆ.ಪಕ್ಷಗಳ ಸಮನ್ವಯತೆಗೆ ಸಂಬಂಧಿಸಿದಂತೆ ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನು ನಿರ್ಬಂಧಿಸಲಾಗುತ್ತದೆ.ಎರಡೂ ಪಕ್ಷಗಳಿಗೆ ಸೇರಿದಂತೆ ಸರ್ಕಾರದ ಪರವಾಗಿ ಒಬ್ಬರೇ ಮುಖ್ಯ ಸಚೇತಕರು ಇರುತ್ತಾರೆ.ಈ ಬಾರಿ ವಿಧಾನಸಭೆ ಕಲಾಪ ಕಡಿಮೆ ಅವಧಿಯದ್ದಾದರಿಂದ ಜಂಟಿ ಶಾಸಕಾಂಗ ಸಭೆ ಕರೆಯಲು ಸಾಧ್ಯವಾಗಿಲ್ಲ.ನಂತರದ ದಿನಗಳಲ್ಲಿ ಜಂಟಿ ಶಾಸಕಾಂಗ ಸಭೆ ನಡೆಸಲಾಗುತ್ತದೆ ಎಂದರು.

ಮಲಬದ್ಧತೆಗೆ ರಾಮಬಾಣವಾದ ಸಜ್ಜೆ!

ಸಜ್ಜೆಯು ಪ್ರಮುಖ ಸಿರಿ ಧಾನ್ಯಗಳಲ್ಲೊಂದು. ರುಚಿಯಾದ ಆಹಾರದ ಜೊತೆ ಉತ್ತಮ ಆರೋಗ್ಯದ ಗುಟ್ಟನ್ನು ಹೊಂದಿದೆ. ಕ್ಯಾಲ್ಸಿಯಂ ಆಗರವಾಗಿರುವ ಸಜ್ಜೆ ಸೇವನೆಯಿಂದ ಮಲಬದ್ಧತೆ ನಿವಾರಣೆ ಯಾಗುತ್ತದೆ.

ಬೆಳೆಯುವ ವಿಧಾನ

ಸಜ್ಜೆಗೆ ಹೆಚ್ಚು ನೀರಿನ ಅಗತ್ಯವಿಲ್ಲ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಬಿತ್ತಿದ ಮೂರುವರೆ ತಿಂಗಳಿಂದ ನಾಲ್ಕು ತಿಂಗಳೊಳಗೆ ಫಸಲು ಕೈಗೆ ಬರುತ್ತದೆ. ಸಾಮಾನ್ಯವಾಗಿ ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯಬಹುದಾಗಿದ್ದು. ಅದರಲ್ಲೂ ಮುಖ್ಯವಾಗಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಬೆಳೆಯಬಹುದಾಗಿದೆ.

ಉಪಯೋಗ

ಸಜ್ಜೆಯಲ್ಲಿ ಬಹಳಷ್ಟು ಔಷಧಿಯ ಗುಣಗಳಿದ್ದು, ಮುಖ್ಯವಾಗಿ ಮಲಬದ್ಧತೆ ನಿವಾರಣೆಗೆ ಸಜ್ಜೆ ಅತ್ಯುತ್ತಮ ಔಷಧಿಯಾಗಿದೆ‌. ಅಲ್ಲದೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಪ್ರೊಟೀನ್, ನಾರು ಮತ್ತು ಕನಿಜಾಂಶಗಳ ಆಗರವಾಗಿದ್ದು ಬೊಜ್ಜನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಮಹಿಳೆ ಮತ್ತು ಮಕ್ಕಳಲ್ಲಿ ಕಾಣುವ ನಿತ್ರಾಣ ಮತ್ತು ರಕ್ತಹೀನತೆಗೆ ಇದು ರಾಮಬಾಣವಾಗಿದೆ.

ಸಜ್ಜೆಯಿಂದ ತಯಾರಿಸುವ ಆಹಾರಗಳಲ್ಲಿ ಪ್ರಮುಖವಾದದ್ದು ರೊಟ್ಟಿ ಮತ್ತು ಇಡ್ಲಿ.

ಸಜ್ಜೆ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು

ಸಜ್ಜೆ ಹಿಟ್ಟು – 2 ಕಪ್
ನೀರು – 2 ಕಪ್
ಉಪ್ಪು – 1/4 ಚಮಚ
ಅರಿಶಿಣ – 1/4 ಚಮಚ
ಕರಿ ಮತ್ತು ಬಿಳಿ ಎಳ್ಳು – 1 ಟೀ ಚಮಚ

ಮಾಡುವ ವಿಧಾನ

ಅಗಲವಾದ ಪಾತ್ರೆಯಲ್ಲಿ ಒಂದೂವರೆ ಕಪ್‌ ನಷ್ಟು ಸಜ್ಜೆ ಹಿಟ್ಟನ್ನು ತೆಗೆದುಕೊಳ್ಳಿ. ಅರ್ಧ ಕಪ್ ನೀರನ್ನು ಕುದಿಯಲು ಇಡಿ. ಕುದಿ ಬಂದ ಮೇಲೆ ಹಿಟ್ಟಿನ ನಡುವೆ ಜಾಗ ಮಾಡಿ ನೀರು ಹಾಕಿ, ಒಂದು ತಟ್ಟೆ ಮುಚ್ಚಿ ಸ್ವಲ್ಪ ಹೊತ್ತು ಇಡಿ. ಆಮೇಲೆ ಉದ್ದ ಚಮಚದಿಂದ ಹಿಟ್ಟು ನೀರು ಒಂದಾಗುವಂತೆ ತಿರುಗಿಸಿ, ಮುದ್ದೆಯ ಹಾಗೆ ಬರುತ್ತೆ. ಇದಕ್ಕೆ ಸ್ವಲ್ಪ ಒಣ ಹಿಟ್ಟು ಮತ್ತು ಸ್ವಲ್ಪ ತಣ್ಣೀರು ಸೇರಿಸಿ. ಉಪ್ಪು ಮತ್ತು ಅರಿಶಿಣ ಹಾಕಿ ಚೆನ್ನಾಗಿ ನಾದಿ, ರೊಟ್ಟಿ ತಟ್ಟಿರಿ. ಮೇಲೆ ಎಳ್ಳು ಉದುರಿಸಿ ಇನ್ನೊಮ್ಮೆ ತಟ್ಟಿ, ಬಿಸಿ ತವೆ ಮೇಲೆ ಹಾಕಿ. ಒಂದು ಬಟ್ಟೆ ತುಂಡನ್ನು ತಣ್ಣೀರಿನಲ್ಲಿ ಅದ್ದಿ ರೊಟ್ಟಿಯ ಮೇಲೆ ಸವರಿ, ನೀರು ಆರಿದ ನಂತರ ತಿರುವಿ ಹಾಕಿ ಎರಡೂ ಬದಿ ಬೇಯಿಸಿರಿ. ಈಗ ಸಜ್ಜೆ ರೊಟ್ಟಿ ತಯಾರು.

ಸಜ್ಜೆ ರೊಟ್ಟಿಯನ್ನು ಬದನೆಕಾಯಿ ಎಣ್ಣೆಗಾಯಿ ಅಥವಾ ಯಾವುದೇ ಪಲ್ಯ, ಮೊಸರು ಚಟ್ನಿ ಪುಡಿಯೊಂದಿಗೆ ಸವಿಯಬಹುದು.

ನನಗೆ ಯಾರೂ ಗಾಡ್ ಫಾದರ್ ಇಲ್ಲ,ಹೋರಾಟದಿಂದ ಮೇಲೆ ಬಂದೆ:ಡಿಕೆಶಿ

ಬೆಂಗಳೂರು:ರಾಮನಿಗಿಂತಲೂ ಹೆಚ್ಚು ಗೌರವ ಸಿಗೋದು ಆಂಜನೇಯನಿಗೆ.ಎಲ್ಲ ಊರುಗಳಲ್ಲಿ ಆಂಜನೇಯನ ದೇವಸ್ಥಾನವಿದೆ.ರಾಮನ ದೇವಸ್ಥಾನ ಎಲ್ಲ ಕಡೆ ಇಲ್ಲ.ಜನ ಆಂಜನೇಯನಿಗೆ ಗೌರವ ಕೊಟ್ಟಿರೋದು ಆಂಜನೇಯನ ಸೇವೆ ಭಕ್ತಿಯ ಕಾರಣಕ್ಕೆ.ಕಾಂಗ್ರೆಸ್ ನಲ್ಲೂ ಹಾಗೆಯೇ ಶ್ರಮ ವಹಿಸಿದವರಿಗೆ ಫಲ ಸಿಕ್ಕೇ ಸಿಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಯುವ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಮಾತನಾಡಿದ ಡಿಕೆಶಿ,ಬಿ.ಕೆ.ಹರಿಪ್ರಸಾದ್ ರನ್ನು ಹೊರತು ಪಡಿಸಿದ್ರೆ ರಾಷ್ಟ್ರೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿರೋದು ಶ್ರೀನಿವಾಸ್ ಮಾತ್ರ.ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇರುತ್ತಾನೆ.ಎಲ್ಲಿ ಶ್ರಮ‌ ಇರುತ್ತೋ ಅಲ್ಲಿ ಫಲ ಇದ್ದೇ ಇರುತ್ತೆ ಅದಕ್ಕೆ ಶ್ರೀನಿವಾಸ್ ಸಾಕ್ಷಿ ಎಂದರು.

ಎನ್ ಎಸ್ ಯು ಐ ನಿಂದ ತರಬೇತುಗೊಂಡು ಬ್ಲಾಕ್ ಕಾಂಗ್ರೆಸ್ ಮಟ್ಟದಿಂದ ಯಾರು ಕಾಂಗ್ರೆಸ್ ನಲ್ಲಿ ಬೆಳೆದಿದ್ದಾರೋ ಅಂತಹವರು ಯಾರೂ ಕೂಡ ಪಕ್ಷಾಂತರ ಮಾಡಲ್ಲ.ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದರು.

ಪ್ರೇಮಿಗಳ ದಿನ ವಿರೋಧಿಸಿದ ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ ಬಳಿದಿದ್ದು ಶ್ರೀನಿವಾಸ್.ಆಗ ಬಂಧಿತನಾಗಿದ್ದ ಶ್ರೀನಿವಾಸ್ ಬೆಂಬಲಕ್ಕೆ ಯಾವ ನಾಯಕರೂ ಹೋಗಲಿಲ್ಲ. ನಾನು ಅವರಿಗೆ ಜಾಮೀನು ಕೊಡಿಸಿ ಬಿಡಿಸುವ ಪ್ರಯತ್ನ ಮಾಡಿದೆ.ಯಾರು ಹೆಚ್ಚು ಶ್ರಮ ಹಾಕ್ತಾರೋ,ಯಾರು ಹೆಚ್ಚು ಹೋರಾಟ ಮಾಡ್ತಾರೋ ಯಾರು ಹೆಚ್ಚು ವಿವಾದಕ್ಕೆ ಗುರಿಯಾಗ್ತಾರೋ ಅವರೇ ನಾಯಕರಾಗಿ ಬೆಳೆಯೋದು.ಆರ್.ಸಿ.ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾಗ ನಾನು ರಾಜಕೀಯ ಪ್ರವೇಶಿಸಿದೆ.ಎನ್ ಎಸ್ ಯುಐ ಮೂಲಕ ರಾಜಕೀಯ ಪ್ರವೇಶ ಮಾಡಿದೆ.ನನಗೆ ಯಾವ ಗಾಡ್ ಫಾದರ್ ಗಳೂ ಇಲ್ಲ.ಶ್ರಮ ಹೋರಾಟವೇ ನನ್ನ ಮೇಲೆ ತಂದಿದೆ ಎಂದರು.

ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದವರನ್ನು ಗುರುತಿಸಿ ರಾಹುಲ್ ಗಾಂಧಿಯವರು ರಾಜ್ಯಸಭಾ ಸದಸ್ಯರಾಗಿ ಮಾಡಿದ್ದಾರೆ.ಚಂದ್ರಶೇಖರ್ ರಾಜ್ಯಸಭಾ ಸದಸ್ಯರಾಗ್ತಾರೆ ಅಂತಾ ಯಾರೂ ನಿರೀಕ್ಷಿಸಿರಲಿಲ್ಲ.ದೊಡ್ಡ ದೊಡ್ಡ ಲೀಡರ್ ಗಳೆಲ್ಲಾ ಪ್ರಯತ್ನಿಸ್ತಾ ಇದ್ದರು.ಆದರೆ ರಾಹುಲ್ ಗಾಂಧಿಯವರು ಮೂವರು ಯುವಕರ ಸೇವೆ ಗುರ್ತಿಸಿ ರಾಜ್ಯಸಭಾ ಸದಸ್ಯರಾಗಿ ಮಾಡಿದ್ರು ಎಂದ್ರು.

ಕೆಸಿಆರ್ ಭೇಟಿ ಮಾಡಿದ ಎಚ್ಡಿಡಿ!

ಬೆಂಗಳೂರು: ಮಾಜಿ ಪ್ರಧಾನಿ ಎಚ್,ಡಿ. ದೇವೇಗೌಡ ಅವರು ಇಂದು ಆಂದ್ರಪ್ರದೇಶದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿ ಚರ್ಚಿ ನಡೆಸಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕಾಗಿ ಹೈದ್ರಾಬಾದ್‌ಗೆ ತೆರಳಿರುವ ದೇವೇಗೌಡರು, ಚಂದ್ರಶೇಖರ್ ರಾವ್ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದು, ಕೆಲಕಾಲ ಮಾತುಕತೆ ನಡೆಸಿದ್ದಾರೆ. ದೇವೇಗೌಡರು ಹೈದರಾಬಾದ್ ಬಾದ್‌ಗೆ ತೆರಳಿದ್ದ ಕಾರಣ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದ್ದಾರೆ ಭೇಟಿಯ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ದೇಶದಲ್ಲಿ ತೃತೀಯ ರಂಗ ರಚನೆಯ ಅಗತ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಬ್ಬರು ನಾಯಕರ ಭೇಟಿ ಕುತೂಹಲ ಮೂಡಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ಮಹಾಘಟಬಂಧನ್ ರಚಿಸುವ ಯತ್ನ ನಡೆದಿದ್ದು, ಅದಕ್ಕೆ ಈ ಭೇಟಿ ಇನ್ನಷ್ಟು ಪುಷ್ಠಿ ನೀಡಿದೆ.