ನೂತನ ಸಿಎಸ್ ಆಗಿ ವಿಜಯಭಾಸ್ಕರ್ ಅಧಿಕಾರ ಸ್ವೀಕಾರ: ಒಂದು ದಿನದ ಹಿಂದೆಯೇ ನಿಖರ ಸುದ್ದಿ ಬಿತ್ತರಿಸಿದ್ದ ಸುದ್ದಿಲೋಕ

ಬೆಂಗಳೂರು: ರಾಜ್ಯ ಸರ್ಕಾರದ ‌ನೂತನ ಮುಖ್ಯ‌ಕಾರ್ಯದರ್ಶಿಯಾಗಿ ಟಿ.ಎಂ ವಿಜಯ್ ಭಾಸ್ಕರ್ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.ಒಂದು ದಿನದ ಹಿಂದೆಯೇ ಸುದ್ದಿಲೋಕ ವಬ್ ಪೋರ್ಟಲ್ ಈ ಬಗ್ಗೆ ಖಚಿತ ಸುದ್ದಿ ಬಿತ್ತರಿಸಿದ್ದು ಸುದ್ದಿಯ ನಿಖರತೆಗೆ ಇದು ನಿದರ್ಶನವಾಗಿದೆ.

ರತ್ನಪ್ರಭಾ ಅವರ ನಿವೃತ್ತಿಯಿಂದ ತೆರವಾಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹೆಚ್ಚುವರಿ ಮುಖ್ಯ ಕಾರ್ಯದರಾಗಿದ್ದ ಟಿ.ಎಂ ವಿಜಯ ಭಾಸ್ಕರ್ ನೇಮಕಗೊಂಡಿದ್ದು‌ ಮುಖ್ಯಕಾರ್ಯದರ್ಶಿ‌ ಕಚೇರಿಯಲ್ಲಿ‌ ನಿರ್ಗಮಿತ ಮುಖ್ಯ ಕಾರ್ಯದರ್ಶಿ ನೂತನ ಸಿಎಸ್ ಗೆ ಅಧಿಕಾರ ಹಸ್ತಾಂತರ ‌ಮಾಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಸಿಎಸ್ ವಿಜಯಭಾಸ್ಕರ್,‌ ಇಂದು ಸರ್ಕಾರ ನನಗೆ ಜವಾಬ್ದಾರಿ ನೀಡಿದೆ
ಸಿಎಂ,ಡಿಸಿಎಂ ಅವರಿಗೆ ಅಬಾರಿಯಾಗಿದ್ದೇನೆ‌ ಸರ್ಕಾರದ ಧ್ಯೇಯೋದ್ದೇಶ ಕಾರ್ಯರೂಪಕ್ಕೆ ತರುತ್ತೇವೆ ಸರ್ಕಾರದ ಆಶಯವನ್ನ ಈಡೇರಿಸುವ ಕೆಲಸ ಮಾಡುವೆ‌ ರಾಜ್ಯವನ್ನ‌ ದೇಶದಲ್ಲಿಯೇ ಮುಂದೆ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದರು.

ಸರ್ಕಾರದ ಕಾರ್ಯಕ್ರಮ,ನೀತಿಗಳ ಅನುಷ್ಠಾನ ಮುಖ್ಯ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಅಧಿಕಾರಿಗಳ ಮೂಲಕ ನಾವು ಕೆಲಸ ಮಾಡಿಸಬೇಕು. ಸರ್ಕಾರ ಉತ್ತಮ ಜವಾಬ್ದಾರಿ ನೀಡಿದೆ ಕೊಟ್ಟ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತೇನೆ ಜನಪರ ಕೆಲಸಗಳಿಗೆ ಆಧ್ಯತೆ ನೀಡುತ್ತೇನೆ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪುವಂತೆ ಮಾಡುವೆ ಅಧಿಕಾರಿಗಳಿಂದ ಆ ಕೆಲಸವನ್ನ ಮಾಡಿಸುತ್ತೇನೆ ಎಂದರು.

ನಿರ್ಗಮಿತ ಸಿಎಸ್ ರತ್ನಪ್ರಭಾ ಮಾತನಾಡಿ, ಉತ್ತಮವಾಗಿ ಕೆಲಸ ಮಾಡಿದ್ದೇನೆ 37 ವರ್ಷಗಳಿಂದ ಕೆಲಸ ನಿರ್ವಹಿಸಿದ್ದೇನೆ
ಬೆಳಗಾವಿಯಿಂದ ನನ್ನ ವೃತ್ತಿ ಆರಂಭಿಸಿದ್ದೆ ಜನರ ಸಮಸ್ಯೆಗಳಿಗೆ ನಾನು ಒತ್ತುನೀಡುತ್ತಿದ್ದೆ ಇದೀವ ನಿವೃತ್ತಿಯಾಗುತ್ತಿದ್ದೇನೆ ಮುಂದೆ ಏನು ಮಾಡಬೇಕೆಂಬ ಯೋಚನೆ ಮಾಡಿಲ್ಲ ಕುಮಾರಸ್ವಾಮಿ ಅವಧಿ ವಿಸ್ತರಣೆ ತಡೆ ಹಿಡಿದ ವಿಚಾರ ಯಾವಾಗಲೂ ಸರ್ಕಾರದ ಪರವಾಗಿಯೇ ಕೆಲಸ ಮಾಡಬೇಕು ಯಾವ ಸರ್ಕಾರ ಇದ್ದರೂ ಅದೇ ಮಾಡುತ್ತೇವೆ ಯಾವ ಸಿಎಂ ಇದ್ದರೂ ಅವರು ಹೇಳಿದಂತೆಯೇ ಕೆಲಸ ಮಾಡುತ್ತೆವೆ ಅವರ ಪರ ಇವರ ಪರ ಅಂತ ಕೆಲಸ ಮಾಡಲ್ಲ ಎಂದರು.

ಚಾಮುಂಡೇಶ್ವರಿ ಮೇಲಿನ ಕೋಪ ಕಾವೇರಿ ಮೇಲೆ ತೀರಿಸಿಕೊಂಡ್ರಾ ಸಿದ್ದರಾಮಯ್ಯ?

ಬೆಂಗಳೂರು: ಚಾಮುಂಡೇಶ್ವರಿ ಮೇಲಿನ ಕೋಪವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಮೇಲೆ ತೀರಿಸಿಕೊಳ್ಳುತ್ತಿದ್ದಾರಾ ಎನ್ನುವ ಅನುಮಾನ ಸೃಷ್ಠಿಯಾಗಿದೆ.ಅಧಿಕೃತ ಆಹ್ವಾನವಿದ್ದರೂ ಸರ್ವಪಕ್ಷ ಸಭೆಗೆ ಗೈರಾಗಿ ಇಂತಹ ಪ್ರಶ್ನೆ ಉದ್ಭವಿಸುವಂತೆ ಮಾಡಿದ್ದಾರೆ.

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿವಾದ ಸಂಬಂಧ ಸರ್ವಪಕ್ಷ ಸಭೆಯಿಂದ ಮಾಜಿ ಸಿಎಂ‌ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡರು. ಅಧಿಕೃತ ನಿವಾಸ ಕಾವೇರಿಯಲ್ಲಿಯೇ ಇದ್ದರೂ ಕೂಗಳತೆ ದೂರದ ವಿಧಾನಸೌಧದತ್ತಾ ಮುಖ ಮಾಡ್ಲಿಲ್ಲ.

ರಾಜ್ಯದ ಜ್ವಲಂತ ಸಮಸ್ಯೆಗಳಲ್ಲಿ ಕಾವೇರಿ ವಿವಾದ ಪ್ರಮುಖವಾಗಿದ್ದರೂ ಕೂಡ ಸಿದ್ದರಾಮಯ್ಯ ಅತ್ತ ತಲೆಹಾಕಲಿಲ್ಲ,ಹಿಂದೆ ಅವರೇ ಸಿಎಂ ಆಗಿದ್ದಾಗ ಸಾಕಷ್ಡು ಬಾರಿ ಸರ್ವಪಕ್ಷ ಸಭೆ ಕರೆದು ತೋರಿದ್ದ ಕಾಳಜಿಯನ್ನು ಇಂದು ಮರೆತಿದ್ದೇಕೆ ಎನ್ನುವ ಪ್ರಶ್ನೆ ಎದ್ದಿದೆ.

ಇದಕ್ಕೆಲ್ಲಾ ಚಾಮುಂಡೇಶ್ವರಿ ಮೇಲಿನ ಮುನಿಸೇ ಕಾರಣ ಎನ್ನುವ ಮಾತುಗಳು‌ ಕೇಳಿ ಬರುತ್ತಿವೆ. ಚಾಮುಂಡೇಶ್ವರಿ ಕ್ಷೇತ್ರ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಬರಲಿದೆ.ಆದರೆ ಆ ಕ್ಷೇತ್ರದಲ್ಲಿ ಜನರು ತಿರಸ್ಕಾರ ಮಾಡಿದ್ದಕ್ಕೆ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ.ಅವರೀಗ ಬಾದಾಮಿ ಜನಪ್ರತಿನಿಧಿ ಹಾಗಾಗಿ ಕಾವೇರಿ ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ.

ಬಾದಾಮಿ ಕೆರೆಗಳಿಗೆ ನೀರು ಹರಿಸಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಸಿದ್ದರಾಮಯ್ಯಗೆ ತಮ್ಮ ಹಿಂದಿನ‌ ತವರು ಕ್ಷೇತ್ರ ಕಾವೇರಿ ಕೊಳ್ಳ ಈಗ ಬೇಡವಾಯಿತಾ ಎನ್ನುವ ಪ್ರಶ್ನೆ ಕಾವೇರಿ ಕೊಳ್ಳದ ಜನರಲ್ಲಿ ಮೂಡಿದೆ.

ಕಾವೇರಿಗಾಗಿ ಮತ್ತೆ ಕಾನೂನು ಸಮರ: ಸರ್ವಪಕ್ಷ ಸಭೆಯಲ್ಲಿ ಮಹತ್ವದ ನಿರ್ಧಾರ!

ಬೆಂಗಳೂರು: ರಾಜ್ಯದ ಕಾವೇರಿ ನೀರಿನ ಹಕ್ಕನ್ನು ನಿರ್ವಹಣಾ ಪ್ರಾಧಿಕಾರದ ಮೂಲಕ ಕಸಿದುಕೊಂಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ಮಹತ್ವದ ನಿರ್ಧಾರವನ್ನು ಸರ್ವಪಕ್ಷ ಸಭೆಯಲ್ಲಿ ಕೈಗೊಳ್ಳಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ
ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರ ವಿವಾದ ಸಂಬಂಧ ಕರೆಯಲಾಗಿದ್ದ ಸರ್ವಪಕ್ಷ ಸಭೆ ನಡೆಯಿತು. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ
ವಿಪಕ್ಷ ನಾಯಕ ಯಡಿಯೂರಪ್ಪ,ಡಿಸಿಎಂ ಪರಮೇಶ್ವರ್,ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ವೀರಪ್ಪ ಮೊಯ್ಲಿ ಸೇರಿದಂತೆ ನದಿ ವ್ಯಾಪ್ತಿ ಜನಪ್ರತಿನಿಧಿಗಳು ಕಾನೂನು ತಜ್ಞರು ಪಾಲ್ಗೊಂಡಿದ್ದರು.

ಕಾವೇರಿ ಜಲ ವಿವಾದದ ಇತ್ತೀಚಿನ ಬೆಳವಣಿಗೆಗಳು,ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಯಿಂದ ರಾಜ್ಯಕ್ಕಾಗಿರುವ ಅನ್ಯಾಯದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಭೆ ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಮಗಾಗಿರುವ ಅನ್ಯಾಯವನ್ನು ಕೇಂದ್ರದ ಮುಂದೆ ಪ್ರತಿಭಟಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಅಂತಿಮ ಹಂತದ ನ್ಯಾಯಾಲಯ ಹೋರಾಟದಲ್ಲಿ ಹೇಗೆ ವಾದ ಮಂಡನೆ ಮಾಡಬೇಕು ಅಂತ ಚರ್ಚಿಸಲಾಗಿದೆ.ಜುಲೈ 2 ರಂದು ಕಾವೇರಿ ನದಿ ನೀರು ನಿರ್ವಹಣಾ ಸಭೆ ಇದೆ.ಆ ಸಭೆಯಲ್ಲಿ ನಮ್ಮ ಪ್ರತಿನಿಧಿ ಇರಲಿದ್ದಾರೆ ಎಂದರು.

ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಲೋಕಸಭೆ ಅಧಿವೇಶನದಲ್ಲಿ ಚರ್ಚಸಿಲು ತೀರ್ಮಾನ ಮಾಡಲಾಗಿದೆ.ಸಾಧ್ಯವಾದ್ರೆ ಸಂವಿಧಾನ ಪೀಠದಲ್ಲಿ ಚರ್ಚಿಸಲು ಸಿದ್ದ.ಸಭೆಯಲ್ಲಿ ಉತ್ತಮ ಚರ್ಚೆಯಾಗಿದೆ.ಜಲ, ನಾಡು, ನುಡಿ ವಿಚಾರದಲ್ಲಿ ನಾವು ಯಾವಾಗ್ಲೂ ಸರ್ಕಾರದ ಜೊತೆಗೆ ಇದ್ದೇವೆ.ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.

ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ, ಮಂತ್ರಿಗಳು,ಸಂಸದರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ‌ ನ್ಯಾಯ ಎಲ್ಲಿ ಸಿಕ್ಕಿದೆ,ಅನ್ಯಾಯ ಎಲ್ಲಿ ಆಗಿದೆ ಅನ್ನುವುದನ್ನ ತಿಳಿಸಿದ್ದಾರೆ‌.ಪ್ರಧಾನಿಯವರ ಭೇಟಿಗೆ ಅವಕಾಶ ಕೋರಿದ್ದೆವು ನಮ್ಮ ಸಮಸ್ಯೆ ಮನವರಿಕೆ ಮಾಡಿಕೊಡಲು ಬೇಡಿಕೆ ಇಟ್ಟಿದ್ದೆವು ಆದರೆ ಅವರು ತರಾತುರಿಯಲ್ಲಿ ಕಮಿಟಿ ರಚಿಸಿದ್ದಾರೆ ಕಮಿಟಿಗೆ ನಾವು ತೀರ್ವ ವಿರೋಧ ವ್ಯಕ್ತಪಡಿಸಿದ್ದೇವೆ.ನಿರ್ವಹಣಾ ಮಂಡಳಿಗೆ ರಾಜ್ಯದ ಪ್ರತಿನಿಧಿಗಳಾಗಿ ರಾಕೇಶ್ ಸಿಂಗ್,ಕಾವೇರಿ ನೀರಾವರಿ ನಿಗಮದ ಎಂಡಿ ಪ್ರಸನ್ನ ಅವರ ಹೆಸರನ್ನು ಕಳಿಸಿದ್ದೇವೆ.ರಾಜ್ಯದ ಪ್ರತಿನಿಧಿಗಳಾಗಿ ಅವರು ಭಾಗವಹಿಸಲಿದ್ದಾರೆ, ಇಬ್ಬರೂ ರಾಜ್ಯದ ಅಭಿಪ್ರಾಯ ಮಂಡಿಸಲಿದ್ದಾರೆ‌ ಎಂದರು.

30 ದಿನದ ಅಧಿವೇಶನದಲ್ಲಿ ಇದನ್ನ ಮಂಡಿಸಬೇಕು
ಸಂಸತ್ತಿನಲ್ಲಿ ನಮ್ಮ‌ ಕೂಗು ಮುಟ್ಟಬೇಕಿದೆ‌ ಹೀಗಾಗಿ ರಾಜ್ಯದ ಸಂಸದರೆಲ್ಲ ಸಜ್ಜಾಗಿದ್ದಾರೆ‌ ಅವರಿಗೆ ಯಾವ ದಾಖಲೆ ಬೇಕೋ ಅದನ್ನ ನಾವು ಒದಗಿಸುತ್ತೇವೆ.ಪ್ರಾಧಿಕಾರ ರಚನೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು ನಮಗೆ ನ್ಯಾಯ ಸಿಗುವಂತಾಗಲು ಕಾನೂನು ಹೋರಾಟಕ್ಕೆ ಚಿಂತನೆ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವ ತೀರ್ಮಾನ ಮಾಡಿದ್ದೇವೆ ಎಂದರು.

ಬೆಂಗಳೂರು ಒನ್ ಸೆಂಟರ್ ಮೂಲಕ ಬ್ಲಾಕ್ ಅಂಡ್ ವೈಟ್ ದಂದೆ:ಸಿದ್ದರಾಮಯ್ಯ,ಜಾರ್ಜ್,ಬೈರತಿ ವಿರುದ್ಧ ಆರೋಪ

ಬೆಂಗಳೂರು:ಗರಿಷ್ಠ ಮುಖಬೆಲೆಯ ನೋಟುಗಳ ಅಪನಗದೀಕರಣದ ಬಳಿಕ ಬೆಂಗಳೂರು ಒನ್‌ ಕೇಂದ್ರಗಳಲ್ಲಿ 410 ಕೋಟಿ ಮೌಲ್ಯದ ಹಳೆ ನೋಟುಗಳ ಎಕ್ಸ್ ಚೆಂಜ್ ಹಗರಣ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ ಚಾರ್ಜ್ ಹಾಗೂ ಕೆಲ ಶಾಸಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದರು.

ನಗರದ ವಿ.ಟಿ ಪ್ಯಾರಡೈದ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್,ಹಳೆ ನೋಟು ಬದಲಾವಣೆಯಲ್ಲಿ ಈ ಜನ ಪ್ರತಿನಿಧಿಗಳು ಭಾಗಿಯಾಗಿದ್ದಾರೆ‌.ನವೆಂಬರ್ 2016 ರಿಂದ 141 ದಿನಗಳಲ್ಲಿ 500,1000 ಮುಖ ಬೆಲೆ ಹಳೆಯ‌ ನೋಟು ಬದಲಾವಣೆಗೆ ಬೆಂಗಳೂರು ಒನ್ ಕಲೆಕ್ಷನ್ ಹಣವನ್ನು ಬಳಸಿಕೊಳ್ಳಲಾಗಿದೆ ಎಂದು 235 ಪುಟಗಳ ದಾಖಲೆ ಬಿಡುಗಡೆ ಮಾಡಿದರು.

ಬೆಂಗಳೂರು ಒನ್ ಕೇಂದ್ರದಲ್ಲಿ ಹೆಚ್ಚು ಮುಖಬೆಲೆಯ ನೋಟಿಗೆ ಬದಲಾಗಿ 100 ಮತ್ತು 50 ರೂ ನೋಟುಗಳ ಬದಲಾವಣೆ‌ ಮಾಡಿಕೊಡಲಾಗಿದೆ ಬೆಂಗಳೂರು ಒನ್‌ನಲ್ಲಿ 96 ವಿವಿಧ ಇಲಾಖೆಗಳ ಸೇವೆ ಮತ್ತು ಹಣ ಪಾವತಿ ವ್ಯವಸ್ಥೆ ಇದೆ ನೂರಾರು‌ ಕೋಟಿ ಹಣ ಬದಲಾವಣೆ ಹಗರಣ ನಡೆದಿದ್ದು ಈ ಬಗ್ಗೆ ಲೋಕಾಯುಕ್ತ,ಎಸಿಬಿ, ಜಾರಿ ನಿರ್ದೇಶನಾಲಯಕ್ಕೆ ದೂರು‌ ನೀಡಿರುವುದಾಗಿ ತಿಳಿಸಿದರು.

ಪ್ರತಿನಿತ್ಯ ಬೆಂಗಳೂರು ಒನ್ ನಲ್ಲಿ ಸಂಗ್ರಹವಾಗೋ‌ ಮೊತ್ತವನ್ನು ಬ್ಯಾಂಕ್ ಗೆ ಪಾವತಿಸದೇ ವಂಚನೆ ನಡೆಸಲಾಗಿದ.ನವೆಂಬರ್ 10, 2016 ರಿಂದ 31 ಮಾರ್ಚ್ 2017 ರವರೆಗೆ 544 ಕೋಟಿ ಸಂಗ್ರಹವಾಗಿದ್ದು 544 ಕೋಟಿ ಹಣದಲ್ಲಿ 410 ಕೋಟಿ ಅಕ್ರಮವಾಗಿ ನೋಟು ಬದಲಾವಣೆ ಮಾಡಲಾಗಿದೆ.ಅಂದಿನ ಸಿಎಂ ಸಿದ್ರಾಮಯ್ಯ, ಸಚಿವ ಕೆ.ಜೆ ಜಾರ್ಜ್ ಮತ್ತು ಭೈರತಿ ಬಸವರಾಜ್ ಕುಟುಂಬಕ್ಕೆ ಬೆಂಗಳೂರು ಒನ್ ಸಾಥ್ ನೀಡಿದೆ.141 ದಿನಗಳ ಕಾಲ ಬ್ಯಾಂಕ್ ಗೆ ಸಂಗ್ರಹಗೊಂಡ ಹಣ ಪಾವತಿ ಮಾಡದೆ ಹಣ ಬದಲಾಯಿಸಿ ಅಕ್ರಮ ಎಸಗಿದೆ.ಅಕ್ರಮ ನೋಟು ಬದಲಾವಣೆಗೆ ಬೆಂಗಳೂರು ಒನ್ ಮಾಲಿಕತ್ವದ ಸಿಎಂಎಸ್ ಕಂಪ್ಯೂಟರ್ಸ್ ಕೂಡ ಸಹಕಾರ ನೀಡಿದೆ ಎಂದು ಆರೋಪಿಸಿದರು.

ಕನಕ ಗುರುಪೀಠ,ಕುರುಬ ಸಂಘಟನೆಗಳು ಸಿದ್ದು ಪರ‌ ಮಾತ್ರವೇ: ಎಚ್.ವಿಶ್ವನಾಥ್

ಬೆಂಗಳೂರು: ಕುರುಬ ಸಂಘಟನೆಗಳು,ಕನಕ ಗುರುಪೀಠದ ಶ್ರೀಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರವೇ? ನನಗೆ ಅನ್ಯಾಯವಾದಾಗ ಶ್ರೀಗಳು ಎಲ್ಲಿದ್ದರು, ಸಂಘಟನೆಗಳು ಎಲ್ಲಿ‌ಹೋಗಿದ್ದವು ಎಂದು ಶಾಸಕ ಎಚ್.ವಿಶ್ವಾನಾಥ್ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯರನ್ನು ರಾಜಕೀಯವಾಗಿ ಕಡೆಗಣಿಸಿದರೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗಲಿದೆ ಎನ್ನುವ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳ ಹೇಳಿಕೆ ಕುರಿತು ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಶ್ರೀಗಳು ಮತ್ತು ಕುರುಬ ಸಂಘಟನೆಗಳ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಾನು ಕೂಡ ಕುರುಬ‌ ಸಮುದಾಯದವನೇ,ನಾನು ಪಕ್ಷಕ್ಕೆ‌ ಕರೆತಂದವರೇ ನನ್ನನ್ನು ಪಕ್ಷದಲ್ಲಿ ಕಡೆಗಣಿಸುವಂತೆ ಮಾಡಿದರು,ಮೂಲೆಗುಂಪು ಮಾಡಿದರು.ವಿನಾಕಾರಣ ನನಗೆ ತೊಂದರೆ ಕೊಟ್ಟರು.ಆಗ ನಿರಂಜನಾನಂದಪುರಿ ಶ್ರೀಗಳು ಎಲ್ಲಿದ್ದರು.ನಿಮ್ಮನ್ನು ಸ್ವಾಮೀಜಿ ಮಾಡಿದ್ದು ಯಾರು?ಕುರುಬ ಸಂಘಟನೆಗಳು‌ ಎಲ್ಲಿ ಹೋಗುದ್ದವು ಎಂದು ಗರಂ ಆದರು.

ನೂತನ ಮುಖ್ಯ ಕಾರ್ಯದರ್ಶಿಯಾಗಿ ಟಿ.ಎಂ. ವಿಜಯಭಾಸ್ಕರ್!

ಬೆಂಗಳೂರು: ರತ್ನಪ್ರಭಾ ಅವರ ನಿವೃತ್ತಿಯಿಂದ ತೆರವಾಗುತ್ತಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ ವಿಜಯಭಾಸ್ಕರ್ ನೇಮಕ ಮಾಡಲಾಗುತ್ತದೆ ಎಂದು ಸಿಎಂ ಕಚೇರಿ ಮೂಲಗಳು ಖಚಿತಪಡಿಸಿವೆ.

ಹಾಲಿ ಸಿಎಸ್ ರತ್ನಪ್ರಭಾ ಅವರ ವಿಸ್ತರಿತ ಅವಧಿ ಜೂನ್ 30 ಕ್ಕೆ ಅಂತ್ಯಗೊಳ್ಳಲಿದ್ದು ಸೇವಾ ಹಿರಿತನದ ಆಧಾರದಲ್ಲಿ ಟಿ.ಎಂ ವಿಜಯಭಾಸ್ಕರ್ ಅವರನ್ನು ನೂತನ ಸಿಎಸ್ ಆಗಿ ನೇಮಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದು ನಾಳೆಯೇ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ವಿಜಯಭಾಸ್ಕರ್ ಅವರು 1983ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು,ಬಿಬಿಎಂಪಿ ಆಯುಕ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಸಧ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ನಾಳೆ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.