ಕಾವೇರಿ ನಿರ್ವಹಣಾ ಮಂಡಳಿಗೆ ಷರತ್ತಿನ ಮೇಲೆ ಪ್ರತಿನಿಧಿ ನೇಮಕ: ಹೆಚ್ಡಿಡಿ

ಹಾಸನ:ಕಾವೇರಿ ನಿರ್ವಹಣಾ ಮಂಡಳಿಗೆ ನಾವೂ ಷರತ್ತಿನ ಮೇಲೆಯೇ ಶೀಘ್ರ ಇಬ್ಬರು ಪ್ರತಿನಿಧಿಗಳನ್ನು ಕಳಿಸುತ್ತೇವೆ.ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.

ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು,ಪ್ರತಿ‌ 10 ದಿನಕ್ಕೊಮ್ಮೆ ನೀರು ಅಳತೆ ಮಾಡುತ್ತಾರೆ,ಬೆಳೆ ಸೇರಿದಂತೆ ಎಷ್ಟು‌ ನೀರು ಬಳಕೆ ಮಾಡಬೇಕೆಂದು ಅವರೇ ಹೇಳುತ್ತಾರೆ ಅಂಥ ಷರತ್ತುಗಳನ್ನು ನೋಡಿಲ್ಲ, ಆ‌ ಕಾರಣಕ್ಕೆ ನಾನು ನಿರ್ವಹಣಾ ಮಂಡಳಿಗೆ ವಿರೋಧ ವ್ಯಕ್ತಪಡಿಸಿದ್ದೇನೆ ಎಂದರು.

ಈಗಾಗಲೇ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ರಾಜ್ಯದ ಪ್ರತಿನಿಧಿಗಳ ಹೆಸರು ಕೊಡದಿದ್ದರೂ ನಮ್ಮನ್ನು ಬಿಟ್ಟೇ ಇತರ ರಾಜ್ಯಗಳ ಸದಸ್ಯರನ್ನ ನೇಮಕ ಮಾಡಿದೆ.ಈ ವಿಚಾರದಲ್ಲಿ ಮುಂದೆ ಏನು ಮಾಡಬೇಕು ಎಂಬುದನ್ನು ಸರ್ಕಾರಕ್ಕೆ ಹೇಳಿದ್ದೇನೆ ನಾವೂ ಷರತ್ತಿನ ಮೇಲೆಯೇ ಶೀಘ್ರ ಇಬ್ಬರು ಪ್ರತಿನಿಧಿಗಳನ್ನು ಕಳಿಸುತ್ತೇವೆ ಹೆಚ್ಚುವರಿ ನೀರನ್ಮು ನಾವು ಹಿಡಿದಿಟ್ಟುಕೊಳ್ಳಲು ಆಗಲ್ಲ ಈ ಎಲ್ಲಾ ಆಕ್ಷೇಪಣೆಗಳನ್ನು ಈಗಾಗಲೇ ಕೇಂದ್ರದ ಮುಂದೆ ಸಿಎಂ‌ ಮನವರಿಕೆ ಮಾಡಿದ್ದಾರೆ.ಶೀಘ್ರ ಷರತ್ತುಬದ್ಧ ಪತ್ರ ಸಿದ್ಧ ಪಡಿಸಲಾಗುವುದು ,ಷರತ್ತು ಸಹಿತ ನಮ್ಮ ಪ್ರತಿನಿಧಿಗಳನ್ನು ಕಳಿಸುತ್ತೇವೆ ಈ ವಿಚಾರದಲ್ಲಿ ಮುಂದಿನ ಹೋರಾಟ ಇದ್ದೇ ಇರಲಿದೆ ಎಂದರು.

ರೈತರ ಸಾಲ ಮನ್ನಾ, ಮಂಡ್ಯದಿಂದ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಲು ದೇವೇಗೌಡರು ನಿರಾಕರಿಸಿದರು.

ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಪರಮೇಶ್ವರ್ ರಹಸ್ಯ ಸಭೆ!

ಮಂಗಳೂರು:ಬಜೆಟ್ ಮಂಡನೆ ಹಾಗು ಕೆಪಿಸಿಸಿಗೆ ನೂತನ ಸಾರಥಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದಂತೆ ಮಂಗಳೂರಿಗೆ ದೌಡಾಯಿಸಿದ ಡಿಸಿಎಂ ಡಾ.ಜಿ ಪರಮೇಶ್ವರ್ ಮಾಜಿ ಸಿಎಂ ಹಾಗು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದರು.

ಧರ್ಮಸ್ಥಳದ ಶಾಂತಿವನದಲ್ಲಿರುವ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ ನೀಡಿದರು.ಪ್ರಕೃತಿ ಚಿಕತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.ಪ್ರಕೃತಿ ಚಿಕಿತ್ಸಾಲಯದ ಕೊಠಡಿಯಲ್ಲಿ ಉಭಯ ನಾಯಕರು ಕೆಲಕಾಲ‌ ರಹಸ್ಯ ಮಾತುಕತೆ ನಡೆಸಿದರು.ಈ ವೇಳೆ ಇತರ ಯಾವುದೇ ನಾಯಕರಿಗೆ ಕೊಠಡಿಗೆ ಪ್ರವೇಶ ನೀಡಲಿಲ್ಲ.

ಸಾಲಮನ್ನಾ, ನಿಗಮ ಮಂಡಳಿ ವಿಚಾರದಲ್ಲಿ ನಿರ್ಣಾಯಕ ಮಾತುಕತೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿದ ಪರಮೇಶ್ವರ್,
ಆದಷ್ಟು ಬೇಗ ನಿಗಮ ಮಂಡಳಿಗೆ ನೇಮಕ ಮಾಡ್ತೀವಿ ಸಮನ್ವಯ ಸಮಿತಿಯಲ್ಲೇ ಈ ಬಗ್ಗೆ ನಿರ್ಧಾರ ಆಗಿದೆ,ಸರ್ಕಾರ, ಇಲಾಖೆಗಳ ಕೆಲಸ ಪ್ರಾರಂಭ ಆಗಿದೆ,ದೇವರ ದಯೆಯಿಂದ ಈ ಬಾರಿ ಒಳ್ಳೆ ಮಳೆ ಬರ್ತಿದೆ,ಮಾನ್ಸೂನ್ ಉತ್ತಮ ಆಗಿದ್ದರಿಂದ ಬರದ ಸಮಸ್ಯೆ ಇಲ್ಲ ಎಂದರು.

ಕೆಪಿಸಿಸಿಗೆ ಸೂಕ್ತ ವ್ಯಕ್ತಿಯನ್ನು ಹೈಕಮಾಂಡ್ ಆರಿಸಲಿದೆ ಈ ಬಗ್ಗೆ ಯಾವುದೇ ಗೊಂದಲ ಬೇಡ,ಪಕ್ಷದಲ್ಲಿ ಆಕಾಂಕ್ಷಿಗಳು ಇದ್ದಾರೆ ಆದರೆ ಯಾರಲ್ಲೂ ಯಾವುದೇ ರೀತಿಯ ಅಸಮಧಾನ ಇಲ್ಲ ಎಂದರು.

ಟ್ರ್ಯಾಕ್ಟರ್ ಪಲ್ಟಿ 15 ಕೃಷಿ ಕಾರ್ಮಿಕರ ದಾರುಣ ಸಾವು!

ಹೈದರಾಬಾದ್‌: ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಒಂದು ಕಾಲುವೆಗೆ ಬಿದ್ದು ಸುಮಾರು 15 ಕೃಷಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಯಾದಾದ್ರಿ ಜಿಲ್ಲೆಯ ಲಕ್ಷ್ಮಾಪುರದಲ್ಲಿ  ನಡಿದಿದೆ.

ಮೌಸಿ ಕಾಲುವೆಗೆ ಟ್ರ್ಯಾಕ್ಟರ್‌ವೊಂದು ಉರುಳಿ ಬಿದ್ದು ಸಂಭವಿಸಿದ ಈ ಘೋರ ದುರಂತದಲ್ಲಿ 3 ವರ್ಷದ ಮಗು ಸೇರಿದಂತೆ 15 ಮಂದಿ ಕೂಲಿ ಕಾರ್ಮಿಕ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಹತ್ತಿ ಬೀಜ ಬಿತ್ತನೆಗಾಗಿ ಮಹಿಳೆಯರನ್ನು ಟ್ರ್ಯಾಕ್ಟರ್‌ನಲ್ಲಿ ಕರೆದುಕೊಂಡು ಹೋಗಲಾಗುವಾಗ ವಿರುದ್ಧ ದಿಕ್ಕಿನಿಂದ ದ್ವಿಚಕ್ರ ವಾಹನವೊಂದು ಬಂದಿದ್ದು, ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮೂಸಿ ಕಾಲುವೆಗೆ ಬಿದ್ದಿದೆ ಎಂದು ತಿಳಿದು ಬಂದಿದೆ.

ಟ್ರ್ಯಾಕ್ಟರ್‌ನಲ್ಲಿ 30 ಕ್ಕೂ ಹೆಚ್ಚು ಮಂದಿ ಇದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಸ್ಥಳದಲ್ಲಿ ಪೊಲೀಸರು, ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಮೃತರ ಶವಗಳನ್ನು ಮೇಲಕ್ಕೆತ್ತಿದ್ದಾರೆ.

ಹಜ್ ಭವನಕ್ಕೆ ಕಲಾಂ ಹೆಸರಿಡಿ: ಬಿಎಸ್ವೈ ಸಲಹೆ

ಬೆಂಗಳೂರು: ಹಜ್ ಭವನಕ್ಕೆ ಬೇರೆ ಹೆಸರು ಇಡಲೇಬೇಕು ಎಂದಾದರೆ ವಿವಾದಿತ ಟಿಪ್ಪು ಹೆಸರೇ ಯಾಕೆ ಬೇಕು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅಥವಾ ಶಿಶುನಾಳ ಷರೀಫ್ ಅವರ ಹೆಸರಿಡಿ ಎಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆ‌ ಶುದ್ಧ ನಡೆ ಸೂಕ್ತ ವಿಕಾಸ್ ಕೃತಿಯ ಕನ್ನಡ ಅವತರಣಿಕೆ ಯಡಿಯೂರಪ್ಪ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಘರ್ ಹೆಸರು ಪ್ರಸ್ತಾಪ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.ಜಮೀರ್ ಮೂಲಕ ವಿವಾದ ಸೃಷ್ಠಿಸಿದ್ದಾರೆ.ಹಜ್ ಭವನಕ್ಕೆ ಟಿಪ್ಪು ಹೆಸರಿಡುವುದು ಬೇಡ ಟಿಪ್ಪು ಸುಲ್ತಾನ್ ಹೆಸರು ಬದಲು ಪಕ್ಷಾತೀತ ಹಾಗು ಜಾತ್ಯಾತೀತ,ಧರ್ಮಾತೀತವಾಗಿ ಒಪ್ಪಿಕೊಳ್ಳುವ ಅಬ್ದುಲ್ ಕಲಾಂ ಹೆಸರಿಡಬಹುದು, ಶಿಶುನಾಳ ಷರೀಫ್ ಹೆಸರಿಡಬಹುದು,ಅದನ್ನು ಬಿಟ್ಟು ಈಗಾಗಲೇ ಟಿಪ್ಪು ಜಯಂತಿಯಿಂದ ಸೃಷ್ಠಿಯಾಗಿರುವ ವಿವಾದದ ನಡುವೆ ಅನಗತ್ಯವಾಗಿ ಸಚಿವರು ಹೊಸ ವಿವಾದ ಮೈಮೇಲೆಳೆದುಕೊಂಡಿದ್ದಾರೆ ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ರಚನೆ ವಿಚಾರ ಸಂಬಂಧ ಹಿಂದಿನ ಸರ್ಕಾರವೂ ಕ್ರಮ ಕೈಗೊಳ್ಳಲಿಲ್ಲ ಈಗಿನ ಸರ್ಕಾರವೂ ಎಚ್ಚರಗೊಳ್ಳಲಿಲ್ಲ,ಆದರೂ ನಾವು ಕಾವೇರಿ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದ ಪರ ಇದ್ದೇವೆ
ರೈತರಿಗೆ ಅನ್ಯಾಯ ಆಗದಂತೆ ಸರ್ಕಾರ ಹೆಜ್ಜೆ ಇಡಲು‌ ರಾಜ್ಯದ ಪ್ರತಿನಿಧಿ ನೇಮಕ ಯಾಕೆ ಮಾಡ್ತಿಲ್ಲ ಎಂದು ನಮಗೆ ಅರ್ಥವಾಗ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕುತ್ತೇವೆ ಎನ್ನುವ ಮೋದಿ ಹೇಳಿಕೆ ವಿಚಾರವನ್ನು ಮಾಧ್ಯಮ ಪ್ರತಿನಿಧಿಗಳ ಪ್ರಶ್ನಿಸುದ್ದಿಂತೆ ಗರಂ ಆದ ಬಿಎಸ್ವೈ ನೀವು ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ರೀತಿ ಮಾತನಾಡಬೇಡಿ ಪ್ರಧಾನಿ ಪ್ರತಿಯೊಬ್ಬರ ಅಕೌಂಟ್ ಗೆ ದುಡ್ಡು ಹಾಕುತ್ತೇನೆ ಎಂದು ಎಲ್ಲೂ ಹೇಳಿಲ್ಲ ಸುಮ್ನೆ ಆ ಪ್ರಶ್ನೆ ಬೇಡ ಎಂದರು.

ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ನಾನು ಮನವಿ ಮಾಡುತ್ತೇನೆ ನಾನು ಯಾವುದನ್ನು ಕಲ್ಪನೆ ಮಾಡಿಕೊಳ್ಳೋದಕ್ಕೆ ಹೋಗಲ್ಲ ನಿಮ್ ಹತ್ರ ಏನು ಡೈರಿಗಳು ಇವೆಯೋ. ಅವುಗಳನ್ನು ಬಿಡುಗಡೆ ಮಾಡಲಿ ನಿಮ್ ಹತ್ರ ಸಿಐಡಿ, ಎಸಿಬಿ ಇದೆ, ತನಿಖೆ ಮಾಡಿಸಿ ಸ್ವಾಮಿ ಎಂದರು.

ಇದೇ ಜೂನ್ 29ಕ್ಕೆ ರಾಜ್ಯ ಕಾರ್ಯಕಾರಣಿ ಸಭೆ ಇದೆ
ಅಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ. ವಿಧಾನಪರಿಷತ್ ವಿಪಕ್ಷ ನಾಯಕನ ಸ್ಥಾನದ ಬಗ್ಗೆ ಚರ್ಚೆ ಮಾಡ್ತೇವೆ.ವಿಪಕ್ಷ ಸ್ಥಾನದ ನಾಯಕ ನೇಮಕ ಶೀಘ್ರದಲ್ಲೇ ನಿರ್ಧಾರಿಸುತ್ತೇವೆ.ಬಿಜೆ ಪುಟ್ಟಸ್ವಾಮಿ ಅಸಮಾಧಾನ, ಬೇಸರಿದಿಂದ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ ಅವರನ್ನು ಕರೆದು ಮಾತನಾಡುತ್ತೇನೆ.ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಚೊಚ್ಚಲ ಬಜೆಟ್ ನಲ್ಲೇ ಸಾಲಮನ್ನಾ ಘೋಷಣೆ ಮಾಡಲಿರುವ ಸಿಎಂ ಹೆಚ್ಡಿಕೆ!

ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಚೊಚ್ಚಲ ಬಜೆಟ್ ನಲ್ಲೇ ಸಾಲಮನ್ನಾ ಘೋಷಿಸುವ ಒತ್ತಡಕ್ಕೆ ಸಿಲುಕಿದ್ದು ಎರಡು ಹಂತದ ಸಾಲಮನ್ನಾ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಸಿಎಂ ಕಚೇರಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಪ್ರಣಾಳಿಕೆಯಲ್ಲಿ‌ ಘೋಷಣೆ ಮಾಡಿದ್ದ ರೀತಿ ಸಾಲಮನ್ನಾ ಮಾಡುವ ಅನಿವಾರ್ಯತೆಗೆ ಸಿಲುಕಿರುವ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಅಪಸ್ವರದ ನಡುವೆಯೂ ಸಾಲಮನ್ನಾ ಘೋಷಿಸಲು ಸಿದ್ದತೆ ನಡೆಸುತ್ತಿದ್ದಾರೆ. ಈಗಾಗಲೇ ಸಾಲಮನ್ನಾ ನಿರ್ಧಾರಕ್ಕೆ ಬದ್ದ ಎಂದಿರುವ ಸಿಎಂ ಬಜೆಟ್ ನಲ್ಲಿ ಮಾತು ಉಳಿಸಿಕೊಳ್ಳುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.

ಒಟ್ಟು 53 ಸಾವಿರ ಕೋಟಿ ಕೃಷಿ ಸಾಲ ಇದ್ದು ರೈತರ ಖಾಸಗಿ ಸಾಲ‌ ಸೇರಿದರೆ ಒಂದ ಲಕ್ಷ ಕೋಟಿ‌ ದಾಟಲಿದೆ.ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಹೇಳಿಕೆಯೇ ಇದೀಗ ಸಿಎಂ ಕುಮಾರಸ್ವಾಮಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ಹಾಗಾಗಿ ಮೊದಲು ಕೃಷಿ ಸಾಲಮನ್ನಾ ನಿರ್ಧಾರವನ್ನು ಈ ಬಜೆಟ್ ನಲ್ಲಿಯೇ ಘೋಷಣೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೊಕ್ಕಸಕ್ಕೆ‌ ಹೊರೆಯಾಗದ ರೀತಿ ಎರಡು ಹಂತದಲ್ಲಿ‌ ಸಾಲಮನ್ನಾ ಮಾಡಿ ರೈತರನ್ನು‌ ಒಮ್ಮೆ ಋಣಮುಕ್ತರನ್ನಾ ಮಾಡುವ ಚಿಂತನೆ ನಡೆಸಿದ್ದಾರೆ.

ಮೊದಲನೇ ಹಂತರದಲ್ಲಿ ಸಹಕಾರಿ ಸಂಘಗಳು,ಸೊಸೈಟಿಗಳಲ್ಲಿ‌ ರೈತರು ಪಡೆದಿರುವ ಕೃಷಿ ಸಾಲಮನ್ನಾ ಹಿಂದಿನ‌ಸರ್ಕಸರ ಮಾಡಿದ್ದು ಅಲ್ಲಿನ ಉಳಿದ ಸಾಲವನ್ನೂ ಮನ್ನಾ ಮಾಡಿ ನಂತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಲು ಚಿಂತನೆ ನಡೆಸಲಾಗಿದೆ, ಆರ್ಥಿಕ‌‌ ಸಲಹೆಗಾರರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಂತುಗಳ ಮೂಲಕ ಸಾಲದ‌ ಹಣ ಪಾವತಿ ಮಾಡುವ ಸಂಬಂಧ ಬ್ಯಾಂಕ್ ಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು‌ ತಿಳಿದುಬಂದಿದೆ.

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ‌ ರೈತರು ಪಡೆದಿರುವ ಸಾಲದ ಬಡ್ಡಿ ಹೊರೆಯನ್ನು ತಗ್ಗಿಸಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ,ಬಡ್ಡಿ ಮನ್ನಾ ಮಾಡಿದರೆ ರೈತರ ಪರ ಖಾತರಿ ನೀಡಿ ಕಂತುಗಳ ಮೂಲಕ ಅಸಲು ಪಾವತಿ ಮಾಡುವ ಭರವಸೆ ನೀಡಿ ಬ್ಯಾಂಕ್ ಗಳೊಂದಿಗೆ ಮಾತುಕತೆ ನಡೆಸಿದೆ. ಆದರೆ ಬ್ಯಾಂಕ್ ಗಳು ಬಡ್ಡಿ ಮನ್ನಾಗೆ ನಿರಾರಿಸುತ್ತಿದ್ದು ಬಡ್ಡಿಯ ಹಣದಲ್ಲಿ ಕಡಿತಗೊಳಿಸುವ ಸಾಧ್ಯತೆ ಇದೆ ಎನ್ನವ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ ಜುಲೈ 5 ರಂದು ಸಿಎಂ ಕುಮಾರಸ್ವಾಮಿ ತಮ್ಮ‌ ಚೊಚ್ಚಲ ಬಜೆಟ್ ಮಂಡಿಸಲಿದ್ದು ಎಲ್ಲರ‌‌‌ ಸೃಷ್ಠಿ ಇದೀಗ ಹೆಚ್ಡಿಕೆ ಬಜೆಟ್ ನತ್ತ ನೆಡುವಂತೆ ಮಾಡಿದೆ.

ಕಾವೇರಿ ವಿಚಾರವಾಗಿ ತಂದೆಯಿಂದ ಸಲಹೆ ಪಡೆದ ಸಿಎಂ!

ಬೆಂಗಳೂರು: ಏಕಪಕ್ಷೀಯವಾಗಿ ಕಾವೇರಿ ನದಿ ನೀರು ಪ್ರಾಧಿಕಾರ ರಚನೆ ಮಾಡಿರುವ ಸಂಬಂಧ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.

ಪದ್ಮನಾಭನಗರದಲ್ಲಿ ಮಾಜಿ‌ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ನರೇಂದ್ರ ಮೋದಿಯವರಂತಹ ದೇಶದ ಪ್ರಧಾನಿಗಳೇ ನೀರಾವರಿ ವಿಚಾರದಲ್ಲಿ ದೇವೇಗೌಡರು ಎನ್ ಸೈಕ್ಲೋಪೀಡಿಯಾ ಇದ್ದ ಹಾಗೆ ಅಂತ ಹೇಳಿದ್ದಾರೆ. ಹಾಗಾಗಿ, ಕಾವೇರಿ ವಿಚಾರದಲ್ಲಿ ಕೋರ್ಟ್ ಸಂಬಂಧಿತ ಕೆಲವೊಂದು ತಾಂತ್ರಿಕ ವಿಚಾರಗಳನ್ನು ಚರ್ಚೆ ಮಾಡಬೇಕಾಗಿತ್ತು ಅದನ್ನು ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ ಎಂದರು ಹೇಳಿದರು.

ದೇವೇಗೌಡರಿಗೆ ನೀರಾವರಿ ವಿಚಾರದಲ್ಲಿ ಅಳವಾದ ಜ್ಞಾನ ಇದೆ, ಇವತ್ತೂ ಕೂಡಾ ನೀರಾವರಿ ವಿಚಾರ ಬಂದರೆ ಅವರು ಸ್ಟೂಡೆಂಟ್ ಇದ್ದ ಹಾಗೆ. ಈ ವಯಸ್ಸಿನಲ್ಲೂ ಕೂಡಾ ನೀರಾವರಿ ವಿಚಾರವಾಗಿ ಅಧ್ಯಯನ ನಡೆಸುತ್ತಾರೆ. ಕಾವೇರಿ ವಿಚಾರ ಮಾತ್ರ ಅಲ್ಲ, ರಾಜ್ಯದ ಎಲ್ಲಾ ನೀರಾವರಿ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ಅವರ ಸಲಹೆಗಳನ್ನು ಪಡೆದುಕೊಂಡೇ ಮುಂದುವರಿಯುತ್ತೇನೆ ಎಂದು ತಿಳಿಸಿದರು.

ರಾಜ್ಯದ ಜನತೆ ಕೆಲಸ ಮಾಡಲು ಒಂದು ಅವಕಾಶ ಕೊಟ್ಟಿದ್ದಾರೆ. ಕೊನೆಯ ಹಂತದವರೆಗೂ ಕಾವೇರಿ ಭಾಗದ ರೈತರ ಪರವಾಗಿ ಹೋರಾಟ ಮಾಡುತ್ತೇನೆ. ದೇವೇಗೌಡರ ಸಲಹೆ ಅಧಾರದಲ್ಲಿ ಮ್ಯಾನೇಜ್ಮೆಂಟ್ ಬೋರ್ಡ್ ನಲ್ಲಿರುವ ಎರಡು ತಪ್ಪುಗಳ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು.