ಸಹಾಸಮಯ ಪ್ರವಾಸಿಗಳ ನೆಚ್ಚಿನ ತಾಣ: ದಾಂಡೇಲಿ

ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಹಸಿರಿನ ಮಡಿಲಿನಲ್ಲಿರುವ ಸುಂದರ ಪ್ರವಾಸಿತಾಣ. ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ಧವಾಗಿದೆ. ದಾಂಡೇಲಿಯು ರಾಜ್ಯದ ಪ್ರವಾಸಿ ಸ್ಥಳಗಳಲ್ಲಿ ಅತ್ಯಂತ ಆಕರ್ಷಕ ಹಾಗೂ ಸಾಹಸಮಯ ಪ್ರವಾಸಿ ತಾಣವಾಗಿದೆ.

ದಟ್ಟ ದಂಡಕಾರಣ್ಯ ಇರುವುದರಿಂದ ಈ ಊರಿಗೆ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿರುವ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಇನ್ನೊಂದು ನಂಬಿಕೆಯೂ ಇದೆ.

ಪ್ರವಾಸಿಗರನ್ನು ಸೆಳೆಯುವಲ್ಲಿ ಸದಾ ಮುಂದೂ

ದಾಂಡೇಲಿ ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮವಾಗಿದೆ. ಇದರಿಂದಲೇ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. 2007 ರಲ್ಲಿ ದಾಂಡೇಲಿ ವನ್ಯಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ವನ್ಯಜೀವಿ ಧಾಮದಲ್ಲಿ ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕಾಡು ಕೋಣ, ಕರಡಿ,  ನರಿ, ಜೋಳ, ಲಂಗೂರ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ತಳಿಗಳ ಪಕ್ಷಿಗಳಿಗೆ ಆಶ್ರಯ ನೀಡಿದೆ.

ಕಾಳಿ ನದಿ ಯಲ್ಲಿ ಸಾಹಸ ಜಲಕ್ರೀಡೆಗಳಾದ ರಾಫ್ಟಿಂಗ್, ಕೇಯಕಿಂಗ್, ಕನೋಯಿಂಗ್ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆನಂದಿಸಬಹುದಾಗಿದೆ. ಅಲ್ಲದೇ ಗುಡ್ಡಗಾಡು ಸೈಕಲ್ ಸವಾರಿ,  ಚಾರಣ, ಹಾಗೂ ಮೊಸಳೆಗಳ ಪಾರ್ಕ್, ಬೋಟಿಂಗ್, ಮೀನುಗಾರಿಕೆ, ಬಗೆ ಬಗೆಯ ಪಕ್ಷಿ ಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ಗೋವಾದಿಂದ 125 ಕಿ.ಮೀ. ದೂರದಲ್ಲಿರುವ ದಾಂಡೇಲಿಗೆ  ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಿಂದ ರಸ್ತೆ ಮೂಲಕ ಹೋಗಬಹುದಾಗಿದೆ.

ಕೆಲಸದ ಒತ್ತಡ ಹೆಚ್ಚಿದೆಯೇ? ರಿಲ್ಯಾಕ್ಸ್ ಆಗಲು ಉತ್ತಮ ಟಿಪ್ಸ್ ಇಲ್ಲಿವೆ!

ದೀರ್ಘಕಾಲದ ನಂತರ ಕೆಲಸ ಮುಗಿಸಿ ಮನೆಗೆ ಬರುತ್ತೇವೆ. ಮನೆಗೆ ಬಂದ ತಕ್ಷಣ ಮನೆಗೆಲಸದಲ್ಲಿ ಮುಳುಗುತ್ತೇವೆ ಮತ್ತಷ್ಟು ಧಣಿಯುತ್ತೇವೆ. ಮನೆ ಕೆಲಸವೆಲ್ಲಾ ಮುಗಿದ ತಕ್ಷಣ ಟಿವಿ ನೋಡಲು ಆರಂಭಿಸುತ್ತೇವೆ‌ ಏನೇ ಮಾಡಿದರೂ ತಮ್ಮ ಒತ್ತಡ, ಧಣಿವು ಮಾತ್ರ ಕಡಿಮೆಯಾಗುವುದಿಲ್ಲ.

ಹೀಗೆ ಕೆಲವು ದಿನ ಕಳೆದರೆ ಸುಸ್ತು, ತಲೆ ನೋವು, ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಬೇರೆಯವರು ಮಾತನಾಡಿದರೆ ಕೋಪ ಬರುತ್ತದೆ. ಯಾವುದೋ ಒತ್ತಡವನ್ನು ಯಾರ ಮೇಲೋ ಹಾಕುತ್ತೇವೆ. ಇಂತಹ ಒತ್ತಡವನ್ನು ಆರಂಭದಲ್ಲೇ ಕಡಿಮೆ ಮಾಡುವ ಪ್ರಯತ್ನವನ್ನು ಮಾಡಬೇಕು. ಕೆಲಸ ಮುಗಿಸಿ ಮನೆಗೆ ಬಂದ ನಂತರ ಆದಷ್ಟು ಮನಸ್ಸಿಗೆ ಇಷ್ಟವಾಗುವ ಕೆಲಸಗಳನ್ನೆ ಮಾಡ ಬೇಕು.

ಕೆಲಸದ ಒತ್ತಡದಿಂದ ಹೊರ ಬರಲು ಕೆಲವು ಉತ್ತಮ ಟಿಪ್ಸ್ ಇಲ್ಲಿವೆ……

*ಪುಸ್ತಕಗಳು ಪ್ರತಿಯೊಬ್ಬರಿಗೂ ಉತ್ತಮವಾದ ಸಂಗಾತಿ. ಪುಸ್ತಕಗಳನ್ನು ಓದು ಹವ್ಯಾಸ ರೂಢಿಸಿ ಕೊಳ್ಳುವುದರಿಂದ ಜ್ಞಾನ ವೃದ್ಧಿಯಾಗುವ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ.

*ದೀರ್ಘ ಕಾಲದಿಂದ ಭೇಟಿಯಾಗದ ಉತ್ತಮ ಸ್ನೇಹಿತರಿಗೆ ಕರೆಮಾಡಿ ಮಾತನಾಡಿ. ಇಲ್ಲವೇ ಸಾಧ್ಯವಾದರೆ ಅವರನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆಯಿರಿ.

* ನಿಮಗೆ ಇಷ್ಟವಾದ ಯಾವುದಾರು ಒಂದು ಅಡುಗೆಯನ್ನು ಮಾಡಿ. ಅದ್ರಲ್ಲೂ ಹೊಸ ರೆಸಿಪಿಯನ್ನು ಟ್ರೈ ಮಾಡಿ.

ಕೆಲಸದ ಒತ್ತಡದಿಂದ ನೀವು ಬೇಗ ರಿಲೀಫ್ ಆಗ್ಬೇಕಾದ್ರೆ ಧ್ಯಾನ ಮಾಡೋದು ತುಂಬಾ ಅಗತ್ಯ. ಇದಕ್ಕಾಗಿ ನಿಮ್ಮ ಎಲ್ಲಾ ಸಮಯವನ್ನು ವ್ಯಯ ಮಾಡುವುದು ಬೇಡ. ದಿನದಲ್ಲಿ 10 ರಿಂದ 20 ನಿಮಿಷ ಧ್ಯಾನ ಮಾಡಿದರೆ ಸಾಕು. ಆದರೆ ಈ ಅಭ್ಯಾಸವನ್ನು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದಾಗಿ ಮಾಡಿಕೊಳ್ಳಿ.

* ಮಾನಸಿಕ ಒತ್ತಡಕ್ಕೆ ದೈಹಿಕ ಶ್ರಮವೂ ಕಾರಣವಾಗಿರುತ್ತದೆ. ದೈಹಿಕವಾಗಿ ಸಧೃಡರಾಗಲು  ಯೋಗ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.

* ಒಂದೊಳ್ಳೆ ಮ್ಯೂಸಿಕ್ ಕೇಳಿದ್ರೆ ಎಷ್ಟೇ ಟೆನ್ಷನ್ ಇದ್ರು ಮಾಯ ಆಗುತ್ತೆ ಹಾಗಾಗಿ ಸಂಗೀತ ಕೇಳುವ ಅಭ್ಯಾಸ ರೂಢಿಸಿಕೊಳ್ಳಿ.

* ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳೊಂದಿಗೆ ವಾಕಿಂಗ್ ಹೋಗಿ.

ಮಳೆಗಾಲದ ಸಮಸ್ಯೆ ಎದುರಿಸುವುದು ಹೇಗೆ?

ಮಳೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಪ್ರತಿಯೊಬ್ಬರು ಮಳೆಯನ್ನು ಇಷ್ಟಪಡ್ತಾರೆ. ಅದ್ರಲ್ಲೂ ಮಳೆಯಲ್ಲಿ ನೆನೆಯೋದು ಅಂದ್ರೆ ಹುಡುಗಿಯರಿಗೆ ಅಚ್ಚುಮೆಚ್ಚು. ಆದ್ರೆ, ಅವರಿಗಿರುವ ಸೌಂದರ್ಯದ ಮೇಲಿನ ಪ್ರೀತಿ ಮಳೆಯಲ್ಲಿ ನೆನೆಯದಂತೆ ಅವರನ್ನು ತಡೆಯುತ್ತದೆ.

ಮಳೆಗಾಲದಲ್ಲಿ ಯಾವ ಸಮಸ್ಯೆಗಳು ಎದುರಾಗುತ್ತವೆ

ಮಳೆಗಾಲದ ಸಮಯದಲ್ಲಿ ನಾವೇಲ್ಲರೂ ಕೆಲವು ಸಾರ್ವತ್ರಿಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಅದ್ರಲ್ಲಿ ಕೂದಲಿನ ಸಮಸ್ಯೆ, ಹೆಚ್ಚಾಗಿ ಬೆವರುವುದು ಮತ್ತು
ಚರ್ಮದ ಸೋಂಕುಗಳು ಉಂಟಾಗುವುದು ಹೆಚ್ಚು ಕಾಡುವ ಸಮಸ್ಯೆ. ಈ ಎಲ್ಲಾ ಸಮಸ್ಯೆಗಳ ನಿಯಂತ್ರಣ ಹೇಗೆ ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

ಕೂದಲಿನ ಸಮಸ್ಯೆ

ಮಳೆಗಾಲದಲ್ಲಿ ಎದುರಾಗುವ ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರ ಎಂದರೆ ಎಣ್ಣೆ.‌ ಮಳೆಗಾಲದಲ್ಲಿ ಆಗಾಗ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಮಳೆಯಲ್ಲಿ ವದ್ದೆಯಾದರೂ ಕೂಡ ಹೆಚ್ಚು ತೇವಾಂಶವನ್ನು ಕೂದಲು ಪಡೆದುಕೊಳ್ಳುವುದಿಲ್ಲ ಅದರಿಂದ ಕೂದಲು ಉತ್ತಮವಾಗಿರುತ್ತದೆ. ಪ್ರತಿದಿನ ತಲೆ ಸ್ನಾನ ಮಾಡದಿರುವುದು ಒಳ್ಳೆಯದು.

ಬೆವರಿನ ಸಮಸ್ಯೆ ಮತ್ತು ಚರ್ಮದ ರಕ್ಷಣೆ

* ಮಳೆಗಾಲದಲ್ಲಿ ಆದಷ್ಟು ಆ್ಯಂಟಿ ಬ್ಯಾಕ್ಟೀರಿಯಲ್ ಕ್ರೀಂ ಗಳನ್ನು ಉಪಯೋಗಿಸಿ.
* ದಿನಕ್ಕೆ ಎರಡು ಬಾರಿ ತಣ್ಣೀರು ಸ್ನಾನ ಮಾಡಿ. ಮಳೆಗಾಲದಲ್ಲಿ ಹೆಚ್ಚು ಬೆವರುತ್ತೇವೆ.
* ಬೆವರು ಸುಲಭವಾಗಿ ಆವಿಯಾಗುವುದಿಲ್ಲ. ಆದ್ರಿಂದ ಸಿಂಥೆಟಿಕ್ ಬಟ್ಟೆಗಳನ್ನು ಬಳಸದೆ ಇರುವುದು ಒಳ್ಳೆಯದು.

ಪ್ರತಿದಿನ ಮೊಳಕೆಕಾಳು ಸೇವಿಸುವುದರಿಂದ ಇರುವ ಪ್ರಯೋಜನಗಳೇನು ತಿಳ್ಕೊಬೇಕಾ!?

ಮೊಳಕೆ ಕಾಳು ಅತ್ಯಂತ ಪೋಷಕಾಂಶ ಭರಿತವಾದ ಆಹಾರ ಪ್ರತಿದಿನ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಹಲವು ಬಗೆಯ ಪ್ರಯೋಜನಗಳಿವೆ. ದೈಹಿಕ ನಿಶ್ಯಕ್ತಿ ಮತ್ತು ಅಪೌಷ್ಠಿಕತೆಯನ್ನು ತೆಗೆದುಹಾಕಲು ಮೊಳಕೆಕಾಳು ಉತ್ತಮ‌ ಆಹಾರವಾಗಿದೆ.

ಮೊಳಕೆ ಕಾಳಿನಲ್ಲಿ ದೈಹಿಕ ನಿಶ್ಯಕ್ತಿ ಮತ್ತು ಅಪೌಷ್ಟಿಕತೆ ಹೊಗಲಾಡಿಸುವ ಗುಣಗಳು ಮಾತ್ರ ಇಲ್ಲ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ. ಖಾಲಿ ಹೊಟ್ಟೆಯಲ್ಲಿ ಮೊಳಕೆಕಾಳು ಸೇವಿಸಿದರೆ ಇರುವ ಪ್ರಯೋಜನಗಳ ಕುರಿತು ತಿಳಿಯ ಬೇಕೇ ಹಾಗಾದ್ರೆ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ…..

* ಬಾದಾಮಿಗಳಲ್ಲಿ ಕಂಡುಬರುವ ಪೋಷಕಾಂಶಗಳ ಪ್ರಮಾಣವು, ಮೊಳಕೆ ಕಾಳುಗಳಲ್ಲಿ ಸಮೃದ್ಧವಾಗಿದೆ, ಅದು ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.

* ಕಡಲೇ ಕಾಳಿನಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದಾಗಿ ಹಸಿವು ಹೆಚ್ಚಾಗುತ್ತದೆ.

* ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶಗಳು ಹೆಚ್ಚಿರುವುದರಿಂದ ಸ್ನಾಯುಗಳು ಮತ್ತು ಎಲುಬುಗಳನ್ನು ಬಲಪಡಿಸುತ್ತದೆ.

* ಮೊಳಕೆಕಾಳು ಸೇವನೆಯಿಂದ ಪ್ರತಿದಿನ ವ್ಯಾಯಾಮ ಮಾಡದಿದ್ದರೂ ಸಹ‌ ಎದೆ ನೋವು ಕಡಿಮೆಯಾಗುತ್ತದೆ.

ಬಿನ್ನಿಪೇಟೆ ವಾರ್ಡ್ ಉಪಚುನಾವಣೆ: ಮತದಾನ ಆರಂಭ

ಬೆಂಗಳೂರು:ಜೆಡಿಎಸ್ ಕಾರ್ಪೊರೇಟರ್ ಮಹದೇವಮ್ಮ ನಿಧನದಿಂದ ತೆರವಾಗಿದ್ದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿನ್ನಿಪೇಟೆ ವಾರ್ಡ್ ನ ಉಪ ಚುನಾವಣೆಗೆ ಮತದಾನ ಆರಂಭಗೊಂಡಿದೆ. 7 ಗಂಟೆಗೆ ಆರಂಭವಾಗಲಿರುವ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆವರೆಗೆ ನಡೆಯಲಿದೆ.

ಮುಂಜಾನೆಯಿಂದಲೇ ಬಿರುಸಿನ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು,ಜನ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ.

30 ಸಾಮಾನ್ಯ ಮತ್ತು 7 ಸೂಕ್ಷ್ಮ ಮತಗಟ್ಟೆಗಳು ಸೇರಿ ಒಟ್ಟು
37 ಮತಗಟ್ಟೆಗಳ ವ್ಯವಸ್ಥೆ ಕಲ್ಪಿಸಿದ್ದು,17746 ಪುರುಷ ಮತ್ತು 16826 ಮಹಿಳಾ ಮತದಾರರು ಒಟ್ಟು 34582 ಮತದಾರರು ಮತ ಚಲಾವಣೆ ಮಾಡಲಿದ್ದಾರೆ.

ಪಾಲಿಕೆಯಲ್ಲಿ‌ ದೋಸ್ತಿ,ರಾಜ್ಯ ಸರ್ಕಾರದಲ್ಲಿ ದೋಸ್ತಿ ಇದ್ದರು ಕಾಂಗ್ರೆಸ್ ಹಾಗು ಜೆಡಿಎಸ್ ಪ್ರತ್ಯೇಕ ಅಭ್ಯರ್ಥಿ ಕಣಕ್ಕಿಳಿಸಿದ್ದು ಬಿಜೆಪಿ ಕೂಡ ಪೈಪೋಟಿ ನೀಡುತ್ತಿದೆ.ಮೂರುಬೊಕ್ಷದ ನಡುವೆ ತ್ರಿಕೋನ ಸ್ಪರ್ಧೆ ಕಂಡಬಂದಿದೆ. ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್ ಯತ್ನಿಸುತ್ತಿದ್ದರೆ,ಸ್ಥಾನ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮತ್ತು ವಾರ್ಡ್ ಅನ್ನು ಗೆಲ್ಲುವ ಮೂಲಕ ಪಾಲಿಕೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ ಎಂದು ಮತ್ತೊಮ್ಮೆ‌ ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ.

ಕಾಂಗ್ರೆಸ್ ನಿಂದ ವಿದ್ಯಾ ಶಶಿಕುಮಾರ್ ಜೆಡಿಎಸ್ ನಿಂದ ಮಹದೇವಮ್ಮ ಪುತ್ರಿ ಐಶ್ವರ್ಯಾ ಬಿಜೆಪಿಯಿಂದ ಜಿ. ಚಾಮುಂಡೇಶ್ವರಿ ಕಣಕ್ಕಿಳಿದಿದ್ದು ಈ ಅಭ್ಯರ್ಥಿಗಳ ಭವಿಷ್ಯ ಇಂದು ಸಂಜೆ ಮತಯಂತ್ರದಲ್ಲಿ ಭದ್ರವಾಗಲಿದೆ.ಜೂನ್ 20 ರಂದು ಫಲಿತಾಂಶ ಹೊರಬೀಳಲಿದೆ.

ಕಲ್ಲಂಗಡಿ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯೇ!?

ಬೇಸಿಗೆ ಕಾಲದಲ್ಲಿ ನಮ್ಮ ದೇಹಕ್ಕೆ ಅತ್ಯಧಿಕ ಪ್ರಮಾಣದಲ್ಲಿ ನೀರಿನ ಅಂಶದ ಅವಶ್ಯಕತೆ ಇರುತ್ತದೆ. ನಮಗೆ ತಿಳಿದಿರುವಂತೆ ಕಲ್ಲಂಗಡಿ ಹಣ್ಣು ಅತ್ಯಧಿಕ ಪ್ರಮಾಣದಲ್ಲಿ ನೀರಿನಾಂಶ ನೀಡುವ ಹಣ್ಣಾಗಿದೆ. ಇದು ರುಚಿಯಾದ ಹಣ್ಣು ಕೂಡ ಆಗಿದೆ. ಒಂದು ಕಪ್‌ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 46 ಕ್ಯಾಲರಿ ಇರುತ್ತದೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್‌ ಸಿ, ವಿಟಾಮಿನ್‌ ಎ ಗಳಿದ್ದು ಆರೋಗ್ಯ ಹಲವು ಲಾಭಗಳನ್ನು ನೀಡುತ್ತದೆ.

ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಡ್ ಮಾಡುವುದು ಅತ್ಯಗತ್ಯ. ಈ ಸಮಯದಲ್ಲಿ ಕಲ್ಲಂಗಡಿ ಕಂಡರೆ ಸ್ವರ್ಗವೇ ಸಿಕ್ಕಂತಾಗುತ್ತದೆ. ಆದರೆ ಯಾವಾಗಲೂ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಉತ್ತಮವಲ್ಲ. ಕಲ್ಲಂಗಡಿ ತಿನ್ನುವುದರಿಂದ ಆಗುವ 4 ಅಡ್ಡ ಪರಿಣಾಮಗಳ ಬಗ್ಗೆ ಇಂದು ತಿಳಿಸುತ್ತೇವೆ.

ರಕ್ತದೊತ್ತಡದ ಮಟ್ಟ ಕಡಿಮೆಯಾಗುತ್ತದೆ (ಲೋ ಬಿಪಿ)

ಹೆಚ್ಚಾಗಿ ಕಲ್ಲಂಗಡಿ ಸೇವಿಸುವುದರಿಂದ ವ್ಯಕ್ತಿಯ ದೇಹದ ಒತ್ತಡದ ಮಟ್ಟ ಕಡಿಮೆಯಾಗಬಹುದು. ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಯೂ ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು.

ಕರುಳಿನ ಸಮಸ್ಯೆ:

ಕಲ್ಲಂಗಡಿಯಲ್ಲಿ ಲೈಕೊಪೀನ್ನ ಅಧಿಕವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಸೇವಿಸಿದರೆ ವಾಂತಿ, ಅಜೀರ್ಣ, ವಾಕರಿಕೆ ಬರುವ ಸಾಧ್ಯತೆಗಳು ಹೆಚ್ಚಿವೆ.

ಮಧುಮೇಹಕ್ಕೆ ಕೆಟ್ಟದು:

ಕಲ್ಲಂಗಡಿಯಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶಗಳಿರುವುದರಿಂದ ದೇಹದ ಸಕ್ಕರೆ ಮಟ್ಟ ಬೇಗನೆ ಹೆಚ್ಚುತ್ತದೆ. ಆದ್ದರಿಂದ ಮಧುಮೇಹ ರೋಗಿಯು ಕಲ್ಲಂಗಡಿ ಸೇವಿಸುವುದು ಒಳ್ಳೆಯದಲ್ಲ.

ಗರ್ಭಾವಸ್ಥೆಯಲ್ಲಿ ಉತ್ತಮವಲ್ಲ:

ಹೆಚ್ಚಾಗಿ ಕಲ್ಲಂಗಡಿಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚುತ್ತದೆ, ಇದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭಿಣಿ ಮಹಿಳೆ ಸಂಪೂರ್ಣವಾಗಿ ಕಲ್ಲಂಗಡಿ ತಿನ್ನುವುದು ನಿಲ್ಲಿಸುವುದು ಒಳ್ಳೆಯದು.