ಎಸ್ಸಿ, ಎಸ್ಟಿ ಮುಂಬಡ್ತಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ: ಸಿದ್ಧರಾಮಯ್ಯ ಸ್ವಾಗತ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮುಂಬಡ್ತಿ ನೀಡುವ ವಿಷಯದಲ್ಲಿ ಹಿಂದಿನ‌ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ರಾಷ್ಟ್ರಪತಿಯವರ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಹಿತ ಕಾಯುವ ಸಲುವಾಗಿ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಅದನ್ನು ರಾಜ್ಯಪಾಲರು ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕಳುಹಿಸಿದ್ದರು.

ಇದೀಗ ರಾಷ್ಟಪತಿಯವರು ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿರುವುದು ಸಂತಸದ ವಿಷಯವಾಗಿದೆ ಎಂದು ಸಿದ್ದರಾಮಯ್ಯ ತಿಳಿದ್ದಾರೆ.

ಪ್ರಕೃತಿ ಚಿಕಿತ್ಸಾ ಕೇಂದ್ರದ ಮೊರೆ ಹೋದ ಮಾಜಿ ಸಿಎಂ ಸಿದ್ದು

ಬೆಂಗಳೂರು: ಪ್ರಧಾನಿ ಮೋದಿ ಫಿಟ್ನೆಸ್ ಟೆಸ್ಟ್ ಗೆ ಸಿಎಂ ಕುಮಾರಸ್ವಾಮಿ,ಮಾಜಿ ಪಿಎಂ ದೇವೇಗೌಡ ಟಾಂಗ್ ನೀಡುತ್ತಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಸದ್ದಿಲ್ಲದೇ ಪ್ರಕೃತಿ ಚಿಕಿತ್ಸಾ ಕೇಂದ್ರದ ಮೊರೆ ಹೋಗುತ್ತಿದ್ದಾರೆ.

ಪಿಎಂ ಮೋದಿ ಫಿಟ್ನೆಸ್ ಟೆಸ್ಟ್ ದೇ ದೇಶಾದ್ಯಂತ ಸುದ್ದಿ,ಟ್ವಿಟ್ಟರ್ ವಾರ್ ಕೂಡ ನಾಯಕರ ನಡುವೆ ಶುರುವಾಗಿದೆ.ಸಿಎಂಗೆ ಫಿಟ್ನೆಸ್ ಚಾಲೆಂಜ್ ಹಾಕುತ್ತಿದ್ದಂತೆ ಮಾಜಿ ಪಿಎಂ ದೇವೇಗೌಡರ ಯೋಗಾಭ್ಯಾಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಪುತ್ರನ ಪರ ಗೌಡರಿಂದ ಮಾಜಿ ಪಿಎಂಗೆ ಉತ್ತರ ಎಂದೇ ಬಣ್ಣಿಸಲಾಗುತ್ತಿದೆ.

ಇಷ್ಟೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ‌ ಹಾಗು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಫಿಟ್ನೆಸ್ ಟೆಸ್ಟ್ ವಾರ್ ಗೂ ತಮಗೂ ಸಂಬಂಧವಿಲ್ಲ ಎನ್ನುತ್ತಾ ಸದ್ದಿಲ್ಲದೇ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳುತ್ತಿದ್ದಾರೆ.

ನಾಳೆ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಮೂಲಕ ತೆರಳಿ ಅಕ್ಕಿಂದ ರಸ್ತೆ ಮಾರ್ಗವಾಗಿ ಧರ್ಮಸ್ಥಳ ತಲುಪಲಿದ್ದಾರೆ.12 ದಿನಗಳ ಕಾಲ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿದ್ದರಾಮಯ್ಯ ಚಿಕಿತ್ಸೆ ಪಡೆಯಲಿದ್ದಾರೆ.

ರಾಜಕೀಯ ಜಂಟಜಾ,ಬಿಡುವಿಲ್ಲದ ಪ್ರವಾಸದಿಂದ ಬಳಲಿರುವ ಮಾಜಿ ಸಿಎಂ ಇದೀಗ ವಿಶ್ರಾಂತಿ ಬಯಸಿದ್ದು ಪ್ರಕೃತಿ ಚಿಕಿತ್ಸಾ ಕೇಂದ್ರದ ಮೊರೆ ಹೋಗಿದ್ದಾರೆ. ಜೂನ್ 28 ಅಥವಾ 29ರಂದು ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಉನ್ನತ ಶಿಕ್ಷಣ ಬೇಡವೆಂದ ಜಿ.ಟಿ ದೇವೇಗೌಡರಿಗೆ ಸಿಗುತ್ತಾ ಅಬಕಾರಿ, ಎಪಿಎಂಸಿ ಖಾತೆ?

 

ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿರುವ ಜಿ.ಟಿ ದೇವೇಗೌಡರ ಖಾತೆ ಬದಲಾವಣೆ ಖಚಿತವಾಗಿದೆ.ಉನ್ನತ ಶಿಕ್ಷಣ ಖಾತೆ ಬದಲು ಅಬಕಾರಿ ಖಾತೆ ಸಿಗವ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು,ಉನ್ನತ ಶಿಕ್ಷಣ ಖಾತೆಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವ ಸಚಿವ ಜಿ.ಟಿ.ದೇವೇಗೌಡರ ಖಾತೆ ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದೆ.ಖಾತೆ ಬದಲಾವಣೆ ಸಂಬಂಧ ಜಿ.ಟಿ ದೇವೇಗೌಡರ ಜೊತೆ ಚರ್ಚೆ ನಡೆಸಿರುವ ಸಿಎಂ ಅಬಕಾರಿ ಹಾಗೂ ಕೃಷಿ ಮಾರುಕಟ್ಟೆ ಖಾತೆ ನೀಡಲು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿ ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.

ಸಧ್ಯ ಸಿಎಂ ಅವರ ಬಳಿ ಇರುವ ಅಬಕಾರಿ ಹಾಗೂ ಬಂಡೆಪ್ಪ ಕಾಶಂಪೂರ್‌ ಅವರ ಬಳಿ ಇರುವ ಕೃಷಿ ಮಾರುಕಟ್ಟೆ ಖಾತೆಯನ್ನು  ಜಿ.ಟಿ.ದೇವೇಗೌಡರಿಗೆ ನೀಡಿ ಉನ್ನತ ಶಿಕ್ಷಣ ಖಾತೆಯನ್ನು ತಮ್ಮ ಬಳಿಯೆ ಇಟ್ಟುಕೊಳ್ಳಲು ಸಿಎಂ ಚಿಂತನೆ ನಡೆಸಿದ್ದಾರೆ.

ಸಧ್ಯದಲ್ಲೇ ಖಾತೆ ಬದಲಾವಣೆ ಮಾಹಿತಿಯನ್ನು ಸಿಎಂ ರಾಜಭವನಕ್ಕೆ ಕಳುಹಿಸಲಿದ್ದು ಜಿಟಿಡಿಗೆ ಹೊಸ ಖಾತೆಯ ಜವಾಬ್ದಾರಿ ಸಿಗಲಿದೆ.

ಮಹೀಂದ್ರಾ ಎಕ್ಸ್‌ಯುವಿ 500 ನೂತನ ಕಾರು ಬಿಡುಗಡೆ

ಬೆಂಗಳೂರು:ಮಹೀಂದ್ರಾದಿಂದ ಪ್ಲಶ್ ನ್ಯೂ ಎಕ್ಸ್‍ಯುವಿ500 ನೂತನ ಕಾರು ನಗರದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಪ್ರೀಮೀಯಂ ಎಸ್‍ಯುವಿ ವರ್ಗದಲ್ಲಿ ನೂತನ ಮೈಲುಗಲ್ಲಾಗಿದ್ದು, ಆಕರ್ಷಕ ದೃಢವಾದ ವಿನ್ಯಾಸ, ಉತ್ತಮ ಒಳಾಂಗಣ, ಎತ್ತರಿಸಿದ ಸಾಮಥ್ರ್ಯ, ಟಾರ್ಕ್, ಉನ್ನತೀಕರಿಸಿದ ದೃಢತೆ ಹೊಂದಿದ ನೂತನ ಕಾರಿನ ದರ ಎಕ್ಸ್ ಷೋರೂಂ ದರ 12.36 ಲಕ್ಷದಿಂದ ಆರಂಭಗೊಳ್ಳಲಿದೆ.

ಮುಂದಿನ ಭಾಗದಲ್ಲಿ ಕ್ರೋಮ್ ಲೇಪಿತ ನೂತನ ಗ್ರಿಲ್, ಹೊಸ ಎಲ್‍ಇಡಿ ಡಿಆರ್‍ಎಲ್‍ಗಳು, ಫಾಗ್ ಲ್ಯಾಂಪ್‍ಗಳು, ಹೊಸತರದ ಕ್ರೋಮ್ ಬೆಜೆಲ್, ನೂತನ ಡೈಮಂಡ್ ಕಟ್‍ನ 45.72 ಸೆಂಟಿ ಮೀಟರ್‍ನ (235/60ಆರ್ 18) ಅಲಾಯ್ ವ್ಹೀಲ್‍ಗಳು, ನೂತನ ಮರುವಿನ್ಯಾಸದ ಟೇಲ್‍ಗೇಟ್, ಸ್ಪಿಲ್ಟ್ ಟೇಲ್ ಲ್ಯಾಂಪ್‍ಗಳು, ನೂತನ ಹಿಂಬದಿಯ ಸ್ಪಾಯಲರ್‍ಗಳು.

ಹೊಸ ಆಕರ್ಷಕ ಮತ್ತು ಪ್ಲಶ್‍ಗಳು:
ಕಪ್ಪು ಮತ್ತು ಟ್ಯಾನ್‍ನ ಒಳಾಂಗಣ, ನೂತನ ಸೀಟುಗಳು, ಆಕರ್ಷಕವಗಿ ರೂಪಿಸಿದ ಸಾಫ್ಟ್ ಟಚ್ ಲೆದರ್‍ನ ಡ್ಯಾಶ್‍ಬೋಡ್ಸ್, ಬಾಗಿಲುಗಳ ಟ್ರಿಮ್ಸ್, ಪಿಯಾನೊ ಬ್ಲಾಕ್ ಕನ್‍ಸೋಲ್.

ಅತ್ಯುತ್ತಮ ಹೈಟೆಕ್ ಸೌಲಭ್ಯಗಳು:
ಎಲೆಕ್ಟ್ರಿಕ್ ಸನ್‍ರೂಫ್, ಉನ್ನತ ದರ್ಜೆಯ ಒಆರ್‍ವಿಎಂ ಲೊಗೊ ಪ್ರಾಜೆಕ್ಷನ್ ಲ್ಯಾಂಪ್‍ಗಳು, ನೂತನ ಸ್ಮಾರ್ಟ್ ವಾಚ್ ಸಂಪರ್ಕ. 18 ಸೆಂಟಿ ಮೀಟರ್‍ನ (7 ಇಂಚು) ಟಚ್ ಸ್ಕ್ರೀನ್ ಇನ್‍ಫೋಟೇನ್‍ಮೆಂಟ್ ಮತ್ತು ಜಿಪಿಎಸ್ ನೇವಿಗೇಷನ್, ಅರ್ಕಮಿಸ್, ಎತ್ತರಿಸಿದ ಆಡಿಯೊ, ಅಂಡ್ರಾಯ್ಡ್ ಆಟೊ, ಉದ್ಯಮದಲ್ಲಿಯೇ ಮೊದಲ ಬಾರಿಗೆ ಪ್ರಶಸ್ತಿ ಪುರಸ್ಕøತ ಅಪ್ಲಿಕೇಷನ್‍ಗಳು, ಎಕೊಸೆನ್ಸ್ ಟೆಕ್ನಾಲಜಿ ಮತ್ತು ಇತರೆ ಸೌಲಭ್ಯಗಳಿವೆ.

ನೂತನ ಎಕ್ಸ್‍ಯುವಿ500 ನಿರಂತರವಾಗಿ ಅತ್ಯುತ್ತಮ ಸುರಕ್ಷತಾ ಕ್ರಮಗಳನ್ನು ನೀಡಲಿದ್ದು, 6 ಏರ್‍ಬ್ಯಾಗ್‍ಗಳು, ಎಬಿಎಸ್ ಮತ್ತು ಇಬಿಒ, ಹಿಲ್ ಹೋಲ್ಡ್, ಹಿಲ್ ಡಿಸೆಂಟ್ ಕಂಟ್ರೋಲ್, ತುರ್ತು ಸಂದರ್ಭದಲ್ಲಿ ಕರೆ ವ್ಯವಸ್ಥೆ, ಡಿಸ್ಕ್ ಬ್ರೇಕ್, ಸೇರ ಇನ್ನೂ ಅನೇಕ ಸೌಲಭ್ಯಗಳು ಇವೆ.

ಡೀಸೆಲ್‍ನಲ್ಲಿ ಐದು ಮಾದರಿ ಹಾಗೂ 45.72 ಸೆಂಟಿ ಮೀಟರ್‍ನ ಅಲಾಯ್ ವ್ಹೀಲ್, 1 ಪೆಟ್ರೋಲ್ ಮಾದರಿ ಲಭ್ಯವಿದೆ. ಗ್ರಾಹಕರು ಏಳು ಆಕರ್ಷಕ ಬಣ್ಣಗಳಲ್ಲಿ ಅಂದರೆ ನ್ಯೂ ಕ್ರಿಮ್ಸನ್ ರೆಡ್, ನ್ಯೂ ಮೆಜೆಸ್ಟಿಕ್ ಕೂಪರ್, ಪರ್ಲ್ ವೈಟ್, ವಾಲ್ಕನೊ ಬ್ಲ್ಯಾಕ್, ಮೂನ್ ಡಸ್ಟ್ ಸಿಲ್ವರ್, ಒಪುಲೆಂಟ್ ಪರ್ಪಲ್ ಮತ್ತು ಲೇಕ್‍ಸೈಡ್ ಬ್ರೌನ್ ಇದೆ.

ದೊಡ್ಡಬಿದರಕಲ್ಲು, ಹೆಮ್ಮಿಗೆಪುರ ತ್ಯಾಜ್ಯ ಸಂಸ್ಕರಣಾ ಘಟಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ

ಬೆಂಗಳೂರು: ದೊಡ್ಡ ಬಿದರಕಲ್ಲು ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಕಸದ ವಾಸನೇ ಬಾರದ ರೀತಿಯಲ್ಲಿ ೨೦೦ ಮೀಟರ್ ಅಂತರದಲ್ಲಿ ಬಫರ್ ಜೋನ್ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ದೊಡ್ಡ ಬಿದರಕಲ್ಲು ಹಾಗೂ ಹೆಮ್ಮಿಗೆಪುರ ತ್ಯಾಜ್ಯಾ ಸಂಸ್ಕರಣ ಘಟಕಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
200 ಮೀಟರ್ ಅಂತರದಲ್ಲಿ ಬಫರ್ ಜೋನ್ ತೆರೆಯುವುದರಿಂದ ಕಸದ ವಾಸನೆ ಈ ವ್ಯಾಪ್ತಿಯಲ್ಲಿ ಮಾತ್ರ ಇರಲಿದ್ದು, ಸುತ್ತಮುತ್ತಲು ಇರುವ ಜನರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.

ಎರಡೂವರೆ ವರ್ಷದ ಹಿಂದೆ ಈ ಘಟಕ ವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ. ದಿನಕ್ಕೆ 130 ಟನ್ ಕಸ ಸಂಸ್ಕರಣೆಯನ್ನು ಇಲ್ಲಿ ಮಾಡಲಾಗುತ್ತದೆ. ಸಂಸ್ಕರಣೆಗೊಳ್ಳುವ ಕಸದಿಂದ ವಿದ್ಯುತ್ ಉತ್ಪಾದನೆಯಂಥ ಕೆಲಸಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ನಗರದಲ್ಲಿ ನಾಲ್ಕೂವರೆ ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದ್ದು, ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಈಗಾಗಲೇ ಸೂಚಿಸಲಾಗಿದೆ ಎಂದರು. ಜನಸಾಮಾನ್ಯರು ಕೂಡ ಕಸವನ್ನು ಮನೆಯಲ್ಲೇ ವಿಭಜನೆ ಮಾಡಿದರೆ ವಿಲೇವಾರಿ ಕೂಡ ಸುಲಭವಾಗುತ್ತದೆ. ಒಣ-ಹಸಿ ಕಸ ಬೇರ್ಪಡಿಸದೇ ಇರುವವರಿಗೆ ದಂಡ ಹಾಕುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ಜನರು ಕಸವನ್ನು‌ ಮನೆಯಲ್ಲೇ ಬೇರ್ಪಡಿಸಬೇಕು ಎಂದು ಮನವಿ ಮಾಡಿದರು.

ಸಾಲಮನ್ನಾ ವಿಚಾರದಲ್ಲಿ ನನ್ನ,ಡಿಸಿಎಂ ನಡುವೆ ಗೊಂದಲವಿಲ್ಲ: ಸಿಎಂ

 

ಬೆಂಗಳೂರು:ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ
ನನ್ನ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ನಡುವೆ ಯಾವುದೇ ರೀತಿಯ ಗೊಂದಲ ಇಲ್ಲ,ಆದಷ್ಟು ಬೇಗ ಸಾಲಮನ್ನಾ ಘೋಷಣೆಯಾಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಡಿಸಿಎಂ ಪರಮೇಶ್ವರ್ ಸಾಲಮನ್ನಾ ಮಾಡೊಲ್ಲ ಅಂತ ಹೇಳಿಲ್ಲ.ಗಡುವು ಕೊಡುವುದು ಬೇಡ ಎಂದು ಹೇಳಿದ್ದಾರೆ ಅಷ್ಟೇ.ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ,ಯಾರೂ ಅನುಮಾನ ಪಡುವ ಅಗತ್ಯವೂ ಇಲ್ಲ, ಸಾಲಮನ್ನಾ ವಿಚಾರದಲ್ಲಿ ಯಾರಿಗೆ ಸಂಶಯ ಬೇಡ,ಸಾಲಮನ್ನಾ ಘೋಷಣೆ ಆಗಲಿದೆ,ಸರ್ಕಾರಿ ಆದೇಶವೂ ಹೊರಬೀಳಲಿದೆ ಎಂದರು.

ಬಜೆಟ್ ಮಂಡನೆ ಮಾಡುತ್ತೇನೆ.ಹೊಸ ಸರ್ಕಾರವಾಗಿ ಹಲವು ಕಾರ್ಯಕ್ರಮ ನೀಡಬೇಕು.ರೈತರ ಸಾಲಮನ್ನಾ ಮಾಡಲು
ಅವಶ್ಯಕವಾದ ಹಣ ಕ್ರೂಡೀಕರಣ ಮಾಡ್ತಿದ್ದೇನೆ. ಹಣಕಾಸು ಸಚಿವನಾಗಿ ಹೇಳ್ತಿದ್ದೇನೆ. ಏನು ಮಾಡಬೇಕೋ ಅದನ್ನ ನಾನು ಮಾಡೇ ಮಾಡುತ್ತೇನೆ.ಸಾಲಮನ್ನಾ ಮಾಡಲು ಕಾಂಗ್ರೆಸ್ ಕೂಡಾ ತಯಾರಿದೆ ನಾವೂ ತಯಾರಿದ್ದೇವೆ.ಇದರಲ್ಲಿ ಯಾವುದೇ ಗೊಂದಲ ನಮ್ಮಲ್ಲಿ ಇಲ್ಲ.ಜನರ ಮುಂದೆ ಹೇಳಿದ ಎಲ್ಲಾ ಕಾರ್ಯಕ್ರಮ ಜಾರಿಗೆ ತರುತ್ತೇನೆ.ಕಾಂಗ್ರೆಸ್ ಪ್ರಣಾಳಿಕೆ ಕಾರ್ಯಕ್ರಮಗಳು ಜಾರಿ ಆಗುತ್ತವೆ ಎಂದರು.

ಬಜೆಟ್ ಬಗ್ಗೆ ನಮ್ಮಲ್ಲಿ ಗೊಂದಲ ಇಲ್ಲ.ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ರೈತರ ಸಾಲ ಮನ್ನಾ ವಿಚಾರವು ಇದೆ.ಇದರಲ್ಲಿ ಅನಗತ್ಯ ಗೊಂದಲ ಬೇಡ
ಹೆಲ್ಫೇಜ್ ಇಂಡಿಯಾ ಸರ್ವೇ ವರದಿ ತರಿಸಿ ಪರಿಶೀಲನೆ ನಡೆಸುತ್ತೇವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೃದ್ಧರ ಕಡೆಗಣನೆ ಹೆಚ್ಚು ಎಂಬ ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಹೊಸ ಸರ್ಕಾರದಲ್ಲಿ ಹಲವು ಹೊಸ ಯೋಜನೆ ಘೋಷಿಸಬೇಕು.ಅದಕ್ಕೆ ಬಜೆಟ್ ಮಂಡನೆಯಾಗಬೇಕು.ನನ್ನ ಬಜೆಟ್ ಯಾವುದೇ ಒಂದು ವರ್ಗಕ್ಕೆ ಮೀಸಲಿರಲ್ಲ.ರಾಜ್ಯದ ಆರೂವರೆ ಕೋಟಿ ಜನರಿಗೆ ಅನುಕೂಲ ಆಗುವ ರೀತಿ ಬಜೆಟ್ ಇರಲಿದೆ.ಸಾರ್ವಜನಿಕ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಿ ಕಾರ್ಯಕ್ರಮ ಜಾರಿಗೆ‌ ತರಲಾಗುತ್ತದೆ ಎಂದರು.