ಮೆಟ್ರೋ ನೌಕರರು, ಆಡಳಿತ ಮಂಡಳಿ ನಡುವೆ ಶೀತಲ ಸಮರ: ರಾಜ್ಯ ಸರ್ಕಾರದ ಮಧ್ಯ ಪ್ರವೇಶಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಮೆಟ್ರೊ ನೌಕರರ ಬೇಡಿಕೆ ಈಡೇರಿಕೆ ಸಂಬಂಧ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಮತ್ತು ನೌಕರರ ಸಂಘದ ನಡುವೆ ನಡೆಯುತ್ತಿರುವ ಮೂರನೇ ಸಂಧಾನ ಸಭೆಯಲ್ಲಿ ಮಧ್ಯಪ್ರವೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಮೆಟ್ರೋ‌ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ತಡೆ ನೀಡುವಂತೆ ಕೋರಿ ಮೆಟ್ರೋ ರೈಲು ನಿಗಮ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಮುಂದಿನ ಹತ್ತು ದಿನಗಳಲ್ಲಿ ರಾಜ್ಯ ಸರ್ಕಾರ, ಬಿಎಂಆರ್ ಸಿಎಲ್ ಹಾಗೂ ಮೆಟ್ರೊ ನೌಕರರ ಸಂಘ ತ್ರಿಪಕ್ಷೀಯ ಮಾತುಕತೆ ನಡೆಸುವಂತೆ ತಿಳಿಸಿದೆ.

ಮೆಟ್ರೊ ನೌಕರರ ಬೇಡಿಕೆ ಈಡೇರಿಕೆ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ನೌಕರರು ಹಾಗೂ ಸಂಘದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಬೇಕೆಂದು ಸೂಚಿಸಿದ್ದು, ನೌಕರರ ಆರ್ಥಿಕ ಮತ್ತು ಆರ್ಥಿಕೇತರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪಟ್ಟಿ ಮಾಡಿಕೊಳ್ಳಿ‌. ಈ ಬಗ್ಗೆ ಹಣಕಾಸು ತಜ್ಞರ ಜೊತೆ ಚರ್ಚಿಸಿ. ಯಾವ ರೀತಿ ಸಮಸ್ಯೆ ಬಗೆಹರಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಿ ಕೋರ್ಟ್‌ಗೆ ತಿಳಿಸಿ. ಆ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸೋಣವೆಂದು ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿತು.

ಇದೇ ವೇಳೆ, ಮುಂದಿನ ವಿಚಾರಣೆವರೆಗೆ ಮುಷ್ಕರಕ್ಕೆ ಮುಂದಾಗದಂತೆ ನೌಕರರ ಸಂಘಕ್ಕೆ ಸೂಚನೆ ನೀಡಿದ್ದು, ನೌಕರರ ವಿರುದ್ಧವೂ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಬಿಎಂ‌ಆರ್‌ಸಿಎಲ್ ಗೆ ಸೂಚಿಸಿದೆ.

ಕಾವೇರಿ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ದ: ಕಮಲ್ ಹಾಸನ್

 

ಬೆಂಗಳೂರು: ಕಾವೇರಿ ನದಿ ವಿವಾದವನ್ನು ಪರಿಹರಿಸಿಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ದನಿದ್ದೇನೆ ಎಂದು ಇತ್ತೀಚೆಗಷ್ಟೇ ರಾಜಕೀಯ ಪ್ರವೇಶಿಸಿರುವ ಬಹುಭಾಷಾ ನಟ ಕಮಲ್ ಹಾಸನ್ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾಗೆ ನಟ ಕಮಲ್ ಹಾಸನ್ ಭೇಟಿ ನೀಡಿದರು.ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿದರು.ಕುರುವೈ ಬೆಳೆಗೆ ನೀರು ಹರಿಸುವಂತೆ ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್,ಕಾವೇರಿ ನದಿ ನಾವು ಹುಟ್ಟುವ ಮೊದಲೇ ಇತ್ತು. ಆದರೆ ಆ ನೀರಿನ ಮೇಲೆ ಹಕ್ಕ ಸಾಧಿಸಲು ನಾವು ಕಚ್ಚಾಡಿಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ಎರಡೂ ರಾಜ್ಯಗಳ ರೈತರೇ ಬಗೆಹರಿಸಿಕೊಳ್ಳಬೇಕಿತ್ತು. ನಮ್ಮ ಕೊನೆಯ ಆಯ್ಕೆ ಕೋರ್ಟ್ ಆಗಬೇಕಿತ್ತು. ಆದರೆ ಈಗಾಗಲೇ ಪ್ರಕರಣ ಕೋರ್ಟ್ ನಲ್ಲಿದೆ.ಆದರೂ ಕಾವೇರಿ ವಿವಾದ ಇತ್ಯರ್ಥಕ್ಕಾಗಿ ಕರ್ನಾಟಕ-ತಮಿಳುನಾಡು ಸರ್ಕಾರಗಳ ನಡುವೆ ಮಧ್ಯಸ್ಥಿಕೆ ವಹಿಸಲು ನಾನು ಸಿದ್ದನಿದ್ದೇನೆ,ಒಟ್ಟಿನಲ್ಲಿ ನಾವು ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಾನು ತಮಿಳುನಾಡು ಸರ್ಕಾರದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿಲ್ಲ, ನಮ್ಮ ನಾಡಿನ ಜನರ ಪ್ರತಿನಿಧಿಯಾಗಿ ಕುರುವೈ ಬೆಳೆಗೆ ನೀರು ಕೇಳಲು ಬಂದಿದ್ದೇನೆ. ನನಗೆ ಈ ಸಂದರ್ಭದಲ್ಲಿ ಸಿನಿಮಾಗಿಂತ ಕಾವೇರಿ ನದಿ ನೀರಿನ ವಿಷಯವೇ ಮುಖ್ಯ ಎಂದರು.

ರಜನಿಕಾಂತ್ ನಟಿಸಿರುವ ಕಾಲ ಚಿತ್ರ ವಿವಾದದ ಬಗ್ಗೆ ಮಾತನಾಡಲು ಕಮಲ್ ಹಾಸನ್ ನಿರಾಕರಿಸಿದರು.ನಾವು ಅದರ ಯಾವುದೇ ಚರ್ಚೆ ಮಾಡಿಲ್ಲ. ಅದಕ್ಕಾಗಿ ವಾಣಿಜ್ಯ ಮಂಡಳಿ ಇದೆ. ಅವರು ನೋಡಿಕೊಳ್ಳುತ್ತಾರೆ. ನಾನು ತಮಿಳುನಾಡು ಜನತೆಯ ಪರವಾಗಿ ಬಂದಿದ್ದೇನೆ ಅಷ್ಟೆ ಎಂದರು.

ಸಿಎಂ ಕುಮಾರಸ್ವಾಮಿ ಮಾತನಾಡಿ,ಕಾವೇರಿ ನದಿ ನೀರು ಹಂಚಿಕೆ ‌ವಿವಾದ ಸೌಹಾರ್ಹಯುತವಾಗಿ ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಸೌಹಾರ್ದತೆ ಇರಬೇಕು. ಎರಡೂ ರಾಜ್ಯಗಳ ಜನರು ಸಹೋದರ ಭಾವನೆಯಲ್ಲಿರಬೇಕು. ಈ ನಿಟ್ಟಿನಲ್ಲಿಯೇ ನಮ್ಮಿಬ್ಬರ ಚರ್ಚೆ ನಡೆದಿದೆ. ನಮ್ಮ ರೈತರೂ ಬದುಕಬೇಕು, ತಮಿಳುನಾಡಿನ ರೈತರು ಬದುಕಬೇಕು ಎನ್ನುವುದೇ ನಮ್ಮ ಉದ್ದೇಶ.ಆ ನಿಟ್ಟಿನಲ್ಲಿಯೇ ವಿವಾದ ಇತ್ಯರ್ಥಕ್ಕೆ ಪ್ರಯತ್ನ ಮುಂದುವರೆಯಲಿದೆ ಎಂದರು.

ನಾನು ಏಕಾಂಗಿಯಲ್ಲ:ಡಿಕೆಶಿ!

 

ಬೆಂಗಳೂರು: ಕಾಂಗ್ರೆಸ್ ನಲ್ಲಿ ನಾನು ಏಕಾಂಗಿಯಲ್ಲ,ಏಕಾಂಗಿ ಜಾಯಮಾನವೂ ನಂದಲ್ಲ ಎನ್ನುವ ಮೂಲಕ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪವನ್ನು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟವಾಗಿ ತಳ್ಳಿಹಾಕಿದರು.

ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು,ನಾನು ಪಕ್ಷದಲ್ಲಿ ಯಾವತ್ತೂ ಎಕಾಂಗಿಯಾಗಿಲ್ಲ.ಎಕಾಂಗಿ ನನ್ನ ಜಾಯಮಾನವಲ್ಲ.ಎಲೆಕ್ಷನ್ ಮುಗಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ,ಅದಕ್ಕೆ ನಾನು ಪಕ್ಷದ ಸಭೆಗಳಲ್ಲಿ ಕಾಣಿಸಲ್ಲ ಸರ್ಕಾರ ರಚನೆ ನಂತರ ನನ್ನನ್ನು ಕಡೆಗಣಿಸಲಾಗುತ್ತಿದೆ ಅನ್ನೋದು ಸರಿಯಿಲ್ಲ.ದೇವಸ್ಥಾನಗಳಿಗೆ ನಾನು ಹೋಗಲೇಬಾರದಾ ಎನ್ನುವ ಮೂಲಕ ಸಂಪು ರಚನೆ ಸಂಬಂಧ ನಡೆದ ಸಭೆಗಳಲ್ಲಿ ಹೋಗದಿರವುದಕ್ಕೆ ಕಾರಣ ನೀಡಿದರು.

ನಾನು ಸಂಪುಟದಲ್ಲಿ ಇರಬೇಕೋ ಅಥವಾ ಪಕ್ಷದ ಸಾರಥ್ಯದಲ್ಲಿ ಇರಬೇಕೋ ಅನ್ನೋದನ್ನು ಪಕ್ಷ ತೀರ್ಮಾನ ಮಾಡಲಿದೆ.
ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎನ್ನುವ ಮೂಲಕ ಚಂಡನ್ನು ಡಿಕೆಶಿ ಹೈಕಮಾಂಡ್ ಅಂಗಳಕ್ಕ ಎಸೆದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್ ಆರ್ ಪಾಟೀಲ ಯಾಕೆ ರಾಜೀನಾಮೆ ಕೊಟ್ಟರು ಅಂತ ಗೊತ್ತಿಲ್ಲ.ಅವರು ಪ್ರಮುಖ ನಾಯಕರು.ದಕ್ಷಿಣ ಕರ್ನಾಟಕದ ಭಾಗದಲ್ಲಿಒಕ್ಕಲಿಗರು ಇದ್ದಾರೆ.ಅಲ್ಲಿ ವೀರಶೈವ ಸಮೂದಾಯ ಹೆಚ್ಚಿದೆ.
ಚುನಾವಣೆಯಲ್ಲಿ ನಮಗೆ ಓಟ್ ಹಾಕಿದ ಜನ ಸಹ ರಾಜ್ಯದಲ್ಲಿ ಇದ್ದಾರೆ.ಎಲ್ಲರ ಬಗ್ಗೆ ಹೈಕಮಾಂಡ್ ಯೋಚನೆ ಮಾಡಲಿದೆ.
ವೀರಶೈ ರನ್ನು ಕಡೆಗಣಿಸಲು ಸಾಧ್ಯವಿಲ್ಲ.ಸಚಿವ ಸಂಪುಟ ರಚನೆ ವೇಳೆ ವೀರಶೈವರನ್ನು ನೋಡಬೇಕಾಗುತ್ತದೆ‌ ಎಂದು
ಎಸ್ ಆರ್ ಪಾಟೀಲ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್ ಮಾಡಿದರು.

ಇಂಧನ ಖಾತೆಗಾಗಿ ಕ್ಯಾತೆ ವಿಚಾರ ಸಂಬಂಧ
ಸಿಎಂ ಕುಮಾರಸ್ವಾಮಿ ಯಾವ ಹೇಳಿಕೆ ಕೊಟ್ಟಿದ್ದಾರೆ ಅನ್ನೋ ಬಗ್ಗೆ ರಿಯಾಕ್ಟ್ ಮಾಡಲ್ಲ.ಅವರು ಎನ್ ಹೇಳಿದ್ದಾರೋ ಗೊತ್ತಿಲ್ಲ‌ ಎಂದು ಹಾರಿಕೆಯ‌ ಉತ್ತರ ನೀಡಿದರು.

ಮೆಟ್ರೋ ನೌಕರರ ಮುಷ್ಕರ: ಇಂದು ಹೈಕೋರ್ಟ್‌ನಲ್ಲಿ ನಿರ್ಧಾರ

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನೌಕರರ ಸಂಘ ನಡೆಸಲು ಉದ್ದೇಶಿಸಿರುವ ಮುಷ್ಕರದ ಭವಿಷ್ಯ ಇಂದು ಹೈಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ.

ಬಿಎಂಆರ್‌ಸಿಎಲ್ ನೌಕರರ ಸಂಘ ಕರೆ ನೀಡಿರುವ ಮುಷ್ಕರ ಪ್ರಶ್ನಿಸಿ ಮೆಟ್ರೋ ರೈಲು ನಿಗಮ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಕೋರ್ಟ್ ನೀಡುವ ತೀರ್ಪಿನ ಮೇಲೆ ನೌಕರರು ಮುಷ್ಕರದ ಬಗ್ಗೆ ನಿರ್ಧರಿಸಲಿದ್ದಾರೆ.

ಕಳೆದ ತಿಂಗಳು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮೆಟ್ರೋ ರೈಲು ನಿಗಮದ ಆಡಳಿತ ಮಂಡಳಿ ಹಾಗೂ ನೌಕರರ ಸಂಘವು ಮತ್ತೊಂದು ಬಾರಿ ಸಭೆ ನಡೆಸಿ, ಒಮ್ಮತದ ನಿರ್ಧಾರಕ್ಕೆ ಬರುವಂತೆ ಸೂಚಿಸಿತ್ತು. ಇದೇ ವೇಳೆ ತನ್ನ ಗಮನಕ್ಕೆ ತರದೇ ಯಾವುದೇ ಮುಷ್ಕರ ನಡೆಸಬಾರದೆಂದು ನೌಕರರ ಸಂಘಕ್ಕೆ‌ ನಿರ್ದೇಶಿಸಿತ್ತು.

ಸಮ್ಮಿಶ್ರ ಸರ್ಕಾರ ನಡೆಸೋದು ಗೊತ್ತು: ಹೆಚ್ಡಿಕೆ ಟಾಂಗ್!

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎನ್ನುವುದು ಚನ್ನಾಗಿ ಗೊತ್ತಿದೆ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು,ಸಧ್ಯದಲ್ಲೇ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.ಆದರೆ ಈ ಸಮ್ಮಿಶ್ರ ಸರ್ಕಾರವನ್ನು ಯಾವ ರೀತಿ‌ ಮ್ಯಾನೆಜ್ ಮಾಡೊದು ಎನ್ನುವುದು ನಂಗೆ ಗೊತ್ತು.ಐದು ವರ್ಷ ಸುಭದ್ರ ಸರ್ಕಾರ ನಿಡುತ್ತೇನೆ.ಯಾವುದೆ ಅನುಮಾನ ಬೇಡ ಎಂದರು.

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ನನ್ನದೆ ಆದ ಕಾರ್ಯಕ್ರಮ ಇದೆ.ಆ ಕಾರ್ಯಕ್ರಮದ ಮೂಲಕ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ,ಗುಣಮಟ್ಟದ ಶಿಕ್ಷಣದ ಮೂಲಕ ಯುವ ಸಮೂಹದ ಶೈಕ್ಷಣಿಗ ಗುಣಮಟ್ಟದ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಆಡಳಿತದಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ನಿರ್ಧಾರಕ್ಕೆ ಬದ್ದವಾಗಿದ್ದೇನೆ.ಈಗಾಗಲೇ ವಿಶೇಷ ವಿಮಾನ ಬಳಕೆ ಮಾಡುವುದನ್ನು ನಾನು ನಿರ್ಭಂದಿಸಿದ್ದೇನೆ.ನಾನು ನನ್ನ ಸ್ವಂತ ಕಾರು ಬಳಸುತ್ತಿದ್ದು,ಕಾರಿನ ಖರ್ಚು ವೆಚ್ಚ ಕೂಡಾ ನಾನೆ ಭರಿಸುತ್ತಿದ್ದೇನೆ ಎಂದರು.

ನೀವು ತಿನ್ನುವ ಆಹಾರದ ಬಗ್ಗೆ ಎಚ್ಚರ ಅಗತ್ಯ

ಬೆಂಗಳೂರು: ನಾವು ತಿನ್ನುವ ಆಹಾರದಿಂದ ಹೊಟ್ಟೆ ತುಂಬುತ್ತದೆ, ಆಹಾರ ಜೀರ್ಣವಾಗಿ ಪಚನವಾಗುತ್ತದೆ ಎಂಬುದಷ್ಟೇ ನಮಗೆ ಗೊತ್ತಿರುವ ಸಂಗತಿ. ಆದರೆ ಆಹಾರ ದೇಹಕ್ಕೆ ಯಾವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಅದರಿಂದ ದೇಹಕ್ಕೆ ಯಾವ ರೀತಿ ಪ್ರಯೋಜನಗಳಿವೆ. ಪ್ರತಿನಿತ್ಯ ಸೇವಿಸುವ ಆಹಾರದಿಂದ ವಿಷಕಾರಕ ಅಂಶಗಳು ದೇಹ ಸೇರಲಿವೆಯೇ ಅದರಿಂದ ದೇಹಕ್ಕಾಗುವ ಅಪಾಯಗಳೇನು ನಿಮಗೆ ತಿಳಿದಿದೆಯೇ. ಮದ್ಯಪಾನ, ಧೂಮಪಾನ ಮತ್ತಿತರ ಆನಾರೋಗ್ಯಕರ ಅಭ್ಯಾಸಗಳು ನಮ್ಮ ದೇಹಕ್ಕೆ ಅದೆಷ್ಟೊ ಪ್ರಮಾಣದಲ್ಲಿ ವಿಷಕಾರಕ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ. ಇದು ನಮ್ಮಲ್ಲಿ ಒತ್ತಡವನ್ನು ಸೃಷ್ಟಿಸುತ್ತದೆ. ಜೀರ್ಣಕ್ರಿಯೆ ಕೂಡ ಸರಿಯಾಗಿ ನಡೆಯುವುದಿಲ್ಲ. ಇದರಿಂದೆಲ್ಲಾ ತಪ್ಪಿಸಿಕೊಳ್ಳಲು ಈ ವಿಷಕಾರಕ ವಸ್ತುಗಳನ್ನು ನಮ್ಮ ದೇಹದಿಂದ ಹೊರಹಾಕಬೇಕು. ಹಲವಾರು ವಿಧಗಳಲ್ಲಿ ನಾವಿದನ್ನು ಸಾಧಿಸಬಹುದಾಗಿದೆ. ಇದನ್ನು ನಾವು ಸೇವಿಸುವ ವಸ್ತುಗಳಲ್ಲಿ ವಿಷಕಾರಕ ವಸ್ತುಗಳು ಇಲ್ಲದಂತೆ ಮಾಡಿ ನಿಯಂತ್ರಣ ಮಾಡಬಹುದು ಅಥವಾ ರಕ್ತದಲ್ಲಿ ಸೇರಿರುವ ವಿಷಕಾರಕ ವಸ್ತುಗಳನ್ನು ಕಡಿಮೆ ಮಾಡುವ ಮೂಲಕ ಮಾಡಬಹುದು. ಇದರಿಂದಾಗಿ ನಮ್ಮ ದೇಹ ಮತ್ತು ನಮ್ಮ ಮನಸ್ಸಿನ ಒತ್ತಡ ನಿವಾರಣೆ ಮಾಡಬಹುದು. ತರಕಾರಿಗಳು ಮತ್ತು ಹಣ್ಣುಗಳು ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲುದು. ಇವುಗಳಲ್ಲೂ ಕೆಲವು ತರಕಾರಿಗಳಂತೂ ಬಹಳವೇ ಹೆಚ್ಚು ಪರಿಣಾಮಕಾರಿಯಾಗಿದೆ. ವ್ಯಾಯಾಮ, ಧ್ಯಾನ ಮತ್ತು ಯೋಗ ಕೂಡ ಇದರಲ್ಲಿ ಬಹಳ ನೆರವಾಗುತ್ತದೆ. ಹಣ್ಣಿನ ರಸಗಳು ಮತ್ತು ತರಕಾರಿಗಳು ಬಹಳ ಉತ್ತಮವಾಗಿ ಕೆಲಸ ಮಾಡಬಲ್ಲುದು. ಅವುಗಳೆಂದರೆ:

1.ಪಾಲಕ್ ಸೊಪ್ಪು ನಮ್ಮ ದೇಹದಲ್ಲಿ ಇರುವ ವಿಷಕಾರಿ ವಸ್ತುಗಳನ್ನು ನಿರ್ಮೂಲನೆ ಮಾಡುವಲ್ಲಿ ಪಾಲಕ್ ಸೊಪ್ಪು ಬಹಳ ಪರಿಣಾಮಕಾರಿ. ಇದು ಅತ್ಯಂತ ಹೆಚ್ಚು ಜನರು ಬಳಸುವ ಮತ್ತು ಹೆಚ್ಚು ಜನರು ಸಲಹೆ ನೀಡುವ ಸೊಪ್ಪಾಗಿದೆ. ಇದನ್ನು ಲಿಂಬೆ ಹಣ್ಣು ಮತ್ತು ಕಾಳು ಮೆಣಸಿನ ಹುಡಿಯೊಂದಿಗೆ ಸೇವಿಸಬಹುದು. ಪಾಲಕ್ ಸೊಪ್ಪನ್ನು ಪೇಸ್ಟ್ ಮಾಡಿ ಇದಕ್ಕೆ ನೀರನ್ನು ಸೇರಿಸಿ ಇದಕ್ಕೆ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಹಾಗೂ ನಂತರ ಕಾಳು ಮೆಣಸಿನ ಹುಡಿಯನ್ನು ಹಾಕಿ. ಇದು ಇತರ ಹಣ್ಣಿನ ರಸಗಳಂತೆ ರುಚಿಕರವಾಗಿರದೇ ಇರಬಹುದು ಆದರೆ ಇದು ಯಾವುದೇ ಹಣ್ಣಿನ ರಸಕ್ಕಿಂತ ಹೆಚ್ಚು ಆರೋಗ್ಯಕರವಾಗಿದೆ.

2.ಹಸಿರು ಸೇಬು ಹಸಿರು ಸೇಬು ಕೂಡ ಪಾಲಕ್ ಸೊಪ್ಪಿನಂತೆಯೇ ಬಹಳ ಪರಿಣಾಮಕಾರಿ. ಹಸಿರು ಸೇಬಿನ ರಸ ಬೇರೆ ಹಣ್ಣುಗಳ ರಸಕ್ಕಿಂತ ಹೆಚ್ಚು ರುಚಿಕರ ಹಾಗೂ ಹೆಚ್ಚು ಪ್ರಯೋಜನಕಾರಿ. ಇದನ್ನು ಜ್ಯೂಸರ್ ಸಹಾಯದಿಂದ ಮಾಡಬಹುದು. ಇದರಲ್ಲಿ ಏನೂ ಹಾಕದೆಯೂ ಜ್ಯೂಸ್ ತಯಾರಿಸಬಹುದು. ಇದಕ್ಕೆ ಸ್ವಲ್ಪ ಜೇನುತುಪ್ಪವನ್ನೂ ಸೇರಿಸಬಹುದು. ಇದನ್ನು ಆದಷ್ಟು ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ ಅದರಲ್ಲೂ ಬೆಳಗ್ಗಿನ ಅವಧಿಯಲ್ಲಿ ಸೇವಿಸಿದರೆ ಉತ್ತಮ.

3.ತೆಂಗಿನಕಾಯಿ ಇದರಲ್ಲಿ ಆಕ್ಸಿಡೀಕಾರಕ ಮತ್ತು ಎಲೆಕ್ಟ್ರೋಲೈಟ್ ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದು ನಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ. ಎಳೆನೀರು ಮತ್ತಷ್ಟು ಪರಿಣಾಮಕಾರಿ ಮತ್ತು ಬೇರೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಇದು ನೈಸರ್ಗಿಕವಾದ ಪಾನೀಯ ಆಗಿರುವುದರಿಂದ ಹೆಚ್ಚಿನ ಜನರ ಆದ್ಯತೆಯ ಪಾನೀಯವಾಗಿದೆ. ಇದರಲ್ಲಿ ದೇಹವನ್ನು ಸ್ವಚ್ಛಗೊಳಿಸುವ ಅಂಶವೂ ಸೇರಿಕೊಂಡಿದೆ.

4.ಕೋಸುಗಡ್ಡೆ ಎಲೆಗಳು ಹೆಚ್ಚಿನ ಜನರಿಗೆ ಇದು ತಿಳಿದಿರಲಿಕ್ಕಿಲ್ಲ. ಆದರೆ ಕೋಸುಗಡ್ಡೆಯ ಎಲೆಗಳು ಎತೀ ಉತ್ತಮವಾದ ವಿಷಕಾರಕ ಅಂಶ ನಿವಾರಣಾ ಸಾಮರ್ಥ್ಯ ಹೊಂದಿವೆ. ಇದನ್ನು ಪಾಲಕ್, ಸೇಬಿನ ಜೊತೆಗೂ ಸೇವಿಸಬಹುದು.ಕೋಸುಗಡ್ಡೆ ಎಲೆಗಳ ರಸವನ್ನು ಮಾಡುವಾಗ ಅದಕ್ಕೆ ಲಿಂಬೆ ಹಣ್ಣು, ಶುಂಠಿ, ಸ್ವಲ್ಪ ಮುಳ್ಳುಸೌತೆ ಹಾಕಿ ಮಾಡಿದಲ್ಲಿ ರುಚಿಯೂ ಬಹಳ ಚೆನ್ನಾಗಿರುತ್ತದೆ. ಇದನ್ನೂ ಬೆಳಗ್ಗಿನ ಅವಧಿಯಲ್ಲಿ ಸೇವನೆ ಮಾಡಿದರೆ ಬಹಳ ಉತ್ತಮ.

5.ಪುದಿನ ಮತ್ತು ಲಿಂಬೆ ಪುದಿನ ಬರಿಯ ಸುವಾಸನಾ ವಸ್ತುವಲ್ಲ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮಹತ್ವದ ಸೊಪ್ಪು. ಇದನ್ನು ಜ್ಯೂಸ್ ಮಾಡಿ ಇದಕ್ಕೆ ಲಿಂಬೆ ಹಣ್ಣಿನ ಹನಿಗಳನ್ನು ಹಾಕಿ ಜ್ಯೂಸ್ ಅನ್ನು ತಯಾರಿಸಬಹುದು. ಇದಕ್ಕೆ ಕಾಳುಮೆಣಸಿನ ಹುಡಿ ಮತ್ತು ಉಪ್ಪು ಹಾಕಿದರೆ ರುಚಿಗೂ ಬಹಳ ಹಿತಕರ.