State COVID Task Force Head inspects in Hassan District

Hassan: In order to facilitate COVID management Rs 10 crore will be released under SDRF on coming Monday for the district, DyCM & State COVID task force head, Dr. C.N.Ashwatha Narayana, stated.

During his visit to Hassan to inspect the COVID situation on Saturday, he told that Rs 10 crore under State Disaster Relief Fund (SDRF) would be released as per the request submitted by District Commissioner.

In the district, 3 lakh+ people have been inoculated with the first dose of vaccine, and 75,000+ have been administered 2nd shot of vaccine. The 2nd shot will be administered for all those who are eligible well within the time, Narayana assured.

50 ventilators will be provided for Hassan Institute of Medical Sciences (HIMS), he told, and added steps will be taken to link more private hospitals who have been left out to the SAST portal, he informed

The state COVID head further said, “home isolation of the Corona infected will not be allowed and district administration has been asked to ensure admission of the infected to the Covid Care Centers (CCCs). In order to make villages COVID free, doorstep survey will be augmented and testing will be increased to identify the infected.”

As a preparedness to face the probable third wave of the pandemic along with the objective of containing second wave, oxygenated beds, ICU beds, oxygen generators, oxygen concentrators will be provided in PHCs, Community Health Centers, Taluk Hospitals, Medical College Hospitals, and District Hospitals, he explained.

Prior to visiting Hassan, Ashwatha Narayana visited the taluk hospital and CCC in Channaraya Pattana and PHC in Udayapura and inspected the Covid management. He then traveled to the district center and inspected the situation at HIMS and later held a meeting with district administration wherein District Commissioner, CEO of Zilla panchayat, SP, and Health Officials attended.

District In-charge minister Gopalaiah, MLAs Preetham Gowda, HD Revanna, Shivalinge Gowda, and others were also present.

ಕಾವೇರಿ ಕಲಾ ಗ್ಯಾಲರಿಯನ್ನು ಕಲಾ ಕೇಂದ್ರವಾಗಿ ಕಟ್ಟಿಸಲು 150 ಕೋಟಿಯಲ್ಲಿ ಯೋಜನೆ: ಸಿ.ಪಿ. ಯೋಗೇಶ್ವರ್

ಮೈಸೂರು,ಮಾರ್ಚ್.12.(ಕರ್ನಾಟಕ ವಾರ್ತೆ):- ಕಾವೇರಿ ಕಲಾ ಗ್ಯಾಲರಿಯನ್ನು ಕಲಾ ಕೇಂದ್ರವಾಗಿ ಕಟ್ಟಿಸಬೇಕೆಂದು ಸುಮಾರು 150 ಕೋಟಿ ರೂಪಾಯಿಗಳಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತçದ ಸಚಿವರಾದ ಸಿ.ಪಿ ಯೋಗೇಶ್ವರ್ ಅವರು ಹೇಳಿದರು.

ಶುಕ್ರವಾರದಂದು ವಸ್ತುಪ್ರದರ್ಶನ ಪ್ರಾಧಿಕಾರದ ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲರಿಗೆ ಭೇಟಿ ನೀಡಿದ ಸಿ.ಪಿ. ಯೋಗೀಶ್ವರ್ ಅವರು ಕಲಾ ಗ್ಯಾಲರಿಯನ್ನು ಕುರಿತು ಮಾತನಾಡಿದರು.

ಕೇಂದ್ರ ಸರ್ಕಾರದ ನೆರವಿನಿಂದ ನಿರ್ಮಾಣಗೊಂಡಿರುವ ಕಾವೇರಿ ಕಲಾ ಕೇಂದ್ರ ಗ್ಯಾಲರಿಯು ಕಾವೇರಿ ನದಿಯ ಉದ್ದಗಲಕ್ಕೂ ಇರುವಂತಹ ನದಿಯ ಓಟ ಕರ್ನಾಟಕ ಮತ್ತು ತಮಿಳುನಾಡಿನ ಒಂದು ಸಾಂಸ್ಕೃತಿಕ ಮತ್ತು ಐತಿಹಾಸಿಕ ಚಿತ್ರಣ ಗ್ಯಾಲರಿಯಲ್ಲಿ ಸಂಪೂರ್ಣವಾಗಿ ದೊರೆಯುತ್ತದೆ ಎಂದರು.

ಕಾವೇರಿ ನದಿಯ ಹುಟ್ಟಿನಿಂದ ಹಿಡಿದು ಸಮುದ್ರ ಸೇರುವವರೆಗೆ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಪರಿಚಯ ಇಲ್ಲಿ ಸಿಗುತ್ತದೆ ಎಂದು ತಿಳಿಸಿದರು.
ಹಾಗಾಗಿ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಮತ್ತು ಕಾವೇರಿಯನ್ನು ಕೌತುಕದಿಂದ ನೋಡುವವರಿಗೆ ಇದು ಗಮನ ಸೆಳೆಯುವ ಕಲಾ ಕೇಂದ್ರ ವಾಗಲಿದ್ದು, ಉದ್ಘಾಟನೆಗೆ ಸಿದ್ಧವಿದೆ ಎಂದು ತಿಳಿಸಿದರು.

ಕ್ರಿಕೆಟ್ ಆಡಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಇತ್ತೀಚೆಗಷ್ಟೇ ಕಾರಿನ ಟೈಯರ್ ಬದಲಿಸಿ ಗಮನ ಸೆಳೆದಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇದೀಗ ಕ್ರಿಕೆಟ್ ಆಟವಾಡಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಹಾಗೂ ರಾಜ್ಯ ಎನ್.ಟಿ.ಇ.ಪಿ ನೌಕರರ ಸಹಯೋಗದಲ್ಲಿ ಗುರುವಾರ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜೆ.ಕೆ.ಮೈದಾನದಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಟೂರ್ನಿಮೆಂಟ್‌ಅನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಡಿಸಿ ಪ್ರಸ್ತುತ ದಿನಗಳಲ್ಲಿ ಕೊರೋನ ಹೆಚ್ಚಾಗಿ ಕಾಣಿಸುತ್ತಿದ್ದರೂ, ಕೊರೋನಾಗಿಂತ ಹೆಚ್ಚು ಅಪಾಯಕಾರಿಯಾದದ್ದು ಕ್ಷಯರೋಗ ಎಂದು ಹೇಳಿದರು.

ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನವಾಗಿದ್ದು, ಇದರ ಬಗ್ಗೆ ಅರಿವು ಮೂಡಿಸಲು 8 ಜಿಲ್ಲೆಗಳಿಂದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿದ್ದಾರೆ. ಅರಿವು ಮೂಡಿಸುವ ಕಾರ್ಯಕ್ರಮವು 4 ವರ್ಷಗಳಿಂದ ನಡೆಯುತ್ತಿದ್ದು, 3 ದಿನಗಳ ಈ ಟೂರ್ನಿಮೆಂಟ್ ನಡೆಯುವ ಮೂಲಕ ಅರಿವು ಮೂಡಿಸಲಿದ್ದಾರೆ ಎಂದರು.

ಮೈಸೂರಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ ನಡೆಯುತ್ತಿದ್ದು, ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಹಿಂದೆಯೂ ಹಲವಾರು ಪ್ರಯತ್ನಗಳು ನಡೆದಿದೆ. ಆದರೆ ಕೊರೋನಾದಿಂದಾಗಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಹಿಂದೆ(ಲ್ಯಾಗ್) ಉಳಿದಿದ್ದೇವೆ. ಇದರಿಂದ ಮತ್ತೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಕೊರೊನಾದಿಂದ ಸಾಕಷ್ಟು ನಷ್ಟವುಂಟಾಗಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಬಳಸುವವರಿಗೆ ಏಪ್ರಿಲ್ 5ರೊಳಗಾಗಿ ಅರಿವು ಮೂಡಿಸಲಾಗುತ್ತಿದೆ. ನಂತರ ಅವರು ಎಚ್ಚೆತ್ತುಕೊಳ್ಳದಿದ್ದರೆ ಎಲ್ಲಾ ತಾಲ್ಲೂಕುಗಳಲ್ಲೂ ದಾಳಿ ಮಾಡುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಟಿ.ಅಮರ್‌ನಾಥ್, ಡಾ.ಸಿರಾಜ್, ಡಾ.ರವಿ, ಡಾ.ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸೋಣ- ಸಚಿವ ಡಾ. ನಾರಾಯಣಗೌಡ

ಮಂಡ್ಯ: ನಮ್ಮ ದೇಶದ ಸ್ವಾತಂತ್ರ್ಯಸಂಗ್ರಾಮಕ್ಕೆ ಹಲವಾರು ಹೋರಾಟಗಾರರ ತ್ಯಾಗ ಬಲಿದಾನವಿದೆ, ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅವರನ್ನು ಸ್ಮರಿಸೋಣ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ನಾರಾಯಣಗೌಡರವರು ಹೇಳಿದರು.

ಮದ್ದೂರಿನ ಶಿವಪುರ ಸತ್ಯಾಗ್ರಹಸೌಧದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭವೂ ದೇಶದ 75 ಸ್ಥಳ, ನಗರಗಳಲ್ಲಿ ನಡೆಯುತ್ತಿದ್ದು. ಅದರಲ್ಲಿ ಮದ್ದೂರಿನ ಶಿವಪುರವೂ ಒಂದಾಗಿರುವುದು ಮಂಡ್ಯದವರಿಗೆ ಹೆಮ್ಮೆ ವಿಷಯ ಎಂದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ದೇಶವನ್ನು ಬಲಿಪಡಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ ಎಂದರು.
ನಮ್ಮ ಜಿಲ್ಲೆಯಲ್ಲಿ ಆಲೆಮನೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಗಾಣ ನಡೆಸುವವರಿಗೆ ಬ್ಯಾಂಕ್ ನಿಂದ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು.

ಅಗ್ರಿಟೂರಿಸಂ ಮೂಲಕ ಕೃಷಿಗೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಮ್ಮ ಹಿರಿಯರು ದೇಶದ ಹೋರಾಟದಲ್ಲಿ ಒಂದು ಶಕ್ತಿಯನ್ನು ತುಂಬಿದ್ದಾರೆ ಅವರ ಹೋರಾಟಕ್ಕೆ ಈ ದಿನ ಗೌರವ ಸಲ್ಲಿಸುವ ಕೆಲಸ ಈ ಸಂದರ್ಭದಲ್ಲಿ ನೇರವೇರಿದೆ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿಗಳಾದ ಎಸ್.ಅಶ್ವಥಿ ಅವರು ಮಾತನಾಡಿ, ಈ ದಿನ ಮಂಡ್ಯಕ್ಕೆ ಒಂದು ವಿಶೇಷದಿನ.
ಕರ್ನಾಟಕದಲ್ಲಿ 3 ಜಿಲ್ಲೆಯನ್ನು ಅಮೃತ ಮಹೋತ್ಸವ ಕ್ಕೆ ಆಯ್ಕೆ ಮಾಡಿಕೊಂಡಿದ್ದು ಹೆಮ್ಮೆ ವಿಚಾರ ಎಂದರು.

ಬ್ರಿಟಿಷರ ವಿರುದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಮಂಡ್ಯ ಶಿವಪುರದ ಧ್ವಜರೋಹಣ ಮತ್ತು ಧ್ವಜಸತ್ಯಾಗ್ರಹ ನೆನೆಯುವಂತದ್ದು ಎಂದರು.
ಶಿವಪುರದ ಸತ್ಯಾಗ್ರಹದ ಆ ದಿನಗಳು ಇಂದು ಅನೇಕ ಯುವಕರಿಗೆ ಸ್ಪೂರ್ತಿ ಎಂದು ಅವರು ಹೇಳಿದರು.

ಇದಕ್ಕು ಮುನ್ನ ಸಚಿವರು, ಪ್ರದರ್ಶನ ಮಳಿಗೆಗಳು, ಪುಸ್ತಕ ಪ್ರದರ್ಶನ, ಅಂಚೆಚೀಟಿ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀನಿವಾಸ್, ಡಿ.ಸಿ ತಮ್ಮಣ್ಣ,
ಜಿ.ಪಂ ಅಧ್ಯಕ್ಷೆ ನಾಗರತ್ನಸ್ವಾಮಿ,
ವಿಧಾನಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿರೇವಣ್ಣ,
ಜಿ.ಪಂ ಸಿ.ಇ.ಒ ಜುಲ್ಪಿಕರ್ ಉಲ್ಲಾ, ಪಾಂಡವಪುರ ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಲೈಸೆನ್ಸ್ ನೀಡಲು ಆಫ್‍ಲೈನ್-ಆನ್‍ಲೈನ್ ವ್ಯವಸ್ಥೆ ಜಾರಿ; ಸಚಿವ ಮುರುಗೇಶ್ ನಿರಾಣಿ

ಧಾರವಾಡ– ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಶೀಘ್ರದಲ್ಲಿ ಲೈಸೆನ್ಸ್(ಪರಾವನಗಿ) ನೀಡಲು ಅನುಕೂಲವಾಗುವಂತೆ ಆನ್‍ಲೈನ್ ಮತ್ತು ಆಫ್‍ಲೈನ್ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಶುಕ್ರವಾರ ಪ್ರಕಟಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಫ್‍ಲೈನ್, ಆನ್‍ಲೈನ್ ಜಾರಿ ಮಾಡಿದರೆ 30 ದಿನದಲ್ಲಿ ಗಣಿಗಾರಿಕೆ ಲೈಸೆನ್ಸ್ ಪಡೆಯಬಹುದೆಂದು ತಿಳಿಸಿದರು.
ಇನ್ನು 30 ದಿನದೊಳಗೆ ಈ ಎರಡೂ ವ್ಯವಸ್ಥೆಯನ್ನುಇಲಾಖೆ ಜಾರಿಗೆ ತರಲಿದೆ. ಈಗಾಗಲೇ ಕರಡು ನೀತಿ ಸಿದ್ದವಾಗಿದ್ದು, ಗಣಿಗಾರಿಕೆ ಅನುಮತಿ ಪಡೆಯುವವರೆಗೆ ತೊಂದರೆಯಾಗದಂತೆ ಸರಲೀಕರಣ ಮಾಡುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.

ಅದಿರನ್ನು ಹೊರಗಿನಿಂದ ಆಮದು ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿನ ಅದಿರನ್ನು ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಈಗಾಗಲೇ ಜಿಂದಾಲ್, ಬಲ್ಡೋಟಾ, ಕಿರ್ಲೋಸ್ಕರ್ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳ ಜೊತೆ ಸಭೆ ನಡೆಸಲಾಗಿದೆ. ಹೊರಗಡೆಯಿಂದ ಅದಿರು ಆಮದು ಮಾಡಿಕೊಂಡರೆ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ತಗ್ಗಿಸಬಹುದಾಗಿದೆ ಎಂದು ಹೇಳಿದರು.

ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಾಗಿದೆ. ಅವರು ಕೂಡ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಸದ್ಯದಲ್ಲೇ ಮತ್ತೊಮ್ಮೆ ಅಕಾರಿಗಳ ಸಭೆ ಕರೆದು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಪದೇ ಪದೇ ಉಂಟಾಗುತ್ತಿರುವ ಅವಘಡಗಳನ್ನು ತಪ್ಪಿಸಲು ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ನಂತರ ನಾವು ಹೊಸ ನಿಯಮಗಳನ್ನು ತಂದಿದ್ದೇವೆ ಎಂದು ಮಾಹಿತಿ ನೀಡಿದರು. ಸರ್ಕಾರದಿಂದ ಅನುಮತಿ ಪಡೆದವರು ಮಾತ್ರ ಸ್ಪೋಟಕ ವಸ್ತುಗಳನ್ನು ಬಳಸಬೇಕು. ಬೇರೊಬ್ಬರು ಬಳಸದಂತೆ ಕಾನೂನು ಜಾರಿಗೆ ತರಲಾಗುತ್ತದೆ.
ಯಾರಾದರೂ ಕಾನೂನುಬಾಹಿರವಾಗಿ ಸೋಟಕಗಳನ್ನು ಇಟ್ಟುಕೊಂಡಿದ್ದರೆ ಕೂಡಲೇ ಹಿಂತಿರುಗಿಸಬೇಕೆಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಹೊಸದಾಗಿ ಸ್ಕೂಲ್ ಆಫ್ ಮೈನಿಂಗ್ ತೆರೆಯುವ ಉದ್ದೇಶವಿದೆ. ಗಣಿಗಾರಿಕೆ ನಡೆಸುವವರಿಗೆ ಇದರಿಂದ ಅನುಕೂಲವಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆರಂಭಿಸುವ ಉದ್ದೇಶ ಇದೆ ಎಂದು ಹೇಳಿದರು.

ಹೀಗಾಗಿ ಎಲ್ಲ ಕಡೆ ಅಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು. ಗಣಿಗಾರಿಕೆ ನಡೆಸುವವರಿಗೆ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ಹಣವನ್ನು ರಾಜಸ್ವ ಧನದ ಮೂಲಕ ಸಂಗ್ರಹಿಸಲಾಗಿದೆ. ಇದರ ಬಡ್ಡಿ ಸೇರಿಸಿ ಒಟ್ಟು ₹18 ಸಾವಿರ ಕೋಟಿಯಾಗಿದೆ. ಇದು ಮೂರು ತಿಂಗಳ ಒಳಗೆ ನಮ್ಮ ಕೈ ಸೇರಿದರೆ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾ ಯೋಜನೆ ರೂಪಿಸಲಿದ್ದೇವೆ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರುವುದು ನಮ್ಮ ಉದ್ದೇಶವಾಗಿದೆ. ಜನರಿಗೆ ಸರಳವಾಗಿ ಮತ್ತು ಕಡಿಮೆ ದರದಲ್ಲಿ ಮರಳು ಸಿಗಬೇಕೆಂಬುದು ನಮ್ಮ ಉದ್ದೇಶ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ನಿತಿನ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕೋವಿಡ್ ಲಸಿಕೆ ಪಡೆದ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು: ಸಿಎಂ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಇಂದು ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆದರು.

ಲಸಿಕೆ ಪಡೆದ ನಂತರ ಮಾತನಾಡಿದ ಸಿಎಂ, ಕೋವ್ಯಾಕ್ಸೀನ್ ದೇಶೀಯ ಲಸಿಕೆ.ಇದನ್ನ ನಾನೂ ತೆಗೆದುಕೊಳ್ಳುತ್ತಿದ್ದೇನೆ.
ಪ್ರಧಾನಿ ಮಾತ್ರವಲ್ಲ ಅವರ ತಾಯಿ ಕೂಡ ತೆಗೆದುಕೊಂಡಿದ್ದಾರೆ.ಜನತೆಗೆ ಕರೆ ನೀಡ್ತೀನಿ. ಇದನ್ನ ತಗೆದುಕೊಳ್ಳೋದ್ರಿಂದ ಯಾವುದೇ ಸಮಸ್ಯೆ ಇಲ್ಲ ಎಂದರು.

ಆರೋಗ್ಯ ಸಚಿವ ಸುಧಾಕರ್ ಮಾತನಾಡುತ್ತಾ ಎಲ್ಲ ಹಿರಿಯ ನಾಗರೀಕರು, ಅರ್ಹ ವ್ಯಕ್ತಿಗಳು ಆದಷ್ಟು ಬೇಗ ನೋಂದಣಿ ಮಾಡಿಕೊಂಡು ತಪ್ಪದೆ ಲಸಿಕೆ ಪಡೆಯಬೇಕೆಂದು ಕೋರಿದರು.

ಭಾರತ ಮತ್ತು ಕರ್ನಾಟಕವನ್ನು ಕೊರೊನಾ ಮುಕ್ತವಾಗಿಸಲು ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಸ್ವತಃ ವೈದ್ಯರಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಮುಂಚೂಣಿ ಕಾರ್ಯಕರ್ತರ ಕೋಟಾದಡಿ ಲಸಿಕೆ ಪಡೆದಿದ್ದಾರೆ.