ರಾಜ್ಯಕ್ಕೆ ಇಂದೂ ಕೊರೊನಾಘಾತ: 2627 ಕೊರೊನಾ ಪಾಸಿಟಿವ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು 2627 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ 1525 ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ಗುಣಮುಖರಾದವರ ಸಂಖ್ಯೆ ಒಟ್ಟಾರೆ 693, ಅದರಲ್ಲಿ 206 ಜನ ಬೆಂಗಳೂರಿನವರು. ರಾಜ್ಯದಲ್ಲಿ ಮರಣ ಪ್ರಮಾಣ 1.76% ರಷ್ಟಿದ್ದು ಬೆಂಗಳೂರಿನಲ್ಲಿ 1.37% ರಷ್ಟಿದೆ. ರಾಜ್ಯಾದ್ಯಂತ ಇಂದು 20,105 ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಕಳೆದ ಎರಡು ವಾರದಿಂದ ನಿರಂತರವಾಗಿ ಕೊರೊನಾ ಸ್ಪೋಟಗೊಳ್ಳುತ್ತಲೇ ಬರುತ್ತಿದ್ದು, 1000 ಗಡಿ ದಾಡಿ ಇದೀಗ 2500 ಗಡಿಯನ್ನೂ ದಾಡಿದೆ.ಪರಿಸ್ಥಿತಿ ಕೈತಪ್ಪುತ್ತಿರುವುದನ್ನು ಮನಗಂಡ ಸರಕಾರ ಲಾಕ್ ಡೌನ್ ನಿರ್ಧಾರಕ್ಕೆ ಬಂದಿದೆ.

ಜಿಲ್ಲಾವಾರು ವಿವರ:

ಬೆಂಗಳೂರಿನಿಂದ ಹೋಗುವವರು ನಾಳೆ ಹೋಗಬಹುದು: ಅಶೋಕ್

ಬೆಂಗಳೂರು: ಲಾಕ್ ಡೌನ್ ವೇಳೆ ಯಾರಿಗೆ ಬೆಂಗಳೂರಿನಲ್ಲಿ ಇರಲು ಸಾಧ್ಯವಿಲ್ಲವೋ ಅಥವಾ ತವರಿಗೆ ಮರಳಲು ಇಚ್ಚಿಸಿದ್ದೀರೋ ಅವರೆಲ್ಲಾ ನಾಳೆ ನಗರದಿಂದ ಹೊರಗೆ ಹೋಗಬಹುದು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸಿಎಂ ಬಿಎಸ್ವೈ ಜೊತೆಗಿನ ಸಭೆ ಬಳಿಕ ಮಾತನಾಡಿದ ಅಶೋಕ್, ಬೆಂಗಳೂರು ತೊರೆಯುವವರಿಗೆ ನಾಳೆ ಕಾಲಾವಕಾಶ ನೀಡಲಾಗಿದೆ, ಹೋಗುವವರು ಹೋಗಬಹುದು ಎಂದು ಸ್ಪಷ್ಟ ಸಂದೇಶ ನೀಡಿದರು.

ಮಂಗಳವಾರ ರಾತ್ರಿಯಿಂದ ಒಂದು ವಾರ ಬೆಂಗಳೂರು ಲಾಕ್‌ಡೌನ್ ಆಗಲಿದೆ ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ, ತುರ್ತು ಸೇವೆ,ಔಷಧ,ಆಹಾರ,ಹಾಲು,ತರಕಾರಿಗೆ ಸಮಸ್ಯೆ ಆಗುವುದಿಲ್ಲ ಅದಕ್ಕೆಲ್ಲಾ ಅವಕಾಶ ಬರಲಿದೆ ಲಾಕ್ ಡೌನ್ ಹೇಗಿರಲಿದೆ ಎಂದು ನಾಳೆ ಸಿಎಂ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.

ನಾಳೆ ಡಿಸಿ,ಎಸ್ಪಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೀಟಿಂಗ್ ಇದೆ, ಸಿಎಂ ಮನೆಯಿಂದಲೇ ಸಭೆ ಮಾಡ್ತಾರೆ, ಜಿಲ್ಲೆಗಳ ಪರಿಸ್ಥಿತಿ ತಿಳಿಯಲಿದ್ದಾರೆ ಅಗತ್ಯ ಬಿದ್ದರೆ ಕೆಲ ಜಿಲ್ಲೆಗಳಿಗೂ ಲಾಕ್ ಡೌಮ್ ವಿಸ್ತರಣೆ ಮಾಡಬಹುದು ಎಂದು ಕೆಲ ಜಿಲ್ಲೆಗಳು ಲಾಕ್ ಡೌನ್ ಆಗುವ ಸಾಧ್ಯತೆ ಸುಳಿವು ನೀಡಿದರು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಮುಂದೂಡಿಕೆ- ಎಸ್.ಸುರೇಶ್ ಕುಮಾರ್

ಬೆಂಗಳೂರು:ಲಾಕ್‌ಡೌನ್ ಕಾರಣದಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಎಸ್.ಎಸ್.ಎಲ್.ಸಿ ಮೌಲ್ಯಮಾಪನವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

2020ರ ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯವು ದಿನಾಂಕ: 13-೦7-2020ರಿಂದ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಪ್ರಾರಂಭವಾಗಬೇಕಿದ್ದು, ರಾಜ್ಯ ಸರ್ಕಾರವು ದಿನಾಂಕ: 14-೦7-2020 ರಿಂದ ದಿನಾಂಕ: 22-07-2020 ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳ ಮೌಲ್ಯಮಾಪನ ಕಾರ್ಯವು ನಾಳೆಯಿಂದ ನಿಗದಿಯಂತೆ ನಡೆಯಲಿದೆ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಮೌಲ್ಯಮಾಪನ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಶಿಕ್ಷಣ‌ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕೋವಿಡ್ ಸೋಂಕಿತ ರೋಗಿಗಳಿಗಾಗಿ ವಾರ್ಡ್ ಗೆ ತಲಾ ಒಂದರಂತೆ ಆಂಬ್ಯುಲೆನ್ಸ್ ವಾಹನಗಳ ವ್ಯವಸ್ಥೆ: ಸುರೇಶ್ ಕುಮಾರ್

ಬೆಂಗಳೂರು : ಬೊಮ್ಮನಹಳ್ಳಿ ವಲಯಕ್ಕೆ ಕೋವಿಡ್-19 ಸೋಂಕಿತ ರೋಗಿಗಳಿಗಾಗಿ ವಾರ್ಡ್ ಗೆ ತಲಾ ಒಂದರಂತೆ Ambulance ವಾಹನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಬೊಮ್ಮನಹಳ್ಳಿ ವಲಯ ಕೊರೋನಾ ಉಸ್ತುವಾರಿಗೆ ನಿಯುಕ್ತಿಯಾಗಿರುವ ಅವರು, ಭಾನುವಾರ ಬೊಮ್ಮನಹಳ್ಳಿ ಬಿ.ಬಿ.ಎಂ.ಪಿ. ಜಂಟೀ ಆಯುಕ್ತರ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು.

ಪ್ರಸ್ತುತ ಕೋವಿಡ್ ಪರೀಕ್ಷೆ ಫಲಿತಾಂಶ ಬರಲು ಸರಾಸರಿ ನಾಲ್ಕರಿಂದ ಐದು ದಿನಗಳಾಗುತ್ತಿದೆ. ಇನ್ನು ಮುಂದೆ ಒಂದು ದಿನದಲ್ಲಿ ಫಲಿತಾಂಶ ಬರುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಖಾಸಗಿ ಆಸ್ಪತ್ರೆಗಳು ಸರಕಾರದ ಸೂಚನೆಯಂತೆ ನಿಗದಿತ ಸಂಖ್ಯೆಯ ಬೆಡ್ ಗಳನ್ನು ನೀಡದಿರುವುದರ ಕುರಿತಂತೆ ಸಚಿವ ಸುರೇಶ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಅಪೋಲೋ, ಪೋರ್ಟೀಸ್, ಪ್ರಶಾಂತ್ , ನಾರಾಯಣ ಹೃದಯಾಲಯ ಮುಂತಾದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿ, ಕೂಡಲೇ ಬೆಡ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಂಸತ್ ಸದಸ್ಯ ತೇಜಸ್ವಿ ಸೂರ್ಯ, ಶಾಸಕರಾದ ಎಂ. ಕೃಷ್ಣಪ್ಪ, ಸತೀಶ್ ರೆಡ್ಡಿ, ಐಎಎಸ್ ಅಧಿಕಾರಿ ಕ್ಯಾ. ಮಣಿವಣ್ಣನ್‌ ಬಿ.ಬಿ.ಎಂ.ಪಿ. ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

 

ಬಚ್ಚನ್ ಕುಟುಂಬಕ್ಕೆ ಕೊರೊನಾ ಶಾಕ್: ಐಶ್ವರ್ಯ ರೈ,ಆರಾಧ್ಯಗೂ ಪಾಸಿಟಿವ್

Photo credit: twitter

ಮುಂಬೈ: ಅಮಿತಾಭ್ ಬಚ್ಚನ್,ಅಭಿಷೇಕ್ ಬಚ್ಚನ್ ನಂತರ ಐಶ್ವರ್ಯ ರೈ ಹಾಗು ಆರಾಧ್ಯಗೂ ಕೋವಿಡ್-19 ,ಪಾಸಿಟಿವ್ ಗೆ ಸಿಲುಕಿದ್ದು ಬಚ್ಚನ್ ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬಾಲಿವಿಡ್ ನ ಬಿಗ್ ಬಿ ಕುಟುಂಬ ಕೊರೊನಾ ಸುಳಿಗೆ ಸಿಲುಕಿದೆ,ನಿನ್ನೆ ಅಮಿತಾಭ್ ಹಾಗು ಅಭಿಷೇಕ್ ಬಚ್ಚನ್ ಕೊರೊನಾ ಪಾಸಿಟಿವ್ ನಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಟೆಸ್ಟ್ ನಲ್ಲಿ ಐಶ್ವರ್ಯ ರೈ ಹಾಗು ಪುತ್ರಿ ಆರಾಧ್ಯ ನೆಗಟಿವ್ ಎಂದು ವರದಿ ಬಂದಿತ್ತು.

ಆದರೆ ಇಂದು ಎರಡನೇ ವರದಿಯಲ್ಲಿ ಬಚ್ಚನ್ ಕುಟುಂಬಕ್ಕೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಐಶ್ವರ್ಯ ರೈ ಹಾಗು ಆರಾಧ್ಯ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದ್ದು ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಟ್ವೀಟ್ ಮೂಲಕ ಕೊರೊನಾ ಪಾಸಿಟಿವ್ ಬಂದಿರುವ ಮಾಹಿತಿಯನ್ನು ಐಶ್ವರ್ಯ ರೈ ಹಂಚಿಕೊಂಡಿದ್ದಾರೆ.
ಬಾಲಿವುಡ್ ನ ಹಿರಿಯ ನಟ ಅಮಿತ್ ಬಚ್ಚನ್ ಕೊರೊನಾ ಪಾಸಿಟಿವ್ ಆಗಿದ್ದು ಪುತ್ರ,ಸೊಸೆ, ಮೊಮ್ಮಗಳಿಗೂ ಪಾಸಿಟಿವ್ ಬಂದಿರುವುದು ಬಚ್ಚನ್ ಕುಟುಂಬ ಹಾಗು ಬಾಲಿವುಡ್ ನಲ್ಲಿ ಆತಂಕಕ್ಕೆ ಕಾರಣವಾಗಿದೆ.

in second round of testing for covid19 me and my daughter aradhya also tested positive for covid19 we are shifted to leelavati hospital .we are in touch with bmc .please pray for us

ಬಾಲಿವುಡ್‌ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್

ಮುಂಬೈ: ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಗೂ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೆ  ಕೊರೊನಾ ಸೋಂಕು‌ ತಗುಲಿದ್ದು‌ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ಅಮಿತ್ ಬಚ್ಚನ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಕೊರೊನಾ ಪರೀಕ್ಷೆ ವೇಳೆ ಪಾಸಿಟಿವ್ ಬಂದಿದೆ.ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ತಂದೆಯ ಜೊತೆ ಪುತ್ರ ಅಭಿಷೇಕ್ ಬಚ್ಚನ್ ಕೂಡ ಪರೀಕ್ಷೆ ಮಾಡಿಸಿಕೊಂಡಿದ್ದು ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇದನ್ನು ಅಭಿಷೇಕ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

Earlier today both my father and I tested positive for COVID 19. Both of us having mild symptoms have been admitted to hospital. We have informed all the required authorities and our family and staff are all being tested. I request all to stay calm and not panic. Thank you. 🙏🏽

ಬಚ್ಚನ್ ಕುಟುಂಬಕ್ಕೆ ಕೊರೊನಾ ಭೀತಿ:

ಅಮಿತಾಬ್ ಬಚ್ಚನ್ ಕೊರೊನಾ ಸೋಂಕಿಗೆ ಸಿಲುಕಿರುವುದರಿಂದ ಬಚ್ಚನ್ ಕುಟುಂಬ ಸೋಂಕಿನ ಭೀತಿಗೆ ಸಿಲುಕಿದ್ದು ಈಗ ಕುಟುಂಬದ ಎಲ್ಲಾ ಸದಸ್ಯರಿಗೆ ಕೋವಿಡ್ -19 ಪರೀಕ್ಷೆ ಮಾಡಲಾಗುತ್ತಿದೆ.