ಮಂಗಳೂರು: ಉಳ್ಳಾಲ ಮುನ್ನೂರು ಪಂಚಾಯ್ತಿ ಪಿಡಿಓ ಕೃಷ್ಣಸ್ವಾಮಿ ಬಿ.ಎಸ್(47) ಕಚೇರಿಯ ಶೌಚಾಲಯದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೂಲತ: ಧರ್ಮಸ್ಥಳ ಕೊಕ್ಕಡ ನಿವಾಸಿಯಾದ ಕೃಷ್ಣಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದು ನನ್ನ ಸಾವಿಗೆ ನಾನೇ ಕಾರಣ, ಅನುಕಂಪದ ಆಧಾರದಲ್ಲಿ ಪತ್ನಿ ಅಥವಾ ಮಕ್ಕಳಿಗೆ ಸರಕಾರಿ ಕೆಲಸ ಒದಗಿಸುವಂತೆ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.









