ನವದೆಹಲಿ: ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಕುರಿತು ಏಮ್ಸ್ ವೈದ್ಯರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ.
ಇಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ನರೇಂದ್ರ ಮೋದಿಯವರು ಕುಟುಂಬ ಸದಸ್ಯರಿಗೆ ದೈರ್ಯ ಹೇಳಿದ್ದಾರೆ. ಅಲ್ಲದೆ ಏಮ್ಸ್ ವೈದ್ಯರೊಂದಿಗೆ ವಾಜಪೇಯಿಯವರ ಆರೋಗ್ಯ ಕುರಿತು ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.
93 ವರ್ಷದ ವಾಜಪೇಯಿ ಅವರು ನಿನ್ನೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಶೀಘ್ರವಾಗಿ ಗುಣಮುಖರಾಗಲೆಂದು ದೇಶದ ಹಲವು ಕಡೆ ಹೋಮ-ಹವನಗಳನ್ನೂ ನಡೆಸಲಾಗುತ್ತಿದೆ.










