ಬೆಂಗಳೂರು: ಜೆಎಎಸ್ ಕಾರ್ಯಕರ್ತನಿಗೆ ರಾಜಕೀಯ ದ್ವೇಷದಿಂದ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡರು ಇದೇ 29 ರಂದು ಸಿಎಂ ಗೃಹ ಕಚೇರಿ ಕೃಷ್ಣ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೆ.ಆರ್.ಪೇಟೆಯ ಜೆಡಿಎಸ್ ಮುಖಂಡರೊಬ್ಬರಿಗೆ ಸೇರಿದ ಸ್ಟೋನ್ ಕ್ರಷರ್ ಗೆ ಎಲ್ಲಾ ಇಲಾಖೆಯ ಅನುಮತಿ ದೊರೆತಿದೆ. ಅಲ್ಲದೆ ಕಾನೂನು ಬದ್ದವಾಗಿಯೂ ಇದೆ. ರಾಜಕೀಯ ವೈಷಮ್ಯದಿಂದ ಸಚಿವ ನಾರಾಯಣಗೌಡರು ದ್ವೇಷ ಸಾಧಿಸಿ ಕ್ರಷರ್ ನಿಲ್ಲಿಸಿದ್ದಾರೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಸಿಎಂ ಸೇರಿದಂತೆ ಹಲವು ಮಂತ್ರಿಗಳಿಗೆ ನ್ಯಾಯ ಕೊಡಿಸುವಂತೆ ಗೌಡರು ವಿನಂತಿಸಿದ್ರು.
ಇಷ್ಟೇಲ್ಲಾ ಅದ್ರೂ ಈವರೆಗೆ ನ್ಯಾಯ ದೊರೆತಿಲ್ಲ. ಇದರಿಂದಾಗಿ ಇದೇ ತಿಂಗಳ 29 ರವರೆಗೆ ಗಡುವು ನೀಡಿದ್ದು, ಅಷ್ಟರೊಳಗೆ ನ್ಯಾಯ ಸಿಗದಿದ್ದರೆ ನ್ಯಾಯಕ್ಕಾಗಿ ಒತ್ತಯಿಸಿ 29 ರಂದು ಸಿಎಂ ಗೃಹ ಕಚೇರಿ ಕೃಷ್ಣ ಮುಂದೆ ಧರಣಿ ನಡೆಸಲಾಗುವುದೆಂದು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.










