ಬಳ್ಳಾರಿ: ನಟ ಪುನೀತ್ ರಾಜ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುವ ವೇಳೆ ಅಪಘಾತಕ್ಕೊಳಗಾದ ಘಟನೆ ಇಂದು ನಡೆದಿದೆ.
ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಅನಂತಪುರ ಬಳಿ ಅಪಘಾತವಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಕಾರಿನ ಟೈರ್ ಬಸ್ಟ್ ಆದ ಕಾರಣ ನಿಯಂತ್ರಣ ತಪ್ಪಿ ಅಪಘಾತವಾಗಿದೆ.
ನಟ ಪುನರ್ ರಾಜಕುಮಾರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅಫಘಾತದ ನಂತರ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ಪುನೀತ್ ವಾಪಸ್ಸಾಗಿದ್ದಾರೆ.
ಪುನೀತ್ ರಾಜಕುಮಾರ ಜೊತೆ ಗನ್ ಮ್ಯಾನ್ ಹಾಗೂ ಕಾರಿನ ಚಾಲಕರಿದ್ದು, ರೇಂಜ್ ರೋವರ್ ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.









