ಬೆಂಗಳೂರು: ಕೋವಿಡ್ ಲಾಕ್ ಡೌನ್ ನಿಂದಾಗಿ ರದ್ದಾಗಿದ್ದ ರೈಲು ಸಂಚಾರ ಆರಂಭಕ್ಕೆ ಸಿದ್ದತೆಗಳು ನಡೆಯುತ್ತಿದ್ದು, ಕಾಯ್ದಿರಿಸಿದ ಟಿಕೆಟ್‌ಗಳನ್ನು ಹಂತಹಂತವಾಗಿ ಕಾಯ್ದಿರಿಸಲು ಕೌಂಟರ್‌ಗಳನ್ನು ತೆರೆಯಲು ರೈಲ್ವೆ ನಿರ್ಧರಿಸಿದೆ.
ಪ್ರಾರಂಭಿಕವಾಗಿ, ಪ್ರಮುಖ ನಿಲ್ದಾಣಗಳಲ್ಲಿನ ಕೌಂಟರ್‌ಗಳನ್ನು ಮೇ 22 ರಿಂದ ತೆರೆಯಲಾಗುತ್ತದೆ .ನೈರುತ್ಯ ರೇಲ್ವೆ ಯಲ್ಲಿ, ಕಾಯ್ದಿರಿಸಿದ ಟಿಕೆಟ್‌ಗಳಿಗಾಗಿ ಪಿಆರ್‌ಎಸ್ ಕೌಂಟರ್‌ಗಳು ನಾಳೆಯಿಂದ ಮುಂದಿನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲಿವೆ .
* ಹುಬ್ಬಳ್ಳಿ ವಿಭಾಗ *
ಹುಬ್ಬಳ್ಳಿ,
ಬೆಳಗಾವಿ,
ಬಳ್ಳಾರಿ,
ವಿಜಯಪುರ,
ಧಾರವಾಡ,
ಹೊಸಪೇಟೆ
ವಾಸ್ಕೊ-ಡಾ-ಗಾಮಾ
* ಬೆಂಗಳೂರು ವಿಭಾಗ * .
ಕೆ.ಎಸ್.ಆರ್ ಬೆಂಗಳೂರು,
ಯಶವಂತಪುರ,
ಬೆಂಗಳೂರು ಕ್ಯಾಂಟ್,
ಬಂಗಾರ್‌ಪೇಟೆ,
ಕೆಂಗೇರಿ,
ಕೃಷ್ಣರಾಜಪುರಂ,
ಸತ್ಯಶಾಂತಿಪ್ರಶಾಂತಿ ನಿಲಯಂ
* ಮೈಸೂರು ವಿಭಾಗ *
ಮೈಸೂರು,
ದಾವಣಗೆರೆ
ಶಿವಮೊಗ್ಗ ಟೌನ್ …
ಸಾಮಾಜಿಕ ಅಂತರದ ಕ್ರಮಗಳನ್ನು ಜಾರಿಗೆ ತರಲಾಗುವುದು. ಬುಕಿಂಗ್ ಕಚೇರಿಗಳ ನೈರ್ಮಲ್ಯ ಮತ್ತು ಶುಚಿತ್ವವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.









