ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ನಡೆದಿರವ ಅವ್ಯವಹಾರ ಹಾಗೂ ಎಐಸಿಸಿಗೆ ಕಿಕ್ ಬ್ಯಾಕ್ ನೀಡಿರುವ ಕುರಿತು ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರುತ್ತೇನೆ, ತಾರ್ಕಿಕ ಅಂತ್ಯ ಕಾಣಿಸುವವರೆಗೂಹೋರಾಟ ನಡೆಸುತ್ತೇನೆ ಎಂದು ಮಾಜಿ ಸಚಿವ ರಾಮದಾಸ್ ಹೇಳಿದ್ದಾರೆ.
ವಿಧಾನಸಭೆ ಕಲಾಪದ ಬಳಿಕ ಮಾತನಾಡಿದ ರಾಮದಾದ್,
ಸದನದ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಹಾರ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ದಾಖಲೆಗಳ ಸಮೇತ ಆರೋಪ ಮಾಡಿ ಎಂದು ಹೇಳಿದ್ರು ಅದನ್ನ ಚಾಲೆಂಜ್ ಆಗಿ ತೆಗೆದುಕೊಂಡು ನಾನು ದಾಖಲೆಗಳ ಸಮೇತ ಬಂದೆ ಇವತ್ತು ಕಲಾಪದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೆ ಆದ್ರೆ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡಲಿಲ್ಲ ಹಿಟ್ ಅಂಡ್ ರನ್ ಅಂತ ಆಡಳಿತ ಪಕ್ಷದವರು ಹೇಳಿದ್ರು ಆದ್ರೆ ಹಿಟ್ ಅಂಡ್ ರನ್ ಅಲ್ಲ ಇದು ಹಿಟ್ ಅಂಡ್ ಕ್ಯಾಚ್.ದಾಖಲೆಗಳ ಸಮೇತ ನಾನು ಬಯಲು ಮಾಡೋದಕ್ಕೆ ಮುಂದಾಗಿದ್ದೇನೆ ನಾನು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡುತ್ತೇನೆ ಅಕ್ರಮಕ್ಕೆ ಒಂದು ತಾರ್ಕಿಕ ಅಂತ್ಯ ಕಣಿಸಬೇಕು ಅಂತ ಹೋರಾಟ ಮಾಡುತ್ತೇನೆ ಎಂದ್ರು.
ಎಲ್ಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಎಷ್ಟು ಜನ ಊಟ ಮಾಡುತ್ತಾರೆ ಎಂಬ ಮಾಹಿತಿಯಿಲ್ಲ ಎಷ್ಟು ತೂಕದ ಆಹಾರ ಬರ್ತಿದೆ ಎಂಬುದರ ಬಗ್ಗೆಯೂ ಲೆಕ್ಕಇಲ್ಲ ಅಡುಗೆ ಕಾರ್ಯವನ್ನ ದೆಹಲಿ ಮೂಲದ ರಿವಾರ್ಡ್ಸ್ ಎಂಬ ಕಂಪನಿಗೆ ನೀಡಿದ್ದಾರೆ ಇದೇ ಕಂಪನಿಯ ವಿರುದ್ಧ ಬಿಹಾರದಲ್ಲಿ ಕೇಸ್ ಗಳಿವೆ ಒಂದೇ ದಿನ ಎರಡು ಒಪ್ಪಂದ ಮಾಡಿಕೊಂಡಿದೆ ಪ್ರತಿ ಊಟಕ್ಕೆ 57ರೂ ಇದ್ದ ಬೆಲೆ 60ರೂಗೆ ಏರಿಕೆ ಮಾಡಿದ್ದಾರೆ ಸರ್ಕಾರ ರಿವಾರ್ಡ್ಸ್ ಕಂಪನಿಗೆ ನೀಡುವ ಹಣದಲ್ಲಿ ಯಾರಿಗೆ ಕಿಕ್ ಬ್ಯಾಕ್ ಸಿಗುತ್ತಿದೆ ಎಂಬುದು ಬಯಲಾಗಬೇಕು ಎಂದು ಆಗ್ರಹಿಸಿದ್ರು.
ಕ್ಯಾಂಟೀನ್ ನಿರ್ಮಾಣಕ್ಕಾಗಿ ಸರ್ಕಾರ ಆದೇಶ ಹೊರಡಿಸಿತು
ಗ್ಲೋಬಲ್ ಟೆಂಡರ್ ಬದಲಾಗಿ ನೇರ ಗುತ್ತಿಗೆ ನೀಡಲಾಯಿತು
ಕ್ಯಾಂಟೀನ್ ನಿರ್ಮಾಣದಲ್ಲೂ ಅಕ್ರಮವಾಗಿ ಗುತ್ತಿಗೆ ನೀಡಿದ್ರು
ಕೆಇಎಫ್ ಎಂಬ ಅರಬ್ ನಲ್ಲಿರುವ ಕಂಪನಿಗೆ 4ಜಿ ವಿನಾಯಿತಿ ನೀಡಲಾಯ್ತು.ಖಾಸಗಿ ಕಂಪನಿಗೆ 4ಜಿ ವಿನಾಯಿತಿ ನೀಡಲು ಬರುವುದಿಲ್ಲ ಪ್ರತಿ ಕ್ಯಾಂಟೀನ್ ನಿರ್ಮಾಣಕ್ಕೆ 25 ಲಕ್ಷ ರೂ ತೆಗೆದುಕೊಂಡಿದೆ ಆದರೆ ಬಿಬಿಎಂಪಿ ಕೇವಲ 12 ಲಕ್ಷ ರೂ ಮಾತ್ರ ಖರ್ಚು ಮಾಡಿ ತಾನೆ ನಿರ್ಮಾಣ ಮಾಡಿತು ಹೆಚ್ಚುವರಿಯಾಗಿ ಕೆಇಎಫ್ ಗೆ ನೀಡಿದ 123 ಕೋಟಿ ರೂ ಕಿಕ್ ಬ್ಯಾಕ್ ಯಾರಿಗೆ ಹೋಗಿದೆ? ಅರಬ್ ನಲ್ಲಿರುವ ಕೆಇಎಫ್ ಮುಖ್ಯಸ್ಥ ಯಾರು?ಆತನ ಜತೆ ಎಐಸಿಸಿ ಮುಖಂಡರ ಜತೆ ಇರುವ ಸಂಬಂಧ ಏನು?ಇದನ್ನೆಲ್ಲ ಬಯಲು ಮಾಡುತ್ತೇನೆ, ಕೋರ್ಟ್ ಗೆ ಎಲ್ಲ ದಾಖಲೆ ಸಲ್ಲಿಸುತ್ತೇನೆ.ಆಹಾರ ಪೂರೈಕೆಗೆ ಪ್ರತಿನಿತ್ಯ 80 ಲಕ್ಷ ರೂ ಹೋಗುತ್ತಿದೆ ಇದರಲ್ಲಿ 35 ಲಕ್ಷ ಅಕ್ರಮವಾಗಿ ನೀಡಲಾಗುತ್ತಿದೆ ಕೆಇಎಫ್ ಹಾಗೂ ರಿವಾರ್ಡ್ಸ್ ಕಂಪನಿಯ ಅಕ್ರಮದ ವಿರುದ್ಧ ಹೊರಾಟ ಮಾಡುತ್ತೇನೆ ಎಂದ್ರು.









